ಅಂಕಣ

ಎಡಪಂಥೀಯರ ಕೆಂಪು ಉಗ್ರವಾದ ಭಾರತದಲ್ಲಿ ಹಿಂದೂಗಳ ಮಾರಣಹೋಮ ನಡೆಸಿದ್ದು ಹೇಗೆ ಗೊತ್ತೇ?

ಕಮ್ಯೂನಿಸಂ ಎನ್ನುವ ಸಿದ್ದಾಂತ ಎಲ್ಲಿ ಹುಟ್ಟಿಕೊಂಡಿತೋ, ಯಾತಕ್ಕಾಗಿ ಹುಟ್ಟಿಕೊಂಡಿತು ಎನ್ನುವ ಅಂಶಗಳನ್ನು ಹುಡುಕುತ್ತಾ ಹೋದಾಗ ಅದರಲ್ಲಿರುವ ಎಷ್ಟೋ
ವಿಚಾರಗಳು ನಮ್ಮನ್ನು ಕಾಡುತ್ತಾ ಹೋಗುತ್ತೆ!! ಯಾಕೆಂದರೆ ನಮ್ಮ ದೇಶದಲ್ಲಿ ಕಮ್ಯೂನಿಸಂನಿಂದ ಆದ ಹಾವಳಿಗಳು ಅಷ್ಟಿಷ್ಟಲ್ಲ!! ಭಾರತದಲ್ಲಿ ಕಮ್ಯೂನಿಸಂ
ಯಾವಾಗ ಎಂಟ್ರಿಯಾಯಿತು, ಅಲ್ಲಿಂದ ಕಮ್ಯೂನಿಸಂ ಶ್ವೇಚ್ಛಾಚಾರವಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು!! ಯಾಕೆಂದರೆ ಕಾರ್ಲ್‍ಮಾಕ್ರ್ಸ್ ಸಿದ್ದಾಂತದಲ್ಲಿ, ಆತ ಶ್ರೀಮಂತಿಗೆ ಮತ್ತು ಬಡತನದ ಬಗ್ಗೆ ಇರುವ ಮಟ್ಟವನ್ನು ಹೇಳುತ್ತಾ ಇದ್ದ, ಅಷ್ಟೇ ಅಲ್ಲದೇ ವರ್ಣಬೇಧ ವಿಚಾರವನ್ನು ತನ್ನ ಮಾಕ್ರ್ಸ್ ಸಿದ್ದಾಂತದಲ್ಲಿ ಮಂಡಿಸಿದ್ದ ಕೂಡ!! ಆದರೆ ಕಮ್ಯೂನಿಸಂ ಭಾರತದಲ್ಲಿ ಯಾವ ರೀತಿಯ ಪ್ರಭಾವ ಬೀರಿತು ಎಂದರೆ, ಅದೆಷ್ಟೋ ಹಿಂದೂಗಳ ಮಾರಣ ಹೋಮಗಳು ನಡೆದೇ ಹೋದವು!!

ಕಾರ್ಲ್‍ಮಾಕ್ರ್ಸ್ ಸಿದ್ದಾಂತದಲ್ಲಿದ್ದ ವರ್ಣಭೇದ ನೀತಿಯು, ಭಾರತದಲ್ಲಿ ಜಾತಿ ವ್ಯವಸ್ಥೆಯಾಗಿ ಮಾರ್ಪಟ್ಟಿತ್ತು!! ನಾವು ಯಾವುದೇ ಸಿದ್ದಾಂತವನ್ನು ಬೆಂಬಲಿಸಬೇಕಾದರೆ ಅದು ನಮ್ಮತನದಿಂದ ಕೂಡಿರಬೇಕು, ಅಂದರೆ ಭಾರತ ದೇಶಕ್ಕೆ ಏನಾದರೂ ಹೊಸತನ ಬೇಕು ಎಂದರೆ ಭಾರತದಲ್ಲಿರುವ ಅದೆಷ್ಟೋ ಆದ್ಯಾತ್ಮಿಕ ವ್ಯಕ್ತಿಗಳ, ದೇಶಾಭಿಮಾನಿಗಳ ಸಿದ್ದಾಂತಗಳು ಉದಾಹರಣೆಗೆ ಸ್ವಾಮಿ ವಿವೇಕನಂದ, ರಾಮಕೃಷ್ಣಪರಮಹಂಸ, ನಾರಾಯಣ ಗುರುಗಳಂತಹ ಅದೆಷ್ಟೋ ಮಹಾನ್ ವ್ಯಕ್ತಿಗಳ (ನೆಹರು ಅಲ್ಲ) ಸಿದ್ದಾಂತಗಳನ್ನು ಅಳವಡಿಸಿಕೊಂಡರೆ ಸೂಕ್ತ!! ಅದು ಬಿಟ್ಟು ಕಾರ್ಲ್‍ಮಾಕ್ರ್ಸ್ ಸಿದ್ದಾಂತದಲ್ಲಿ ಇರುವ ಉತ್ತಮವಾದ ಸಿದ್ದಾಂತಗಳನ್ನೇ ತಿರುಚಿ ಇದು ಕಾಲ್ರ್ಸ್‍ಮಾಕ್ರ್ಸ್ ಸಿದ್ದಾಂತ ಎಂದು ಅದನ್ನು ಭಾರತದಲ್ಲಿ ಅನುಸರಿಸುವ ಕಮ್ಯೂನಿಸ್ಟ್ ರಾಕ್ಷಸರು ಅದೆಷ್ಟೋ ಹಿಂದುಗಳ ಜೀವನದಲ್ಲಿ ಚೆಲ್ಲಾಟವನ್ನು ಆಡಿದ್ದಾರೋ ಗೊತ್ತಿಲ್ಲ!!

ಕಮ್ಯುನಿಸ್ಟ್ ಚಿಂತನೆಯೇ ತಪ್ಪಾಗಿದ್ದು, ಅದು ಕ್ರಾಂತಿಯಲ್ಲೇ ವಿಶ್ವಾಸವಿರಿಸಿಕೊಂಡ ಪಕ್ಷ!! ಶಸ್ತ್ರದ ಮೂಲಕ ಕ್ರಾಂತಿಯನ್ನು ಸೃಷ್ಟಿಸಿದ ಬ್ಲೆಡ್ ರೆವೆಲ್ಯೂಷನ್!! ಯಾವಾಗ ಯುರೋಪ್‍ನಲ್ಲಿ ಕಮ್ಯೂನಿಸ್ಟ್ ಜಾರಿಯಾಯಿತೋ ಅದು ಆರಂಭವಾಗಿದ್ದು ಹಿಂಸೆಯ ಮೂಲಕವೇ. ಕಾರ್ಲ್ ಮಾರ್ಕ್ಸ್ ಮಾರ್ಕ್ಸಿಸ್ಟ್ ಸಿದ್ಧಾಂತವನ್ನು ರೂಪಿಸಿದರೆ ಅದನ್ನು ಹಿಂಸಾತ್ಮಕ ರೀತಿಯಲ್ಲಿ ಲೆನಿನ್ ನಂತರ ಸ್ಟಾಲಿನ್ ಜಾರಿಗೆ ತಂದರು!! ಆ ಸಂದರ್ಭದಲ್ಲಿ ಯುರೋಪ್‍ನೆಲ್ಲೆಡೆ ಮಾರಣ ಹೋಮಗಳು ನಡೆದೇ ಹೋದವು. ಝಾರ್ ವಂಶದ ಅರಸರನ್ನು, ಅರಸು ಮನೆತನದ ಕುಡಿಗಳನ್ನು ಭೂಮಾಲೀಕರನ್ನು, ಕೈಗಾರಿಕಾ ಉದ್ಯಮಿಗಳನ್ನು ನಿಷ್ಕರುಣೆಯಿಂದ ಕೊಲ್ಲಲಾಯಿತು. ಹೀಗೆ ಕಮ್ಯುನಿಸ್ಟ್ ಆಡಳಿತಕ್ಕೆ ಬಂತು.

ಕಮ್ಯುನಿಸ್ಟ್ ನಲ್ಲಿ ಪ್ರಜಾಪ್ರಭುತ್ವವಿಲ್ಲ, ಅಲ್ಲಿ ಚುನಾವಣೆ ಇಲ್ಲ, ಪತ್ರಿಕಾ ಸ್ವಾತಂತ್ರ್ಯವೂ ಇಲ್ಲ!! ಹಾಗಾಯೇ ಸಾಮಾಜಿಕ ಜಾಲತಾಣಗಳಿಗೂ ಅವಕಾಶವಿಲ್ಲ. ಕಮ್ಯುನಿಸ್ಟ್ ಚೀನಾದಲ್ಲಿ ಫೇಸ್ ಬುಕ್, ವಾಟ್ಸಾಪ್, ಟ್ವೀಟರ್, ಗೂಗುಲ್ ಇವು ಯಾವುದಕ್ಕೂ ಪ್ರವೇಶವೇ ಇಲ್ಲ!!! 1989 ರಲ್ಲಿ ಪ್ರಜಾಪ್ರಭುತ್ವಕ್ಕೆ ಆಗ್ರಹಿಸಿ ತಿಯಾನ್ಮನ್ ಸ್ಕ್ವೇರ್‍ಗೆ ಬಂದು ಪ್ರತಿಭಟನೆ ಮಾಡಿದ್ದ 10000 ವಿದ್ಯಾರ್ಥಿಗಳ ಮೇಲೆ ಟ್ಯಾಂಕರ್ ಹರಿಸಿ, ಗುಂಡು ಹಾರಿಸಿ ಅವರನ್ನು ಕ್ರೂರವಾಗಿ ಕೊಲ್ಲಲಾಯಿತು. ಇದು ಕಮ್ಯುನಿಸ್ಟ್ ಸಿದ್ಧಾಂತವನ್ನು ಅಕ್ಷರಶ: ಜಾರಿಗೆ ತಂದ ದೇಶದ ಕತೆ!!

ಕಮ್ಯುನಿಸ್ಟ್‍ನ ದುರಾಡಳಿತವಿರುವ ಇನ್ನೊಂದು ದೇಶ ಉತ್ತರ ಕೋರಿಯಾ. ಕಿಮ್ ಜೋಮ್‍ನ ಸರ್ವಾಡಳಿತದ ನಾಡಾದ ಉತ್ತರ ಕೋರಿಯಾದ ಜನರ
ದುರಾವಸ್ಥೆಯನ್ನು ಹೇಳಿ ಪ್ರಯೋಜನವಿಲ್ಲ. ಯುದ್ಧಾತುರ ಕಿಮ್ ಜೋ ಜನರ ಅನ್ನವನ್ನು ಕಿತ್ತುಕೊಂಡು ಮಿಲಿಟರಿ ಉಪಕರಣಗಳನ್ನು ಸಿದ್ಧ ಮಾಡುತ್ತಾ ,ಹೈಡ್ರೋಜನ್ ಬಾಂಬ್ ಪರೀಕ್ಷೆ ಮಾಡುತ್ತಾ ಅಮೇರಿಕದ, ಜಪಾನ್‍ನ ಹಾಗೂ ದಕ್ಷಿಣ ಕೋರಿಯಾದ ಮೇಲೆ ಕಾಲ್ಕೆರೆದು ಯುದ್ಧಕ್ಕೆ ಹೋಗುತ್ತಿದ್ದಾನೆ. ಜನಾಕರ್ಷಣೆಯನ್ನು ಕಳೆದುಕೊಂಡ ಕಮ್ಯುನಿಸ್ಟ್ ರಷ್ಯಾ, ಜರ್ಮನಿ, ಹಂಗೇರಿ ಮುಂತಾದ ದೇಶಗಳಲ್ಲಿ ಆಡಳಿತವನ್ನು ಕಳೆದುಕೊಂಡಿದೆ!! ಭಾರತದ ಪಶ್ಚಿಮ ಬಂಗಾಲ, ತ್ರಿಪುರಾ, ಈಶಾನ್ಯ ರಾಜ್ಯಗಳು, ಒರಿಸ್ಸಾ, ಬಿಹಾರ ,ಕೇರಳಗಳಲ್ಲಿ ಬಲಿಷ್ಟವಾಗಿದ್ದ ಆ ಪಕ್ಷ ಇಂದು ಇತರೆಡೆಗಳಲ್ಲೆಲ್ಲಾ ನೆಲಕಚ್ಚಿದ್ದು ಕೇರಳದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಉಳಿದುಕೊಂಡಿದೆ. ಕೇರಳದಲ್ಲೂ ತನ್ನ ಅಸ್ಥಿತ್ವವನ್ನುಳಿಸಿಕೊಳ್ಳಲು ಹಿಂಸಾ ಮಾರ್ಗವನ್ನೇ ಅನುಸರಿಸುತ್ತಿದೆ ಎಂದರೆ ನಂಬ್ತೀರಾ?? ಆದರೆ ಇನ್ನು ನಂಬಲೇಬೇಕು!! ಯಾಕೆಂದರೆ ಕೇರಳದಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೇರಳ ಅದ್ಯಾವ ಮಟ್ಟಕ್ಕೇ ಬೇಕಾದರೂ ಇಳಿಯುತ್ತೆ!!

ಕಮ್ಯೂನಿಸಂನ ಆರಂಭ…………….!!!

ಮಾರ್ಕ್ಸ್ ಮತ್ತು ಎಂಗೆಲ್ಸ್‍ರಿಂದ ಪ್ರಪ್ರಥಮವಾಗಿ ಶಾಸ್ತ್ರೀಯವಾಗಿ ಪ್ರತಿಪಾದಿತವಾದ ಕಮ್ಯೂನಿಸಂ ತತ್ತ್ವಕ್ಕೆ ವೈಜ್ಞಾನಿಕ ಸಮಾಜವಾದವೆಂದೂ ಹೆಸರಿದೆ!! ಆದರೆ 19ನೇಯ ಶತಮಾನದ ಪೂರ್ವಾರ್ಧದ ಹೊತ್ತಿಗೆ ಜನರಿಗೆ ಸಮಾಜವಾದವೆಂಬ ಹೆಸರು ಮಾತ್ರವಲ್ಲದೇ ಅದರ ಸ್ವರೂಪವೂ ಪರಿಚಯವಾಗಿದ್ದುವು. ಆದರೂ ಮಾರ್ಕ್ಸ್ ಮತ್ತು ಎಂಗೆಲ್ಸ್‍ರು ಸಮಾಜವಾದವನ್ನು ಸಮಾಜವಾದವೆಂದೇ ಕರೆಯದೇ ಕಮ್ಯೂನಿಸಂ ಎಂದು ಕರೆದರು!! ಇದಕ್ಕೆ ಕಾರಣವೂ ಇತ್ತು. 1847ರ ಹೊತ್ತಿಗೆ ಒಂದು ಕಡೆ ಸಮಾಜವಾದಿಗಳೆಂದು ಹೇಳಿಕೊಳ್ಳುವ ಭಾವನಾವಾದಿಗಳ ಗುಂಪಿಗೆ ಸೇರಿದ ತಂಡಗಳಿದ್ದುವು-ಇಂಗ್ಲೆಂಡಿನ ಓವೆನ್ನ ಹಿಂಬಾಲಕರೂ ಫ್ರಾನ್ಸಿನ ಫೂರ್ಯೇನ ಹಿಂಬಾಲಕರೂ ಕೂಡ ಇಂಥವರು. ಅಷ್ಟೇ ಅಲ್ಲದೇ, ಹಲವು ಬಗೆಯ ಸಮಾಜ ಸುಧಾರಕರ ವೇಷಧಾರಿ ಗುಂಪುಗಳಿದ್ದವು!! ಆದರೆ ಕೇವಲ ರಾಜಕೀಯ ಕ್ರಾಂತಿಯ ಮಿತಿಯನ್ನು ಅರಿತಿದ್ದ ಮತ್ತು ಸಂಪೂರ್ಣವಾಗಿ ಸಮಾಜದ ಬದಲಾವಣೆಯ ಆವಶ್ಯಕತೆಯನ್ನು ಘೋಷಿಸಿದ್ದ ಕಾರ್ಮಿಕ ವರ್ಗದ ಕೆಲವರು ಮಾತ್ರ ಕಮ್ಯೂನಿಸ್ಟ್ ಎಂದು ಕರೆದುಕೊಂಡಿದ್ದರು!!

ಉತ್ಪಾದನ ವಸ್ತುಗಳ ಮೇಲೆ ಹೊಂದಿರುವ ಸ್ವಾಮ್ಯ ಅಥವಾ ಒಡೆತನವು, ಹಣವಂತರನ್ನು ಇನ್ನೂ ಹಣವಂತರನ್ನಾಗಿಯೂ, ಬಡಜನರನ್ನು ಇನ್ನೂ ಬಡವರನ್ನಾಗಿಯೂ ಮಾಡುತ್ತಿತ್ತು!! ಬಡಜನರನ್ನು ಶೋಷಿಸುತ್ತಿದ್ದ ಮೇಲ್ವರ್ಗದ ಸಮುದಾಯವನ್ನು ಖಂಡಿಸಿ ಕಾರ್ಲ್‍ಮಾಕ್ರ್ಸ್ ಮತ್ತು ಎಂಗೆಲ್ಸ್ ಕಮ್ಯೂನಿಸಂ ಎನ್ನುವ ಸಿದ್ದಾಂತವನ್ನು ಹೊರತಂದರು. ಆರ್ಥಿಕ ಸಮಾನತೆಯೇ ಮಿಕ್ಕೆಲ್ಲ ಸಮಾನತೆಗಳಿಗೂ ತಳಹದಿ. ಹೀಗೆ ಸಮಾಜದ ಆರ್ಥಿಕ ವ್ಯವಸ್ಥೆಯ ಹಲವು ಸೂಕ್ಷ್ಮ ವಿಷಯಗಳನ್ನು ಬಯಲು ಪಡಿಸಿದರು. ಅಷ್ಟೇ ಅಲ್ಲದೇ ಶೋಷಣೆಯನ್ನು ಖಂಡಿಸಿದರು. ಅಷ್ಟೇ ಅಲ್ಲದೇ ಕಾರ್ಲ್‍ಮಾಕ್ರ್ಸ್‍ವಾದ ಉತ್ತಮ ನಿಲುವಿನಲ್ಲಿ ಜಾರಿಗೊಂಡಿತ್ತು!!

ರಷ್ಯಾದಲ್ಲಿ ಆರಂಭವಾದ ಕಮ್ಯೂನಿಸಂ..!!!

ಇದಾದ ನಲವತ್ತಾರು ವರ್ಷಗಳ ನಂತರ, ರಷ್ಯಾದಲ್ಲಿ ಕಮ್ಯೂನಿಸಂ ಅನ್ನು ನಾಟಿಹಾಕಲು ಲೆನಿನ್ ಪಣತೊಟ್ಟರೂ ಅದರ ಹಾದಿ ಕಠಿಣವಾಗಿತ್ತು!!
ಬಂಡವಾಳಶಾಹಿಗಳು, ಜಮೀನುದಾರರು ಒಟ್ಟುಗೂಡಿ ಹೊಸ ಕಮ್ಯೂನಿಸ್ಟ್ ಸರಕಾರವನ್ನು ಮೊಳಕೆಯಲ್ಲೇ ಚಿವುಟಿ ಹಾಕಿಬಿಡಬೇಕೆಂದು ಪಣತೊಟ್ಟು
ಸಂಘರ್ಷಕ್ಕಿಳಿದರು. ಅವರು ಸಂಘಟಿಸಿದ ವೈಟ್ ಆರ್ಮಿ ಗೆ ದೇಶದೊಳಗೆ ಭಾರಿ ಬೆಂಬಲ ದೊರೆತರೆ ಹೊರಗಿನಿಂದ ಶಸ್ತ್ರಾಸ್ತ್ರಗಳು ಬಂದವು. ವೈಟ್ ಆರ್ಮಿಯನ್ನು ಹತ್ತಿಕ್ಕಿ, ಸಮಾಜವಾದಿ ಕ್ರಾಂತಿಯನ್ನು ಯಶಸ್ವಿಗೊಳಿಸಲು ಲಿಯಾನ್ ಟ್ರಾಟ್ಸ್ಕಿ ನಾಯಕತ್ವದಲ್ಲಿ ರೆಡ್‍ಆರ್ಮಿಯು ಕಾರ್ಯಾಚರಣೆಗಿಳಿಯಿತು!! ಹೀಗೆ ರಷ್ಯಾ ಅಂತರ್ಯುದ್ಧದಲ್ಲಿ ಸಿಲುಕಿಕೊಳ್ಳುತ್ತಿದ್ದಂತೇ ಲೆನಿನ್‍ನ ನೀತಿಗಳಿಗೆ ಅವನ ಬೆಂಬಲಿಗರಾಗಿದ್ದ ಶ್ರಮಿಕರು ಮತ್ತು ಕಾರ್ಮಿಕರಿಂದಲೇ ವಿರೋಧ ಹೊಮ್ಮತೊಡಗಿತು!!

ಹೊಸ ಸರಕಾರದಿಂದ ತಮ್ಮೆಲ್ಲಾ ಕೊರಗುಗಳು ತಕ್ಷಣ ಪರಿಹಾರವಾಗಿಬಿಡಬೇಕೆಂದು ಬಯಸಿದ ಜನ, ಕಮ್ಯೂನಿಸಂ ಬಗ್ಗೆಯೇ ಭ್ರಮನಿರಸನಗೊಂಡು ಲೆನಿನ್
ವಿರುದ್ಧವೇ ದನಿಯೆತ್ತತೊಡಗಿದರು. ಮಹಾಯುದ್ಧ, ಕ್ರಾಂತಿ, ಅಂತರ್ಯುದ್ಧ ಎಲ್ಲದರಿಂದಾಗಿ ರಷ್ಯನ್ನರಿಗೆ ಶಾಂತಿಯಿರಲಿ ಹೊಟ್ಟೆಗೆ ಊಟವೂ ಸಿಗದಂಥ ಪರಿಸ್ಥಿತಿ
ಉಂಟಾಗಿತ್ತು!! “ಕಮ್ಯೂನಿಸಂ ನಮ್ಮ ಅಗತ್ಯಗಳನ್ನು ಪೂರೈಸುತ್ತಿಲ್ಲ, ಹೀಗಾಗಿ ಅದು ಬೇಡ, ನಮಗೆ ಜಮೀನು ಕೊಡಿ” ಎಂದೆಲ್ಲಾ ಜನ ಸಿಡಿದೇಳತೊಡಗಿದಾಗ
ಚಾಣಾಕ್ಷ ಲೆನಿನ್ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ನಟನೆ ಮಾಡುತ್ತಾ ಜನರಿಗೆ ಬೇಡವಾದ ಕಮ್ಯೂನಿಸಂ ತನಗೂ ಬೇಡ ಎಂದು ಘೊಷಿಸಿ ಹೊಸ ಆರ್ಥಿಕ
ನೀತಿಗಳನ್ನು ರೂಪಿಸಿ ದೂರ ಸರಿಯುತ್ತಿದ್ದ ಜನರನ್ನು ಮತ್ತೆ ತನ್ನತ್ತ ಸೆಳೆದುಕೊಂಡ. ಒಂದುವೇಳೆ ಜನರ ಬೇಡಿಕೆಗಳನ್ನು ತಿರಸ್ಕರಿಸಿ ಕಮ್ಯೂನಿಸಂ ಅನ್ನು 1918-19ರಲ್ಲೇ ಅನುಷ್ಠಾನಗೊಳಿಸುವ ಹಠವನ್ನೇನಾದರೂ ಅವನು ಹಿಡಿದಿದ್ದರೆ ಆ ಗಳಿಗೆಯಲ್ಲೇ ಅವನೂ ಇರುತ್ತಿರಲಿಲ್ಲ, ಅವನ ಕಮ್ಯೂನಿಸಮ್ಮೂ ಇರುತ್ತಿರಲಿಲ್ಲ!!

ಆದರೆ ಜನರು ಅವನ ವಿರೋಧಿ ಬಣದ ವೈಟ್ ಆರ್ಮಿಯ ಜತೆ ಸೇರಿಕೊಂಡು, 1917ರಲ್ಲಿ ಝಾರ್ ನಿಕೋಲಾಸ್‍ನನ್ನೂ, ಝಾರಿನಾ ಅಲೆಕ್ಸಾಂದ್ರಾಳನ್ನೂ,
ಕೆರೆನ್‍ಸ್ಕಿಯನ್ನೂ ಗುಡಿಸಿ ಎಸೆದಂತೆ, 1919ರಲ್ಲಿ ಲೆನಿನ್‍ನನ್ನೂ ಗುಡಿಸಿ ಇತಿಹಾಸದ ತಿಪ್ಪೆಗೆ ಎಸೆದುಬಿಡುತ್ತಿದ್ದರು. ಆದರೆ ಲೆನಿನ್ ಮಹಾನ್ ಮೇಧಾವಿಯಾಗಿದ್ದ.
ಮುಂದಿನ ಎರಡು ವರ್ಷಗಳಲ್ಲಿ ಅಂತರ್ಯುದ್ಧದಲ್ಲಿ ರೆಡ್ ಆರ್ಮಿ ವಿಜಯ ಸಾಧಿಸಿದಾಗ, ಇನ್ನು ತನಗೆ ವಿರೋಧ ವ್ಯಕ್ತವಾಗಬಹುದೆಂದು ಖಾತ್ರಿಯಾಗಿದ್ದ ಲೆನಿನ್,
ಕಮ್ಯೂನಿಸ್ಟ್ ತತ್ತ್ವಗಳನ್ನು ಮತ್ತೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದ.!!!

ಬೃಹತ್ ರಾಷ್ಟ್ರದ ಎಲ್ಲೆಡೆ ಹಂತಹಂತವಾಗಿ ಕೃಷಿಕರ, ಕಾರ್ಮಿಕರ ಸಮಿತಿ(ಸೋವಿಯೆತ್)ಗಳನ್ನು ರೂಪಿಸಿ ತನ್ನ ಹಾಗೂ ಕಮ್ಯೂನಿಸಂನ ನೆಲೆಯನ್ನು ಭದ್ರಪಡಿಸಿದ. ಒಂದು ಕೋಟಿ ಎಪ್ಪತ್ತು ಲಕ್ಷ ಚದರ ಕಿಲೋಮೀಟರ್ ಅಗಾಧ ಭೂವಿಸ್ತೀರ್ಣದ ದೇಶದಲ್ಲಿನ ಹನ್ನೆರಡು ವಿವಿಧ ಜನಾಂಗಗಳನ್ನು ಸೋವಿಯೆತ್ ಗಣರಾಜ್ಯಗಳನ್ನಾಗಿ ಪರಿವರ್ತಿಸಿ, ಅವೆಲ್ಲವನ್ನೂ ಒಂದು ರಾಷ್ಟ್ರೀಯ ವ್ಯವಸ್ಥೆಯೊಳಗೆ ಒಟ್ಟುಗೂಡಿಸಿ 1922ರಲ್ಲಿ ಯೂನಿಯನ್ ಆಫ್ ಸೋವಿಯೆತ್ ಸೋಷಲಿಸ್ಟ್ ರಿಪಬ್ಲಿಕ್ಸ್ (ಯು.ಎಸ್.ಎಸ್.ಆರ್) ಅನ್ನು ಸ್ಥಾಪಿಸಿದ!!

ಜೋಸೆಫ್ ಸ್ಟಾಲಿನ್ ಸೋವಿಯೆತ್ ಸರ್ವಾಧಿಕಾರಿಯಾದ!!

1924ರಲ್ಲಿ ಲೆನಿನ್‍ನ ಮರಣಾನಂತರ ಅಧಿಕಾರಕ್ಕಾಗಿ ಹಣಾಹಣಿ ಶುರುವಾದದ್ದು ರೆಡ್ ಆರ್ಮಿಯ ಸೃಷ್ಟಿಕರ್ತ ಮತ್ತು ಅಂತರ್ಯುದ್ಧದ ವಿಜಯಿ ಲಿಯಾನ್ ಟ್ರಾಟ್ಸ್ಕಿ
ಮತ್ತು ಜೋಸೆಫ್ ಸ್ಟಾಲಿನ್ ಮಧ್ಯೆ!! ಹೌದು…. ಎಲ್ಲ ದೇಶಗಳಲ್ಲೂ ಏಕಕಾಲದಲ್ಲಿ ಕಮ್ಯೂನಿಸ್ಟ್ ಕ್ರಾಂತಿಗಳನ್ನು ಆಯೋಜಿಸಬೇಕೆಂದು ಟ್ರಾಟ್ಸ್ಕಿ ವಾದಿಸಿದರೆ ಸ್ಟಾಲಿನ್ ಹೇಳಿದ್ದು “ಕಮ್ಯೂನಿಸಂ ಮೊದಲು ಸೋವಿಯತ್ ರಷ್ಯಾದಲ್ಲಿ ಭದ್ರವಾಗಿ ಬೇರೂರಲಿ, ಅನಂತರ ಇತರ ದೇಶಗಳಲ್ಲಿ” ಎಂದ!! ವಿವೇಕಯುತವೂ, ವ್ಯಾವಹಾರಿಕವೂ ಆಗಿದ್ದ ಸ್ಟಾಲಿನ್‍ನ ಅಭಿಪ್ರಾಯಕ್ಕೆ ಅಂತಿಮವಾಗಿ ಬೆಂಬಲ ದೊರೆತು ಆತ ಲೆನಿನ್‍ನ ಉತ್ತರಾಧಿಕಾರಿಯಾಗಿ ಸೋವಿಯೆತ್ ಸರ್ವಾಧಿಕಾರಿಯಾದ.

ಮಾರ್ಕ್ಸ್‍ವಾದೀ ಪರಿಭಾಷೆಗಳಲ್ಲೆಲ್ಲಾ ಅತ್ಯಂತ ಹೆಚ್ಚು ಟೀಕೆಗಳನ್ನು ಎದುರಿಸಿರುವ ಒಂದು ಪರಿಕಲ್ಪನೆ ಇದೆ ಎಂದಾದರೆ, ಲೆನಿನ್ ಕಾಲಕ್ಕಾಗಲೇ ಮತ್ತು ಸ್ಟಾಲಿನ್ ಕಾಲಕ್ಕೆ ನಿಸ್ಸಂದೇಹವಾಗಿ ಕಮ್ಯೂನಿಸ್ಟ್ ಪಾರ್ಟಿಯ ಸಿದ್ಧಾಂತ ಅಪಾರವಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿರಂಕುಶಾಧಿಕಾರ ಮತ್ತು ಪೆÇೀಲಿಸ್ ವ್ಯವಸ್ಥೆಯ ದುರ್ಬಳಕೆ ಮುಂತಾದ ಆರೋಪಗಳಿಗೆ ಈಡಾಗಿತ್ತು. ಸ್ಟಾಲಿನ್‍ನ ಬೇಜವಾಬ್ದಾರಿ, ಯುದ್ಧಕೋರ ನೀತಿಗಳು ಮಹಾಯುದ್ಧದ ಆರಂಭದಲ್ಲೇ ಕಾಣಿಸಿಕೊಂಡಿದ್ದವು. ಯುದ್ಧಾನಂತರ ಅವನು ತನ್ನ ಹಿಂದಿನ ವಿವೇಕವನ್ನು ಮರೆತು ಹೊರದೇಶಗಳಲ್ಲಿ ಕಮ್ಯೂನಿಸಂ ಹರಡಲು ಹಾಕಿಕೊಂಡ ಮಹತ್ವಾಕಾಂಕ್ಷೆಯ ಯೋಜನೆಗಳು ಸಂಪೂರ್ಣ ಅನಪೇಕ್ಷೀಯ, ಅನಗತ್ಯ, ಅವಿವೇಕಿ ಹಾಗೂ ಆತ್ಮಹತ್ಯೀಯವಾಗಿದ್ದವು. ಆಗಲೇ ಅವನು ಕಮ್ಯೂನಿಸ್ಟ್ ಪ್ರಯೋಗದ ಶವಪೆಟ್ಟಿಗೆಗೆ ಮೊಳೆ ಹೊಡೆಯಲಾರಂಭಿಸಿದ್ದು!!

ಭಾರತದಲ್ಲಿ ಕಮ್ಯೂನಿಸಂನ ಕಾರುಬಾರು……….!!

ಹೌದು……… ತದನಂತರದಲ್ಲಿ ಕಮ್ಯೂನಿಸಂನ ಗಾಳಿ ಭಾರತಕ್ಕೂ ಬಂದು ತಲುಪಿತು. ಆದರೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಕೇರಳದ ಕೆಲವು ಭಾಗದಲ್ಲಿ ಇವು ನೆಲೆಗೊಂಡಿತ್ತು!! ಇಡೀ ಭಾರತದಾಧ್ಯಂತ ಪ್ರತಿಯೊಬ್ಬ ಜಾತಿಯವನನ್ನೂ ಒಂದುಗೂಡಿಸಲು ಗೋಖಲೆಯವರು ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ ಜಾರಿಗೆ ತಂದರೂ ಕೂಡ, ಕೇರಳದಲ್ಲಿ ಅದು ನಡೆಯಲೇ ಇಲ್ಲ!! ಅದು ಯಾಕೆ ಗೊತ್ತಾ? ಯಾಕೆಂದರೆ ಕೇರಳದಲ್ಲಿದ್ದ ಮೇಲ್ಜಾತಿಯವನ ದಬ್ಬಾಳಿಕೆ, ಶ್ರೀಮಂತನ ದರ್ಪ, ಒಡೆದು ಆಳುವ ನೀತಿ, ಇವೆಲ್ಲದರಿಂತ ರೋಸಿ ಹೋಗಿದ್ದ ಕೇರಳದ ಜನತೆ ಕಮ್ಯೂನಿಸಂ ಕಡೆಗೆ ವಾಲಿಬಿಟ್ಟಿದ್ರು!! ಅಷ್ಟೇ ಅಲ್ಲದೇ, ಜಾತಿ ಇಲ್ಲ, ಮತಬೇಧವಿಲ್ಲ, ದೇವರಿಲ್ಲ ಎಂಬಂತಹ ಕಮ್ಯೂನಿಸ್ಟ್ ಚಿಂತನೆ ಬಹುಬೇಗನೆ ಕೇರಳೀಯರ ಮನಸ್ಸನ್ನು ಆಕ್ರಮಿಸಿಕೊಂಡಿತ್ತು.

ಆದರೆ ಕೇರಳ ಕಮ್ಯೂನಿಸ್ಟ್ ಚಿಂತನೆಯನ್ನು ಮೈಗೂಡಿಸುವುದರ ಮೊದಲೇ ಆರ್.ಎಸ್.ಎಸ್ ಚಿಂತನೆಯೆಡೆಗೆ ವಾಲಿತ್ತು ಎಂದರೆ ನಂಬ್ತೀರಾ? ಆದರೆ ಅದನ್ನು ನೀವು ನಂಬಲೇಬೇಕು….ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿನವರೆಗೆ ಕೇರಳದಲ್ಲಿ ಅತ್ಯಂತ ಹೆಚ್ಚು ಶಾಖೆಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಂದಿದೆ!!! ಅಷ್ಟಾಗಿಯೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ನಾಶಗೊಂಡಿದ್ದು ಮಾತ್ರ ಕಮ್ಯೂನಿಷ್ಟರಿಂದ!!! ಯಾಕೆಂದರೆ ನೀವು ಕಮ್ಯೂನಿಷ್ಟ್ ಅಲ್ಲ ಎಂದಾದರೆ ನಿಮ್ಮ ಜಾತಿ ಮತವನ್ನು ಮೊದಲು ನೋಡ್ತಾರೆ ಆ ಜನ.. ಅಂತಹದೊಂದು ಪದ್ಧತಿ ದಶಕಗಳಿಂದ ಕೇರಳದಲ್ಲಿ ನಡೆದುಕೊಂಡು ಬಂದಿದೆ !!

ಪ್ರತ್ಯೇಕ ಕೇರಳ ರಾಜ್ಯ ರೂಪುಗೊಂಡಾಗ ಮೊದಲು ಅಧಿಕಾರಕ್ಕೆ ಬಂದಿದ್ದು ಇ.ಎಂ.ಎಸ್ ನಂಬೂದರಿಪ್ಪಾಡ್ ನೇತೃತ್ವದ ಇದೇ ಕಮ್ಯೂನಿಸ್ಟ್ ಪಾರ್ಟಿ!! ಕಮ್ಯೂನಿಸ್ಟ್ ಪಾರ್ಟಿ ಅಧಿಕಾರಕ್ಕೆ ಬಂದಾಗ ಆರ್.ಎಸ್.ಎಸ್ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇದು ಅಕ್ಷರಷಃ ಕಮ್ಯೂನಿಸ್ಟ್ ಪಾರ್ಟಿಗೆ ನುಂಗಲಾರದ ತುತ್ತಾಯಿತು!!! ಅಧಿಕಾರದ ಮದ ಏರಿಸಿಕೊಂಡ ಕಮ್ಯೂನಿಸ್ಟ್ ನಾಯಕರು ಇದಕ್ಕೊಂದು ಪರಿಹಾರ ಕಂಡು ಹಿಡಿಯಲೇಬೇಕಾದ ಅನಿವಾರ್ಯತೆಗೆ ಒಳಗಾದರು. ಆಗಲೇ ಶುರುವಾಗಿದ್ದು ನೋಡಿ ಹಿಂದೂಗಳ ಮಾರಣ ಹೋಮಗಳು!!! ಇದು ಕೇವಲ ಕೇರಳದಲ್ಲಿ ಮಾತ್ರವಲ್ಲ, ಅತ್ತ ಪ.ಬಂಗಾಳದಲ್ಲೂ ಕಮ್ಯೂನಿಸ್ಟ್ ಪಾರ್ಟಿ ದಶಕಗಳ ಕಾಲ ಆಡಳಿತ ನಡೆಸಿದ್ದು ಹೀಗೆಯೇ.. ಚೀನಾ, ರಷ್ಯಾ, ಕಮ್ಯೂನಿಷ್ಟರು ಎಲ್ಲೆಲ್ಲಿ ಆಡಳಿತ ನಡೆಸಿದ್ದಾರೋ ಅಲ್ಲೆಲ್ಲ ರಕ್ತದ ಓಕುಳಿ ಹರಿದಿದೆ!!

ಪರಿಸ್ಥಿತಿ ಹೇಗಾಗಿತ್ತು ಎಂದರೆ, ನೀವು ಹಿಂದೂ ಆಗಿದ್ದು, ಹಿಂದೂ ಆಚರಣೆಗಳನ್ನು ಮಾಡಿದರೆ ಅವರನ್ನು ಆರ್.ಎಸ್.ಎಸ್ ಕಾರ್ಯಕರ್ತ ಎಂದೇ ತಿಳಿದುಕೊಳ್ಳುತ್ತಿದ್ದರು!!

*ನಿಮ್ಮ ಮನೆಯ ಹೆಣ್ಮಗಳಿಗೆ ಮದುವೆ ಅಂದ್ರೆ ಸಿಪಿಎಂನವರು ಮದುವೆ ಮಾಡಲು ಬಿಡಲ್ಲ.
*ನಿಮ್ಮ ಮನೆಯ ಮೇಲೆ ಯಾವಾಗ ಬೇಕಾದರೂ ದಾಳಿಯೂ ಆಗಬಹುದು.
*ನೀವು ಗುಂಪುಗೂಡಿ ನಿಲ್ಲಬಾರದು.
*ಒಂದಕ್ಕಿಂತ ಹೆಚ್ಚು ಜನ ಒಟ್ಟಿಗೆ ಕುಳಿತು ಊಟ ಮಾಡಬಾರದು.
*ನೀವು ಸಿಪಿಎಂ ಕಾರ್ಯಕರ್ತನಾಗಿದ್ದು, ನಿಮ್ಮ ಮಗ ಸಂಘದತ್ತ ಒಲವು ತೋರಿಸಿದ್ದಾನೆಂದರೆ ಆತನನ್ನು ಮನೆಯಿಂದ ಹೊರಗಟ್ಟಬೇಕು, ನಂತರ ಕುಟುಂಬಕ್ಕೆ
ಸೇರಿಸಬಾರದು!!
*ಸಿಪಿಎಂ ಆಡಳಿತ ನಡೆಸೋ ಪಂಚಾಯತ್‍ನಲ್ಲಿ ಹಿಂದೂ ಹಬ್ಬ ಹರಿದಿನಗಳನ್ನ ನಡೆಸಬಾರದು.
*ಸಿಪಿಎಂ ಆಡಳಿತ ನಡೆಸೋ ಪಂಚಾಯತ್‍ನಲ್ಲಿ ಶಾಖೆ ನಡೆಸಿದರೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತೆ.
*ಯಾವುದೇ ಕಾರಣಕ್ಕೂ ಏನೇ ತೊಂದರೆ ಸಿಪಿಎಂನವರಿಂದ ಉಂಟಾದರೂ ಅವರನ್ನ ಪ್ರಶ್ನೆ ಮಾಡಬಾರದು, ಮಾಡಿದರೆ ಏಟು ಗ್ಯಾರಂಟಿ!!
*ಅವರನ್ನು ಎದುರಿಸಿ ಚುನಾವಣೆ ನಿಂತರೆ ಅಪಹರಣ ಮಾಡಿ ಬೆದರಿಕೆ ಹಾಕಲಾಗುವುದು!!
*ಅವರ ಎದುರಿನಲ್ಲಿ ಕೇಸರಿ ಬಟ್ಟೆ ಹಾಕಿ ಓಡಾಡಬಾರದು!!

ಕಮ್ಯೂನಿಸ್ಟ್ ಎಂದರೆ ಗೂಂಡಾಯಿಸಂ. ಅವರಿಗೆ ಅಧಿಕಾರ ಬೇಕೂ ಎಂದರೆ ಎಂತಹ ನೀಚ ಕೆಲಸ ಮಾಡಲೂ ಹೇಸುವವರಲ್ಲ!!! ನಾವು ಇದೀಗ 21ನೇ
ಶತಮಾನದಲ್ಲಿದ್ದೇವೆ. ಕಳೆದ ಐದಾರು ದಶಕಗಳಲ್ಲಿ ನೂರಾರು ಬಡ ಹಿಂದೂ ಸ್ವಯಂಸೇವಕರ ರಕ್ತ ಕಮ್ಯೂನಿಸ್ಟ್ ರಕ್ತದಾಹಿಗಳಿಂದ ಹೊಳೆಯಾಗಿ ಹರಿದಿದೆ. ಎರಡೂ ಕಿಡ್ನಿ ಕಳೆದುಕೊಂಡು ಹಾಸಿಗೆ ಹಿಡಿದ ವ್ಯಕ್ತಿಯಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳಾದಿಯಾಗಿ, ವಯೋ ವೃದ್ಧೆಯನ್ನೂ ಬಿಡದೆ ಹಿಂದೂ, ಸಂಘದ ಕಾರ್ಯಕರ್ತ ಎಂಬ ಕಾರಣಕ್ಕೆ ಕೊಂದ ನೀಚರು ಕಮ್ಯೂನಿಸ್ಟರು. ಇಂದಿಗೂ ಜೀವಭಯದಿಂದ ಬದುಕುವ ಪರಿಸ್ಥಿತಿ ಕಣ್ಣೂರು ಜಿಲ್ಲೆಯಾಧ್ಯಂತ ಹಿಂದೂ ಬಾಂಧವರಿಗಿದೆ!! ಮೊಟ್ಟಮೊದಲ ನರಮೇಧ ನಡೆಸಿದ ಪಿಣರಾಯಿ ವಿಜಯ ಇಂದು ಅಧಿಕಾರ ಹಿಡಿದು ಆಳ್ತಾ ಇದ್ದಾನೆ ಅಂದರೆ ಕಮ್ಯೂನಿಸ್ಟ್‍ಗಳ ಅಟ್ಟಹಾಸ ಎಲ್ಲಿವರೆಗೆ ತಲುಪಿತು ಗೊತ್ತೆ?? ಪಿಣರಾಯಿ ಆಡಳಿತದ ಒಂದು ವರ್ಷ ಪೂರ್ಣಗೊಳ್ಳುವುದರ ಒಳಗೆ 8 ನರಮೇಧ ಕೇರಳದಾಧ್ಯಂತ ನಡೆದಿದೆ ಎಂದರೆ ನಂಬ್ತೀರಾ???

ರಾಜಕೀಯ ಹಿಂಸಾಚಾರಕ್ಕೆ ಯಥೇಚ್ಛ ಉದಾಹರಣೆಗಳನ್ನು ನೀಡಿರುವ ರಾಜ್ಯವೆಂದರೆ ನೆರೆಯ ಕೇರಳ. ದೇವರ ಸ್ವಂತ ನಾಡು ಎಂಬ ಹೆಗ್ಗಳಿಕೆಯಿದ್ದರೂ ಅತಿಕ್ಷುಲ್ಲಕ ವಿಚಾರಗಳಿಗೂ ನೆತ್ತರು ಹರಿಸುವಷ್ಟು ಸಲೀಸಾಗಿ ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿರುವುದು ಕೇರಳ ಜನತೆಯ ವಿಪರ್ಯಾಸ!! ಕಳೆದ 50 ವರ್ಷಗಳಲ್ಲಿ 300ಕ್ಕೂ ಹೆಚ್ಚು ಯುವಕರು ಈ ರಾಜಕೀಯ ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಅಧಿಕಮಂದಿ ಬೆರಳು-ಕೈ-ಕಾಲು ಕಳೆದುಕೊಂಡು ಜೀವನಪರ್ಯಂತ ಯಾತನೆ ಅನುಭವಿಸುತ್ತಿದ್ದಾರೆ!! ಅಪಾರಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಮನೆ-ಮಠ ಕಳೆದುಕೊಂಡವರ ಪಾಡು ಹೇಳತೀರದು. 1920ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಕಮ್ಯೂನಿಸ್ಟ್ ವಿಚಾರಧಾರೆ ಕೇರಳಿಗರನ್ನು ಅತಿಯಾಗಿ ಆಕರ್ಷಿಸಿತು. ದಶಕಗಳ ಹಿಂದೆಯೇ ಕೇರಳವನ್ನು ಚೆನ್ನಾಗಿ ಅರಿತಿದ್ದ ಸ್ವಾಮಿ ವಿವೇಕಾನಂದರು ಆ ರಾಜ್ಯವನ್ನು ಹುಚ್ಚಾಸ್ಪತ್ರೆ ಎಂದಿದ್ದರು!!

ಶೋಷಿತರಿಗೆ ನೆರವು ನೀಡುವ ಸುಳ್ಳು ಘೋಷಣೆಗಳು, ಸಮಾನತೆ ಸಾಧಿಸುತ್ತೇವೆ ಎಂಬ ಪೆÇಳ್ಳು ಮಾತುಗಳು, ಮಾನವತೆಯನ್ನು ಎತ್ತಿ ಹಿಡಿಯುವ ಮಾರ್ಗ ಎಂಬ ಡೋಂಗಿ ತನವೇ ಕಮ್ಯೂನಿಸ್ಟ್ ನಾಯಕರ ವರಸೆಯಾಗಿದೆ.. ಇಷ್ಟೆಲ್ಲಾ ನಡೆದರೂ ಕೂಡ ಕಮ್ಯೂನಿಸ್ಟರನ್ನು ಜನ ಯಾತಕ್ಕಾಗಿ ಬೆಂಬಲಿಸುತ್ತಾರೋ ನಾ ಕಾಣೆ!! ಕರ್ನಾಟಕದಲ್ಲೂ ದಲಿತರನ್ನು, ಅಲ್ವಸಂಖ್ಯಾತರನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆಬೇಯಿಸುತ್ತಿದ್ದಾರೆ!! ಒಂದು ಕಡೆ ನಕ್ಸಲೆಟ್ಸ್‍ಗಳಿಗೆ ಎಲ್ಲಾ ರೀತಿಯಲ್ಲೂ ಸಹಕರಿಸಿ ಮತ್ತೊಂದು ಕಡೆ ಕಂಪನಿಗಳ ಮುಖ್ಯಸ್ಥರನ್ನು ಬೆದರಿಸಿ ಸುಲಿಗೆ ದಂಧೆಯಲ್ಲಿ ತೊಡಗಿರುವ ಆರೋಪವಿದೆ!! ಮತ್ತೊಂದು ಕಡೆ ಕಾರ್ಮಿಕರಿಂದ ಹಣ ವಸೂಲಿ ಮಾಡಿ ಸುಲಿಗೆ ದಂಧೆಯಲ್ಲಿ ನಿರತವಾಗಿದೆ ಕಮ್ಯೂನಿಸ್ಟ್!! ಇಷ್ಟೆಲ್ಲಾ ಕೌರ್ಯಗಳನ್ನು ಮಾಡುತ್ತಿರುವ ಕಮ್ಯೂನಿಸ್ಟ್ ನಮಗೆ ಬೇಕೆ?

ಮೂಲ:Nilume – link

– ಅಲೋಖಾ

Tags

Related Articles

Close