ಪ್ರಚಲಿತರಾಜ್ಯ

ಎಡಪಂಥೀಯ ವಿಚಾರ ಧಾರೆಯ ಗೌರಿ ಲಂಕೇಶ್ ಹತ್ಯೆ! ಕಾಣದ ‘ಕೈ’ ಯ ಗುರಿಗೆ ಬಲಿಯಾದರೇ ಗೌರಕ್ಕ??

ಕರ್ನಾಟಕದಲ್ಲಿ ತನ್ನ ಎಡಪಂಥೀಯ ವಿಚಾರಧಾರೆಯಿಂದಲೇ ಪ್ರಸಿದ್ಧಿಯಾಗಿದ್ದ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ! ನಗರದಲ್ಲಿರುವ ಅವರ ನಿವಾಸದ ಬಳಿ ಈ ಘಟನೆ ನಡೆದಿದ್ದು, ಇನ್ನೂ ದುಷ್ಕರ್ಮಿಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ ಎಂದು ಪೋಲಿಸ್ ಆಯುಕ್ತರು ತಿಳಿಸಿದ್ದಾರೆ! ಡಿಸಿಪಿ ಅನುಚೇತ್ ಗೌರಿ ಲಂಕೇಶ್ ಸಾವನ್ನು ಧೃಢೀಕರಿಸಿದ್ದಾರೆ!

ಲಂಕೇಶ್ ಪತ್ರಿಕೆಯ ಸಂಪಾದಕಿ!!!

ಗೌರಿ ಲಂಕೇಶ್, ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದು, ರಾಜ್ಯದ ಹಿರಿಯ ಪತ್ರಕರ್ತೆಯೆಂದೂ ಪ್ರಸಿದ್ಧರಾಗಿದ್ದರು! ಅಲ್ಲದೇ, ತನ್ನ ಎಡಪಂಥೀಯ
ವಿಚಾರಧಾರೆಗಳಿಂದ ಅದೆಷ್ಟೋ ನಕ್ಸಲರನ್ನೂ ಸಹ ಮುಖ್ಯ ವಾಹಿನಿಗೆ ಕರೆತಂದಿದ್ದ ಗೌರಿ ಲಂಕೇಶ್ ರವರ ಹತ್ಯೆ ಕಲಬುರ್ಗಿಯ ನಂತರದ ಇನ್ನೊಂದು ಹತ್ಯೆ!

‘ಗೌರಕ್ಕ’ ಎಂದೇ ಕರೆಯಲ್ಪಡುತ್ತಿದ್ದ ಗೌರಿ ಲಂಕೇಶ್ ರವರ ವಿಚಾರಧಾರೆಗಳು ಮೋದಿಯನ್ನು ವಿರೋಧಿಸುವ ಮೂರ್ಖತನವನ್ನೂ ತೋರಿದ್ದು ಸುಳ್ಳಲ್ಲ. ಬಾಲಿಶ ವಿಚಾರಗಳಿಂದ, ಅರ್ಥವಿಲ್ಲದ ಹೇಳಿಕೆಗಳಿಂದ ಒಮ್ಮೊಮ್ಮೆ ಅದೆಷ್ಟೋ ವಿರೋಧವನ್ನೂ ಎದುರಿಸಿದ್ದು ಸುಳ್ಳಲ್ಲವಾದರೂ ಸಹ, ತನ್ನದೇ ಆದ ಛಾಪು ಮೂಡಿಸಿದ್ದ ಗೌರಿ ಲಂಕೇಶ್ ರ ಹತ್ಯೆ ನಿಜಕ್ಕೂ ಕರ್ನಾಟಕಕ್ಕೊಂದು ಆಘಾತವೇ ಸರಿ!

ಗುಂಡಿನ ಸುರಿಮಳೆ!!!

ದುಷ್ಕರ್ಮಿಗಳು ಏಳು ಸುತ್ತು ಗುಂಡನ್ನು ಹಾರಿಸಿದ್ದು, ಎದೆಗೆ ಮೂರು ಗುಂಡುಗಳು ಹೊಕ್ಕಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ!! ಬೆಂಗಳೂರಿನ ಆರ್ ಆರ್ ನಗರದ ಮನೆಯಲ್ಲಿ ಈ ಕೃತ್ಯ ನಡೆದಿದ್ದು ಸದ್ಯದಲ್ಲಿಯೇ ಪೋಲಿಸರು ವಿಚಾರಣೆ ನಡೆಸುವ ಸೂಚನೆಯಿದೆ!

ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಮೇಲೆ ಮುಗಿಬಿದ್ದ ಎಡಪಂಥೀಯರು!!

ಬಿಡಿ! ಸುಖಾ ಸುಮ್ಮನೆ ಸಂಘದ ಬಗೆಗೆ ಮತ್ತೆ ಮುಗಿಬೀಳುತ್ತಿರುವ ಪ್ರತಿ ಎಡಪಂಥೀಯ ವಿಚಾರಧಾರೆಯ ಹಿಂಬಾಲಕರೆಲ್ಲರೂ ಸಹ ಯೋಚನೆ ಮಾಡಲೇಬೇಕು.
ಅದಾವುದೋ, 20 ನೇ ಶತಮಾನದಲ್ಲಿಯೇ ಮಕಾಡೆ ಮಲಗಿದ ಸ್ಟಾಲಿನ್, ದಾಸ್, ಮಾರ್ಕ್ಸ್ ನಂತವರ ವಿಚಾರಧಾರೆಗಳನ್ನು ಅಭ್ಯಸಿಸಿ ಕೊನೆಗೆ ‘ಸ್ತ್ರೀ’ ಯನ್ನು
ಬಲಿಯಾಗಿಸುವುದು ಇದೇ ಮೊದಲಲ್ಲ!

ಮನಸ್ಸಿಗನ್ನಿಸಿದ್ದನ್ನು ಹೇಳುವಂತಹ ಇನ್ನೊಂದಿಷ್ಟು ಎಡಪಂಥೀಯರಿಂದಲೇ ಬಹುಷಃ ಗೌರಕ್ಕನ ಸಾವು ತಾರ್ಕಿಕವಾದ ನ್ಯಾಯವನ್ನಷ್ಟೇ ಹೊಂದಿ, ಸತ್ಯಾಸತ್ಯತೆಯನ್ನುವುದು ಎಡಪಂಥೀಯರಿಂದಲೇ ಸಮಾಧಿಯಾಗುತ್ತದೆ. ವಿವೇಚನೆಯಿಲ್ಲದೇ, ಸಂಘದ ಕಾರ್ಯಕರ್ತರ ಮೇಲೆ ಯಾವುದೇ ಪೂರ್ವಾಪರವಿಲ್ಲದೆಯೇ ಆರೋಪ ಹೊರಿಸುವುದು ‘ಅವಿವೇಕತನ’ ಹಾಗೂ ಅಷ್ಟೇ ‘ಮೂರ್ಖತನ.’

ಸಿದ್ಧರಾಮಯ್ಯನ ಸರಕಾರಕ್ಕೆ ಕೇಳಿ ಸ್ವಾಮಿ!!!

ಒಬ್ಬ ಹಿರಿಯ ಪತ್ರಕರ್ತೆಗಾಗಲೀ, ದಕ್ಷ ಅಧಿಕಾರಿಗಾಗಲೀ, ಹೋಗಲಿ! ಬಡವನ ತಿನ್ನುವ ಆಹಾರಕ್ಕೂ ಸುರಕ್ಷೆ ನೀಡದ ಸಿದ್ಧರಾಮಯ್ಯರವರ ಸರಕಾರವನ್ನು ಮೊದಲು ಪ್ರಶ್ನಿಸಬೇಕೇ ಹೊರತು, ಗೌರಕ್ಕನ ಸಾವನ್ನೇ ಇನ್ನೊಂದಿಷ್ಟು ಉಪಯೋಗಿಸಿಕೊಂಡು ಪ್ರಸಿದ್ಧಿಯಾಗುವುದಲ್ಲ.

ಕಾಂಗ್ರೆಸ್ ನ ಕೈವಾಡ?!

ನಿಜಕ್ಕೂ ಇದೊಂದು ಪ್ರಶ್ನೆ ಏಳದೇ ಇರದು!!! ಯಾಕೆಂದರೆ, ಒಡೆದು ಆಳುವ ನೀತಿಯಿಂದಾದರೂ ಸರಿ, ಗುಂಡಿಕ್ಕಿ ಕೊಂದಾದರೂ ಸರಿಯೇ! ಹೇಗಾದರೂ
ಮಾಡಿಯಾದರೂ ಮತ್ತೆ ಗೆಲ್ಲಬೇಕೆಂದು ಪ್ರಯತ್ನ ಪಡುತ್ತಿರುವ ಕಾಂಗ್ರೆಸ್ ‘ಗೌರಕ್ಕ’ನನ್ನು ಗುರಿಯಾಗಿಸಿತೇ?!

ಮೋದಿಯನ್ನು ಅತಿಯೆನ್ನುವಷ್ಟು ವಿರೋಧಿಸುತ್ತಿದ್ದ ಗೌರಕ್ಕ, ಹಿಂದುತ್ವದ ವಿರುದ್ಧವೂ ನಿಂತವರೇ! ತಪ್ಪಿದಾಗ ಕಾಂಗ್ರೆಸ್ ನನ್ನೂ ಬಿಡದ ‘ಗೌರಕ್ಕ’ ಯಾವುದಕ್ಕೂ ಹೆದರದ ಮಹಿಳೆಯೇ ಸರಿ! ಹಿಂದೆಯೂ ಸಾಹಿತಿ ಕಲಬುರ್ಗಿ ಹತ್ಯೆಯಾದಾಗ ಇದೇ ಕಾಂಗ್ರೆಸ್ ಕಾಟಾಚಾರಕ್ಕೆ ತನಿಖೆಯೆಂದು ಮಾಡಿ ದಾವೆಯನ್ನು ಮುಚ್ಚಿತ್ತು! ಅದೇ ರೀತಿ, ಗೌರಕ್ಕನ ಸಾವನ್ನೂ ಕೈ ತೊಳೆದುಕೊಳ್ಳಲಿದೆಯೇ?!

ಲಂಕೇಶ್ ಪತ್ರಿಕೆಯಂತಹ ‘ನೇರ’ ಪತ್ರಿಕೆಯ ಜವಾಬ್ದಾರಿ ಹೊತ್ತ ಮಹಿಳೆಗೆ ಅದೆಷ್ಟು ಬೆದರಿಕೆ, ಅಸುರಕ್ಷತೆಗಳಿರಬಹುದು ಎಂಬುದು ಒಬ್ಬ ಸಾಮಾನ್ಯನಿಗೂ
ಅರಿವಾಗುತ್ತದೆ! ಅಂತಹದ್ದರಲ್ಲಿ, ಸಿದ್ಧರಾಮಯ್ಯರವರ ಕಾಂಗ್ರೆಸ್ ಸರಕಾರದಲ್ಲಿಯೇ ಆದ ಹತ್ಯೆಗಳು ಬಹುಷಃ ಯಾವ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಆಗಲೇ ಇಲ್ಲ ಎಂಬುದೂ ಸತ್ಯ!

2015 ರಲ್ಲಿ ಪೆನ್ಸಾರೆ ಹಾಗೂ ಕಲಬುರ್ಗಿ ಹತ್ಯೆ! ಈಗ ಗೌರಿ ಲಂಕೇಶ್ ರವರ ಹತ್ಯೆ! ಕಾಂಗ್ರೆಸ್ ಸರಕಾರಕ್ಕೆ ಹಿರಿಯ ಸಾಹಿತಿಗಳಿಗೆ ರಕ್ಷಣೆ ನೀಡಲು ತಾಕತ್ತೇ ಇಲ್ಲ
ಎಂಬುದು ಪದೇ ಪದೇ ಸಾಬೀತಾಗುತ್ತಿರುವಾಗ ಅದೆಷ್ಟು ಹತ್ಯೆಗಳು ಇನ್ನು ನಡೆಯಬೇಕೋ?!

ಯಾವುದೇ ಪೂರ್ವಾಪರ ಯೋಜನೆಯಿಲ್ಲದೇ, ಆಪ್ತ ಚಲನವಲನದ ಗಮನವಿಲ್ಲದೆಯೇ ಒಬ್ಬರ ಹತ್ಯೆ ಹೇಗಾಗುವುದು ಸಾಧ್ಯ?! ಇದಲ್ಲದೇ, ಕಲಬುರ್ಗಿ ಹತ್ಯೆಗೂ
ಇದಕ್ಕೂ ಬಹಳಷ್ಟು ವ್ಯತ್ಯಾಸವೇನೂ ಕಾಣುತ್ತಿಲ್ಲ ಎಂಬುದು ಅಷ್ಟೇ ಸತ್ಯ! ಅವತ್ತೂ ಸಹ, ಚುನಾವಣೆಯ ಸಂದರ್ಭ! ಇವತ್ತೂ ಸಹ, ಇನ್ನೆಂಟೇ ತಿಂಗಳಲ್ಲಿ ಚುನಾವಣೆಯ ಸಂದರ್ಭ! ಕಾಣದ ಕೈಯ ಆಟ ಬಯಲಾಗುವುದೇ?

ಇನ್ನೆಂಟೇ ತಿಂಗಳಲ್ಲಿ ರಾಜ್ಯಸಭಾ ಚುನಾವಣೆಯಿರುವ ಹಿನ್ನೆಲೆಯಲ್ಲಿ, ಕಾಣದ ಕೈಗಳು ಗೌರಕ್ಕನನ್ನು ಗುರಿಯಾಗಿಸಿದ್ದರೆ ಆಶ್ಚರ್ಯವೇನಿಲ್ಲ ಬಿಡಿ! ಬಿಜೆಪಿಗೆ ಈ ಹತ್ಯೆಯ ಆರೋಪವನ್ನು ಸುತ್ತಿ, ತನ್ಮೂಲಕ ತನ್ನ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವುದಕ್ಕೂ ಹೇಸದ ಕಾಂಗ್ರೆಸ್ ಗೌರಕ್ಕನನ್ನೂ ದಂತಕಥೆಯಾಗಿರಿಸುತ್ತದೇನೋ!!!

– ಪೃಥ

Tags

Related Articles

Close