ಪ್ರಚಲಿತ

ಐದು ವರ್ಷ ತೆರಿಗೆ ಕಟ್ಟದೇ ಸರಕಾರಕ್ಕೆ ದ್ರೋಹವೆಸಗಿದ್ದ ತಮಿಳು ನಟ ಅಲಿಯಾಸ್ ಮೋದಿ ದ್ವೇಷಿಯಾದ ಜೋಸೆಫ್ ವಿಜಯ್ ಗೆ ಮತ್ತೆ ಬಂದೊದಗಿದೆ ದೊಡ್ಡ ಗಂಡಾಂತರ!

ದೇಶವನ್ನು ಕೊಳ್ಳೆ ಹೊಡೆಯಿರಿ! ಸಾರ್ವಜನಿಕರನ್ನು ಮೋಸಗೊಳಿಸಿ! ಸರಕಾರವನ್ನು ದೂಷಿಸಿ!

ಇದು ಅನೇಕ ರಾಜಕಾರಣಿಗಳು ಹಾಗೂ ತಾರೆಗಳೆನ್ನಿಸಿಕೊಂಡವರ ಕಥೆ! ಸ್ವಂತ ದೇಶಬಾಂಧವರನ್ನಿಟ್ಟು ಹಣ ಮಾಡುವ ಇಂತಹವರು ದೇಶಕ್ಕೆ ಮಾತ್ರ ವಿಧೇಯವಾಗಿರುವುದೇ ಇಲ್ಲ! ತನ್ನ ಮನೆಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸುದರೆನ್ನುವ ಕಾರಣಕ್ಕೆ, ತಮಿಳು ರಂಗದ ಚಿತ್ರನಟ ಜೋಸೆಫ್ ವಿಜಯ್ ತನ್ನ ಹೊಸ ಚಿತ್ರವಾದ ಮೆರ್ಸಾಲ್ ಮೂಲಕ ಮೋದಿ ಸರಕಾರದ ಬಗ್ಗೆ ವಿಷ ಕಾರಿದ್ದಲ್ಲದೇ, ಯೋಜನೆಗಳ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರಷ್ಟೇ!

ಮೆರ್ಸಾಲ್ ಚಿತ್ರದಲ್ಲಿ ಸಿಂಗಾಪೂರಿನಲ್ಲೆಲ್ಲ ವೈದ್ಯಕೀಯ ಸೌಲಭ್ಯ ಉಚಿತವಾಗಿದೆ ಎಂದಿರುವ ವಿಜಯ್, ತದನಂತರ ಮೋದಿಯವರ ನೋಟು ನಿಷೇಧದ ಬಗ್ಗೆ ಮಿಥ್ಯಾರೋಪವನ್ನು ಮಾಡಿದ್ದಾರೆ! ಆದರೆ,.ಈ ಮಿಥ್ಯಾರೋಪವನ್ನೇ ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಒಂದಷ್ಟು ಮಂದಿ ಬೆಂಬಲಿಸಿದ್ದಲ್ಲದೇ, ಕಾಂ‌ಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಸಮರ್ಥಿಸಿಕೊಂಡಿದ್ದರು!

ಜೋಸೆಫ್ ವಿಜಯ್, ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ನಮಗೆ ಒಂದು ಕೋಟಿ ರೂಪಾಯಿ ಕೊಡಿ! : ಕಾನೂನು ವಿದ್ಯಾರ್ಥಿಗಳು!

ಹೌದು! ಕೊಯಂಬತ್ತೂರಿನ ಒಂದಷ್ಟು ಕಾನೂನು ವಿದ್ಯಾರ್ಥಿಗಳು ಒಂದು ಕೋಟಿ ರೂಗಳ ಪ್ರಸ್ತಾವನೆಯನ್ನು ಇಟ್ಟಿದ್ದಾರೆ! “ಮೆರ್ಸಾಲ್ ಸಿನಿಮಾದಲ್ಲಿ ಹೇಳಿರುವಂತೆ ಅಕಸ್ಮಾತ್ ಸಿಂಗಾಪೂರ್ ನಲ್ಲಿ ವೈದ್ಯಕೀಯ ಸೌಲಭ್ಯ ಸಂಪೂರ್ಣ ಉಚಿತವಾಗಿದೆ ಎಂದು ಅವರು ಸಾಕ್ಷೀಕರಿಸಿದರೆ ನಾವೆಲ್ಲ ಸೇರಿ ಸಿನಿಮಾದ ನಿರ್ಮಾಪಕರಿಗೆ ಹಾಗೂ ಜೋಸೆಫ್ ವಿಜಯ್ ಗೆ ಒಂದು ಕೋಟಿ ರೂ ಗಳನ್ನು ಕೊಡುತ್ತೇವೆ! ಅದೇ, ಸಾಕ್ಷೀಕರಿಸಲಿಲ್ಲವೆಂದಾದರೆ ಅವರು ನಮಗೆ ಕೋಟಿ ರೂಗಳನ್ನು ನೀಡಬೇಕು.”

ಇದು ಪೋಲಿಸರಿಗೆ ಸಲ್ಲಿಸಿರುವ ವಿನಂತಿಯಲ್ಲಿರುವ ಕಾನೂನು ವಿದ್ಯಾರ್ಥಿಗಳ ಹೇಳಿಕೆ!

ಭವಿಷ್ಯದ ಕಾನೂನು ತಜ್ಞರು ಇವತ್ತೇ ಕಾರ್ಯಗತರಾಗಿದ್ದಾರೆ!

ಇಷ್ಟೇ ಅಲ್ಲದೇ, ಈ ಕಾನೂನು ವಿದ್ಯಾರ್ಥಿಗಳು ಕೋಮುಗಲಭೆಯನ್ನು ಪ್ರಚೋದನೆ ನೀಡುವ ದೃಶ್ಯವನ್ನೂ ಬೆಟ್ಟು ಮಾಡಿ ತೋರಿಸಿದ್ದಾರೆ! ದೇವಸ್ಥಾನಗಳನ್ನು ಕಟ್ಟುವ ಬದಲು ಆಸ್ಪತ್ರೆಯನ್ನು ಕಟ್ಟಿ ಎಂಬ ಡೈಲಾಗ್ ಹೊಡೆದಿದ್ದ ಜೋಸೆಫ್ ವಿಜಯ್ ಕೇವಲ ಸಿನಿಮಾದ ದೃಶ್ಯಾವಳಿಗಷ್ಟೇ ಸೀಮಿತವಾಗಿ ಹೇಳಿದ್ದಲ್ಲ, ಬದಲಾಗಿ ಹಿಂದೂ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಿದೆಂದು ಆರೋಪಿಸಿದ್ದಾರೆ!

ಇಷ್ಟಕ್ಕೇ ಬಿಡದ ವಿದ್ಯಾರ್ಥಿಗಳು, ದೇಶದ ಆರ್ಥಿಕತೆಯ ಬಗ್ಗೆ, ಸರಕಾರದ ಬಗ್ಗೆ, ಹಿಂದೂ ಧಾರ್ಮಿಕ ಶ್ರದ್ದೆಗಳನ್ನು ಪ್ರಶ್ನಿಸಿದ್ದಲ್ಲದೇ, ಅವುಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ನಿರ್ಮಾಪಕ, ನಟ ಜೋಸೆಫ್ ವಿಜಯ್, ನಿರ್ದೇಶಕ ಹಾಗೂ ವಡಿವೇಲು ಮೇಲೆ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆಣಕಿದ್ದಕ್ಕಾಗಿ ಮೊಕದ್ದಮೆ ಹೂಡುವಂತೆ ಪೋಲಿಸರನ್ನು ಆಗ್ರಹಪಡಿಸಿದ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ!

ಯಾವುದೇ ರೀತಿಯಾಗಿಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಗೊಳಿಸುವುದು ಅಭಿವ್ತಕ್ತಿ ಸ್ವಾತಂತ್ರ್ತವಿರಬಹುದು! ಆದರೆ, ನೋಟು ನಿಷೇಧದ ಬಗ್ಗೆ, ಡಿಜಿಟಲ್ ಇಂಡಿಯಾದ ಬಗ್ಗೆ, ಜಿಎಸ್ ಟಿ ವಿಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದಲ್ಲದೇ, ಹಿಂದೂಗಳ ಭಾವನೆಯನ್ನು ಕೆಣಕಿದ್ದನ್ನು ವಿರೋಧಿಸಲೇಬೇಕು.” ಇದು ಚೆನ್ನೈನ ಭಾರತೀಯ ಜನತಾ ಪಾರ್ಟಿಯ ಹೇಳಿಕೆ! ತನ್ಮೂಲಕ ಬಿಜೆಪಿ ತಾನು ಯಾವ ಅಭಿಪ್ರಾಯಗಳಿಗೂ ವಿರೋಧವಿಲ್ಲ., ಆದರೆ ಸುಳ್ಳು ಆರೋಪಗಳ ವಿರುದ್ಧವಿದ್ದೇನೆ ಎಂದು ಸಾಬೀತು ಪಡಿಸಿದೆ!

ಭಾರತದಲ್ಲಿ ತಾರಾಗಣಕ್ಕೆ ಬರೀ ಅಭಿಮಾನಿವೃಂದವಿಲ್ಲ, ಬದಲಾಗಿ ಅವರನ್ನೇ ಆದರ್ಶ ವ್ಯಕ್ತಿಗಳನ್ನಾಗಿಸಿಕೊಂಡ ಅದೆಷ್ಟೋ ಯುವ ಸಮಾಜವಿದೆ! ನಟ ಜೋಸೆಫ್ ವಿಜಯ್ ರಂತಹವರ ಇಂತಹ ನಡೆ ಸಮಾಜಕ್ಕೆಷ್ಟು ಹಾನಿ ಮಾಡಬಹುದು?! ದುರಂತವೆಂದರೆ, ಇದೇ ಅಭಿಮಾನವನ್ನು ರಾಜಕೀಯಕ್ಕೂ ಬಳಸಿ ಬಿಸಾಡುವ ಎಷ್ಟೋ ಇಂತಹ ನಟರಿದ್ದಾರೆ!

ಈ ರೀತಿಯಾದ ನಡೆ ಹೊಸದಲ್ಲ! ಬಾಲಿವುಡ್ ಎಂಬ ಪೆಡಂಭೂತ ಧಾರ್ಮಿಕ ಭಾವನೆಗಳನ್ನು ಕೆಣಕುವುದರಲ್ಲಿ ಎತ್ತಿದ ಕೈ!

ಅಮೀರ್ ಖಾನ್ ನ ಪಿಕೆ, ಭನ್ಸಾಲಿಯ ಮಸ್ತಾನಿ, ರಾಮಲೀಲಾ ಎಂಬಂತಹ ಸಿನಿಮಾಗಳೆಲ್ಲ ಹಿಂದೂ ಇತಿಹಾಸವನ್ನೇ ಬುಡಮೇಲು ಮಾಡಿದ್ದವು! ಪಿಕೆಯಂತೂ ಬಿಡಿ! ತನ್ನೆಲ್ಲಾ ಪರಿಧಿಗಳನ್ನೂ ಮೀರಿ ಅತಿರೇಕವೆನ್ನುವಷ್ಟು ಹಿಂದುತ್ವವನ್ನು ಪ್ರಶ್ನಿಸಿತ್ತು! ಒಂದು ಕಡೆಯಲ್ಲಂತೂ, ಭಗವಾನ್ ಶಿವನ ವೇಷವನ್ನು ತೊಟ್ಟ ಪುರುಷನನ್ನು ಶೌಚಾಲಯದಿಂದ ಓಡಿಸಿಕೊಂಡು ಹೋಗುವ ದೃಶ್ಯವನ್ನು ಸೃಷ್ಟಿಸಿ ತೀರಾ ಅತಿರೇಕವನ್ನೆಸಗಿತ್ತು!

ಇಂತಹ ಸಿನಿಮಾಗಳಿಂದ ಇವರು ಸಾಕ್ಷೀಕರಿಸುತ್ತಿರುವುದಾದರೂ ಏನು?! ಹಿಂದುಗಳನ್ನದೆಷ್ಟೇ ಕೆಣಕಿದರೂ ಸುಮ್ಮನಿರುವರೆಂಬ ಕಾರಣಕ್ಕಾಡುವ ಆಟವೇ?! ಅಥವಾ ಹಿಂದುತ್ವವನ್ನು ಟೀಕಿಸುವುದಕ್ಕಾಗಿಯೇ ಸಿನಿಮಾಗಳು ತಯಾರಾಗುತ್ತವೆಯೇ?! ಇನ್ನೂ ಹಿಂದುಗಳು ಸಹಿಷ್ಣುಗಳಾಗಿರುವುದು ಅಪರಾಧವಾಗಿದೆಯಷ್ಟೇ! ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಇಂತಹ ಸಿನಿಮಾರಂಗದವರು ಮಾತ್ರ ಬಹಳಷ್ಟಿದ್ದಾರೆ ಅಷ್ಟೇ!

– ತಪಸ್ವಿ

Tags

Related Articles

Close