ಪ್ರಚಲಿತ

ಎದೆಗೆ ಗುಂಡುಹೊಕ್ಕು ಹೃದಯದಿಂದ ರಕ್ತ ಬಸಿಯುತ್ತಿದ್ದರೂ, ಈ ಯೋಧ ಮೂವರ ಉಗ್ರರ ತಲೆಯನ್ನು ಉರುಳಿಸಿ….

ಭಾರತದ ಗಡಿಭಾಗದಲ್ಲಿ ದೇಶವನ್ನು ಕಾಯುತ್ತಿರುವ ಅದೆಷ್ಟೋ ಸೈನಿಕರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ದೇಶ ಸೇವೆ ಮಾಡುತ್ತಿದ್ದು, ವೈರಿಗಳ ರುಂಡಾವನ್ನೂ ಚೆಂಡಾಡುತ್ತಿರುವುದು ಗೊತ್ತೇ ಇದೆ!! ಆದರೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಹಝಿನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ವಾಯು ಸೇನೆಯ ಗರುಡ ಕಮಾಂಡೋ ಪಡೆಯ ಸೈನಿಕರೊಬ್ಬರೆ ಬರೋಬ್ಬರಿ ಮೂರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಲ್ಲದೇ, ತೀವ್ರವಾಗಿ ಗಾಯಗೊಂಡಿದ್ದ ಸೈನಿಕ ಹುತಾತ್ಮರಾಗಿದ್ದಾರೆ!!

ಹೌದು…. ಕಾಶ್ಮೀರದ ತುದಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮ್ಮನ್ನು ಶತ್ರುಗಳಿಂದ ಕಾಪಾಡುವ ಯೋಧ, ತನ್ನ ಸ್ವಾರ್ಥಗಳನ್ನು ಮರೆತು ದೇಶ ಕಾರ್ಯದಲ್ಲಿ ಮಗ್ನನಾಗಿ; ಚಳಿ, ಗಾಳಿ, ಮಳೆಗಳನ್ನು ಲೆಕ್ಕಿಸದೆ ಆ ವೀರ ಯೋಧ ನಮ್ಮ ರಕ್ಷಣೆ ಮಾಡುತ್ತಿದ್ದು, ದೇಶಕ್ಕಾಗಿ ಹಗಲಿರುಳು ಶ್ರಮಿಸುವ ಯೋಧರೇ ನಿಜವಾದ ದೇಶಭಕ್ತರಾಗಿದ್ದಾರೆ!! ಆದರೆ ಈ ಹಿಂದೆ 19,500 ಅಡಿ ಎತ್ತರದ ಸಿಯಾಚಿನ್ ನೀರ್ಗಲ್ಲ ಪ್ರದೇಶದಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಯೋಧ ಹನುಮಂತಪ್ಪ ಕೊಪ್ಪದ್ ಮತ್ತು ಇತರ 9 ಮಂದಿ ಯೋಧರು ಸಿಕ್ಕಿಹಾಕಿಕೊಂಡು ಹಿಮರಾಶಿಯಡಿಯಲ್ಲಿ ಹೂತುಹೋಗಿದ್ದರು. ಆದರೆ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಐದು ದಿನಗಳ ಕಾಲ ಹಿಮದಡಿಯಲ್ಲಿ ಹೂತುಹೋಗಿದ್ದರೂ ಜೀವಂತವಾಗಿ ಉಳಿದಿದ್ದ, ಭಾರತಾಂಬೆಯ ಹೆಮ್ಮೆಯ ಪುತ್ರ ಹನುಮಂತಪ್ಪ ಕೊಪ್ಪದ ಅವರು ದೆಹಲಿಯ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದರೂ ವಿಧಿಯ ಅಟ್ಟಹಾಸಕ್ಕೆ ಸೋಲಬೇಕಾಯಿತು.

ಆದರೆ ಜಮ್ಮು ಮತ್ತು ಕಾಶ್ಮೀರದ ಹಝಿನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ವಾಯು ಸೇನೆಯ ಗರುಡ ಕಮಾಂಡೋ ಪಡೆಯ ಸೈನಿಕರೊಬ್ಬರೆ, ಬರೋಬ್ಬರಿ ಮೂರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದು, ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೈನಿಕ ಕೂಡ ಹುತಾತ್ಮರಾಗಿದ್ದಾರೆ!! ಹುತಾತ್ಮರಾಗಿರುವ ಸೈನಿಕ 31 ವರ್ಷದ ಕಾಪೆರ್Çೀರಲ್ ಜೆ.ಪಿ. ನಿರಾಲ ಆಗಿದ್ದು ದೇಶಕ್ಕೋಸ್ಕರ ಪ್ರಾಣವನ್ನೇ ಅರ್ಪಿಸಿದ್ದಾರೆ!! ಆದರೆ ಯಾವುದೇ ಮಾಧ್ಯಮಗಳು ಈ ಬಗ್ಗೆ ಸುದ್ದಿ ಭಿತ್ತರಿಸದೇ ಇರುವುದು ಮಾತ್ರ ವಿಪರ್ಯಾಸ!!

ನಡೆದ ಘಟನೆಯಾದರು ಏನು??

ಸದಾ ಒಂದಲ್ಲ ಒಂದು ರೀತಿಯಿಂದ ಉಗ್ರಗಾಮಿಗಳು ಭಾರತವನ್ನು ಪ್ರವೇಶಿಸಲು ಆತುರರಾಗಿದ್ದು, ಇವರನ್ನು ತಡೆಯುವಲ್ಲಿ ನಮ್ಮ ಭಾರತೀಯ ಯೋಧರು ಸತತವಾಗಿ ಉಗ್ರಗಾಮಿಗಳನ್ನು ಎದುರಿಸುವಲ್ಲಿ ಸಮರ್ಥರಾಗಿದ್ದು ತಿಳಿದೆ ಇದೆ. ಆದರೆ ಇತ್ತೀಚೆಗೆ ಬಂಡಿಪೆÇರಾ ಜಿಲ್ಲೆಯಲ್ಲಿ, ಸೈನಿಕರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಒಟ್ಟು ಆರು ಮಂದಿ ಭಯೋತ್ಪಾದಕರು ಭಾರತವನ್ನು ನುಸುಳಲು ಯತ್ನಿಸಿದ್ದ ಸಂದರ್ಭದಲ್ಲಿ ಭಾರತೀಯ ಸೇನೆಯೊಂದಿಗೆ ಮಾರಾಮಾರಿ ಕದನವು ಏರ್ಪಟ್ಟಿತ್ತು!! ಆದರೆ ಈ ಆತ್ಮಾಹುತಿ ದಾಳಿಯನ್ನು ನಡೆಸಲು ಸಂಚು ರೂಪಿಸಿಕೊಂಡಿದ್ದ ಈ ಭಯೋತ್ಪಾಕರು ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದರು.. ಈ ಸಂದರ್ಭದಲ್ಲಿ ಗರುಡ ಕಮಾಂಡೋಗಳು ಮತ್ತು ರಾಷ್ಟ್ರೀಯ ರೈಫಲ್ಸ್ ಒಳಗೊಂಡ ಜಂಟಿ ತಂಡ ಭಯೋತ್ಪಾದಕರ ಇರುವಿಕೆಯ ಬಗ್ಗೆ ಸ್ಪಷ್ಟ ಸುಳಿವಿನ ನಂತರ ಮನೆಯನ್ನು ಸುತ್ತುವರೆಯಿತು.. ತದನಂತರದಲ್ಲಿ ಗುಂಡಿನ ಕಾಳಗದ ಆರಂಭ ಶುರುವಾಗಿತ್ತು..

ವಾಯುಪಡೆಯ ಮೂಲಗಳ ಪ್ರಕಾರ, ಕಾಪೆರ್Çೀರಲ್ ನಿರಾಲಾ ಅವರು ಭಯೋತ್ಪಾದಕರಿಗೆ ಉಗ್ರವಾಗಿ ಪ್ರತೀಕಾರ ನೀಡಿದ್ದರು.. ಲೈಟ್ ಮೆಷೀನ್ ಗನ್ ಹಿಡಿದಿದ್ದ ಕಾಪೆರ್Çೀರಲ್ ನಿರಾಲಾ ಅವರು ತಕ್ಷಣವೇ ಭಯೋತ್ಪಾದಕರ ಮೇಲೆ ಭಾರಿ ಪ್ರಮಾಣದಲ್ಲಿ ಗುಂಡಿನ ಸುರಿಮುಳೆಯನ್ನೇ ಹರಿಸಿದ್ದರು.. ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಒಟ್ಟು ಆರು ಮಂದಿ ಭಯೋತ್ಪಾದಕರನ್ನು ಬಗ್ಗುಬಡಿಯುವಲ್ಲಿ ಇವರ ನಿಖರವಾದ ಎನ್ ಕೌಂಟರ್ ನಿಂದ, ಮೂರು ಭಯೋತ್ಪಾದಕರ ಉಸಿರನ್ನೇ ನಿಲ್ಲಿಸಿದ್ದರು!!

ಈ ಹಿಂದೆ, ಭಾರತ-ಮಯನ್ಮಾರ್ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಿಂದ “ರಾಷ್ಟ್ರೀಯ ಸಮಾಜವಾದಿ ಕೌನ್ಸಿಲ್ ಆಫ್ ನಾಗಾಲ್ಯಾಂಡ್” ಭಯೋತ್ಪಾದಕರಿಗೆ ಭಾರೀ ಸಾವು ನೋವುಗಳು ಉಂಟಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು. ಅಷ್ಟೇ ಅಲ್ಲದೇ, ಭಾರತೀಯ ಸೈನ್ಯದ ಒಂದು ತುಗಡಿ ದಂಗೆಕೋರರಿಂದ ದಾಳಿಗೊಳಗಾದ ನಂತರ ಸೇನೆ ಈ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿತು ಎಂದು ವರದಿಗಳು ಬಹಿರಂಗ ಪಡಿಸಿದ್ದವು. ಆದರೆ 2015 ರಲ್ಲಿ ಭಾರತದ ವಿಶೇಷ ಪಡೆಗಳು ಮಯನ್ಮಾರ್ ನಲ್ಲಿ ನೆಲೆಸಿದ್ದ ಈಶಾನ್ಯ ರಾಜ್ಯಗಳಲ್ಲಿ ಸೈನಿಕರ ಮೇಲೆ ದಾಳಿ ನಡೆಸಿ ಹಲವಾರು ಉಗ್ರರನ್ನು ಮಯನ್ಮಾರ್ ಗಡಿ ದಾಟಿ ಕೊಂದುಹಾಕಿತ್ತು!!

ಆದರೆ ಈ ಬಾರಿ ಏರ್ ಫೆÇೀರ್ಸ್ ಇತ್ತೀಚಿಗೆ ಕಾಶ್ಮೀರದಲ್ಲಿ ನಿಯೋಜಿಸಿದ ಸೇನೆಯೊಂದಿಗೆ ತನ್ನ ಗರುಡ್ ಕಮಾಂಡೊಗಳಿಗೆ “ಲೈವ್ ಸನ್ನಿವೇಶದ ತರಬೇತಿ”ಯನ್ನು ನೀಡಲು ಆರಂಭಿಸಿದ್ದು, ಆತ್ಮಾಹುತಿ ದಾಳಿಯನ್ನು ನಡೆಸಲು ಸಂಚು ರೂಪಿಸಿಕೊಂಡಿದ್ದ ಈ ಭಯೋತ್ಪಾಕರ ಮೇಲೆ ಕಾಪೆರ್Çೀರಲ್ ನಿರಾಲಾ ಸತತ ಗುಂಡು ಹರಿಸಿದ ಕಾರಣ ಮೂರು ಭಯೋತ್ಪಾದಕರ ಪ್ರಾಣಪಕ್ಷಿ ಹಾರಿ ಹೋಗಿತ್ತು!!

ಆದರೆ ಈ ಸಂದರ್ಭದಲ್ಲಿ, ಉಗ್ರರನ್ನು ಬಗ್ಗುಬಡೆಯುವಲ್ಲಿ ನಡೆಸಿದ ಹೋರಾಟದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದ ನಿರಾಲಾ ಅವರು ಅಂತಿಮವಾಗಿ ತೀವ್ರವಾಗಿ ಗಾಯಗೊಂಡರು. ಅಷ್ಟೇ ಅಲ್ಲದೇ, ಕೆಲವೇ ಸಮಯದಲ್ಲಿ ಈ ಎಲ್ಲಾ ಆರು ಭಯೋತ್ಪಾದಕರು ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಕಾಪೆರ್Çೀರಲ್ ನಿರಾಲಾ ಬೇಸ್ ಆಸ್ಪತ್ರೆಯಲ್ಲಿ ಕೊನೆಯ ಉಸಿರೆಳೆದರು..
– ಅಲೋಖಾ

Tags

Related Articles

Close