ಪ್ರಚಲಿತ

ಈ ನಾಲ್ಕೇ ನಾಲ್ಕು ಕಾರಣಗಳಿಂದ ಮೋದಿಯನ್ನು ಬಲವಾಗಿ ವಿರೋಧಿಸಲಾಗುತ್ತಿದೆ!!!

ಬಹಳಷ್ಟು ಮಂದಿ ಮೋದಿಯನ್ನು ಮುಸ್ಲಿಂ-ವಿರೋಧಿ ಎನ್ನುತ್ತಾರೆ! ಕೆಲವರು ಅವರನ್ನು ಹಿಂದೂ ತೀವ್ರಗಾಮಿ ಎನ್ನುತ್ತಾರೆ! ಆದರೆ, ನರೇಂದ್ರ ಮೋದಿ ಭಾರತಕ್ಕೆ
ದೊರಕಬಹುದಾದ ಅನರ್ಘ್ಯ ರತ್ನವಷ್ಟೇ! ಅತಿಶಯೋಕ್ತಿಯಲ್ಲವೇ ಅಲ್ಲ ಇದು! ವಿರೋಧಿಗಳೂ ಸಹ, ‘ಭಾರತದ ಅಭಿವೃದ್ಧಿಗೆ ಶ್ರಮವಹಿಸುತ್ತಿರುವ ನರೇಂದ್ರ
ಮೋದಿಯನ್ನು ಒಪ್ಪುತ್ತಾರೆ! ಮೋದಿ ಭಾರತದ ದಿಕ್ಕನ್ನೇ ಬದಲಿಸಿದರು ಎಂಬ ವಾಸ್ತವವೊಂದಿದೆಯಲ್ಲವಾ?! ಎಂತಹವನೂ ಕೂಡ ಧಿಕ್ಕರಿಸಲು ಸಾಧ್ಯವೇ ಇಲ್ಲ!
ಈಗಾಗಲೇ ತಮ್ಮ “ಡೈನಮಿಕ್” ವ್ಯಕ್ತಿತ್ವವನ್ನು ಸಾಬೀತುಪಡಿಸಿರುವ ನರೇಂದ್ರ ಮೋದಿ 2014 ರ ಲೋಕಸಭಾ ಚುನಾವಣೆಯನ್ನು ಗೆದ್ದಿದ್ದು ಭ್ರಷ್ಟ ಹಾದಿಯಿಂದಲ್ಲ. ಬದಲಿಗೆ, ಭಾರತವನ್ನು ‘ಭ್ರಷ್ಟಾಚಾರ ರಹಿತ’ ರಾಷ್ಟ್ರವನ್ನಾಗಿ ಮಾಡುವ ಒಂದು ಬದ್ಧತೆಯೊಂದನ್ನೇ ಭಾರತೀಯರು ನೋಡಿದ್ದಷ್ಟೇ!

ಇವತ್ತಿನವರೆಗೂ ಸಹ ಮೋದಿ ಸರಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪ ಕೇಳಿಬಂದಿಲ್ಲ! ಯಾಕೆಂದರೆ, ಭ್ರಷ್ಟಾಚಾರವೆನ್ನುವುದೇ ಇಲ್ಲ ಮೋದಿಯ ಸಾಮ್ರಾಜ್ಯದಲ್ಲಿ!

ಒಂದಷ್ಟು ಕಾರಣಗಳಿಂದ ಭಾರತಕ್ಕೆ ಮೋದಿಯೊಬ್ಬರು ‘The Best’ ಎನ್ನುವಂತಹ ಪ್ರಧಾನಮಂತ್ರಿ ಎನ್ನಿಸಿಬಿಡುತ್ತಾರೆ! ಯಾಕೆ ಗೊತ್ತೇ?!

1. ವಿಭಜನಾತ್ಮಕ ರಾಜಕೀಯದ ವಿರುದ್ಧವಿರುವ ಮೋದಿಯ ನಿಲುವು!

‘ಗೋಧ್ರಾ ಗಲಭೆ’ ಗುಜರಾತಿನ ಅತ್ಯಂತ ಕರಾಳ ಇತಿಹಾಸವೇ ಬಿಡಿ! ಲೋಕಸಭಾ ಚುನಾವಣೆಯಲ್ಲಿ ಮಾತ್ರವೇ ಅಲ್ಲ, ಇವತ್ತಿಗೂ ಮೋದಿ ಎಂದರೆ ಗೋಧ್ರಾ ಗಲಭೆ ಎನ್ನುವಷ್ಟು ಮೋದಿಯ ವಿರುದ್ಧವಾಗಿ ಮಾಡಿದ ಅಪಪ್ರಚಾರವಿದೆಯಲ್ಲ?! ಹಾಗಿದ್ಯಾಗಿಯೂ ಸಹ, ಮೋದಿಯನ್ನು ಸೋಲಿಸಲು ಸಾಧ್ಯವೇ ಆಗಲಿಲ್ಲ ಕಾಂಗ್ರೆಸ್ಸಿಗರಿಗೆ! 2002 ರಲ್ಲಿ, ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸ್ವಲ್ಪ ದಿನಗಳಲ್ಲಿಯೇ ಗೋಧ್ರಾ ಗಲಭೆ ಪ್ರಾರಂಭವಾಗಿದ್ದು, ಬರೋಬ್ಬರಿ 1000 ಭಾರತೀಯರನ್ನು ಬಲಿ ತೆಗೆದುಕೊಂಡಿತು! ಕೇವಲ 72 ಗಂಟೆಯಲ್ಲಿಯೇ ಗುಜರಾತಿನ ಸ್ಥಿತಿಯನ್ನು ಹದಕ್ಕೆ ತಂದ ಮೋದಿಯ ಪರಿಸ್ಥಿತಿ ನಿಮಗೆ ಅರಿವಾಗಿರಲಿಕ್ಕಿಲ್ಲ. ಗೋಧ್ರಾ ಗಲಭೆಯನ್ನು ಹತೋಟಿಗೆ ತರಲು ಮಹಾರಾಷ್ಟ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಹತ್ತಿರ
ಸೇನೆಯನ್ನು ಕಳುಹಿಸುವಂತೆ ಕೋರಿದ್ದರು ಮೋದಿ. ಸೇನೆಯನ್ನು ಕಳುಹಿಸಲು ನಿರಾಕರಿಸಿದರೂ, ಲಭ್ಯವಿದ್ದ ಸೇನಾ ಬಲವನ್ನೇ ಸಕ್ರಿಯವಾಗಿ ಬಳಸಿಕೊಂಡ
ಮೋದಿಯವರಿದ್ದಿದ್ದರಿಂದ 72 ಗಂಟೆಗಳೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತಷ್ಟೇ!

ಸ್ವತಂತ್ರ್ಯ ಸಿಕ್ಕಾಗಿನಿಂದ 90 ಕ್ಕೂ ಹೆಚ್ಚು ಗಲಭೆಗಳಾಗಿದೆ! ಹಾಗಿದ್ಯಾಗಿಯೂ, ದೇಶದಲ್ಲಿ ಬಹುಷಃ ಗುಜರಾತ್ ಮಾತ್ರವೇ ಅಪರಾಧಿಗಳನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾದದ್ದಷ್ಟೇ! ಬೇರಾವ ರಾಜ್ಯಗಳೂ ಸಹ ಗಲಭೆಯಾದರೆ ಯಾವ ನ್ಯಾಯಾಲಯವನ್ನೂ ಏರಲಿಲ್ಲ, ಯಾವ ಶಿಕ್ಷೆಯೂ ಆಗಲಿಲ್ಲ. ಇಷ್ಟಾದರೂ, ವಿಶೇಷ ತನಿಖಾ ದಳದವರ ತನಿಖೆಗೆ ಸಹಕಾರ ನೀಡಿದ ಮೋದಿಗೆ ಕ್ಲೀನ್ ಚಿಟ್ ಸಿಕ್ಕಿತಾದರೂ ಸಹ ಇವತ್ತಿಗೂ, ಅದೊಂದನ್ನೇ ವಿಷಯ ಹಿಡಿದು ಜಗ್ಗುವಗರಿರುವಾಗಲೂ, ಉಹೂಂ! ಮೋದಿ ಜಗ್ಗಲಿಲ್ಲ!

ಯಾವ ಮಾಧ್ಯಮಗಳು ಮೋದಿಯನ್ನು ಮುಸ್ಲಿಂ ವಿರೋಧಿಯಾಗಿ ಚಿತ್ರಿಸಿದ್ದಕ್ಕೆ ಸರಿಯಾಗಿ, ಗುಜರಾತಿನ ಮುಸಲ್ಮಾನರೇ ಮೋದಿಯನ್ನು ಬೆಂಬಲಿಸತೊಡಗಿದರು. ಪರಿಣಾಮ, ಹದಿನೈದು ವರುಷಗಳಿಂದ ಗುಜರಾತಿನಲ್ಲಿರುವುದು ಕೇವಲ ‘ಮೋದಿ ಮೋದಿ’ ಎಂಬ ಜಪ ಮಾತ್ರ. ಇವತ್ತಿಗೂ, ಯಾರ ತುಷ್ಟೀಕರಣವನ್ನೂ ಮಾಡದೆ, ರಾಷ್ಟ್ರದಡಿಯಲ್ಲಿ ಎಲ್ಲರೂ ಸಮಾನರೆಂಬುದಕ್ಕೆ ಸಾಕ್ಷಿಯಾಗಿ ನಿಂತವರು ಮೋದಿ! ಜಾತಿ – ವಿಚಾರಗಳ ಮಧ್ಯೆ ರಾಜಕೀಯದ ಮುನ್ನುಡಿ ಬರೆಯದ ಮೋದಿ ಬಹಿರಂಗವಾಗಿಯೇ ತುಷ್ಟೀಕರಣವನ್ನು ವಿರೋಧಿಸಿದ್ದರು!

2. ಅಭಿವೃದ್ಧಿಯ ಹರಿಕಾರ!!!

ಅಭಿವೃದ್ಧಿಯೇ ಮೋದಿ ಸರಕಾರದ ಅತ್ಯುತ್ತಮ ಗುರಿ! 2014 ರಿಂದಲೂ ಸಹ, ‘ಸಬ್ ಕಾ ಸಾಥ್’, ಅಚ್ಛೇ ದಿನ್, ‘ಸಬ್ ಕಾ ವಿಕಾಸ್’, ‘ಅಬ್ ಕಿ ಬಾರ್ ಮೋದಿ ಸರಕಾರ್’ ಎಂದ ಘೋಷಣೆಯೊಂದಿದೆಯಲ್ಲವಾ?!ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಲಾಗಿರಲಿಲ್ಲ ಎಂಬುದು ಅರಿವಾಗಿದ್ದೇ ಈ ಮೂರು ವರುಷಗಳ ಅಭಿವೃದ್ಧಿಯಲ್ಲಿ! ಚುನಾವಣೆಗೂ ಮುನ್ನವೇ ತಮ್ಮ ಆಡಳಿತದ ಕಾರ್ಯವೈಖರಿ ಹೀಗೆ ಇರುವುದೆಂಬ ಸ್ಪಷ್ಟತೆ ಕೊಟ್ಟಿದ್ದರು ಮೋದಿ!

ಚುನಾವಣೆಯಲ್ಲಿ ಗೆದ್ದ ನಂತರ ಮೋದಿ ತಮ್ಮ ಮಂತ್ರವನ್ನಲ್ಲಿಗೇ ಬಿಡಲಿಲ್ಲ! ಉಳಿದ ರಾಜಕಾರಣಿಗಳ ಹಾಗೆ ಸ್ವ-ಸೇವೆಯಲ್ಲಿ ನಿರತರಾಗಲಿಲ್ಲ! ಬದಲಾಗಿ, ‘ಜನ್ ಧನ್ ಯೋಜನಾ, ಸ್ಟಾರ್ಟಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಸ್ಮಾರ್ಟ್ ಸಿಟೀಸ್ ಮತ್ತು ಮೇಕ್ ಇನ್ ಇಂಡಿಯಾ ಅಂತಹ ಅದೆಷ್ಟೋ ಯೋಜನೆಗಳಿಂದ ಭಾರತ ಆರ್ಥಿಕತೆಯಲ್ಲಿ ದಿನೇ ದಿನೇ ಚೇತರಿಸಿಕೊಳ್ಳುತ್ತ ಬಂದಿತು. ಮೊನ್ನೆಯಷ್ಟೇ, ಮೇಕ್ ಇನ್ ಇಂಡಿಯಾ 15.2 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ತಯಾರಾಯಿತು!

ಆರ್ಥಿಕ ಸಮೀಕ್ಷೆಯ ಪ್ರಕಾರ, ಮೇಕ್ ಇನ್ ಇಂಡಿಯಾದ ಮೂಲಕ FDI ಒಳ ಹರಿವು 40% ಗಿಂತ ಜಾಸ್ತಿ ಹೆಚ್ಚಾಯಿತು! ಬಂಬಾರ್ಡಿಯರ್, ಫಾಕ್ಸ್ ಕಾನ್, ಹಾಗೂ ಆಪಲ್ ಭಾರತದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿ ಒಪ್ಪಂದವನ್ನೂ ಮಾಡಿಕೊಂಡ ಪರಿಣಾಮ ಉದ್ಯೋಗದ ಜೊತೆಗೆ ಅಭಿವೃದ್ಧಿಯನ್ನೂ ತರುವಲ್ಲಿ ನೆರವಾಯಿತಷ್ಟೇ!

ಇಷ್ಟಾದರೂ ಕೂಡ, ಭಾರತ ಉದ್ಧಾರವಾಗುತ್ತಿಲ್ಲವೆಂಬ ಮಾತಿದೆಯಲ್ಲವಾ?! ಉಹೂಂ! ಅದು ಉದ್ಧಾರವಾಗುತ್ತಿಲ್ಲವೆಂಬ ಮಾತ್ರಕ್ಕೆ ಅಲ್ಲ, ಬದಲಾಗಿ ಮೋದಿಯಿಂದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿದೆಯಾದರೂ, ಒಳಗೊಳಗೆ ಕದಿಯಲು ಯಾವ ಅವಕಾಶವನ್ನೂ ನೀಡುತ್ತಿಲ್ಲವೆಂಬ ಸಂಕಟವಷ್ಟೇ!

ವಿಷಯ ಇಷ್ಟೇ! ಹತ್ತು ವರುಷಗಳ ಯೋಜನೆಯ ಸೂಚನೆಗಳನ್ನು ಹತ್ತು ದಿನದಲ್ಲಿ ಮಾಡಿ ಮುಗಿಸಲು ಮೋದಿ ಯಾವ ಜಾದೂವನ್ನೂ ಕಲಿತಿಲ್ಲ. ನೋಡಿ! ರೈಲು ಎಷ್ಟೇ ವೇಗವಿದ್ದರೂ ಕೂಡ, ‘U-turn’ ತೆಗೆದುಕೊಳ್ಳುವಾಗ ನಿಧಾನಗತಿಯಲ್ಲಿಯೇ ಸಾಗಬೇಕಾದುದು ಅನಿವಾರ್ಯ! ಇಲ್ಲದಿದ್ದರೆ ಅಪಘಾತವೊಂದೇ ಬಾಕಿ ಉಳಿಯುವುದಷ್ಟೇ! 70 ವರ್ಷಗಳಿಂದ ದೇಶದ ಆರ್ಥಿಕತೆಗೆ ಬಿದ್ದ ಹೊಡೆತವನ್ನು ಎಪ್ಪತ್ತು ನಿಮಿಷಗಳಲ್ಲಿ ಪರಿಹರಿಸಲು ಸಾಧ್ಯವಿದೆಯಾ?! ಸಾಧ್ಯವಿದ್ದರೂ, ಸಾಧ್ಯವಾಗಿಸಬಲ್ಲಂತಹ ನಿಷ್ಟ ಭಾರತೀಯರು ಇದ್ದಾರಾ?!

3. ದೇಶದ ಭದ್ರತೆಯ ಮೇಲಿನ ಹಿಡಿತ ಹಾಗೂ ಉಗ್ರ ನಿಗ್ರಹ!

ಈ ವಾಸ್ತವವೊಂದೇ ಅದೆಷ್ಟೋ ಕಾಂಗ್ರೆಸ್ಸಿಗರ, ಸೆಕ್ಯುಲರ್ ಗಳ ನಿದ್ದೆ ಕೆಡಿಸುತ್ತಿರುವುದು! ಇದೊಂದು ಘಟನೆಯನ್ನು ಪರಿಗಣಿಸಿ!

2008 ರಲ್ಲಿ, ಪಾಕಿಸ್ಥಾನಿ ಉಗ್ರರು, ಮುಂಬೈನ ಕುಬೇರ್ ತೀರಕ್ಕೆ ತಲುಪಿ, ನೇರವಾಗಿ ಪ್ರಸಿದ್ಧವಾದ ತಾಜ್ ಹೋಟೆಲ್, CST, ಲಿಯೋಪಾರ್ಡ್ ಕೆಫೆ, ನಾರೀಮನ್ ಹೌಸ್ ಮತ್ತು ಇತರೆ ಪ್ರದೇಶಗಳಿಗೆ ಹೋಗಿ ಬಹಿರಂಗವಾಗಿ ಗುಂಡಿನ ದಾಳಿ ನಡೆಸಿದರು! ಯಾವುದೇ ಜಾತಿ, ಧರ್ಮ, ಪಂಗಡವನ್ನೂ ಲೆಕ್ಕಿಸಲಿಲ್ಲ! ನೋಡಲೂ ಇಲ್ಲ! 300 ಜನರು ಕೊನೆಯುಸಿರೆಳೆದರು, ಲೆಕ್ಕಕ್ಕೆ ಸಿಗದಂತೆ ಅದೆಷ್ಟೋ ಜನ ಗಾಯಗೊಂಡರು. ಸತ್ತವರಲ್ಲಿ ಬಹುಪಾಲು ಜನ ಹೆಂಗಸರು ಮತ್ತು ಮಕ್ಕಳು! ಈ 26/11 ಘಟನೆಯೊಂದು, ದೇಶದ ಹದಗೆಟ್ಟ ಭದ್ರತಾ ವ್ಯವಸ್ಥೆಗೆ ಹಿಡಿದ ಕನ್ನಡಿ! ಅದಾದ ಮೇಲೆ, 72 ಗಂಟೆಗಳೊಳಗಾಗಿ ಸೇನಾ ಕಮಾಂಡೋಗಳು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅದಷ್ಟೂ ಉಗ್ರರ ಬೇಟೆಯಾಡಲಾಯಿತಾದರೂ, ಕಡಲ ತೀರದಿಂದ ಆರಾಮಾಗಿ ದೇಶದೊಳಕ್ಕೆ
ನುಗ್ಗುವಷ್ಟು ಭದ್ರತಾ ವ್ಯವಸ್ಥೆ ಅವತ್ತು ಕಾಂಗ್ರೆಸ್ ಕೇಂದ್ರ ಸರಕಾರದಲ್ಲಿದ್ದಾಗ ಭಾರತಕ್ಕೆ ಕೊಟ್ಟ ಉಡುಗೊರೆ!

ಈಗ, ಇನ್ನೊಂದು ಘಟನೆಯನ್ನು ಪರಿಗಣಿಸಿ!

ಜನವರಿ 2 ರಂದು, ಮೋದಿ ಪಾಕಿಸ್ಥಾನದ ಮುಖ್ಯಾಧಿಕಾರಿಯನ್ನು ಭೇಟಿ ನೀಡಿ ಭಾರತಕ್ಕೆ ಮರಳಿದ ಬಳಿಕ, ಪಠಾಣ್ ಕೋಟ್ ವಾಯುನೆಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಭಾರತದ ಸೈನ್ಯದಲ್ಲಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಾಶ ಪಡಿಸಲೇಬೇಕೆಂಬ ಕಟ್ಟು ನಿಟ್ಟಿನ ಆಜ್ಞೆಗೊಳಗಾಗಿ ದಾಳಿ ನಡೆಸಿದ್ದರಷ್ಟೇ! ಸದಾಕಾಲ ಗಸ್ತು ತಿರುಗುವ ಡ್ರೋನ್ ನಿಂದ ಉಗ‌್ರರ ಒಳ ನುಸುಳಿವಿಕೆಯನ್ನು ಪತ್ತೆ ಹಚ್ಚಿದ ಕೆಲವೇ ಗಂಟೆಗಳಲ್ಲಿ, ಸುತ್ತಮುತ್ತಲಿನ ಜನನಿಬಿಡ ಪ್ರದೇಶಗಳನ್ನು ತಟಸ್ಥಗೊಳಿಸಲಾಯಿತು. ಉಗ್ರರು ಪಠಾಣ್ ಕೋಟ್ ವಾಯುನೆಲೆಯನ್ನು ಸ್ಫೋಟಿಸಿವುದರ ಮುಂಚೆಯೇ, ಉಗ್ರರನ್ನು ಕೊಲ್ಲಲಾಯಿತು! ಅಕಸ್ಮಾತ್, ಪಠಾಣ್ ಕೋಟ್ ಸ್ಫೋಟಗೊಂಡಿದ್ದರೆ, 40% ನಷ್ಟು ವಾಯುನೆಲೆಯ ಬಪ ಕ್ಷಣಾರ್ಧದಲ್ಲಿ ಕರಗುತ್ತಿತ್ತು.

ಅಂಕಿ ಅಂಶಗಳೇ ಹೇಳುವಂತೆ, ಮೋದಿ ಆಡಳಿತದಲ್ಲಿ ಭದ್ರತೆಗೆ ಕೊಟ್ಟಷ್ಟು ಮಹತ್ವ ಇವತ್ತಿನ ತನಕ ಯಾವ ಸರಕಾರದಿಂದಲೂ ಕೊಡಲಿಕ್ಕಾಗಲಿಲ್ಲ. ಇದಲ್ಲದೇ, ಫ್ರಾನ್ಸ್, ಅಮೇರಿಕಾ, ರಷ್ಯಾ ಹಾಗೂ ಇಸ್ರೇಲ್ ರಾಷ್ಟ್ರಗಳ ಜೊತೆ ಭದ್ರತಾ ವ್ಯವಸ್ಥೆಗೆ ಸಂಬಂಧಪಟ್ಟ ಹಾಗೆ ಜಂಟಿ ಸಹಭಾಗಿತ್ವವನ್ನು ಮಾಡಿಕೊಂಡ ಮೇಲೆ ಪಾಕಿಸ್ಥಾನ ಹಾಗೂ ಚೀನಾಕೆ ಭಾರೀ ಹೊಡೆತ ಬಿದ್ದಿದೆ! ಜಂಟಿ ಸಹಭಾಗಿತ್ವದಿಂದ, ಪರಮಾಣು ಸಮರ್ಥವಾದ ಜಲಾಂತರ್ಗಾಮಿಗಳು, f-16s ರಾಕೆಟ್ ಹಾಗೂ ಚಾಪರ್ ಗಳನ್ನು ಗಳಿಸಿರುವ ಭಾರತ ಗಡಿ ಭದ್ರತೆಯನ್ನು ಹೆಚ್ಚಿಸಿತು.

4. UNSC ಯ ಶಾಶ್ವತ ಸದಸ್ಯನಾಗಲು ಹೋರಾಡುತ್ತಿರುವ ಮೋದಿ!

2015 ರಲ್ಲಿ ವರ್ಷಪೂರ್ತಿ ಅದೆಷ್ಟೋ ರಾಷ್ಟ್ರಗಳಿಗೆ ಭೇಟಿ ಕೊಟ್ಟ ಮೋದಿಯನ್ನು ಅದೆಷ್ಟೋ ಜನ ‘NRI Prime Minister’ ಎಂದು ಟೀಕೆ ಮಾಡಿದರಷ್ಟೇ! ಆದರೆ, ಮೋದಿಯ ಭೇಟಿಯ ಹಿಂದಿನ ಉದ್ದೇಶ ಮಾತ್ರ ಯಾವ ವಿರೋಧಿಗೂ ಅರ್ಥವಾಗಿರಲಿಲ್ಲ! ಮೋದಿ ರಾಷ್ಟ್ರಗಳಿಗೆ ಭೇಟಿ ನೀಡುವುದರ ಹಿಂದೆ ಇದ್ದದ್ದು ಮೂರೇ ಅಜೆಂಡಾಗಳು!

ರಾಷ್ಟ್ರಗಳ ನಡುವೆ ರಾಜಕೀಯ ಸಂಬಂಧವನ್ನು ಗಟ್ಟಿಗೊಳಿಸುವುದು!

ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸುವುದು!

ಹಾಗೂ, United Nations Security Council ನಲ್ಲಿ ಭಾರತಕ್ಕೆ ಶಾಶ್ವತವಾದ ಸ್ಥಾನವನ್ನೊದಗಿಸಿಕೊಡುವುದು!

ಅದೆಷ್ಟೋ ಭೇಟಿಗಳ ನಂತರ, ಅಮೇರಿಕಾ, ಫ್ರಾನ್ಸ್, ಜರ್ಮನಿ, ರಷ್ಯಾ, ಜಪಾನ್ ಹೀಗದೆಷ್ಟೋ ರಾಷ್ಟ್ರಗಳ ರಾಯಭಾರಿ ಹಾಗೂ ನಾಯಕರು ಮೋದಿಗೆ ‘ಜೈ’ ಎಂದರು. UNSC ಗೆ ಭಾರತಕ್ಕೆ ಸ್ಥಾನ ಕೊಡಬೇಕೆಂಬ ಮೋದಿಯವರ ವಿನಂತಿಗೆ ಬೆಂಬಲಿಸಿದರು! 70 ವರ್ಷಗಳಿಂದ ಸಾಧಿಸಲಾಗದಿದ್ದದ್ದನ್ನು ಮೋದಿ ಸಾಧಿಸಿದರು! ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿ ವಿಷಯಗಳೂ ಚರ್ಚೆಯಾಗಲು ಪ್ರಾರಂಭವಾಗಿದ್ದು ಮೋದಿ ಪ್ರಧಾನಿಯಾದ ಮೇಲೆ! ನನಗೆ ತಿಳಿದ ಪ್ರಕಾರ, ಇಲ್ಲಿಯವರೆಗೆ ಯಾವ ಪ್ರಧಾನ ಮಂತ್ರಿಯ ಆಡಳಿತಾವಧಿಯಲ್ಲಿಯೂ ಕೂಡ ಭಾರತಕ್ಕೆ ಇಷ್ಟು ಪ್ರಾಶಸ್ತ್ಯವನ್ನು ತಂದುಕೊಡಲಾಗಿರಲಿಲ್ಲ ಎಂಬುದು ಸತ್ಯ!!

ಅದಕ್ಕೇ, ಕೇವಲ ಇವಿಷ್ಟೇ ಕಾರಣಗಳಿಂದ ಮೋದಿಯನ್ನು ಜಗತ್ತು ಪ್ರಶಂಸಿಸಿತಾದರೂ, ಚೀನಾ ಹಾಗೂ ಪಾಕಿಸ್ಥಾನಕ್ಕೆ ನಡುಕ ಉಂಟಾಯಿತಾದರೂ, ಭಾರತೀಯರೆನ್ನಿಸಿಕೊಂಡವರೇ ಮೋದಿಯ ವಿರೋಧ ಮಾಡತೊಡಗಿದರು! ಕಾಂಗ್ರೆಸ್ಸಿಗರು ಮುರಕೊಂಡು ಬಿದ್ದರು! ಇವಿಷ್ಟೇ ಕಾರಣಕ್ಕೆ ಸೆಕ್ಯುಲರ್ ಮಾಧ್ಯಮಗಳು ಬಾಯಿಗೆ ಬಂದ ಹಾಗೆ ಬೊಗಳತೊಡಗಿದವು! ಯಾಕೆಂದರೆ, ದೇಶವನ್ನೂ ಮಾರಿ ಹಣ ಮಾಡಿಕೊಂಡವರ ದಾರಿ ಶಾಶ್ವತವಾಗಿ ಮುಚ್ಚುತ್ತಾ ಬಂದಿತ್ತು!

– ಅಜೇಯ ಶರ್ಮಾ

Tags

Related Articles

Close