ಇತಿಹಾಸ

ಎರಡನೆಯ ಆಯೋಧ್ಯೆ ಖ್ಯಾತಿಯ ‘ಭೋಜಶಾಲಾ ವಾಗ್ದೇವಿ ಸರಸ್ವತಿ ಮಂದಿರ’ದ ಬಗ್ಗೆ ನಿಮಗೆ ಗೊತ್ತಾ?!

ಭಾರತದ ಏಕೈಕ ಸರಸ್ವತಿ ಮಂದಿರವಿರೋದು ಮಧ್ಯಪ್ರದೇಶ ರಾಜ್ಯದ ಧಾರ್ ಜಿಲ್ಲೆಯಲ್ಲಿ.

ಭೋಜಶಾಲಾ ಸರಸ್ವತಿ ಮಂದಿರ ಭಾರತದ ಎರಡನೆಯ ಅಯೋಧ್ಯೆಯಂತಲೇ ಖ್ಯಾತಿ.

ಭೋಜಶಾಲಾ ಸರಸ್ವತಿ ಮಂದಿರವನ್ನು ಮಧ್ಯಪ್ರದೇಶದಿಂದ ರಾಜಸ್ಥಾನ ಹಾಗು ಓರಿಸ್ಸಾದಿಂದ ಮಹಾರಾಷ್ಟ್ರವನ್ನಾಳಿದ ‘ರಾಜಾ ಭೋಜ’ನು ಸನ್ 1034 ರಲ್ಲಿ
ನಿರ್ಮಿಸಿದ್ದು ಇಲ್ಲಿ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದರು. ಆದರೆ ಇಸ್ಲಾಮಿ ಆಕ್ರಮಣಕಾರರ ಕಣ್ಣಿಗೆ ಈ ಮಂದಿರ ಬಿದ್ದದ್ದು 13 ನೇ ಶತಮಾನದಲ್ಲಿ.

‘ಅಲ್ಲಾವುದ್ದೀನ್ ಖಿಲ್ಜಿ’ ಸರಸ್ವತಿ ಮಂದಿರದ ಮೇಲೆ ಸನ್ 1305 ರಲ್ಲಿ ದಾಳಿ ಮಾಡಿ ಇದನ್ನ ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಪಟ್ಟು
ಅಲ್ಲಿ ವಿದ್ಯಾರ್ಜನೆಗಾಗಿ ಬಂದಿದ್ದ 1200 ವಿದ್ಯಾರ್ಥಿಗಳನ್ನ ಇಸ್ಲಾಮ್ ಮತಕ್ಕೆ ಮತಾಂತರವಾಗದಿರೋದಕ್ಕೆ ಕೊಂದು ಮಂದಿರದ ಆವರಣದಲ್ಲಿರುವ ಯಜ್ಞಕುಂಡದಲ್ಲಿ ರಕ್ತಹರಿಸಿದ್ದ.

ಇದಕ್ಕೂ ಮುಂಚೆ ಅಂದರೆ 36 ವರ್ಷಗಳ ಹಿಂದೆಯೆ ಅಂದರೆ 1269 ರಲ್ಲಿ ‘ಕಮಲ್ ಮೌಲಾನಾ’ ಎಂಬ ಇಸ್ಲಾಮಿ ಆಕ್ರಮಣಕಾರ ಮಂದಿರದ ಮೇಲೆ
ದಾಳಿ ಮಾಡಿ ಹಿಂದುಗಳನ್ನ ಮತಾಂತರಗೊಳಿಸಿ ಈ ಮಂದಿರವನ್ನು ಅಲ್ಲಾವುದ್ದೀನನ ವಶಕ್ಕೊಪ್ಪಿಸಿದ್ದ.

ಈ ಮಂದಿರದ ವಿನ್ಯಾಸದ ರೀತಿಯಲ್ಲೇ ಧಾರ್’ನಲ್ಲಿ ರಾಜಾ ಭೋಜನ ಸೂರ್ಯಮಾರ್ತಾಂಡ ಮಂದಿರವೂ ಇದ್ದು ಅದನ್ನ ‘ವಿಜಯ ಮಂದಿರ’ ಅಂತಲೂ ಕರೀತಾರೆ, ಆದರೆ ಈ ಮಂದಿರದ ಮೇಲೂ ‘ದಿಲ್ವಾರ್ ಖಾನ್’ ಎಂಬ ಇಸ್ಲಾಂ ದಾಳಿಕೋರ ದಾಳಿ ಮಾಡಿ ಅಲ್ಲಿದ್ದ ವಿಜಯಸ್ಥಂಭ ಹಾಗು ಸೂರ್ಯಮಾರ್ತಾಂಡ ದೇಗುಲವನ್ನ ಸನ್ 1401 ರಲ್ಲಿ ಧ್ವಂಸಗೊಳಿಸಿ ಭೋಜಶಾಲಾ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿದ್ದ. ಅದನ್ನ ಈಗ ಧಾರ್’ನ ಮುಸಲ್ಮಾನರು “ಲಾತ್ ಮಸ್ಜಿದ್” ಅಂತ ಅಲ್ಲಿ ಈಗ ಶುಕ್ರವಾರದಂದು ಸರಸ್ವತಿ ಮಂದಿರದ ಪ್ರಾಂಗಣದಲ್ಲಿಯೇ ನಮಾಜ್ ಮಾಡುತ್ತಾರೆ.

ಸನ್ 1514 ರಲ್ಲಿ ‘ಮೆಹಮೂದ್ ಶಾಹ್’ ಎಂಬ ಮುಸಲ್ಮಾನ ಆಕ್ರಮಣಕಾರ ಸರಸ್ವತಿ ಮಂದಿರವನ್ನು “ಕಮಲ್ ಮೌಲಾನಾ ಮಕ್ಬರಾ” ಅಂತ ನಾಮಕರಣ ಮಾಡಿ ಅಲ್ಲಿ ಸಾಮೂಹಿಕ ನಮಾಜ್ ಮಾಡಿಸಲು ಮುಂದಾದ(ಈಗಲೂ ಮುಸಲ್ಮಾನರು ಭೋಜಶಾಲಾ ಮಂದಿರವನ್ನು ಕಮಲ್ ಮೌಲಾನಾ ಮಸ್ಜಿದ್ ಅಂತಲೇ ಕರೆಯೋದು). ಈತನ ದಾಳಿಯಾದ ಮೇಲೆಯೆ ಈ ಮಂದಿರ ಒಂದು ಮಸ್ಜಿದ್ ಅನ್ನೋ ವಿವಾದ ಶುರುವಾಗಿದ್ದು

ಆದರೆ ಸನ್ 1552 ರಲ್ಲಿ ರಜಪೂತ ರಾಜ ‘ಮೈದಿನೇರಿ’ ಇಸ್ಲಾಮಿನ ಆಕ್ರಮಣಕಾರ ‘ಮೆಹಮೂದ ಖಿಲ್ಜಿ’ ಯನ್ನ ಸೋಲಿಸಿ ಸರಸ್ವತಿ ಮಂದಿರವನ್ನ ಇಸ್ಲಾಮ್ ಮುಕ್ತಗೊಳಿಸಿ ಮೆಹಮೂದ್ ಖಿಲ್ಜಿಯ 900 ಮುಸಲ್ಮಾನ ಸೈನಿಕರನ್ನ ಬಂಧಿಯಾಗಿರಿಸಿದ್ದ.

ಆದರೆ ಒಂದು ಇಂಟರೆಸ್ಟಿಂಗ್ ವಿಷ್ಯ ಅಂದರೆ ಮೈದಿನೇರಿ ರಾಜನ ಸೈನ್ಯದಲ್ಲಿದ್ದ ಮುಸಲ್ಮಾನ ಸೈನಿಕ ‘ಸೈಯ್ಯದ್ ಮಸೂದ್ ಅಬ್ದಲ್’ ತನ್ನ ರಾಜನಿಗೆ ವಿಶ್ವಾಸದ್ರೋಹ ಮಾಡಿ ಒತ್ತೆಯಾಳಾಗಿದ್ದ 900 ಮುಸಲ್ಮಾನ ಸೈನಿಕರನ್ನು ಬಿಟ್ಟೋಡಿಸಿದ. ನಂತರ ಈ ವಿಷಯ ತಿಳಿದ ಮೈದಿನೇರಿ ರಾಜ ಈ ಸೈಯ್ಯದ್ ಮಸೂದ್ ಅಬ್ದಲ್’ನನ್ನ ಅಟ್ಟಾಡಿಸಿ ತಲೆ ಕಡಿದು ಕೊಂದ. ಆದರೆ ಈ ಅಬ್ದಲ್’ನ ಬಗ್ಗೆ ಮುಸಲ್ಮಾನರು ಬೇರೆಯದೆ ಸುಳ್ಳು ಇತಿಹಾಸ ಸೃಷ್ಟಿಸಿ ಜನರ ಹಾದಿ ತಪ್ಪಿಸೋಕೆ ಪ್ರಯತ್ನಿಸಿದ್ದಾರೆ.

ಆ ಸುಳ್ಳಿನ ಕಂತೆಯನ್ನೂ ನೀವು ಕೇಳಲೇಬೇಕು. ಈಗಿನ ಮುಸಲ್ಮಾನರು ಆ ಸೈಯ್ಯದ್ ಅಬ್ದಲನ ಬಗ್ಗೆ ಹೀಗೆ ಹೇಳ್ತಾರೆ.

1552 ರಲ್ಲಿ ಧಾರ್’ನ ರಾಜನಿಗೆ ಕುಷ್ಟರೋಗವಿದ್ದು ಆತ ತನ್ನ ಆಸ್ಥಾನದ ಒಬ್ಬ ಪಂಡಿತನಿಗೆ ಇದರ ಪರಿಹಾರ ಏನು ಅಂತ ಕೇಳಿದಾಗ ಆ ಪಂಡಿತ 900 ಜೋಡಿ(ಗಂಡ ಹೆಂಡತಿ)ಗಳನ್ನ ಕೊಂದು ಆ ರಕ್ತದಿಂದ ಸ್ನಾನ ಮಾಡಿದರೆ ನಿನ್ನ ಕುಷ್ಠರೋಗ ನನಿವಾರಣೆಯಾಗುತ್ತೆ ಅಂದಿದ್ದನಂತೆ ಅದರ ಪ್ರಕಾರ ರಾಜ 900 ಜೋಡಿ ಅಂದರೆ 1800 ಜನರನ್ನು ಕೊಲ್ಲಲು ಮುಂದಾಗಿದ್ದನಂತೆ ಆದರೆ ಈ ರಾಜನ ಆಸ್ಥಾನದಲ್ಲಿದ್ದ ಸೈಯ್ಯದ್ ಅಬ್ದಲ್’ಗೆ ಆ ಮಾರಣಹೋಮ ತಪ್ಪಿಸಬೇಕೆಂದೆನಿಸಿ ತಾಯಿ ದುರ್ಗೆಯನ್ನ ಕುರಿತು ಪ್ರಾರ್ಥಿಸಿದಾಗ ದುರ್ಗಾಮಾತೆ ಆ ರಾಜನನ್ನೇ ಕೊಂದರೆ 1800 ಜೀವಗಳು ಉಳಿಯುತ್ತೆ ಅಂತ
ಹೇಳಿದಳಂತೆ ಅದರ ಪ್ರಕಾರ ಆತ ರಾಜನನ್ನ ಕೊಂದು ಆ 1800 ಕಿಡಿಗಳು ಜೀವವನ್ನ ಉಳಿಸಿ ತನ್ನ ಪ್ರಾಣಾರ್ಪಣೆ ಮಾಡಿದನಂತೆ ಆದ್ದರಿಂದ ಆತನನ್ನ
“ಬಂಧಿಛೋಡ್ ಬಾಬಾ” (ಬಂಧಿತರನ್ನ ಬಂಧಮುಕ್ತಗೊಳಿಸಿದ ಬಾಬಾ) ಅಂತ ಆತನ ಸಮಾಧಿಯನ್ನ ಧಾರ್’ನ ಕೋಟೆಯಲ್ಲಿ ಕಟ್ಟಲಾಗಿದೆ.

ಸರಿ ಇಷ್ಟೆಲ್ಲ ಆದನಂತರ ಧಾರ್’ನ ಸರಸ್ವತಿ ಮಂದಿರ ಹಿಂದುಗಳ ಕೈಯಲ್ಲೇ(1703 ರಲ್ಲಿ) ಉಳಿದುಕೊಂಡಿತ್ತು ಆದರೆ ಸನ್ 1826 ರಲ್ಲಿ ಮಾಳ್ವಾ ಸಂಸ್ಥಾನವನ್ನ ವಶಪಡಿಸಿಕೊಂಡ ಬ್ರಿಟಿಷರಿಂದ ಹಿಂದುಗಳಿಗೆ ಮತ್ತೆ ಮೋಸವಾಯಿತು.

ಬ್ರಿಟಿಷರ ಕೈವಶವಾದ ಭೋಜಶಾಲಾ ಮಂದಿರ ಮತ್ತೆ ಬ್ರಿಟಿಷರ ದಾಳಿಗೆ ತುತ್ತಾಗಿ ವಿರೂಪಗೊಂಡಿತು.

ಇದನ್ನ ವಶಪಡಿಸಿಕೊಳ್ಳುವ ಮುಂಚೆ ಅಂದರೆ 1822 ರಲ್ಲಿ ಹಾಗು ವಶಪಡಿಸಿಕೊಂಡ ನಂತರ ಅಂದರೆ 1844 ರಲ್ಲಿ ಬ್ರಿಟಿಷ ಇತಿಹಾಸಕಾರರಾದ ‘ಜಾನ್ ಮ್ಯಾಕೊಲಮ್’ ಹಾಗು ‘ವಿಲಿಯಮ್ ಕಿನಕೇಡ್’ ಈ ಮಂದಿರವನ್ನ”ಕಮಲ್ ಅಲ್ ದೀನ್ ದರ್ಗಾ” ಅಂತ ಹಾಗು ರಾಜಾ ಭೋಜ ಒಬ್ಬ ಪೌರಾಣಿಕ ರಾಜ ಅಂತಲೂ ಘೋಷಿಸಿಬಿಟ್ಟರು

ಇದರ ನಂತರ ಬ್ರಿಟಿಷ್ ಅಧಿಕಾರಿ ‘ಲಾರ್ಡ್ ಕರ್ಜನ್’ ಭೋಜಶಾಲಾ ಮಂದಿರದಲ್ಲಿದ್ದ “ವಾಗ್ದೇವಿ ಸರಸ್ವತಿ ಮೂರ್ತಿ”ಯನ್ನ ಸನ್ 1902 ರಲ್ಲಿ ಇಂಗ್ಲೆಂಡಿಗೆ
ಕೊಂಡೊಯ್ದ. ಈಗಲೂ ಅದು ಲಂಡನ್ನಿನ್ ಮ್ಯೂಸಿಯಂನಲ್ಲಿದೆ.

ಬ್ರಿಟಿಷರ ಈ ಕೃತ್ಯದ ನಂತರ ಸನ್ 1930 ರಲ್ಲಿ ಮತ್ತೆ ಮುಸಲ್ಮಾನರು ಇದು ಮಸೀದಿಯಂತ ತಮ್ಮ ಜನರನ್ನ ರೊಚ್ಚಿಗೆಬ್ಬಿಸಿ ಭೋಜಶಾಲಾದಲ್ಲಿ ನಮಾಜ್ ಮಾಡಲು ಶುರುಮಾಡಿಕೊಂಡರು ಆದರೆ ಇದನ್ನ ಅಲ್ಲಿ. ಹಿಂದುಗಳ ಆದಿಯಾಗಿ “ಆರ್ಯ ಸಮಾಜ” ಹಾಗು “ಹಿಂದೂ ಮಹಾಸಭಾ” ವಿರೋಧಿಸಿ ಅದನ್ನ ತಡೆಯಿತು.

1952 ರಲ್ಲಿ ಭೋಜಶಾಲಾ Archeological Survey of India(ASI) ನ ಅಧೀನಕ್ಕೊಳಪಟ್ಟಿತು.ಇದರ ನಂತರ ಆರೆಸ್ಸೆಸ್ ಹಾಗು ಹಿಂದೂ ಮಹಾಸಭಾ ಅಲ್ಲಿನ ಹಿಂದುಗಳನ್ನ ಜಾಗೃತಗೊಳಿಸಿ “ಶ್ರೀಮಹಾರಾಜಾಭೋಜ ವನೋತ್ಸವ ಸಮಿತಿ” ಯನ್ನ ಹುಟ್ಟುಹಾಕಿತು.

1961 ರಲ್ಲಿ ಪದ್ಮಶ್ರೀ ಪುರಸ್ಕೃತ ಡಾಕ್ಟರ್ ‘ವಿಷ್ಣುಶ್ರೀಧರ್ ವಾಕಂಕರ್’ ರವರು ಲಂಡನ್’ನಲ್ಲಿರುವ ವಾಗ್ದೇವಿ ಸರಸ್ವತಿ ಮೂರ್ತಿಯೂ ಮೂಲ ಭೋಜಶಾಲಾ ಮಂದಿರದ್ದೆ ಅಂತ ಸ್ಪಷ್ಟೀಕರಿಸಿ ಅದನ್ನು ವಾಪಸ್ ಭಾರತಕ್ಕೆ ಮರಳಿ ತರಬೇಕೆಂದು ಲಂಡನ್ ಮ್ಯೂಸಿಯಂಗೂ ಭೇಟಿ ನೀಡಿ ಅಲ್ಲಿಂದ ವಾಪಸ್ ಬಂದ ನಂತರ ನೆಹರೂರವರಿಗೆ 1961 ರಲ್ಲಿ ಹಾಗು ಇಂದಿರಾ ಗಾಂಧಿಯವರಿಗೆ 1977 ರಲ್ಲಿ ಪತ್ರ ಬರೆದಿದ್ದರು ಆದರೆ ಏನ್ ಉಪಯೋಗ ಹೇಳಿ ಕಾಂಗ್ರೆಸ್ ಮುಸಲ್ಮಾನ
ತುಷ್ಟಿಕರಣಕ್ಕೆ ಜೋತುಬಿದ್ದು ವಾಕಂಕರ್ ಅವರ ಮನವಿಗೆ ಸ್ಪಂದಿಸಲೇ ಇಲ್ಲ.

1997 ರಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಅಧಿಕಾರಾವಧಿಯಲ್ಲಿದ್ದಾಗ ಭೋಜಶಾಲಾ ಮಂದಿರದಲ್ಲಿ ಹಿಂದುಗಳನ್ನ ಕೇವಲ ದರ್ಶನಕ್ಕಾಗಿ ಮಾತ್ರ ಅವಕಾಶ ನೀಡಿ ಪೂಜೆ ಪುನಸ್ಕಾರ ಮಾಡಲು ನಿಷೇಧಿಸಿ(ವಸಂತ ಪಂಚಮಿಯಂದಷ್ಟೇ ಹಿಂದುಗಳು ಪೂಜೆ ಮಾಡಬಹುದು ಅಂತ ಫರಮಾನು ಹೊರಡಿಸಿದ) ಮುಸಲ್ಮಾನರಿಗೆ ಮಾತ್ರ ನಮಾಜ್ ಮಾಡಲು ಅವಕಾಶ ನೀಡಿದ.

ಆದರೆ 2002 ರಲ್ಲಿ ವಸಂತ ಪಂಚಮಿ ಶುಕ್ತವಾರದ ದಿನದಂದೆ ಇದ್ದುದರಿಂದ ಹಿಂದುಗಳು ಪೂಜೆಗೆ & ಮುಸಲ್ಮಾನರು ನಮಾಜ್’ಗೆ ಬಂದಾಗ ಪೋಲೀಸರು ಲಾಠಿ ಚಾರ್ಜ್ ನಡೆಸಿ ಹಿಂದುಗಳನ್ನ ಮನಬಂದಂತೆ ಥಳಿಸಿದ್ದರು.

ಇದಾದ ನಂತರ ಹಿಂದುಗಳು ಜಾಗೃತರಾಗಿ ದಿನದಿಂದ ದಿನಕ್ಕೆ ಭೋಜಶಾಲಾ ದರ್ಶನಕ್ಕೆ ಸಾಲುಗಟ್ಟಿ ನಿಂತರು. ಇದನ್ನ ಕಂಡ ಸೋ ಕಾಲ್ಡ್ ಸೆಕ್ಯೂಲರ್ ನಾಯಕರು & ಮುಸಲ್ಮಾನರು ಕಮಲ್ ಮೌಲಾನಾ ಹುಟ್ಟುಹಬ್ಬ ಆಚರಿಸಲು ಮುಂದಾಗಿ ಮುಸಲ್ಮಾನರನ್ನೂ ಭೋಜಶಾಲಾಕ್ಕೆ ಕರೆತರಲು ಪ್ರಾರಂಭಿಸಿದರು.

ಈ ಕಾರಣಕ್ಕಾಗಿ ಮಧ್ಯಪ್ರದೇಶ ಸರ್ಕಾರ ಕೇವಲ ಮಧ್ಯಾಹ್ನ 1 ಗಂಟೆಯವರೆಗೆ ಹಿಂದುಗಳು ಪೂಜಾ ಕೈಂಕರ್ಯ ನೆರವೇರಿಸಲು ಅವಕಾಶ ನೀಡಿ ನಂತರ ಮುಸಲ್ಮಾನರ ಕವ್ವಾಲಿ ನಡೆಸಲು ಅವಕಾಶ ನೀಡುವ ಫರಮಾನು ಹೊರಡಿಸಿಯೇಬಿಟ್ಟರು.

2003 ರಲ್ಲಿ ಅದ್ದೂರಿಯಾಗಿ ವಸಂತಪಂಚಮಿ ಆಚರಿಸಲು ಮುಂದಾಗಿದ್ದ ಹಿಂದುಗಳ ಮೇಲೆ ಹಾಗು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿ ಮುಸಲ್ಮಾನರಿಗೆ ಮಾತ್ರ ನಮಾಜ್ ಮಾಡಲು ಅನುಮತಿ ನೀಡಿದ್ದರು.

ಇಷ್ಟಾದ ಮೇಲೆ ಧಾರ್’ನ ಹಿಂದುಗಳು ಸುಮ್ಮನಿದ್ದಾರೆಯೇ? ಅಲ್ಲಿ ರಥಯಾತ್ರೆ ಆಯೋಜಿಸುವ ಮೂಲಕ ಒಂಭತ್ತು ಲಕ್ಷ ಹಿಂದುಗಳನ್ನ ಒಗ್ಗೂಡಿಸಿತು. ಆದರೆ ಈ ರಥಯಾತ್ರೆಯಲ್ಲಿ ಭೋಜಶಾಲಾ ಮಂದಿರದ ಕುರಿತಾದ ಪ್ರತಿಯೊಂದು ಭಿತ್ತಿಪತ್ರ, ಬ್ಯಾನರ’ಗಳನ್ನ ಪೋಲಿಸರು ಹರಿದು ಹಾಕಿ ಹಿಂದುಗಳ ಮೇಲೆ ದಾಳಿ ಮಾಡಿ ಧಾರ್’ನ ಹೋಟೆಲ್, ಶಾಲೆ, ಧರ್ಮಶಾಲೆಗಳನ್ನ ಕೂಡ ಸೀಲ್ ಮಾಡಿ ಸರಕಾರಿ ನೌಕರರನ್ನ ಇಲ್ಲಸಲ್ಲದ ಕೆಲಸಗಳಲ್ಲಿ ವ್ಯಸ್ಥವಾಗಿರುವಂತೆ ನೋಡಿಕೊಂಡರು.

ಇದಾದ ನಂತರ ಪ್ರವೀಣ್ ಭಾಯ್ ತೊಗಾಡಿಯಾ ರವರು ಧಾರ್’ಗೆ ಆಗಮಿಸಿ ಹಿಂದುಗಳನ್ನ ಸಂಭೋದಿಸುತ್ತ ಸರಕಾರಕ್ಕೆ ಭೋಜಶಾಲಾ ಮಂದಿರವನ್ನು ಹಿಂದುಗಳಿಗೆ ಹಸ್ತಾಂತರಿಸಲು ಎಚ್ಚರಿಕೆ ನೀಡಿದರು ಇಲ್ಲವಾದಲ್ಲಿ ಹಿಂದುಗಳು ತಮ್ಮ ಸ್ವಂತ ಬಲದ ಮೇಲೆ ಭೋಜಶಾಲಾ ವಶಪಡಿಸಿಕೊಳ್ಳಬೇಕಾಗುತ್ತೆ ಅನ್ನೋ ಖಡಕ್ ಸಂದೇಶವನ್ನೂ ರವಾನಿಸಿದರು.

2003 ರಲ್ಲಿ ಹಿಂದುಗಳನ್ನ ಹತ್ತಿಕ್ಕುವ ಯಾವ ಪ್ರಯತ್ನವನ್ನೂ ದಿಗ್ವಿಜಯ್ ಸಿಂಗ್ ಬಿಡಲಿಲ್ಲ.

ಕಾಂಗ್ರೆಸ್ಸಾದರು ಬಿಡಿ ಯಾವತ್ತಿದ್ದರೂ ಹಿಂದೂ ವಿರೋಧಿಗಳೇ ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಕೂಡ ಹಿಂದುಗಳಿಗೆ ಮೋಸ ಮಾಡಿತು.

#2006ರಲ್ಲಿ ವಸಂತ ಪಂಚಮಿ ಶುಕ್ರವಾರದಂದೆ ಬಂದಿತಂತ ಹಿಂದುಗಳು ದಿನವಿಡೀ ಪೂಜೆ ನಡೆಸಲು ಆಗ್ರಹಿಸಿ ಮುಸಲ್ಮಾನರು ನಮಾಜ್ ಮಾಡಲು ಅವಕಾಶ ನೀಡಬಾರದಂತ ಎಚ್ಚರಿಕೆ ನೀಡಿದರೂ ಶಿವರಾಜ್ ಸಿಂಗ್ ಚೌಹಾಣ್ ಅದನ್ನ ಧಿಕ್ಕರಿಸಿ ಮುಸಲ್ಮಾನರಿಗೆ ನಮಾಜ್ ಮಾಡಲು ಅನುಮತಿ ಕೊಟ್ಟು ಸ್ವತಃ ಪೋಲಿಸ್ ವಾಹನಗಳಲ್ಲೆ ಮುಸಲ್ಮಾರನ್ನ ನಮಾಜ್ ಮಾಡಲು ಕರೆತಂದು ಭೋಜಶಾಲಾ ಮಂದಿರಕ್ಕೆ ಬರಲು ಯತ್ನಿಸಿದ ಹಿಂದುಗಳನ್ನ ಹಿಗ್ಗಾಮುಗ್ಗಾ ಥಳಿಸಲಾಯಿತು.

ಇದಾದ ನಂತರ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬಂದಿತು. ಈಗಲೂ ವಾಗ್ದೇವಿ ಸರಸ್ವತಿ ಮೂರ್ತಿಯು ಲಂಡನ್ ಮ್ಯೂಸಿಯಂನಲ್ಲಿಯೇ ಇದೆ.

ಈಗಲೂ ಶುಕ್ರವಾರದಂದು ಮಸಲ್ಮಾನರು ಭೋಜಶಾಲಾ ಆವರಣದಲ್ಲಿ ನಮಾಜ್ ಮಾಡ್ತಾರೆ ಹಾಗು ಸೋಮವಾರದಂದು ಹಿಂದುಗಳು ವಾಗ್ದೇವಿ ಸರಸ್ವತಿಯ ಫೋಟೋ ಇಟ್ಟು ಪೂಜೆ ಮಾಡುತ್ತಾರೆ.

ಅಧಿಕಾರಕ್ಕೆ ಬಂದು ಮೂರು ಅವಧಿ ಕಳೆದಿವೆ, ಶಿವರಾಜ್ ಸಿಂಗ್ ಚೌಹಾಣರು ವಾಗ್ದೇವಿ ಸರಸ್ವತಿ ಮೂರ್ತಿಯನ್ನ ಲಂಡನ್ನಿನಿಂದ ವಾಪಸ್ ತರಲು ಮೋದಿ
ಸರ್ಕಾರಕ್ಕೆ ಪತ್ರ ಬರೆದು ಪ್ರಕ್ರಿಯೆ ಶುರು ಮಾಡಬೇಕು ಅನ್ನೋದು ಧಾರ್’ನ ಹಿಂದುಗಳ ಆಗ್ರಹ. ಅವರದ್ದಷ್ಟೇ ಯಾಕೆ ಇಡಾಇ ಭಾರತದ ಹಿಂದುಗಳ ಆಸೆಯೂ ಅದೆ.

ಪ್ರಧಾನಿ ಮೋದಿ ಹಲವು ರಾಷ್ಟ್ರಗಳಿಂದ ಪ್ರಾಚೀನ ಮೂರ್ತಿಗಳನ್ನ ಭಾರತಕ್ಕೆ ತಂದಿದ್ದಾರೆ. ಭಾರತದ ಏಕೈಕ ವಾಗ್ದೇವಿ ಸರಸ್ವತಿ ಮೂರ್ತಿಯನ್ನೂ ಆದಷ್ಟು ಬೇಗ ತಂದು ಧಾರ್’ನ ಸಿಂಗರಿಸಬೇಕು ಅನ್ನೋದು ಧಾರ್ ಹಿಂದುಗಳ ಒತ್ತಾಸೆಯಾಗಿದೆ.

– Vinod Hindu Nationalist

Tags

Related Articles

Close