ಅಂಕಣ

ಈ ಆರ್ಯ, ದ್ರಾವಿಡರೆಂದರೆ ಯಾರು? ಆರ್ಯರು ಹೊರದೇಶದಿಂದ ಭಾರತಕ್ಕೆ ವಲಸೆ ಬಂದವರಾ? ಈ ಸುಳ್ಳು ಕಂತೆಯ ಹಿಂದಿನ ಸತ್ಯದರ್ಶನ!!!

ದೇಶದಲ್ಲಿ ಅಸಹಿಷ್ಣುತೆ (Intolerance) ಮಿತಿ ಮೀರುತ್ತಿದೆ ದೇಶದಲ್ಲಿ ಉಸಿರುಗಟ್ಟೋ ವಾತಾವರಣವಿದೆ ಅಂತ ಕಳೆದ ವರ್ಷ ಹಲವಾರು ಸಾಹಿತಿಗಳು, ಬುದ್ಧಿಜೀವಿಗಳು, ಲೇಖಕರು, ನಟ ನಟಿಯರು ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ, ಅದೇ ಪ್ರಶಸ್ತಿ ವಾಪಸಾತಿ, ಅಸಹಿಷ್ಣುತೆಯ ವಾದದ ತಿಕ್ಕಾಟದಲ್ಲೇ ಅಮೀರ್ ಖಾನ್ ಕೂಡ ದೇಶದಲ್ಲಿ ಕಳೆದ 6-8 ತಿಂಗಳಿನಿಂದ ಒಂದು ತರಹ ಭಯದ ವಾತಾವರಣ ದೇಶದಲ್ಲಿದೆ, “ನನ್ನ ಪತ್ನಿ ದೇಶ ಬಿಡೋಣವೇ” ಅಂದಿದ್ದಳು ಅಂತ ಹೊಸ ವಿವಾದವನ್ನೇ ಸೃಷ್ಟಿಸಿದ್ದ ಹಾಗು ಅಮೀರ್ ಖಾನ ಪರ ವಿರೋಧವಾಗಿ ನಾನಾ ರೀತಿಯ ಪ್ರತಿಭಟನೆಗಳು ನಡೆದದ್ದು ತಮಗೆಲ್ಲ ತಿಳಿದ ವಿಷಯವೇ.

ಇದೇ ವಿಷಯವನ್ನಿಟ್ಟುಕೊಂಡು ಕಳೆದ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಕೋಲಾಹಲವೆದ್ದಿತ್ತು. ಆಗ ನಮ್ಮ ದೇಶದ ಮಾನ್ಯ ಗೃಹಮಂತ್ರಿ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಮಾತನಾಡುತ್ತ ಈ ತಥಾಕತಿತ ಅಸಹಿಷ್ಣುತೆಯ ಬಗ್ಗೆ ಚರ್ಚೆ ಮಾಡುವಾಗ ಸಂವಿಧಾನ ಕರ್ತೃ ಅಂಬೇಡ್ಕರರ ವಿಷಯವನ್ನು ಪ್ರಸ್ತಾಪಿಸುತ್ತ ದಲಿತ ಶೋಷಣೆಯನ್ನು ತಮ್ಮ ಧ್ವನಿ ಎತ್ತಿ ದಲಿತರ ಹಕ್ಕುಗಳಿಗಾಗಿ ಸಮರ್ಥವಾಗಿ ಹೋರಾಟ ನಡೆಸಿ ಅವರ ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಹೊರತು ಅಂಬೇಡ್ಕರರು ಯಾವತ್ತೂ ದೇಶ ಬಿಡುವ ಯೋಚನೆ ಮಾಡಿರಲಿಲ್ಲ ಅಂತ ಉಲ್ಲೇಖಿಸುತ್ತ ನಮ್ಮ ದೇಶ ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನಲ್ಲೇ ಸಹಿಷ್ಣು ರಾಷ್ಟ್ರವಾಗಿದೆ ಅನ್ನೋ ಮಾತನ್ನು ಹೇಳಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಹಾಗು ಕಲಬುರಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆಯ ಅಂಬೇಡ್ಕರ್ ದೇಶ ಬಿಡ್ತೀನಿ ಅನ್ನೋ ಮಾತನ್ನು ಆಡಿರಲೇ ಇಲ್ಲ. “ನಾವು ದ್ರಾವಿಡರು ಈ ದೇಶದ ಮೂಲನಿವಾಸಿಗಳು ನೀವು(ಆರ್ಯರು) ಹೊರಗಿನಿಂದ ಬಂದವರು” ಅಂತ ಒಂದು ಸ್ಟೇಟ್’ಮೆಂಟ್ ಕೊಟ್ಟಿದ್ದರು.

ಈ ಪೊಳ್ಳು ವಾದವನ್ನು ಈಗಲೂ ಅಸಂಖ್ಯ ಸೋ ಕಾಲ್ಡ್ ಬುದ್ಧಿಜೀವಿಗಳು ಪ್ರತಿಪಾದಿಸುತ್ತಲೇ ಜನರ ತಲೇಲಿ ಹುಳ ಬಿಡೋ ಕೆಲಸ ಮಾಡ್ತಿರ್ತಾರೆ.

ಭಾರತಕ್ಕೆ ಆರ್ಯರು ಹೊರಗಿನಿಂದ ಬಂದವರು, ದ್ರಾವಿಡರು ಮೂಲನಿವಾಸಿಗಳು ಅನ್ನೋದು ಪೊಳ್ಳು ವಾದವಂತ ಎಷ್ಟೋ ಜನ ಪಾಶ್ಚಾತ್ಯ ವಿದ್ವಾಂಸರು, ಇತಿಹಾಸಕಾರರೇ ಸಾಕ್ಷ್ಯಾಧರ, ಸಂಶೋಧನೆಗಳ ಮೂಲಕ ಒಪ್ಪಿಕೊಂಡಾಗ “Aryan Invasion Theory” ಒಟ್ಟಾರೆಯಾಗಿ baseless ಅನ್ನೋದು ಜಗಜ್ಜಾಹಿರಾಗಿರುವ ಸಂದರ್ಭದಲ್ಲಿ ಮತ್ತೆ ಆ ಪೊಳ್ಳು ವಾದವನ್ನಿಟ್ಟುಕೊಂಡು ರಾಜಕಾರಣ ಮಾಡುವುದು, ಗಂಜಿಗೋಸ್ಕರ ಸುಳ್ಳು ಇತಿಹಾಸ ಹೇಳೋದು ಮಾತ್ರ ಇನ್ನೂ ಭಾರತದಲ್ಲಿ ನಿಂತಿಲ್ಲ ಅನ್ನುವುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಮಾತಿನಿಂದಲೆ ಅರ್ಥವಾಗುತ್ತದೆ. ಇದೇ “ಆರ್ಯರಿಂದ ಭಾರತದ ಮೇಲೆ ದಾಳಿ” ಎಂಬ ವಿಷಯ ಮಂಡಿಸಿ ಬ್ರಿಟೀಷರು ಅನುಸರಿಸಿದ divide and rule ಪಾಲಿಸಿಯನ್ನ ನಮ್ಮ ರಾಜಕಾರಣಿಗಳು, ಸೋ ಕಾಲ್ಡ್ ಸೆಕ್ಯೂಲರ್’ಗಳು ಇನ್ನೂ ಅನುಸರಿಸಿ ಜನರ ಮನಸ್ಸಿನಲ್ಲಿ ಜಾತಿಯೆಂಬ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮಾತ್ರ ದೇಶದ ಐಕ್ಯತೆಗೆ ಮಾರಕವೇ ಸರಿ.

ಇರಲಿ ಮೊದಲು ಈ ಆರ್ಯ-ದ್ರಾವಿಡ ಅಂದರೆ ಯಾರು, ಈ ಪೊಳ್ಳು ಹಾಗು ಮೊಂಡು ವಾದವೇನು ಅನ್ನೋದು ಅರಿಯಲೇಬೇಕು.

ಇವರ Aryan Invasion Theory ಪ್ರಕಾರ “ಆರ್ಯರೆಂದರೆ ಇವರು ಇರಾನ್ ಹಾಗು ಪಶ್ಚಿಮ ರಷ್ಯಾದಿಂದ ದಾಳಿಕೋರರಾಗಿ ಭಾರತದ ಮೇಲೆ ದಾಳಿ ಮಾಡಿ ಉತ್ತರ ಭಾರತದಲ್ಲಿದ್ದ ಶಾಂತಿಪ್ರೀಯ, ವ್ಯವಸಾಯವನ್ನೇ ಮೂಲ ಕಸುಬನ್ನಾಗಿಸಿಕೊಂಡಿದ್ದ, ಯುದ್ಧದ ಬಗ್ಗೆ ಮಾಹಿತಿಯೇ ಇರದ ದ್ರಾವಿಡರ ಕಗ್ಗೊಲೆ ಮಾಡಿ ದ್ರಾವಿಡರಲ್ಲಿ ಭಯದ ವಾತಾವರಣ ಸೃಷ್ಟಿಸಿ ಅವರನ್ನು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಅಟ್ಟಿದರು” ಅನ್ನೋದು ಈ theory ವಾದ.

ಈ ವಾದವನ್ನು ಪುಷ್ಟಿಕರಿಸುವುದಕ್ಕೆ ಈ ಥಿಯರಿ ಕೊಡುವ ಕೆಲ ಕಾರಣಗಳು ಹೀಗಿವೆ.

ಆರ್ಯರು ಸದಾ ಯುದ್ಧಸನ್ನದ್ಧರಾಗಿ ರಥದ ಮೇಲೆ ಬರುತ್ತಿದ್ದರು, ಕುದುರೆಗಳ ಮೇಲೆ ಆರ್ಯನ್ನರು ಬಂದಿದ್ದರು(ಅಂದರೆ ಆರ್ಯರು ಬರುವ ಮುನ್ನ ಭಾರತದಲ್ಲಿ ಕುದುರೆಗಳೇ ಇರಲಿಲ್ಲ, ಆರ್ಯರು ತಂದ ಕುದುರೆಗಳಿಂದಲೇ ಈಗ ನಾವು ಭಾರತದಲ್ಲಿ ಕುದುರೆಗಳನ್ನು ಕಾಣುತ್ತಿದ್ದೇವೆ ಅನ್ನೋದು ಈ theory ಯ ವಾದ) ಹಾಗು ಈ ಆರ್ಯರು ಸದಾ ಗೋವುಗಳನ್ನು ಸಾಕುತ್ತ ಯುದ್ಧದ ಜೊತೆ ಜೊತೆಗೆ ಯಜ್ಞ ಯಾಗಾದಿಗಳನ್ನ ಮಾಡುತ್ತಿದ್ದರು“.

ಈ theory ಪ್ರಕಾರ ಮೊದಲು ಆರ್ಯನ್ನರು ಕ್ರಿ.ಪೂ.1400-1200 ರಲ್ಲಿ ಹರಪ್ಪ ಮೊಹೆಂಜೊದಾರೊ ಮೇಲೆ ದಾಳಿ ನಡೆಸಿ ಭಾರತಕ್ಕೆ ಕಾಲಿಟ್ಟರು ನಂತರ ಇಲ್ಲಿದ್ದ ದ್ರಾವಿಡರ ಶೋಷಣೆ ಮಾಡಿ ದಕ್ಷಿಣ ಭಾರತಕ್ಕೆ ಓಡಿಸಿದರಂತೆ.

ಆದರೆ ಭಾರತದ ಜನರಿಗೆ ಗೊತ್ತಿರದ ಈ Aryan Invasion Theory ವಾದದ ಮೂಲ ಎಲ್ಲಿದೆ, ಇದನ್ನು ಭಾರತದಲ್ಲಿ ಹುಟ್ಟುಹಾಕಿದ್ದು ಯಾರು ಹಾಗು ಇದರ ಉದ್ದೇಶವೇನಿತ್ತು ಅನ್ನೋದನ್ನ ತಿಳಿಯುವುದು ಅತೀ ಅವಶ್ಯಕ.

ಈ theory ಯ ಮೂಲ ವ್ಯಕ್ತಿ ಒಬ್ಬ ಬ್ರಿಟಿಷ್ ಅಧಿಕಾರಿ ಹಾಗು ಆಗಿನ ಕಲ್ಕತ್ತಾದ ಹೈಕೋರ್ಟ್ ನ್ಯಾಯಾಧೀಶನಾಗಿದ್ದ ಸರ್ ವಿಲಿಯಂ ಜೋನ್ಸ್. ಈತ ಭಾರತಕ್ಕೆ ನ್ಯಾಯಾಧೀಶನಾಗಿ ಬ್ರಿಟಿಷರಿಂದ ನಿಯುಕ್ತಿಗೊಂಡು 1784 ರಲ್ಲಿ ಬಂದು ನೆಲೆಸುತ್ತಾನೆ. ಭಾರತದ ಪ್ರಸಿದ್ಧ ‘ಏಷ್ಯಾಟಿಕ್ ಸೊಸೈಟಿ’ ಸಂಘವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದ್ದು ಈತನೇ.

ಈತ ಪ್ರತೀ ವರ್ಷವೂ ತನ್ನ ಸಂಘದ ಕುರಿತಾಗಿ ಅಧ್ಯಕ್ಷೀಯ ಭಾಷಣ ಮಾಡೋದು ವಾಡಿಕೆಯಾಗಿತ್ತು. 1786 ರಲ್ಲಿ ಈತ ಮಾಡಿದ ಭಾಷಣವೇ ಈ ಆರ್ಯ-ದ್ರಾವಿಡ ವಾದದ ಮೂಲ ಎನ್ನಬಹುದು. ಈತ ತನ್ನ ಭಾಷಣದಲ್ಲಿ ಸಂಸ್ಕೃತ ಭಾಷೆ ಒಂದು ಶ್ರೇಷ್ಟ ಭಾಷೆ ಹಾಗು ಈ ಭಾಷೆ ಲ್ಯಾಟಿನ್, ಗ್ರೀಕ್ ಭಾಷೆಗಳಿಗೆ ತೀರಾ ಹತ್ತಿರದ ಸಂಬಂಧವಿರುವ ಬಗ್ಗೆ ಕೆಲವು ವಾದಗಳನ್ನು ಮಂಡಿಸುತ್ತಾನೆ.

ಲ್ಯಾಟಿನ್, ಗ್ರೀಕ್ ಭಾಷೆ ಸಂಸ್ಕೃತದಷ್ಟು ಶ್ರೀಮಂತವಲ್ಲ ಅನ್ನೋದು ಇವನ ಅಭಿಪ್ರಾಯವಾಗಿತ್ತು ಹಾಗು ಅದು ನಿಜವೇ. ಈ ಭಾಷೆಗಳ ಸಾಮ್ಯತೆಯೇ ಆರ್ಯ ದ್ರಾವಿಡ ಅನ್ನೋ theory ಹುಟ್ಟಿಕೊಳ್ಳಲು ಕಾರಣವಾಯಿತು ಅನ್ನಬಹುದು, ಅಂದರೆ ಲ್ಯಾಟಿನ್, ಗ್ರೀಕ್ ಭಾಷೆ ಮಾತನಾಡುವ ಜನ ಭಾರತಕ್ಕೆ ವಲಸೆ ಬಂದು ಇಲ್ಲಿ ಲ್ಯಾಟಿನ್, ಗ್ರೀಕ್ ಭಾಷೆಯನ್ನ ಮೂಲವಾಗಿಟ್ಟುಕೊಂಡು ಸಂಸ್ಕೃತ ಎಂಬ ಭಾಷೆ ಹುಟ್ಟುಹಾಕಿ ಅದನ್ನ ಸಂಪದ್ಭರಿತಗೊಳಿಸಲಾಯಿತು ಅನ್ನೋದು ಈತನ ಭಾಷಣದ ಒಳ ಅರ್ಥವಾಗುತ್ತು

“ಆರ್ಯನ್ನರ ದಾಳಿ” ಅನ್ನೋ ವಾದದ ಮೂಲ ವಿಲಿಯಂ ಜೋನ್ಸನಿಂದ ಆರಂಭವಾಗಿ ಅದನ್ನ ಮತ್ತಷ್ಟು ಪ್ರಚಾರ ಮಾಡಿ ಇದಕ್ಕೆ ತಾನೇ ಸೃಷ್ಟಿಸಿದ ದಾಖಲೆಗಳು,
assumptions basis ಮೇಲೆ ಮತ್ತಷ್ಟು ಪ್ರಚಲಿತಗೊಳಿಸಿದ್ದು ಮುಂದೆ ಬ್ರಿಟಿಷರಿಂದ ನಿಯುಕ್ತಿಗೊಂಡು ಭಾರತಕ್ಕೆ ಬಂದ “ಮ್ಯಾಕ್ಸ್ ಮುಲ್ಲರ್” ಎಂಬ
ಜರ್ಮನಿಯ ಸಂಸ್ಕೃತ ತಜ್ಞ.

1848 ರಲ್ಲಿ ಈತ ತನ್ನ ಸಂಶೋಧನೆಯಲ್ಲಿ ಮೂಲತಃ ಆರ್ಯನ್ನರು ಭಾರತದವರೇ ಅಲ್ಲ ಅವರು ಭಾರತದ ಮೇಲೆ ಸುಮಾರು ಕ್ರಿ.ಪೂ.1500 ರಿಂದ ಕ್ರಿ.ಪೂ 1200 ರ ಮಧ್ಯೆ ಭಾರತಕ್ಕೆ ವಲಸೆ ಬಂದು ವೇದಗಳನ್ನ ಸೃಷ್ಟಿಸಿದರು ಅನ್ನೋ ವಾದವನ್ನೂ ಮುಂದಿಟ್ಟನು. ಹಿಂದೂಗಳು ಭಾರತವರೇ ಅಲ್ಲ ಅವರೇ “ಆರ್ಯರು” ಭಾರತದ ಮೇಲೆ ದಾಳಿ ಮಾಡಿ ನೆಲೆಸಿದ ನಂತರ ದ್ರಾವಿಡರನ್ನ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಓಡಿಸಿ ನಂತರ ವೇದ ರಚನೆಗಳನ್ನ ಕೈಗೊಂಡರು ಅನ್ನೋದು ಮ್ಯಾಕ್ಸ್ ಮುಲ್ಲರನ ತಥಾಕಥಿತ “ಸಂಶೋಧನೆ”ಯಾಗಿತ್ತು.

ಇದೇ ವಾದ ಬ್ರಿಟಿಷರು ಭಾರತವನ್ನು ಒಡೆದು ಆಳಲು ಉಪಯೋಗಿಸಿಕೊಂಡು ಅಸ್ತ್ರ. ಇದರಿಂದ ಬ್ರಿಟೀಷರಿಗೇನು ಲಾಭ ಇದ್ದಿತೂ ಅಂತ ಪ್ರಶ್ನೆ ಮೂಡಬಹುದು ಅದು ಸಹಜವೇ.

ಭಾರತದ ಜನರನ್ನು ಭಾಷೆ, ಆಚಾರ ವಿಚಾರ, ವೇಷಭೂಷಣ, ಸಂಸ್ಕೃತಿಯ ಆಧಾರದ ಮೇಲೆ ಒಡೆದು ಆಳಬಹುದು ಅನ್ನೋ ಲೆಕ್ಕಾಚಾರವೇ ಬ್ರಿಟಿಷರದ್ದಾಗಿತ್ತು ಹಾಗು ಇದೆ ವಾದವನ್ನು ಸಮರ್ಥವಾಗಿ ಭಾರತೀಯರ ಮೇಲೆ ಹೇರಿ ಜನಾಂಗ, ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸಿಯೇ ಬಿಟ್ಟರು. ಆ ಕಂದಕವನ್ನ ನಮ್ಮ ಈಗಿನ ರಾಜಕಾರಣಿಗಳು ಇನ್ನಷ್ಟು ಆಳಗೊಳಿಸಿ ತಮ್ಮ ರಾಜಕಾರಣ ಮಾಡುತ್ತಿದ್ದಾರೆ.

ಅದು ಹಾಗಿರಲಿ ಈ Aryan Invasion theory ಪೊಳ್ಳು ವಾದವಂತ ಖುದ್ದು BBC(British Broadcast Corporation) ಒಪ್ಪಿಕೊಂಡಿದೆ. ಈ ಥಿಯರಿ ಸುಳ್ಳು ಅಂತ ಹಲವಾರು ಸಾಕ್ಷ್ಯಾಧಾರಗಳ ಮೂಲಕವೂ ಸಾಬೀತಾಗಿದೆ.

ಅಂತಹ ಕೆಲವು ಸಂಶೋಧನೆಗಳು ಹೀಗಿವೆ:

1. ಮ್ಯಾಕ್ಸ್ ಮುಲ್ಲರ್’ನ ಪ್ರಕಾರ ಆರ್ಯರು ಮೊದಲು ದಾಳಿ ಮಾಡಿದ್ದು ಹರಪ್ಪ ಮೊಹೆಂಜೊದಾರೊನಲ್ಲಿ ಕ್ರಿ.ಪೂ 1200ರಲ್ಲಿ, ಆದರೆ ಈ ಊಹಾವಲೋಕನೆಯಲ್ಲಿ ಹುಳುಕಿದೆ ಅಂತ ಕಂಡು ಬಂದಿದ್ದು ಹರಪ್ಪ ಮೊಹೆಂಜೊದಾರೊ ನಾಗರಿಕತೆಗಳ excavation ದಿಂದ. ಈ ಉತ್ಖನನದ result ನೋಡಿದರೆ ಹರಪ್ಪ ಮೊಹೆಂಜೊದಾರೊ ನಾಗರೀಕತೆಗಳು ಕ್ರಿ.ಪೂ.2000 – 3000 ದಿಂದಲೂ ಇದ್ದವು, ಅಂದರೆ ಮ್ಯಾಕ್ಸ್ ಮುಲ್ಲರ್ ಉಲ್ಲೇಖಿಸಿದ್ದಕ್ಕಿಂತ ಮುಂಚೆಯೆ ಹರಪ್ಪ ಮೊಹೆಂಜೊದಾರೊ ಸಂಸ್ಕೃತಿ ಇತ್ತು ಅನ್ನೋದು prove ಆಯ್ತು.

2. Arya Invasion ವಾದದ ಪ್ರಕಾರ ಭಾರತದಲ್ಲಿ ಆರ್ಯರು ಕ್ರಿ.ಪೂ.1200ರಲ್ಲಿ ಬರುವುದಕ್ಕಿಂತ ಮುಂಚೆ ಭಾರತದಲ್ಲಿ ಕುದುರೆಗಳು ಹಾಗು ರಥಗಳು ಇರಲೇ ಇಲ್ಲವಂತೆ ಆದರೆ ಗುಜರಾತಿನ ‘ಸರ್ಕೋಟಡ’ದಲ್ಲಿ ನಡೆದ excavation ನಲ್ಲಿ ಕುದುರೆ ಹಾಗು ರಥದ ಅವಶೇಷಗಳು ಸಿಕ್ಕಿದ್ದು ಇವು ಆ ಪ್ರಾಣಿಯ ಅವಶೇಷಗಳು ಮ್ಯಾಕ್ಸ್ ಮುಲ್ಲರ್ ವಾದಿಸಿದ್ದಕ್ಕಿಂತ 500 ರಿಂದ 700 ವರ್ಷ ಹಳೆಯದಾಗಿದ್ದವು ಅಂದರೆ ಆರ್ಯರು ಹರಪ್ಪ ನಾಗರೀಕತೆಗೆ ಬಂದರೆಂದು ನಂಬಿದ್ದ ಕಾಲಘಟ್ಟಕ್ಕೂ ಮುಂಚೆಯೇ ಭಾರತದಲ್ಲಿ ಕುದುರೆಗಳಿದ್ದವು ಅನ್ನೋದು ಸಾಬೀತಾಗಿದೆ.

3. ಮೈಕಲ್ ಡ್ಯಾನಿನೋ ಎನ್ನುವವರು ಹಾಗು ಎ.ಘೋಷ್ ಕರ್ನಾಟಕದ ಕಲಬುರಗಿ ಜಿಲ್ಲೆಯ ಕೊಡೆಕಲ್, ರಾಯಚೂರು ಜಿಲ್ಲೆಯ ಹುಲ್ಲೂರು ಬಳಿ ನವಶಿಲಾಯುಗ ಕಾಲಕ್ಕೆ ಸೇರಿದ ಕುದುರೆಗಳ ಅವಶೇಷ ಸಿಕ್ಕಿರುವುದನ್ನ ಉಲ್ಲೇಖಿಸಿದ್ದಾರೆ.

4. ಪ್ರೊಫೆಸರ್ ಬಿ.ಲಾಲ್ ಎನ್ನುವವರು ಆರ್ಯರ ವಲಸೆಯ ಬಗ್ಗೆ ಸ್ಪಷ್ಟ ವಿವರಗಳನ್ನು ಇಟಲಿಯಲ್ಲಿ 2007ರಲ್ಲಿ ನಡೆದ 19ನೇ International Conference on South Asian Archeology ತಿಳಿಸಿದ್ದಾರೆ. ಆರ್ಯರಲ್ಲಿ ಹಲವು ಪಂಗಡಗಳಿದ್ದವು ಉದಾಹರಣೆಗೆ ‘ಆಯು’ ಅನ್ನುವ ಪಂಗಡ ಸಿಂಧೂ, ಸರಸ್ವತಿ ನದಿ ದಡದಿಂದ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿಗೆ ಹರಡಿ ಗಾಂಧಾರಗಳಿಗೆ ಕಡೆಗೆ ಅಂದರೆ ಅಫ್ಘಾನಿಸ್ತಾನದ ಕಂದಹಾರ ಕಡೆ ಹೊರಡುತ್ತಾರೆ. ಹಾಗೆಯೇ ಕುರು ಮತ್ತು ಪಂಚಾಲರು ಇತ್ತ ಗಂಗಾ ನದಿಯ ಕಡೆ ಹರಡುತ್ತಾರೆ, ಸೋ ಆರ್ಯರು ಪಶ್ಚಿಮದತ್ತ ಹೊರಟರೆ ಹೊರತು ಆಕಡೆಯಿಂದ ಭಾರತಕ್ಕೆ ಬಂದವರಲ್ಲ.

5. ಅಮೇರಿಕದ ಜಿಮ್ ಶಾಫರ್ ಮತ್ತು ಡೈಯೇನ್ ಲಿಚೆನ್’ಸ್ಟೀನ್ ಎಂಬ ಚರಿತ್ರಾಕಾರರು ಈ Aryan invasion theory ಯೂರೋಪಿನ ಬಿಳಿಜನರ, ಸ್ವಪ್ರತಿಷ್ಠೆಯಿಂದ ಲೇಪಿತವಾದವು ಅಂತ ಅವರು ಬರೆದ ಪುಸ್ತಕ Aryan in South Asia: Evidence, interpretation and ideology ದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

6. ಅಂಬೇಡ್ಕರರು ಸಹಿತ ಈ ಆರ್ಯ ದಾಳಿಯನ್ನು ಸುಳ್ಳು ಅಂತ ಅವರು ಬರೆದ “Who were Shudras?” ನಲ್ಲಿ ಉಲ್ಲೇಖಿಸಿದ್ದಾರೆ.

ಹೀಗೆ ಇನ್ನೂ ಹಲವಾರು ಸಂಶೋಧನೆಗಳು ಇಡೀ ಜಗತ್ತಿನ ಕಣ್ಣಿನ ಎದುರಿವೆ. ಸಂಶೊಧನೆಗಳನ್ನಂತು ಬಿಡಿ, ಆರ್ಯರು ಭಾರತಕ್ಕೆ ದಾಳಿ ಮಾಡಿದ ಮೇಲೆ ಇಲ್ಲಿ ವೇದಗಳನ್ನು ರಚನೆ ಮಾಡಿ ದೇವರು, ಭಯ ಭಕ್ತಿ ಅನ್ನೋ concept ಜನರ ತಲೇಲಿ ತುಂಬಿದರು ಅನ್ನೋದು Aryan invasion theory ಯ ವಾದ.

ಇದನ್ನೇ ಆ ಭಗವಾನ್ ಅನ್ನೋ ಮೂರ್ಖನೂ ಪ್ರತಿಪಾದಿಸ್ತಾನೆ.

ಇದನ್ನ ಒಂದು ಹಂತದಲ್ಲಿ ಸರಿ ಅಂದುಕೊಂಡರೂ ಇನ್ನೂ ಕೆಲ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಅದೇನೆಂದರೆ ಆರ್ಯರು(ಬೆಳ್ಳಗಿನ ಜನ)
ಬಂದಮೇಲೆ ಜಾತಿ ಅಥವಾ ವರ್ಣವ್ಯವಸ್ಥೆ ಹುಟ್ಟಿಕೊಂಡಿತ್ತು ಹಾಗು ದ್ರಾವಿಡರಲ್ಲಿ ಅಂತಹ ಯಾವುದೇ ವರ್ಣ ಅಥವಾ ಜಾತಿ ವ್ಯವಸ್ಥೆ ಇರಲಿಲ್ಲ ಅಂತಾದರೆ ಆರ್ಯರು ರಾಮಾಯಣ ರಚನೆ ಮಾಡುವಾಗ ಯಾಕೆ ಕಪ್ಪು ಬಣ್ಣದವನಾಗಿದ್ದ ಕ್ಷತ್ರಿಯ ಕುಲದ ರಾಮನನ್ನ ಹೀರೋ ಮಾಡಿ ಬ್ರಾಹ್ಮಣನಾಗಿದ್ದ ಬಿಳಿಯ ರಾವಣನನ್ನು ವಿಲನ್ ಮಾಡದ್ರು?

ಆರ್ಯರು ಬೆಳ್ಳಗಿದ್ದರು ವೇದಗಳು, ರಾಮಾಯಣ, ಮಹಾಭಾರತ ರಚಿಸಿದ್ದರು ಅಂತಾದರೆ ಮಹಾಭಾರತದ ಹೀರೋ ಆಗಿರುವ ಕೃಷ್ಣನನ್ನು ಯಾಕೆ
ದ್ರಾವಿಡರ ರಿತಿಯಲ್ಲಿ ಕಪ್ಪು ನೀಲಿ ಬಣ್ಣದ ವ್ಯಕ್ತಿಯಾಗಿ ಚಿತ್ರಿಸಿದ್ದು?

ತಮ್ಮ ಮೂಲ ದೇವರಾದ ಶಿವನನ್ನೇಕೆ ಸ್ಮಶಾನವಾಸಿಯಾಗಿ ಮತ್ತೆ ಯಾಕೆ ದ್ರಾವಿಡರ ಹಾಗೆ ಅದೇ ಕಪ್ಪು ನೀಲಿ ಬಣ್ಣದ ವ್ಯಕ್ತಿಯಾಗಿ ಚಿತ್ರಿಸಿದ್ದು?

ತಾವೇ ಸೃಷ್ಟಿಸಿದ್ದ ಈ ಆರ್ಯರ ದಾಳಿ ಅನ್ನೋ ತಥಾಕಥಿತ ಥಿಯರಿ ಸ್ವತಃ ಇಂಗ್ಲೆಂಡಿನ BBC ಸಂಸ್ಥೆ ಒಪ್ಪಿಕೊಂಡಿದೆ ಆದರೆ ನಮ್ಮ ದೇಶದ ರಾಜಕಾರಣಿಗಳು ಮಾತ್ರ ಬ್ರಿಟಿಷರ divide and rule policy ಮಾತ್ರ ಇನ್ನೂ ಬಿಟ್ಟಿಲ್ಲ.

ಈ Aryan Invasion ಥಿಯರಿ ಬಹುತೇಕ ತಥಾಕಥಿತ ಶೂದ್ರ, ದಲಿತಪರ ಅಂತ ಮಾತನಾಡೋ ಜನರು ಈಗಲೂ ಇದೇ ನಿಜ ಅಂತ ವಾದಿಸುತ್ತಾರೆ, ಇವರೆಲ್ಲ ಅಂಬೇಡ್ಕರರನ್ನ ಆದರ್ಶವಾಗಿ ತಗೋತಾರೆ ಅದರೆ ಅದೇ ಅಂಬೇಡ್ಕರು ಈ “ಆರ್ಯ ದಾಳಿ” ಸುಳ್ಳು ಅಂತ ಹೇಳಿದ್ದನ್ನು ಕೇಳುವ ಸ್ಥಿತಿಯಲ್ಲಿಲ್ಲ.

ಒಟ್ಟಾರೆಯಾಗಿ ಬ್ರಿಟಿಷರು ನಮ್ಮ ಮಾನಸಿಕತೆಯನ್ನ ಚೆನ್ನಾಗಿ ಅರಿತುಕೊಂಡೇ ಈ theory ಹುಟ್ಟುಹಾಕಿದ್ದು ನಮ್ಮ ಈಗಿನ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಇಷ್ಟೆಲ್ಲಾ ಓದಿದ ಮೇಲೆ ನಿಮಗೆ ನಿಜವಾಗಲೂ ಈ ಆರ್ಯ ದ್ರಾವಿಡರು ಯಾರು ಅಥವಾ ಈ ಪದಗಳ ಅರ್ಥ ಏನು ಅನ್ನೋ ವಿಚಾರ ತಲೆಯಲ್ಲಿ ಹುಳ ಬಿಟ್ಟ ಹಾಗೆ ಆಗಿರುತ್ತೆ.

ಈ ಆರ್ಯ ದ್ರಾವಿಡ ಪದಗಳ ಉಲ್ಲೇಖ ನಮ್ಮ ಭಾರತೀಯ ಪುರಾತನ ಗ್ರಂಥಗಳಲ್ಲುಂಟು!

ಆರ್ಯ ಅಂದರೆ ಅದೊಂದು ಗೌರವಸೂಚಕ ಪದ. ನಾವು ‘ಸರ್’ ಅಂತ ಹೇಗೆ ಮರ್ಯಾದೆಯಿಂದ ಸಂಬೋಧಿಸುತ್ತೀವೋ ಹಾಗೆಯೇ ಆರ್ಯ, ಅಯ್ಯ ಅನ್ನೋ ಹಲವಾರು ಶಬ್ದಗಳ ಮೂಲವೇ ಆರ್ಯ.

ಇನ್ನು ಈ ದ್ರಾವಿಡ ಅಂದರೆ ಅದೊಂದು ಒಂದು ನಿರ್ದಿಷ್ಟ ಪ್ರದೇಶವಾದ ದಕ್ಷಿಣ ಭಾರತವನ್ನ ಉಲ್ಲೇಖಿಸುವ ಶಬ್ದವೇ ಹೊರತು ಬ್ರಿಟಿಷರು ಸೃಷ್ಟಿಸಿದ “ಆರ್ಯ ದಾಳಿ”ಯಲ್ಲಿನ ದ್ರಾವಿಡದ ಉಲ್ಲೇಖವಲ್ಲ.

ಇಡೀ ವಿಶ್ವದಲ್ಲೇ ಎಲ್ಲರ ಚಿತ್ತ ಭಾರತದತ್ತ ಹರಿಯುವಂತೆ ತಮ್ಮ ವಿದೇಶಾಂಗ ನೀತಿಗಳು, ನಮ್ಮ ಸಂಸ್ಕೃತಿ, ತಂತ್ರಜ್ಞಾನದ ಮೂಲಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅವಿರತ ಶ್ರಮಪಡುತ್ತಿರಬೇಕಾದರೆ ನಾವು ಮಾತ್ರ ಯಾರೋ ಹೊರದೇಶದವರು ಬರೆದ ಸುಳ್ಳು ಗೊಳ್ಳು ಇತಿಹಾಸ ಓದಿ ಇನ್ನೂ ಜಾತಿ, ಮತ ಅನ್ನೋ ಸುಳಿಗೆ ಸಿಲುಕಿ ನಮ್ಮತನ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ಮರೆಯುತ್ತಿರೋದು ಅಥವಾ ಮರೆತಂತೆ ನಟನೆ ಮಾಡುತ್ತಿರೋದು ನಮ್ಮ ದೇಶಕ್ಕೆ ಮಾರಕವೇ ಅನ್ನಬಹುದು.

– Vinod Hindu Nationalist

Tags

Related Articles

Close