ಅಂಕಣದೇಶಪ್ರಚಲಿತ

ಉಗ್ರರ ಜೊತೆಗಿನ ನಂಟು ಹೊಂದಿದ್ದ ಒಬ್ಬ ಶಕ್ತಿಶಾಲಿ ರಾಜಕಾರಣಿಯನ್ನು ಕಾಲೊನೆಲ್ ಪುರೋಹಿತ್ ಬೆಟ್ಟು ಮಾಡಿ ತೋರಿಸಿದ ಮರುಕ್ಷಣವೇ ಆತನನ್ನು ಜೈಲಿಗಟ್ಟಲಾಯಿತು! ಆ ರಾಜಕಾರಣಿ ಯಾರು ಗೊತ್ತೇ?

ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ 2008ರ ಮಾಲೇಗಾಂವ್ ಸರಣಿ ಸ್ಫೋಟದ ಆರೋಪಿಯೆಂದೆನಿಸಿಕೊಂಡಿರುವ ಸೇನಾಧಿಕಾರಿ ಲೆ| ಕ| ಶ್ರೀಕಾಂತ್ ಪ್ರಸಾದ್
ಪುರೋಹಿತ್‍ಗೆ, ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 21ರಂದು ಟಾಲೋಜಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಜೈಲು ಸೇರಿದ್ದ ಲೆ. ಕರ್ನಲ್ ಪುರೋಹಿತ್‍ಗೆ 9 ವರ್ಷಗಳ ನಂತರ
ಸುಪ್ರೀಂಕೋರ್ಟ್ ಸೋಮವಾರ ಜಾಮೀನು ನೀಡಿತ್ತು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಟಾಲೋಜಾ ಜೈಲಿನಿಂದ ಪುರೋಹಿತ್ ಬಿಡುಗಡೆಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಿಡುಗಡೆಗೊಂಡ ನಂತರ ತನ್ನ ಕುಟುಂಬದೊಂದಿಗೆ ಸಮಯ ಕಳೆಯದೇ ಸಮವಸ್ತ್ರವನ್ನು ಧರಿಸಿಕೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಲೆ| ಕ| ಶ್ರೀಕಾಂತ್ ಪ್ರಸಾದ್ ಪುರೋಹಿತ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಕೂಡ. ಭಾರತೀಯ ಸೇನೆಯಂತಹ ಸಂಸ್ಥೆ ಇಡೀ ಜಗತ್ತಿನಲ್ಲೇ ಇಲ್ಲ ಎಂದು ಮಂಗಳವಾರ ಸೆಷನ್ಸ್ ಕೋರ್ಟ್ ಹೊರಗೆ ಸುದ್ದಿಗಾರರ ಜತೆ ಮಾತನಾಡುತ್ತ ಲೆ.ಕರ್ನಲ್ ಪುರೋಹಿತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಲೆ.ಕ. ಪುರೋಹಿತ್ ಮದ್ಯಪ್ರದೇಶದ ಪಂಚಮಡಿಯಲ್ಲಿ ಅರೇಬಿಕ್ ಭಾಷಾ ಕೋರ್ಸ್ ಮಾಡುತ್ತಿದ್ದ ವಿಚಾರಗಳ ಬಗ್ಗೆ ಗುಪ್ತ ರಹಸ್ಯಗಳನ್ನು ಪಡೆಯುವಲ್ಲಿ ಮಿಲಿಟರಿ
ಗುಪ್ತಚರ ಅಧಿಕಾರಿಗಳು ಮಾಹಿತಿಯನ್ನು ಪಡೆಯುವಲ್ಲಿ ಗಮನಸೆಳೆದಿದ್ದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ್ದರು. ಪುರೋಹಿತ್ ಸ್ಟೂಡೆಂಟ್ ಇಸ್ಲಾಂಮಿಕ್ ಮುಮೆಂಟ್ ಆಫ್ ಇಂಡಿಯಾ(ಎಸ್‍ಐಎಮ್‍ಐ) ಮತ್ತು ಪಾಕಿಸ್ತಾನ ಇಂಟರ್ ಸರ್ವೀಸ್ಸ್ ಇಂಟಲಿಜೆನ್ಸ್ (ಐಎಸ್‍ಐ)ಪ್ರಮುಖ ತಜ್ಞನಾಗಿದ್ದಲ್ಲದೇ, ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆಯ ಅವ್ಯವಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿದ್ದರು.

ಮಾಲೇಗಾಂವ್ ಸರಣಿ ಸ್ಫೋಟದ ಎಲ್ಲ ಪ್ರಕರಣಗಳು ಪುರೋಹಿತ್ ವಿರುದ್ಧ!!

ದೇಶಾದ್ಯಂತ ಸುದ್ದಿ ಮಾಡಿದ ಬಾಂಬ್ ಸ್ಫೋಟ ಪ್ರಕರಣ 2008 ಸೆ.29 ರಂದು ಮಹಾರಾಷ್ಟ್ರದ ಪ್ರಮುಖ ಬಟ್ಟೆ ತಯಾರಿಕಾ ಕೇಂದ್ರದ ಮಾಲೇಗಾಂವ್‍ನಲ್ಲಿ
ಬೈಕ್‍ನಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 7 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಳಿಕ ಅಕ್ಟೋಬರ್‍ನಲ್ಲಿ ವಿಶ್ವಹಿಂದೂ ಪರಿಷತ್‍ನ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬಂಧಿಸಲಾಗಿತ್ತು. ಅದೇ ವರ್ಷ ಪುರೋಹಿತ್, ಸ್ವಾಮಿ ದಯಾನಂದ್ ಪಾಂಡೆ ಎಂಬವವರನ್ನು ಕೂಡ ಬಂಧಿಸಲಾಗಿತ್ತು. ಹಿಂದೂ ಪರ ಧೋರಣೆ ಹೊಂದಿರುವ ‘ಅಭಿನವ್ ಭಾರತ್’ ಸಂಘಟನೆ ಭಾಗವಾಗಿ ಇಬ್ಬರೂ ಸ್ಫೋಟದ ಸಂಚು ರೂಪಿಸಿದ್ದಾಗಿ ಹೇಳಲಾಗಿತ್ತು. ಪುರೋಹಿತ್ ಅಭಿನವ್ ಭಾರತ್ ಹಿಂದಿದ್ದು, ಭಾರೀ ಪ್ರಮಾಣದಲ್ಲಿ ಹಣ, ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾಗಿ ಎಂದು ಸುಳ್ಳು ಆರೋಪಗಳನ್ನೆಲ್ಲ ಸೃಷ್ಟಿ ಮಾಡಿತ್ತು.

ಇದರ ಪರಿಣಾಮವಾಗಿ ಪುರೋಹಿತ್‍ಗೆ ನವಿಮುಂಬಯಿಯ ತಲೋಜ ಕೇಂದ್ರೀಯ ಸೆರೆಮನೆಯಲ್ಲಿ (ಪಿಎಸ್‍ಪಿ/55224/ಅದೀಕೃತ ಕೊರೆಸ್/14, ದಿನಾಂಕ ಮೇ 31,2014) ನ್ಯಾಯಾಂಗ ಬಂಧನವನ್ನು ವಿಧಿಸಲಾಯಿತು. ಮಾಲೆಗಾಂವ್‍ನಲ್ಲಿ ನಡೆದ 2008ರ ಬಾಂಬ್ ಸ್ಪೋಟದ ಸಂಪೂರ್ಣ ಪ್ರಕರಣದ ಆರೋಪಿ
ಪುರೋಹಿತ್ ಎಂದು ಅವರ ವಿರುದ್ದ ಪಿತೂರಿಯನ್ನು ರೂಪಿಸಲಾಗಿತ್ತು. ಈ ಬಗ್ಗೆ ಮಹಾರಾಷ್ಟ್ರದ ಎಟಿಎಸ್ ಪುರೋಹಿತ್ ವಿರುದ್ದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ
ಆರೋಪಿ ಎನ್ನುವ ಪಟ್ಟವನ್ನು ಕೊಡಲು ಮುತುವರ್ಜಿ ವಹಿಸಿತು ಎಂದರೆ ತಪ್ಪಾಗಲಾರದು.

ಈ ನಿಟ್ಟಿನಲ್ಲಿ ಲೆ.ಕ. ಪುರೋಹಿತ್ ತನ್ನ ಮನವಿಯನ್ನು ಆಗಿನ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್, ಗೃಹಮಂತ್ರಿ ಸುಶೀಲ್ ಕುಮಾರ್ ಶಿಂಧೆ, ರಕ್ಷಣಾ
ಸಚಿವ ಎ.ಕೆ ಆಂಥೋನಿ ಮತ್ತು ಆಗಿನ ರಾಷ್ಟ್ರಪತಿಗಳಿಗೆ ಕೂಡ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯ ಬಗ್ಗೆ ಕ್ಯಾರೇ ಎನ್ನದ ಕಾಂಗ್ರೆಸ್ ಸರ್ಕಾರ ತಮ್ಮ ಕುತಂತ್ರ ಬುದ್ದಿಯನ್ನು ತೋರಿಸಿತು ಎಂದರೆ ತಪ್ಪಾಗಲಾರದು. ಆ ಸಂದರ್ಭದಲ್ಲಿ ಮನಮೋಹನ್ ಸಿಂಗ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಈ ಪ್ರಕಣವನ್ನು ರಾಜಕೀಯವಾಗಿ ನಡೆಸುವ ಪ್ರಯತ್ನವನ್ನು ಮಾಡಿದ್ದಲ್ಲದೇ ಈ ಬಗ್ಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳಲಿಲ್ಲ. ಅಂತೂ ಈ ಒಂದು ಪ್ರಕರಣದಲ್ಲಿ ಮಾಸ್ಟರ್ ಮೈಂಡ್‍ಗಳು, ಮಹಾರಾಷ್ಟ್ರ ಆ್ಯಂಟಿ-ಟೆರೆರಿಸಮ್ ಸ್ಕಾಡ್‍ಗಿಂತ ಕಾಂಗ್ರೆಸ್‍ನ ಪಿತೂರಿಯೇ ಅದರಲ್ಲಿರುವ ಹೆಚ್ಚಾಗಿದ್ದವು.

2008ರ ಸೆಪ್ಟೆಂಬರ್ 8, ಈ ಒಂದು ಪ್ರಕರಣಕ್ಕೆ ಸಿಲುಕುಕೊಂಡವರಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಆದರೆ ಇನ್ನೊಬ್ಬರೇ ಸಾಧ್ವಿ ಪ್ರಗ್ಯಾ ಸಿಂಗ್ ಠಾಕುರ್. ಇವರಿಬ್ಬರು ಒಬ್ಬರನ್ನೊಬ್ಬರು ಭೇಟಿ ಮಾಡಿದಂತಹ ವ್ಯಕ್ತಿಗಳಲ್ಲ ಅಥವಾ ಪರಿಚಯಿಸ್ಥರೂ ಅಲ್ಲ. ಆದರೂ ಸೆಪ್ಟೆಂಬರ್ 8ರಂದು ನಡೆದ ಬ್ಲಾಸ್ಟ್‍ನಲ್ಲಿ ಇವರಿಬ್ಬರನ್ನು ಮಹಾರಾಷ್ಟ್ರ ಆ್ಯಂಟಿ ಟೆರರಿಸಮ್ ಸ್ಕ್ವಾಡ್ ಬಂಧಿಸಿತ್ತು.

ಈ ಸ್ಫೋಟಗಳ ತನಿಖೆಯನ್ನು ಮೊದಲಿಗೆ ಮಹಾರಾಷ್ಟ್ರ ಎಟಿಎಸ್ ತೆಗೆದುಕೊಂಡಿತ್ತು. ಈ ಕುಖ್ಯಾತ ಏಜೆನ್ಸಿ ಅಧಿಕೃತವಾಗಿ 5 ನವೆಂಬರ್ 2008ರಂದು
ಪುರೋಹಿತ್‍ರನ್ನು ಬಂಧಿಸಿರುವುದಾಗಿ ಕೂಡ ಘೊಷಿಸಿಕೊಂಡಿತ್ತು. ಆದರೆ ಈ ಖತರ್‍ನಾಕ್‍ಗಳು ವಾಸ್ತವವಾಗಿ 29 ಅಕ್ಟೊಬರ್ 2008ರಂದೇ ಭಾರತೀಯ ಸೈನ್ಯದ ಅಧಿಕಾರಿಯಾದ ಕರ್ನಲ್ ಆರ್.ಕೆ. ಶ್ರೀವಾಸ್ತವನಿಂದ ಸುಪಾರಿ ಕೊಟ್ಟು ಪುರೋಹಿತ್‍ರನ್ನು ಅಕ್ರಮವಾಗಿ ಬಂಧನದಲ್ಲಿರಿಸಿತ್ತು ಎಂದರೆ ನಂಬ್ತೀರಾ? ಆದರೆ ಇದು ನಂಬಲೇ ಬೇಕಾದಂತಹ ಕಟು ಸತ್ಯ.

ಮಾಲೇಗಾಂವ್ ಬ್ಲಾಸ್ಟ್ ತನಿಖೆ ಪ್ರಗತಿಯಲ್ಲಿದ್ದಾಗ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮಧ್ಯಪ್ರದೇಶದ ಪಂಚ್ಮಾರ್ಹಿಯಲ್ಲಿರುವ ಎಇಸಿ ಟ್ರೇನಿಂಗ್ ಸ್ಕೂಲ್‍ನಲ್ಲಿ
ಅರೇಬಿಕ್ ಭಾಷೆಯ ಕಲಿಕೆಯಲ್ಲಿದ್ದು, ಅದು ಕೇವಲ 18 ತಿಂಗಳ ಕೋರ್ಸ್ ಆಗಿತ್ತು. ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಕೇವಲ ಒಬ್ಬ ಸೇನಾಧಿಕಾರಿ ಆಗಿರಲಿಲ್ಲ.
ಬದಲಿಗೆ, ಅವರೊಬ್ಬ ಸೇನೆ ಗುಪ್ತಚರ ಅಧಿಕಾರಿಯನ್ನಾಗಿ ಗೌಪ್ಯವಾಗಿ ನೇಮಕ ಮಾಡಿಕೊಂಡಿತ್ತು!!! ಇದು ಉನ್ನತ ಅಧಿಕಾರಿಗಳನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಪುರೋಹಿತ್ ಗುಪ್ತಚರರಾಗೇ ಇದ್ದು, ಐಎಸ್‍ಐ(ಪಾಕಿಸ್ತಾನಿ ಗುಪ್ತಚರ ಸಂಸ್ಥೆ) ಏಜೆಂಟರು ಭಾರತದೊಳಕ್ಕೆ ನುಗ್ಗುತ್ತಿದ್ದುದರ ಬಗ್ಗೆ, ಉಗ್ರಗಾಮಿಗಳ ಮುಂದಿನ ಪ್ಲಾನ್ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಅವರು ಕೊಟ್ಟ ಮಾಹಿತಿಯಿಂದಲೇ ಎಷ್ಟೂ ಬಾಂಬ್ ಬ್ಲಾಸ್ಟ್‍ಗಳು ತಪ್ಪಿಹೋಗಿದ್ದವು ಗೊತ್ತಾ!!

ಅಂದಿನ ಕಾಂಗ್ರೆಸ್ ನಾಯಕರಿಗೆ ಅಧಿಕಪ್ರಸಂಗ ಜಾಸ್ತಿಯಾಗಿದ್ದ ಪರಿಣಾಮ ಅದಕ್ಕೆ ಬಲಿಯಾದವರೇ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕುರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪುರೋಹಿತ್!!!

ಆದರೆ ಕಾಂಗ್ರೆಸ್‍ನ ಕುಮ್ಮಕ್ಕಿಗೆ ಸಹಕಾರವನ್ನು ನೀಡಿದವರು ಯಾರು ಗೊತ್ತಾ?.. ಲೆಫ್ಟಿನೆಂಟ್ ಕರ್ನಲ್ ಪುರೋಹಿತ್‍ರನ್ನು ಅಪಹಿರಿಸಿದ್ದು, ಸುಫಾರಿ ನೀಡಿದ್ದು ಮುಂಬೈ ಬ್ಲಾಸ್ಟ್‍ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಹೇಮಂತ್ ಕರ್ಕರೆ!!! ಇವರ ನೇತೃತ್ವದ ಆ್ಯಂಟಿ ಟೆರರಿಸಮ್ ಸ್ಕ್ವಾಡ್(ಎಟಿಎಸ್)ನ ಸುಫಾರಿಗೆ ಕೆಲಸ ಮಾಡಿದವರು ಭಾರತೀಯ ಸೇನೆಯಲ್ಲೇ ಇದ್ದ ಕರ್ನಲ್ ರಾಜೀವ್ ಕೆ. ಶ್ರೀವಾಸ್ತವ!!!!

ಆದರೆ ಶ್ರೀವಾಸ್ತವ್‍ಗೆ ಸುಫಾರಿ ನೀಡಿದ್ದು ತನಿಖೆ ಮಾಡುವುದಕ್ಕಲ್ಲ. ಬದಲಿಗೆ ಮಧ್ಯಪ್ರದೇಶದಲ್ಲಿರುವ ಪುರೋಹಿತ್‍ರನ್ನು ಮುಂಬೈ ಪೊಲೀಸ್ ರಿಗೆ ತಂದೊಪ್ಪಿಸುವುದಕ್ಕೆ. ಇಲ್ಲಿ ಎರಡು ಸಮಸ್ಯೆಗಳಿದ್ದವು. ಒಂದು ಮಧ್ಯಪ್ರದೇಶ ಪೊಲೀಸ್  ರಿಗೆ ತಿಳಿಸದೇ ಪುರೋಹಿತ್‍ರನ್ನು ಬಂಧಿಸುವುದಕ್ಕಾಗುವುದಿಲ್ಲ. ಇನ್ನೊಂದು, ಸೈನ್ಯದ ಅಧೀನದಲ್ಲರುವ ಯಾವುದೇ ಅಧಿಕಾರಿಯಾಗಲಿ ಮೂವ್ಮೆಂಟ್ ಆಫ್ ಆರ್ಡರ್ ಇಲ್ಲದೇ ಬೇರೆ ಕಡೆ ಹೋಗುವುದಕ್ಕೆ ಬಿಡುವುದಿಲ್ಲ. ಹಾಗಾಗಿ ಸುಳ್ಳು ಮೂಮ್ಮೆಂಟ್ ಆರ್ಡರ್‍ನ್ನು ಸೃಷ್ಟಿ ಕೊಡಲಾಯಿತು. ಸೇನೆಯ ಗುಪ್ತಚರ ಏಜೆನ್ಸಿಯ ನಿರ್ದೇಶಕನಾಗಿದ್ದ ಶ್ರೀವಾಸ್ತವ್‍ಗೆ ಮೂವ್ಮೆಂಟ್ ಆರ್ಡರ್ ಕೊಡಿಸುವುದು ತುಂಬಾ ಕಷ್ಟವಾಗಿರಲಿಲ್ಲ ಬಿಡಿ. ಇಷ್ಟೆಲ್ಲ ಮಾಸ್ಟರ್ ಪ್ಲಾನ್ ಮಾಡಿದವರಿಗೆ ಯಕಶ್ಚಿತ್ ಒಂದು ಮೂವ್ಮೆಂಟ್ ಆರ್ಡರ್ ಕೊಡಿಸುವುದು ಕಷ್ಟವೇ?…

ಪುರೋಹಿತ್ ಅವರನ್ನು ತಮ್ಮ ಪ್ಲಾನ್ ಪ್ರಕಾರ ಕರೆದೊಯ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲೇ ತಮ್ಮ ಮೊಬೈಲ್‍ನ್ನು ಕಿತ್ತುಕೊಳ್ಳಲಾಯಿತು. ಪಬ್ಲಿಕ್  ಫೋನ್  ಬಳಸಿದರೆ ಹುಷಾರ್! ಎಂಬ ಬೆದರಿಕೆಯನ್ನೂ ನೀಡಲಾಯಿತು. ಇದನ್ನು ವಿರೋಧಿಸಿದ ಪುರೋಹಿತ್‍ಗೆ ಸಿಕ್ಕಿದ್ದು ಪೊಲೀಸರ ಒದೆ!! 29 ಅಕ್ಟೋಬರ್ 2008ರ ರಾತ್ರಿ ಸುಮಾರು ಹತ್ತೂವರೆಗೆ ಮುಂಬೈ ತಲುಪಿದ ಮೇಲೆ ಕಿಟಕಿಗಳೇ ಇಲ್ಲದ ಒಂದು ಕೋಣೆಗೆ ವಿಚಾರಣೆ ಮಾಡುವುದಕ್ಕೆ ಕರೆದುತಂದರು ಕೂಡ.

ಈ ವ್ಯವಸ್ಥಾಪೂರ್ವಕವಾಗಿ ನಡೆದ ಕುತಂತ್ರದಲ್ಲಿ ಅಪರಾಧಿಗಳಾಗಿ ಕಾಣಿಸಿಕೊಂಡವರು ಬೇರಾರು ಅಲ್ಲ, ಎಟಿಎಸ್ ಮುಸ್ಯಸ್ಥ ಹೇಮಂತ್ ಕರ್ಕರೆ(ಡಿ. ಮುಂಬೈ 2008) ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು. ಅಲ್ಲದೇ ಡಿ ಜಿ ಪೊಲೀಸ್, ಪರಾಂಬೀರ್ ಸಿಂಗ್, ಇನ್ಸ್ಪೆಕ್ಟರ್ ಅರುಣ್ ಖಾನ್ವಿಲ್ಕರ್(ಇನ್ನೊಂದು ಸೇವೆಯಿಂದ ವಜಾಗೊಳಿಸಿದ ನಂತರ) ಮತ್ತು ಸಹಾಯಕ ಸಿಬ್ಬಂದಿಗಳು, ಸಿಪಿ, ಮೋಹನ್ ಕುಲಕರ್ಣಿ(ನಿವೃತ್ತಿಯ ನಂತರ).

ಪುರೋಹಿತ್ ಅವರರನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಮಾತಾನಾಡಲು ಅವಕಾಶ ನೀಡಿರಲಿಲ್ಲ. ಆ ಸಮಯದಲ್ಲಿ ಅಪರ್ಣಾ ಪುರೋಹಿತ್ ಅವರು ಲೆ. ಪುರೋಹಿತ್ ಅವರು ಇದ್ದ ಸ್ಥಳವನ್ನು ಪತ್ತಿಹಚ್ಚುವಲ್ಲಿ ವಿಫಲರಾಗಿದ್ದರು ಕೂಡ.ತದನಂತರದಲ್ಲಿ ನವೆಂಬರ್ 5, 2008ರಂದು ಮಾಲೇಗಾಂವ್ ಪ್ರಕರಣದಲ್ಲಿ 9 ನೇ ಆರೋಪಿ ಎಂದು ಪರಿಗಣಿಸಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧಿಸಲಾಯಿತು. ಇದಕ್ಕೆಲ್ಲಾ ಸೂತ್ರಧಾರಿಗಳಾದವರು ಹೇಮಂತ್ ಕರ್ಕರೆ ಮತ್ತು ಅವರಿಂದ ಸುಪಾರಿ ಪಡೆದ ಕರ್ನಲ್ ಶ್ರೀವಾಸ್ತವ.

ದುಷ್ಟ ಶ್ರೀವಾಸ್ತವ್ ಮೂವ್ಮೆಂಟ್ ಆರ್ಡರನ್ನೇ ಫೋರ್ಜರಿ ಮಾಡಿದ್ದ ಒಂದು ವಿಷಯವೇ ಸಾಕಾಗುತ್ತೆ ಯಾರು ನಿಜವಾದ ಆರೋಪಿಗಳು ಎಂದು ತಿಳಿಯಲು! ಇದುವೇ ಪುರೋಹಿತ್‍ರನ್ನು ಸಿಕ್ಕಿಸಲು ಹೂಡಿರುವ ತಂತ್ರ ಎನ್ನುವುದಕ್ಕೆ ಇಷ್ಟು ಸಾಕಲ್ಲವೇ ಪುರಾವೆ??. ಇದನ್ನೇ ಆರ್ಮಿ ಕೋರ್ಟ್ ಆಫ್ ಎನ್‍ಕ್ವೈರಿ ಕೂಡ ಹೇಳಿದ್ದು. ಕೆಲಸದಲ್ಲಿರುವ ಒಬ್ಬ ಸೇನೆಯ ಅಧಿಕಾರಿಯ ಮೇಲೆ ಅದು ಹೇಗೆ ಕೈ ಮಾಡುತ್ತೀರ ಎಂದು ಆರ್ಮಿ ಕೋರ್ಟ್ ನೇರವಾಗಿ ತರಾಟೆಗೆ ತೆಗೆದುಕೊಂಡಿತ್ತು ಕೂಡ.

ಪುರೋಹಿತ್ ಜತೆ ಸಂಬಂಧದಲ್ಲಿದ್ದಾನೆಂದು 2008ರ ನವೆಂಬರ್ 5ರಂದು 11ನೇ ಆರೋಪಿಯಾಗಿ ಸುಧಾಕರ್ ಚತುರ್ವೇದಿಯನ್ನು ಬಂಧಿಸಿತ್ತು. ಈ ಬಗ್ಗೆ ಆರ್ಮಿ
ಕೋರ್ಟ್‍ನಲ್ಲಿ ಪ್ರಸ್ತಾಪ ಬಂದಾಗ, ನವೆಂಬರ್ 3ರಂದು ಮೇಜರ್ ಪ್ರವೀಣ್ ಕಂಜೋಡೆ ಮತ್ತು ಸುಬೇದಾರ್ ಕೇಶವ್ ಆರ್ ಪವಾರ್ ಒಂದು ಮಹತ್ತರವಾದ ಸಾಕ್ಷಿ
ನುಡಿದರು. ಪುರೋಹಿತ್ ಬಂಧನಕ್ಕೂ ಎರಡು ದಿನದ ಮುಂಚೆ ಹಾಗೂ ಸುಧಾಕರ್ ಚತುರ್ವೇದಿಯ ಬಂಧನಕ್ಕೂ 17 ದಿನದ ಮುಂಚೆ, ನಾಸಿಕ್ ಎಟಿಎಸ್‍ನ
ಅಸಿಸ್ಟೆಂಟ್ ಪೊಲೀಸ್ ಇನ್ಸ್‍ಪೆಕ್ಟರ್ ಶೇಖರ್ ಬಗಾಡೆ ಎಂಬುವವರು ಸುಧಾಕರ್ ಚತುರ್ವೇದಿಯ ಮನೆಯಲ್ಲಿ ಆರ್‍ಡಿಎಕ್ಸ್ ಮತ್ತು ಇನ್ನಿತರ ಸ್ಫೋಟಕಗಳನ್ನು
ಇಡುತ್ತಿರುವಾಗ ಪ್ರವೀಣ್ ಕಂಜೋಡೆ ಮತ್ತು ಕೇಶವ್ ಪವಾರ್ ಕೈಯಲ್ಲಿ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಿದ್ದರು.

ಚತುರ್ವೇದಿಯ ಮನೆಯಲ್ಲೇ ಬಾಂಬ್ ತಯಾರಾಗಿದ್ದು ಎಂದು ಸಾಬೀತು ಮಾಡುವುದು ಎಟಿಎಸ್ ತಂಡದ ಉದ್ದೇಶವಾಗಿತ್ತು. ಇದನ್ನು ಯಾರಿಗೂ ಹೇಳಬೇಡಿ, ಈ ವಿಷಯ ಗೊತ್ತಾದರೇ ತನ್ನ ಕೆಲಸ ಹೋಗುತ್ತೆ ಎಂದು ಬಗಾಡೆ ಮೇಜರ್ ಪ್ರವೀಣ್ ಕಂಜೋಡೆ ಕಾಲಿಗೆ ಬಿದ್ದಿದ್ದ ಎಂದು ಕಂಜೋಡೆಯೇ ತನ್ನ ಹಿರಿಯ ಅಧಿಕಾರಿಗಳಿಗೆ ಮತ್ತು ಕೋರ್ಟ್‍ದೆ ತಿಳಿಸಿದ್ದರು. ಇದರ ಬಗ್ಗೆ ಜುಲೈ 8 2009ರ ಕೋರ್ಟ್ ಆಫ್ ಎನ್‍ಕ್ವೈರಿ ವರದಿಯಲ್ಲಿ ದಾಖಲಾಗಿದೆ.

ಹೇಮಂತ್ ಕರ್ಕರೆ ಮತ್ತು ತಂಡ, ಚತುರ್ವೇದಿ ಮನೆಯಲ್ಲಿ ಸ್ಫೋಟಕಗಳು ಸಿಕ್ಕವು, ಮತ್ತು ಇವನು ಪುರೋಹಿತ್‍ಗೆ ಪರಿಚಯದ ವ್ಯಕ್ತಿ ಮತ್ತು ಮಾಲೇಗಾಂವ್
ಬ್ಲಾಸ್ಟ್‍ಗೆ ಬಳಸಲಾದ ಸ್ಫೋಟಕಗಳು ಇಲ್ಲಿಂದಲೇ ತಯಾರಾಗಿದ್ದು ಎಂದು ಹೇಳಿ ಬಂಧಿಸಲಾಗಿದೆ. ಆದರೆ ಇದರ ಬಗ್ಗೆ ಹಲವು ರಾಜಕಾರಣಿಗಳು ಮತ್ತು
ಸಂಘಟನೆಗಳು ಪುರೋಹಿತ್ ವಿರುದ್ಧವಾಗಿ ಕರ್ಕರೆಗೆ ಬೆಂಬಲಿಸಲು ನಿಂತವು.

ಉಗ್ರರ ಜಾಲವನ್ನು ಬೇಧಿಸುವ ಅತ್ಯುತ್ತಮ ವ್ಯಕ್ತಿ ಅಂದರೆ ಅದು ಪುರೋಹಿತ್. ಪುರೋಹಿತ್ ಪರಿಣತಿ ಹೊಂದಿರುವ ಕ್ಷೇತ್ರವೇ ಐಎಸ್‍ಐ ಮತ್ತು ಸಿಮಿ ಉಗ್ರರಿಗೆ
ಸಂಬಂಧಿಸಿದಂತಹ ಕ್ಷೇತ್ರ. ಐಎಸ್‍ಐ ಮತ್ತು ಸಿಮಿ ಉಗ್ರರು ಏನೇ ಪ್ಲಾನ್ ಮಾಡಿದರೂ ಮೊದಲು ಗೊತ್ತಾಗುತ್ತಿದ್ದುದ್ದೇ ಪುರೋಹಿತ್‍ಗೆ. ಈ ಬಗ್ಗೆ ಸುಮಾರು
ಪವರ್‍ಪಾಯಿಂಟ್ ಪ್ರೆಸೆಂಟೇಷನ್ ಮಾಡಿ, ಐಎಸ್‍ಐ ಮತ್ತು ಉಗ್ರರ ಮುಂದಿನ ಪ್ಲಾನ್‍ಗಳನ್ನು ಹೇಳುತ್ತಿದ್ದರು ಪುರೋಹಿತ್.

ಇಸ್ಲಾಮಿಕ್ ಉಗ್ರವಾದವೇ ಹೆಚ್ಚುತ್ತಿರುವ ದಿನಮಾನಗಳಲ್ಲಿ ಹಿಂದೂ ಉಗ್ರವಾದ, ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಹುಟ್ಟುಹಾಕುವ ಹುನ್ನಾರ
ರಾಜಕರಾಣಿಗಳಿಗೆ, ಮಾಧ್ಯಮಗಳಿಗೆ ಬಹಳವೇ ಇತ್ತು. ಮಾಲೇಗಾಂವ್ ಬ್ಲಾಸ್ಟ್ ಪ್ರಕರಣಕ್ಕಿಂತ ಮುಂಚೆ ಕೋಮುವಾದ ಇತ್ತೇ ವಿನಾ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎನ್ನುವುದೇ ಇರಲಿಲ್ಲ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಭಯೋತ್ಪಾದನೆ ಹುಟ್ಟಿರುವುದೂ ಮಾತ್ರ ವಿಪರ್ಯಾಸ….. ಇದಕ್ಕೆ ಕಾಂಗ್ರೆಸ್ ಸರಕಾರ ಕಿಚ್ಚುಹಚ್ಚಿದ್ದು ಯಾಕೆ ಗೊತ್ತಾ? ಕೇವಲ ಓಟಿಗೋಸ್ಕರ!! ಎಂತಹ ನಾಚಿಕೆ ಕೇಡಿನ ಸಮಗತಿ ನೋಡಿ. ಓಟುಗಳಿಸುವ ತಂತ್ರಕ್ಕೆ ಬಲಿಯಾಗಿದ್ದು ಮಾತ್ರ ಪುರೋಹಿತ್ ಮತ್ತು ಸಾಧ್ವಿ ಪ್ರಗ್ಯಾ ಸಿಂಗ್ ಠಾಕುರ್.

ಕಾಲೋನೆಲ್ ಪುರೋಹಿತ್ ಬೆರಳು ಮಾಡಿದ ಆ ಶಕ್ತಿಶಾಲಿ ರಾಜಕಾರಣಿ ಬೇರೆ ಯಾರೂ ಅಲ್ಲ, ಆದರೆ ಸೋನಿಯಾ ಗಾಂಧಿ! ಅದಲ್ಲದೇ, ಶ್ರೀವಾಸ್ತವ್!!! ಎಟಿಎಸ್ ನ ಅತ್ಯಂತ ನಂಬಿಕಸ್ಥರಾಗಿದ್ದ ಶ್ರೀವಾಸ್ತವ್ ಕೊನೆಗೂ ಪುರೋಹಿತ್ ವಿಷಯದಲ್ಲಿ ರಾಜಕೀಯ ಮಾಡಿದ್ದರು! ಪುರೋಹಿತ್ ರ ದಕ್ಷತೆಯೇ ಅಂತ್ಯದಲ್ಲಿ ಮುಳುವಾಗಿತ್ತು! ರಾಜಕೀಯವನ್ನು ವೃತ್ತಿಯನ್ನಾಗಿ ಸ್ವೀಕರಿಸದಿದ್ದರೂ ಸಹ, ರಾಜಕೀಯ ಪ್ರಭಾವಿ ವ್ಯಕ್ತಿ ಸೋನಿಯಾ ಗಾಂಧಿಯೊದಿಗಿನ ಸಂಗವೊಂದು ಶ್ರೀವಾಸ್ತವ್ ರನ್ನೂ ಸಹ ರಾಜಕೀಯಕ್ಕಿಳಿಸಿದ್ದು ಸುಳ್ಳಲ್ಲವೇನೋ!

ಎಟಿಎಸ್ ಮುಸ್ಯಸ್ಥ ಹೇಮಂತ್ ಕರ್ಕರೆ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು. ಮಾತ್ರಲ್ಲದೇ ಡಿ ಜಿ ಪೊಲೀಸ್, ಪರಾಂಬೀರ್ ಸಿಂಗ್, ಇನ್ಸ್ಪೆಕ್ಟರ್ ಅರುಣ್ ಖಾನ್ವಿಲ್ಕರ್ ಮತ್ತು ಅವರ ಸಹಾಯಕ ಸಿಬ್ಬಂದಿಗಳು, ಸಿಪಿ, ಮೋಹನ್ ಕುಲಕರ್ಣಿಗಳು ಈ ಒಂದು ಪ್ರಕರಣಕ್ಕೆ ಭಾಗಿಯಾಗಿದ್ದೂ ಮಾತ್ರ ಸುಳ್ಳಲ್ಲ.

ಏನೇ ಆಗಲಿ, 2014ರಲ್ಲಿ ಮೋದಿ ಸರಕಾರ ಬಂದ ಮೇಲೆ ಪುರೋಹಿತ್, ಒಂಬತ್ತು ವರ್ಷಗಳ ಬಳಿಕ ನರಕದಿಂದ ಪಾರಾಗಿದ್ದು ತಮ್ಮ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ತೆರಳಿರುವುದೂ ಮಾತ್ರ ಗ್ರೇಟ್!!!

– ಅಲೋಕ

Tags

Related Articles

Close