ಅಂಕಣಪ್ರಚಲಿತ

ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನ ವಿರೋಧಿಸಿದ್ದ ಬಿ.ಆರ್.ಅಂಬೇಡ್ಕರ್ ಬೌದ್ಧ ಮತಕ್ಕೆ ಬೆಂಬಲಿಸಿದರ್ಯಾಕೆ?!

“ದಲಿತ ಮತ್ತು ಇಸ್ಲಾಂ ಇವೆರಡೂ ಭಾರತದಲ್ಲಿ ಅತ್ಯಂತ ಹೀನಾಯವಾಗಿ ಕಡೆಗಣಿಸಲ್ಪಟ್ಟಿದೆ.” ಎನ್ನುವುದೊಂದು ಶತಮಾನಗಳಿಂದಲೂ ಯಶಸ್ವಿಯಾಗಿ ಹಿಂದೂ ಧರ್ಮದಿಂದ ದಲಿತರನ್ನು ವಿಭಜಿಸುವ ಎಡಪಂಥೀಯರ ಕಾರ್ಯವೊಂದು ಯಶಸ್ವಿಯಾಗಿಯೇ ನಡೆಯುತ್ತಲಿದೆ! ಅದಕ್ಕೆ ಸರಿಯಾಗಿಯೇ, ಭಾರತದ ಸಂವಿಧಾನವನ್ನು ರಚಿಸಿದ್ದ ಅಂಬೇಡ್ಕರ್ ರವರೂ ಕೂಡ ಹಿಂದೂ ಧರ್ಮದ ಆಚರಣೆಗಳಿಂದ ಬೇಸತ್ತು ಉಳಿದ ಧರ್ಮಗಳ ಮೇಲೆ ಒಲವು ತೋರುತ್ತಿದ್ದರೆಂದರೆಂಬ ಸಿಹಿ ಸುಳ್ಳಿನ ಜೊತೆಗೆ ‘ಬೌದ್ಧ’ ಮತದೆಡೆಗೆ ಮಾತ್ರ ವಾಲಿದ್ದರೆಂದು ಯಾರೂ ಹೇಳಲೇ ಇಲ್ಲ! ಸತ್ಯವನ್ನೂ ಮೀರಿದ ಸುಳ್ಳೊಂದು ‘ದಲಿತ’ರನ್ನು ಕೊನೆಗೂ ಅಂಧಕಾರದಲ್ಲಿಯೇ ಉಳಿಸಿಬಿಟ್ಟಿತು!

ಬೌದ್ಧ ಮತವನ್ನು ಅನುಸರಿಸಲು ಹೇಳಿದರಾ ಅಂಬೇಡ್ಕರ್?!

ಪ್ರತಿಯೊಬ್ಬ ರಾಜಕಾರಣಿಯೂ ಹೇಳುವುದು ಅದೊಂದನ್ನೇ! ‘ದಲಿತರು ಹಿಂದೂ ಧರ್ಮದಲ್ಲಿ ಶೋಷಣೆಗೊಳಗಾಗಿದ್ದಾರೆ! ಹಿಂದೂ ಧರ್ಮವನ್ನು ಹೊರತು ಪಡಿಸಿ ಉಳಿದ ಧರ್ಮಕ್ಕೆ ಮತಾಂತರವಾದರೆ ಮಾತ್ರ ದಲಿತರು ಒಂದೊಳ್ಳೆಯ ಭವಿಷ್ಯವನ್ನು ಹೊಂದಬಲ್ಲರು” ಎಂಬ ಅತ್ಯಂತ ಹೀನವಾದ ಅಜೆಂಡಾಗಳು ಇವತ್ತು ಅದೆಷ್ಟು ಸಮಾಜವನ್ನೊಡೆದಿದೆಯೆಂದರೆ ಊಹಿಸಲಿಕ್ಕೂ ಸಾಧ್ಯವಿಲ್ಲ! ಅಂಬೇಡ್ಕರ್ ಇಸ್ಲಾಂ ಹಾಗೂ ಕ್ರೈಸ್ತ ಮತಗಳನ್ಯಾಕೆ ವಿರೋಧಿಸಿದರೆಂಬ ಪ್ರಶ್ನೆಯೊಂದು ದಲಿತ ಸಮುದಾಯದಲ್ಲಿ ಮೂಡಿದ್ದರೆ ಹಿಂದೂ ಧರ್ಮದ ಆಳ ಅಗಲವೂ ಅರ್ಥವಾಗುತ್ತಿತ್ತೇನೋ!!

ಅನುಮಾನವೇ ಇಲ್ಲ! ಮುಸ್ಲಿಂ ಆಕ್ರಮಣಕಾರರೆಲ್ಲರೂ ಹಿಂದೂ ವಿರೋಧಿ ಗೀತೆಗಳನ್ನು ಹಾಡಿಕೊಂಡೇ ಒಳ ನುಗ್ಗಿದ್ದು! ಉತ್ತರ ಭಾರತದಿಂದ ಶುರುವಾದ ಆಕ್ರಮಣವೊಂದು ಅದೆಷ್ಟು ವಿಶಾಲವಾಯಿತೆಂದರೆ, ಮುಂಚೆ ಅಲ್ಲಿದ್ದ ಬಹುಸಂಖ್ಯಾತ ಹಿಂದೂಗಳೆಲ್ಲ ಕಣ್ಮರೆಯಾಗಿ ಹೋದರು! ಬೌದ್ಧರ ಮತದ ಅನುಯಾಯಿಗಳ ಅವಿವೇಕತನವೊಂದು ಪ್ರತಿ ಹಂತದಲ್ಲಿಯೂ ಪೆಟ್ಟು ನೀಡಿದ್ದು ಹಿಂದೂ ಧರ್ಮದ ಬುಡಕ್ಕೇ!

ಅಂಬೇಡ್ಕರ್ ಬರೆದ ‘ಪಾಕಿಸ್ಥಾನವೋ ಅಥವಾ ಭಾರತದ ವಿಭಜನೆಯೋ’ ಎಂಬ ಪುಸ್ತಕದಲ್ಲಿ ಅವರು ಉಲ್ಲೇಖಿಸಿರುವಂತೆ ಯಾವುದೇ ಹುಯಾನ್ ತ್ಸಾಂಗ್ ನ ಆಗಮನದ ಮುಂಚೆ ಉತ್ತರ ಭಾರತದ ಯಾವ ಸಿಖ್ ಅಥವಾ ಹಿಂದುವೂ ಕೂಡ ಅಧಿಕಾರವನ್ನಷ್ಟೇ ಹೊಂದಿದನೇ ಹೊರತು ಮುಂಚೆಯಿದ್ದ ಭಾರತದ ಸಂಸ್ಕ್ರತಿಯೊಂದಕ್ಕೆ ಮರಳಿ ಬರುವ ಹಾಗಾಗಲೇ ಇಲ್ಲ! ಇದೇ ಪುಸ್ತಕದಲ್ಲಿಯೇ ಅವರ ಸ್ಪಷ್ಟ ಇಸ್ಲಾಂ ಬಗೆಗಿನ ವಿರೋಧವೊಂದು ವ್ಯಕ್ತವಾಗಿತ್ತು!

ಕ್ರೈಸ್ತ ಮತವನ್ನೂ ವಿರೋಧಿಸಿದ್ದರು ಅಂಬೇಡ್ಕರ್!!!!!

“ಭಾರತೀಯ ಕ್ರೈಸ್ತರೆಲ್ಲರೂ ಕೂಡ ಭಾರತೀಯರ ಹಾಗೆ ಜಾತಿ, ಪಂಥವೆಂದು ವಿಭಾಗಿಸಿಕೊಂಡವರೇ. ಅವರ ಯಾವ ಮತದ ಕೊಂಡಿಗಳಿಗೂ ಕೂಡ ಎಲ್ಪರನ್ನೂ ಒಟ್ಟುಗೂಡಿಸುವಂತಹ ನಿಲುವಿಲ್ಲ, ಸಿದ್ಧಾಂತಗಳಿಲ್ಲ. ವಿರೋಧಾಭಾಸವೆಂಬಂತೆ, ಅವರ ಧರ್ಮದ ಸಿದ್ಧಾಂತಗಳೇ ಪಂಥೀಯ ಭಿನ್ನಾಭಿಪ್ರಾಯಗಳಿಂದ ತುಂಬಿತ್ತು. ಅದರ ಫಲವಾಗಿ, ಭಾರತೀಯ ಕ್ರೈಸ್ತರೆಲ್ಲರೂ ಕೂಡ ಒಂದು ಸಿದ್ಧಾಂತಗಳಿಗಾಗಲಿ, ಮನಸ್ಥಿತಿಗಾಗಲೀ ಬದುಕಲು ಸಾಧ್ಯವೇ ಆಗಲಿಲ್ಲ.”

“ಅಕಸ್ಮಾತ್ ಕೆಳ ಜನರೆಂದು ಕರೆಯಲ್ಪಡುವ ಅಥವಾ ಶೋಷಣೆಗೊಳಗಾಗಿದ್ದೇವೆಂಬ ಭ್ರಮೆಯಿಂದ ಯಾರಾದರೂ ಹಿಂದೂ ಸಮಾಜದವರು ಇಸ್ಲಾಂ ಅಥವಾ ಕ್ರೈಸ್ತ ಮತಕ್ಕೆ ಮತಾಂತರವಾದರೆ ಅವರು ಕೇವಲ ಧರ್ಮದಿಂದ ಹೊರಗುಳಿಯುವುದಿಲ್ಲ, ಬದಲಾಗಿ ಇಡಿಯ ಭಾರತೀಯ ಸಂಸ್ಕ್ರತಿಯ ಹೊರಗುಳಿಯುತ್ತಾರೆ. ಕ್ರೈಸ್ತ ಅಥವಾ ಇಸ್ಲಾಂ ಗೆ ಮತಾಂತರವಾಗುವುದು ಅವರ ರಾಷ್ಟ್ರೀಯತೆಯನ್ನೇ ನಾಶ ಮಾಡುತ್ತದೆ.”

ಅಂಬೇಡ್ಕರ್ ರವರ ಸಾಲುಗಳಿವು!

ಇಸ್ಲಾಂ ಗಿಂತ ಹಿಂದೂ ಧರ್ಮ ಅದೆಷ್ಟೋ ಸಾವಿರ ಪಾಲು ಮಹತ್ತರವಾದದ್ದು!!

“ಮುಸಲ್ಮಾನರ ಒಂದು ಅನಿಷ್ಟ ರೀತಿಗಳ ಅಸ್ತಿತ್ವವೊಂದು ನಿಜಕ್ಕೂ ಉಪದ್ರವವೇ! ಆದರೆ, ಮುಸಲ್ಮಾನರಲ್ಲಿ ಯಾರೊಬ್ಬರೂ ಅವರ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನ ಮಾಡಲು ಮುಂದಾಗುವುದಿಲ್ಲ, ಹಾಗೂ ಅಲ್ಲಿ ಸಮಾಜ ಸುಧಾರಣೆಯ ಪ್ರಶ್ನೆಯೇ ಇಲ್ಲ. ಅವರಿಗದು ಅನಿಷ್ಟ ಪದ್ಧತಿಯೆಂದೆನಿಸುವುದೂ ಇಲ್ಲ, ಹಾಗೂ ನಿರ್ಮೂಲನೆಯೆಂಬುವುದು ಕನಸೇ ಸರಿ! ಆದರೆ, ಹಿಂದೂ ಧರ್ಮದಲ್ಲಿರುವ ಒಂದಷ್ಟು ಅನಿಷ್ಟ ಪದ್ಧತಿಗಳನ್ನು ನಿರ್ಮೂಲನ ಮಾಡುವಂತಹ ಸ್ವಾತಂತ್ರ್ಯ ಹಾಗೂ ಸುಧಾರಣೆಯ ಹಾದಿ ಯೂ ಬಲವಾಗಿದೆ. ಹೊಸ ಪದ್ಧತಿಗಳಿಗೆ ಹಿಂದೂ ಒಪ್ಪಿಕೊಂಡರೂ ಮುಸಲ್ಮಾನನು ಒಪ್ಪುವುದಿಲ್ಲ.”

 

ದಲಿತರನ್ನೆಲ್ಲ ಬೌದ್ಧ ಮತದ ಅನುಯಾಯಿಗಳಾಗಿಸುವಲ್ಲಿ ಸೋತರೇ ಅಂಬೇಡ್ಕರ್?!

ಬುದ್ಧನನ್ನು ಮಹಾವಿಷ್ಣುವಿನ ಒಂಬತ್ತನೇ ಅವತಾರವೆಂದೇ ಹಿಂದೂಗಳು ನಂಬುವುದು. ಆದ್ದರಿಂದ, ಉಳಿದೆಲ್ಲ ಧರ್ಮಕ್ಕಾಗುವ ಮತಾಂತರಗಳ ಅನಾಹುತಕ್ಕಿಂತ ಬೌದ್ಧ ಮತಕ್ಕೆ ಮತಾಂತರ ಎಷ್ಟೋ ಪಾಲು ಒಳ್ಳೆಯದೆಂಬ ಆಲೋಚನೆ ಹಾಗೂ ಹಿಂದೂ ಧರ್ಮದ ಕೊಂಡಿಯೇ ಅದೂ ಆಗಿದ್ದರಿಂದ ಅಂಬೇಡ್ಕರ್ ಬೌದ್ಧ ಮತದ ಅನುಯಾಯಿಗುವ ಬಗ್ಗೆ ದಲಿತರಿಗೆ ಸಲಹೆ ನೀಡಿ ಪ್ರೋತ್ಸಾಹ ನೀಡಿದ್ದರಷ್ಟೇ!

ಅಂಬೇಡ್ಕರ್ ರವರು ಅದೆಷ್ಟೇ ದಲಿತರನ್ನು ಬೌದ್ಧ ಮತಕ್ಕೆ ಸೆಳೆಯಲು ನೋಡಿದರಾದರೂ ಯಶಸ್ವಿ ಹೊಂದಲಿಲ್ಲ. ಬಹುಷಃ ಬೌದ್ಧ ಧರ್ಮದಲ್ಲಿರುವ ಕಟ್ಟು ನಿಟ್ಟಾದ ಆಹಾರ ಪದ್ಧತಿ, ಆಚರಣೆಯೆಲ್ಲವೂ ಅತ್ಯಂತ ಸುಲಭವಾಗಿರಲಿಲ್ಲವಾದ್ದರಿಂದ ದಲಿತರು ಒಪ್ಪಿಕೊಳ್ಳಲಿಲ್ಲ. ಅದಕ್ಕೆ, ಸರಿಯಾಗಿ ದಲಿತರು ಜನರು ಹಿಂದೂವಾಗೇ ಇರಲು ಇಚ್ಛಿಸಿದರು ಕೂಡ!

ಕೊನೆಗೂ ಅಂಧಕಾರದಲ್ಲುಳಿದರು ದಲಿತರು!

ಎಡಪಂಥೀಯರ ಚಾಣಾಕ್ಷತನವೊಂದು ಕೊನೆಗೂ ಕೆಲಸ ಮಾಡಿತು! ಶೋಷಣೆಯೆಂಬ ಮಂತ್ರದಲ್ಲಿಯೇ ಸಾವಿರಾರು ಮತಾಂತರಗಳು ನಡೆಯಿತು ಕೂಡ! ನಿಜಕ್ಕೂ ದಲಿತರು ಶೋಷಣೆಗೊಳಗಾಗಿದ್ದರೆ ಅಥವಾ ಇನ್ನೂ ಮುಂದುವರೆದಿದ್ದರೆ ರಾಮನಾಥ ಕೋವಿಂದ್ ರವರು ರಾಷ್ಟ್ರಪತಿಯಾಗುತ್ತಿರಲಿಲ್ಲ! ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಲಿರಲಿಲ್ಲ, ಅಥವಾ ಅಂಬೇಡ್ಕರ್ ರವರಿಗೆ ಸಂವಿಧಾನ ರಚಿಸುವ ಅತ್ಯುನ್ನತ ಕಾರ್ಯವೂ ದಕ್ಕುತ್ತಿರಲಿಲ್ಲ. ಆದರೆ, ಕೊನೆಗೆಲ್ಲವೂ ಉತ್ತರವಿಲ್ಲದ ವ್ಯರ್ಥ ವಾದವೊಂದು ‘ರಾಷ್ಟ್ರೀಯ ಸ್ವಯಂ ಸೇವಕ’ ಸಂಘವನ್ನೂ ಶೋಷಣೆಯೆಂಬ ಅಂಧ ಪದಗಳಡಿ ನಿಲ್ಲಿಸಿಬಿಟ್ಟಿತು!

ಅದೂ ಸಾಲದೇ, ಪ್ರತ್ಯೇಕ ಧರ್ಮದ ಕೂಗು, ಜಾತಿಯಾಧಾರಿತ ಬ್ರಿಗೇಡ್ ಗಳು, ರಾಜಕೀಯ ಪಕ್ಷಗಳು!
ಇನ್ನೂ ಅಂಧಕಾರದಲ್ಲಿಯೇ ಅರ್ಥವಿಲ್ಲದ ‘ಶೋಷಣೆ’ಯೆಂಬುದಡಿ ಉಪಯೋಗ ತೆಗೆದುಕೊಳ್ಳುತ್ತಿರುವರಾರು ಎಂದು ಆಲೋಚಿಸಿದ್ದರೆ ಬಹುಷಃ ಇವತ್ತು ಭಾರತ ಅದೆಷ್ಟೋ ಮುಂದುವರೆಯುತ್ತಿತ್ತು.

 

Source:

https://www.quora.com/Why-Ambedkar-converted-to-Buddhism-and-not-to-someother-religion-say-Islam-or-Christianity
http://hindugarjan.blogspot.in/2011/03/why-dr-ambedkar-reject-islam.html

– ಪೃಥು

 

Tags

Related Articles

Close