ಪ್ರಚಲಿತ

ಎರಡು ಲಕ್ಷಕ್ಕೂ ಹೆಚ್ಚು ಶೆಲ್ ಕಂಪೆನಿಗಳ ಅಕ್ರಮ ಬಯಲಿಗೆ! ಕೇಂದ್ರ ಸರಕಾರಕ್ಕೇ ಆಘಾತವಾಗಿದ್ದು ಯಾಕೆ ಗೊತ್ತೇ?!

ಕಪ್ಪು ಹಣ ಮತ್ತು ಶೆಲ್ ಕಂಪನಿಗಳ ಮೇಲಿನ ಯುದ್ಧ ಹೊಸ ತಿರುವು ಪಡೆದುಕೊಂಡಿದೆ. ಅಪನಗದೀಕರಣದ ಸಮಯದಲ್ಲಿ ಅಕ್ರಮ ಎಸಗಿದ ಅನುಮಾನಗಳಿರುವ 2,09,032 ಕಂಪನಿಗಳ ವ್ಯವಹಾರಗಳನ್ನು ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿದೆ.!! ಈ ಸಂಬಂಧ ಬ್ಯಾಂಕ್‍ಗಳೂ ಮಾಹಿತಿ ನೀಡಿದ್ದು ಈ ಕಂಪನಿಗಳಲ್ಲಿ 5,800 ಕಂಪನಿಗಳ ಬ್ಯಾಂಕ್ ವ್ಯವಹಾರವನ್ನು ಸದ್ಯ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ದೊರಕಿದೆ. ಈ ನಿಟ್ಟಿನಲ್ಲಿ ಮೋದಿ ಸರಕಾರ ಅವಿರತ ಪ್ರಯತ್ನವನ್ನು ಮಾಡುತ್ತಿದೆ.

ಮೊದಲ ಹಂತದಲ್ಲಿ 13,140 ಖಾತೆಗಳ ಪರಿಶೀಲನೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ. ಇವುಗಳಲ್ಲಿ ಕೆಲವು ಕಂಪನಿಗಳು 100ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಒಂದು ಕಂಪನಿಯ ಹೆಸರಿನಲ್ಲಂತೂ 2,134 ಬ್ಯಾಂಕ್ ಖಾತೆಗಳಿವೆ.

ಸಾಲದ ಮೊತ್ತವನ್ನು ಹೊರತುಪಡಿಸಿದರೆ ಈ ಬ್ಯಾಂಕ್ ಖಾತೆಗಳಲ್ಲಿ ನವೆಂಬರ್ 8, 2016 ಮೊದಲು ಕೇವಲ 22.05 ಕೋಟಿ ರೂಪಾಯಿ ಠೇವಣಿ ಇತ್ತು. ಆದರೆ
ನವೆಂಬರ್ 9ರ ನಂತರ ಈ ಖಾತೆಗಳಲ್ಲಿ 4,573.87 ಕೋಟಿ ರೂಪಾಯಿ ಜಮೆ ಮಾಡಲಾಗಿತ್ತು.

ಸಾಲದ ಖಾತೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಖಾತೆಗಳಲ್ಲಿ 80.79 ಕೋಟಿ ರುಣಾತ್ಮಕ ಮೊತ್ತವಿತ್ತು. ಹೀಗಿರುವಾಗ ಏಕಾ ಏಕೀ ಅಪನಗದೀಕರಣದ ವೇಳೆ ದೊಡ್ಡ ಮೊತ್ತದ ಹಣ ಇಟ್ಟಿದ್ದು ಅನುಮಾನ ಹುಟ್ಟು ಹಾಕಿದೆ!! ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಖಾತೆಗಳನ್ನು ಭಾರೀ ಮೊತ್ತದ ಹಣದ ವರ್ಗಾವಣೆಗಳು ಕಂಡು ಬರುತ್ತಿದ್ದಂತೆ ಕಂಪನಿಗಳ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಕೆಲವು ಕಂಪನಿಗಳು ಎಷ್ಟರ ಮಟ್ಟಿಗೆ ಖತರ್ನಾಕ್ ಇವೆ ಎಂದರೆ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರವೂ ಠೇವಣಿ ಮತ್ತು ಹಣ ಹಿಂಪಡೆಯುವುದು ನಡೆಸಲಾಗಿದೆ.

ಒಂದು ಬ್ಯಾಂಕ್‍ನಲ್ಲಿ ನವೆಂಬರ್ 8ಕ್ಕೊ ಮೊದಲು ಅಂದರೆ ಅಪನಗದೀಕರಣದ ಮೊದಲು 429 ಖಾತೆಗಳಲ್ಲಿ ಶೂನ್ಯ ಠೇವಣಿ ಇತ್ತು!! ಯಾವಾಗ ಅಪನಗದೀಕರಣ ಘೋಷಣೆಯಾಯಿತೋ ಈ ಖಾತೆಗೆ 11 ಕೋಟಿ ರೂಪಾಯಿ ಹಣ ಹಾಕಿ ಅದನ್ನು ಡ್ರಾ ಮಾಡಲಾಗಿದೆ. ಈ ಖಾತೆಗಳನ್ನು ಸ್ಥಗಿತಗೊಳಿಸುವಾಗ ಖಾತೆಯಲ್ಲಿ ಉಳಿದಿದ್ದು 42,000 ರೂಪಾಯಿ ಮಾತ್ರ!!

ಹಾಗೆ ನೋಡಿದರೆ ಅನುಮಾನಾಸ್ಪದ ಕಂಪನಿಗಳಲ್ಲಿ ಈಗ ಪಟ್ಟಿ ಮಾಡಿರುವ ಕಂಪನಿಗಳು ಶೇಕಡ 2.5 ಮಾತ್ರ ಇನ್ನೂ 97.5 ಶೇಕಡಾ ಕಂಪನಿಗಳು ಬಾಕಿ ಇದ್ದು
ಅವುಗಳ ವ್ಯವಹಾರದ ಬಗ್ಗೆ ಇನ್ನೂ ಗಮನಹರಿಸಿಲ್ಲ…ಗಮನಹರಿಸಿದರೆ ಇನ್ನು ಅದೆಷ್ಟು ಅವ್ಯವಹಾರಗಳು ಪತ್ತೆಯಾಗುತ್ತದೋ ಹೇಳಲಿಕ್ಕಾಗದು. ಈ ಹಿನ್ನಲೆಯಲ್ಲಿ ತನಿಖಾ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ತನಿಖೆ ಮಾಡಲು ಕೇಂದ್ರ ಸರಕಾರ ಪ್ರತ್ನಿಸುತ್ತದೆ.

ಕಾಳ ಧನ ಮತ್ತು ಕಳ್ಳ ನೋಟುಗಳ ಹರಿವು ತಡೆಗಟ್ಟಲು ನರೇಂದ್ರ ಮೊದಿ ಸರಕಾರ ಹೊಸ ಕ್ರಮ್ಮೆ ಮೊಮದಾದರೂ ಇಂತಹ ಅಕ್ರಮಗಳು ದೇಶದೆಲ್ಲೆಡೆ
ನಡೆಯುತ್ತಾನೆ ಬಂದಿದೆ. 500 ಮತ್ತು 1000 ಮುಖ ಬೆಲೆ ನೋಟ್‍ಗಳ ವ್ಯವಹಾರಗಳನ್ನು ಬಂದ್ ಮಾಡಿದ್ದು ಹೊಸ 500 ಮತ್ತು 2000 ಮುಖಬೆಲೆಯ
ನೋಟುಗಳಿಗೆ ಬದಲಾಯಿಸಿದರೂ ಇನ್ನೂ ಅವ್ಯವಹಾರಗಳು ನಡೆಯುತ್ತಾನೆ ಬರುತ್ತಿದೆ.

ಈ ಹಿಂದೆ ಭಯೋತ್ಪಾದನೆಯಂತಹ ದೇಶ ವಿರೋಧಿ ಚಟುವಟಿಕೆಗಳಿಗೆ ಕಳ್ಳ ನೋಟುಗಳ ಮೂಲಕ ಹಣ ಹರಿದು ಹೋಗುತ್ತಿದ್ದು ಈ ನಿರ್ಧಾರದ ಮೂಲಕ ಶಸ್ತ್ರಾಸ್ತ್ರಗಳ ಕಳ್ಳ ಸಾಗಾನಿಕೆ ಗೂಢಚರ್ಯೆ ಮುಂತಾದ ಕೆಲಸಗಳಿಗೆ ಪೂರೈಕೆಯಾಗುತ್ತಿದ್ದ ಹಣದ ಸರಬರಾಜನ್ನು ತಡೆಯಲು ಸಹಕಾರಿಯಾಗಿತ್ತು.

ಆ ಸಮಯದಲ್ಲಿ ಜನರಿಗೆ ತೊಂದರೆಯಾಗಿದ್ದರೂ ಅದೆಷ್ಟೋ ಜನರ ಕೊಡಿಟ್ಟು ಹಣಕ್ಕೆ ಬ್ರೇಕ್‍ಬಿದ್ದದ್ದು ಅಂತೂ ನಿಜ!..

ಆದರೆ ಮೋದಿ ಸರಕಾರ ಅಕ್ರಮವಾಗಿ ಕೂಡಿಟ್ಟ ಹಣಕ್ಕೆ ಬ್ರೇಕ್ ಹಾಕಿದರೂ ಕೆಲು ಶೆಲ್ ಕಂಪನಿಗಳ ಮೇಲೆ ಈಗ ಕೇಂದ್ರ ಸರಕಾರ ಕಣ್ಣುಹಾಕಿದೆ. !!
ಅಪನಗದೀಕರಣದ ಸಂದರ್ಭದಲ್ಲಿ ಅಕ್ರಮ ಎಸಗಿದ ಅನುಮನಕ್ಕಾಗಿಯೇ ಮತ್ತೆ ಕೇಂದ್ರ ಸರಕಾರ ಇಂತಹ ಖತರ್ನಾಕ್ ಜನರಿಗೆ ಬರೆ ಎಳೆಯಲು ತಯಾರಾಗಿದೆ.!!ಇದಕ್ಕೆಂದು ಎಲ್ಲಾ ಬ್ಯಾಂಕ್‍ಗಳೂ ಮಾಹಿತಿ ನೀಡಿದ್ದು ಎಲ್ಲಾ ಅವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಮಾಡಿದೆ.!!

ದೇಶದ ಒಟ್ಟಾರೆ ಆರ್ಥಿಕ ವ್ಯವಸ್ಥೆಗೆ ವಿರುದ್ಧವಾಗಿರುವಂತಹ ಸಮಾನಾಂತರ ಆರ್ಥಿಕ ವ್ಯವಸ್ಥೆಯು ಒಂದು ಭಾಗ ಮಾತ್ರ ಕಪ್ಪು ಹಣ. ಹೀಗಾಗಿ ಕಪ್ಪು ಹಣಕ್ಕೆ ಕಡಿವಾಣ ಹಾಕಿದ ಕೂಡಲೇ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಸುಧಾರಣೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಕಪ್ಪು ಹಣ ನಿಯಂತ್ರನಕ್ಕೆ 500, 1000 ರೂ .ನೋಟುಗಳನ್ನು ನಿಷೇದಿಸಿರುವುದು ಆರ್ಥಿಕ ವ್ಯವಸ್ಥೆಯ ಸುಧಾರಣೆ ಮತ್ತು ಸಮಾತಾಂತರ ಆರ್ಥಿಕ ವ್ಯವಸ್ಥೆಯ ನಿಯಂತ್ರಣದ ಒಂದು ಭಾಗ ಅಷ್ಟೆ. ಸಮಾನಂತರ ಆರ್ಥಿಕ ವ್ಯವಸ್ಥೆ ಎಂದರೆ ಕಪ್ಪು ಹಣ ಚಿನ್ನ ಬೆಳ್ಳಿ ರೂಪದಲ್ಲಿ ಆಸ್ತಿ ರೂಪದಲ್ಲಿವಿದೇಶಿ ಬ್ಯಾಂಕ್‍ಗಳಲ್ಲಿ ಹೊಡಿಕೆ ಇವೆಲ್ಲವುಗಳಿಗೆ ಆದಷ್ಟು ಬೇಕ್ ಹಾಕಿದೆ ಮೋದಿ ಸರಕಾರ.

ಇಂತಹ ಅನೇಕ ಅವ್ಯವಹಾರರಗಳಲ್ಲಿ ತೊಡಗಿದ ಅಂತಹವರಿಗೆ ಕಾಂಗ್ರೆಸ್ ಸರಕಾರ ಕುಮ್ಮಕ್ಕು ನೀಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ!! ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೂ ಅವರ ಹಗರಣ, ಅವ್ಯವಹಾರ ಕಡಿವೆಯಾಗುದೇ ಇಲ್ಲ. ಜನ ಸಾಮಾನ್ಯರಿಗೆ ಜೊತೆ ಬೊಗಳೆ ಬಿಟ್ಟು ತಮ್ಮ ಮತವನ್ನಂತು ನಮ್ಮತ್ತ ಸೆಳೆಯುವಲ್ಲಿ ತುಂಬಾ ಜಾಗರುಕತೆಯಿಂದ ಕಾರ್ಯನಿರ್ವಹಿಸುತ್ತಾನೇ ಬಂದಿದ್ದಾರೆ. ಇಂತಹ ಜನರನ್ನೆಲ್ಲಾ ನಾವು ಮುಂದೆ ಆಡಳಿತ ನಡೆಸಲು ಬಿಟ್ಟರೆ ಮಾತ್ರ ನಮ್ಮ ಪಾಡು ಅಷ್ಟೆ!! ಆದರೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಮಾತ್ರ ಇಂತಹ ಅವ್ಯವಹಾರಗಳಿಗೆ ಕುಮ್ಮಕ್ಕು ನೀಡದೆ ಅವರನ್ನು ಬಯಲಿಗೆಳೆಯುವುದೇ ಮೋದಿ ಸರಕಾರದ ಗುರಿ!! ನರೇಂದ್ರ ಮೋದಿಯಂತಹ ಅಭ್ಯರ್ಥಿಯನ್ನು ನಾವೇನಾದರೂ ಮುಂದೆ ಆಯ್ಕೆ ಮಾಡಿದರೆ ಮುಂದೆ ನಮಗೆ ಒಳಿತಾದಿತು. ಸುಂದರ ಭಾರತವನ್ನು ನಿರ್ಮಾಣ ಮಾಡಲು ನಾವು ಪಣತೊಡಬೇಕು… ಕೂಡಿಟ್ಟ ಅಕ್ರಮ ಆಸ್ತಿ ಮತ್ತು ಹಗರಣಗಳನ್ನು ಬಯಲಿಗೆಳೆಯಲು ನರೇಂದ್ರ ಮೋದಿಯಂತಹ ಒಬ್ಬ ಪ್ರಧಾನಿ ಸಾಕು…!!

Source :Kannada – OneIndia

-ಶೃಜನ್ಯಾ

Tags

Related Articles

Close