ಪ್ರಚಲಿತ

ಏಷ್ಯಾದಲ್ಲಿ ವಸಾಹತು ಮೆರೆಯಬೇಕೆಂಬ ಚೀನಾದ ಹಪಾಹಪಿಗೆ ಮೋದಿ ಕೊಟ್ಟ ಶಾಕ್ ಏನು ಗೊತ್ತೇ?!!

ಚೀನಾಕ್ಕಾಗಿದೆ ಅದ್ಫುತ ಮುಖಭಂಗ!!

ಭಾರತ- ಚೀನಾ ನಡುವೆ ನಡೆಯುತ್ತಿರುವ ಜಟಾಪಟಿಯ ನಡುವೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ಕನಸನ್ನು ಹೊತ್ತಿರುವ ನರೇಂದ್ರ ಮೋದಿಯವರು ಯೋಜನೆಗಳ ಮೇಲೆ ಯೋಜನೆಗಳನ್ನು ತಂದಿರುವುದು ತಿಳಿದೇ ಇದೆ!! ಆದರೆ ಇದೀಗ ಮೋದಿಯ ಮಹತ್ತರ ಯೋಜನೆಗಳಲ್ಲೊಂದಾದ ಐ.ಎನ್.ಎಸ್.ಟಿ.ಸಿ 2018 ಜನವರಿಯ ಮಧ್ಯದಲ್ಲಿ ಕಾರ್ಯಾರಂಭಗೊಳ್ಳಲಿದೆ.

ಹೌದು… ಭಾರತದ ಯುರೇಷಿಯಾ ನೀತಿಯ ಗತಿಯನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದ್ದು ಚೀನಾದ ವನ್ ಬೆಲ್ಟ್ ವನ್ ರೋಡ್ ಯೋಜನೆಗಳಿಗಿಂತ ಮೊದಲೇ ಕಾರ್ಯಾರಂಭಗೊಳ್ಳಲಿದೆ!! ಈಗಾಗಲೇ ಚೀನಾ ಒನ್ ಬೆಲ್ಟ್ ಒನ್ ರೋಡ್ ಎಂಬ ಯೋಜನೆಯನ್ನು ಆರಂಭಿಸಲು ಸಜ್ಜಾಗಿದ್ದು, ಮೇಲ್ನೋಟಕ್ಕೆ ಇದು ವ್ಯಾಪಾರದ ಉದ್ದೇಶದಿಂದ ಜಗತ್ತಿನ ಬೇರೆ ಬೇರೆ ಭಾಗಗಳನ್ನು ನೆಲಮಾರ್ಗ ಮತ್ತು ಜಲ ಮಾರ್ಗದ ಮೂಲಕ ಚೀನಾದೊಡನೆ ಸಂಪರ್ಕ ಬೆಸೆಯುವ ಯೋಜನೆಯಾಗಿತ್ತು. ಜಗತ್ತಿನ ದೊಡ್ಡಣ್ಣ ಅಮೆರಿಕಕ್ಕೆ ಸಮ ಸ್ಪರ್ಧೆ ನೀಡುವುದು ತಾನು ಜಗತ್ತಿನ ದೊಡ್ಡಣ್ಣನಾಗುವುದು ಚೀನಾದ ಮುಂದಿನ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಚೀನಾ ತನ್ನ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಇತ್ತೀಚೆಗಷ್ಟೇ ಇರಾನ್ ನಲ್ಲಿ ಚಹಬ್ಬಾರ್ ಬಂದರು ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತದ ನಂತರದ ಯೋಜನೆಯೇ ಇದಾಗಿದೆ. ಚೀನಾದ “ವನ್ ಬೆಲ್ಟ್ ರೋಡ್ ಯೋಜನೆ” ಕಾರ್ಯಾರಂಭ ಆಗುವ ಮುನ್ನವೇ ಕಾರ್ಯಗತಗೊಳ್ಳುತ್ತಿದ್ದು ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತ ತನ್ನದೇ ರೀತಿಯಲ್ಲಿ ಸೆಡ್ಡು ಹೊಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ!!

ಆದರೆ ಇದೀಗ ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನ ಭಾಗವಾಗಿರುವ 3 ಪ್ರಮುಖ ರಸ್ತೆಯೋಜನೆಗಳಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಚೀನಾ ಸರ್ಕಾರ ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲದೇ, ಚೀನಾದ ಈ ನಿರ್ಧಾರದಿಂದ ಪಾಕ್ ಸರ್ಕಾರಕ್ಕೆ ಸಿಡಿಲು ಬಡಿದಂತಾಗಿದ್ದು, ಹಲವು ಪ್ರಮುಖ ಯೋಜನೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಪಾಕಿಸ್ತಾನ ಹೊಸ ನಿಯಮಾವಳಿಗಳನ್ನು ರೂಪಿಸಿದ ನಂತರ ಚೀನಾ ಆರ್ಥಿಕ ನೆರವು ನೀಡಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ಮೋದಿಯ ಮಾಸ್ಟರ್ ಪ್ಲಾನ್ ನಿಂದಾಗಿ ಭಾರತವು ಇನ್ನು ಮುಂದೆ ಚೀನಾ ದೇಶಕ್ಕೆ ಮಾತ್ರವಲ್ಲದೆ ರಷ್ಯಾಗೆ ರಫ್ತು ಮಾಡಬಹುದಾಗಿದೆ!! ಹೌದು… ಮುಂಬೈನ ಸೇಂಟ್ ಪೀಟರ್ಸ್ಬರ್ಗ್ ಗೆ ಸಂಪರ್ಕ ಕಲ್ಪಿಸುವ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾರ್ನ್ಸ್ಪೋರ್ಟೇಷನ್ ಕಾರಿಡಾರ್ (ಐ.ಎನ್.ಎಸ್.ಟಿ.ಸಿ) ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಕಳೆದ ಮೂರು ವರ್ಷಗಳಲ್ಲಿ ತ್ವರಿತ ಗತಿಯಲ್ಲಿ ಅಭಿವೃದ್ಧಿಯನ್ನು ಕಂಡಿದೆ. ಈ ಕಾರಣದಿಂದಾಗಿ ಮುಂದಿನ ತಿಂಗಳ ಮಧ್ಯಭಾಗದಲ್ಲಿ ಭಾರತದಿಂದ ರಷ್ಯಾಕ್ಕೆ ಮೊದಲ ರವಾನೆಯೊಂದಿಗೆ ಕಾರ್ಯಗತಗೊಳ್ಳಲು ಸಿದ್ಧವಾಗಿದೆ..!

ಈಗಾಗಲೇ ಚೀನಾದ “ಕ್ಸಿನ್ ಜಿಯಾಂಗ್” ಪ್ರಾಂತ್ಯದಿಂದ ಪಾಕಿಸ್ತಾನದ ಬಲೂಚಿಸ್ತಾನ ಸಂಪರ್ಕ ಕಲ್ಪಿಸಲು ಚೀನಾ 50 ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರ್ಥಿಕ ಕಾರಿಡಾರ್‍ನಿರ್ಮಿಸುತ್ತಿದೆ ಎಂಬುವುದು ಸುದ್ದಿಯಲ್ಲಿತ್ತು. ಅಷ್ಟೇ ಅಲ್ಲದೇ ಇದರ ಭಾಗವಾಗಿ ನಿರ್ಮಾಣವಾಗುತ್ತಿರುವ 210 ಕಿ.ಮೀ ಉದ್ದದ ದೇರಾ ಇಸ್ಮೈಲ್ ಖಾನ್ ಜೋಬಾ ರಸ್ತೆ, 110 ಕಿ.ಮೀ. ಉದ್ದದ ಖುಜ್ದರ್-ಬಾಸಿಮಾ ರಸ್ತೆ ಮತ್ತು 136 ಕಿ.ಮೀ. ಉದ್ದದ ಪಾಕ್‍ನ ರಾಯ್‍ಕೋಟ್ ನಿಂದ ಪಾಕ್ ಆಕ್ರಮಿತ ಕಾಶ್ಮೀರದ ಥಾಕೊಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಯೋಜನೆಗಳ ಮೇಲೆ ಚೀನಾ ಆರ್ಥಿಕ ಸಹಾಯ ನೀಡದಿರುವ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಬಗ್ಗೆ ಕಳೆದ ನವೆಂಬರ್ 20 ರಂದು ನಡೆದ ಪಾಕ್ ಮತ್ತು ಚೀನಾ ಅಧಿಕಾರಿಗಳ 6 ನೇ ಜಂಟಿ ಸಹಕಾರ ಸಮಿತಿಯ ಸಭೆಯಲ್ಲಿ ಆರ್ಥಿಕ ನೆರವು ಸ್ಥಗಿತಗೊಳಿಸುತ್ತಿರುವ ಕುರಿತು ಚೀನಾ ತಿಳಿಸಿದೆ ಎಂದು ಪಾಕ್ ಮಾಧ್ಯಮಗಳು ತಿಳಿಸಿವೆ.

ಚೀನಾ- ಪಾಕ್ ದೇಶಗಳ ನಡುವೆ ಜಟಾಪಟಿ ನಡೆಯುತ್ತಿರುವುದು ಮೆಲ್ನೋಟಕ್ಕೆ ಕಾಣುತ್ತಿದೆಯಾದರೂ ಇನ್ನು ಮುಂದೆ ಭಾರತ ಚೀನಾಕ್ಕೆ ಮಾತ್ರವಲ್ಲದೇ ರಷ್ಯಾಕ್ಕೂ ರಫ್ತು ಮಾಡಲು ಸಹಕಾರಿಯಾಗಲು ನರೇಂದ್ರ ಮೋದಿಯವರ ಮಾಸ್ಟರ್ ಪ್ಲಾನ್ ಇದೀಗ ಸುದ್ದಿಯಾಗಿದೆ!! ಜನವರಿಯ ಮಧ್ಯದಲ್ಲಿ ಐ.ಎನ್.ಎಸ್.ಟಿ.ಸಿ ಯ ಔಪಚಾರಿಕ ಕಾರ್ಯಾಚರಣೆ ಯೋಜಿಸಲಾಗಿದೆಯಾದರೂ, ಕಾರಿಡಾರ್ ನಂತರದ ಕೆಲವೇ ತಿಂಗಳಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳ್ಳುತ್ತದೆ.

ಕಾರಿಡಾರ್ ನ ಅಂದಾಜು ಸಾಮರ್ಥ್ಯ ವರ್ಷಕ್ಕೆ ಎಷ್ಟು ಗೊತ್ತೇ??

ಇರಾನ್ ಮತ್ತು ಭಾರತದ ಸೇಂಟ್ ಪೀಟರ್ಸ್ಬರ್ಗ್ ಮೂಲಕ ಕ್ಯಾಸ್ಪಿಯನ್ ಸಮುದ್ರಕ್ಕೆ ಸಂಪರ್ಕಿಸುವ ಈ ಕಾರಿಡಾರ್ ಭಾರತ, ಇರಾನ್ ಮತ್ತು ರಷ್ಯಾದ ಜಂಟಿ ಯೋಜನೆಯಾಗಿದ್ದು ಭಾರತ ಬಹು ಪಾಲುದಾರ ರಾಷ್ಟ್ರವಾಗಿರುವುದೇ ಹೆಮ್ಮೆಯ ವಿಚಾರ!! ಈ ಯೋಜನೆಯ ಕಾರ್ಯಗತದ ನಂತರ ಸೇಂಟ್ ಪೀಟರ್ಸ್ ಬರ್ಗ್ ನಿಂದ, ಉತ್ತರ ಯುರೋಪ್ ಹಾಗೂ ರಷ್ಯನ್ ಫೆಡರೇಷನ್ ರಾಷ್ಟ್ರಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸುವ ಮೂಲಕ ಭಾರತ ಭಾರಿ ಪ್ರಮಾಣದಲ್ಲಿ ಆರ್ಥಿಕ ಲಾಭವನ್ನು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ಕಾರಿಡಾರ್ ನ ಅಂದಾಜು ಸಾಮರ್ಥ್ಯ ವರ್ಷಕ್ಕೆ ಬರೋಬ್ಬರಿ 20 ರಿಂದ 30 ಮಿಲಿಯನ್ ಟನ್ ಗಳಷ್ಟಾಗಿದ್ದು, ಇಷ್ಟು ಪ್ರಮಾಣದ ಸರಕುಗಳನ್ನು ಸಾಗಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ!!

ಅಂತೂ ಚೀನಾ- ಪಾಕಿಸ್ತಾನವನ್ನು ಸೆಡ್ಡೆ ಹೊಡೆಯುತ್ತಿರುವ ಭಾರತ ಇದೀಗ ಮುಂಬೈನ ಸೇಂಟ್ ಪೀಟರ್ಸ್ಬರ್ಗ್ ಗೆ ಸಂಪರ್ಕ ಕಲ್ಪಿಸುವ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾರ್ನ್ಸ್ಪೋರ್ಟೇಷನ್ ಕಾರಿಡಾರ್ (ಐ.ಎನ್.ಎಸ್.ಟಿ.ಸಿ) ಯೋಜನೆಯಿಂದಾಗಿ ಭಾರತದಿಂದ-ರಷ್ಯಾಕ್ಕೆ ಮೊದಲ ರವಾನೆಯೊಂದಿಗೆ ಕಾರ್ಯಗತಗೊಳ್ಳಲು ಸಿದ್ಧವಾಗಲಿರುವುದೇ ಹೆಮ್ಮೆಯ ವಿಚಾರವಾಗಿದೆ!!

– ಅಲೋಖಾ

Tags

Related Articles

Close