ಪ್ರಚಲಿತ

ಐಸಿಸ್‍ಗಿಂತಲೂ ಕ್ರೂರ…!! ಪಿಎಫ್‍ಐ ಉಗ್ರರೇ ಮುಸ್ಲಿಮ್ ಯುವಕನ ಅಪಹರಿಸಿ, ಮೂರು ಪೀಸ್ ಮಾಡಿ ಕಾಡಿಗೆಸೆದರು…!!! ಡಿವೈಎಫ್‍ಐ ಕಲಿತ ಪಾಠವೇನು ಗೊತ್ತೇ?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗಾಗ ಆಗ್ರಹ ಕೇಳಿಬರುತ್ತಿದ್ದರೂ ಅದನ್ನು ನಿಷೇಧಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಪಿಎಫ್‍ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆದು ಅದು ಕೊಬ್ಬಲು ಕಾರಣವಾಯಿತಲ್ಲದೆ ಇಂದು ಅದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಇಂದು ಅದೇ ಸಂಘಟನೆಯಿಂದ ಅಮಾಯಕ ಮುಸ್ಲಿಮರೂ ಬಲಿಯಾಗುತ್ತಿದ್ದಾರೆ.

ಪಿಎಫ್‍ಐ ಉಗ್ರರು ಯಾವುದೇ ಐಸಿಸ್ ಉಗ್ರರಿಗಿಂತಲೂ ಕಮ್ಮಿ ಇಲ್ಲದಂತೆ ವರ್ತಿಸಿ ಒಬ್ಬ ಯುವಕನ್ನು ಯಾವ ರೀತಿ ಹಿಂಸಿಸಿ ಕೊಂದಿದ್ದಾರೆಂದರೆ ಸ್ವತಃ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಈ ಕೊಲೆಯಲ್ಲಿ ಪಿಎಫ್‍ಐ ಪ್ರೇರಿತ ಎಸ್‍ಡಿಪಿಐ ಮುಖಂಡರೇ ಶಾಮೀಲಾಗಿದ್ದು, ಆರೋಪಿಗಳು ಈ ಹಿಂದಿನಿಂದಲೂ ನಟೋರಿಯಸ್ ಎಂದು ಗುರುತಿಸಿಕೊಂಡವರಾಗಿದ್ದಾರೆ. ವಿಚಿತ್ರವೆಂದರೆ ಪಿಎಫ್‍ಐ ಉಗ್ರಗಾಮಿಗಳ ಬಗ್ಗೆ ಜಾಣಕುರುಡು ಮೆರೆಯುತ್ತಿದ್ದ ಡಿವೈಎಫ್‍ಐ ಸಂಘಟನೆ ಇಂದು ಸ್ವತಃ ಪಿಎಫ್‍ಐ ಸಂಘಟನೆಯ ವಿರುದ್ಧ ಹೋರಾಟಕ್ಕೆ ಮುಂದಾಗಿದೆ!

ದಕ್ಷಿಣ ಕನ್ನಡ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದ ನಿವಾಸಿ ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಪೈಂಟರ್ ಆಗಿದ್ದ ಸಫ್ವಾನ್(22) ಎಂಬಾತನನ್ನು ಅಕ್ಟೋಬರ್ 6ರಂದು ಸಂಜೆ ಆರು ಗಂಟೆಯ ಸುಮಾರಿಗೆ ಕೃಷ್ಣಾಪುರ ಪರಿಸರದಲ್ಲಿ ಮಾರುತಿ ಎರ್ಟಿಗಾ ಕಾರ್‍ನಲ್ಲಿ ಬಂದಿದ್ದ ತಂಡವೊಂದು ಅಪಹರಿಸಿತ್ತು. . ಈ ಘಟನೆ ಇಡೀ ಜಿಲ್ಲೆಯಲ್ಲೇ ಸಂಚಲನ ಸೃಷ್ಟಿಸಿತ್ತು. ಈತನನ್ನು ಹಿಂದೂಗಳೇ ಅಪಹರಣ ಮಾಡಿದ್ದರೆಂದು ಕಥೆ ಕಟ್ಟಿಕೊಂಡಿದ್ದ ಪಿಎಫ್‍ಐ ಸಂಘಟನೆ ಜಿಲ್ಲೆಯಲ್ಲಿ ಕೋಮು ದಳ್ಳುರಿ ಹಬ್ಬಿಸಲು ನೋಡಿತ್ತು.

ಆದರೆ ಘಟನೆಯನ್ನು ಕಣ್ಣಾರೆ ಕಂಡಿದ್ದ ಸಾರ್ವಜನಿಕರು ಸಫ್ವಾನ್ ಅಪಹರಣಗೊಂಡ ವಿಚಾರದ ಬಗ್ಗೆ ತಂದೆ ಅಬ್ದುಲ್ ಹಮೀದ್ ಅವರಿಗೆ ವಿಷಯ ತಿಳಿಸಿದ್ದರು. ಅಂದೇ ರಾತ್ರಿ ಹಮೀದ್ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾರು ಆರೋಪಿಗಳು ಎಂಬ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಕೊನೆಗೆ ಶಂಕೆಯೊಂದರ ಮೇರೆಗೆ ಗೂಂಡಾ ಕಾಯ್ದೆಯಡಿ ಬಂಧಿತನಾಗಿ ಜಾಮೀನು ಪಡೆದು ಹೊರಬಂದಿರುವ ಮುಕ್ಕದ ಸಫ್ವಾನ್ ಹುಸೇನ್ ಮತ್ತಿತರರು ಆರೋಪಿಗಳೆಂದು ಹೆಸರಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಇದರ ಬಗ್ಗೆ ಕೆಂಡವಾಗಿದ್ದ ಪಿಎಫ್‍ಐ ಕಾರ್ಯಕರ್ತರು ಪಿಎಫ್‍ಐ ಸಂಘಟನೆಯನ್ನು ಮುಗಿಸಲು ಸಂಚುರೂಪಿಸಲಾಗುತ್ತಿದೆ ಎಂದು ಸುಳ್ಳು ಕಥೆ ಹಬ್ಬಿಸಿದ್ದರು.

ಆದರೆ ಯಾವುದೇ ಒತ್ತಡಕ್ಕೆ ಒಳಗಾಗದ ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳಿಗೆ ಕಾರ್ ನೀಡಿದ್ದು ಎಸ್‍ಡಿಪಿಐ ಸುರತ್ಕಲ್ ವಲಯಾಧ್ಯಕ್ಷ ನೌಶಾದ್ ಎನ್ನುವುದನ್ನು ಪತ್ತೆಹಚ್ಚಿ ಕೊನೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಅಪಹರಣಕಾರರ ಸುಳಿವು ಸಿಕ್ಕಿತ್ತು..

ಇತ್ತ ಮುಸ್ಲಿಮನ ಅಪಹರಣವಾಯ್ತು ಎಂದು ಬೊಬ್ಬೆ ಹೊಡೆಯಲಾರಂಭಿಸಿದ ಮುಸ್ಲಿಂ ಸಂಘಟನೆಗಳು ಇದನ್ನು ಹಿಂದೂಗಳೇ ನಡೆಸಿದ್ದಾರೆ ಎಂದು ಪ್ರತಿಭಟನೆ ನಡೆಸಲೂ ಮುಂದಾಗಿದ್ದರು. ಆದರೆ ಇದೀಗ ಅಪಹರಣ ನಡೆಸಿ ಕೊಲೆ ನಡೆಸಿ ಆರೋಪಿಗಳು ಪಿಎಫ್‍ಐ ಮುಖಂಡರೆಂದು ಬಹಿರಂಗಗೊಂಡಿರುವುದರಿಂದ ಮುಸ್ಲಿಂ ಸಂಘಟನೆಗಳು ಇಂಗುತಿಂದ ಮಂಗನಂತಾಗಿದೆ.

ಸಫ್ವಾನ್ ಕೊಲೆಯಲ್ಲಿ ನಟೋರಿಯಸ್‍ಗಳೇ ಇದ್ದು ಇವರೆಲ್ಲಾ ಪಿಎಫ್‍ಐ ಸಂಘಟನೆಯ ಮುಖಂಡರಾಗಿದ್ದು, ಎಸ್‍ಡಿಪಿಐ ಎಂಬ ಮತೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವ ಸ್ಫೋಟಕ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಅದರಂತೆ ಸಫ್ವಾನ್ ಹುಸೇನ್, ಸುಫಿಯಾನ್, ಸಂಶುದ್ದೀನ್ ಎನ್ನುವ ಉಗ್ರರು ಪ್ರಕರಣದಲ್ಲಿ ಭಾಗಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಕೃಷ್ಣಾಪುರ ನಿವಾಸಿ ಶಾಹಿಲ್ ಮತ್ತು ಬಾಂಬೆ ಫೈಝಲ್ ಎಂಬಾತನನ್ನು ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಗೂಂಡಾ ಕಾಯ್ದೆಯಡಿ ಬಂಧಿತನಾಗಿ ಜಾಮೀನು ಪಡೆದು ಹೊರಬಂದಿರುವ ಮುಕ್ಕದ ಸಫ್ವಾನ್ ಹುಸೇನ್, ಸುಫಿಯಾನ್ ಹಾಗೂ ಸಂಶುದ್ದೀನ್ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದಾರೆ.

ಐಸಿಸ್ ಉಗ್ರರಿಗಿಂತಲೂ ಕ್ರೂರವಾಗಿ ಹಿಂಸಿಸಿದ ಪಿಎಫ್‍ಐ ಉಗ್ರರು!

ಆರೋಪಿಗಳು ಸಫ್ವಾನ್‍ನನ್ನು ಅಪಹರಿಸಿ ಬಳಿಕ ಸಚ್ಚೇರಿಪೇಟೆಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ತೀವ್ರತರದ ಹಲ್ಲೆ ನಡೆಸಿದ್ದಾರೆ. ಅಂಗಾಂಗಳಿಗೆ ಮನಬಂದಂತೆ ಹಲ್ಲೆ ನಡೆಸಿ, ದೇಹವನ್ನು ಮೂರು ತುಂಡುತುಂಡುಗಳಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿಸಿ, ಸಾಗಿಸಿ ಆಗುಂಬೆ ಘಾಟ್‍ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಕಂದಕಕ್ಕೆ ಎಸೆದಿದ್ದಾಗಿ ವಿಚಾರಣೆ ಸಂದರ್ಭ ಬಾಯ್ಬಿಟ್ಟಿದ್ದಾರೆ.

ಘಾಟ್‍ನಲ್ಲಿ ಮರಗಳು ಇಲ್ಲದ ಜಾಗ ಗುರುತಿಸಿ ಗೋಣಿಚೀಲವನ್ನು ಎಸೆದಿದ್ದು ಆರೋಪಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಅವರನ್ನು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳೆದ ಗುರುವಾರದಿಂದಲೇ ಪೊಲೀಸರು ಅಲ್ಲಿ ಶವದ ಅಸ್ಥಿಗಾಗಿ ಶೋಧಿಸುತ್ತಿದ್ದಾರೆ. ಐಸಿಸ್ ಉಗ್ರರಿಗಿಂತಲೂ ಕ್ರೂರವಾಗಿ ಹಿಂಸಿಸಿದ ಪಿಎಫ್‍ಐ ಉಗ್ರರು ತನ್ನದೇ ಸಮುದಾಯದ ಯುವಕನನ್ನೇ ಅನಾಯಾಸವಾಗಿ ಕೊಂದು ಮುಗಿಸಿದ್ದಾರೆ. ಮುಸ್ಲಿಮರಿಗೆ ಬೆಂಬಲ ನೀಡುವ ನಾಟಕವಾಡುತ್ತಿದ್ದ ಪಿಎಫ್‍ಐ ಉಗ್ರರ ಅಸಲಿ ಮುಖ ಬಯಲಾಗಿದ್ದು, ಮುಸ್ಲಿಮರ ಪಾಲಿಗೂ ವಿಲನ್‍ಗಳಾಗಿ ಪರಿಣಮಿಸಿದ್ದಾರೆ. ಕೊಲೆ ನಡೆಸಲು ಕಾರಣ ಏನೆಂದು ಬಹಿರಂಗವಾಗಬೇಕಿದೆ.

ಗೂಂಡಾ ಕಾಯಿದೆಯಲ್ಲಿ ಬಂಧಿತನಾಗಿದ್ದ ಸಫ್ವಾನ್…!!

ಮುಕ್ಕದ ಸಫ್ವಾನ್ ಹುಸೇನ್ ಎಂಬಾತ ನಟೋರಿಯಸ್ ರೌಡಿಯಾಗಿದ್ದು ಈತನ ಮೇಲೆ ಗೂಂಡಾ ಕಾಯಿದೆಯ ಪ್ರಕಾರ ಪ್ರಕರಣ ದಾಖಲಾಗಿದೆ. ಈತನ ಮೇಲೆ ಈಗಾಗಲೇ ಹಲವಾರು ದರೋಡೆ, ಅಪಹರಣ, ಕೊಲೆ ಕೇಸ್ ದಾಖಲಾಗಿದೆ. ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿನಿಯ ಅಪಹರಣ ನಡೆಸಿ ಅತ್ಯಾಚಾರ ಎಸಗಿದ ಪ್ರಕರಣ, ಕೊಲೆಯತ್ನ, ತಣ್ಣೀರು ಬಾವಿ ಸಮೀಪ ಉದ್ಯಮಿಯ ಕೊಲೆಯತ್ನ, ಉದ್ಯಮಿಯ ಕಾರ್ ಡ್ರೈವರ್ ಅಪಹರಿಸಿ ಕೊಲೆ, ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದ ಕೊಣಾಜೆ ಎಸ್‍ಐ ಸುಧಾಕರ್ ಮೇಲೆ ತಲವಾರಿನಿಂದ ಹಲ್ಲೆ ಸೇರಿ 30ಕ್ಕಿಂತಲೂ ಅಧಿಕ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಸಫ್ವಾನ್ ವಿರುದ್ಧ ಗೂಂಡಾ ಕಾಯಿದೆಯ ಪ್ರಕಾರ ಕೇಸ್ ದಾಖಲಾಗಿದ್ದು, ಎರಡು ತಿಂಗಳ ಮುಂಚೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಪಿಎಫ್‍ಐನಲ್ಲಿ ತೊಡಗಿಕೊಂಡು ಈ ಕೃತ್ಯಗಳನ್ನು ನಡೆಸುತ್ತಿದ್ದ. ಪ್ರಕರಣದಲ್ಲಿ ಭಾಗಿಯಾಗಿ ಬಂಧಿತರಾಗಿರುವ ಶಾಹಿಲ್ ಹಾಗೂ ಬಾಂಬೆ ಫೈಝಲ್ ಪಿಎಫ್‍ಐ ಸಂಘಟನೆಯ ಸಕ್ರಿಯ ಕಾರ್ಯಕರ್ತರು. ಆರೋಪಿಗಳಿಗೆ ಕಾರ್ ಕೊಟ್ಟು ಸಹಕಾರ ನೀಡಿದ್ದ ನೌಶಾದ್ ಎಸ್‍ಡಿಪಿಐ ಪಕ್ಷದ ಸ್ಥಳೀಯ ಅಧ್ಯಕ್ಷನಾಗಿದ್ದಾರೆ. ಈ ಆರೋಪಿಗಳಿಗೆ ಕೃಷ್ಣಾಪುರ, ಸಚ್ಚೇರಿಪೇಟೆ ಮತ್ತು ಇತರ ಕಡೆಗಳಲ್ಲಿ ಕೆಲಮಂದಿ ಪಿಎಫ್‍ಐ ಕಾರ್ಯಕರ್ತರು ಸಹಕಾರ ನೀಡಿರುವ ಬಗ್ಗೆ ಮಾಹಿತಿ ಲಭಿಸಿದೆ.

ಪಾಠ ಕಲಿಯಿತೇ ಡಿವೈಎಫ್‍ಐ?

ಯಾರೇ ಹಿಂದೂಗಳು ಕೊಲೆಯಾದರೂ ಪ್ರತಿಭಟನೆ ನಡೆಸದೆ ಬಂಧಿತ ಆರೋಪಿಗಳೆಲ್ಲಾ ಅಮಾಯಕರು ಎಂದು ಪ್ರತಿಭಟನೆ ಮಾಡಿ ಪೊಲೀಸರನ್ನು ತನಿಖೆಯಿಂದ ದಿಕ್ಕುತಪ್ಪಿಸುತ್ತಿದ್ದ ಡಿವೈಎಫ್‍ಐ ಸಂಘಟನೆ ಪಿಎಫ್‍ಐ ಉಗ್ರರ ಕೃತ್ಯದಿಂದ ಕೊನೆಗೂ ಪಾಠ ಕಲಿತಿದೆ. ಅಪಾಯಕ ಹುಡುಗ ಸಫ್ವಾನ್ ಕೊಲೆಯಾಗಿರುವುದರಿಂದ ಬೆಚ್ಚಿಬಿದ್ದ ಡಿವೈಎಫ್‍ಐ ಸಂಘಟನೆ ಪಿಎಫ್‍ಐ ವಿರುದ್ಧ ಕೊನೆಗೂ ಪ್ರತಿಭಟನೆಗೆ ಮುಂದಾಗಿದೆ. ಪಿಎಫ್‍ಐ ಸಂಘಟನೆ ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದ್ದರೂ ಡಿವೈಎಫ್‍ಐ ಮಾತ್ರ ಜಾಣಕುರುಡು ಮೆರೆದು ಪರೋಕ್ಷವಾಗಿ ನಿಷೇಧವಾಗದಂತೆ ನೋಡಿಕೊಂಡಿತ್ತು.

ಇದೀಗ ಇದೇ ಪಿಎಫ್‍ಐ ಸಂಘಟನೆಯಿಂದ ಮುಸ್ಲಿಂ ಯುವಕನ ಕೊಲೆಯಾದ ಕಾರಣ ಪಿಎಫ್‍ಐ ಎಷ್ಟೊಂದು ಕ್ರೂರ ಸಂಘಟನೆ ಎನ್ನುವುದನ್ನು ಅರ್ಥ ಮಾಡಿಕೊಂಡಿದೆ. ಯಾವಾಗಲೂ ಹಿಂದುತ್ವದ ವಿರುದ್ಧ ಪ್ರತಿಭಟನೆ ನಡೆಸಿ ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ಸವಾರಿ ಮಾಡುತ್ತಿದ್ದ ಪಿಎಫ್‍ಐಗೆ ಕೊನೆಗೂ ಬುದ್ಧಿ ಬಂದಿದೆ. ಸಫ್ವಾನ್ ಅಪಹರಣವಾಗಿ 50 ದಿನಗಳಾದ ದಿನ `ಎಲ್ಲಿದ್ದಾನೆ ಸಫ್ವಾನ್?’ಎಂದು ಪೊಲೀಸರ ವಿರುದ್ಧ ಹಗಲು ರಾತ್ರಿ ಧರಣಿ ನಡೆಸಲು ಡಿವೈಎಫ್‍ಐ ನಿರ್ಧರಿಸಿತ್ತು. ಆದರೆ ಇಂದು ಸಫ್ವಾನ್ ಕೊಲೆಯಾಗಿದೆ. ಈ ಸಫ್ವಾನ್ ಮುಸ್ಲಿಮರಿಂದಲೇ ಕೊಲೆಯಾಗಿದ್ದಾನೆ ಎನ್ನುವುದನ್ನು ಡಿವೈಎಫ್‍ಗೆ ನಂಬಲಾಗುತ್ತಿಲ್ಲ.

ಕಟ್ಟಕಡೆಯದಾಗಿ ಕೇಳಿಬರುವ ಒಂದೇ ಒಂದು ಪ್ರಶ್ನೆ ಏನೆಂದರೆ ಪಿಎಫ್‍ಐ ಸಂಘಟನೆ ನಿಷೇಧಗೊಳ್ಳುವುದು ಯಾವಾಗ?

ಚೇಕಿತಾನ

Tags

Related Articles

Close