ಪ್ರಚಲಿತ

ಈ ಖ್ಯಾತ ಮುಸ್ಲಿಂ ಕ್ರಿಕೆಟ್ ಆಟಗಾರ ‘ಮೋದಿ ಮುಸ್ಲಿಂ ವಿರೋಧಿ’ ಎಂದು ಬೊಬ್ಬೆ ಹೊಡೆಯುವವರ ಬಾಯಿ ಮುಚ್ಚಿಸಿದ್ದು ಹೇಗೆ ಗೊತ್ತೇ?

ನರೇಂದ್ರ ಮೋದಿಯವರು ತಮ್ಮ ಕಾರ್ಯ ವೈಖರಿಯಿಂದಲೇ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಒಬ್ಬ ಯೂತ್ ಐಕಾನ್ ಆಗಿ ಹೊರಹೊಮ್ಮಿರುವ ವ್ಯಕ್ತಿಯಾಗಿರೋದು ತಿಳಿದೇ ಇದೆ! ಹಾಗಾಗಿ ಮೋದಿಯವರ ಅಭಿಮಾನಿ ಬಳಗವೇ ಬಹು ದೊಡ್ಡದು!! ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಮೋದಿ ಅಭಿಮಾನಿಗಳ ಸಂಖ್ಯೆಗೇನು ಕಡಿಮೆ ಇಲ್ಲ!! ಆದರೆ ಭಾರತದ ಈ ಆಟಗಾರ ಮೋದಿಯ ಬಹು ದೊಡ್ಡ ಅಭಿಮಾನಿಯಾಗಿ ಹೊರ ಹೊಮ್ಮಿದ್ದಲ್ಲದೇ, ‘ಮೋದಿ ಮುಸ್ಲಿಂ ವಿರೋಧಿ’ ಎಂದು ಬೊಬ್ಬೆ ಬಿಡುವವರ ಬಾಯಿ ಮುಚ್ಚಿಸಿದ್ದು ಮಾತ್ರ ಅಕ್ಷರಶಃ ನಿಜ!!

ಹೌದು… ಈ ದೇಶದ ಪ್ರಧಾನಿಯಾಗಿ ಭಾರೀ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರಿದಾಗ ಹೇಳಿದ್ದ ಒಂದು ಮಾತನ್ನು ಸಾಮಾನ್ಯವಾಗಿ ಯಾರು ಮರೆಯುವಂತಿಲ್ಲ. ಅವರು ಹೇಳಿದಿಷ್ಟೇ!! ನಾನು ಈ ದೇಶದ ಪ್ರಧಾನಮಂತ್ರಿಯಲ್ಲ, ನಿಮ್ಮ ಪ್ರಧಾನ ಸೇವಕ!! ಎಂದು. ಇಂತಹ ಪ್ರಾಮಾಣಿಕ ರಾಜಕಾರಣಿಗೆ ಮನಸೋತಿರುವ ಅಭಿಮಾನಿಗಳ ಸಂಖ್ಯೆಯೇ ಅಪಾರವಾದುದು!! ಆದರೆ ‘ಮೋದಿ ಮುಸ್ಲಿಂ ವಿರೋಧಿ’ ಎಂದು ಹೇಳುವ ವಿಚಾರವಾದಿಗಳಿಗೆ ಈ ಖ್ಯಾತ ಮುಸಲ್ಮಾನ ಆಟಗಾರ ಬಹುದೊಡ್ಡ ಪ್ಯಾನ್!! ಹಾಗಾದರೆ ಆತ ಯಾರು ಗೊತ್ತೇ??

ಆ ಮೋದಿಜಿಯ ಅಭಿಮಾನಿ ಮತ್ತಾರೂ ಅಲ್ಲ. 2004ರ ಐಸಿಸಿ ವರ್ಷದ ಉದಯೋನ್ಮುಕ ಆಟಗಾರ ಎಂದು ಪ್ರಖ್ಯಾತಿ ಪಡೆದಿರುವ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ರೌಂಡರ್ ಇರ್ಫಾನ್ ಪಠಾಣ್!! ಖ್ಯಾತ ಭಾರತೀಯ ಕ್ರಿಕೆಟಿಗರಾದ ಇವರು 2003ರಿಂದ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರಲ್ಲದೇ, ವೃತ್ತಿಜೀವನದ ಆರಂಭದಲ್ಲಿ ಎಡಗೈ ಮಧ್ಯಮ ವೇಗದ ಸ್ವಿಂಗ್ ಬೌಲರ್ ಆಗಿದ್ದು (ಪಾಕಿಸ್ತಾನದ ಆಟಗಾರ ವಾಸೀಮ್ ಅಕ್ರಮ್ ಗೆ ಹೋಲಿಸಲ್ಪಟ್ಟು), ಪಠಾಣ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಿಕೊಂಡು ಬೌಲಿಂಗ್ ಆಲ್‍ರೌಂಡರ್ ಆಗಿದ್ದಾರೆ. ಆರಂಭಿಕ ಬ್ಯಾಟ್ಸ್‍ಮನ್ ಆಗಿ ಸಹ ಆಡಿರುವ ಇವರನ್ನು ಕ್ರಿಕೆಟ್ ವಿಮರ್ಶಕರು ಇವರನ್ನು ಭಾರತದ ಮಾಜಿ ಆಲ್‍ರೌಂಡ್ ಆಟಗಾರ ಕಪಿಲ್ ದೇವ್‍ರಿಗೆ ಹೋಲಿಸಲಾಗಿದೆ.

ಮೂಲತಃ ಗುಜರಾತ್ ನವರಾಗಿರುವ ಇರ್ಫಾನ್ ಪಠಾಣ್ ಮೋದಿಯವರ ಅಭಿಮಾನಿಯಾಗಿದ್ದು, ಪ್ರಧಾನಿಯಾದ ನಂತರದಲ್ಲಿ ಹಲವು ಬಾರಿ ಮೋದಿಯನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೇ ನರೇಂದ್ರ ಮೋದಿಯವರು ಸಿಎಂ ಆಗಿದ್ದಾಗ ಗುಜರಾತ್ ಉದ್ದಕ್ಕೂ ಸಂಚರಿಸಿ ಮೋದಿಯವರಿಗಾಗಿ ಬಿಜೆಪಿ ಪರ ಕ್ಯಾಂಪೇನ್ ಕೂಡಾ ಮಾಡುತ್ತಿದ್ದಾರೆ!! ಇರ್ಫಾನ್ ಪಠಾಣ್ ಮಾತ್ರವಲ್ಲದೇ ಟೀಮ್ ಇಂಡಿಯಾದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಸಹ ಆಟಗಾರರು ನರೇಂದ್ರಮೋದಿಯ ಕಾರ್ಯವೈಖರಿ, ನೇರನಡೆ, ವಾಕ್ಚಾತುರ್ಯ, ದೃಢನಿರ್ದಾರ, ದೇಶಪ್ರೇಮ, ಮತ್ತು ಅವರ ಯೋಜನೆಯ ಜನಪ್ರಿಯತೆ ಕಂಡು ಮನಸೋತಿದ್ದಾರೆ.

ಪ್ರಸ್ತುತ ಟೀಮ್ ಇಂಡಿಯಾದ ನಾಯಕ ವಿರಾಟ್ ಮೋದಿಯನ್ನು ಹೊರತುಪಡಿಸಿ ಅತ್ಯಂತ ಹೆಚ್ಚು ಟ್ವಿಟ್ಟರ್ ಮತ್ತು ಫೇಸ್ಬುಕ್ ಫಾಲೋವರ್ಸ್ ಇರುವ ವ್ಯಕ್ತಿ. ತನ್ನ ಆಟದ ಮೂಲಕ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿದವರು ಮೋದಿಯ ದೊಡ್ಡ ಅಭಿಮಾನಿ ಅಂದ್ರೆ ನಂಬ್ತೀರಾ? ಮೋದಿಯ ಅಪನಗದಿಕರಣದ ಬಗ್ಗೆ ಮಾದ್ಯಮವೊಂದರ ಸಂದರ್ಶನದಲ್ಲಿ ಇತಿಹಾಸದಲ್ಲಿಯೇ ನಾನು ನೋಡಿರದ ಒಂದು ದೃಢನಿರ್ದಾರ ಇದು, ಭಾರತದಿಂದ ಭ್ರಷ್ಟಾಚಾರ ತೊಲಗಿಸಲು ಪ್ರಧಾನಮಂತ್ರಿ ಈ ಮಾರ್ಗ ಸೂಕ್ತವಾಗಿದೆ, ನಾನು ಅವರನ್ನು ಅಭಿನಂದಿಸುತ್ತೇನೆ? ಎಂದು ಹೇಳಿರುವುದು ನಮಗೆ ಗೊತ್ತೇ ಇದೆ!!

ಇದಲ್ಲದೆ ಇತ್ತೀಚಿಗೆ ನಾಗ್ಪುರದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯಾಟದ ಅಭ್ಯಾಸದ ವೇಳೆ ವಿರಾಟ್, ರವಿಶಾಸ್ತ್ರಿ “ಸ್ವಚ್ಛಭಾರತದ” ಕುರಿತು ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದರು. ಅದರಲ್ಲಿ ಪ್ರಧಾನ ಮಂತ್ರಿ ಮೋದಿಜಿಯ ಸ್ವಚ್ಛಭಾರತ ಯೋಜನೆಯೊಂದಿಗೆ ಕೈಜೋಡಿಸುವಂತೆ ಜನರಲ್ಲಿ ಮನವಿ ಮಾಡಿದ್ದರು!

ಪ್ರಧಾನಮಂತ್ರಿ ಟ್ವಿಟ್ಟರ್ ಮೂಲಕ ವಿರಾಟ್ ಕೊಯ್ಲಿಯ ಈ ನಡೆಯನ್ನು ಅಭಿನಂದಿಸಿದ್ದರು. ಅದಲ್ಲದೆ ವಿರಾಟ್ ಕೊಯ್ಲಿಯ ಸಹೋದರ ವಿಕಾಸ್ ಕೊಯ್ಲಿ ಕೂಡಾ ಹಲವಾರು ಕಾರ್ಯಕ್ರಮವೊಂದರಲ್ಲಿ ಮೋದಿಯ ಕಾರ್ಯವೈಖರಿಯನ್ನು ಹಾಡಿಕೊಂಡಾಡಿದ್ದಾರೆ. ತಂಡದ ಇನ್ನೋರ್ವ ಯುವ ಆಟಗಾರ ಇತ್ತೀಚಿಗೆ ಸಿಕ್ಸ್ ಗೆ ಹೆಸರುವಾಸಿಯಾದ ಹಾರ್ದಿಕ್ ಪಾಂಡ್ಯ ಕೂಡ ಮೋದಿಯ ದೊಡ್ಡ ಅಭಿಮಾನಿ. ಮೋದಿಯ ಅಪನಗದಿಕರಣ ಕುರಿತು ಟ್ವಿಟ್ ಮಾಡುತ್ತಾ “ಎಂಥಾ ಒಂದು ಮಾಸ್ಟರ್ ಸ್ಟ್ರೋಕ್ ಮೋದಿ ಜಿ, ಭ್ರಷ್ಟಾಚಾರದ ವಿರುದ್ಧ ಮೋದಿಯೊಂದಿಗೆ ಕೈ ಜೋಡಿಸಿ” ಎಂದು ಜನರಲ್ಲಿ ಮನವಿ ಮಾಡಿದ್ದರು.

ಆರಂಭಿಕ ಆಟಗಾರ ಶಿಖರ್ ಧವನ್ ಕೂಡಾ ಮೋದಿಗೆ ಮನಸೋತಿದ್ದು, ಹಲವಾರು ವೇದಿಕೆಗಳಲ್ಲಿ ಮೋದಿಯನ್ನು ಹೊಗಳಿದ ಅವರು ಮೋದಿಯ “ಭೇಟಿ ಬಚಾವೋ ಭೇಟಿ ಪಡವೋ” ಯೋಜನೆಯೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು, ಮೋದಿಯ “ಸೆಲ್ಫಿ ವಿತ್ ಬೇಟಿ” ಕಾರ್ಯಕ್ರಮಕ್ಕೆ ತನ್ನ ಮಗಳು ಹಾಗೂ ತನ್ನ ಫೆÇೀಟೋ ಆಪಲೋಡ್ ಮಾಡಿದ್ದಾರೆ. ಅಲ್ಲದೆ ಈ ಯೋಜನೆಯೊಂದಿಗೆ ಕೈ ಜೋಡಿಸುವಂತೆ ಮನವಿಯೂ ಮಾಡಿದ್ದಾರೆ.

ಇನ್ನು ಮಿಂಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುವ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಮೋದಿ ಬಹುದೊಡ್ಡ ಅಭಿಮಾನಿ!! ರವೀಂದ್ರ ಜಡೇಜಾ ದಿನಕ್ಕೊಂದು ಭಾರಿ ಆದ್ರೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಮೋದಿಯನ್ನು ಹೊಗಳಿ ಟ್ವಿಟ್ ಮಾಡಿತ್ತಾರೆ. ಮೋದಿಯ ಪ್ರತಿಯೊಂದು ನಡೆಯನ್ನೂ ಕೂಡ ಜಡೇಜಾ ಸಮರ್ಥಿಸುತ್ತಾರೆ. ಇತ್ತೀಚೆಗೆ ನರೇಂದ್ರ ಮೋದಿ ನೇದರ್ ಲ್ಯಾಂಡ್ ಗೆ ಭೇಟಿಕೊಟ್ಟಾಗ ಅಲ್ಲಿನ ಪ್ರಧಾನಮಂತ್ರಿ ಮೋದಿಗೆ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.

ನರೇಂದ್ರಮೋದಿ ಈ ಸೈಕಲ್ ಜೊತೆಗಿನ ಫೆÇೀಟೋವನ್ನು ಸಾಮಾಜಿಕಜಾಲತಾಣದಲ್ಲಿ ಹಾಕಿ “ಸೈಕಲ್ ಉಪಯೋಗಿಸಿ ಆರೋಗ್ಯ ಮತ್ತು ಪರಿಸರ ಉಳಿಸಿಕೊಳ್ಳಿ” ಎಂದು ಟ್ವಿಟ್ ಮಾಡಿದ್ದರು. ಇದನ್ನು ಅನುಸರಿಸುತ್ತಾ ಜಡೇಜಾ ವೆಸ್ಟಿಂಡಿಸ್ ಪ್ರವಾಸದ ವೇಳೆ ಸೈಕಲ್ನಲ್ಲಿ ಅಭ್ಯಾಸ ಮಾಡಿದ್ದು. ಆ ಫೆÇೀಟೋವನ್ನು ಟ್ವಿಟ್ಟರ್ ಲ್ಲಿ ಹಾಕಿ “ನಾನು ಪ್ರಧಾನಮಂತ್ರಿಯಿಂದ ಸ್ಫೂರ್ತಿ ಪಡೆದು ಸೈಕಲ್ ಓಡಿಸುತ್ತಿದ್ದೇನೆ” ಎಂದು ಧನ್ಯವಾದ ಹೇಳುತ್ತಾ ಟ್ವಿಟ್ ಮಾಡಿದ್ದಾರೆ.

ಖ್ಯಾತ ಬ್ಯಾಟ್ಸ್ ಮ್ಯಾನ್ 6 ಬಾಲ್ ಗೆ 6 ಸಿಕ್ಸರ್ ಸಿಡಿಸಿದ ಜನರ ಮನಗೆದ್ದವರು ಯುವರಜ್ ಸಿಂಗ್. ಆದ್ರೆ ಆ ಯುವರಾಜನ ಮನವನ್ನೇ ಗೆದ್ದವರು ಮೋದಿ. ಇತ್ತೀಚೆಗೆ ಕಳೆದ ತಿಂಗಳು ಪ್ರಧಾನಿ ಮೋದಿ ಯುವರಾಜ್ ಸಿಂಗ್ ಗೆ ಪತ್ರವೋನದನ್ನು ಬರೆದಿದ್ದರು. ಪತ್ರದಲ್ಲಿ ಯುವರಾಜ್ ಮಾಡಿದ “ಯು ವಿ ಕ್ಯಾನ್” ಎಂಬ ಸಂಘಟನೆಯ ಸಾಮಾಜಿಕ ಚಟುವಟಿಕೆಯ ಬಗ್ಗೆ ಮೆಚ್ಚುಗೆಯ ಮಾತು ಇತ್ತು. ಈ ಪತ್ರದ ಪ್ರತಿಯನ್ನು ಯುವರಾಜ್ ಟ್ವಿಟ್ಟರ್ ನಲ್ಲಿ ಪೆÇೀಸ್ಟ್ ಮಾಡಿ ಮೋದಿಜಿಗೆ ಧನ್ಯವಾದ ಹೇಳುತ್ತಾ “ಇಷ್ಟು ಕಾರ್ಯಪ್ರವೃತ್ತ ಆಗಿರುವ ಪ್ರಧಾನಿಯನ್ನು ಇದೆ ಮೊದಲಬಾರಿಗೆ ನೋಡುತ್ತಿದ್ದೇನೆ,ನಾವು ನಿಮ್ಮೊಂದಿಗಿದ್ದೇವೆ” ಎಂದು ಮೋದಿಯನ್ನು ಪ್ರಶಂಸಿದ್ದಾರೆ.

ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ  ಸಚಿನ್ ಕೂಡ ಮೋದಿಯ ದೊಡ್ಡ ಅಭಿಮಾನಿ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೋದಿಯ ವಿರುದ್ಧ ವಾರಣಾಸಿಯಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಸಚಿನ್ ಅವರನ್ನು ಕಣಕ್ಕಿಳಿಯುವಂತೆ ಕೇಳಿಕೊಂಡಾಗ ಸಚಿನ್ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅಲ್ಲದೆ ಮೋದಿಯ ಸ್ವಚ್ಛಭಾರತ, ಭೇಟಿಬಚಾವೋ ಭೇಟಿ ಪಡವೋ, ಅಪನಗದಿಕರಣ, ಜಿ.ಎಸ್.ಟಿ, ಸರ್ಜಿಕಲ್ ಸ್ಟೈಕ್ ಮುಂತಾದ ಪ್ರಮುಖ ಯೋಜನೆಗಳನ್ನು ಸಚಿನ್ ಸಮರ್ಥಿಸಿದ್ದಾರೆ. ಅಲ್ಲದೆ ಈಗಾಗಲೇ 4 ಭಾರಿ ಪ್ರಧಾನ ಮಂತ್ರಿಯನ್ನು ಭೇಟಿಯಾಗಿದ್ದಾರೆ.

ಸುರೇಶ್ ರೈನಾ ಕೂಡ ಮೋದಿಯ ಸ್ವಚ್ಛಭಾರತ, ಭೇಟಿಬಚಾವೋ ಭೇಟಿ ಪಡಾವೋ, ರನ್ ಫೆÇೀರ್ ಯುನಿಟಿ ಮುಂತಾದ ಕಾರ್ಯಕ್ರಮದಲ್ಲಿ ತನ್ನನ್ನು ಜೋಡಿಸಿಕೊಂಡಿದ್ದಾರೆ. ಅಲ್ಲದೆ ನರೇಂದ್ರ ಮೋದಿಯನ್ನು “ಚಿನ್ನದ ಮನಸಿರುವ ವ್ಯಕ್ತಿ” ಎಂದು ಹೊಗಳಿದ್ದಾರೆ. ಇನ್ನು ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಬಿಜೆಪಿಯ ಪ್ರತಿನಿಧಿಗಳು ಮಾತಾಡುವುದಕ್ಕಿಂತ ಹೆಚ್ಚು ಬಿಜೆಪಿಯ ಬಗ್ಗೆ ಗಂಭೀರ್, ಸೆಹವಾಗ್ ಮಾತಾಡುತ್ತಾರೆ.

ಈ ಎಲ್ಲ ಮಾಹಿತಿಯನ್ನು ಗಮನಿಸಿದಾಗ ಸ್ವಾತಂತ್ರ್ಯ ಭಾರತ ಕಂಡ ಅದ್ಭುತ ನಾಯಕ ಮೋದಿ ಎಂಬುದರಲ್ಲಿ ಎರಡು ಮಾತಿಲ್ಲ. ಮೋದಿ ತನ್ನ ಕಠಿಣ ಪರಿಶ್ರಮದ ಮೂಲಕ ಭಾರತೀಯರನ್ನಲ್ಲದೇ ಇಡೀ ವಿಶ್ವದ ಮನಗೆದ್ದಂತಹ ಒಬ್ಬ ಅದ್ಭುತ ರಾಜಕಾರಣಿಯಾಗಿ ಹೊರಹೊಮ್ಮಿದ್ದಲ್ಲದೇ ಭ್ರಷ್ಟಚಾರ ರಹಿತ ಸರ್ಕಾರ ನಡೆಸಿದ ಹಿರಿಮೆ ಇವರದ್ದಾಗಿದೆ!!

– ಅಲೋಖಾ

Tags

Related Articles

Close