ಪ್ರಚಲಿತ

ಇವರ ಪರಾಕ್ರಮಕ್ಕೆ ಶತ್ರುಗಳು ನೀರಲ್ಲೂ ಬೆವತು ಹೋಗುತ್ತಾರೆ! ಭಾರತದ ಈ ಸೈನಿಕ ಪಡೆಯೊಂದಿಗೆ ಸೆಣಸಾಡೋಕೆ ಅಸಾಧ್ಯ…

ಈ ಕಮಾಂಡೋ ಬಗ್ಗೆ ಕೇಳೋವಾಗೆಲ್ಲಾ ಮೈ ಜುಮ್ಮೆನ್ನುತ್ತೆ! ಯಾಕಂತೀರಾ?! ಅಷ್ಟು ಭಯಾನಕ ಕಮಾಂಡೋ ಇದು. ಶತ್ರುಗಳಿಗೆ ಯಾರೊಂದಿಗೆ ಬೇಕಾದರೂ ಸೆಣಸಾಟ ಮಾಡಬಹುದು ಆದರೆ ಇವರ ಜೊತೆ ಮಾತ್ರ ಸೆಣಸಾಟಕ್ಕೆ ನಿಂತ್ರೆ ಸೀದಾ ಯಮಲೋಕಕ್ಕೆ ದಾರಿ ತೋರಿಸಿಬಿಡುತ್ತಾರೆ… ಹೌದು… 1983ರಲ್ಲಿ ರಚನೆಯಾದ ಈ ಕಮಾಂಡೋ ಪಡೆಗೆ ನೌಕಾಪಡೆ ಮೆರೈನ್ ಕಮಾಂಡೋಸ್ ಎಂದು ಹೆಸರಿಟ್ಟಿತ್ತು. ಆದರೆ ಇತ್ತೀಚೆಗೆ ಇದನ್ನು ಮಾರ್ಕೋಸ್ ಎಂದು ಕರೆಯಲಾಗುತ್ತದೆ. ವಾಯುಪಡೆಯಲ್ಲಿ ಗರುಡಾ ಕಮಾಂಡೋಗಳಿದ್ದಂತೆ ಭೂಸೇನೆಯಲ್ಲಿ ಎನ್‍ಎಸ್‍ಜಿ, ಪ್ಯಾರಾ ಕಮಾಂಡೊಗಳಿದ್ದಂತೆ ನೌಕಾ ಪಡೆಯಲ್ಲಿ ಈ ಮಾರ್ಕೋಸ್‍ಗಳಿರುತ್ತದೆ. ಆದರೆ ಮಾರ್ಕೋಸ್ ವಾಯುಪಡೆ, ಗರುಡಾಕ್ಕಿಂತ ಹಳೆಯದು ಮತ್ತು ಶಕ್ತಿಶಾಲಿಯಾಗಿರುತ್ತದೆ. ಯಾವುದೇ ಪ್ರತಿಕೂಲ ಸನ್ನಿವೇಶದಲ್ಲಿ ಮಿಲಿಟರಿ, ವಾಯುಪಡೆಯ ಜೊತೆಯೂ ಕೆಲಸ ಮಾಡುತ್ತದೆ. ಈ ಕಮಾಂಡೋದಲ್ಲಿ ಸೆಲೆಕ್ಟ್ ಆಗೋದೇ ಬಹಳ ವಿರಳ. ಒಂದು ಬಾರಿ ಈ ಕಮಾಂಡೋ ಟೀಮ್ ಗೆ ಸೆಲೆಕ್ಟ್ ಆದ್ರೆ ಮಾತ್ರ ಯಾವುದೇ ಕಾರಣಕ್ಕೂ ತನ್ನ ಕುಟುಂಬಕ್ಕೂ ಕೂಡಾ ತಾನು ಮಾರ್ಕೋಸ್ ಕಮಾಂಡೋ ಅನ್ನುವಂತಿಲ್ಲಾಂತರೆ ಜಸ್ಟ್ ಇಮ್ಯಾಜಿನ್ ಯಾವ ರೀತಿ ಈ ಯೋಧರು ದೇಶಸೇವೆ ಮಾಡುತ್ತಿದ್ದಾರೆಂದು…

ಇವರ ಯುದ್ಧ ತಂತ್ರನೇ ತುಂಬಾನೇ ಭಯಾನಕವಾಗಿರುತ್ತೆ… ಮಾರ್ಕೋಸ್ ಎಂದಾಗ ಪಾಕ್ ಸೈನ್ಯ ಮತ್ತು ಉಗ್ರರು ನದಿಯೊಳಗೂ ಬೆವತು ಹೋಗುತ್ತಾರೆ. ಅದಕ್ಕೆ ಕಾರಣ ಮಾರ್ಕೋಸ್ ಕಮಾಂಡೋಗಳ ಎದೆಗಾರಿಕೆ. ಇವರಿಗೆ ಕೊಡುವ ತರಭೇತಿ ಕೂಡಾ ಅಷ್ಟೇ ರೀತಿ ಕ್ಲಿಷ್ಟಕರವಾಗಿರುತ್ತದೆ. ಕೆಲವರು ಪ್ಯಾರಾ ಕಮಾಂಡೋಗಳ ತರಭೇತಿಯೇ ತುಂಬಾ ಭಯಾನಕ ಅನ್ನುತ್ತಾರೆ. ಆದರೆ ಮರ್ಕೋಸ್ ತರಬೇತಿ ಅದಕ್ಕೂ ಮೀರಿದ್ದು. ಪ್ರತಿ ಕಮಾಂಡೋ ತನ್ನ ವಿಶಿಷ್ಠ ಆದರೆ ಭಾರೀ ತೂಕದ ಧಿರಿಸಿನ ಜೊತೆಗೆ ಹರಿತವಾದ ಚಾಕು, ಒಂದು ಸಿಡಿಬಿಲ್ಲು ಶತ್ರುಗಳನ್ನು ಸದ್ದಿಲ್ಲದೆ ಕೊಲ್ಲುವ, ಹಿಮಪರ್ವತ, ಮರ ಏರಲು, ಹೂಳುಗಳೊಳಗೆ ನುಸುಳಲು ಸಹಕಾರಿ, ಸ್ನೈಪರ್ ಬಂದೂಕು, ರಿವಾಲ್ವರು, ಒಂದು ಅಸಾಲ್ಟ್ ಬಂದೂಕು, ಅತಿ ಭಾರದ ಸಬ್ ಮಿಷನ್ ಕಾರ್ಬನ್‍ಗಳನ್ನು ಹೊತ್ತಿರುತ್ತಾರೆ. ಈ ತೂಕದೊಂದಿಗೆ ಆತ ನೀರೊಳಗೆ ಧುಮುಕುವ, ಮುಳುಗುವ ಕ್ಷಮತೆಯನ್ನು ಹೊಂದಿರಬೇಕು. ಕಮಾಂಡೋ ತರಬೇತಿಯ ಜೊತೆಗೆ ಆತ ಕುಸ್ತಿಯ ಪಟ್ಟುಗಳನ್ನು ಕಲಿತಿರಬೇಕು, ಪ್ಯಾರಾ ಟ್ರೂಪರ್ ಕೂಡಾ ಆಗಿರಬೇಕು. ಅಂದರೆ ಪ್ಯಾರಾ ಕಮಾಂಡೋಗಳಂತೆ ಮಾರ್ಕೋಸ್ ಕಮಾಂಡೊ ಸಾವಿರಾರು ಮೀಟರ್ ಎತ್ತರದಿಂದ ವಿಮಾನದಿಂದ ಧುಮುಕುವ ಶಕ್ತಿಯನ್ನೂ ಹೊಂದಿರಬೇಕು.

ಕೇವಲ ದೈಹಿಕವಾಗಿ ಬಲಾಢ್ಯನಾದರೆ ಸಾಕಾಗಲ್ಲ. ಬದಲಾಗಿ ಆತ ಚಾಣಾಕ್ಷ ಗೂಢಾಚಾರನೂ ಆಗಿರಬೇಕು. ಯಾವುದೇ ಕ್ಷಣದಲ್ಲಾದರೂ ಶತ್ರುವನ್ನು ಯಮಲೋಕ್ಕೆ ಅಟ್ಟುವಷ್ಟು ಸಾಮಥ್ರ್ಯವಿರಬೇಕು. ತುರ್ತು ಸಂದರ್ಭಗಳಲ್ಲಿ ಆತ ವಿವಿಧ ಯಂತ್ರ, ವಾಹನಗಳ ಚಾಲನೆ ಮಾಡಬೇಕು. ಸ್ಪೋಟಕಗಳ ಬಗ್ಗೆ ತಜ್ಞನಾಗಿರಬೇಕು. ಇದನ್ನೆಲ್ಲಾ ಅರೆದು ಕುಡಿದವನು ಮಾತ್ರ ಮಾರ್ಕೋಸ್ ಎನಿಸಿಕೊಳ್ಳುತ್ತಾನೆ. ನೌಕಾಪಡೆಯಲ್ಲಿ ಇಂತಹ 2000 ಮಾರ್ಕೋಸ್ ಕಮಾಂಡೋಗಳಿದ್ದಾರೆಂಬುದು ವಿಶೇಷ. ಸೇನಾ ಪಡೆಗಳ ಉಳಿದ ಕಮಾಂಡೋಗಳು ದೇಶದ ಅಸ್ತ್ರಗಳಾದರೆ ಮಾರ್ಕೋಸ್ ಬ್ರಹ್ಮಾಸ್ತ್ರ. ನೌಕಾಪಡೆ ಮಾರ್ಕೋಸ್‍ಗಳ ಆಯ್ಕೆ, ತರಬೇತಿ, ಕಾರ್ಯಾಚರಣೆಗಳಲ್ಲಿ ಸಣ್ಣ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ. ಎಷ್ಟೆಂದರೆ ಒಬ್ಬ ಮಾರ್ಕೋಸ್ ಕಮಾಂಡೋ ಹೆಚ್ಚು ಕಾಲ ಮಾರ್ಕೋಸ್ ಕಮಾಂಡೋ ಆಗಿ ಉಳಿಯುವಂತಿಲ್ಲ. ಅದಲ್ಲದೆ ಒಂದೇ ಪ್ರದೇಶದಲ್ಲಿ ಮಾರ್ಕೋಸ್‍ಗಳನ್ನು ಇರಿಸಲಾಗುವುದಿಲ್ಲ. ಪ್ರತಿದಿನವೂ ಒಂದೊಂದು ಜಾಗದಲ್ಲಿ ಅವರನ್ನು ಇರಿಸಲಾಗುತ್ತದೆ.

ಈ ಮಾಕೋಸ್ ಕಮಾಂಡೋ ಟೀಮ್ ಗೆ ಸೇರಬೇಕೆಂದರೆ ಅಂತಿಂತಹ ಪರಿಶ್ರಮ ಸಾಕಾಗಲ್ಲ. ಅತ್ಯುತ್ತಮ ಎನಿಸದವನು ಮಾತ್ರ ಈ ಟೀಮ್‍ಗೆ ಸೆಲೆಕ್ಟ್ ಆಗುತ್ತಾನೆ. ಅದಲ್ಲದೆ ಈ ಕಮಾಂಡೊ ಪಡೆಗೆ ಸೇರಬೇಕೆಂದರೆ ಕೂಡ ವಯಸ್ಸು `ಇಪ್ಪತ್ತು’ ಇದ್ದರೆ ಮಾತ್ರ ಸಾಧ್ಯ. ಮತ್ತೊಂದು ವಿಚಾರವೆಂದರೆ ಇವರು ಬೆಳಗಿನ ಜಾವ ಮೂರು ಘಂಟೆಗೆ ಟ್ರೈನಿಂಗ್ ಜಾಗದಲ್ಲಿ ಖಚಿತವಾಗಿ ನಿಂತಿರಬೇಕು. ಅದಲ್ಲದೆ ಬೆಳಗಿನ ಜಾವಕ್ಕೆ ಎಚ್ಚರಗೊಳ್ಳಲು ಯಾವುದೇ ಅಲರಾಂ ಬಳಸುವಂತಿಲ್ಲ. ತಾನಾಗಿಯೇ ಎದ್ದು ಟ್ರೈನಿಂಗ್ ಜಾಗದಲ್ಲಿ ತಯಾರಾಗಿರಬೇಕು.

ಇವರು ಮಲಗಿದ್ದಾಗ ಕೇವಲ ಸಣ್ಣ ಶಬ್ಧ ಕಿವಿಗೆ ಬಿದ್ದರೂ ಸಾಕು ಈ ಕಮಾಂಡೋನ ತೋರುಬೆರಳು ಅದಾಗಲೇ ಟ್ರಿಗರ್ ಮೇಲಿರುತ್ತದೆ.. ಅದೂ ಕೂಡ ಒಂದು ಸೆಕೆಂಡಿನ ಒಳಗಡೆ ಅಲ್ಲ… ಗುಂಡು ಸೂಜಿಯಷ್ಟು ಶಬ್ಧ ಕಿವಿಗೆ ಬಿದ್ದರೂ ಕೇವಲ 0.27ಸೆಕೆಂಡಿನ ಒಳಗೆ ಈ ಇಂಡಿಯನ್ ಮಾರ್ಕೋಸ್ ಕಮಾಂಡೋವಿನ ಕೈಯಲ್ಲಿರುವ ಇಸ್ರೇಲ್ ನಿರ್ಮಿತ ಗನ್ನಿನಿಂದ ಶತೃವಿನ ತಲೆ ತೂತಾಗಿ ಹೋಗುತ್ತದೆ. ಶತೃಗಳ ಅಥವಾ ಉಗ್ರರ ಆಟಾಟೋಪಕ್ಕೆ ಈ ಮಾರ್ಕೋಸ್ ಕಮಾಂಡೋನ ಪ್ರತಿಕ್ರಿಯೆ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಕೇವಲ ಒಂದು ಸೆಕೆಂಡಿನ ಕಾಲು ಭಾಗ ಅಂದರೆ “0.27”ಸೆಕೆಂಡಿನ ಒಳಗಿರಬೇಕು.. ಅಂದರೆ ಉಗ್ರಗಾಮಿಯ ಕೈ ತಟಕ್ಕನೆ ಗನ್ನಿನ ಟ್ರಿಗರ್ ಝೋನ್ ತಲುಪುವುದರ ಒಳಗಾಗಿ ಮಾರ್ಕೋಸ್ ಬುಲೆಟ್ ಶತ್ರುವಿನ ತಲೆಗೆ ಶೂಟ್ ಆಗಿರಬೇಕು. ಅಷ್ಟರ ಮಟ್ಟಿಗೆ ಮಾರ್ಕೋಸ್ ಕಮಾಂಡೋ ತಯಾಗಿರಬೇಕು.

ತರಭೇತಿಯ ಸಮಯದಲ್ಲಿ ಬೆಳಗಿನ ಜಾವ ಎದ್ದು ಈ ಕಮಾಂಡೋಗಳು ಇಪ್ಪತ್ತು ಕಿಲೋಮೀಟರು ಉಸಿರುಕಟ್ಟಿಕೊಂಡು ಓಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಎಲ್ಲಿಯೂ ನೆಲದ ಮೇಲೆ ಕೂರುವಂತಿಲ್ಲ. ಅದಾದ ಮರುದಿನ ನಿದ್ದೆಯ ಅಳತೆಯನ್ನು ಮತ್ತೂ ಒಂದು ಗಂಟೆ ಕಡಿಮೆ ಮಾಡಲಾಗುತ್ತದೆ ಅದರ ಜೊತೆಗೆ ಎಲ್ಲರ ಬೆನ್ನಿನ ಮೇಲೆ ಐದು ಕೆಜಿ ಮಿಲಿಟರಿ ಬ್ಯಾಗ್ (ಗ್ಲಾಕ್ ಗನ್, ಗ್ರನೈಡ್ಸ್, ಮೆಡಿಕಲ್ ಫಸ್ಟ್ ಏಯ್ಡ್) ಇವೆಲ್ಲವನ್ನೂ ತುಂಬಿ ಮತ್ತೆ ಇಪ್ಪತ್ತು ಕಿಲೋಮೀಟರ್ ಓಡಿಸಲಾಗುತ್ತದೆ. ದಿನಕಳೆದು ರಾತ್ರಿಗೆ ಬೆನ್ನ ಮೇಲಿನ ತೂಕವನ್ನು 60 ಕೆಜಿಗೆ ಹೆಚ್ಚಿಸಲಾಗುತ್ತದೆ.. ಒಬ್ಬ ವ್ಯಕ್ತಿಯನ್ನು ಹೊತ್ತುಕೊಂಡು ಸರಾಗವಾಗಿ ಈಜಾಡುವ ಸಾಮಥ್ರ್ಯ ಈ ಕಮಾಂಡೋಗಳಿಗಿದೆ. ಆಕಾಶದಲ್ಲಿ ಬೀಳುತ್ತಲೇ ಆಕಾಶದಲ್ಲಿ ಗಾಳಿಯಲ್ಲಿ ತೇಲುತ್ತಲೇ ಸಮರ್ಥವಾಗಿ ಕ್ಷಣಮಾತ್ರದಲ್ಲಿ ಯೋಚಿಸಬಲ್ಲವರಾಗಿರುತ್ತಾರೆ ಹಾಗೂ ಕ್ಷಣಮಾತ್ರದಲ್ಲಿ ಆಕಾಶದಲ್ಲಿಯೇ ಬತ್ತಳಿಕೆಯಲ್ಲಿನ ಯಾವುದೇ ಗನ್ ಸುಗಮವಾಗಿ ಬಳಸಬಲ್ಲರು ಅದಲ್ಲದೆ ಮೇಲಿನಿಂದ ಕೆಳಗೆ ಹಾರಿದ ನಂತರದ ಕೊನೆಯ ನೆಲ ತಲುಪಲು ಕೇವಲ 7 ಸೆಕೆಂಡುಗಳಲ್ಲಿ ಇದ್ದಾಗ ಮಾತ್ರ ಪುಟಾಣಿ ಪ್ಯಾರಚೂಟ್ ಓಪನ್ ಮಾಡಿ ಇಳಿಯುವಲ್ಲಿ ಇವರು ಸರ್ವ ಸಮರ್ಥರಾಗಿರುತ್ತಾರೆ. ಎಲ್ಲಾ ವಿಭಾಗದಲ್ಲಿಯೂ ಕೂಡ ಈ ಕಮಾಂಡೋ ಪಡೆ ಸರ್ವ ಸಮರ್ಥವಾಗಿರುತ್ತದೆ…

ದಿನದ ಇಪ್ಪತ್ತು ಗಂಟೆ ಸತತವಾಗಿ ಟ್ರೈನಿಂಗ್ ಮುಂದುವರೆಯುತ್ತಲೇ ಇರುತ್ತದೆ ಕೊನೆಗೆ ಮಿಕ್ಕ ನಾಲ್ಕು ಗಂಟೆ ಮಾತ್ರ ಮಲಗಬೇಕು ಹಾಗೂ ಈ ನಿದ್ದೆಯ ಅಳತೆಯನ್ನು ದಿನಕಳೆದಂತೆ ಬರುಬರುತ್ತಾ ಅದೆಷ್ಟು ಕಡಿಮೆಗೊಳಿಸುತ್ತಾರೆ ಎಂಬುದು ನೀವು ಸಾಮಾನ್ಯವಾಗಿ ಊಹಿಸಲಸಾಧ್ಯ. ಈ ಕಠಿಣ ತರಬೇತಿಯು ವರ್ಷ ಕಳೆದ ನಂತರ ವಾರದಲ್ಲಿ ಕೇವಲ ಅರ್ಧ ಗಂಟೆ ಅಥವಾ ಒಂದು ಗಂಟೆ ಮಾತ್ರ ನಿದ್ರಿಸಲು ಕಲಿಸಲಾಗುತ್ತದೆ ಏಕೆಂದರೆ ಟ್ರೈನಿಂಗ್ ಹೊರತಾಗಿ ಸುಮ್ಮನೆ ನಿಂತರೂ ಸಾಕು ಅದೇ ರೆಸ್ಟ್ ಹೊರತು ನಿದ್ರೆ ಅವಶ್ಯಕತೆಯು ಇರುವುದಿಲ್ಲ ಎಂದು ಅರಿವಾಗಿಸಲು ಅಷ್ಟೇ…. ಕಠಿಣ ಪರಿಸ್ಥಿತಿಯಲ್ಲಿ ಹಗಲೂ ರಾತ್ರಿ ಹೋರಾಡಬೇಕಾದ ಅಥವಾ ಪ್ರಕೃತಿ ವಿಕೋಪಗಳಂತಹಾ ಸಂದರ್ಭದಲ್ಲಿ ಊಟ, ನೀರು, ನಿದ್ರೆ ಬಿಟ್ಟು ಜನರ ರಕ್ಷಣೆಯಲ್ಲಿ ತೊಡಗುವ ರಕ್ಷಕರು ಇವರೇ ಆಗಿರುತ್ತಾರೆ. ಇವರು ನಿಮ್ಮನ್ನು ಹೆಗಲ ಮೇಲೆ ಹಾಕಿಕೊಂಡು ಎಲ್ಲಿಯೂ ನಿಮ್ಮನ್ನು ಕೆಳಗಿಳಿಸದೆ ಸತತವಾಗಿ 120 ಕಿಲೋಮೀಟರಿನಷ್ಟು ದೂರ ಕ್ರಮಿಸುವ ಸಾಮಥ್ರ್ಯ ಅವರಿಗಿರುತ್ತದೆ. ಅಷ್ಟೇ ಅಲ್ಲ! ಪ್ರಪಂಚದ ಎಲ್ಲಾ ಅಪಾಯಕಾರಿ ಅತ್ಯಾಧುನಿಕ ಆಯುಧಗಳ ಉಪಯೋಗ ಮತ್ತು ಬಳಕೆಯನ್ನು ಕಲಿಸಿಕೊಡಲಾಗುತ್ತದೆ ಹಾಗಾಗಿ ಇವರು ಬಳಸದ ಆಯುಧ ಪ್ರಪಂಚದ ಮೇಲೆ ಇರಲಿಕ್ಕೇ ಸಾಧ್ಯವಿಲ್ಲವಂತೆ. ಆದರೆ ಪ್ರಪಂಚದ ಯಾವೊಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ನೆಲದ ಮೇಲಾಗಲಿ, ನೀರಿನಲ್ಲಿ ತೂರಿಕೊಂಡಾಗಲಿ, ಆಕಾಶದಲ್ಲಿ ಹಾರಾಡುತ್ತಲೇ ಆಗಲಿ ಈ ಮಾರ್ಕೋಸ್ ಕಮಾಂಡೋಗಳಿಗೆ ಸರಿಸಮನಾಗಿ ಹೋರಾಟ ಮಾಡಲು ಸಾಧ್ಯವೇ ಇಲ್ಲ. ಮಾರ್ಕೋಸ್ ಪ್ರಪಂಚದ ಅತ್ಯುತ್ತಮ ಕಮಾಂಡೋ ಟೀಮ್ ಗಳಲ್ಲಿ ಇವರ ಹೆಸರೂ ಕೂಡ ಇದೆ. ಇಂತಹ ಕಮಾಂಡೋದ ಬಗ್ಗೆ ಹೇಳೋಕೆ ಒಂತರಾ ಖುಷಿಯಾಗುತ್ತೆ. ಈ ದೇಶಕ್ಕಾಗಿ ನಮ್ಮ ಯೋಧರೂ ತಮ್ಮ ಇಡೀ ಕುಟುಂಬ, ತನ್ನ ಪ್ರಾಣವನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದಾರೆ. ನಿಜವಾಗಿ ಅವರಲ್ಲಿ ನಾವು ದೇವರನ್ನು ಕಾಣುತ್ತಿದ್ದೇವೆ. ಅವರ ದೇಶ ಸೇವೆ ಇಂದು ನಮ್ಮನ್ನು ಆರಾಮಾಗಿ ಜೀವಿಸುವಂತೆ ಮಾಡಿದೆ. ದೇವರಂತೆ ನಮ್ಮ ಸೈನಿಕರು ನಮ್ಮ ದೇಶವನ್ನು ಶತ್ರುಗಳಿಂದ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೊಂದು ಸೆಲ್ಯೂಟ್….

-ಪವಿತ್ರ

Tags

Related Articles

FOR DAILY ALERTS
Close