ಅಂಕಣ

ಉದ್ಯಮಿ ಅದಾನಿಯಿಂದ ಗಾಂಧಿ-ಯೆಚೂರಿ ಪಕ್ಷಗಳು ಪೀಕಿದ್ದೆಷ್ಟು?

ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುಂಚಿನಿಂದ ಹಿಡಿದು ಸಂಪೂರ್ಣ ಬಹುಮತದೊಂದಿಗೆ ಈ ದೇಶದ ಚುಕ್ಕಾಣಿ ಹಿಡಿದಿರುವ ಇವತ್ತಿನವರೆಗೂ ಅವರನ್ನೆದುರಿಸಲು ಈ ದೇಶದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಪಡಬಾರದ ಪಾಡಿಲ್ಲ,ಮಾಡಲಾರದ ಕಸರತ್ತಿಲ್ಲ.ಆದರೆ ಆಧಾರವಿಲ್ಲದೇ ಅವರುಗಳ ಮಾಡುವ ಕಸರತ್ತುಗಳಿಂದ ಪ್ರತೀ ಬಾರಿಯೂ ಮೋದಿಯವರ ವರ್ಚಸ್ಸು ಹೆಚ್ಚುತ್ತಲೇ ಹೋಗುತ್ತಿದೆ ಮತ್ತು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ವರ್ಚಸ್ಸು ಕುಸಿಯುತ್ತಲೇ ಹೋಗುತ್ತಿದೆ!
 

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಈ ದೇಶದ ಇತ್ತೀಚಿನ ರಾಜಕೀಯವನ್ನು ಸ್ವಲ್ಪ ಹತ್ತಿರದಿಂದ ಬಲ್ಲವರಿಗೆಲ್ಲಾ ತಿಳಿದಿರುವಂತೆ ಈ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಮೋದಿಯವರಿಗೆ ಗುರಿಯಿಡಲು ಬಳಸಿಕೊಳ್ಳುತ್ತಿರುವುದು ಅದಾನಿ ಗ್ರೂಪ್ ನ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಗೌತಮ್ ಅದಾನಿ ಎನ್ನುವವರ ಹೆಗಲನ್ನು.
 

ಅದಾನಿಯ ಹಣದಿಂದಲೇ ಮೋದಿ ಪ್ರಧಾನಿಯಾಗಿದ್ದು ಎನ್ನುವುದರಿಂದ ಹಿಡಿದು ಆ ಋಣ ತೀರಿಸುವ ಸಲುವಾಗಿಯೇ ಮೋದಿಯವರು ಅದಾನಿಗೆ ಉದ್ಯಮಗಳಿಗೆ ಸಹಾಯ ಮಾಡುವ ಮೂಲಕ ಋಣ ಸಂದಾಯ ಮಾಡುತ್ತಿದ್ದಾರೆ ಎನ್ನುವವರೆಗೆ ಮೋದಿಯ ಪ್ರತೀ ನಡೆಯಲ್ಲೂ ಅದಾನಿಯ ಹೆಸರನ್ನು ತಂದು ರೈತರನ್ನು,ಕಾರ್ಮಿಕರನ್ನು ಹಾಗೂ ಬಡ ಮತ್ತು ಮಧ್ಯಮ ವರ್ಗದ ಮತದಾರರನ್ನು ಮೋದಿಯವರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಲೇ ಇದ್ದಾರೆ.
 

ಸ್ವತಃ ರಾಹುಲ್ ಗಾಂಧಿಯಿಂದ ಹಿಡಿದು ಜೈ ರಾಮ್ ರಮೇಶ್ ವರೆಗೆ,ಒಬ್ಬ ಕಾಂಗ್ರೆಸ್ ಮುಖ್ಯಮಂತ್ರಿಯಿಂದ ಹಿಡಿದು ಒಬ್ಬ ಕಾಂಗ್ರೆಸ್ ಕಾರ್ಪೊರೇಟರ್ ವರೆಗೆ ಪ್ರತಿಯೊಬ್ಬರೂ ಇದೇ ಮಾತನ್ನು ಹೇಳುತ್ತಲೇ ಮತದಾರರ ಕಣ್ಣಿಗೆ ಮಂಕು ಬೂದಿ ಎರಚುತ್ತಿದ್ದಾರೆ.ಆದರೆ ನಿಜವಾದ ವಿಷಯ ಬೇರೆಯೇ ಇದೆ.
 

ಯಾವ ಅದಾನಿ ಮೋದಿಯವರ ಆತ್ಮೀಯ ಎಂದು ಹೇಳುತ್ತಿದ್ದಾರೋ,ಯಾವ ಅದಾನಿಯ ದುಡ್ಡಿನಿಂದಲೇ ಚುನಾವಣೆ ಗೆದ್ದರು ಎನ್ನುತ್ತಿದ್ದಾರೋ ಅದೇ ಕಾಂಗ್ರೆಸ್ ಪಕ್ಷದವರು ಅದೇ ಅದಾನಿಯ ಉದ್ಯಮ ಬೆಳೆಸಲು ತಮ್ಮ ಸೆರಗು ಹಾಸಿ ಮಲಗಿದ್ದಾರೆ!
 

ಗೌತಮ್ ಅದಾನಿಯನ್ನು ತಮ್ಮ ಆಡಳಿತವಿದ್ದ ಕೇರಳಕ್ಕೆ ಹೂಗುಚ್ಛ ನೀಡಿ ಸ್ವಾಗತಿಸಿ 7,525 ಕೋಟಿ ಮೊತ್ತದ ವಿಳಿಂಜಮ್‌ ಬಂದರು ನಿರ್ಮಾಣ ಕಾಮಗಾರಿಯನ್ನು ಬಳುವಳಿಯಾಗಿ ನೀಡಿದ್ದು ಇದೇ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ. ಹಾಗೆಯೇ ಗಾಂಧಿ ವಂಶದ ಪರವಾಗಿ ಅದಾನಿಗೆ ಕೆಂಪು ಹಾಸು ಹಾಕಿ ಸ್ವಾಗತಿಸಿದ್ದು ಅವರದ್ದೇ ಪಕ್ಷದ ಮುಖ್ಯಮಂತ್ರಿಗಳಾಗಿದ್ದ ಊಮ್ಮನ್ ಚಾಂಡಿ! ಆ ಕಾಮಗಾರಿಗೆ ಅಲ್ಲಲ್ಲಿ ಸಣ್ಣ ವಿರೋಧಗಳು ವ್ಯಕ್ತವಾದಾಗ ‘ನಿಮ್ಮ ನಿರ್ಮಾಣ ಕಾಮಗಾರಿಗೆ ಎಲ್ಲಾ ರೀತಿಯ ರಕ್ಷಣೆ ನೀಡುವ ಹೊಣೆ ನನ್ನದು’ ಎಂದು ಎದೆ ತಟ್ಟಿ ಹೇಳಿದ್ದು ಇದೇ ಗಾಂಧಿ ಪಕ್ಷದ ಊಮ್ಮನ್ ಚಾಂಡಿ! 

 
ಹಾಗಾದರೆ ಅಷ್ಟು ದೊಡ್ಡ ಯೋಜನೆಯೊಂದನ್ನು ಕೊಡಿಸಿದ ಕಾಂಗ್ರೆಸ್ ಪಕ್ಷಕ್ಕೂ ಅದಾನಿ ಋಣ ಸಂದಾಯ ಮಾಡಿರಲೇಬೇಕಲ್ಲವೇ? ತನ್ನ ಉದ್ಯಮಕ್ಕೆ ಸಹಾಯ ಮಾಡಿ ಸಾವಿರಾರು ಕೋಟಿ ಲಾಭ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸೋನಿಯಾ ಗಾಂಧಿಯವರಿಗೆ ಅದಾನಿ ಕೊಟ್ಟ ಮೊತ್ತವೆಷ್ಟು?ಆ ಹಣದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖರ್ಚು ಮಾಡಿದ ಮೊತ್ತವೆಷ್ಟು?
 

ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಪೋರ್ಟ್ಸ್ ಕಾಂಗ್ರೆಸ್ ಕಮ್ಯುನಿಸ್ಟರ ಸ್ವಂತ ನಾಡಾದ ಕೇರಳದಲ್ಲಿ ಭಾರೀ ಮೊತ್ತದ ಯೋಜನೆಯನ್ನು ಪಡೆಯಲು ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನಷ್ಟೇ ತೃಪ್ತಿಪಡಿಸಿಲ್ಲ.ತಮಗೆ ಸೇರಬೇಕಾದ ಪಾಲು ತಲುಪದಿದ್ದರೆ ಕಮ್ಯುನಿಷ್ಟರು ಕಾರ್ಮಿಕರನ್ನು ಬಳಸಿಕೊಂಡು ಹೇಗೆ ಕಾಡುತ್ತಾರೆ ಎನ್ನುವುದು ಉದ್ಯಮಿಯಾದ ಅದಾನಿಗೆ ಚೆನ್ನಾಗಿಯೇ ಗೊತ್ತು.ಅದಕ್ಕಾಗಿಯೇ ಅಲ್ಲಿನ ಕಮ್ಯುನಿಷ್ಟ್ ನ ಅತೀ ಹಿರಿಯ ನಾಯಕರಾದ ವಿ.ಎಸ್.ಅಚ್ಯುತಾನಂದನ್ ರಿಂದ ಹಿಡಿದು ಕೊಡಿಯೇರಿ ಬಾಲಕೃಷ್ಣನ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಒಂದು ಕಡೆ ಕಮ್ಯುನಿಸ್ಟರ ಪರಮೋಚ್ಚ ನಾಯಕ ಯಚೂರಿಯಿಂದ ಹಿಡಿದು ಒಬ್ಬ ಮಾಮೂಲಿ ಕಮ್ಯುನಿಸ್ಟ್ ಶಾಸಕನವರೆಗೆ,ರಾಷ್ಟ್ರ ಮಟ್ಟದ ಕಾರ್ಮಿಕ ಮುಖಂಡರಿಂದ ಹಿಡಿದು ಟೌನ್ ಹಾಲ್ ಹೋರಾಟಗಾರರವರೆಗೆ ಎಲ್ಲರೂ ಮೋದಿ-ಅದಾನಿ ಬಾಯೀ ಬಾಯೀ ಎಂದು ಕೂಗುತ್ತಿದ್ದರೆ ಇಲ್ಲಿ ಕೇರಳದಲ್ಲಿ ಅದೇ ಕಮ್ಯುನಿಷ್ಟರು ತಮ್ಮ ಸ್ವಾರ್ಥ ಸಾಧನೆಗಾಗಿ ಅದೇ ಅದಾನಿಯ ಜೊತೆ ಕೈ ಕೈ ಮಿಲಾಯಿಸಿ ತಮ್ಮ ಮುಂದಿನ ಚುನಾವಣೆಗೆ ಕಾಸು ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು!
 

ಯಾವಾಗ ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷದ ನೆರವಿನೊಂದಿಗೆ ಅಲ್ಲಿನ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಡೀಲ್ ಗೆ ಸಹಿ ಬಿತ್ತೋ ಅದೇ ಕ್ಷಣದಲ್ಲಿ ಅದಾನಿಯವರ ಕಂಪನಿಯ ಷೇರು ಮೌಲ್ಯ ಶೇ.3.9 ರಷ್ಟು ಏರಿಕೆಯಾಗಿತ್ತು! 
 

ಅದಾನಿ,ಅಂಬಾನಿ,ಬಂಡವಾಳಶಾಹಿ,ಸಂಪತ್ತಿನ ಸಮಾನ ಹಂಚಿಕೆ ಎನ್ನುತ್ತಾ ಘೋಷಣೆ ಕೂಗುತ್ತಿದ್ದ ಬಡ ಕಮ್ಯುನಿಷ್ಟ್ ಕಾರ್ಯಕರ್ತರ ಸಮ್ಮುಖದಲ್ಲೇ ಅದೇ ಕಮ್ಯುನಿಷ್ಟ್ ನಾಯಕರ ನೆರವಿನೊಂದಿಗೆ ಅದೇ ಅದಾನಿಯ ಕಂಪನಿ ಒಂದೇ ದಿನದಲ್ಲಿ ಸಾವಿರಾರು ಕೋಟಿ ಲಾಭ ಮಾಡಿಕೊಂಡಿತ್ತು.ಬಹುಷಃ ಅವರೇ ಹೇಳುವಂತೆ ‘ಸಂಪತ್ತಿನ ಸಮಾನ ಹಂಚಿಕೆ’ ಸೂತ್ರ ಆ ಬಂಡವಾಳಶಾಹಿಯ ಮತ್ತು ಕಮ್ಯುನಿಷ್ಟ್ ನಾಯಕರ ನಡುವೆ ಕೆಲಸ ಮಾಡಿರಬೇಕು!
 

ಇದಿಷ್ಟೇ ಆಗಿದ್ದರೆ ಪರವಾಗಿಲ್ಲ.ಆದರೆ ಕೇರಳದ ಅಂದಿನ ಆಡಳಿತ ಪಕ್ಷ ಅದಾನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಆ ರಾಜ್ಯದ ಹಿತಾಸಕ್ತಿಗೆ ಪೂರಕವಾಗಿರಲಿಲ್ಲ ಎಂದು ಸಿ ಎ ಜಿ ವರದಿಯಲ್ಲಿ ಉಲ್ಲೇಖವಾಗಿದೆ.ಅಲ್ಲದೆ ಸಾಮಾನ್ಯ ರಿಯಾಯಿತಿ ಅವಧಿಯನ್ನು ಹತ್ತು ವರ್ಷ ವಿಸ್ತರಿಸುವ ಮೂಲಕ ಅದಾನಿ ಕಂಪನಿಗೆ ಇಪ್ಪತ್ತೊಂಬತ್ತು ಸಾವಿರ ಕೋಟಿಗೂ ಹೆಚ್ಚು ಆದಾಯ ಸಂಗ್ರಹಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಉಲ್ಲೇಖಿಸಿದೆ.
 

ಹಾಗಾದರೆ ಅದಾನಿ ಸಾಮ್ರಾಜ್ಯವನ್ನು ಕೇರಳದಲ್ಲಿ ವಿಸ್ತರಿಸಲು ಅನುವು ಮಾಡಿಕೊಟ್ಟ ಕಮ್ಯುನಿಸ್ಟರಿಗೆ ದೊರೆತ ಕಪ್ಪ-ಕಾಣಿಕೆಯೆಷ್ಟು?

Tags

Related Articles

Close