ಇತಿಹಾಸ

ಉಳ್ಳಾಲದ ರಾಣಿ ಅಬ್ಬರಿಸಿದ್ದಕ್ಕೆ ಪೋರ್ಚುಗೀಸರು ನಡುಗಿದರೊಮ್ಮೆ! ಪೋರ್ಚುಗೀಸರನ್ನು 6 ಸಲ ಅಗ್ನಿವಾಣವನ್ನೊಂದೇ ಹಿಡಿದು ಸೋಲಿಸಿದ ರಾಣಿಯ ಬಗ್ಗೆ ಗೊತ್ತೇ?

ವಿದೇಶಿ ಆಕ್ರಮಣದಿಂದ ದೇಶವನ್ನು ರಕ್ಷಿಸಲು ಅನೇಕ ಪುರುಷರು ಮತ್ತು ಮಹಿಳೆಯರು ರಕ್ತ ಪಾತ ಹರಿಸಿ ಜೀವ ತ್ಯಾಗ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ
ಭಾರತ ತನ್ನ ಅಮೂಲ್ಯ ಸಂಪತ್ತು, ಶ್ರೀಮಂತ ಸಂಸ್ಕøತಿ, ಸಂಪ್ರದಾಯ ಮತ್ತು ಸಾಹಿತ್ಯಕ್ಕಾಗಿ ವಿದೇಶಿ ಆಕ್ರಮಣಕಾರರಿಗೆ ಆಕರ್ಷಣೆಯಾಗಿದೆ. ಬ್ರಿಟಿಷ್,
ಫ್ರೆಂಚ್,ಪೋರ್ಚ್‍ಗಲ್ ಮತ್ತು ಮೊಘಲರಿಗೆ ಭಾರತವು ಅತ್ಯಂತ ಆಕರ್ಷಣೀಯ ಸ್ಥಳವಾಗಿತ್ತು. ಕೇವಲ ಇವರಿಗೆ ನಮ್ಮ ದೇಶ ಆಕರ್ಷಣೀಯ ಸ್ಥಳವಾಗಿರಲಿಲ್ಲ!
ಹೊರತಾಗಿ ಇವರು ಭಾರತವನ್ನು ತಮ್ಮ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬಳಸಿಕೊಳ್ಳದೆ, ಭಾರತದ ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ದೋಚಿ ಇಲ್ಲಿ
ಕ್ರಿಶ್ಚಿಯನ್ ಮತ್ತು ಇಸ್ಲಾಂನ ತತ್ವಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಗೆ ಅನೇಕ ಹಿಂದೂ ಭಾರತೀಯರಿಗೆ ಸತ್ಯದ ಅರಿವಾಗುತ್ತದೆ. ನಮ್ಮ
ಸಂಸ್ಕøತಿಯನ್ನು ಅವನತಿಯತ್ತ ಕರೆದುಕೊಂಡು ಹೋಹುತ್ತಾರೆ ಅನ್ನೋ ಅರಿವಾಗಿ ಬಹುತೇಕ ಭಾರತೀಯ ರಾಜರು ಮತ್ತು ರಾಣಿಯರು ಹಿಂದೂ ಸಂಸ್ಕøತಿ ಮತ್ತು ಹಿಂದೂ ರಾಷ್ಟ್ರವನ್ನು ರಕ್ಷಿಸುವಲ್ಲಿ ತಮ್ಮ ಜೀವಗಳನ್ನೇ ತ್ಯಾಗ ಮಾಡಿದ್ದಾರೆ.

ಹಾಗೆ ಕರ್ನಾಟಕ ಅನೇಕ ಮಹಾನ್ ಯೋಧರು ಮತ್ತು ಮಹಾನ್ ರಾಜರುಗಳಿಗೆ ಹೆಸರುವಾಸಿಯಾಗಿತ್ತು,ಭಾರತ ಇತಿಹಾಸವನ್ನು ಚಿನ್ನದ ಅಕ್ಷರಗಳಲ್ಲಿ ಬರೆದ
ಇತಿಹಾಸ ಕರ್ನಾಟಕಕ್ಕೆ ಸೇರಿದ್ದು. ಕರಾವಳಿಯ ಮಂಗಳೂರಿನ ಉಳ್ಳಾಲದಲ್ಲಿ ಕೆಚ್ಚೆದೆಯ ಮಹಿಳೆ ಅಬ್ಬಕ್ಕ ರಾಣಿ ಇಲ್ಲಿ ಜನಿಸಿದ್ದು. ಈ ಸ್ಥಳವು ತುಳುನಾಡು ಎಂದೇ ಪ್ರಸಿದ್ಥಿಯಾಗಿದೆ. ಅಬ್ಬಕ್ಕ ರಾಣಿಯನ್ನು ಅಬ್ಬಕ್ಕ ಮಹಾದೇವಿ ಎಂದು ಕರೆಯಲಾಗುತ್ತಿತ್ತು. ಪೋರ್ಚುಗೀಸರೊಂದಿಗೆ ಅತ್ಯಂತ ವೀರಾವೇಶದಿಂದ ಹೋರಾಟ ಮಾಡಿದ ಮಹಿಳೆ ಈಕೆ.

ಅಬ್ಬಕ್ಕ ಸಣ್ಣ ರಾಜ್ಯವಾದ ಉಳ್ಳಾಲ ರಾಣಿಯಾಗಿದ್ದು,ಇತಿಹಾಸದಲ್ಲಿನ ಅವಿಸ್ಮರಣೀಯವಾಗಿದ್ದಾಳೆ. ಆದರೆ ಇಂತಹ ಕೆಚ್ಚೆದೆಯ ಯೋಧರ ಬಗ್ಗೆ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ತಿಳಿಸಲು ನಮ್ಮ ಪಠ್ಯಪುಸ್ತಕದಲ್ಲಿ ಜಾಗವೇ ಇಲ್ಲ ಎಂಬುದು ವಿಷಾದನೀಯ.

ಅಬ್ಬಕ್ಕ ಬಾಲ್ಯದಿಂದಲೂ ಅತ್ಯಂತ ಶಕ್ತಿಶಾಲಿ ಹಾಗೂ ಅವಳ ಸಾಮ್ರಾಜ್ಯದಲ್ಲಿ ಎಲ್ಲಾ ಬಿಲ್ಲುಗಾರಿಕೆ ಮತ್ತು ಕತ್ತಿ ವರಸೆಯಲ್ಲಿ ಓರ್ವ ಮುಖ್ಯಸ್ಥೆಯಾಗಿ ಕೆಲಸ
ನಿರ್ವಹಿಸುತ್ತಿದ್ದಳು. ಇವಳು ಅತ್ಯಂತ ವಿನಮ್ರ ವ್ಯಕ್ತಿಯಾಗಿದ್ದು, ಅತ್ಯಂತ ಸರಳ ಜೀವನವನ್ನು ನಿರ್ವಹಿಸುತ್ತಿದ್ದಳು. ರಾಣಿಯಾಗಿದ್ದರೂ ಸಾಮಾನ್ಯ ಮನುಷ್ಯರಂತೆ
ಉಡುಗೆ ತೊಡುಗೆಯನ್ನು ಧರಿಸುತ್ತಿದ್ದಳು. ಎಷ್ಟೇ ರಾತ್ರಿಯಾಗಿದ್ದರೂ ತನ್ನ ಕುದುರೆ ಹತ್ತಿಕೊಂಡು ಎಲ್ಲಾ ಕಡೆ ಸುತ್ತಾಡಿ ಜನರ ಸುಖ ದು:ಖಗಳನ್ನು ವಿಚಾರಿಸಿಕೊಂಡು ಬರುತಿದ್ದ ಅತ್ಯಂತ ಸರಳ ಜೀವಿ.

ರಾಣಿ ಅಬ್ಬಕ್ಕ ತನ್ನ ನೆರೆಹೊರೆಯ ರಾಜನಾದ ಬಂಗಾರನ ಜೊತೆ ವಿವಾಹವಾಗುತ್ತಾಳೆ. ಅವರ ದಾಂಪತ್ಯ ಮಾತ್ರ ತುಂಬಾದಿನ ಉಳಿಯುವುದಿಲ್ಲ. ಅವರು ಕೊಟ್ಟಂತಹ ಎಲ್ಲಾ ಚಿನ್ನಾಭರಣಗಳನ್ನು ವಾಪಸ್ಸು ಕೊಟ್ಟು ವಿಚ್ಛೇದನ ವಾಗುತ್ತದೆ. ಅದೇ ಸೇಡಿಗಾಗಿ ಅಬ್ಬಕ್ಕನ ಪತಿ ಪೋರ್ಚುಗೀಸರೊಂದಿಗೆ ಸೇರಿ ಉಳ್ಳಾಲದ ಸಾಮ್ರಾಜ್ಯವನ್ನು ಕೆಡವಲು ಸಹಾಯಮಾಡುತ್ತಾನೆ. ಪೋರ್ಚುಗೀಸರು ಯಾವಾಗಲೂ ಕರಾವಳಿಯ ಬಂದರನ್ನು ಹಿಡಿತದಲ್ಲಿಟ್ಟುಕೊಂಡಿದ್ದರು. ಯಾಕೆಂದರೆ ಇತರ ದೇಶಗಳಿಗಿಂತ ಕರಾವಳಿಯ ಉಳ್ಳಾಲ ಅತ್ಯಂತ ಶ್ರೀಮಂತ ದೇಶವಾಗಿತ್ತು ಹಾಗೂ ಸಂಬಾರ ಪದಾರ್ಥಗಳಿಗೆ ಪೋರ್ಚುಗೀಸರು ಮಾರು ಹೋಗಿದ್ದರು. ಹಾಗಾಗಿ ಪೋರ್ಚುಗೀಸರು ಆರು ಬಾರಿ ಉಳ್ಳಾಲದ ಜೊತೆ ಯುದ್ಧ ಮಾಡುತ್ತಾರೆ. ಆದರೆ ರಾಣಿ ಅಬ್ಬಕ್ಕ ಮಾತ್ರ ಧೈರ್ಯ ಮತ್ತು ಸಾಹಸದಿಂದ ಯುದ್ಧ ಮಾಡುತ್ತಾಳೆ.

ರಾಣಿ ಅಬ್ಬಕ್ಕ ತನ್ನ ರಾಜ್ಯದ ತನ್ನ ಎಲ್ಲಾ ಜನರನ್ನು ಜಾತಿ ಭೇದ ಮಾಡದೆ ಎಲ್ಲಾ ಜನರನ್ನು ಸಮಾನತೆಯಿಂದ ನೋಡುತ್ತಿದ್ದಳು. ಅಬ್ಬಕ್ಕ ಜೈನ ಧರ್ಮದಲ್ಲಿ
ಬೆಳೆದಿದ್ದು, ಹಿಂದುತ್ವಕ್ಕೆ ಅತ್ಯಂತ ಮಹತ್ವವನ್ನು ನೀಡುತ್ತಿದ್ದಳು ಹಾಗೂ ಶಿವ ದೇವರ ಆರಾಧನೆಯನ್ನು ಮಾಡುತ್ತಿದ್ದಳು. ಅವಳ ಸೈನ್ಯದಲ್ಲಿ ಅನೇಕ ಜಾತಿಯ
ಜನರಿದ್ದರೂ ಕೂಡಾ ಅವಳು ಅವರನ್ನೆಲ್ಲಾ ಸಮಾನತೆಯಿಂದ ನೋಡುತ್ತಿದ್ದಳು.

ಪ್ರಥಮ ದಾಳಿ:

1525 ರಲ್ಲಿ ಪೋರ್ಚುಗೀಸರು ಉಳ್ಳಾಲದ ಬಂದರಿನ ಮೇಲೆ ಮೊದಲ ದಾಳಿಯನ್ನು ಮಾಡುತ್ತಾರೆ. ಆದರೆ ಅವರು ಗೆಲುವು ಸಾಧಿಸದೆ ತಮ್ಮ ಗೂಡಿಗೆ ವಾಪಸ್ಸು
ಮರಳುತ್ತಾರೆ.

ಎರಡನೇ ದಾಳಿ:
1555ರಲ್ಲಿ ಮತ್ತೆ ಎರಡನೇ ಬಾರಿ ದಾಳಿ ಮಾಡುತ್ತಾರೆ. ಅ ಸಮಯದಲ್ಲಿ ಅಬ್ಬಕ್ಕನೊಂದಿಗೆ ಕಪ್ಪ ಕೊಡುವಂತೆ ಬೇಡಿಕೆ ಇಡುತ್ತಾರೆ. ಆದರೆ ಅಬ್ಬಕ್ಕ ಮಾತ್ರ ಅದನ್ನು ನಿರಾಕರಿಸುತ್ತಾಳೆ. ವೀರಾವೇಶದಿಂದ ಅವರೊಂದಿಗೆ ಹೋರಾಟ ಮಾಡುತ್ತಾಳೆ..ಅಬ್ಬಕ್ಕನ ಜೊತೆ ಯುದ್ಥದಲ್ಲಿ ಸೋತು ಓಡಿ ಹೋಗುತ್ತಾರೆ.

ಮೂರನೇ ದಾಳಿ:
1557ರಲ್ಲಿ ಮತ್ತೆ ಅಬ್ಬಕ್ಕನೊಂದಿಗೆ ಪೋರ್ಚುಗೀಸರು ಹೀನಾಯ ಸೋಲನ್ನು ಅನುಭವಿಸುತ್ತಾರೆ. ಆ ಸೇಡಿಗಾಗಿ ಸಾಮಾನ್ಯ ಜನರ ಕೊಲ್ಲುತ್ತಾರೆ. ಅನೇಕ ಹಡಗುಗಳನ್ನು ಹಾಗೂ ಊರುಗಳನ್ನು ಧ್ವಂಸ ಮಾಡುತ್ತಾರೆ.

ನಾಲ್ಕನೇ ದಾಳಿ:
ಸರದಿ ಪ್ರಕಾರ ಸೋಲನುಭವಿಸಿದರೂ ಉಳ್ಳಾಲದ ರಾಣಿ ಅಬ್ಬಕ್ಕನನ್ನು ಸೋಲಿಸಲು ಸಾಧ್ಯವಾಗಲಿಲ್ಲ. 1567ರಲ್ಲಿ ಅಬ್ಬಕ್ಕನ್ನು ಶರಣಾಗುವಂತೆ ಪೋರ್ಚುಗೀಸರು ಒತ್ತಾಯಿಸುತ್ತಾರೆ. ಅದಕ್ಕೆ ನಿರಾಕರಿಸಿದಾಗ ಉಳ್ಳಾಲದ ಪ್ರಮುಖ ಜನರ ಮೇಲೆ ದಾಳಿ ಮಾಡುತ್ತಾರೆ.

ಐದನೇ ದಾಳಿ:

1568 ರಲ್ಲಿ ಮತ್ತೆ ದಾಳಿ ನಡೆಸಲಾಗುತ್ತದೆ ಹಾಗೂ ಪೋರ್ಚುಗೀಸ್ ವೈಸ್‍ರಾಯ್ ಜನರಲ್ ಜೊವೊ ಪೀಕ್ಸ್ಟೋ ಅವರನ್ನು ಕಳುಹಿಸಲಾಯಿತು. ಆಂಟೋನಿಯಾ
ನೊರೊನ್ಹಾ ಅವರು ಅಬ್ಬಕ್ಕನ್ನು ವಶಪಡಿಸಿಕೊಳ್ಳುತ್ತಾನೆ. ಅಲ್ಲಿಂದ ಅಬ್ಬಕ್ಕ ತಪ್ಪಿಸಿಕೊಳ್ಳಲು ತಾನೇ ನಿರ್ವಹಿಸುತ್ತಿದ್ದ ಮಸೀದಿ ನಿರಾಶ್ರಿತರ ಸಹಾಯ
ತೆಗೆದುಕೊಳ್ಳುತ್ತಾಳೆ. ಅದೇ ರಾತ್ರಿ 200 ಸೈನಿಕರೊಂದಿಗೆ ಒಟ್ಟುಗೂಡಿ ಜನರಲ್ ಪಿಕ್ಸಟೋನೊಂದಿ ಆಕ್ರಮಣ ಮಾಡುತ್ತಾರೆ. ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಅಬ್ಬಕ್ಕ ಯಶಸ್ವಿಯಾಗುತ್ತಾಳೆ. ಈ ದಾಳಿ ಇಡೀ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣವಾಗಿದೆ.

ಆರನೇ ದಾಳಿ:

1569ರಲ್ಲಿ ಪೋರ್ಚುಗೀಸರು ಹೆಚ್ಚಿನ ಸೈನಿಕರನ್ನು ಪಡೆದುಕೊಂಡು ಉಳ್ಳಾಲದ ಕೋಟೆಯನ್ನು ವಶಪಡಿಸಿಕೊಳ್ಳುತ್ತಾರೆ. ಅಬ್ಬಕ್ಕನ ಮಾಜಿ ಗಂಡನ ಪಿತೂರಿಯಿಂದ ಪೋರ್ಚುಗೀಸರು ಕೋಟೆಯನ್ನು ಪಡೆಯುವಲ್ಲಿ ಯಸಸ್ವಿಯಾಗುತ್ತಾರೆ. ಕೊನೆಗೆ ರಾಣಿ ಅಬ್ಬಕ್ಕ ಅಹಮ್ಮದ್ ನಗರದ ಬಿಜಾಪುರ ಸುಲ್ತಾನ ಹಾಗೂ ಕಲ್ಕತ್ತದ ಝೆಮೋರಿನ್ ಜೊತೆ ಮೈತ್ರಿ ಮಾಡಿಕೊಂಡು ಪೋರ್ಚುಗೀಸರೊಂದಿಗೆ ಯುದ್ಧ ಮಾಡುತ್ತಾಳೆ. ಪೋರ್ಚುಗೀಸರ ಸೈನ್ಯವು ಹಲವಾರು ಸಾವು ನೋವುಗಳನ್ನು ಅನುಭವಿಸುತ್ತದೆ. ಆದರೆ ಝಮೋರಿನ್ ಅಂತಿಮ ಯುದ್ಧದಲ್ಲಿ ಕೊಲ್ಲಲ್ಪಡುತ್ತಾನೆ.

ಅಬ್ಬಕ್ಕನ ಮಾಜಿ ಪತಿ ಎಲ್ಲಾ ರಹಸ್ಯ ಮಾರ್ಗವನ್ನು ಪೋರ್ಚುಗೀಸರಿಗೆ ತಿಳಿಸಿಕೊಡುತ್ತಾನೆ. ಕೊನೆಗೆ ಅಬ್ಬಕ್ಕನನ್ನು ವಶಪಡಿಸಿಕೊಂಡು ಸೆರೆವಾಸಕ್ಕೆ ತಳ್ಳಲಾಗುತ್ತದೆ. ನಾನು ಜೈಲಿನಲ್ಲಿದ್ದರೂ ಪೋರ್ಚುಗೀಸರೊಂದಿಗೆ ಯದ್ಧ ನಿಲ್ಲಿಸಬಾರದೆಂದು ವೀರಾವೇಶದಿಂದ ಹೇಳಿದ ವೀರ ಮಹಿಳೆ ಈಕೆ.ಹಾಗಾಗಿ ಇತಿಹಾಸದ ಪುಟದಲ್ಲಿ ಹಾಗೂ ನಮ್ಮಲ್ಲೆರ ಮನಸ್ಸಿನಲ್ಲಿ ಚಿರಸ್ಮರಣೀಯವಾಗಿ ಉಳಿದುಕೊಂಡಿದ್ದಾಳೆ.

ಅವಳ ಹೋರಾಟವನ್ನು ಯಾರೂ ನೋಡಿದ್ದಾರೋ ಅಗ್ನಿವಾಣವನ್ನು ಹೊತ್ತೊಯ್ಯುವ ಯೋಧ ಬೆಂಕಿಯ ಬಾಣ ಎಂದು ವರ್ಣಿಸಿದ್ದಾರೆ. ಇಂದಿಗೂ ಸಹ ಮಂಗಳೂರಿನಲ್ಲಿ ಅಬ್ಬಕ್ಕ ಸ್ಮರಣಾರ್ಥವಾಗಿ “ವೀರ ರಾಣಿ ಅಬ್ಬಕ್ಕ ಉತ್ಸವ” ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ.

-ಶೃಜನ್ಯಾ

Tags

Related Articles

Close