ಅಂಕಣ

ಮನಸ್ಸು ಕೇಳುತ್ತಿಲ್ಲ ಅದರೂ ಪಕ್ಷಕ್ಕೆ ದುಡಿಯುತ್ತಿರುವೆ. ಕಾಂಗ್ರೆಸ್ ಪಕ್ಷಕ್ಕೊಂದು ಕಾರ್ಯಕರ್ತನ ಬಹಿರಂಗ ಪತ್ರ

ನನ್ನಜ್ಜನಿಗೆ ಇಂದಿರಾಗಾಂಧಿಯ “ಉಳುವವನೆ ಭೂಮಿಯ ಒಡೆಯ” ಕಾನೂನಿನಿಂದ ಅವರು ಉಳುಮೆ ಮಾಡುತಿದ್ದ 1 ಎಕರೆ ಗದ್ದೆ ಅವರಿಗೆ ಸಿಕ್ಕಿತ್ತು ಅಂದಿನಿಂದ… ನನ್ನಜ್ಜ ಕಾಂಗ್ರೆಸ್ ಪಕ್ಷ, ನನ್ನಪ್ಪ ಕಾಂಗ್ರೆಸ್.

ನನ್ನಪ್ಪ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಆದ ಕಾರಣ ನಾನು ಕೂಡ ಕಾಂಗ್ರೆಸ್ ಕಾರ್ಯಕರ್ತನಾದೆ…ಕಾಂಗ್ರೆಸ್ ಪಕ್ಷಕ್ಕೆ 30ವರ್ಷ ನನ್ನೆಲ್ಲಾ ಸಮಯ ಕೊಟ್ಟು ದುಡಿದೆ..ಸಿದ್ದರಾಮಯ್ಯನನ್ನು ಅಧಿಕಾರಕ್ಕೆ ಏರಿಸಲು ನಾನು ಕೂಡಾ ನನಗಾಗುವಷ್ಟು ತುಂಬಾ ಶ್ರಮಪಟ್ಟೆ..!

ಆದ್ರೆ ಮುಖ್ಯಮಂತ್ರಿ ಆದ ತಕ್ಷಣ ಸಿದ್ದರಾಮಯ್ಯ ಬಿಜೆಪಿ ತಂದಿದ್ದ ಗೋಹತ್ಯಾ ನಿಷೇಧಕಾನೂನನ್ನು ವಾಪಸ್ ಪಡೆದು ಗೋಹತ್ಯೆಗೆ ಪ್ರೋತ್ಸಾಹ ನೀಡಿ ನಾನು ಕೂಡ ಗೋಮಾಂಸ ಸೇವಿಸುತ್ತೇನೆ ನೀವು ಯಾರು ಕೇಳೋಕೆ ಎಂದು ಜನರನ್ನು ಸಿದ್ದಣ್ಣ ಪ್ರಶ್ನೆ ಮಾಡಿದಾಗ… ನನ್ನ ಮನೆಯ ಹಸುವನ್ನು ನೆನೆಸಿಕೊಂಡು ಇದು ತಪ್ಪು ಎಂದು
ಗೊತ್ತಿದ್ದರೂ… ನಾನು ಪ್ರತಿಭಟಿಸದೆ ಅದನ್ನು ಸಮರ್ಥಿಸಿದೆ.. ಯಾಕೆ ಗೊತ್ತಾ???

ನಾಡಹಬ್ಬ ದಸರಾವನ್ನು ಅದ್ದೋರಿಯಾಗಿ ಆಚರಿಸಲು ಈ ಬಾರಿ ಬರಗಾಲ ಎಂದ ಮುಖ್ಯಮಂತ್ರಿಗಳು ದಸರಾಕ್ಕೆ 9 ಕೋಟಿ ಕೊಟ್ಟು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಟಿಪ್ಪು ಜಯಂತಿ ಆಚರಿಸಲು ಅದೇ ವರ್ಷ 17ಕೋಟಿ ಕೊಟ್ಟಾಗ ತಪ್ಪು ನಡೆಯುತ್ತಿದೆ ಎಂದು ತಿಳಿದರೂ ನಾನು ಪ್ರತಿಭಟಿಸದೇ ಅದನ್ನು ಸಮರ್ಥಿಸಿದೆ ಯಾಕೆ ಗೊತ್ತಾ??

ಜಾತಿಯ ಆಧಾರದ ಮೇಲೆ ಶಾಲೆಯಲ್ಲಿ ಮೊಟ್ಟೆ ಭಾಗ್ಯ ಯೋಜನೆಯಲ್ಲಿ ಹಿಂದುಳಿದ ವರ್ಗದ ಮಕ್ಕಳಿಗೆ 5ಮೊಟ್ಟೆ ಉಳಿದವರಿಗೆ 2 ಮೊಟ್ಟೆ ಕೊಟ್ಟಾಗ ಮನಸ್ಸಿನೊಳಗೆ ಬೇಜಾರಾದ್ರು ನಾನು ಪ್ರತಿಭಟಿಸದೇ ಅದನ್ನು ಸಮರ್ಥಿಸಿದೆ ಯಾಕೆ ಗೊತ್ತಾ??

ಬರೀ ಮುಸಲ್ಮಾನರಿಗೆ ಮಾತ್ರ ಶಾದಿಭಾಗ್ಯ ಯೋಜನೆ ಜಾರಿಗೆ ತಂದಾಗ ಅದು ತಪ್ಪೆಂದು ತಿಳಿದಿದ್ದರೂ ಇದು ಹಿಂದುಗಳಿಗೆ ಮಾಡತ್ತಿರುವ ಘೋರ ಅನ್ಯಾಯವೆಂದು ತಿಳಿದ್ದಿದ್ದರೂ ನಾನದನ್ನು ಪ್ರತಿಭಟಿಸದೇ ಸಮರ್ಥಿಸಿದೆ ಯಾಕೆ ಗೊತ್ತಾ??

ನಿಷ್ಠಾವಂತ ಅಧಿಕಾರಿಗಳಾದ D.K ರವಿ ,ಗಣಪತಿ ಮುಂತಾದವರ ಪ್ರಾಣ ಕಿತ್ತುಕೊಂಡದ್ದು ಸಿದ್ದರಾಮಯ್ಯನ ಮಂತ್ರಿಯಾದ K.J. ಜಾರ್ಜ್ ಎಂದು ತಿಳಿದಿದ್ದರರೂ ನಾನು ಪ್ರತಿಭಟಿಸದೇ ಅದನ್ನು ಸಮರ್ಥಿಸಿದೆ !! ಯಾಕೆ ಗೊತ್ತಾ

ಕೇಂದ್ರ ಸರ್ಕಾರದ ಉಜ್ವಲ ಯೋಜನೆ,ಕೇಂದ್ರ ಬರ ಪರಿಹಾರ ನಿಧಿ, ಬಡವರಿಗಾಗಿ ಕೊಡುವ 30 ಅಕ್ಕಿ ಯೋಜನೆಯನ್ನು ಸಿದ್ದರಾಮಯ್ಯ ಜನರಲ್ಲಿ ಇದು ತನ್ನ ಯೋಜನೆ ಎಂದೂ ಸುಳ್ಳು ಹೇಳಿದರೂ ನಾನು ಅದನ್ನು ವಿರೋಧಿಸದೆ ಸಮರ್ಥಿಸಿದೆ!! ಯಾಕೆ ಗೊತ್ತಾ???

ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನೇದಿನೇ ಜಾಸ್ತಿ ಆಗುತ್ತಿರುವಾಗ ಅವರಿಗೆ ಪರಿಹಾರ ಕೊಡದೇ ಬೆಂಗಳೂರಲ್ಲಿ ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಅನಗತ್ಯವಾದ ಸ್ಟೀಲ್ ಬ್ರಿಜ್ ನಿರ್ಮಿಸುವುದು ತಪ್ಪೆಂದು ತಿಳಿದಿದ್ದರರೂ ನಾನು ಅದನ್ನು ವಿರೋದಿಸಲಿಲ್ಲ…ಬದಲಾಗಿ ಅದನ್ನು ಸಮರ್ಥಿಸಿದೆ.. ಯಾಕೆ ಗೊತ್ತಾ??

ರಾಜ್ಯದ ಅತಿದೊಡ್ಡ ಕನ್ನಡ ಮಾದ್ಯಮ ಶಾಲೆ ಕಲ್ಲಡ್ಕ ಶ್ರೀರಾಮ ಶಾಲೆಗೆ ಕೊಲ್ಲುರಿಂದ ಬರುತ್ತಿದ್ದ ಪ್ರಸಾದ ರೂಪದ ಅಕ್ಕಿಯನ್ನು ತಡೆಹಿಡಿದದ್ದು ತಪ್ಪೆಂದು ತಿಳಿದಿದ್ದರರೂ ನಾನು ಸುಮ್ಮನಿರದೆ ಅದನ್ನು ಸಮರ್ಥಿಸಿದೆ!! ಯಾಕೆ ಗೊತ್ತಾ?

ರಾಜ್ಯದ ಶಿಕ್ಷಣ ಸಚಿವ ತನ್ವಿರ್ ಸೆಟ್ ಬ್ಲೂಫಿಲಂ ನೋಡಿದಾಗ, ಮೇಟಿಯರಾಸಲೀಲೆ ನಡೆದಾಗ ನಾನು ಅದು ತಪ್ಪೆಂದು ತಿಳಿದಿದ್ದರೂ ಸುಮ್ಮನಿದ್ದೆ ಯಾಕೆ ಗೊತ್ತಾ !!

ಸಿದ್ದರಾಮಯ್ಯ ಅವರು ಕಾಗೆ ಕೂತ ಕಾರನ್ನು ಅಪಶಕುನ ಅಂತ ಹೇಳಿ ಬದಳಿಸಿದ್ದು, ಲೂಟಿ ಮಾಡಿದ ಹಣದಲ್ಲಿ ಕೋಟಿ ಬೆಲೆಯ ಕೈ ಗಡಿಯಾರ ಕಟ್ಟಿಕೊಂಡದ್ದು, ಬಿಸ್ಕೆಟ್ ಕಾಫಿ ಕುಡಿಯಲು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು ತಪ್ಪೆಂದು ತಿಳಿದಿದ್ದರರೂ ನಾನು ಸುಮ್ಮನಿದ್ದೆ ಯಾಕೆ ಗೊತ್ತಾ?

ಸಿದ್ದರಾಮಯ್ಯ ಲಿಂಗಾಯತ, ವೀರಶೈವ ಸಮಾಜವನ್ನು ಒಡೆಯಲು ಪ್ರಯತ್ನಪಟ್ಟು ಸಿದ್ದಗಂಗಾ ಶ್ರೀಗಳಿಗೆ ಅವಮಾನ ಮಾಡಿದ್ದು ತಪ್ಪೆಂದು ತಿಳಿದಿದ್ದರೂ ನಾನು ಅದನ್ನು ಸಮರ್ಥಿಸಿದೆ..!! ಯಾಕೆ ಗೊತ್ತಾ???

ಭಗವಾನ್, ಗಿರೀಶ್ ಕಾರ್ನಾಡ್, ಮುಂತಾದವರು ಹಿಂದೂ ಧರ್ಮವನ್ನು ಹಿಂದೂ ದೇವರನ್ನು ಅವಹೇಳನ ಮಾಡುತ್ತಿದ್ದರೂ ಅವರನ್ನು ಸಿದ್ದಣ್ಣ ಪ್ರೋತ್ಸಾಹಿಸುತಿರುವುದು ತಪ್ಪೆಂದು ತಿಳಿದಿದ್ದರರೂ ನಾನು ಅದನ್ನು ಸಮರ್ಥಿಸಿದೆ…ಯಾಕೇ ಗೊತ್ತಾ??

ಶರತ್, ಕುಟ್ಟಪ್ಪ, ಪ್ರಶಾಂತ್ ಪೂಜಾರಿ, ರಾಜು ಮುಂತಾದ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿಸಿದ್ದು ನಮ್ಮವರೇ ಎಂದು ತಿಳಿದಿದ್ದರರೂ ನಾನು ಸುಮ್ಮನಿದ್ದೆ ಯಾಕೆ ಗೊತ್ತಾ??

ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಗೆ ತೆರಿಗೆ ಕಡಿಮೆ ಮಾಡಿದರೂ ರಾಜ್ಯ ಸರ್ಕಾರ ಮಾಡುವುದಿಲ್ಲ ಎಂದು ಹೇಳಿ ಮೋದಿಯನ್ನು ಗೊತ್ತಿದ್ದೂ ವಿರೋಧಿಸುತ್ತಿರುವುದು ತಪ್ಪೆಂದು ತಿಳಿದರೂ ನಾನು ಸುಮ್ಮನಿದ್ದೇನೆ ಯಾಕೆ ಗೊತ್ತಾ??

ಸಿದ್ದರಾಮಯ್ಯ ಸರ್ಕಾರ ಇಷ್ಟರ ವರೆಗಿನ ಸರ್ಕಾರಗಳಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ತಿಳಿದಿದ್ದರರೂ ನಾನು ಅದನ್ನು ಸಮರ್ಥಿಸುತ್ತಿದ್ದೇನೆ ಯಾಕೆ ಗೊತ್ತಾ??

ನನ್ನ ಅಜ್ಜ ಕಾಂಗ್ರೆಸ್, ನನ್ನ ಅಪ್ಪ ಕಾಂಗ್ರೆಸ್, ನಾನೂ ಕಾಂಗ್ರೆಸ್.. ಆದರೆ ಮೋದಿಯವರ ಕೆಲಸ ನನಗಿಷ್ಟ, ಅವರ ಮಾತು ನಿಜವಾದ ತೂಕದ ಮಾತು!! ಅವರ ನೀತಿ ತುಂಬಾ ದೂರದೃಷ್ಟಿ ಉಳ್ಳದ್ದು!! ಅವರ ಮನ್ ಕಿ ಬಾತ್ ನನಗಿಷ್ಟ ಅವರ ಭಾಷಣ ತಪ್ಪದೆ ಕೇಳುತ್ತೇನೆ!! ನನಗೂ ಬಿಜೆಪಿ ಸೇರುವಾಸೆ!! ನನಗೂ ಕೇಸರಿ ಧ್ವಜ ಹಿಡಿಯುವ ಆಸೆ ಆದರೇನು ಮಾಡುವುದು??

ಊರವರೆಲ್ಲಾ ಸೇರಿ ನೀನು ಕಾಂಗ್ರೆಸ್ ನೀನು ಕಾಂಗ್ರೆಸ್ ಎಂದು ನನಗೆ ಕಾಂಗ್ರೆಸ್ಸಿಗ ಎಂದು ಪಟ್ಟಕಟ್ಟಿಬಿಟ್ಟಿದ್ದಾರೆ ಹಾಗಿರುವಾಗ ಈಗ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೇಗೆ ಸೇರಲಿ??ಅಲ್ಲಿರುವವರೂ ನನ್ನ ಕಾಂಗ್ರೆಸ್ ಕಟ್ಟರ್ವಾದವನ್ನು ನೋಡಿ ನನ್ನ ಬಿಜೆಪಿ ಸೇರಿದಿಯಾರೆ ಎಂಬ ಭಯ.

ಆದ ಕಾರಣ ಅನಿವಾರ್ಯವಾಗಿ ಕಾಂಗ್ರೆಸ್, ಸಿದ್ದರಾಮಯ್ಯ, ರಮನಾಥ ರೈ, ಜಾರ್ಜ್, ಮೇಟಿ, ಸೇಠ್, ಯಾರು ತಪ್ಪು ಮಾಡಿದರೂ ಅದನ್ನು ಸಮರ್ಥಿಸುತ್ತೆನೆ ಯಾಕೆ ಗೊತ್ತಾ ನಾನು ಇಷ್ಟ ಇಲ್ಲದೆ ಆ ಪಕ್ಷದಲ್ಲಿರೋ ಕಾಂಗ್ರೆಸ್ ಕಾರ್ಯಕರ್ತ!!!”

ಇನ್ನಾಗದೂ ಇನ್ನಂದಿಗೂ ಅಗದೂ

ಸಿದ್ದರಾಮಯ್ಯ ನನ್ನ ಮೆಚ್ಚಿನ ನಾನು ತುಂಬಾ ಭಕ್ತಿ ಶ್ರದ್ಧೆ ಇಟ್ಟಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹತ್ತಿರ ಮೀನು ಮಾಂಸ ಇಂದು ಹೋದಗಾ ನನ್ನ ಒಳಮನಸ್ಸ್ ಚೀರಾಡಿತು ಹೃದಯ ಹಿಂಡಿ ಹಿಪ್ಪೆಯಾದಂಗೆ ಆಯಿತು

ಇನ್ನು ಸುಮ್ಮನಿರಲು ಸಾದ್ಯವಿಲ್ಲ ಇನ್ನು ಸುಮ್ಮನಿದ್ದರೆ ನನ್ನ ಹೆಂಡತಿಯೇ ನನ್ನನ್ನು ಷಂಡನೆಂದು ಕರೆದಾಳು, ನನ್ನ ಮಕ್ಕಳು ನನ್ನನ್ನು ಕಲ್ಲಿನ ಹೃದಯದವ ಅಂತ‌ ದೂಷಿಸಬಹುದು

ಇದು ನನ್ನೊಬ್ಬನ ನೋವಲ್ಲ

ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಹಿಂದು ಕಾರ್ಯಕರ್ತನ ನೋವು

ಈ ಪಕ್ಷ ಒಂದು ವರ್ಗದ ಮತದ ಬ್ಯಾಂಕ್ ಗಾಗಿ ನನ್ನಂತಹ ಕೋಟಿ ಕೋಟಿ ಹಿಂದುಗಳ ಮನ ನೋಯಿಸುತ್ತಿದೆ

ಕಾಂಗ್ರೆಸ್ ಪಕ್ಷಕ್ಕೆ ನೋವಿನಿಂದ ಅಂತಿಮ ನಮಸ್ಕಾರ ಹೇಳುತ್ತಿರುವ ಕಾರ್ಯಕರ್ತ

: ಹೆಸರು ಹೇಳಲು ಇಚ್ಚಿಸದ

Tags

Related Articles

Close