ಗೋ ಕಳ್ಳ ಸಾಗಾಟನೆ ಮಾಡಿದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಸುಳಿವುಕೊಟ್ಟದಕ್ಕೆ ಆತನ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ಸಂಭವಿಸಿದೆ!!
ಮುಸಲ್ಮಾನ್ ಮುಸಲ್ಮಾನ್ ಭಾಯೀ ಭಾಯೀ ಎನ್ನುವವರೇ ಒಬ್ಬರೊಬ್ಬರನ್ನು ಕೊಲ್ಲುವ ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದರೆ ನ್ಯಾಯಯುತವಾಗಿ ಸಾಗುವವರಿಗೆ ಸಿಗುವ ಬಹುಮಾನ ಇದುವೇ ಎನ್ನುವ ಪ್ರಶ್ನೆಯು ಮೂಡುತ್ತದೆ?!
ಗೋವನ್ನು ಪೂಜಿಸುವ ಹಿಂದೂಗಳು, ಗೋಹತ್ಯೆಯನ್ನು ಖಂಡಿಸಿರುವುದರ ಬಗ್ಗೆ ಅದೆಷ್ಟೋ ಹೋರಾಟಗಳು ನಡೆದೇ ಹೋಗಿವೆ!! ಹೀಗಿರಬೇಕಾದರೆ ಗೋಹತ್ಯೆಯನ್ನು ನಿಷೇಧಿಸುವಲ್ಲಿ ಅದೆಷ್ಟೊ ಮಂದಿ ಪಣತೊಟ್ಟಿರುವುದು ತಿಳಿದೇ ಇದೆ!! ಆದರೆ ಉತ್ತರ ಪ್ರದೇಶದ ರಾಂಪುರದ ಷಹಝಾದ್ ನಗರದಲ್ಲಿ ಗೋಹತ್ಯೆ ಗೈದು ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಕ್ಕಾಗಿ, ಸಮುದಾಯದ ಸದಸ್ಯರು, 52 ವರ್ಷದ ಒರ್ವ ವ್ಯಕ್ತಿಯನ್ನು ಕೊಲೆಗೈದ ಘಟನೆ ಇತ್ತೀಚೆಗೆ ನಡೆದಿದೆ!!
ಧರ್ಮವೇ ಕೊಲೆಗೈಯಲು ಸ್ಫೂರ್ತಿ ನೀಡುತ್ತಿರುವಾಗ ಇನ್ನು ತನ್ನದೇ ಸಮುದಾಯದ ವ್ಯಕ್ತಿಯನ್ನು ಹತ್ಯೆ ಮಾಡುವುದು ಯಾವ ಲೆಕ್ಕ!! ಹೌದು… ಕೇವಲ
ಗೋಹತ್ಯೆಯನ್ನು ಮಾಡಿರುವ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ 52 ವರ್ಷದ ನ್ಯಾನ್ ಅಲಿ ಕೊಲೆಗೀಡಾದ ದುರ್ದೈವಿ!! ತನ್ನದೇ ಸಮುದಾಯದ
ಸದಸ್ಯರನ್ನು ಕೊಲೈಗೈದ ಈ ಕೊಲೆಗಟುಕರು ಇದೀಗ ಪೊಲೀಸರ ಅಥತಿಯಾಗಿದ್ದಾರೆ!!
ಆದರೆ.. ಈ ಘಟನೆಯಿಂದಾಗಿ ನ್ಯಾನ್ ಅಲಿ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರೆ, ಅವರ ಮಗ ಇಸ್ಲಾಂ ಅಲಿ(22) ಮತ್ತು ಸೋದರಳಿಯ ಮುಖ್ತಿಯಾರ್ ಅಲಿ(20)ಗಾಯಗೊಂಡಿದ್ದಾರೆ!! ನ್ಯಾನ್ ಅಲಿ ಅವರ ಮಗ ಬಾಬು ಸಲ್ಲಿಸಿದ ದೂರಿನ ಪ್ರಕಾರ, ಏಳು ಆರೋಪಿಗಳಲ್ಲಿ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಸಬ್-ಇನ್ಸ್ಪೆಕ್ಟರ್ ಸುಮಿತ್ ಕುಮಾರ್!!
ಈ ಬಗ್ಗೆ ಧಮೋರ ಪೊಲೀಸ್ ಹೊರಠಾಣೆಯ ಉಸ್ತುವಾರಿಯಾಗಿರುವ ಸಬ್-ಇನ್ಸ್ಪೆಕ್ಟರ್ ಸುಮಿತ್ ಕುಮಾರ್ ಹೇಳುವ ಪ್ರಕಾರ: “ಸುಮಾರು ಎರಡು ವಾರಗಳ ಹಿಂದೆ ನನ್ನ ಫೋನಿಗೆ ಕರೆ ಬಂದಿದ್ದು, ಲಖನಖೇರಾ ನಿವಾಸಿ ಘಸಿತಾ ತನ್ನ ನೆರೆಯ ಅಲಿ ಅಹಮದ್ ಅವರ ಸಹಾಯದಿಂದಾಗಿ ಹಸುವಿನ ಮಾರಾಟ ನಡೆಸುತ್ತಿದ್ದಾನೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೇ ಹಸುವನ್ನು ಹತ್ಯೆ ಮಾಡಿ, ಅದರ ಮಾಂಸವನ್ನು ಮದುವೆ ಮನೆಗೆ ಕೊಂಡೊಯ್ಯಲಾಗಿದೆ” ಎನ್ನುವ ವಿಚಾರವನ್ನು ತಿಳಿಸಲಾಗಿತ್ತು!! ಆದರೆ ಈ ಪ್ರಕರಣವನ್ನು ಒಪ್ಪಿಕೊಳ್ಳದೆ, ಈ ಆರೋಪ ಸುಳ್ಳು ಎಂದು ಅಲಿ ಅಹಮ್ಮದ್ ಹೇಳಿದ್ದಲ್ಲದೇ, ಈ ಬಗ್ಗೆ ನ್ಯಾನ್ ಅಲಿಯೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಎನ್ನುವುದು ಆತನಿಗೆ ಗೊತ್ತಿತ್ತು” ಎನ್ನುವುದನ್ನು ಹೇಳಿದ್ದಾರೆ!!
ನಡೆದ ಘಟನೆಯಾದರೂ ಏನು??
ಶನಿವಾರದ ದಿನ ನ್ಯಾನ್ ಅಲಿ ಮಾರುಕಟ್ಟೆಯ ಬಳಿ ಬರುತ್ತಿರಬೇಕಾದರೆ, ಅಲಿ ಅಹಮದ್ ಮತ್ತು ಆತನ ಸಹಾಯಕರು ನ್ಯಾನ್ ಅಲಿಯನ್ನು ಹಿಡಿದು ಆತನನ್ನು ಚೆನ್ನಾಗಿ ಥಳಿಸಿದ್ದು, ಈ ಬಗ್ಗೆ ನ್ಯಾನ್ ಅಲಿ ಪೊಲೀಸ್ ಗೆ ದೂರು ನೀಡಿದ್ದ!! ಈ ದೂರಿನಲ್ಲಿ ಅಲಿ ಅಹಮದ್, ಆತನ ಸಹೋದರ ಮೊಹಮ್ಮದ್ ಉಮರ್ ಮತ್ತು ಇಬ್ಬರು ಸಂಬಂಧಿಕರ ವಿರುದ್ದವೂ ಕೇಸು ದಾಖಲಿಸಲಾಯಿತು!! ತದ ನಂತರದಲ್ಲಿ ಪೊಲೀಸರು ಅಲಿಅಹಮದ್ ನನ್ನು ಬಂಧಿಸಿದರು!! ಯಾವಾಗ ಅಲಿ ಅಹಮದ್‍ನನ್ನು ಬಂಧಿಸಿದರೂ ಪ್ರಕರಣವೂ ಶಾಂತ ಸ್ಥಿತಿಯತ್ತ ತಲುಪುತ್ತೆ ಎಂದು ಭಾವಿಸಲಾಯಿತು
ಆದರೆ, ಭಾನುವಾರದಂದು ಮೊಹಮ್ಮದ್ ಉಮರ್ ಮಾರ್ಗದ ಬದಿ ಚಲಿಸುತ್ತಿರಬೇಕಾದರೆ, ನ್ಯಾನ್ ಅಲಿ ಮತ್ತು ಕೆಲವರು ಈತನ ವಿರುದ್ದ ಕಾಮೆಂಟ್
ಮಾಡಲಾರಂಭಿಸಿದರು!! ಆ ಸಂದರ್ಭದಲ್ಲಿ ಏನೂ ಹೇಳದೇ ಸುಮ್ಮನೆ ಅಲ್ಲಿಂದ ಕಾಲ್ಕಿತ್ತ ಉಮರ್ ತದ ನಂತರದಲ್ಲಿ ಉಮರ್ ಮತ್ತು ಆತನ ಸಂಬಂಧಿಕರು ಮರಳಿ ಬಂದು ನ್ಯಾನ್ ವಿರುದ್ದ ಆಕ್ರಮಣ ಮಾಡಿರು ಎಂದು ಎಸ್-ಐ ಹೇಳಿಕೆ ನೀಡಿದ್ದಾರೆ!!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾನ್ ಅಲಿಯ ಸೋದರಳಿಯ ಸಮೀರ್ ಹೇಳಿದ ಮಾಹಿತಿಯ ಪ್ರಕಾರ: “ಉಮರ್ ಮತ್ತು ಆತನ ಸಂಬಂಧಿಕರು ನನ್ನ ಚಿಕ್ಕಪ್ಪ ಮಸೀದಿಯಿಂದ ಹಿಂದಿರುಗಿದ ವೇಳೆ ಅಹಮ್ಮದ್ ನ ಬಂಧನದ ವಿಚಾರದ ಕುರಿತು ಚರ್ಚಿಸಿಸಲು ಆರಂಭಿಸಿದರು!! ಆ ಸಂದರ್ಭದಲ್ಲಿ ಉಮ್ಮರ್ ಚಾಕುವಿನಿಂದ ಚುಚ್ಚಿದಾಗ ಇಸ್ಲಾಂ ಮತ್ತು ಮುಖ್ತಿಯಾರ್ ಸಹಾಯಕ್ಕಾಗಿ ಧಾವಿಸಿದರು…” ಎಂದು ಹೇಳಿದ್ದಾನೆ!!
ಅಂತೂ… ಗೋ ರಕ್ಷಣೆಯನ್ನು ಮಾಡಹೊರಟ ನ್ಯಾನ್ ಅಲಿ ದಾರುಣವಾಗಿ ಸಾವನ್ನಪ್ಪಿದ್ದು, ಈಗಾಗಲೇ ಏಳು ಆರೋಪಿಗಳಲ್ಲಿ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ!!
-ಅಲೋಖಾ