ಪ್ರಚಲಿತರಾಜಕೀಯ

ಉಪಮುಖ್ಯಮಂತ್ರಿಯಾಗಿ, ಸಾರಿಗೆ ಸಚಿವರಾಗಿ ಲಕ್ಷ್ಮಣ ಸವದಿಯವರ ಕಾರ್ಯಕ್ಷಮತೆ ಎಂತದ್ದು? ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಸವದಿ ಅವರ ಪಾತ್ರ ಏನು ಗೊತ್ತೇ?

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿ ಬಹಳಷ್ಟು ಮಂದಿಯನ್ನು ಆಹುತಿ ಪಡೆಯಲಿದೆ ಎಂದು ಯಾರೂ ಕೂಡಾ ಭಾವಿಸಿಯೇ ಇರಲಿಲ್ಲ… ಸ್ವತಃ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಂಡ ಅಮೆರಿಕಾ ಕೂಡಾ ಅದೆಲ್ಲೋ ಕಾಣಿಸಿದ ಕೊರೊನಾ ಅಮೆರಿಕಾಕ್ಕೆ ಹಬ್ಬುವುದಿದೆಯೇ ಎಂದು ಬೆಚ್ಚಗೆ ಕಂಬಳಿ ಹೊದ್ದು ಮಲಗಿತ್ತು…

ಆದರೆ ಭಾರತದ ನೆರೆ ರಾಷ್ಟ್ರವಾಗಿರುವ ಚೀನಾದಿಂದ ಕೊರೊನಾ ಪ್ರಸಾದ ಸಿಗಬಹುದು ಎಂಬ ಸೂಕ್ಷ್ಮ ವಿಚಾರ ಅರಿವಿಗೆ ಬರುತ್ತಿದ್ದಂತೆ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ತಕ್ಷಣ ಕಾರ್ಯಪ್ರವೃತ್ತರಾದರು. ಮೊದಲಿಗೆ ವುಹಾನ್ ಪ್ರಾಂತ್ಯದಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿ ಕ್ವಾರಂಟೈನ್ನಲ್ಲಿಟ್ಟರು. ಅಷ್ಟು ಮಾತ್ರವಲ್ಲದೆ ವಿದೇಶಗಳಲ್ಲಿರುವ ವಿಮಾನಯಾನಿಗಳನ್ನು ತಪಾಸಣೆ ನಡೆಸಿ ಅವರ ಟ್ರಾವೆಲ್ ಹಿಸ್ಟರಿಯನ್ನು ಪಡೆದುಕೊಂಡು ಅವರನ್ನು ಕ್ವಾರಂಟೈನ್‌ಗೊಳಪಡಿಸಿ ಒಂದು ಹಂತದಲ್ಲಿ ಕೊರೊನಾ ತಡೆಯುವಲ್ಲಿ ಯಶ್ವಸ್ವಿಯಾದರು. ಮೋದಿಯವರ ಪರಿಕ್ರಮಕ್ಕೆ ಸ್ವತಃ ವಿಶ್ವ ಅರೋಗ್ಯ ಸಂಸ್ಥೆಯೂ ಭೇಷ್ ಅಂದಿತು.‌

ಕೇರಳದಲ್ಲಿ ಚೀನಾದಿಂದ ಬಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರಲ್ಲದೆ ಅದು ಪಸರದಂತೆ ನೋಡಿಕೊಳ್ಳಲಾಯಿತು. ಆದರೆ ಕೆಲವರು ವಿದೇಶದಿಂದ ಬಂದ ಸೋಂಕಿತರು ಕ್ವಾರಂಟೈನ್‌ನಲ್ಲಿರದೆ ಊರೆಲ್ಲಾ ಸುತ್ತಾಡಿದ ಪರಿಣಾಮ ಅಲ್ಲೊಂದು ಇಲ್ಲೊಂದು ಕೊರೊನಾ ಕಾಣಿಸಿತು. ಅವರನ್ನೂ ನಿಯಂತ್ರಣದಲ್ಲಿರಿಸಲಾಯಿತು. ಆದರೆ ತಬ್ಲಿಘಿಗಳ ಜಮಾಅತ್ ಸಭೆಯ ಬಳಿಕ ಅವರು ತಪ್ಪಿಸಿಕೊಂಡ ಪರಿಣಾಮ ಕೊರೊನಾ ಭಾರತದ ಎಲ್ಲೆಂದರಲ್ಲಿ ವ್ಯಾಪಿಸಿತು.

ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಕಲ್ಬುರ್ಗಿಯಲ್ಲಿ ಕೊರೊನಾ ಸೋಂಕಿಗೀಡಾದ ವೃದ್ಧರೊಬ್ಬರು ಮೃತಪಟ್ಟರು. ಇದು ದೇಶದಲ್ಲಿ ಮೊದಲ ಸಾವಿನ ಪ್ರಕರಣವಾಗಿತ್ತು. ಇದು ಕರ್ನಾಟಕವನ್ನು ನಿಜಕ್ಕೂ ಒತ್ತಡಕ್ಕೇ ಸಿಲುಕಿತು.

ತಕ್ಷಣ ಕಾರ್ಯಪ್ರವೃತ್ತರಾದ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸದಸ್ಯರು ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರಿಯಾದ ಕ್ರಮಗಳನ್ನು ಕೈಗೊಂಡರು. ಸ್ವತಃ ಫೀಲ್ಡಿಗಿಳಿದ ಯಡಿಯೂರಪ್ಪ ಕೊರೊನಾ ಹಬ್ಬದಂತೆ ನೋಡಿಕೊಂಡ ಪರಿಣಾಮ ಕೊರೊನಾ ಹೆಚ್ಚು ವ್ಯಾಪಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.

ಕರ್ನಾಟಕದ ಉಸಿರು ಸಾರಿಗೆ ಸಂಸ್ಥೆ….

ಕರ್ನಾಟಕದ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ದಿಟ್ಟ ನಿರ್ಧಾರ, ಅವರು ತೆಗೆದುಕೊಂಡ ಕ್ರಮಗಳಿಂದಾಗಿ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ…

ಕರ್ನಾಟಕದ ಬಹುಪಾಲು ಆದಾಯ ಇರುವುದು ಸಾರಿಗೆಯಿಂದ. ಸಾರಿಗೆ ಇಲ್ಲದೆ ಕರ್ನಾಟಕವನ್ನು ಊಹಿಸುವುದೂ ಕಷ್ಟ. ಅಂತಹ ಸಾರಿಗೆ ವ್ಯವಸ್ಥೆಯನ್ನು ಲಾಕ್‌ಡೌನ್ ಮಾಡುವುದೆಂದರೆ ಅದು ಕಡ್ಲೆ ತಿಂದು ಕೈತೊಳೆದುಕೊಳ್ಳುವಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಕರ್ನಾಟಕದ ಬಹುತೇಕ ಜನರು ರಸ್ತೆ ಸಾರಿಗೆಯನ್ನೇ ಬಳಸುತ್ತಾರೆ. ಕರ್ನಾಟಕದಲ್ಲಿ ವಲಸೆ ಕಾರ್ಮಿಕರ‌ ಸಂಖ್ಯೆಯೂ ಹೆಚ್ಚು. ಸಾರಿಗೆ ಇಲ್ಲದಿದ್ದರೆ ಕರ್ನಾಟಕವನ್ನು ಊಹಿಸಲೂ ಸಾಧ್ಯವಿಲ್ಲ.‌ ಅದನ್ನು ಒಮ್ಮಿಂದೊಮ್ಮೆಲೆ ಬಂದ್ ಮಾಡುವುದೆಂದರೆ ಅಷ್ಟು ಸುಲಭವಲ್ಲ. ಯಾಕೆಂದರೆ ಜನರು ದಂಗೆ ಏಳುವ ಸ್ಥಿತಿಯೂ ಬರಬಹುದು. ಬೇರೆ ಯಾರೇ ಈ ಸ್ಥಾನದಲ್ಲಿದ್ದರೂ ಒಂದು ಕ್ಷಣ ಅವಕ್ಕಾಗುವ ಪರಿಸ್ಥಿತಿ ಬರುತ್ತಿತ್ತೇನೋ.

ಆದರೆ ಲಕ್ಷ್ಮಣ ಸವದಿ ಈ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿದರು. ಭಾರತ ಲಾಕ್ ಡೌನ್ ಆಗುತ್ತಿದ್ದಂತೆ ಸಾರಿಗೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಂದ್ ಮಾಡಿದರು. ಕೇಂದ್ರದ ಸಾರಿಗೆ ಮಾರ್ಗಸೂಚಿಗಳನ್ನು ಪಾಲಿಸಲು ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಲಾಕ್‌ಡೌನ್ ಘೋಷಣೆಯಾಗುವ ಮುಂಚೆಯೇ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಮರಳಿಸುವ ಕೆಲಸ ಮಾಡಿದರು. ಸಾರಿಗೆ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು‌ ನೀಡಿ ಇಡೀ ಸಾರಿಗೆ ಸಂಸ್ಥೆಯನ್ನೇ ಲಾಕ್‌ಡೌನ್ ಮಾಡಿಸಲಾಯಿತು. ಸಾರಿಗೆ ಅಧಿಕಾರಿಗಳು, ಖಾಸಗಿ ಸಾರಿಗೆ ಚಾಲಕ ಮಾಲಕರ ಸಭೆ ಕರೆದು ಕೊರೊನಾ ನಿಯಂತ್ರಣದಲ್ಲಿ ಕೈಜೋಡಿಸಲು ಮನವಿ‌ ಮಾಡಿದರು. ಅವರಿಗೆ ಸೂಕ್ತ ಪರಿಹಾರಗಳನ್ನು ಕಲ್ಪಿಸಲಾಯಿತು. ಇದೆಲ್ಲಾ ಲಾಕ್‌ಡೌನ್ ಘೋಷಣೆಯಾಗುವ ಮುಂಚೆಯೇ ತೆಗೆದುಕೊಂಡ ಸವದಿಯವರ ದಿಟ್ಟ ನಿರ್ಧಾರವಾಗಿತ್ತು.
ಲಾಕ್‌ಡೌನ್ ಘೋಷಣೆಯಾದ ಬಳಿಕ ಊರಿಗೆ ಮರಳಿ ಬರಲಾಗದವರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಯಿತು.‌ ಅಂತಹಾ ಅನಿವಾರ್ಯತೆ ಇರುವವರನ್ನು ಪ್ರತ್ಯೇಕವಾಗಿ ಊರಿಗೆ ಕರೆಸಿ ಕ್ವಾರಂಟೈನ್‌ನಲ್ಲಿಡಲಾಯಿತು. ದೂರದೂರಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳನ್ನು‌ ಮನೆಗೆ ಯಶಸ್ವಿಯಾಗಿ ಮರಳಿ ತರಲಾಯಿತು.

ಬಳಿಕ ಇಡೀ ರಾಜ್ಯದಲ್ಲಿ ಸಾರಿಗೆವ್ಯವಸ್ಥೆಯನ್ನು ಬಂದ್ ಮಾಡಲಾಯಿತು. ಯಡಿಯೂರಪ್ಪ ಸರ್ಕಾರ ಕೈಗೊಂಡ ಕೊರೊನಾ ನಿಯಂತ್ರಣದ ಮೊದಲ ಕೆಲಸ ಯಶಸ್ವಿಯಾಗಿ ನಡೆಯಲು ಮೂಲ‌ ಕಾರಣ ಇದೇ ಲಕ್ಷ್ಮಣ ಸವದಿ…

ಲಾಕ್‌ಡೌನ್ ಘೋಷಣೆಯಾದ ಬಳಿಕ ಊರಿಗೆ ಮರಳಿ ಬರಲಾಗದವರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಯಿತು.‌ ಅಂತಹಾ ಅನಿವಾರ್ಯತೆ ಇರುವವರನ್ನು ಪ್ರತ್ಯೇಕವಾಗಿ ಊರಿಗೆ ಕರೆಸಿ ಕ್ವಾರಂಟೈನ್‌ನಲ್ಲಿಡಲಾಯಿತು. ದೂರದೂರಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳನ್ನು‌ ಮನೆಗೆ ಯಶಸ್ವಿಯಾಗಿ ಮರಳಿಸಲಾಯಿತು.

ಇಡೀ ಸಾರಿಗೆಯನ್ನು ಲಾಕ್‌ಡೌನ್ ಮಾಡಿ ಸುಮ್ಮನೆ ಕುಳಿತರೆ ರಾಜ್ಯದ ಜನ ಅನ್ನ ತಿನ್ನಬೇಕಲ್ವಾ… ಅದಕ್ಕಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಸವದಿ ಅವರು ಕೇಂದ್ರದ ಮಾರ್ಗ ಸೂಚಿಗಳನ್ನು ಪಾಲಿಸುವುದರ ಜೊತೆಗೆ ವಿಭಿನ್ನವಾಗಿ ಯೋಚಿಸಿದರು.

ಅಗತ್ಯ ಸಾರಿಗೆ ವ್ಯವಸ್ಥೆಗಳಾದ ಸೇವಾ ಸರಕು ಸಾಗಾಣಿಕಾ‌ ವಾಹನ, ಅಗ್ನಿಶಾಮಕ, ಭದ್ರತಾ‌ವಾಹನಗಳಿಗೆ ವಿನಾಯಿತಿ‌ ನೀಡಲಾಯಿತು. ಇಂಥಾ ವಾಹನಗಳಿಗೆ ಪಾಸ್ ವಿತರಣೆ ಮಾಡಲಾಯಿತು.

ಸಾರಿಗೆ ಬಸ್‌ಗಳನ್ನು ಮಾಲಿಕರ ವಶದಲ್ಲಿರಿಸದೆ ಪ್ರಾದೇಶಿಕ ಸಾರಿಗೆ ವ್ಯವಸ್ಥೆಯ ಅಧೀನಕ್ಕೆ ತೆಗೆದುಕೊಂಡ ಪರಿಣಾಮ ವಾಹನಗಳು ರಸ್ತೆಗಿಳಿಯಲಿಲ್ಲ. ಖಾಸಗಿ ಬಸ್‌ಗಳ ಸರಂಡರ್‌ನಿಂದಾಗಿ ಬಸ್‌ನ ಎಲ್ಲಾ ದಾಖಲೆ ಪತ್ರಗಳನ್ನು ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸುವುದರಿಂದ ಮಾಲಕರು ಲಾಕ್‌‌ಡೌನ್ ಘೋಷಣೆಯಾದ ಬಳಿಕ ಸರಕಾರಕ್ಕೆ ತೆರಿಗೆ ಕಟ್ಟುವ ಭಾರದಿಂದ ಬಚಾವ್ ಆಗಿದ್ದಾರೆ. ಇನ್ನು ಜೂನ್ ತನಕ ಯಾವುದೇ ಚಿಂತೆ ಇಲ್ಲದೆ ಮಾಲಕರು ನೆಮ್ಮದಿಯಿಂದ ಬದುಕುವಂತೆ ಮಾಡಿದ ಸವದಿಯವರ ನಿರ್ಣಾಯಕ್ಕೆ ನಿಜಕ್ಕೂ ಭೇಷ್ ಅನ್ನಬೇಕು.

ವಾಹನಗಳು ಕಳ್ಳದಾರಿಯಲ್ಲಿ ಸಂಚರಿಸದಂತೆ ಪೊಲೀಸ್ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಲಕ್ಷ್ಮಣ್ ಸವದಿ. ನಿಯಮಗಳನ್ನು ಪಾಲಿಸದೆ ರಸ್ತೆಯಲ್ಲೆಲ್ಲಾ ಸಂಚರಿಸಿದ ವಾಹನಗಳನ್ನು ಲಾಕ್‌ಡೌನ್ ಇರುವ ತನಕ ವಶದಲ್ಲಿರಿಸಲು ಸೂಚನೆ ನೀಡಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್‌ಗಳನ್ನು ಸನ್ನದ್ಧವಾಗಿರಿಸಲಾಗಿದೆ.

ರೈತರಿಗೆ-ಸಾರ್ವಜನಿಕರಿಗೆ ನೆರವಾಗಲು ಕಂಟ್ರೋಲ್ ರೂಂ

ಸಾರಿಗೆ ಇಲಾಖೆಯಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ನೆರವಾಗಲು ಕಂಟ್ರೋಲ್ ರೂಂ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಅದು ರೈತರು, ಸಾರ್ವಜನಿಕರಿಗಾಗಿ ಕಾರ್ಯ ಇದು ನಿರ್ವಹಿಸುತ್ತದೆ. ಪ್ರತಿಯೊಬ್ಬರಿಗೂ ಅವಶ್ಯಕತೆಗೆ ಅನುಗುಣವಾಗಿ ವಾಹನಗಳ ಸೌಲಭ್ಯ ಒದಗಿಸಿವುದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ಅವರ ಕಳಕಳಿಯಾಗಿದೆ.

ಸಹಾಯವಾಣಿ ಸಂಖ್ಯೆ 08022236698, 9449863214
ಇದಕ್ಕೆ ಅವಶ್ಯಕತೆ ಇರುವವರು ಕರೆ ಮಾಡಬಹುದು.

ಕಾರ್ಮಿಕರ ಸಮಸ್ಯೆ ತಲೆದೋರದಂತೆ ರೈತರು ಸದ್ಯದ ಪರಿಸ್ಥಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿ ರೈತ ಬೆಳೆದಿರುವ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲದೆ ಲಾಕ್‌ಡೌನ್ ಮುಗಿದ ಬಳಿಕ ಸಾರಿಗೆ ವ್ಯವಸ್ಥೆಯನ್ನು ಯಾವ ರೀತಿ ಪ್ರಾರಂಭಿಸಬಹುದು ಎನ್ನುವ ವಿಚಾರದ ಕುರಿತು ಒಂದು ಹಂತದಲ್ಲಿ ಚರ್ಚೆಯನ್ನೂ ನಡೆಸಿದ್ದಾರೆ.

ತಾನು ಉಸ್ತುವಾರಿ ತೆಗೆದುಕೊಂಡ ರಾಯಚೂರು ಜಿಲ್ಲೆಗೆ ಕುಡಿಯುವ ನೀರು, ಅಸ್ವಸ್ಥರಿಗೆ ಚಿಕಿತ್ಸೆ, ಆಹಾರದ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ರೈತ ಬೆಳೆದಿರುವ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ರೈತ ಉತ್ಪನ್ನಗಳನ್ನು ಅಗತ್ಯಗಳಿಗನುಗುಣವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ.‌ ಸಾರಿಗೆ ಇಲಾಖೆಯಿಂದ ತೆರೆಯಲಾದ ಕಂಟ್ರೋಲ್ ರೂಂ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತದೆ. ಇದು ಸಾರ್ವಜನಿಕರಿಗಾಗಿ ಇರುವ ಸಹಾಯವಾಣಿ. ರೈತರಿಗೆ, ಸಾರ್ವಜನಿಕರಿಗಾಗಿ ಈ ಸಹಾಯವಾಣಿ ಕಾರ್ಯ ನಿರ್ವಹಿಸುತ್ತದೆ. ಪ್ರತಿಯೊಬ್ಬರಿಗೂ ಅವಶ್ಯಕತೆಗೆ ಅನುಗುಣವಾಗಿ ವಾಹನಗಳ ಸೌಲಭ್ಯ ಒದಗಿಸಲಾಗುತ್ತದೆ.

ದೇಶದಲ್ಲೇ ಪ್ರಥಮ ‘ಸಾರಿಗೆ ಸಂಜೀವಿನಿ’

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ” ಸಾರಿಗೆ ಸಂಜೀವಿನಿ” ಎಂಬ ಮೊಬೈಲ್ ಸ್ಯಾನಿಟೈಸರ್ ಬಸ್ ಸಿದ್ಧಗೊಳಿಸಿದೆ. ಇದು ದೇಶದಲ್ಲೇ ಪ್ರಥಮ ವ್ಯವಸ್ಥೆ ಆಗಿದ್ದು ಸವದಿ ಅವರ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ‌.

ಇದು ಬೆಂಗಳೂರಿನಾದ್ಯಂತ ಸಂಚರಿಸಿ, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸಹಾಯಕರು, ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ನೆರವಾಗಲಿದೆ.

ಸಂಘಟನಾ ಚತುರ, ಯಾವುದೇ ಆಡಂಬರವಿಲ್ಲದೆ, ಯಾವುದೇ ಪ್ರಚಾರಕ್ಕೆ ಹಾತೊರೆಯದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯ‌ನಿರ್ವಹಿಸುತ್ತಿರುಚ ಲಕ್ಷ್ಮಣ ಸವದಿಯವರ ಈ ಗುಣವೇ ಇಂದು ಕರ್ನಾಟಕದ ಮಹತ್ವದ ಸ್ಥಾನವಾಗಿರುವ ಸಾರಿಗೆ ಸಚಿವರಾಗಿದ್ದಾರೆ. ಅಷ್ಟೇ ಅಲ್ಲದೆ ಉಪಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿ ಯಡಿಯೂರಪ್ಪರ ಬಲಗೈ ಬಂಟನಂತೆ ಕೆಲಸ ಮಾಡುತ್ತಿದ್ದಾರೆ.

ಆರಂಭದಲ್ಲಿ ಶಾಸಕರಲ್ಲದ ಸವದಿ ಅವರಿಗೆ ಇಷ್ಟು ದೊಡ್ಡ ಜವಾಬ್ದಾರಿ ವಹಿಸುವಾಗ ಎಲ್ಲರೂ ನಿಬ್ಬೆರಗಾಗಿದ್ದರು. ಆದರೆ ಅವರ ಸಂಘಟನಾ ಚತುರತೆ, ಕಾರ್ಯಕ್ಷಮತೆಯನ್ನು ಮೆಚ್ಚಿ ಅವರಿಗೆ ಹೈಕಮಾಂಡ್ ಸೂಚನೆಯಂತೆ ಈ ಸ್ಥಾನ ವಹಿಸಲಾಗಿತ್ತು. ಸ್ವತಃ ಇದರ ನಿರೀಕ್ಷೆ ಸವದಿಯವರಿಗೂ ಇರಲಿಲ್ಲ.

ಆದರೆ‌ ಕರ್ನಾಟಕದ ಜನರ ಪುಣ್ಯದ ಫಲವೋ ಏನೋ ಯಶಸ್ವೀ ಪುರುಷನೊಬ್ಬ ಡಿಸಿಎಂ, ಸಾರಿಗೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಂದು ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ.

ನಿಜಕ್ಕೂ‌ ಲಕ್ಷ್ಮಣ ಸವದಿಗೆ ಲಕ್ಷ್ಮಣ ಸವದಿಯವರೇ ಸಾಟಿ.

Girish

Tags

Related Articles

FOR DAILY ALERTS
Close