ಪ್ರಚಲಿತ

ಇಷ್ಟು ದಿನವೂ ಪಾಕಿಸ್ಥಾನವನ್ನು ಬೆಂಬಲಿಸುತ್ತಿದ್ದ ಚೀನಾ ಈಗ ತಿರುಗಿ ಬಿದ್ದಿರುವುದು ಯಾಕೆ ಗೊತ್ತೇ?

ಪಾಕಿಸ್ತಾನದ ವಿಚಾರವಾಗಿ ಯಾವಾಗಲೂ ಬೆನ್ನ ಸಹಾಯಕ್ಕೆ ನಿಲ್ಲಿತ್ತಿದ್ದ ಚೀನಾ ಇತ್ತೀಚೆಗೆ ಮುನಿಸಿಕೊಂಡಿರುವುದಂತೂ ನಿಜ! ಯಾಕಂದರೆ ಪ್ರತಿ ವಿಚಾರದಲ್ಲೂ
ಪಾಕಿಸ್ತಾನಕ್ಕೆ ಸಹಾಯಹಸ್ತ ನೀಡುತ್ತಿದ್ದ ಚೀನಾ, ಪಾಕಿಸ್ತಾನದೊಂದಿಗೆ ಗರಂಗೊಂಡಿದೆ!! ಇತ್ತೀಚೆಗಷ್ಟೇ ಕಾಶ್ಮೀರ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದ್ದ ಚೀನಾ ಇದೀಗ ಮತ್ತೆ ಪಾಕಿಸ್ತಾನಕ್ಕೆ ಕೈ ಕೊಟ್ಟಿದ್ದು, ಆ ದೇಶದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಹೇಳಿದೆ.

ಹೌದು… ಪಾಕಿಸ್ತಾನದ ಮಿತ್ರ ರಾಷ್ಟ್ರವೆಂದೇ ಬಿಂಬಿತವಾದ ಚೀನಾ ಪಾಕಿಸ್ತಾನದಲ್ಲಿ ಭಯೋತ್ಪಾದನೆಯಿದೆ ಎಂದು ಒಪ್ಪಿಕೊಂಡಿದೆ. ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವಿಶ್ವಸಂಸ್ಥೆಯ ಬೆಳವಣಿಗೆಗಳ ಕುರಿತು ಸಂಪಾದಕೀಯ ಪ್ರಕಟಸಿದ್ದು, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಹೇಳಿದೆ. ಅಂತೆಯೇ ವಿಶ್ವಸಂಸ್ಥೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭಾಷಣವು ಅಹಂಕಾರದಿಂದ ಕೂಡಿತ್ತು ಎನ್ನುವುದನ್ನು ಗ್ಲೋಬಲ್ ಟೈಮ್ಸ್ ಟೀಕಿಸಿದೆ.

ಚೀನಾದ ಅಧಿಕೃತ ದಿನಪತ್ರಿಕೆಯೊಂದು ಈ ರೀತಿ ಹೇಳಿದ್ದು ಮಾತ್ರವಲ್ಲದೇ, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಒಪ್ಪಿಕೊಂಡೆದೆ!! ಅಷ್ಟೇ
ಅಲ್ಲದೇ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು ಅವರ ರಾಷ್ಟ್ರೀಯ ನೀತಿಯೇ? ಭಯೋತ್ಪಾದನೆಯನ್ನು ಜಗತ್ತಿಗೆ ಸರಬರಾಜು ಮಾಡುವುದರಿಂದ ಪಾಕಿಸ್ತಾನಕ್ಕೇನು ಲಾಭವಿದೆ? ದುಡ್ಡು ಮತ್ತು ಗೌರವ ಸಿಗುತ್ತದೆಯೇ? ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ!!! ಅಷ್ಟೇ ಅಲ್ಲದೇ, ಯಾವುದೇ ದೇಶದ ಅಭಿವೃದ್ದಿಯಲ್ಲಿ ಭಯೋತ್ಪಾದನೆ ಅಡ್ಡಗಾಲು ಹಾಕುತ್ತದೆಯೇ ಹೊರತು ಉತ್ತೇಜನ ನೀಡುವುದಿಲ್ಲ. ಪಾಕಿಸ್ತಾನ ತನ್ನ ಆರ್ಥಿಕತೆಯ ಅಭಿವೃದ್ಧಿಗಾಗಿ ಮತ್ತು ತನ್ನ ವಿದೇಶಿ ಸಂಬಂಧಗಳನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಪಾಕಿಸ್ತಾನದ ಪ್ರಯತ್ನಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದೆ.

ಈ ಬಗ್ಗೆ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ, “ಇಂಡಿಯಾಸ್ ಬಿಗೋಟ್ರಿ ನೋ ಮ್ಯಾಚ್ ಫಾರ್ ಇಟ್ಸ್ ಎಂಬಿಷನ್ಸ್” ಎನ್ನುವ ಶೀರ್ಷಿಕೆ ಅಡಿಯಲ್ಲಿ ಈ ಸಂಪಾದಕೀಯವನ್ನು ಪ್ರಕಟಿಸಿದ್ದು, ತನ್ನ ಆರ್ಥಿಕತೆ ಮತ್ತು ವಿದೇಶ ಬಾಂಧವ್ಯಗಳಲ್ಲಿ ಉತ್ತಮ ಬೆಳವಣಿಗೆ ಕಂಡಿರುವ ಭಾರತವು, ಪಾಕಿಸ್ತಾನವನ್ನು ಕೀಳಾಗಿ ನೋಡಿದೆ ಮತ್ತು ಚೀನಾದೊಂದಿಗೆ ಕೂಡ ಅಹಂಕಾರದಿಂದ ನಡೆದುಕೊಂಡಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯ 72 ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದಲ್ಲದೇ, ಪಾಕ್ ಭಯೋತ್ಪಾದನೆಯ ರಫ್ತು ದೇಶವಾಗಿದೆ ಎಂದು ಕಟು ಶಬ್ಧಗಳಲ್ಲಿ ಟೀಕಿಸಿದ್ದರು. ಅಷ್ಟೇ ಅಲ್ಲದೇ, ಸುಷ್ಮಾ ಸ್ವರಾಜ್ ನಡೆಸಿದ್ದ ಮಾತಿನ ದಾಳಿಯಿಂದ ತತ್ತರಿಸಿದ ಪಾಕಿಸ್ತಾನ, ಇದರ ಪ್ರತಿಕ್ರಿಯೆ ರೂಪದಲ್ಲಿ ಪಾಕಿಸ್ತಾನ ಪ್ರತಿನಿಧಿ ಮಾಲಿಹಾ ಲೋಧಿ, ಭಾರತ ದಕ್ಷಿಣ ಏಷ್ಯಾದ ಭಯೋತ್ಪಾದನೆಯ ತಾಯಿಯಾಗಿದೆ ಎನ್ನುವ ಮೂಲಕ ಭಾರತವನ್ನು ಟೀಕಿಸಿದ್ದಾರೆ.

ಅಲ್ಲದೇ, ಪಾಕಿಸ್ತಾನದ ಪ್ರತಿನಿಧಿ ಮಲೀನಾ ಲೋಧಿ, 2014ರಲ್ಲಿ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯ ವೇಳೆ ಗಾಯಗೊಂಡಿದ್ದ
ಯುವತಿಯೊಬ್ಬಳ ಫೆÇಟೋ ತೋರಿಸಿ ಇದು ಕಾಶ್ಮೀರದಲ್ಲಿ ಭಾರತವು ಕಾಶ್ಮೀರಿಗಳ ಮೇಲೆ ತೋರುತ್ತಿರುವ ದೌರ್ಜನ್ಯ ಎಂದು ಹೇಳಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಆ ಫೆÇಟೋ ಪ್ಯಾಲೆಸ್ತೀನ್‍ನದ್ದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ಫೆÇೀಟೋ ನಕಲಿ ಎಂದು ಸಾಬೀತಾಗಿ ಪಾಕಿಸ್ತಾನ ವಿಶ್ವಸಮುದಾಯದ ಎದುರು ಮುಜುಗರಕ್ಕೀಡಾಗುವಂತೆ ಮಾಡಿದೆ.

ಇದೀಗ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಚೀನಾ ಕೂಡ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಹೇಳುವ ಮೂಲಕ ವಿಶ್ವಸಮುದಾಯದ ಎದುರು ಪಾಕಿಸ್ತಾನವನ್ನು ಮತ್ತೊಮ್ಮೆ ಮುಜುಗುರಕ್ಕೀಡಾಗುವಂತೆ ಮಾಡಿದೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಸ್ವರಾಜ್, ಎರಡು ದೇಶಗಳಿಗೂ ಕೆಲವೇ ಗಂಟೆಗಳ ಅಂತರದಲ್ಲಿ ಸ್ವಾತಂತ್ಯ್ರ ದೊರೆತಿದ್ದರೂ ಭಾರತವು ಮಾಹಿತಿ ತಂತ್ರಜ್ಞಾನದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಉತ್ತಮ ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‍ಗಳನ್ನು ನೀಡಿದೆ. ಆದರೆ ಪಾಕಿಸ್ತಾನ ಜಗತ್ತಿಗೆ ಭಯೋತ್ಪಾದನೆ ನೀಡಿ ತಲೆನೋವಾಗಿದೆ ಎಂದು ಹೇಳಿದ್ದರು.

ಆದರೆ ಮಿತೃ ರಾಷ್ಟ್ರವೆಂದು ಬಿಂಬಿತವಾಗಿದ್ದ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳ ನಡುವೆ ವೈಮನಸ್ಸು ಸೃಷ್ಟಿಯಾಗಿದ್ದು, ಪಾಕಿಸ್ತಾನವನ್ನು ಭಯೋತ್ಪಾದನೆಯ
ರಾಷ್ಟ್ರವೆಂದು ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನವನ್ನು ಚೀನಾ ತಕ್ಕಮಟ್ಟಿಗೆ ವಿರೋಧಿಸುತ್ತಿದೆ ಎಂದರೆ ಯಾವುದರೂ ಬಲವಾದ ಕಾರಣ ಇರುವುದಂತೂ ನಿಜ!!

– ಅಲೋಖಾ

Tags

Related Articles

Close