ಪ್ರಚಲಿತ

ಈ ರಾಜಕೀಯ ಚಾಣಕ್ಯನ ಹೆಸರು ಕೇಳಿದರೆ ವಿಪಕ್ಷಗಳಿಗೆ ನಡುಕ ಹುಟ್ಟುವುದ್ಯಾಕೆ ಗೊತ್ತೇ?!

ಅಮಿತ್ ಶಾ… ರಾಜಕೀಯ ಚಾಣಾಕ್ಯ. ಗುರಾತಿನ ನೆಲದಲ್ಲಿ ಹುಟ್ಟಿ, ವಿರೋಧಿಗಳ ಬೆವರಿಳಿಸಿ, ತನ್ನೆಲ್ಲಾ ರಾಜಕೀಯ ತಂತ್ರಗಳಲ್ಲಿ ಯಶಸ್ವಿಯಾಗಿ, ನರೇಂದ್ರ
ಮೋದಿಯವರ ಕನಸಿನ ಭಾರತದ ರಥಕ್ಕೆ ಸಾರಥಿಯಾಗಿ ರಾಷ್ಟ್ರ ರಾಜಕಾರಣದಲ್ಲೂ ಸೈ ಎನಿಸಿಕೊಂಡಿರುವ ನಾಯಕ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದು ಗುಜರಾತ್‍ನ ಮುಖ್ಯ,ಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಅಮಿತ್ ಶಾ ರಿಗೆ ಪ್ರಚಾರದ ಸಾರಥ್ಯ ವಹಿಸಲಾಗಿತ್ತು.

ಅದ್ಯಾವಾಗ ಅಮಿತ್ ಶಾ ರಿಗೆ ಪ್ರಚಾರದ ಹೊಣೆಯನ್ನು ನೀಡಲಾಯಿತೋ ಅಂದೇ ಕಾಂಗ್ರೆಸ್ ಮುಕ್ತ ಭಾರತದ ಪರಿಕಲ್ಪನೆ ಮೂಡಿಬಿಟ್ಟಿತು. ಶತಾಯ ಗತಾಯ
ನರೇಂದ್ರ ಮೋದೀಜಿಯನ್ನು ಈ ಬಾರಿ ಪ್ರಧಾನಿಯನ್ನಾಗಿಸೋ ಮೂಲಕ ಕಾಂಗ್ರೆಸನ್ನು ಮಣ್ಣುಮುಕ್ಕಿಸುವ ತಂತ್ರವನ್ನು ಹೆಣೆದೇ ಬಿಟ್ಟಿದ್ದರು. ಇದಕ್ಕೆ ಅವರು ಘೋಷಿಸಿದ ಮೊದಲ ಕಹಳೆ ಭಾರತೀಯ ಜನತಾ ಪಾರ್ಟಿಯ ಮಿಷನ್ 272+…

ತನ್ನ ರಾಜಕೀಯ ಚಾಣಾಕ್ಷತೆಯನ್ನು ಸಂಪೂರ್ಣವಾಗಿ ಧಾರೆಎರೆದು ಚುನಾವಣಾ ಅಖಾಡಕ್ಕೆ ಧುಮುಕಿಯೇ ಬಿಟ್ಟಿದ್ದರು ಅಮಿತ್ ಜೀ. ಮೋದೀಜಿಯ ಸಂಪೂರ್ಣ
ರಾಜಕೀಯದ ಐಡಿಯಾಗಳನ್ನು ಸಿದ್ಧಪಡಿಸಿದರು. ಮೋದೀಜೀ ಎಲ್ಲಿಗೆ ಹೋಗಬೇಕು, ಎಲ್ಲಿ ಭಾಷಣ ಮಾಡಬೇಕು, ಅಲ್ಲಿ ಎಷ್ಟು ಜನ ಸೇರುತ್ತಾರೆ, ಒಂದು ದಿನದಲ್ಲಿ ಎಷ್ಟು ಕಡೆ ಭಾಷಣ ಮಾಡಬೇಕು ಹೀಗೆ ಪ್ರತಿಯೊಂದು ವಿಚಾರದಲ್ಲೂ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದರು. ಲೋಕಸಭೆ ಚುನಾವಣೆಗಳಲ್ಲಿ ಮೋದೀಜೀ ಬರೋಬ್ಬರಿ 300ಕ್ಕಿಂತಲೂ ಅಧಿಕ ಕಡೆಗಳಲ್ಲಿ ತಲಾ ಒಂದು ಕಡೆಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿಯನ್ನುದ್ಧೇಶಿಸಿ ಮಾತನಾಡಿದ್ದರು. ಇದರ ಹಿಂದೆ ಅಮಿತ್ ಶಾ ಎನ್ನುವ ರಾಜಕೀಯ ಪರಿಣಿತನ ಕೈಚಳಕ ಕೆಲಸ ಮಾಡುತ್ತಿತ್ತು.

ನರೇಂದ್ರ ಮೋದೀಜೀ ಕಾಂಗ್ರೆಸನ್ನು ಸರ್ವನಾಶ ಮಾಡಲು ಹೊರಟಿರುವ ಯಮನಾದರೆ, ಎಲ್ಲೆಲ್ಲಿ ಯಾವ್ಯಾವ ಬಾಣಗಳನ್ನು ಹೂಡಬೇಕು ಎಂಬ ಪ್ಲಾನಿಂಗ್
ಹಾಕಿಕೊಡುತ್ತಿದ್ದ ಚಿತ್ರಗುಪ್ತರಾಗಿದ್ದರು ಅಮಿತ್ ಶಾ. ಮೋದೀಜಿ ಕಾಂಗ್ರೆಸನ್ನು ಮಣಿಸಿ ಧರ್ಮವನ್ನು ಗೆಲ್ಲಿಸಲು ರಣರಂಗಕ್ಕಿಳಿದ ಅರ್ಜುನನಂತೆ ಕಂಡರೆ, ಅಮಿತ್ ಶಾ ಆ ಯುದ್ಧವನ್ನು ಯಾವ ರೀತಿ ಎದುರಿಸಬೇಕು, ಯಾವ್ಯಾವ ಬಾಣಗಳನ್ನು ಪ್ರಯೋಗಿಸಬೇಕು ಎಂದು ನಿರ್ಧೇಶಿಸುವ ಶ್ರೀ ಕೃಷ್ಣನಂತೆ ಕಂಡಿದ್ದರು.

ಹೀಗೆ ಪ್ರಚಾರ ನಡೆಸಿ, ಚುನಾವಣೆಗಳನ್ನು ನಾಜೂಕಾಗಿ ಎದುರಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಸಂದರ್ಭ.

ದೇಶ ಮಾತ್ರವಲ್ಲದೆ ಜಗತ್ತೇ ಭಾರತದ ಈ ಧರ್ಮಯುದ್ಧವನ್ನು ಕಾತರದಿಂದ ಕಾಯುತ್ತಿತ್ತು. ಅದೋ ಬಂತು ನೋಡಿ. ಮತ ಎಣಿಕೆ ಆರಂಭವಾಗಿದ್ದಿನಿಂದ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸುತ್ತಾ ಅಮಿತ್ ಶಾ ರ 272+ ಕನಸಿನ ಬೇಲಿಯನ್ನ ದಾಟಿ 382ರ ಗಡಿ ಜಮುಟ್ಟಿಯೇ ಬಿಟ್ಟಿತ್ತು. ಮೈತ್ರಿಕೂಟದ ಅವಶ್ಯಕತೆಯೇ ಇಲ್ಲದೆ ಸಲೀಸಾಗಿ ಸರ್ಕಾರ ಮಾಡುವಷ್ಟು ಬಹುಮತವನ್ನು ಜನತೆ ಕೊಟ್ಟಿಯೇ ಬಿಟ್ಟದ್ದರು. ನರೇಂದ್ರ ಮೋದೀಜಿ ಪ್ರಧಾನಿ ಪಟ್ಟಕ್ಕೇರುವ ಸಮಯಕ್ಕೆ ಕ್ಷಣಗಣನೆ ಆರಂಭವಾಗಿ ಬಿಟ್ಟಿತ್ತು. ಅಂದುಕೊಂಡಂತೆ ನಮ್ಮ ಹೆಮ್ಮೆಯ ಅಭಿನವ ನರೇಂದ್ರನಾಥ ಸಂಸತ್ ಬಳಿ ಬಂದು, ಸಂಸತ್‍ಗೆ ಅಡ್ಡ ಬಿದ್ದು, ಹಣೆಯನ್ನು ನೆಲಕ್ಕೊತ್ತಿ ಸಂಸತ್ತನ್ನು ಪ್ರವೇಶಿಸಿಬಿಟ್ಟಿದ್ದರು. ಅಲ್ಲಿಗೆ ದೇಶ ದಾಸ್ಯದ ಬಂಧನದಿಂದ ಹೊರಗೆ ಬಂದು ಬಿಟ್ಟಿತ್ತು.

ಅದೊಂದು ಐತಿಹಾಸಿಕ ದಿನ. ಇತಿಹಾಸದಲ್ಲೇ ಮರೆಯಲಾಗದ ದಿನ. ಯಾವ ಕಾಂಗ್ರೆಸ್ ಅನ್ನುವ ಪಕ್ಷ 60 ವರ್ಷದಿಂದ ದೇಶವನ್ನು ಲೂಟಿಗೈದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿತ್ತೋ, ಯಾವ ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳಿಗೆ ಬೆಂಬಲ ನೀಡಿ ಭಯೋತ್ಪಾದನೆಗೆ ಸಹಕಾರ ನೀಡಿತ್ತೋ, ಯಾವ ಕಾಂಗ್ರೆಸ್ ಪಕ್ಷ ತನ್ನ ಧರ್ಮವನ್ನೇ ನಂಬಿದ್ದ ಹಿಂದೂಗಳ ಭಾವನೆಗೆ ಧಕ್ಕೆ ತಂದು ಮತಾಂಧರ ಓಟಿನ ಓಲೈಕೆಗೆ ಮುಂದಾಗಿತ್ತೋ, ಯಾವ ಕಾಂಗ್ರೆಸ್ ಪಕ್ಷ ಸಾಲು ಸಾಲು ಹಗರಣಗಳಿಂದ ದೇಶವನ್ನು ಹರಾಜು ಹಾಕಲು ಮುನ್ನುಡಿಯಿಟ್ಟಿತ್ತೋ, ಯಾವ ಕಾಂಗ್ರೆಸ್ ಪಕ್ಷ ವಂಶ ಪಾರಂಪರಿಕ ಆಡಳಿತದಿಂದ ಜನರನ್ನು ಮೋಸಗೊಳಿಸುತ್ತಿತ್ತೋ, ಅದೇ ಕಾಂಗ್ರೆಸ್ ಪಕ್ಷ ಲೋಕ ಸಭೆಯಲ್ಲಿ ಕನಿಷ್ಠ ವಿಪಕ್ಷ ಸ್ಥಾನವನ್ನೂ ಪಡೆಯಲಾಗದ ಸ್ಥಿತಿಗೆ ತಲುಪಿಬಿಟ್ಟಿದ್ದ ಐತಿಹಾಸಿಕ ದಿನ. ದುಷ್ಟರ ಆಡಳಿತದಿಂದ ರೋಸಿ ಹೋಗಿ ಜನತೆ ನಿಟ್ಟುಸಿರು ಬಿಟ್ಟ ದಿನ. ಅಧರ್ಮ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಧರ್ಮವನ್ನು ಎತ್ತಿಹಿಡಿದ ದಿನವದು.

ಅಮಿತ್ ಶಾ ರವರ ಚುನಾವಣಾ ತಂತ್ರಗಾರಿಕೆಯನ್ನು ನೋಡಿ ವಿಪಕ್ಷಗಳು ಬೆಚ್ಚಿಬಿದ್ದಿದ್ದವು. ಬಾಲ ಮಡಚಿ ತೆಪ್ಪಗೆ ಕುಳಿತುಕೊಂಡುಬಿಟ್ಟಿದ್ದವು. ಬುದ್ಧಿಜೀವಿಗಳ ಮಾತು ಹೊರಗೆ ಬರಲೇ ಇಲ್ಲ. ದೇಶದ ಸಮಸ್ತ ಯುವಕರು ನಾವು ಮೋದೀಜೀಯೊಂದಿಗೆ ಇದ್ದೇವೆ ಎಂದು ನಿರೂಪಿಸಿಬಿಟ್ಟದ್ದರು.

ಅಲ್ಲಿಯವರೆಗೆ ಕೇವಲ ಮೋದಿಯ ಬಂಟನಾಗಿದ್ದ ಅಮಿತ್ ಶಾ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಾರಥ್ಯವನ್ನು ಹಿಡಿದು ಬಿಟ್ಟಿದ್ದರು. ರಾಜನಾಥ್ ಸಿಂಗ್ ರ
ಸ್ಥಾನದಿಂದ ತೆರವಾಗಿದ್ದ ಭಾಜಪಾ ದ ರಾಷ್ಟ್ರೀಯ ಅಧ್ಯಕ್ಷನ ಗದ್ದುಗೆಗೆ ಏರಿಯೇ ಬಿಟ್ಟರು ಅಮಿತ್ ಶಾ. ಸಹಜವಾಗಿ ದೇಶವನ್ನು ಲೂಟಿಗೈದ ಪಕ್ಷಗಳಿಗೆ ನಡುಕವಾಗಿಯೇ ಬಿಟ್ಟಿತ್ತು. ಎದ್ನೋ ಬಿದ್ನೋ ಎಂಬಂತೆ ಕಂಗಾಲಾಗಿ ಅಮಿತ್ ಶಾ ವಿರುದ್ಧ ದಾಳಿ ಮಾಡಲು ಆರಂಭಿಸಿದರು. ಆದ್ರೆ ಚಾಣಾಕ್ಯ ಜಗ್ಗಲೇ ಇಲ್ಲ ನೋಡಿ. ಎಲ್ಲಾ ಸವಾಲುಗಳನ್ನು ಎದುರಿಸಿ ತನ್ನ ವಿರಾಟ ದರ್ಶನವನ್ನು ವಿಪಕ್ಷಗಳಿಗೆ ತೋರಿಸಿಯೇ ಬಿಟ್ಟಿದ್ದರು.

ನಂತರ ನಡೆದಿದ್ದೇ ಪವಾಡ. ಶುರುವಾಯ್ತು ಅಮಿತ್ ಶಾ ರ ಜನಸಂಪರ್ಕ ಯಾತ್ರೆ. ಮೂಲೆ ಮೂಲೆಗೂ ಸಂಚರಿಸಿದರು. ಪಕ್ಷಗಳನ್ನು ಸಂಘಟಿಸಿದರು. ಅವರ
ಅಧ್ಯಕ್ಷೀಯ ಮೊದಲ ಅವಧಿಯಲ್ಲೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸುತ್ತಿ ಕಾರ್ಯಪ್ರವೃತ್ತರಾದರು. ನಿತ್ಯ 495 ಕಿಲೋ ಮೀಟರ್‍ನಂತೆ ಒಟ್ಟು 2,65,600 ಕಿಲೋ ಮೀಟರ್ ದೇಶ ಸುತ್ತಿ ಪಕ್ಷ ಸಂಘಟಿಸಿದ್ದರು. ಶಾ ಅಧ್ಯಕ್ಷರಾಗುವಾಗ 3 ಕೋಟಿಗಿಂತ ಕಡಿಮೆ ಇದ್ದ ಭಾಜಪಾ ಸದಸ್ಯರು ತನ್ನ ಅವಧಿಯಲ್ಲಿ 11 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಏರಿಸಿಬಿಟ್ಟಿದ್ದರು. ಈ ಮೂಲಕ ವಿಶ್ವದ ಅತಿ ದೊಡ್ಡ ಪಕ್ಷ ಎನ್ನುವ ಕೀರ್ತಿಗೆ ಭಾರತೀಯ ಜನತಾ ಪಕ್ಷ ಪಾತ್ರವಾಯಿತು. ಈ ಸಾಧನೆಗೆ ಅಮಿತ್ ಶಾ ನೇರ ಕಾರಣರಾದರು.

ಮೊದಲ ಅವಧಿಯಲ್ಲಿ ಅವರಿಗೆ ಎದುರಾಗಿದ್ದು 6 ರಾಜ್ಯಗಳ ಚುನಾವಣೆ. ಅಮಿತ್ ಶಾ ದಂಡೆತ್ತಿ ಬರುತ್ತಾರೆಂದರೆ ಎದುರಾಳಿಗಳಿಗೆ ಎಲ್ಲಿಲ್ಲದ ನಡುಕ ಆರಂಭವಾಗುತ್ತದೆ. ಹೀಗೆ 6 ಚುನಾವಣೆಗಳಲ್ಲೂ ತನ್ನ ಸಾಮಥ್ರ್ಯವನ್ನು ಬಳಸಿ 4 ರಾಜ್ಯಗಳನ್ನು ತನ್ನದಾಗಿರಿಸಿಕೊಂಡರು. ಅಚ್ಚರಿಎಂಬಂತೆ ಭಯೋತ್ಪಾದಕರ ಅಟ್ಟಹಾಸದಿಂದ ಬಳಲುತ್ತಿದ್ದ ಜಮ್ಮು ಕಾಶ್ಮೀರದಲ್ಲೂ ಕೇಸರಿ ಪಡೆ ಸರ್ಕಾರ ರಚಿಸಲು ನಿರ್ಣಾಯಕ ಪಕ್ಷವಾಗಿ ಹೊರಹೊಮ್ಮಿತ್ತು. ಮಹಾರಾಷ್ಟ್ರ, ಹರ್ಯಾಣ, ಜಮ್ಮು ಕಾಶ್ಮೀರ, ಝಾರ್ಖಾಂಡ್, ಅಸ್ಸಾಮ್, ಉತ್ತರ ಪ್ರದೇಶ, ಮಣಿಪುರ,ಬಿಹಾರ ಹೀಗೆ ಹಲವು ರಾಜ್ಯಗಳಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದ್ದರು.

18 ತಿಂಗಳು ತನ್ನ ಮೊದಲ ಅಧ್ಯಕ್ಷಗಿರಿಯ ಅಧಿಕಾರವನ್ನು ಮುಗಿಸಿ 2ನೇ ಬಾರಿಯೂ ಅವಿರೋಧವಾಗಿ ಆಯ್ಕೆಯಾದರು. ಮತ್ತೆ ಹಲವಾರು ಸವಾಲುಗಳಿದ್ದವು.
ಪಂಚರಾಜ್ಯದ ಚುನಾವಣೆಗಳು ಅವರಿಗೆ ಎದುರಾದವು. ಅದರಲ್ಲಿ ಮುಖ್ಯವಾಗಿದ್ದುದು ಉತ್ತರ ಪ್ರದೇಶದ ಚುನಾವಣೆ. ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ
ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲೇ ಬೇಕು ಎಂಬ ಪಣತೊಟ್ಟ ಅಮಿತ್ ಶಾ ಭರ್ಜರಿಯಾಗಿ ಅಖಾಡಕ್ಕಿಳಿದ್ದರು. 403 ಕ್ಷೇತ್ರಗಳಲ್ಲೂ ತನ್ನ ಛಾಪನ್ನು
ಮೂಡಿಸಿದ್ದರು. ಪರಿಣಾಮ ಅಲ್ಲಿ ಆಳುತ್ತಿದ್ದ ಸಮಾಜವಾದಿ ಪಕ್ಷ ನೆಲಕಚ್ಚಿ ಹೋಯ್ತು. 300ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಯೋಗಿ ಆದಿತ್ಯನಾಥ್
ಮುಖ್ಯಮಂತ್ರಿಯಾದರು. ಭಾರತದ ಇತಿಹಾಸದಲ್ಲೇ ಓರ್ವ ಮಠಾಧಿಪತಿ, ಮುಖ್ಯಮಂತ್ರಿ ಸ್ಥಾನದ ಗದ್ದುಗೆಯೇರಿ ಕುಳಿತು ಬಿಟ್ಟಿದ್ದರು. ಇದೆಲ್ಲಾ ಅಮಿತ್ ಶಾ ರ
ಮಾಸ್ಟರ್ ಪ್ಲಾನ್ ಎಂಬುವುದು ಗುಟ್ಟಾಗಿ ಉಳಿದಿಲ್ಲ.

ಕರ್ಣಾಟಕಕ್ಕೆ ಲಗ್ಗೆಯಿಟ್ಟಿದ್ದಾರೆ ಬಿಜೆಪಿ ಚಾಣಾಕ್ಯ…

ಕಳೆದ ನಾಲ್ಕೂವರೆ ವರ್ಷಗಳಿಂದ ಅರಾಜಕತೆಯಿಂದ ಕಂಗೆಟ್ಟುಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ತನ್ನ ಕೆಟ್ಟ ಆಡಳಿತದಿಂದ ಜನರು ಬೇಸತ್ತು ಹೋಗಿದ್ದು, ಅದನ್ನು ಲೋಕಸಭಾ ಚುನಾವಣೆಯಲ್ಲೂ, ನಂತರ ನಡೆದ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವುದರ ಮೂಲಕ ಜನತೆ ಬಿಜೆಪಿ ಆಡಳಿತಕ್ಕೆ ಮುನ್ನುಡಿಯಿಟ್ಟಿದ್ದರು. ನಿರೀಕ್ಷೆಯಂತೆಯೇ ಅಮಿತ್ ಶಾ ಕರ್ಣಾಟಕ ವಿಧಾನ ಸಭಾ ಚುನಾವಣೆಗೆ ಲಗ್ಗೆಯಿಟ್ಟಿದ್ದಾರೆ. ಅದ್ಯಾವಾಗ ಕರುನಾಡಿಗೆ ಅಮಿತ್ ಶಾ ರ ಆಗಮನವಾಗುತ್ತೋ ಆವಾಗೆಲ್ಲ ಸಿಎಂ ಸಿದ್ಧರಾಮಯ್ಯಗೆ ಹೆದರಿಕೆ ಆರಂಭವಾಗುತ್ತದೆ. ಅಮಿತ್ ಶಾ ಅಲ್ಲ ಯಾರು ಬಂದ್ರೂನು ನಾನು ಹೆದರಲ್ಲ ಎಂದು ಬೆವರೊರೆಸುತ್ತಾ ಹೇಳಿಕೆ ಕೊಡುತ್ತಿದ್ದಾರೆ ಮುಖ್ಯಮಂತ್ರಿಗಳು.

ಅಮಿತ್ ಶಾ ಕರ್ನಾಟಕದಲ್ಲಿ ಮಿಷನ್ 150 ಗೆ ಈಗಾಗಲೆ ಚಾಲನೆ ಕೊಟ್ಟಿದ್ದಾರೆ. ರಾಜ್ಯ ಕಾಂಗೆಸ್ ಅದೆಷ್ಟು ತಂತ್ರವನ್ನು ಹೂಡಿದ್ರೂ, ಅಮಿತ್ ಶಾ ಒಡ್ಡುವ ಪ್ರತಿತಂತ್ರಕ್ಕೆ ಕಾಂಗ್ರೆಸ್ ಶರಣಾಗಲೇ ಬೇಕು. ಕಾಂಗ್ರೆಸ್ ಮಣಿಸಲು ಅಮಿತ್ ಶಾ ರ ಬತ್ತಳಿಕೆಯಲ್ಲಿ ಯಾವೆಲ್ಲಾ ಅಸ್ತ್ರಗಳಿವೆ ಎಂದು ಸ್ವತಃ ರಾಜ್ಯ ಬಿಜೆಪಿಗರಿಗೇ ಗೊತ್ತಿಲ್ಲ. ಅಷ್ಟೊಂದು ತಂತ್ರಗಾರಿಕೆಯಲ್ಲಿ ತಂತ್ರಹೂಡುತ್ತಿದ್ದಾರೆ ಅಮಿತ್ ಶಾ. ಆದರೆ ಅಮಿತ್ ಶಾ ರನ್ನು ಸದಾ ಬಯ್ಯುವ ಮೂಲಕ ಕಾಂಗೆಸಿಗರು ಅಮಿತ್ ಜಪ ಮಾಡುತ್ತಿರುವುದಂತು ಸುಳ್ಳಲ್ಲ.

-ಸುನಿಲ್

Tags

Related Articles

Close