ಅಂಕಣಇತಿಹಾಸ

ಈ ದೇವಾಲಯ ನಿರ್ಮಾಣಕ್ಕೆ ತೆಗೆದುಕೊಂಡಿದ್ದು 120 ವರ್ಷ! ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರಿಗೆ ಇತ್ತಾ ಗಗನಯಾನದ ಕಲ್ಪನೆ!

ಈ ದೇವಾಲಯವನ್ನು ನೋಡಿದರೆ 9 ಶತಮಾನಗಳ ಹಿಂದೆ ಭಾರತದಲ್ಲಿ ಅತ್ಯಾಧುನಿಕ ಉಪಕರಣಗಳು ಇತ್ತು ಎಂಬುವುದು ಅರ್ಥವಾಗುತ್ತೆ! ಇಂದು ಇರುವ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಕೂಡ ಇಂತಹ ಅತ್ಯದ್ಭುತವಾದ ದೇವಾಲಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಸಂಶೋಧಕರೇ ಹೇಳುತ್ತಿದ್ದಾರೆ. ಹಾಗಾದರೆ ಇಂತಹ ಅದ್ಭುತ ಹಳೆಬೀಡು ದೇವಾಲಯವನ್ನು ಪೂರ್ವಜರು ಸೃಷ್ಟಿಸಿದ್ದಾರೂ ಹೇಗೆ?! ಹಳೆಬೀಡಿನ ಹೊರಬಿತ್ತಿಯಲ್ಲೇ ಒಟ್ಟು 15, ಸಾವಿರ ಕೆತ್ತನೆಗಿವೆ ಎಂದರೆ ಅಬ್ಬಾ! ಅಚ್ಚರಿಯಾಗೋದು ಸಹಜ… ಹಳೆಬೀಡನ್ನು ಮೊದಲು ದ್ವಾರಸಮುದ್ರ ಅಂತಾ ಕರೆಯುತ್ತಿದ್ದು ಇದು ಹೊಯ್ಸಳರ ರಾಜಧಾನಿಯಾಗಿತ್ತು ಕಾಲಕ್ರಮೇಣ ಇದನ್ನು ಹಳೆಬೀಡು ಎಂದು ಕರೆಯಲು ಆರಂಭಿಸಿದರು.

ಈ ದೇವಾಲಯ ನಿರ್ಮಾಣಕ್ಕೆ 120 ವರ್ಷಗಳೇ ಬೇಕಾಯಿತು!

ಈ ದೇವಾಲಯ ನಿರ್ಮಾಣವಾಗಿದ್ದು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಹಾಗೂ ಆತನ ಮಗ ನರಸಿಂಹ ಬಲ್ಲಾಳ ನಿಂದ. ಈ ಭವ್ಯ ದೇವಾಲಯದ ನಿರ್ಮಾಣಕ್ಕೆ 120 ವರ್ಷಗಳನ್ನೇ ತೆಗೆದುಕೊಂಡಿದೆ ಎಂಬುವುದು ಇತಿಹಾಸ. 1121ರಲ್ಲಿ ನಿರ್ಮಾಣವಾದ ದೇವಾಲಯ ಒಂದು ಮಟ್ಟಕ್ಕೆ ನಿಲ್ಲಲು 40 ವರ್ಷ ಬೇಕಾದರೆ ದೇವಾಲಯದ ಕಲಾಕುಸುರೆ ನಿರ್ಮಾಣಕ್ಕೆ ಮತ್ತೆ 80 ವರ್ಷಗಳೇ ಬೇಕಾಯಿತು ಎಂದರೆ ಅದರ ಕೆತ್ತನೆ ಅಬ್ಬಾ ಅದನ್ನು ವರ್ಣಿಸಲೂ ಅಸಾಧ್ಯ! ಹೊಯ್ಸಳದ ನಾಲ್ಕು ತಲೆಮಾರಿನ ರಾಜರುಗಳೂ ಈ ದೇವಾಲಯ ನಿರ್ಮಾಣಕ್ಕೆ ತೊಡಗಿದ್ದರು ಎಂದರ ಜಸ್ಟ್ ಊಹೆ ಮಾಡಿ…. ದೇವಾಲಯ ನಿರ್ಮಾಣಕ್ಕೆ 120 ಗಳಾದರೆ ಇಲ್ಲಿ ಎಷ್ಟು ಶಿಲ್ಪಿಗಳು ಶ್ರಮಿಸಿರಬಹುದು ಎಂದು ಊಹೆ ಬರುವುದು ಖಂಡಿತ! 20ಸಾವಿರ ಕಲಾ ಚಾತುರ್ಯರು ಈ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇವರ ಕಲಾಚಾತುರ್ಯತೆಯಿಂದನೇ ಇಂತಹ ಭವ್ಯ ಕೆತ್ತನೆಗಳು ನಿರ್ಮಾಣವಾಗಿರುವುದು. ಅಂದು ಕೂಡಾ ಉತ್ತಮ ಉಪಕರಣಗಳನ್ನು ಬಳಸಿಯೇ ಇದನ್ನು ಕೆತ್ತಿರಬಹುದು.

ಅದ್ಭುತ ಕೆತ್ತನೆಗೆ ಇತಿಹಾಸಕಾರರೇ ಮನಸೋತಿದ್ದಾರೆ!

ಮತ್ತೊಂದು ಅದ್ಭುತವೆಂದರೆ ಹೊಯ್ಸಳೇಶ್ವರ ದೇವಾಲಯದ ಗರ್ಭಗುಡಿಯ 2 ಕಲ್ಲಿನಲ್ಲಿ ಕೆತ್ತಿರುವ ಎರಡು ವಿಗ್ರಹಗಳಿಗೆ ನೀವು ಕಣ್ಣು ಬಾಯಿ ಕಿವಿಗಳಿಗೆ ಎಲ್ಲಾದರೂ ಒಂದುಕಡೆಯಿಂದ ಮತ್ತೊಂಡೆಗೆ ಒಂದು ಸಣ್ಣ ಕಡ್ಡಿಯನ್ನು ಪೋಣಿಸಬಹುದು. ಇಂತಹ ಅದ್ಭುತ ಕೆತ್ತನೆಗಳನ್ನು ಅಂದಿನ ಕಾಲದಲ್ಲಿ ಮಾಡಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತೆ ಅಲ್ವಾ?! ಇಂದಿನ ಕಾಲದಲ್ಲಿ ಯಾವ ಟೆಕ್ನಿಕ್‍ಗಳನ್ನು ಉಪಯೋಗಿಸಿಕೊಂಡು ಕೆತ್ತನೆಗಳನ್ನು ಮಾಡಬಹುದು. ಆದರೆ ಅಂದು ಈ ರೀತಿಯ ಕೆತ್ತನೆಗಳು ಅಂದರೆ ಆಶ್ಚರ್ಯವಾಗುವುದು ಸಹಜ!

ಭಾರತಕ್ಕಿದ್ದ ಅಂತರಾಷ್ಟ್ರೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ ಈ ಕೆತ್ತನೆ!

ಹಳೆಬೀಡಿನ ದೇವಾಲಯದ ಹೊರವಲಯದಲ್ಲಿ ಸ್ಮಶಾನ ಭೈರವ ಎಂಬ ಮೂರ್ತಿಯಿದ್ದು ಅದರ ಕೈಯಲ್ಲಿ ಫ್ಲೈ ವೀಲ್ ಅಥವಾ ಗೇರ್ ಸಿಸ್ಟಮ್ ಹೋಲುವಂತಹ ವಸ್ತುವಿದೆ. ಅದರ ಹೊರಭಾಗದಲ್ಲಿ 32 ಹಲ್ಲುಗಳಿದ್ದು ಒಳಗಿರುವ ಮತ್ತೊಂದು ಗೇರ್‍ನಲ್ಲಿ 16 ಚಿಕ್ಕ ಹಲ್ಲುಗಳಿವೆ. ಈ ಎರಡನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದಕ್ಕಂತಲೇ ಮತ್ತೊಂದು ಉಪಕರಣವನ್ನು ಅವರೆಡರ ಮೇಲೆ ಬಳಸಲಾಗಿದೆ. ಇಂದು ಬಳಸುತ್ತಿರುವ ರಿಂಗ್ ಹಾಗೂ ಫ್ಲೈ ವೀಲ್‍ಗಳು ಅವತ್ತೇ ನಮಗೆ ಗೊತ್ತಿದ್ದವಾ? ಎಂಬುವುದನ್ನು ನಾವು ಯೋಚಿಸಬೇಕಾಗಿದೆ. ಅಂದಿನ ಕಾಲದಲ್ಲಿ ಮಾಡಿದಂತಹ ಪ್ರತೀಯೊಂದು ದೇವಾಲಗಳ ನಿರ್ಮಾಣ ಕೆತ್ತನೆಗಳು ಅಬ್ಬಾ ಒಂದು ಬಾರಿ ಆ ಕೆತ್ತನೆಯನ್ನು ನೋಡಿದವರಿಗೆ ಅಚ್ಚರಿಯಾಗೋದು ಅಂತೂ ಖಂಡಿತ…ಅಲ್ಲದೆ ಹೊಯ್ಸಳೇಶ್ವರ ದೇವಾಲಯಲ್ಲಿರುವ ಗೋಡೆಯಲ್ಲಿರುವ ಈಜಿಪ್ಟ್ ರೀತಿಯ ಕೆತ್ತನೆ ಭಾರತಕ್ಕಿದ್ದ ಅಂತರಾಷ್ಟ್ರೀಯ ಸಂಬಂಧವನ್ನು ತಿಳಿಸುತ್ತದೆ. ಅಂದು ಈಜಿಪ್ಟ್‍ನೊಂದಿಗೆ ಇದ್ದ ವ್ಯಾಪಾರ ಸಂಬಂಧ ವ್ಯಾಪಾರ ವ್ಯವಹಾರ ಮಾಡಿದ್ದಕ್ಕೆ ಸಾಕ್ಷ್ಯ ಆಗಿರಬಹುದು ಎಂಬುವುದಕ್ಕೆ ಈ ಕೆತ್ತನೆಯೇ ಸಾಕ್ಷಿಯಾಗಿದೆ.

900 ವರ್ಷಗಳ ಹಿಂದೆಯೇ ಗಗನಯಾನಿಗಳ ಬಗ್ಗೆ ಇತ್ತಾ ಮಾಹಿತಿ…

ಇಲ್ಲಿರುವ ಕೆತ್ತನೆಗಳ ಬಗ್ಗೆ ಹೇಳುತ್ತಾ ಹೋದರೆ ಅಬ್ಬಾ….ಅದಲ್ಲೂ ಹಳೆಬೀಡು ಬಿತ್ತಿಯಲ್ಲಿರುವ ಶಿಲ್ಪ ಸಮೂಹವನ್ನೊಮ್ಮೆ ನೋಡಿ. ಗಗನಯಾನಿಗಳು ಧರಿಸುವಂತಹ ಹೆಲ್ಮೆಟನ್ನು ನಾವು ಈ ಕೆತ್ತನೆಯಲ್ಲಿ ನೋಡಬಹುದು. ಕೈಗೆ ಗ್ಲೌಸ್‍ಗಳನ್ನು ತೊಟ್ಟಿದ್ದು 900 ವರ್ಷಗಳ ಹಿಂದೆ ಈ ಶಿಲ್ಪಿಗಳು ಕೆತ್ತನೆಯಲ್ಲಿ ಇಂತಹ ಚಿತ್ರದ ಕಲ್ಪನೆಯಾದರೂ ಬಂದಿದ್ದೇಗೆ? ಅಂದು ಗಗನಯಾನದ ಬಗ್ಗೆ ಭಾರತೀಯರಿಗೆ ಮಾಹಿತಿ ಇತ್ತಾ ಅಥವಾ ಕಲ್ಪನೆಯಲ್ಲಿಯೇ ಕೆತ್ತನೆ ಮಾಡಿದರಾ ಎಂಬುವುದು ಎಂಬುವುದು ಇಂದಿಗೂ ಅಚ್ಚರಿಯನ್ನು ಸೃಷ್ಟಿಸುತ್ತೆ! ಗಗನಯಾನಿಗಳು ಬಳಸುವ ಬಟ್ಟೆ ಹೆಲ್ಮೆಟ್ ಬಗ್ಗೆ ಕೆತ್ತಾನಾಕಾರಕು ಕೆತ್ತಲು ಹೇಗೆ ಸಾಧ್ಯ?! ಒಂದಾ ಈ ಬಗ್ಗೆ ನೋಡಿರಬೇಕು ಇಲ್ಲವೆ ಈ ಬಗ್ಗೆ ಓದಿರಬೇಕು… ಈ ಎರಡರಲ್ಲಿ ಏನೇ ಆಗಿದ್ದರೂ ಆ ಜ್ಞಾನ ಸಂಪತ್ತು ಇತ್ತು ಎಂಬುವುದು ಈ ಕೆತ್ತನೆಯ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಆಶ್ಚರ್ಯ ಅಂದರೆ ಇತಿಹಾಸಕಾರಿಗೆ ಈ ಗಗನಯಾನಿಗಳ ಹಿಂದಿನ ರಹಸ್ಯ ಮಾತ್ರ ಕಂಡು ಹಿಡಿಯೋಕೆ ಇಂದಿಗೂ ಸಾಧ್ಯವಾಗಿಲ್ಲ.

ಆ ಆವಿಷ್ಕಾರ ಮಾಡಿದ್ದೇವೆ ಈ ಆವಿಷ್ಕಾರ ನಾವು ಮಾಡಿದ್ದೇವೆ ಎಂದು ಪಾಶ್ಚಿಮಾತ್ಯರು ಇಡೀ ವಿಶ್ವಕ್ಕೆ ಹೇಳಿದರೂ ಅದು ಸುಳ್ಳು. ಸಾವಿರಾರು ವರ್ಷಗಳ ಹಿಂದೆಯೇ ಅದೆಲ್ಲಾ ನಡೆದು ಹೋಗಿತ್ತು. ಅದನ್ನು ರೀ ಸರ್ಚ್ ಮಾಡಿದ್ದು ಪಾಶ್ಚಿಮಾತ್ಯರು. ನಮ್ಮಿಂದಲೇ ಶಿಕ್ಷಣವನ್ನು ಕದ್ದು ನಮ್ಮಂದೆದು ತಿರುಗುತ್ತಿದ್ದಾರೆ ಅಷ್ಟೇ… 1608ರಲ್ಲಿ ಟೆಲಿಸ್ಕೋಪ್ ಕಂಡುಹಿಡಿಯಲಾಯಿತು ಎಂದು ಬೊಬ್ಬಿಡುವ ಮೊದಲು 900 ವರ್ಷಗಳ ಹಿಂದೆ ನಿರ್ಮಾಣವಾದ ಹಳೆಬೀಡಿನ ಕೆತ್ತನೆಗಳನ್ನು ನೋಡಿ. ಹಳೆಬೀಡಿನ ಗೋಡೆಯಲ್ಲಿ ಒಬ್ಬ ಮನುಷ್ಯನ ಕೆತ್ತನೆಯಿದ್ದು ಆತ ಟೆಲಿಸ್ಕೋಪ್ ಹಿಡಿದು ನಿಂತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 400 ವರ್ಷಗಳ ಹಿಂದೆ ಟೆಲಿಸ್ಕೋಪ್ ಕಂಡುಹಿಡಿಯಲಾಯಿತು ಎನ್ನುವವರು 900 ವರ್ಷಗಳ ಹಿಂದೆ ಕೆತ್ತಿರುವ ಕೆತ್ತನೆಯಲ್ಲಿ ಹೇಗೆ ಟೆಲಿಸ್ಕೋಪ್ ಬಣ್ಣನೆಯಿರಲು ಸಾಧ್ಯ!?

ಯಾವಾಗ ನಮ್ಮ ಪುಣ್ಯ ಭೂಮಿಗೆ ಪಾಶ್ಚಿಮಾತ್ಯರು ಕಾಲಿಟ್ಟರೋ ಇಲ್ಲಿರುವ ಇಡೀ ಸಂಪತ್ತನ್ನು ದೋಚಿ ತಮ್ಮಂದೆದರು… ಶಿಕ್ಷಣ ಕ್ಷೇತ್ರದಲ್ಲೇ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಭಾರತವನ್ನು ಅನಾಗರಿಕರು ಎಂಬುವುದನ್ನು ಪಾಶ್ಚಿಮಾತ್ಯರು ನಂಬಿಸಿಬಿಟ್ಟರು!! ಭಾರತ ವಿಶ್ವಗುರುವಿನ ಸ್ಥಾನದಲ್ಲಿತ್ತು. ಸನಾತನ ಸಂಸ್ಕೃತಿ, ಇಲ್ಲಿನ ಸಂಪತ್ತು, ಪ್ರಾವಿಣ್ಯತೆ, ಕಂಡು ವಿದೇಶಿಯರು ಇಲ್ಲಿಗೆ ದಾಳಿ ಇಟ್ಟು ಎಲ್ಲಾ ಸಂಪತ್ತು ತಮ್ಮದೆಂದರು. ಭಾರತದಲ್ಲಿದ್ದ ಶಿಕ್ಷಣವನ್ನು ಕೊಳ್ಳೆ ಹೊಡೆದ ವಿದೇಶಿಯವರು ಅದು ಕಂಡುಹಿಡಿದದ್ದು ನಾವು ಇದನ್ನು ಕಂಡುಹಿಡಿದದ್ದು ನಾವು ಎಂದು ಸ್ಕೋಪ್ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೆ. ಆದರೆ ಎಲ್ಲಾ ಆವಿಷ್ಕಾರದ ಹಿಂದೆಯೂ ಭಾರತೀಯನಿದ್ದಾನೆ ಎಂಬುವುದನ್ನು ಮರೆಯಬೇಡಿ… ಯಾರೋ ಆವಿಷ್ಕಾರ ಮಾಡಿದ್ದನ್ನು ತಮ್ಮ ಪೇಟೆಂಟ್ ಹಾಕಿಕೊಂಡು ತಿರುಗಾಡಿದರೆ ಜಗತ್ತಿಗೆ ಒಂದಲ್ಲ ಒಂದು ದಿನ ಸತ್ಯದ ಅರಿವಾಗಿಯೇ ಆಗುತ್ತದೆ!!

source:https://www.youtube.com/watch?v=C-kuW1gNd04&t=169s

-ಪವಿತ್ರ

Tags

Related Articles

FOR DAILY ALERTS
Close