ಪ್ರಚಲಿತ

ಎಸ್‍ಐಟಿ ಬಿಡುಗಡೆಗೊಳಿಸಿದ ಶಂಕಿತ ಕೊಲೆಗಾರನ ರೇಖಾಚಿತ್ರ ನಕ್ಸಲೈಟ್ ವಿಕ್ರಮ ಗೌಡನಿಗೆ ಹೋಲಿಕೆ?!!

ಗೌರಿ ಲಂಕೇಶ್ ಕೊಲೆಯ ಹಿಂದೆ ಮಾವೋವಾದಿ ನಕ್ಸಲೈಟ್‍ಗಳಿರುವ ಸಾಧ್ಯತೆ ಇದೆ ಎಂಬ ಮಾತನ್ನು ಈ ಹಿಂದೆ ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು. ಇದೀಗ ಎಸ್‍ಐಟಿ ಬಿಡುಗಡೆ ಮಾಡಿರುವ ಹಂತಕರ ರೇಖಾಚಿತ್ರದ ಪೈಕಿ ಒಂದು ರೇಖಾಚಿತ್ರ ನಕ್ಸಲೈಟ್ ವಿಕ್ರಂ ಗೌಡನನ್ನು ಹೋಲುತ್ತಿದೆಯೇ…? ಈ ವಿಷಯ ಜಾಲತಾಣಗಳಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿದ್ದು, ಭಾ ಚರ್ಚೆಗೆ ಗ್ರಾಸವಾಗಿದೆ. ಗೌರಿ ಹಂತಕರ ಸುಳಿವು ಸಿಕ್ಕಿಲ್ಲ ಎಂದಿರುವ ಎಸ್‍ಐಟಿ ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನಾಧರಿಸಿ ಮೂರು ರೇಖಾಚಿತ್ರವನ್ನು ಬಿಡುಗಡೆಗೊಳಿಸಿತ್ತು. ಈ ಪೈಕಿ ಒಂದು ಚಿತ್ರ ಸರಿಸುಮಾರು ನಕ್ಸಲೈಟ್ ವಿಕ್ರಂ ಗೌಡನಿಗೆ ಹೋಲಿಕೆಯಾಗುತ್ತಿರುವುದರಿಂದ ಇಂದ್ರಜಿತ್ ಲಂಕೇಶ್ ಶಂಕೆ ನಿಜವಾಗುವ ಸಾಧ್ಯತೆ ಇದೆ.

ಒಂದು ರೇಖಾಚಿತ್ರದಲ್ಲಿರುವ ಹಣೆ, ಕಣ್ಣು, ಹುಬ್ಬು, ಕಪಲ, ಮೀಸೆ, ಮೂಗು, ಕೂದಲು, ಹೀಗೆ ಸರಿಸುಮಾರು ಭಾಗ ಥೇಟ್ ವಿಕ್ರಂ ಗೌಡನಿಗೆ ಹೋಲಿಕೆಯಾಗುತ್ತಿದೆ. ಗೌರಿ ಹತ್ಯೆಯಾದ ಸ್ವಲ್ಪ ದಿನಗಳಲ್ಲಿ ಅವರ ಸಹೋದರ ಇಂದ್ರಜಿತ್ ಲಂಕೇಶ್ ರಿಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ನಕ್ಸಲೈಟ್ಸ್ ಶಂಕೆ ಇದೆ ಎಂದು ಹೇಳಿದ್ದರು. ಆದರೆ ಕೆಲವು ದಿನಗಳ ನಂತರ ಆ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಆದರೆ ಎಡಪಂಥೀಯ ವಿಚಾರಧಾರೆ ಹೊಂದಿದ್ದ ಗೌರಿಯನ್ನು ಬಲಪಂಥೀಯ ಸಂಘಟನೆ ಹತ್ಯೆ ನಡೆಸಿದೆ ಎಂದು ಆರೋಪಿಸಿದ್ದರು. ನಕ್ಸಲ್ ಪ್ರೇಮ ಹೊಂದಿದ್ದ ಗೌರಿ ಕಾಡಿಗೆ ಹೋಗಿ ನಕ್ಸಲರನ್ನು ಭೇಟಿಯಾಗಿ ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸುತ್ತಿದ್ದರು. ಅಲ್ಲದೆ ನಕ್ಸಲರಿಗೆ ಪರಿಹಾರ ಕೊಡಿಸುವ ಭರವಸೆಯನ್ನೂ ನೀಡಿದ್ದರು. ಗೌರಿಗೆ ನಕ್ಸಲ್ ಬೆದರಿಕೆ ಇತ್ತೆಂದೂ ವಾದಿಸಲಾಗುತ್ತಿದೆ.

ಗೌರಿ ಲಂಕೇಶ್ ಲಂಕೇಶ್ ಕೋಮು ಸೌಹಾರ್ದ ವೇದಿಕೆ, ಪ್ರಗತಿಪರ ವೇದಿಕೆ ಮೂಲಕ ನಕ್ಸಲ್‍ವಾದಿಗಳಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್ ಮತ್ತಿತರರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಇದು ನಕ್ಸಲರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಗೌರಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪೈಕಿ ಬಿ.ಜಿ. ಕೃಷ್ಣಮೂರ್ತಿ ನೇತೃತ್ವದ ನಕ್ಸಲ್ ಗುಂಪು ಕೂಡಾ ಗೌರಿ ಲಂಕೇಶ್ ಪ್ರಯತ್ನದ ಬಗ್ಗೆ ಭಾರೀ ಆಕ್ರೋಶಗೊಂಡಿತ್ತು. ಗೌರಿ ಅವರು ನಕ್ಸಲ್ ಹೋರಾಟ
ದುರ್ಬಲಗೊಳಿಸುತ್ತಿದ್ದಾರೆ. ಗೌರಿ ಈ ಪ್ರಯತ್ನದ ಹಿಂದೆ ಲಾಭ ಮಾಡಿಕೊಳ್ಳುವ ದುರುದ್ದೇಶವನ್ನು ಹೊಂದಿದ್ದಾರೆ ಎಂಬ ಆರೋಪವನ್ನು ಈ ಗುಂಪು ಮಾಡುತ್ತಲೇ
ಬರುತ್ತಿತ್ತು. ಆದರೆ ಹಿಂದಿನಿಂದಲೂ ಇಂಥಾ ನಟೋರಿಯಸ್‍ಗಳ ಬಗ್ಗೆ ಗೌರಿ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದರು.

ಗೌರಿ ಅವರು ಈ ಮುಂಚೆ ತನ್ನ ಪತ್ರಿಕೆಯಲ್ಲಿ ಎಡವಟ್ಟೊಂದನ್ನು ಮಾಡಿದ್ದರು. ಗೌರಿ ಅವರು ನಕ್ಸಲ್ ನಾಯಕ ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿ
ಫೋಟೋ ಸಮೇತ ತಮ್ಮ ಸಂಪಾದಕತ್ವದ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದಾದ ನಂತರ ಸಾಕೇತ್ ರಾಜನ್ ಪೆÇಲೀಸರ ಗುಂಡಿಗೆ ಬಲಿಯಾಗಿದ್ದರು. ಗೌರಿ ಅವರು ಫೋಟೋ ಪ್ರಕಟಿಸಿದ್ದರಿಂದಲೇ ಪೆÇಲೀಸರಿಗೆ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು. ಇದರಿಂದಾಗಿಯೇ ಅವರ ಹತ್ಯೆಯಾಯಿತು ಎಂದೂ ನಕ್ಸಲರ ಒಂದು ಗುಂಪು ಗೌರಿ ಲಂಕೇಶ್ ಅವರ ಮೇಲೆ ಕತ್ತಿ ಮಸೆಯುತ್ತಿತ್ತು. ಗೌರಿ ಹತ್ಯೆಯಾಗುವ ಮುಂಚೆ ಅವರಿಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದರು ಎಂದು ತನ್ನ ಆಪ್ತರಲ್ಲಿ ಹೇಳಿಕೊಂಡಿದದ್ದರು. ತಮ್ಮೊಳಗಡೆ ಇರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಂತೆ ಟ್ವೀಟ್‍ನಲ್ಲೂ ವಿವರಿಸಿದ್ದರು.

ಇನ್ನು ವಿಕ್ರಂ ಗೌಡನ ಬಗ್ಗೆ ಹೇಳುವುದಾದರೆ ಈತನ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳಿವೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವುದಕ್ಕೆ ವಿರೋಧಿಸುತ್ತಿದ್ದ ಈತ ಚಿಕ್ಕಮಗಳೂರು ಸುತ್ತಮುತ್ತ ಭಿತ್ತಿಪತ್ರ ಹಂಚಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಎಸ್‍ಐಟಿ ಬಿಡುಗಡೆ ಮಾಡಿರುವ ಚಿತ್ರವೊಂದು ನಕ್ಸಲ್ ವಿಕ್ರಮ ಗೌಡನನ್ನು ಹೋಲಿಕೆ ಕಂಡುಬಂದಿರುವುದರಿಂದ ಎಸ್‍ಐಟಿ ಈ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಲಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಈ ರೇಖಾಚಿತ್ರ ಕಲ್ಬುರ್ಗಿ ಹತ್ಯಾ ಆರೋಪಿಯ ರೇಖಾಚಿತ್ರಕ್ಕೂ ಹೋಲಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಯಾವುದೇ ಕೈವಾಡ ಇರುವ ಯಾವುದೇ ಮಾಹಿತಿ ಎಸ್‍ಐಟಿ ಬಳಿಯಲ್ಲಿಲ್ಲ. ಇದೆಲ್ಲಾ ಮಾಧ್ಯಮಗಳ ಕೆಲಸ ಎಂದು ಎಸ್‍ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ತಿಳಿಸಿದ್ದಾರೆ. ಕೆಲವೊಂದು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸಂಸ್ಥೆಯನ್ನು ಸಿಲುಕಿಸಿ ಮಾನ ಹಾನಿ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿರುವುದರಿಂದ ಸನಾತನ ಸಂಸ್ಥೆ ಅಂತಹಾ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಬಹುದು.

-ಚೇಕಿತಾನ

Tags

Related Articles

Close