ರಾಜ್ಯ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ದೂರದರ್ಶಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್‌‌ನಿಂದ ಕೊರೊನಾ ಸಮೂಹ ತಪಾಸಣೆ ಪ್ರಕ್ರಿಯೆ ಹೇಗಿರುತ್ತದೆ ಗೊತ್ತೇ?

ರೆಡ್‌ಜೋನ್‌ಗಳಲ್ಲಿ ಸಮೂಹ ತಪಾಸಣೆಗೆ ಪರಿಣಾಮಕಾರಿ ವಿಧಾನ

ಕೊರೊನಾ ವೈರಸ್ ಅನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಲು ಕರ್ನಾಟಕದ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ‌ ಅವರ ದೂರದರ್ಶಿ ಸಾಧನ ‘ಮೊಬೈಲ್ ಫೀವರ್ ಕ್ಲಿನಿಕ್ ‌ಬಸ್’ ಅನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಉದ್ಘಾಟಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಮೊಬೈಲ್ ಫೀವರದ ಕ್ಲಿನಿಕ್ ಬಸ್ ಆಗಿ ಮಾರ್ಪಡಿಸಲಾಗಿದೆ. ಹೌಸ್‌ಜಾಯ್‌ನ ಸ್ಥಾಪಕ ಮತ್ತು ಕೆಎಸ್‌ಆರ್‌ಟಿಸಿ ಸಿಇಒ ಸಂಚಿತ್ ಗೌರವ್, ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಎಸಿಟಿ ಕೋವಿಡ್ ಫಂಡ್ ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ ಬೆಂಗಳೂರಿನಾದ್ಯಂತ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿ ವೈರಸ್ ವಿರುದ್ಧ ಪರಿಣಾಮಕಾರಿ ಹೋರಾಡುವನಿಟ್ಟಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಅನ್ನು ರೂಪಿಸಲಾಗಿದೆ.

ಪೋರ್ಟಿಯಾ ಮೆಡಿಕಲ್, ಎಸ್‌ಆರ್‌ಎಲ್ ಡಯಾಗ್ನೋಸ್ಟಿಕ್ಸ್, ಬಯೋಗ್ನೋಸಿಸ್ ಟೆಕ್ನಾಲಜೀಸ್, ಅಪ್ನಾಕಾಂಪ್ಲೆಕ್ಸ್‌ ಹಾಗೂ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಇದರ ಪಾಲುದಾರರಾಗಿ ಪಾಲುದಾರರಾಗಿದ್ದಾರೆ.

ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಹೇಗಿದೆ?

ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಕೋವಿಡ್ ಪರೀಕ್ಷೆಗಾಗಿ ಮೊಬೈಲ್ ಆರೋಗ್ಯ ತಪಾಸಣೆ ಚಿಕಿತ್ಸಾಲಯವನ್ನಾಗಿ ಮಾರ್ಪಡಿಸಲಾಗಿದೆ. ಈ ಬಸ್ಸಿನಲ್ಲಿ ಹಾಸಿಗೆಗಳು, ಸಮಾಲೋಚನಾ ಕೊಠಡಿ, ಸರಿಯಾದ ನೈರ್ಮಲ್ಯ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳುವ 2 ವಲಯಗಳಾಗಿ ವಿಂಗಡಿಸಿ ವ್ಯವಸ್ಥೆಗೊಳಿಸಲಾಗಿದೆ.

ಬೆಂಗಳೂರಿನಾದ್ಯಂತ 4 ಮೊಬೈಲ್ ಬಸ್‌ಗಳಿದ್ದು, ಇದರಲ್ಲಿ ಚಿಕಿತ್ಸಾಲಯಗಳೊಂದಿಗೆ 4 ತಂಡಗಳು ಇರಲಿವೆ.
ಈ ತಂಡದಲ್ಲಿ ಒಬ್ಬರು ವೈದ್ಯರು, ಮೂವರು ದಾದಿಯರು ಮತ್ತು ಒಬ್ಬರು ಲ್ಯಾಬ್ ತಂತ್ರಜ್ಞರು ಇರುತ್ತಾರೆ. ಇವರೊಂದಿಗೆ ಹಲವಾರು ಸ್ವಯಂಸೇವಕರು ಸಾಥ್ ನೀಡಿದ್ದು, ತಪಾಸಣೆಯ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುತ್ತಾರೆ.

ರೆಡ್ ಝೋನ್‌ಗಳಲ್ಲಿ‌ ಸಮೂಹ ತಪಾಸಣೆ:

ಈ ಬಸ್ ಕೆಂಪು ವಲಯ(ರೆಡ್ ಜೋನ್)ಗಳಲ್ಲಿ ಸಮೂಹ ತಪಾಸಣೆ ನಡೆಸುತ್ತದೆ. ಈ ವಲಯಗಳಲ್ಲಿ ಗರಿಷ್ಠ ಸಂಖ್ಯೆಯ ನಿವಾಸಿಗಳ ರೋಗಲಕ್ಷಣಗಳ ಪರೀಕ್ಷಿಸುತ್ತದೆ. ಒಂದು ವೇಳೆ ಕೊರೊನಾ ಪಾಸಿಟಿವ್ ಕಂಡುಬಂದರೆ ಅವರನ್ನು ಪ್ರತ್ಯೇಕಿಸುತ್ತದೆ.

ಮೊಬೈಲ್ ಫೀವರ್ ಕ್ಲಿನಿಕ್ ಬಸ್‌‌ನಿಂದ ರೆಡ್ ಝೋನ್‌ಗಳಲ್ಲಿ ಗರಿಷ್ಠ ಪ್ರಮಾಣದ ತಪಾಸಣೆ ನಡೆಸಲಾಗುತ್ತದೆ.

ತಪಾಸಣಾ ಕ್ರಮಗಳು
1) ಈ ವಲಯದ ಎಲ್ಲಾ ನಿವಾಸಿಗಳಿಗೆ ಉಚಿತ ಗ್ಲೂಕೋಸ್, ರಕ್ತದೊತ್ತಡ ಪರೀಕ್ಷೆ ಮತ್ತು ಕೋವಿಡ್ ರೋಗಲಕ್ಷಣಗಳ ಸಮಾಲೋಚನೆ.
2) ಕೊರೊನಾ ಲಕ್ಷಣಗಳನ್ನು ಹೊಂದಿದ್ದರೆ ಬಯೋಗ್ನೋಸಿಸ್ ಟೆಕ್ನಾಲಜೀಸ್ (ಐಸಿಎಂಆರ್ ಪ್ರಮಾಣೀಕರಿಸಿದ, 3750 ರಿಯಾಯಿತಿ ದರದಲ್ಲಿ) ಅವರ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ.
3) + ve, ಕಂಡುಬಂದರೆ ಅವರ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಂಡು ರೋಗಿ ಇರುವ ಪ್ರದೇಶದ ಸಂಪರ್ಕ ತಡೆ ಕೇಳಲಾಗುತ್ತದೆ.
4) ನಿವಾಸಿಗಳು ಎಸ್‌ಆರ್‌ಎಲ್ ಲ್ಯಾಬ್‌ಗಳೊಂದಿಗೆ ರಕ್ತ ಪರೀಕ್ಷೆಯನ್ನು (ಸಿಬಿಸಿ, ಇಎಸ್‌ಆರ್, ಸಿಆರ್‌ಪಿ) ರೂ.300 ರಿಯಾಯಿತಿ ದರದಲ್ಲಿ ಮಾಡುವ ಆಯ್ಕೆಯನ್ನೂ ಹೊಂದಿದ್ದಾರೆ.
5) ಇದರಲ್ಲಿ SWAB Collection ವ್ಯವಸ್ಥೆ ಕೂಡ ಇದೆ.

ತಪಾಸಣೆಯ ಉದ್ದೇಶ:

ಕರ್ನಾಟಕದ ಪ್ರತಿಯೊಬ್ಬ ನಿವಾಸಿಗಳನ್ನು ತಲುಪಿ ಗರಿಷ್ಠ ಸಂಖ್ಯೆಯ ಜನರನ್ನು ಪರೀಕ್ಷಿಸುವುದು ಇದರ‌ ಮುಖ್ಯ ಉದ್ದೇಶ. ಇದರಿಂದ ರಾಜ್ಯವು ಕೋವಿಡ್ ವಿರುದ್ಧದ ಯುದ್ಧದಲ್ಲಿ ಶೀಘ್ರವಾಗಿ ಗೆಲುವು ಸಾಧಿಸುವುದು ಮತ್ತೊಂದು ಪ್ರಮುಖ ಉದ್ದೇಶ.

ಈ ಬಸ್‌ಗಳು ಎಲ್ಲೆಲ್ಲಿವೆ?

ಈಗಾಗಲೇ ಕೆ ಎಸ್ ಆರ್ ಟಿ‌ ಸಿ ಯು ,ಮೊಬೈಲ್ ಫೀವರ್ ಕ್ಲಿನಿಕ್ ಗಳನ್ನು ಮೈಸೂರು, ಮಂಡ್ಯ, ಮಂಗಳೂರು, ‌ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ,‌ತುಮಕೂರು, ರಾಯಚೂರು ಗಳಲ್ಲಿ ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಪ್ರಾರಂಭ ಮಾಡಿ ಕಾರ್ಯನಿರ್ವಹಿಸುತ್ತಿವೆ.

ವರವಾದ ಹಳೆ ಬಸ್‌ಗಳು:

ಕೆ‌ ಎಸ್ ಆರ್ ಟಿ ಸಿ‌ಯ ಹಳೆಯ ಬಸ್ಸುಗಳನ್ನು ನಿಗಮದ‌ ಕಾರ್ಯಗಾರಗಳಲ್ಲಿಯೇ ಸಿಬ್ಬಂದಿಸಹಿತವಾಗಿ ಮೊಬೈಲ್ ಫೀವರ್ ಕ್ಲಿನಿಕ್ ಗಳಾಗಿ ಮಾರ್ಪಾಡಿಸಲಾಗಿದೆ. ಬೆಂಗಳೂರಿನಲ್ಲಿಯೇ ಇನ್ನೂ ನಾಲ್ಕು ಇದೇ ಮಾದರಿಯ ಮೊಬೈಲ್ ಫೀವರ್ ಕ್ಲಿನಿಕ್ ಗಳನ್ನು ತಯಾರಿಸಿ , ಹೌಸ್ ಜಾಯ್ ಅವರಿಗೆ ನೀಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ, ಸಾರಿಗೆ ಇಲಾಖೆ ಲಕ್ಷ್ಮಣ ಸವದಿ,‌‌ ಕಂದಾಯ ಸಚಿವರಾದ‌ ಆರ್.ಅಶೋಕ, ಬೆಂಗಳೂರುದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕಳಸದ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ‌ಕೆ ಎಸ್ ಆರ್ ಟಿ ಸಿ ಇದರ ಶಿವಯೋಗಿ ಸಿ. ಉಪಸ್ಥಿತರಿದ್ದರು.‍

Tags

Related Articles

FOR DAILY ALERTS
Close