ಪ್ರಚಲಿತ

ಉಗ್ರ ಹಫೀಜ್ ಸಯೀದ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಿಸಿದ್ದ ಕಾಂಗ್ರೆಸ್ಸಿಗರ ಜನ್ಮ ಜಾಲಾಡಿಸಿದ ಮೋದಿ!

“ಹರ್ ಹರ್ ಮೋದಿ, ಘರ್ ಘರ್ ಮೋದಿ”… ಸುಮಾರು 3 ವರ್ಷಗಳ ಹಿಂದೆ ದೇಶದೆಲ್ಲೆಡೆ ಮೊಳಗಿದ ಘೋಷವಾಕ್ಯವಿದು. ಅಂದು ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಭಾರತೀಯ ಜನತಾ ಪಕ್ಷ ಮೋದಿಯ ಪ್ರಾಭಲ್ಯದಿಂದಲೇ ಎನ್ನುವುದಕ್ಕೆ ಬೇರೇನೂ ಸಾಕ್ಷಿ ಬೇಡ. ಮೋದಿ ಬರ್ತಾರೆಂದರೆ ಸಾಕು ಜನ ಕಿಕ್ಕಿರಿದು ಸೇರ್ತಾರೆ. ಜಗಮಗಿಸುವ ದೃಶ್ಯಗಳು ಮೋದಿ ರ್ಯಾಲಿಗಳಲ್ಲಿ ಕಾಣಸಿಗುತ್ತದೆ. ಎಷ್ಟೆಂದರೆ, ಥೇಟ್ ಮೋದಿ ತರಹನೇ ಧಿರಿಸುಗಳನ್ನು ಉಟ್ಟುಕೊಂಡು ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರೋದಿಲ್ಲ. “ಮೋದಿ ಮೋದಿ” ಘೋಷಣೆಯೊಂದಿಗೆ ವಿವಿಧ ಮೋದೀಜಿಯ ಘೋಷಣೆಗಳನ್ನು ಕೂಗುತ್ತಾ ಮೋದಿಯನ್ನು ಸ್ವಾಗತಿಸುತ್ತಾರೆ ಕಾರ್ಯಕರ್ತರು.

ಇವಿಷ್ಟು ಇತರೆ ಊರಿನ ಸುದ್ಧಿ. ಇನ್ನು ತನ್ನ ಸ್ವಕ್ಷೇತ್ರ ಗುಜರಾತ್‍ಗೆ ತೆರಳಿದರೆ ಅಲ್ಲಿನ ಪರಿಸ್ಥಿತಿ ಹೇಗಾಗಿರಬಹುದು. ತನ್ನ ಊರಿನ ಓರ್ವ ಸಾಮಾನ್ಯ ವ್ಯಕ್ತಿ, ಆರ್‍ಎಸ್‍ಎಸ್‍ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು, ಭಾರತೀಯ ಜನತಾ ಪಕ್ಷದಲ್ಲೂ ಕಾರ್ಯಕರ್ತನಾಗಿ ದುಡಿದು, ಏಕಾಏಕಿಯಾಗಿಯಾಗಿ ಅದೃಷ್ಟವೆಂಬಂತೆ ಗುಜರಾತಿನ ಮುಖ್ಯಮಂತ್ರಿಯಾದವರು ಶ್ರೀ ನರೇಂದ್ರ ದಾಮೋದರ್ ದಾಸ್ ಮೋದಿಯವರು. ಹೀಗೆ ಅಧಿಕಾರ ವಹಿಸಿಕೊಂಡ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ಭರ್ಜರಿಯಾಗಿಯೇ ಜಯ ಸಾಧಿಸಿದ್ದ ಮೋದಿ ನಂತರ ಪ್ರಧಾನಿಯಾಗಿ ದೆಹಲಿ ಗದ್ದುಗೆ ಹಿಡಿದದ್ದು ಈಗ ಇತಿಹಾಸ.

ಲೋಕಸಭೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಮೋದಿ ನಂತರ ನಡೆದ ಎಲ್ಲಾ (ವಿಧಾನ ಸಭೆ ಸಹಿತ) ಚುನಾವಣೆಗಳಲ್ಲೂ ಮೋದಿಯದ್ದೇ ಪ್ರಭಾವ. ಮೋದಿ ಬರುತ್ತಾರೆಂದರೆ ವಿರೋಧಿಗಳ ಎದೆಯಲ್ಲಿ ನಡುಕ ಶುರುವಾಗುತ್ತದೆ. ತಮ್ಮ ಅಸ್ತಿತ್ವಕ್ಕೆ ಕೊಡಲಿಯೇಟು ಬಿದ್ದಾಯ್ತು ಎಂಬಂತೆ ಬಡಿದಾಡಿಕೊಳ್ತಾರೆ. ಚುನಾವಣೆಯ ಫಲಿತಾಂಶ ಅಲ್ಲೇ ಬಂದಿರುತ್ತದೆ. ಅಲ್ಲಿ ಕಮಲ ಅರಳುತ್ತದೆ.

ಇಂದು ಗುಜರಾತಿನ ಕಛ್, ಭುಜ್ ಸಹಿತ ಒಟ್ಟು ನಾಲ್ಕು ಕಡೆಗಳಲ್ಲಿ ಪ್ರಧಾನಿ ಮೋದಿಯ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಆಶಾಪುರ ಮಾತಾ ದೇವಾಲಯಕ್ಕೆ ಭೇಟಿ ನೀಡಿ ನಂತರ ಸಾರ್ವಜನಿಕರನ್ನುದ್ಧೇಶಿಸಿ ನಿರರ್ಗಳವಾಗಿ ಮಾತನಾಡಿದ್ದರು. 4 ಕಡೆಗಳಲ್ಲಿ ಅವರ ಒಂದೊಂದು ಗಂಟೆಯ ಭಾಷಣ ಕಾಂಗ್ರೆಸ್‍ನ ಹತ್ತು ಹತ್ತು ವಿಕೆಟ್‍ಗಳು ಬೀಳುವಂತಿತ್ತು.

ಕೆಸರಲ್ಲಿ ಅರಳಲಿದೆ ಕಮಲ-ಗುರಾತಿನಲ್ಲಿ ಮೋದಿಯ ಪರಿಮಳ…

ಮೋದಿ ಆರ್ಭಟಕ್ಕೆ ಈಗಾಗಲೇ ವಿರೋಧ ಪಕ್ಷಗಳು ತತ್ತರಿಸಿ ಹೋಗಿವೆ. ಯಾವಾಗ ನೋಡಿದ್ರೂನೂ ಸುದ್ಧಿ ವಾಹಿನಿಯಲ್ಲಿ ರಾಹುಲ್ ಗಾಂಧಿಯ ಕಾಮಿಡಿಗಳು, ಹಾರ್ಧಿಕ್ ಪಟೇಲನ ಹುಚ್ಚಾಟಗಳೇ ಮೇಲೈಸಿರುತ್ತೆ. ಆದರೆ ತಣ್ಣಗೆ ಚೆಂದ ನೋಡುತ್ತಿದ್ದ ಮೋದಿ, ಇಂದು ಇಡಿಯ ಗುಜರಾತನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ಮೋದೀಜಿಯ ಇಂದಿನ ಆರ್ಭಟಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ದೂಳಿಪಟವಾಗಿಬಿಟ್ಟಿದೆ. ಚುನಾವಣೆಗೂ ಮುನ್ನವೇ ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿದೆ.

ಸದಾ ಮೋದೀಜಿಯ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್‍ಗೆ ನೇರ ಸಂದೇಶವನ್ನೇ ರವಾನಿಸಿದ್ದಾರೆ ಮೋದಿ. ಮಾತ್ರವಲ್ಲದೆ ತಮ್ಮ ತಮ್ಮೊಳಗೆ ಕೆಸರೆರೆಚಾಟವನ್ನು ನಡೆಸುತ್ತಿರುವ ವಿರೋಧ ಪಕ್ಷಗಳನ್ನು ನೇರವಾಗಿಯೇ ಕುಟುಕಿದ್ದಾರೆ. ಗುಜರಾತಿನ ವಿಧಾನ ಸಭಾ ಕ್ಷೇತ್ರವಾದ ಕಛ್‍ನಲ್ಲಿ ಲಕ್ಷಕ್ಕೂ ಮಿಗಿಲಾದ ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದ ಅವರು “ಕಾಂಗ್ರೆಸ್‍ನವರು ಕೆಸರೆರೆಚಾಟ ನಡೆಸುತ್ತಿದ್ದಾರೆ, ಇದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಏಕೆಂದರೆ ಕಮಲ ಅರಳುವುದೂ ಕೆಸರಿನಲ್ಲಿ ತಾನೇ” ಎಂದು ಕಾಂಗ್ರೆಸ್‍ನ ಕಾಲೆಳೆದಿದ್ದಾರೆ.

ಸದಾ ಮೋದೀಜಿಯನ್ನು ತೆಗಳುವುದರಲ್ಲಿಯೇ ಬ್ಯುಸಿಯಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ತನ್ನ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಮಾತ್ರವಲ್ಲದೆ ಗುಜರಾತಿನ ಕಛ್‍ನಲ್ಲಿ ಕಚ್ಛೀ ಭಾಷೆಯಲ್ಲೇ ಮಾತನಾಡಿದ ಮೋದೀಜಿ, “ಆಶಾಪುರ ದೇವಾಲಯದಲ್ಲಿ ಪ್ರಾರ್ಥಿಸಿ ಈಗ ಜನತಾ ಜನಾರ್ಧನನ ಬಳಿ ಪ್ರಾರ್ಥಿಸಲು ಬಂದಿದ್ದೇನೆ. ಕಛ್ ಜನತೆಯ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಜನರೊಂದಿಗೆ ಸಂವಾದ ನಡೆಸುವುದು ನನಗೆ ಅತ್ಯಂತ ಸಂತಸವನ್ನು ನೀಡುತ್ತದೆ. ನನ್ನ ಜೀವನದ ಪ್ರತಿಯೊಂದು ಕ್ಷಣಗಳನ್ನೂ 125 ಕೋಟಿ ಭಾರತೀಯರ ಅಭಿವೃದ್ಧಿಗಾಗಿ ಮೀಸಲಿಡುತ್ತೇನೆ” ಎಂದು ಭಾವುಕರಾಗಿ ನುಡಿದರು.

ದೇಶ ಮಾರಬೇಡಿ-ಬೇಕಿದ್ದರೆ ಟೀ ಮಾರಿ…

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದೀಜಿಯನ್ನು ಚಾಯ್‍ವಾಲಾ ಎಂದು ಕಾಲೆಳೆದಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠವನ್ನೇ ಕಳಿಸಿದ್ದರು. ಹಳ್ಳಿ ಹಳ್ಳಿಯಲ್ಲೂ ಟೀ ಮಾರಿ ಮೋದಿ ಪರ ಪ್ರಚಾರ ನಡೆಸಿದ್ದರು. ಈ ಮೂಲಕ ಚಾಯ್‍ವಾಲಾ ಮೋದಿ ಪ್ರಧಾನಿಯಾಗಿದ್ದು, ನಂತರ ಟೀ ಕಂಡರೆ ಬೆಚ್ಚಿ ಬೀಳುತ್ತಿದ್ದರು ಕಾಂಗ್ರೆಸ್ಸಿಗರು.

ಆದರೆ ಅವರು ಇತಿಹಾಸವನ್ನು ಮರೆತಂತಿದೆ. ಈಗ ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದ್ದಾರೆ. ಗುಜರಾತಿನ ಚುನಾವಣೆಯಲ್ಲಿ ಮತ್ತೆ ಮೋದಿಯನ್ನು ಚಾಯ್ ವಾಲಾ ಎಂದು ಜರೆದು ತೀವ್ರ ಟೀಕೆಗೆ ಒಳಗಾಗಿದ್ದು ಮಾತ್ರವಲ್ಲದೆ, ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನನುಭವಿಸಲೂ ಸಿದ್ಧವಾಗಿದ್ದಾರೆ.

“ನಾವು ದೇಶವನ್ನು ಅಭಿವೃದ್ಧಿ ಮಾಡ್ತಾ ಮಾಡ್ತಾ ಟೀ ಮಾರುತ್ತಿದ್ದೇವೆ. ಬೇಕಿದ್ದರೆ ನೀವೂನು ಟೀ ಮಾರಿಕೊಳ್ಳಿ. ಆದರೆ ದೇಶವನ್ನು ಮಾರುವಂತ ಕೆಟ್ಟ ಕೆಲಸ ಮಾಡಬೇಡಿ” ಎಂದು ಝಾಡಿಸಿದ್ದಾರೆ. “ನಾವು ನಿಮ್ಮ ಹಾಗೆ ದೇಶವನ್ನು ಮಾರಿಲ್ಲ, ಚಾಯ್ ಮಾತ್ರ ಮಾರಿದ್ದೇವೆ ಅಷ್ಟೇ, ನೀವು ಈ ಹಿಂದೆ ದೇಶವನ್ನೇ ಮಾರಲು ಹೊರಟಿದ್ದಿರಲ್ವಾ..?” ಎಂದು ಕಾಲೆಳೆದರು.

ಉಗ್ರನ ಬಿಡುಗಡೆಗೊಳಿಸಿದ ಪಾಕ್-ರಾಹುಲ್ ಯಾಕೆ ರಾಕ್…?

ಮೋದೀಜಿ ಹಾಗೂ ಬಿಜೆಪಿಯನ್ನು ಧ್ವೇಷಿಸುವ ಭರದಲ್ಲಿ ಕಾಂಗ್ರೆಸ್ ನಾಯಕರು ದೇಶಪ್ರೇಮವನ್ನು ಮರೆಯುವುದು ಅಥವಾ ಉಗ್ರರಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡುವುದು ಆ ಪಕ್ಷಕ್ಕೆ ಹೊಸದೇನಲ್ಲ ಬಿಡಿ. ಮೋದೀಜಿಯನ್ನು ತೆಗಳುವುದಿದ್ದರೆ ಅದ್ಯಾವ ಮಟ್ಟಕ್ಕೂ ಇಳಿಯಲು ಸಿದ್ದರಾಗಿದ್ದಾರೆ ಕಾಂಗ್ರೆಸ್ ನಾಯಕರು. ಅದಕ್ಕೆ ಇತ್ತೀಚೆಗೆ ನಡೆದ ಘಟನೆಯೊಂದು ಸ್ಪಷ್ಟ ಸಾಕ್ಷಿ.

“26.11. ಮುಂಬೈ ದಾಳಿಯ ಸಂಚುಕೋರ ಪಾಕ್ ಉಗ್ರ ಹಫೀಜ್ ಸಯೀದ್ ಪಾಕ್ ಜೈಲಿನಿಂದ ಬಿಡುಗಡೆಯಾದರೆ ಕಾಂಗ್ರೆಸ್ ಯಾಕೆ ಸಂಭ್ರಮಿಸುತ್ತದೆ” ಎಂದು ಮೋದಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು, ಭಾರತದ ಸೈನಿಕರು ಸರ್ಜಿಕಲ್ ಸ್ಟ್ರೈಕ್ದ ನಡೆಸಿದರೆ ಅದನ್ನು ನಂಬುವುದಿಲ್ಲ. ಆದರೆ ಚೀನಾ ರಾಯಭಾರಿ ಹೇಳಿದ್ದನ್ನು ನಂಬುತ್ತಾರೆ ಎಂದು ಕುಟುಕಿದ್ದಾರೆ. ಇದೇಕೆ ಹೀಗೆ. ಹಾಗಾದರೆ ಕಾಂಗ್ರೆಸ್‍ನಲ್ಲಿ ದೇಶಪ್ರೇಮವೆಂದರೆ ಏನು ಎಂದು ಮೋದಿ ಪ್ರಶ್ನಿಸಿದ್ದಾರೆ.

ಸಯೀದ್ ಬಿಡುಗಡೆ, ಪ್ರಧಾನಿ ಮೋದಿಯ ಅಪ್ಪುಗೆ ನೀತಿಯ ವೈಫಲ್ಯ ಎಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಟೀಕಿಸಿದ್ದರು. ಪಪ್ಪು ಟೀಕಿಸಿದ್ದ ಬೆನ್ನಲ್ಲೇ ಲಕ್ಷ ಲಕ್ಷ ಜನರ ಎದುರುಗಡೆಯೇ ಕಾಂಗ್ರೆಸ್‍ನ ಮಾನವನ್ನು ಹರಾಜು ಹಾಕಿದ್ದಾರೆ. “ಡೋಕ್ಲಾಮ್‍ನಲ್ಲಿ ನಮ್ಮ ಯೋಧರು ಚೀನಾ ಸೈನಿಕರ ಮುಖಾಮುಖಿಯಾಗಿ 70 ದಿನಗಳ ಕಾಲ ನಿಂತಿದ್ದಾಗ ನೀವ್ಯಾಕೆ ಚೀನಾ ರಾಯಭಾರಿಯನ್ನು ಆಲಂಗಿಸಿದ್ದೀರಿ? ಚೀನಾ ಜತೆ ಬಿಕ್ಕಟ್ಟು ಏರ್ಪಟ್ಟಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಚೀನಾ ರಾಯಭಾರಿಯನ್ನು ಅಪ್ಪಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು. ಇದರ ಹಿಂದಿರುವ ಮರ್ಮವೇನು ಎಂದು ಮೋದೀ ಕಾಂಗ್ರೆಸ್ ಕಾಲೆಳೆದಿದ್ದಾರೆ.

ಕಾಂಗ್ರೆಸ್‍ಗೆ “ಉರಿ”-ಮೋದೀಜಿಗೆ ಹಿರಿಮೆಯ ಗರಿ…

ಈ ಹಿಂದೆ 26.11.ರ ಮುಂಬೈ ದಾಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಯಾವ ರೀತಿ ಕ್ರಮ ಕೈಗೊಂಡಿತ್ತು ಎಂಬುವುದು ದೇಶವಾಸಿಗಳಿಗೆ ಗೊತ್ತಿರುವ ಸಂಗತಿಯಾಗಿದೆ. ಮುಂಬೈನಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಕಾಂಗ್ರೆಸ್ ತನ್ನ ಅಸಹಾಯಕ ನೀತಿಯನ್ನು ಪ್ರದರ್ಶಿಸಿತ್ತು. ಅನೇಕ ಹುತಾತ್ಮರ ಬಲಿದಾನದ ನಂತರ ಸಿಕ್ಕ ಓರ್ವ ಉಗ್ರ ಕಸಬ್‍ನನ್ನು ಹೇಗೆಲ್ಲಾ ಕಾಂಗ್ರೆಸ್ಸಿಗರು ಸತ್ಕಾರಿಸಿದ್ದಾರೆ ಎಂಬುವುದನ್ನು ದೇಶ ಕಂಡಿದೆ. ಆ ಓರ್ವ ಉಗ್ರನಿಗಾಗಿ ಅಂದಿನ ಯುಪಿಎ ಸರ್ಕಾರ ಎಷ್ಟೊಂದು ಖರ್ಚು ಮಾಡಿದೆ ಎಂಬುವುದನ್ನು ದೇಶ ಕಂಡಿದೆ. ಆದರೆ ಪ್ರಸ್ತುತ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ “ಉರಿ”ಯಲ್ಲಿ ಉಗ್ರರ ದಾಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಿದೆ ಎಂಬುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಗಿದೆ.

ಪಾಕ್‍ನಲ್ಲಿ ಉಗ್ರರು ಬಿಡುಗಡೆಯಾದರೆ ಅದಕ್ಕೆ ಮೋದಿ ಕಾರಣನಾ..? ಎಷ್ಟೊಂದು ಮೂರ್ಖ ವ್ಯಕ್ತಿ ಈ ಪಪ್ಪು. ಈತನಿಗೆ ಬುದ್ಧಿ ಬಂದಿದೆ ಎಂದು ಸೋನಿಯಾ ಗಾಂಧೀನೂ ಹೇಳ್ತಿಲ್ಲ. ಅಷ್ಟೊಂದು ಬುದ್ಧಿಮಾಂದ್ಯನಂತೆ ವರ್ತಿಸುತ್ತಿದ್ದಾರೆ ರಾಹುಲ್ ಗಾಂಧಿ. ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನ ಎಂಬ ಪಾಪಿ ರಾಷ್ಟ್ರವನ್ನು ಮೂಲೆ ಗುಂಪು ಮಾಡಿದ್ದು ಇದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಬ ವಿಷಯವನ್ನು ಕಾಂಗ್ರೆಸ್ ಮರೆತಂತಿದೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಮೋದಿ ವಿದೇಶದಲ್ಲಿ ಹೀರೋ ಆಗಿ ಮಿಂಚಿದ್ದರೆ ರಾಹುಲ್ ಗಾಂಧಿ ಮಾತ್ರ ವಿದೇಶಕ್ಕೆ ತೆರಳಿ ಇಂಗು ತಿಂದ ಮಂಗನಂತಾಗಿದ್ದಾರೆ. ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದವೊಂದರಲ್ಲಿ ಮತನಾಡಿದ್ದ ರಾಹುಲ್ ತನ್ನ ಪಕ್ಷವನ್ನೇ ತೆಗಳಿ ಮುಜುಗರಕ್ಕೀಡಾಗಿದ್ದರು. ಬಿಡಿ… ಕನಿಷ್ಠ ಪಕ್ಷ ಭಾರತದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ ಎಂಬ ಅಂಕಿ ಅಂಶವೂ ಆತನಿಗೆ ತಿಳಿದಿಲ್ಲ ಎಂದರೆ..?

ಮೋದೀಜಿಯನ್ನು ಧ್ವೇಷಿಸುವ ನೆಪ, ಬಿಜೆಪಿಯನ್ನು ಧ್ವೇಷಿಸುವ ನೆಪ, ಮೋದೀಜಿಯ ತೆಗಳುವ ಚಪಲ. ಅದಕ್ಕೆ ಸಿಗುವ ಏಕೈಕ ಅಸ್ತ್ರವೇ ದೇಶದ್ರೋಹದ ವಿಚಾರ. ದೇಶಕ್ಕೆ ಆಪತ್ತು ಬಂದಾಗ ರಾಜನ ಬೆನ್ನಿಗೆ ನಿಲ್ಲಬೇಕಾದ ದೇಶದ ನಾಯಕರು ವಿರೋಧಿ ಬಣಗಳಲ್ಲಿ ತಮ್ಮ ಶಕ್ತಿಪ್ರದರ್ಶನ ಮಾಡಿ ಅವರ ಸೆರಗಿನೊಳಗೆ ನುಸುಳಿಕೊಳ್ಳುತ್ತಾರೆ. ಇದು ಕೇವಲ ರಾಹುಲ್ ಗಾಂಧಿಯ ವಿಷಯವಲ್ಲ. ಕಾಂಗ್ರೆಸ್ ಪಕ್ಷದ ಬುದ್ಧಿಯೇ ಇಷ್ಟು.

ಒಂದಂತೂ ಸತ್ಯ… ಗುಜರಾತಿನ ವಿಧಾನಸಭಾ ಚುನಾವಣೆಯ ಫಲಿತಾಂಶ ದೇಶದ ಕಾಂಗ್ರೆಸ್ಸಿಗರ ಪಾಲಿಗೆ ಸಿಡಿಲಾಘಾತವನ್ನು ಹುಟ್ಟಿಸುವುದಂತು ಸುಳ್ಳಲ್ಲ. ಕನಿಷ್ಠ ವಿರೋಧ ಪಕ್ಷದ ಸ್ಥಾನವೂ ಕಾಂಗ್ರೆಸ್‍ಗೆ ಸಿಗೋದಿಲ್ಲ ಅನ್ನೋದು ಅಷ್ಟೇ ಸತ್ಯ…

-ಸುನಿಲ್ ಪಣಪಿಲ

Tags

Related Articles

Close