ಪ್ರಚಲಿತ

ಉರಿಯೋ ಬೆಂಕಿಗೆ ತುಪ್ಪ ಸುರಿಸಿದ ಸರ್ಕಾರ! ರಾಷ್ಟ್ರಪತಿ ಭಾಷಣದಲ್ಲಿ ಟಿಪ್ಪು ಗುಣಗಾನ! ಬೇಕಂತಲೇ ಭಾಷಣದಲ್ಲಿ ಟಿಪ್ಪುವನ್ನು ತೂರಿಸಿದ್ರಾ.?

ಟಿಪ್ಪು ಸುಲ್ತಾನನೆಂಬ ಘನಘೋರ ವ್ಯಕ್ತಿಯನ್ನೂ ಸಹ ಸ್ವಾತಂತ್ರ್ಯ ಹೋರಾಟಗಾರನಾಗಿ ಬಿಂಬಿಸಿದ್ದು ಕಾಂಗ್ರೆಸ್ ನಂತಹವರ ವ್ಯಕ್ತಿತ್ವಕ್ಕೆ ತಕ್ಕುದಾದುದೇ! ಅಬ್ಬಾ! ಇಡೀ ಕರ್ನಾಟಕವೇ ಹೊತ್ತಿ ಉರಿದರೂ ಸಹ ಟಿಪ್ಪು ಜಯಂತಿಯನ್ನಾಚರಿಸಲು ನಿರ್ಧರಿಸಿರುವ ಕಾಂಗ್ರೆಸ್ ಈ ಸಲ ವಿಧಾನ ಸೌಧದ 60 ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರೋಪದಲ್ಲಿ ಸ್ವತಃ ರಾಷ್ಟ್ರಪತಿಯೂ ಟಿಪ್ಪುವನ್ನು ಕುರಿತು ಹೊಗಳುವಂತೆ ಮಾಡಿದ್ದಾರೆ!

ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಭಾಷಣ ಬರೆದುಕೊಡುವುದು ರಾಜ್ಯ ಸರಕಾರವೇ!

ಕರ್ನಾಟಕದಲ್ಲಿ ಬಿಜೆಪಿ ಟಿಪ್ಪು ಜಯಂತಿಯನ್ನು ನಿಷೇಧಿಸುವಂತೆ ಒತ್ತಡ ಹೇರುತ್ತಿದ್ದರೆ ಸ್ವಂತ ಪಕ್ಷದಿಂದಲೇ ಆಯ್ಕೆಯಾದ ರಾಷ್ಟ್ರಪತಿ ಕೋವಿಂದ್ “ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವತಂತ್ರ್ಯ ಹೋರಾಟಗಾರ! ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಹೆಮ್ಮೆಯ ಮಗ” ಎಂದು ಭಾಷಣ ಮಾಡಿದಾಗ ಕಾಂಗ್ರೆಸ್ ನಾಯಕರು ಮೇಜು ತಟ್ಟಿ ಸಂಯಸ ವ್ಯಕ್ತಪಡಿಸಿದರೆ ಬಿಜೆಪಿಯ ನಾಯಕರಿಗೆ ಇರುಸುಮುರುಸಾಗಿತ್ತಾದರೂ ಕಾಂಗ್ರೆಸ್ ನ ಇಷ್ಟು ಸಣ್ಣ ಮನೋಭಾವಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದರು!

ವಿಷಯ ಇಷ್ಟೇ! ರಾಷ್ಟ್ರಪತಿಯವರಿಗೆ ಸರಕಾರದ ಅಧಿಕಾರಿಗಳು ಭಾಷಣದ ಪ್ರತಿಯನ್ನು ತಯಾರಿಸಿದ್ದನ್ನು ಓದುತ್ತಾರಷ್ಟೇ! ಪಾಪ! ಕಾಂಗ್ರೆಸ್ ನ ಎಲ್ಲಾ ಸಮರ್ಥನೆಗಳೂ ನೆಲಕಚ್ಚಿರುವಾಗ ಕುತಂತ್ರ ಬುದ್ಧಿ ಮಾಡಿ ಸ್ವತಃ ರಾಷ್ಟ್ರಪತಿಯವರ ಹತ್ತಿರವೇ ಟಿಪ್ಪುವನ್ನು ಹೊಗಳಿಸಿದ್ದು ಅದ್ಭುತ ಬಿಡಿ!

ದೇವೇ ಗೌಡರ ಹೆಸರೇ ಮಂಗಮಾಯ!

ಭಾಷಣದ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳ ಹೆಸರನ್ನೂ ಪ್ರಸ್ತಾಪಿಸುವ ರಾಷ್ಟ್ರಪತಿ ಭಾಷಣದ ಪ್ರತಿಯಲ್ಲಿ ಮಾಜಿ ಮುಖ್ಯ ಮಂತ್ರಿಗಳಾಗಿದ್ದ ದೇವೇ ಗೌಡರ ಹೆಸರನ್ನೇ ಕೈಬಿಡಲಾಗಿತ್ತು! ಕೊನೆಗೆ ಸ್ವತಃ ತಾವೇ ಅದನ್ನು ಜ್ಞಾಪಿಸಿಕೊಂಡು ಶುಭ ಕೋರಿದ ರಾಷ್ಟ್ರಪತ “ದೇವೇಗೌಡರನ್ನು ಮರೆಯಲು ಸಾಧ್ಯವೇ ಇಲ್ಲ” ಎಂದು ಹೊಗಳಿ ಸಭೆಯ ಮರ್ಯಾದೆ ಉಳಿಸಿದ್ದಾರೆ ಮಾನ್ಯ ರಾಷ್ಟ್ರಪತಿ!

ಕಾಂಗ್ರೆಸ್ ಯಾವ್ಯಾವುದನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿಲ್ಲ ಹೇಳಿ?! ಟಿಪ್ಪು ಸುಲ್ತಾನನೊಬ್ಬನನ್ನೇ ಅಲ್ಲ, ಸ್ವತಃ ತುಘಲಕ್ ದರ್ಬಾರ್ ನಡೆಸುತ್ತಿರುವ ಕಾಂಗ್ರೆಸ್ ನನ್ನು ಮೆಚ್ಚದೇ ಇರಲು ಸಾಧ್ಯವೇ?! ಅದೆಷ್ಟೋ ಹಿಂದೂಗಳ ಹತ್ಯೆಗೈದವನನ್ನು ನಾಯಕರಂತೆಯೇ ಬಿಂಬಿಸುವ ಕಾಂಗ್ರೆಸ್ ಇನ್ನೂ ಮುಂದೆ ಹೋಗಿ ಅದರಂತೆಯೇ ಆಡಳಿತ ನಡೆಸುತ್ತಿರುವುದನ್ನು ನೋಡಿದರೆ! ಆಹಾ! ಎಂತಹ ಗುರು – ಶಿಷ್ಯರ ಸಂಬಂಧ!

ಟಿಪ್ಪುವನ್ನು ಹಾಡಿ ಹೊಗಳಿದ್ದು ಅನಂತ್ ಕುಮಾರ್ ಹೆಗಡೆ!

ಪ್ರತೀ ಬಾರಿಯೂ ಸಹ ವಿಧಾನಸಭೆಯ ಸಂಸದ ಸಚಿವ ಶಾಸಕಾದಿಯಾಗಿ, ಪ್ರತಿಯೊಬ್ಬರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತದೆ! ಅದೇ ರೀತಿ ಈ ಬಾರಿಯೂ ನವೀಕೃತವಾಗಿ ಆಹ್ವಾನ ಪತ್ರಿಕರಯನ್ನು ತಯಾರಿಸುತ್ತಿರುವಾಗಲೇ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ‘ಟಿಪ್ಪು ಒಬ್ಬ ಮತಾಂಧ ಕ್ರೂರಿ!” ಎಂದು ಇರುವ ವಾಸ್ತವವನ್ನು ಹೇಳಿದ್ದರು! ಬಿಡಿ! ಅಷ್ಟು ಹೇಳಿದ್ದೇ,.ಕಾಂಗ್ರೆಸ್ ನವರ ವಿರೋಧವೇ ವಿರೋಧ! ಟಿಪ್ಪು ಹೆಮ್ಮೆಯಿಂದ “ತಾನೊಬ್ಬ ಮತಾಂಧ! ಹಿಂದೂ ವಿರೋಧಿ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ಅನಂತ್ ಕುಮಾರ್ ಹೆಗಡೆ ಜಾತಕ ಸಹಿತ ಪರಿಚಯಿಸಿದ್ದರು! ಆದರೆ. . . . ಟಿಪ್ಪುವನ್ನೇ ಈಗ ಹೋರಾಟಗಾರ ಎಂಬುದನ್ನಷ್ಟೇ ಹೇಳಿ ಮೂಲೆಗುಂಪಾಗಿ ಮಾಡುತ್ತಿದೆಯಷ್ಟೇ ಕಾಂಗ್ರೆಸ್!

ಆತನ ಸಾಧನೆಯ ಪಟ್ಟಿಯಲ್ಲಿ ಲಕ್ಷಾಂತರ ಹಿಂದೂ ಗಳನ್ನು ಹತ್ಯೆಗೈದ ಉಲ್ಲೇಖವಿದೆ! ಅದೆಷ್ಟೋ ಹಿಂದೂ ದೇವಾಲಯಗಳನ್ನು ಒಡೆದು ಧ್ವಂಸಗೊಳಿಸಿದ ಉಲ್ಲೇಖವಿದೆ! ಇದನ್ನೆಲ್ಲ, ಜಯಂತಿಯ ದಿನ ಎಷ್ಟೆಂದರೂ ಶಿಷ್ಯನಾದ ಸಿದ್ಧರಾಮಯ್ಯರವರ ಸರಕಾರವೊಂದು ಉಲ್ಲೇಖಿಸಲಿದೆಯೇ ಕಾದು ನೋಡಬೇಕಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close