ಅಂಕಣ

ಈ ಮುಸ್ಲಿಂ ಮಹಿಳೆಯ ಮಾತುಗಳನ್ನು ಕೇಳಿದರೆ ಯಾವ ಮುಸ್ಲಿಮರೂ ಖಂಡಿತಾ ಕಾಂಗ್ರೆಸ್‍ಗೆ ಓಟು ಹಾಕಲಾರರು. ಬದಲಿಗೆ ಎಲ್ಲಾ ಮುಸ್ಲಿಮರು ಮೋದಿಯನ್ನು ಪ್ರೀತಿಸತೊಡಗುತ್ತಾರೆ…. ಯಾಕೆಂದರೆ….

ಇಂಡಿಯಾ ಟಿವಿ ಗುಜರಾತ್ ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಗುಜರಾತ್‍ನಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಆಡುತ್ತಿರುವ ಮಾತುಗಳು ಇಡೀ ಕಾಂಗ್ರೆಸ್ ಪಕ್ಷದ ಹಣೆಬರಹವನ್ನು ಬಟಾಬಯಲು ಮಾಡಿತು… ಮುಸ್ಲಿಂ ಮಹಿಳೆಯೊಬ್ಬಳು ಕಾಂಗ್ರೆಸ್ ಪಕ್ಷಕ್ಕೆ ಈತರ ಉಗುಳುತ್ತಿದ್ದರೆ ಸ್ವತಃ ಪತ್ರಕರ್ತರಿಗೇ ಅಚ್ಚರಿಯಾಯಿತಲ್ಲದೆ ಕಾಂಗ್ರೆಸ್ ಮುಖಂಡರೆಲ್ಲಾ ಮುಖದ ಮೇಲೆ ಬಿದ್ದ ಎಂಜಲನ್ನು ಟವೆಲ್‍ನಿಂದ ಒರೆಸುವಂತಾಯಿತು. ತಾನು ಮಾಡಿದ ಕುಂತತ್ರವನ್ನು ಸ್ವತಃ ಮುಸ್ಲಿಂ ಮಹಿಳೆಯೇ ಮಾಧ್ಯಮದ ಮುಂದೆ ಬಿಚ್ಚಿಡುತ್ತಿದ್ದಾಗ ಅತ್ತ ಕಾಂಗ್ರೆಸಿಗರ ಮುಖದಲ್ಲಿ ಪಶ್ಚಾತಾಪದ ಭಾವನೆಯೊಂದಿಗೆ ಹಣೆಯಲ್ಲಿ ನೆರಿಗೆಗಳು ಮೂಡುತ್ತಿದ್ದವು…

ದೇಶವನ್ನು ಒಡೆದು ಆಳುವುದು ಕಾಂಗ್ರೆಸ್ ಇದುವರೆಗೆ ನಡೆಸಿಕೊಂಡು ಬಂದ ಕಾರ್ಯತಂತ್ರ. ಬ್ರಿಟೀಷರ ಆಡಳಿತವೈಖರಿಯನ್ನು ಕಾಪಿ ಮಾಡಿಕೊಂಡು ಅದನ್ನು ದೇಶದಲ್ಲಿ ಭಟ್ಟಿ ಇಳಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತದೆ. ಒಂದು ಸಮಸ್ಯೆಯನ್ನು ಹಾಗೆಯೇ ಉಳಿಸಿ ಅದರಿಂದ ರಾಜಕೀಯ ಲಾಭವನ್ನು ಪಡೆಯುತ್ತಿರುವುದನ್ನು ಸಾಕ್ಷ್ಯಾತ್ ನೆಹರೂರವರು ಪಾಲಿಸಿಕೊಂಡು ಬಂದು ಕಾಂಗ್ರೆಸ್‍ನ ಅಸ್ತಿತ್ವವನ್ನು ಇದುವರೆಗೆ ಉಳಿಸಿಕೊಳ್ಳಲು ಕಾರಣರಾದರು. ಅವರಿಂದಾಗಿಯೇ ಇಂದಿಗೂ ಭಾರತವನ್ನು ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ದೇಶವನ್ನು ಕಿತ್ತು ತಿನ್ನುತ್ತಿದೆ. ಚೀನಾ ಭಾರತವನ್ನು ಆಗಾಗ ಬಂದು ಅಣಕಿಸುತ್ತಾ ನಂಬಿಕೆದ್ರೋಹ ಎಸಗುತ್ತಿದೆ. ದೇಶದಲ್ಲಿರುವ ಆಂತರಿಕ ಸಮಸ್ಯೆಗಳಿಗೆ ಮೂಲ ಕಾರಣ ಕಾಂಗ್ರೆಸ್ ಎಂದರೂ ತಪ್ಪಿಲ್ಲ. ಕಾಂಗ್ರೆಸ್ ಬುಡ ಅಲುಗಾಡಿದಾಗಲೆಲ್ಲಾ ಅದು ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ. ಅದಕ್ಕೆ ಪೂರಕ ಉದಾಹರಣೆ ನೀಡುವುದಾದದರೆ ಇಂದಿನ ಹಿಂದೂ ಮುಸ್ಲಿಂ ಮಧ್ಯೆ ಇರುವ ಸಮಸ್ಯೆ…

ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ಕತ್ತಿಮಸೆಯುತ್ತಿರಲು ಅದಕ್ಕೆ ಮೂಲ ಕಾರಣ ಕಾಂಗ್ರೆಸ್…!!! ಯಾವಾಗ ಕಾಂಗ್ರೆಸ್ ಮುಸ್ಲಿಮರ ಓಟಿಗಾಗಿ ಮುಸ್ಲಿಂ ಓಲೈಕೆಯಲ್ಲಿ ತೊಡಗಿತೋ, ಯಾವಾಗ ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಲಾರಂಭಿಸಿತೋ, ಯಾವಾಗ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿತೋ ಅಂದಿನಿಂದ ಈ ದೇಶದಲ್ಲಿ ಸಮಸ್ಯೆಗಳು ಹುಟ್ಟಲಾರಂಭಿಸಿತು ನೋಡಿ.. ಯಾವಾಗ ಭಾರತದ ಹಿಂದೂಗಳು ಮುಸ್ಲಿಮರ ಪಾಲಿಗೆ ವಿಲನ್ ಆದರೋ, ಯಾವಾಗ ಹಿಂದೂಗಳಿಗೆ ಮುಸ್ಲಿಮರು ವಿಲನ್ ಆದರೋ ಅದಕ್ಕೆಲ್ಲಾ ಕಾರಣ ಈ ಕಾಂಗ್ರೆಸ್. ಕಾಂಗ್ರೆಸ್‍ನ ಈ ಹಿಡನ್ ಅಜೆಂಡಾ ಭಾರತೀಯರಿಗೆ ಇದುವರೆಗೆ ಅರ್ಥವೇ ಆಗಿರಲಿಲ್ಲ. ಹಿಂದೂ ಮುಸ್ಲಮರಿಬ್ಬರು ಕಚ್ಚಾಟ ನಡೆಸುವಂತೆ ಮಾಡಿ ದೂರದಲ್ಲಿ ನಿಂತು ಚಂದ ನೋಡುತ್ತಾ ಜಾತ್ಯತೀತ ಜಪವನ್ನು ಮಾಡುತ್ತಿರುವ ಕಾಂಗ್ರೆಸ್ ಅದರಿಂದ ಓಟು ಪಡೆಯಿತಷ್ಟೇ ಅಲ್ಲದೆ ತನ್ನ ಕಿಸೆಯನ್ನೂ ಭದ್ರಪಡಿಸಿ ಮಿಕ್ಕಿದ ಹಣವನ್ನು ಸ್ವಿಸ್ ಬ್ಯಾಂಕ್‍ನಲ್ಲಿ ಭದ್ರವಾಗಿಸಿತು… ಆದರೆ ಕಾಂಗ್ರೆಸ್‍ನ ನರಿಬುದ್ಧಿ ಅರ್ಥವಾಗಲು ಜನರಿಗೆ 70 ವರ್ಷ ಬೇಕಾಯಿತು…

ಹೌದು, ಕಾಂಗ್ರೆಸಿನ ಹಣೆಬರಹದ ಬಗ್ಗೆ ಯಾರೋ ಆರೆಸ್ಸೆಸ್ ಮುಖಂಡ ಹೇಳಿದ್ದರೆ ಅದೊಂದು ದೋಷಪೂರಿತ ಮಾತುಗಳಾಗಿ ದೊಡ್ಡದೊಂದು ವಿವಾದ ಸೃಷ್ಟಿಸುತ್ತಿತ್ತು. ಆದರೆ ಇಂದು ಕಾಂಗ್ರೆಸಿನ ಹಣೆಬರಹವನ್ನು ಸ್ವತಃ ಮುಸ್ಲಿಂ ಮಹಿಳೆಯೇ ಮಾಧ್ಯಮಗಳ ಮುಂದೆ ಬಟಾಬಯಲು ಮಾಡುತ್ತಾ ಅದರ ಬೂಟಾಟಿಕೆಯನ್ನು ಇಡೀ ಜಗತ್ತಿನ ಮುಂದೆ ತೆರೆದಿಟ್ಟಳು.

ಅದೂ ಕೂಡಾ ಆ ಮಹಿಳೆ ಬುದ್ಧಿಜೀವಿಗಳ ವರ್ಗದಲ್ಲಿ ಗುರುತಿಸಿಕೊಂಡ ಮಹಿಳೆಯಲ್ಲ. ಬದಲಿಗೆ ಗಂಡ, ಮಕ್ಕಳ ಸಂಸಾರವಿರುವ ಒಬ್ಬಳು ಸಾಮಾನ್ಯ ಮುಸ್ಲಿಂ ಮಹಿಳೆ. ಅದೂ ಕೂಡಾ ಆ ಮಹಿಳೆ ಗುಜರಾತ್ ರಾಜ್ಯಕ್ಕೆ ಸೇರಿದವಳು ಎನ್ನುವುದು ಇನ್ನೊಂದು ಆಸಕ್ತಿದಾಯಕ ವಿಷಯ. ಈಕೆಯ ಬಾಯಿಗಳಲ್ಲಿ ಸಹಜವೆಂಬಂತೆ ಬಂದ ಮಾತುಗಳು ಇಂದು ವೈರಲ್ ಆಗಿದೆ. ಜೊತೆಗೆ ಕಾಂಗ್ರೆಸ್‍ನ ನರಿಬುದ್ಧಿಯನ್ನು ಕಳಚಿಹಾಕಿದೆ.

ಇಂಡಿಯಾ ಟಿವಿಯ ಪತ್ರಕರ್ತರು ಗುಜರಾತ್ ವಿಧಾನಸಭಾ ಚುನಾವಣಾ ನಿಮಿತ್ತ ಜನಾಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿತ್ತು. ಮುಸ್ಲಿಮರಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ಯಾವ ಅಭಿಪ್ರಾಯವಿದೆ ಎನ್ನುವುದನ್ನು ಪತ್ತೆಹಚ್ಚಲು ಮಾಡಿದ ಕಾರ್ಯಕ್ರಮವಾಗಿತ್ತು. ಆದರೆ ಅಲ್ಲಿನ ಮಹಿಳೆಯೊಬ್ಬಳು ಕಾಂಗ್ರೆಸ್‍ನ ಹಣೆಬರಹವನ್ನು ಕಳಚಿಡುತ್ತಿದ್ದರೆ ಸ್ವತಃ ಪತ್ರಕರ್ತರೇ ತಬ್ಬಿಬ್ಬಾಗಿ ನೋಡುತ್ತಿದ್ದರು. ಈಕೆಯ ಮಾತುಗಳು ಇಂದು ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂದಹಾಗೆ ಆ ಮುಸ್ಲಿಂ ಮಹಿಳೆಯ ಅಭಿಪ್ರಾಯಗಳ ಪೂರ್ಣಪಾಠ ಇಲ್ಲಿದೆ…

`ನೀವು ಇನ್ನೊಂದು ದೇಶವನ್ನು ಖುಷಿಪಡಿಸಲು ನಮ್ಮ ದೇಶದ ವಿಭಜನೆಯನ್ನು ಮಾಡುತ್ತಿದ್ದೀರಿ. ನಾವೆಲ್ಲರೂ ಒಂದಾಗಿ ನಡೆದರೆ ದೇಶವು ಅಭಿವೃದ್ಧಿಗೊಳ್ಳುತ್ತದೆ. ನಿಮ್ಮ ಕಿಸೆ ತುಂಬಿಸಿದ ನಂತರ ಇನ್ನೊಬ್ಬನನ್ನು ಮುಂದೆ ತಂದೆ ದೇಶ ಒಡೆಯುತ್ತದೆಯೇ ಹೊರತು ಒಂದಾಗುವುದಿಲ್ಲ. ಇದು ಮುಸ್ಲಿಂ ಮಹಿಳೆ ಕೇಳಿರುವಂಥದ್ದು. ನೀವ್ಯಾಕೆ ದೇಶವನ್ನು ವಿಭಜನೆಗೊಳಿಸುವ ಬಗ್ಗೆ ಮಾತಾಡುತ್ತೀರಾ? ನಾವಂತೂ ಜಾತಿ ನಿರ್ಮೂಲನೆಗೊಳಿಸುವ ಬಗ್ಗೆ ಮಾತಾಡುತ್ತಿದ್ದೇವೆ. ನೀವ್ಯಾಕೆ ಜಾತೀವಾದವನ್ನು ಪ್ರಚೋದಿಸುತ್ತೀರಾ? ನಮ್ಮ ಗುಜರಾತ್ ವಿಕಸನಗೊಳ್ಳುತ್ತಿರುವುದುದ ನಿಮ್ಮಿಂದ ಸಹಿಸಲಾಗುತ್ತಿಲ್ಲ. ನಾವು ಅಲ್ಪಸಂಖ್ಯಾತರು ಆದರೆ ಯಾವತ್ತೂ ಸಮಸ್ಯೆ ಬರಲಿಲ್ಲ. ನಾವು ಯಾವುದೇ ಹೆದರಿಕೆಯಿಲ್ಲದೆ ರಾತ್ರಿ 1 ಗಂಟೆಗೆ ತಿರುಗುತ್ತೇವೆ. ನಮ್ಮ ಭಾರತ ಮುನ್ನಡೆಯುತ್ತಿರುವುದನ್ನು ನಿಮ್ಮಿಂದ ಸಹಿಸಲಾಗುತ್ತಿಲ್ಲ. ನಿಮ್ಮ ಪಕ್ಷ ಬೇರೆನೆ ನೀವು ತೋರಿಸುವ ಮುಖವೂ ಬೇರೇನೇ. ಆದರೆ ಹಿಂಬದಿಯಿಂದ ಚೂರಿ ಹಾಕುವವರು. ಭಾರತದ ಈಗಿನ ಅಜೆಂಡಾ `ಸಬ್ಕಾ ಸಾಥ್ ಸಬ್ಕಾ ವಿಕಾಸ್’. ಮತ್ಯಾಕೆ ನೀವು ಜಾತೀವಾದವನ್ನು ತಂದು ಹಿಂದಿನ ದಶಕಕ್ಕೆ ಕರೆದೊಯ್ಯುತ್ತಿದ್ದೀರಾ? ಮುನ್ನಡೆಯಿರಿ… ಯಾಕಿನ್ನು ಜಾತೀವಾದದ ಚಕ್ರವ್ಯೂಹದಲ್ಲಿ ಸಿಕಿಸುತ್ತಿದ್ದೀರಾ? ಎಲ್ಲಿಯವರೆಗೆ ನಾವು ಹಿಂದೂ ಮುಸ್ಲಿಂ ಎನ್ನುವ ಜಾತೀವಾದದ ಮಧ್ಯದಲ್ಲಿ ಸಿಕ್ಕಾಕಿಕೊಂಡಿರುವುದು?’

ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪಕ್ಷದ ಚಟುವಟಿಕೆಗಳು ಗರಿಗೆದರಿದೆ. ಕಳೆದ ಹಲವಾರು ವರ್ಷಗಳಿಂದ ಗುಜರಾತ್ ಬಿಜೆಪಿಯ ತೆಕ್ಕೆಯಲ್ಲಿದ್ದು, ಅಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ ವನ್ ಸ್ಥಾನದಲ್ಲಿದೆ. ಬಿಜೆಪಿಯನ್ನು ಸೋಲಿಸಿ ಹೇಗಾದರೂ ಮಾಡಿ ಕಾಂಗ್ರೆಸನ್ನು ಗೆಲ್ಲಿಸಲೇಬೇಕೆಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್ ಅದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಅದು ಗುಜರಾತ್ ಗಲಭೆ, ಇಶ್ರತ್ ಜಹಾನ್ ಎನ್‍ಕೌಂಟರ್, ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟು ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಲಾರಂಭಿಸಿತು.

ಗೋದ್ರಾ ಗಲಭೆಯನ್ನು ಮುಂದಿಟ್ಟು ಗುಜರಾತ್‍ನಲ್ಲಿ ಮುಸ್ಲಿಮರಿಗೆ ಇನ್ನು ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಮಾತ್ರವಲ್ಲದೆ ಅದು ಸಾಕಿಕೊಂಡು ಬರುತ್ತಿದ್ದ ಮಾಧ್ಯಮಗಳೆಲ್ಲಾ ಅಪಪ್ರಚಾರ ಮಾಡಲು ಶುರುಮಾಡಿದವು. ಇದೆಲ್ಲಾ ಗುಜರಾತ್‍ನಲ್ಲಿ ಪರಿಣಾಮ ಬೀರದಿದ್ದರೂ, ಭಾರತದಲ್ಲಿ ಹೊಸದೃಷ್ಟಿಕೋನದಲ್ಲಿ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ಸರಕಾರ ಮತ್ತೆ ಅಧಿಕಾರ ಹೊಂದದಂತೆ ಮಾಡಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತಲ್ಲದೆ ದೇಶದ ಅಭಿವೃದ್ಧಿ ಪಾತಾಳಕ್ಕೆ ಇಳಿಯಿತಲ್ಲದೆ ಬಹುಕೋಟಿ ಹಗರಣಗಳನ್ನು ನಡೆಸಿ ತನ್ನ ಕಿಸೆ ಭರ್ತಿ ಮಾಡಿತು. ಗೋದ್ರಾ ಪ್ರಕರಣವನ್ನು ಮುಂದಿಟ್ಟು ದೇಶದಲ್ಲೆಡೆ ಮುಸ್ಲಿಮರಲ್ಲಿ ಭಯಹುಟ್ಟಿಸಿದಲ್ಲದೆ ಬಿಜೆಪಿಯನ್ನು ಕ್ರೂರಿ ಎಂಬಂತೆ ಬಿಂಬಿಸಿತು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಜೈಲಿಗೆ ಕಳುಹಿಸಿತಲ್ಲದೆ ಅವರಿಬ್ಬರನ್ನು ನರಹಂತಕರೆಂದು ಇಲ್ಲಸಲ್ಲದ ಪ್ರಚಾರದಲ್ಲಿ ತೊಡಗಿದವು. ಸಂಘಪರಿವಾರದವರು ಗರ್ಭಿಣಿ ಮುಸ್ಲಿಂ ಮಹಿಳೆಯರ ಗರ್ಭವನ್ನು ತ್ರಿಶೂಲದಿಂದ ಸೀಳಿದರೆಂಬ ಭೀಭತ್ಸ ಕತೆಯನ್ನು ಹೆಣೆದರು.

ಇದೇ ಸಂದರ್ಭದಲ್ಲಿ ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣವನ್ನು ಮುಂದಿಟ್ಟಿತು. ಭಯೋತ್ಪಾದಕ ಸಂಘಟನೆಯ ಜತೆ ಸೇರಿ ದೇಶದಲ್ಲಿ ವಿಧ್ವಂಸಕ ಕೃತ್ಯ ತೊಡಗಿಕೊಂಡು, ಮೋದಿಯನ್ನು ಮುಗಿಸಲು ಯತ್ನಿಸಿದ್ದ ಇಶ್ರತ್‍ಳನ್ನು ಎನ್‍ಕೌಂಟರ್ ಮಾಡಿ ಮುಗಿಸಲಾಯಿತು. ಕಾಂಗ್ರೆಸಿಗರಿಗೆ ಆಕೆಯ ಎನ್‍ಕೌಂಟರ್ ಮುಂದೆ ದೇಶದ ಭದ್ರತೆ ಗೌಣವಾಯಿತು. ಈ ಪ್ರಕರಣವನ್ನು ಮುಂದಿಟ್ಟು ಮುಸ್ಲಿಮರನ್ನು ಉದ್ರೇಕಗೊಳಿಸಿ ಹಿಂದೂಗಳ ವಿರುದ್ಧ ಎತ್ತಿಕಟ್ಟಿತು. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಉಳಿಗಾಲವಿಲ್ಲ ಎಂಬ ಕಟ್ಟುಕತೆ ಹೆಣೆದರು. ಆದರೆ ಎಲ್ಲಾ ಪ್ರಕರಣಗಳಿಂದ ಕ್ಲೀನ್‍ಚಿಟ್ ಪಡೆದ ನರೇಂದ್ರ ಮೋದಿ ಪ್ರಚಂಡ ಬಹುಮತಗಳಿಂದ ಅಧಿಕಾರದ ಗದ್ದುಗೆಯನ್ನು ಹಿಡಿದೇ ಬಿಟ್ಟರು. ಗುಜರಾತ್‍ನಲ್ಲಿ ಬಿಜೆಪಿಯನ್ನು ಸೋಲಿಸಲು ತಿಪ್ಪೆರಲಾಗ ಬಾರಿಸಿದರೂ ಕಾಂಗ್ರೆಸಿಗರಿಗೆ ಸಾಧ್ಯವಾಗಲಿಲ್ಲ. ಇತ್ತ ಇಶ್ರತ್ ಜಹಾನ್ ನಮ್ಮ ತಂಡದ ಸದಸ್ಯೆ ಎನ್ನುವುದನ್ನು ಭಯೋತ್ಪಾದಕ ಡೇವಿಡ್ ಹೆಡ್ಲಿ ಒಪ್ಪಿಕೊಂಡು ಬಿಟ್ಟ. ಕಾಂಗ್ರೆಸ್‍ನ ಬಂಡವಾಳ ಕಳಚಿಬಿಟ್ಟಿತು.

ಇದರ ಹತಾಶೆಯಿಂದ ಪಟೇಲ್ ಸಮುದಾಯದ ಯುವಕರನ್ನು ಎತ್ತಿಕಟ್ಟಿ ಹಾರ್ದಿಕ್ ಪಟೇಲ್‍ನನ್ನು ಮುಂದಿಟ್ಟು ಒಂದಷ್ಟು ಸಂಘರ್ಷದಲ್ಲಿ ತೊಡಗುವಂತೆ ಮಾಡಿತು. ಆ ಬಳಿಕ ಜಿಗ್ನೇಶ್ ಮೇವಾನಿಯನ್ನು ಮುಂದಿಟ್ಟು ಊನಾ ಚಳುವಳಿಯ ಮೂಲಕ ಜನರನ್ನು ಒಡೆಯಲು ಆರಂಭಿಸಿತು. ಆರಂಭದಲ್ಲಿ ಗುಜರಾತ್ ಜನರು ನಂಬಿಬಿಟ್ಟರು. ಆದರೆ ಇವರೆಲ್ಲರ ಪ್ರತಿಭಟನೆ ಕೇವಲ ಬೂಟಾಟಿಕೆ ಎಂಬ ಜ್ಞಾನೋದಯವಾದ ಗುಜರಾತಿಗರು ಅದರಿಂದಲೂ ದೂರ ಉಳಿದರು. ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಇವರೆಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ತಾಳಕ್ಕೆ ತಕ್ಕಂತೆ ಕುಣಿಯುವ ಸೂತ್ರದ ಗೊಂಬೆಗಳು ಎಂದು ರಾಷ್ಟ್ರೀಯ ಸುದ್ದಿಮಾಧ್ಯಮಗಳು ಸಾಕ್ಷಿ ಸಮೇತ ಬಯಲುಗೊಳಿಸಿರುವುದರಿಂದ ಇವರ ಅಸಲಿತ್ತು ಕೂಡಾ ಕಳಚಿಬಿದ್ದಿತು.

ಬಿಜೆಪಿ ಅಧಿಕಾರಕ್ಕೆ ಬಂದಾಗ ಇಲ್ಲದ ಅಸಹಿಷ್ಣುತೆ ಶುರುವಾಯಿತು. ಇದು ಎಲ್ಲಿಯರವೆಗೆ ಮುಂದುವರಿಯಿತು ಎಂದರೆ ಕಾಂಗ್ರೆಸಿಗರು ಸ್ವತಃ ಭಯೋತ್ಪಾದಕರ ಬೆಂಬಲವಾಗಿ ನಿಂತು ಮುಸ್ಲಿಮರನ್ನು ಓಲೈಸತೊಡಗಿದರು. ಕೊನೆಗೆ ಇದು ಪಾಕಿಸ್ತಾನ್ ಜಿಂದಾಬಾದ್ ಎನ್ನುವಷ್ಟರವರೆಗೆ ಮುಂದುವರಿಯಿತು. ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ಕೊಡಬೇಕು ಎಂದು ಬೊಬ್ಬಿಟ್ಟರು. ಇದಾದಗದಿದ್ದಾಗ ತಾನೇ ಫೊಷಿಸಿ ಬೆಳೆಸಿದ ಸಾಹಿತಿ, ಚಿತ್ರನಟರನ್ನು ಮುಂದೆ ತಂದು ಅವರಿಂದ ಹೇಳಿಕೆ ಕೊಡಿಸಿದರು. ಪ್ರಶಸ್ತಿಗಳೆಲ್ಲಾ ವಾಪಸಾದವು. ದೇಶದ ಸೈನಿಕರನ್ನು ಬಲಾತ್ಕಾರಿಗಳು, ಮುಸ್ಲಿಂ ಪೀಡಕರು ಎಂದು ಹೇಳಲೂ ಕಾಂಗ್ರೆಸಿಗರು ಹಿಂದೇಟು ಹಾಕಲಿಲ್ಲ. ಹಿಂದೂ ಮುಸ್ಲಿಮರನ್ನು ಪ್ರತ್ಯೇಕಿಸಿದ ನಂತರ ಜಾತಿಗೆ ಕೈ ಹಾಕಿದರು. ಹಿಂದುಳಿದವರ, ಅಲ್ಪಸಂಖ್ಯಾತರ, ದಲಿತರ ತಲೆಕೆಡಿಸಿ ಅವರನ್ನು ಬ್ರಾಹ್ಮಣರ ವಿರುದ್ಧ ಎತ್ತಿಕಟ್ಟಿದರು. ಮೀಸಲಾತಿ ಕೊಡಿಸಿ ಎಂದು ಬೀದಿಗಿಳಿಯುವಂತೆ ಪುಂಡಾಟಿಕೆ ಮೆರೆದರು. ಇದು ಮುಂದುವರಿದು ಕರ್ನಾಟಕದಲ್ಲಿ ವೀರಶೈವ, ಲಿಂಗಾಯತರು ಮತ್ತು ಹಿಂದೂಗಳನ್ನು ಕಚ್ಚಾಟ ನಡೆಸುವಂತೆ ನೋಡಿಕೊಂಡರು. ಮೊದಮೊದಲೆಲ್ಲಾ ಕಾಂಗ್ರೆಸಿಗರ ಈ ಬೀದಿನಾಟಕಗಳನ್ನು ನೋಡಿ ಸತ್ಯವೆಂದು ನಂಬುತ್ತಿದ್ದವರು ಆಮೇಲೆ ಅದರ ಸತ್ಯವನ್ನು ಅರ್ಥಮಾಡಿಕೊಂಡು ಇಂದು ಇಡೀ ದೇಶದಲ್ಲಿ ಕಾಂಗ್ರೆಸ್‍ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ನಮಗೆಲ್ಲಾ ಉಳಿಗಾಲ ಇಲ್ಲ ಎಂದು ನಂಬುತ್ತಿದ್ದ ಮುಲ್ಲಾ ಇಂದು ನೆಮ್ಮದಿಯಿಂದ ಬದುಕುತ್ತಿದ್ದಾನೆ. ಮೋದಿಯ ಯೋಜನೆಗಳಿಂದ ತೃಪ್ತಿ ಅನುಭವಿಸುತ್ತಿದ್ದಾನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂಘಪರಿವಾರದ ಯುವಕರು ಮುಸ್ಲಿಮರ ಮನೆಗೆ ನುಗ್ಗಿ ದಾಂಧಲೆ ನಡೆಸುತ್ತಾರೆ ಎಂದು ಇದುವರೆಗೆ ನಂಬುತ್ತಿದ್ದ ಹಸೀನಾ ಬಾನು ಅದೆಲ್ಲಾ ಸುಳ್ಳೆಂದು ನಂಬಿ ನೆಮ್ಮದಿಯ ಉಸಿರಾಡುತ್ತಿದ್ದಾಳೆ. ಇಂದು ದೇಶದಲ್ಲಿ ಸುಭೀಕ್ಷೆ ನೆಲೆಸಿದ್ದು ಯಾರಿಗೂ ಯಾರಿಂದಲೂ ನೋವಾಗುತ್ತಿಲ್ಲ. ದೇಶ ನೋಟುಬ್ಯಾನ್ ಎದುರಿಸುತ್ತಿದ್ದಾಗ ಯಾವ ಮುಸ್ಲಿಮನೂ ವಿರೋಧಿಸಲಿಲ್ಲ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ನೀತಿಯಿಂದ ಇಡೀ ದೇಶಕ್ಕೆ ದೇಶವೇ ಬೆಳೆಯುತ್ತಿದೆ. ದೇಶದಲ್ಲಿ ಸಮಷ್ಠಿ ಏಕತಾಭಾವ ಮೂಡುತ್ತಿದೆ.

ಒಬ್ಬಳು ಸಾಮಾನ್ಯ ಮಹಿಳೆಯೊಬ್ಬಳು ಬಿಜೆಪಿ ಸರಕಾರವನ್ನು ಇಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಎಂದರೆ ಕುತಂತ್ರಿಗಳು ಯಾರು ಎನ್ನುವುದು ಕೊನೆಗೂ ಕಳಚಿಬಿದ್ದಿದೆ. ಇದಕ್ಕೆ ಗುಜರಾತ್ ಮಹಿಳೆಯೊಬ್ಬಳು ಸ್ವಗತ ಎಂಬಂತೆ ಹೇಳಿದ ಹೇಳಿಕೆಯೇ ಸಾಕ್ಷಿ ಒದಗಿಸುತ್ತದೆ. ಹಿಂದೂ ಮುಸ್ಲಿಮರು ಒಟ್ಟಾಗಿ ಸಾಗಿ ದೇಶವನ್ನು ಪ್ರಪಂಚದಲ್ಲೇ ಪ್ರಚಂಡ ರಾಷ್ಟ್ರವನ್ನಾಗಿ ಮಾಡಬೇಕೆನ್ನುವುದು ಮೋದಿಯವರ ಕನಸು. ಅದಕ್ಕಾಗಿ ಅವರ ಹಿಂದೆ ಪ್ರತಿಯೊಬ್ಬರೂ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ದೇಶವಿಭಜನೆಯ ಕಾರ್ಯದಲ್ಲಿ ತಲ್ಲೀನವಾಗಿದೆ. ಯಾರಾದರೂ ಅಪಪ್ರಚಾರ ಮಾಡಿದರೆ ಮೋದಿಯಂತೂ ಮಾತಾಡುವುದೇ ಇಲ್ಲ. ಬದಲಿಗೆ ಅಪಪ್ರಚಾರ ಮಾಡಿದವರನ್ನು ಜನರೇ ಮುಂದೆ ನಿಂತು ಅವರ ಜನ್ಮ ಜಾಲಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಜನರು ಯಾವ ಮೀಡಿಯಾದ ಹಿಂದೆಯೂ ಹೋಗುತ್ತಿಲ್ಲ. ಬದಲಿಗೆ ಅವರು ಬಳಸುತ್ತಿರುವ ಜಾಲತಾಣದಲ್ಲೇ ವಿರೋಧಿಗಳ, ಸುಳ್ಳುಗಾರರ ಬಂಡವಾಳವನ್ನು ಬಯಲು ಮಾಡುತ್ತಲೇ ಇದ್ದಾರೆ…

ಅದಕ್ಕೇ ಹೇಳುವುದು ಸತ್ಯ ಎನ್ನುವುದು ಯಾವಾಗಲೂ ಸತ್ಯವೇ.. ಸುಳ್ಳಿನ ಮುಖವಾಡ ಒಂದಲ್ಲಾ ಒಂದು ದಿನ ಕಳಚಿ ಬೀಳುವುದು ಗ್ಯಾರಂಟಿ. ಕಾಂಗ್ರೆಸ್‍ನ ಸುಳ್ಳಿನ ಮುಖ ಕೊನೆಗೂ ಕಳಚಿಬಿದ್ದಿದೆ.

-ಚೇಕಿತಾನ

Tags

Related Articles

Close