ಅಂಕಣದೇಶಪ್ರಚಲಿತ

ಈ ಇಬ್ಬರ ರಾಜಕೀಯ ಭವಿಷ್ಯವನ್ನು ಸದ್ಯದಲ್ಲೇ ಛಿದ್ರಗೊಳಿಸಲಿದ್ದಾರೆ ನರೇಂದ್ರ ಮೋದಿ!!!!

ಸ್ವಾತಂತ್ರ್ಯೋತ್ತರ ಭಾರತವು ತುಂಬಾ ಹದಗೆಟ್ಟಿರುವುದು ನಾವೆಲ್ಲರೂ ಕಾಣುತ್ತಿರುವ ನಿಗೂಢ ಸತ್ಯ. ಎಲ್ಲೆಂದರಲ್ಲಿ ಬರೀ ಭ್ರಷ್ಟಾಚಾರ, ಭಯೋತ್ಪಾದನೆಗಳೇ ತುಂಬಿ ತುಳುಕುತ್ತಿರುವ ಈ ದೇಶದಲ್ಲಿ ವಂಚಕರು ಕಣ್ಣ ಮುಂದೆ ರಾಜಾರೋಷವಾಗಿ ಮೆರೆದಾಡುತ್ತಿದ್ದಾರೆ. ಹೌದು! ನಮ್ಮ ದೇಶದ ಅಧಿಕಾರವು ಯಾವಾಗ ನರೇಂದ್ರ ಮೋದಿಯವರ ಕೈ ಸೇರಿತೋ ಇಂತಹ ಅನಾಚಾರಗಳಿಗೆ ಕೊಡಲಿಯೇಟು ನೀಡಿದಂತಾಗಿದೆ. ಇಂತಹ ಪಿಡುಗುಗಳಿಗೆ ಮೋದಿಯವರ ರಾಜಕೀಯ ಅಸ್ತ್ರದಲ್ಲಿ ಅವಕಾಶವೇ ಇಲ್ಲ. ಅವನೆಷ್ಟೇ ದೊಡ್ಡ ವ್ಯಕ್ತಿಯಾದರು ಅಷ್ಡೇ. ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ನಿರ್ಮೂಲನೆಗೆ ಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ, ಇದು ಎದುರಾಳಿಯರನ್ನು ಮಣ್ಣುಮುಕ್ಕುವಂತೆ ಮಾಡಿದೆ.
ಬಹಳ ದುಃಖಕರ ಸಂಗತಿ ಎಂದರೆ ಈ ನಮ್ಮ ಪುಣ್ಯ ಭೂಮಿ ಭಾರತದಲ್ಲಿ ಕಾಂಗ್ರೆಸ್ ಹಾಗೂ ಸಿ.ಪಿ.ಎಂ ಪಕ್ಷಗಳು ಜೀವಂತವಾಗಿರುವುದು. ಬರೀ ದೇಶ ದ್ರೋಹ
ಕಾರ್ಯದಲ್ಲೇ ನಿರತರಾಗಿರುವ ಈ ಎರಡು ಪಕ್ಷಗಳು  ತಮ್ಮ ಕೋಟೆಯನ್ನು ಭದ್ರಪಡಿಸಿ ಕೊಳ್ಳುವುದನ್ನೇ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಇಂತಹ ಹುಳಗಳನ್ನು ಮೊದಲು ಕಿತ್ತು ಎಸೆಯಬೇಕು, ಇವರಿಂದ ದೇಶಕ್ಕೆ ನಷ್ಟವೇ ಹೊರತು ಲಾಭವಿಲ್ಲ.
ಹೌದು! ಮೋದಿಯವರ  ಪ್ರಚಾರವು ಭಾರತವನ್ನು ಆ ಎರಡು ರಾಜಕೀಯ  ಪಕ್ಷದ ಸಿದ್ಧಾಂತಗಳಿಂದ ರಕ್ಷಿಸುವಂತದ್ದಾಗಿದೆ. ಅದರಲ್ಲೂ ಮುಂದಿನ ಬೇಟೆ ನೇರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗು ಮಮತಾ-ಬ್ಯಾನರ್ಜಿ. ಭಾರತೀಯರಲ್ಲಿ ವಿರೋಧಾತ್ಮಕ ಭಾವನೆಯನ್ನು ರಾಜಕೀಯದಲ್ಲಿ ಬೆಳೆಸಿ ತಮ್ಮ ಬೇರನ್ನು ಗಟ್ಟಿಮಾಡಿಕೊಳ್ಳುವ ಇವರ ನೀಚ ಬುದ್ಧಿಗೆ ಅದು ಏನು ಹೇಳಬೇಕೋ ನಾ ಕಾಣೆ. ಇವರಿಬ್ಬರು ಬರೀ ವಿವಾದ ಹಾಗೂ ವಿಮರ್ಶೆಗಳಿಗೆಯೇ ಇಡೀ ಭಾರತದಲ್ಲಿ ಹೆಸರು ವಾಸಿ. ಇವರಿಬ್ಬರ ಚರಿತ್ರೆ ಹೇಳಲು ದಿನಪೂರ್ತಿ ಸಾಲದು!!
1. ಮಮತಾ-ಬ್ಯಾನರ್ಜಿ :

ಈಕೆಯನ್ನು ಶತಮೂರ್ಖರಲ್ಲಿ ಒಬ್ಬಳೆಂದರೆ ತಪ್ಪಾಗಲಾರದು. ಹೌದು! ಇವಳಿಂದಾಗಿ ದೇಶಕ್ಕಾಗಿರುವ ನಷ್ಟ ಅಷ್ಟಿಷ್ಟಲ್ಲ, ಅಕ್ಟೋಬರ್ 17, 2012 ನಲ್ಲಿ ಈಕೆ ನೀಡಿರುವ ಹೇಳಿಕೆಯು ಅವಳ ಚಿಂತನೆ ಎಷ್ಟು ಕೀಳು ಮಟ್ಟಕ್ಕೆ ಇವೆ ಎಂಬುವುದು ಸ್ಪಷ್ಟಪಡಿಸಿದೆ.

ಭಾರತೀಯ ಹೆಣ್ಣು ಮಕ್ಕಳ ವಿರುದ್ಧ ಈಕೆ ಯಾವ ರೀತಿ ಹೇಳಿಕೆ ನೀಡಿದ್ದಾಳೆ ಗೊತ್ತೆ?“ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಜಾಸ್ತಿಯಾಗಲು ಕಾರಣ, ಗಂಡು-ಹೆಣ್ಣಿನ ನಡುವೆ ಪರಿಧಿಯಿಲ್ಲದ ಆತ್ಮೀಯತೆ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ಗಂಡು-ಹೆಣ್ಣು , ತಂದೆ-ತಾಯಿಯ ಹಿಡಿತದಲ್ಲಿದ್ದರು, ಆದರೆ ಈಗ ಎಲ್ಲಾ ಬದಲಾಗಿದೆ. ‘ಇದು ಒಂದು ರೀತಿ ತೆರೆದ ಮಾರುಕಟ್ಟೆ ಜೊತೆಗಿನ ತೆರೆದ ಆಯ್ಕೆ’.” ಈ ಹೇಳಿಕೆಯಿಂದ ಈಕೆ ನ್ಯಾಷನಲ್ ಚಾನಲ್‍ಗಳಿಂದ ವಿಮರ್ಶೆಗೆ ಒಳಪಟ್ಟಿದ್ದಳು. ತದನಂತರ ಶಾರದಾ ಗ್ರೂಪ್ ನ ಹಣಕಾಸು ಹಗರಣ ಮತ್ತು ರೋಸ್ ವೈಲಿ ಹಣಕಾಸು ಹಗರಣ ಬೆಳಕಿಗೆ ಬಂದಾಗ ಈಕೆಯ ಜೊತೆಗೆ ಹಲವಾರು ಕ್ಯಾಬಿನೆಟ್
ಸದಸ್ಯರೂ ಕೂಡ ಶಾಮೀಲಾಗಿದ್ದ ರಹಸ್ಯವು ಬಟಾಬಯಲಾಯಿತು. ಈ ಘಟನೆಯಿಂದ ವಿರೋಧ ಪಕ್ಷದ ಟೀಕೆಗೆ ಗುರಿಯಾಗಿದ್ದಳು ದೀದಿ!
ಹಿಂದು-ಮುಸ್ಲಿಂರ ನಡುವೆ 2013 ರಲ್ಲಿ ನಡೆದ ಕನ್ನಿಂಗ್ ಗಲಭೆ, 2015 ರ ನದಿಯ ಗಲಭೆ, ಮತ್ತು 2016 ಕಲಿಯಚಕ್ ಗಲಭೆ, ಹಾಗೂ 2017 ಬದ್ರಿಯಾ ಗಲಭೆಯಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಇವಳು ಭಾಗಿಯಾಗಿದ್ದರ ವಿರುದ್ಧ ವಿರೋಧ ಪಕ್ಷಗಳ ಹಾಗೂ ರಾಜಕಾರಣಿಗಳ ದೃಷ್ಟಿಯಲ್ಲಿ ಆರೋಪಿಯಾದಳು. ಮುಸ್ಲಿಂ ಧರ್ಮದವರಿಗೆ ಸಹಾಯಮಾಡಿ, ಕಾನೂನಿನ ಎಲ್ಲಾ ನೀತಿ-ನಿಯಮಗಳನ್ನು ಉಲ್ಲಂಘನೆ ಮಾಡಿದಳು. ಸಮ್ಯುಲ್ ಎಂದ ಓರ್ವ ಪತ್ರಕರ್ತ ನಾರದ ಸ್ಟ್ರಿಂಗ್ಆಪರೇಷನ್ ನನ್ನು 2011 ನಲ್ಲಿ ಕೈಗೊಂಡು ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಬಗ್ಗೆ ಚುರುಕು ಕಾರ್ಯಾಚರಣೆ ನಡೆಸಿದ ಈತ 2016ರ ಚುನಾವಣೆಯ ಮುನ್ನವೇ ವರದಿ ಪ್ರಕಟಿಸಿದ್ದರೂ ಕೂಡ, ದೀದೀ ಇದಾವುದಕ್ಕೂ ತಲೆಕೆಡಿಸಿಕೊಳ್ಳಲೂ ಇಲ್ಲ! ಯಾವುದೇ ಕ್ರಮವನ್ನೂ ತೆಗೆದುಕೊಳ್ಳದ ಈಕೆ ಬಂಗಾಲದ ಅಧಃಪತನಕ್ಕೆ ಕಾರಣವಾದಳಷ್ಟೇ!
ಅಕ್ಟೋಬರ್ 2016 ನಲ್ಲಿ ಪಶ್ಚಿಮ ಬಂಗಾಲ ಸರ್ಕಾರವು 4 ಗಂಟೆಯ ನಂತರ ದುರ್ಗಾ ಪೂಜೆಯನ್ನು ಆಚರಿಸಬಾರದೆಂದು ತಡೆಯಾಜ್ಞೆ ಹೊರಡಿಸಿತು. ಇದಕ್ಕೆ ಪ್ರಮುಖ ಕಾರಣ ದುರ್ಗಾ ಪೂಜೆ, ಅಕ್ಟೋಬರ್ 12 ನೇ ತಾರೀಖು ಇದ್ದು ಮಾರನೇ ದಿವಸ ಮುಸ್ಲಿಂ ಧರ್ಮದ ಹಬ್ಬವಾದ ಮೊಹರಂ ಇದ್ದುದರಿಂದ 4 ಗಂಟೆಯ ನಂತರ ದುರ್ಗಾಪೂಜೆ ನೆರವೇರಿಸಲು ಅವಕಾಶ ನೀಡಲಿಲ.್ಲ ಈಕೆಯ ಸರ್ಕಾರ ಹೇಳುವ ಪ್ರಕಾರ ದುರ್ಗಾಪೂಜೆ ನಡೆಸುವುದರಿಂದ ಮುಸ್ಲಿಂ-ಧರ್ಮೀಯರ ಭಾವನೆಗೆ ಧಕ್ಕೆವುಂಟಾಗುವುದೆಂದಿತ್ತು. ಇದು ಪಶ್ಚಿಮ ಬಂಗಾಲದಲ್ಲಿ ಮುಸ್ಲಿಂರ ಜನಸಂಖ್ಯೆ ಹೆಚ್ಚಿದೆ ಎಂಬುವುದನ್ನು ಅರಿತು ಮಾಡಿದ ರಾಜಕೀಯ ಸಂಚು. ಆದರೆ, ಕಲ್ಕತ್ತಾ ಹೈಕೋರ್ಟ್ ಇದನ್ನು ಅನುಚಿತಗೊಳಿಸಿತು.

ಇದಲ್ಲದೆ ಜನವರಿ 2017, ಪಶ್ಚಿಮ ಬಂಗಾಲದ ಪದವಿ ಶಿಕ್ಷಣ ಸಂಸ್ಥೆಯು Ramdhonu(Rams Bow)ಎಂಬ ಪದವನ್ನು ಪುಸ್ತಕಗಳಲ್ಲಿ rainbow ಎಂಬುದಾಗಿ ಬದಲಾಯಿಸಿದರು. ಈ ಬದಲಾವಣೆಯು ಇವಳ ಆಡಳಿತ ಕಾಲದಲ್ಲೆ ನಡೆದರು ಕೂಡ ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಇದು ಬಂಗಾಲದ ಅಪಾರ ಮುಸ್ಲಿಂರನ್ನು ಬಲೆಗೆ ಬೀಳಿಸುವ ತಂತ್ರವಷ್ಟೇ!

 

2. ರಾಹುಲ್‍ಗಾಂಧಿ :

ಗಾಂಧೀ  ವಂಶಸ್ಥರು ಇಂತಹ ಭಯೋತ್ಪಾದನೆ, ಭ್ರಷ್ಟಾಚಾರದಂತಹ ಹಗರಣಗಳಿಗೆ ಹೆಸರುವಾಸಿ. ಈಗಾಗಲೇ ಬಹಳಷ್ಟು ವಾದ-ವಿವಾದಗಳು ಹಾಗೂ ಸೂಚನೆಗಳು ಗಾಂಧೀ ಕುಟುಂಬವು ಸ್ವಿಜ್ ಬ್ಯಾಂಕ್‍ನಲ್ಲಿ ಖಾತೆಯನ್ನು ಹೊಂದಿದ್ದಾರೆ, ಅಪಾರ ಪ್ರಮಾಣದ ಕಪ್ಪುಹಣ ರಾಹುಲ್ ನ ಹೆಸರಲ್ಲಿ ಇದೆ ಎಂಬುವುದನ್ನು ಸಾಬೀತುಪಡಿಸಿವೆ. ಆದರೆ, ಇದಾವುದನ್ನು ಕಾಂಗ್ರೆಸ್ ಒಪ್ಪಲು ತಯಾರಿಲ್ಲ. ರಾಹುಲ್ ಗಾಂಧಿ ಹೆಸರಲ್ಲಿ ಸರಿ ಸುಮಾರು 2.5 ಬಿಲಿಯನ್ ಅಮೇರಿಕನ್ ಡಾಲರ್ ಇದ್ದು ಇದರ ಅಧಿಕಾರವು ಇವನ ಜನ್ಮದಾತೆ ಸೋನಿಯ ಗಾಂಧಿ ಹಾಗೂ ಆಕೆಯ ತಾಯಿ ಮಿಸ್ ಪವೋಲಾ ಮೈನೋ( Miss paola Maino) ರವರ ಹೆಸರಿನಲ್ಲಿದೆ. ಇದೆಲ್ಲಾ ಅದೆಷ್ಟೋ ಪ್ರಮಾಣದಲ್ಲಿ ತೆರಿಗೆ ವಂಚಿಸಿ ಕೂಡಿ ಹಾಕಿರುವ ಭ್ರಷ್ಟ ಹಣ. ಸ್ವಿಜ್‍ಬ್ಯಾಂಕ್ ನ ನಿಯತಕಾಲಿಕೆಯಲ್ಲಿ ಇವರು ಖಾತೆ ಹೊಂದಿರುವುದರ ಬಗ್ಗೆ ಉಲ್ಲೇಖ ಮಾಡಲಾಗಿದೆ.
ರಷ್ಯಾದ ಬರಹಗಾರನಾದ Yevgenia Albats ತನ್ನ  ದಿ ಸ್ಟೇಟ್ ವಿದಿನ್ ಎ ಸ್ಟೇಟ್ (the state with in the state ) ನಿಯತಕಾಲಿಕೆಯಲ್ಲಿ ಈ
ಕುಟುಂಬಸ್ಥರು ಸ್ವಿಸ್ ಖಾತೆ  ಹೊಂದಿರುವುದರ ಬಗ್ಗೆ ಮಾಹಿತಿ ನೀಡಿದ್ದನು. ಏಉಃ ಕಡತದಲ್ಲೂ ಇದು ದಾಖಲಾಗಿದೆ. ರಾಹುಲ್ ಓರ್ವ ವಿದ್ಯಾವಂತನಾಗಿದ್ದರು ಕೂಡ ಆತನ ತಲೆಯಲ್ಲಿ ಏನೇನು ಇಲ್ಲ. ತಾಯಿಯ ಕೈಗೊಂಬೆಯಂತೆ ವರ್ತಿಸುವ ಈತನಿಗೆ, ರಾಜಕೀಯದ ಇತಿಹಾಸದ ಬಗ್ಗೆ ಇಂತಿಷ್ಟು ತಿಳಿದಿಲ್ಲ. ರಾಜನಾಗಬೇಕಾದರೆ ಕೆಲವು ಅರ್ಹತೆಗಳಿರಬೇಕು. ಆದರೆ ಈತನಿಗೆ ಇದಾವುದರ ಬಗ್ಗೆಯು ಅರಿವಿಲ್ಲ. ತನ್ನ ತಾಯಿ ಹೇಳಿದಂತೆ ಕುಣಿಯುವ ಈತನಿಗೆ ಸ್ವಂತ ಬುದ್ಧಿಯಿಲ್ಲ. ದೇಶದ ಬಗ್ಗೆ ಅಭಿಮಾನವಿಲ್ಲದವರು ದೇಶ ಆಳಲು ಸಿದ್ಧರಾಗಿದ್ದಾರೆ. ಆದರೆ, ಇವರ ದುರಾಸೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎಂದಿಗೂ ಅವಕಾಶ ಕಲ್ಪಿಸೊದಿಲ್ಲ. ಕಾಂಗ್ರೆಸ್ ಹಾಗೂ ಸಿ.ಪಿ.ಎಂ ಪಕ್ಷ ಸೇರಿ ಈಗಾಗಲೇ ಹಲವಾರು ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇವರ ಈ ದುಷ್ಕ್ರತ್ಯಗಳಿಗೆ ನಾಂದಿ ಹಾಡಲು ನರೇಂದ್ರ ಮೋದಿಯವರು ಸಿದ್ಧರಾಗಿದ್ದು, ಕಠಿಣ ಶ್ರಮ ಪಡುತ್ತಿದ್ದಾರೆ. ಆದಷ್ಟು ಬೇಗ ಈ ಭ್ರಷ್ಟಕುಲಗಳ ಹಾಗು ಕಾಲಧನಿಕರ ಆಡಳಿತ ಭಾರತದಲ್ಲಿ ಕೊನೆಯಾಗಲಿ! ಭಾರತಮಾತೆ ನೆಮ್ಮದಿಯಿಂದ ಉಸಿರಾಡಲಿ ಎಂಬುವುದು ನನ್ನ ಆಶಯ.

-ಕಾವ್ಯ ಅಂಚನ್

Tags

Related Articles

Close