ಅಂಕಣದೇಶಪ್ರಚಲಿತ

ಒಂದು ಅತ್ಯಧ್ಬುತ ವಿಶ್ಲೇಷಣೆ…!!! 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸೋಲಲು `ಇಂಡಿಯಾ ಶೈನಿಂಗ್’ ಘೋಷಣೆಯೇ ಕಾರಣ ಅಲ್ಲ!! ಬೇರೆ ಕಾರಣವೂ ಇದೆ! ಅದ್ಯಾವುದು ಗೊತ್ತೇ?

2004ರ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೋಲುತ್ತಾರೆ ಎಂದು ಯಾರಿಗೂ ನಂಬಿಕೆ ಇರಲಿಲ್ಲ. ರಾಜಕೀಯ ಪಂಡಿತರೂ ಕೂಡಾ ಮತ್ತೊಮ್ಮೆ
ವಾಜಪೇಯಿ ಅಧಿಕಾರ ವಹಿಸುತ್ತಾರೆಂದೇ ಭವಿಷ್ಯ ನುಡಿದಿದ್ದರು. ಅಲ್ಲದೆ 2003ರ ವಿಧಾನ ಸಭೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ರಾಜಕೀಯ ಅಲೆ ಬಿಜೆಪಿ ಪರವಾಗಿತ್ತು ಎಂದೇ ನಂಬಲಾಗಿತ್ತು.

ಇಷ್ಟೆಲ್ಲಾ ನೋಡುವಾಗ ಅಟಲ್ ಬಿಹಾರಿ ವಾಜಪೇಯಿ ಚುನಾವಣೆಯಲ್ಲಿ ಗೆದ್ದು ಬಿಡುತ್ತಾರೆಂದೇ ನಂಬಲಾಗಿತ್ತು. ಅದಕ್ಕಾಗಿಯೇ ಅವಧಿ ಮುಂಚೆಯೇ ಚುನಾವಣೆಗೆ
ಧುಮುಕಲಾಯಿತು. ಈ ವೇಳೆ ವಾಜಪೇಯಿ ಸರಕಾರ ಭಾರತ ಹೊಳೆಯುತ್ತಿದೆ(ಇಂಡಿಯಾ ಶೈನಿಂಗ್) ಎಂಬ ಅಭಿಯಾನ ಕೈಗೊಂಡಿದ್ದರು. ಆದರೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಸೋತಿತು. ವಾಜಪೇಯಿ ಅಧಿಕಾರವಧಿಯಲ್ಲಿ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ಧಿ, ಕೆಲವೊಂದು ಯೋಜನೆಗಳು ಚೆನ್ನಾಗಿ ಜಾರಿಗೊಂಡಿದ್ದವು.

ಇಷ್ಟೆಲ್ಲಾ ಇದ್ದರೂ ವಾಜಪೇಯಿ ಸರಕಾರ ಮತ್ತೊಮ್ಮೆ ಅಧಿಕಾರ ವಹಿಸಬೇಕಿತ್ತು. ಆದರೆ ಕಾಂಗ್ರೆಸ್ ಮೈತ್ರಿಕೂಟ ಅನಾಯಾಸವಾಗಿ ಗೆದ್ದಿತು. ಮನಮೋಹನ್ ಸಿಂಗ್ ಅನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿ ಭಾರತವನ್ನು ಆಳಿದಳು.

ಚುನಾವಣಾ ವಿಶ್ಲೇಷಕರು ವಾಜಪೇಯಿ ಸೋಲಲು ನಿಖರ ಕಾರಣವನ್ನು ಹುಡುಕುವ ಕೆಲಸವನ್ನು ಮಾಡಲಿಲ್ಲ. ಹೆಚ್ಚಿನವರು ವಾಜಪೇಯಿ ಸೋಲಲು ಬಿಜೆಪಿಯ
`ಇಂಡಿಯಾ ಶೈನಿಂಗ್’ ಅಭಿಯಾನವೇ ಕಾರಣ ಎಂದು ನಂಬಿದ್ದರು. ಈ ಅಭಿಯಾನದಿಂದ ಬಡಜನರು ಬಿಜೆಪಿ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ ಅನ್ನು
ಅನಾಯಾಸವಾಗಿ ಗೆಲ್ಲಿಸಿದರು ಎಂದು ನಂಬಲಾಗಿತ್ತು. ಅಲ್ಲದೆ ಎಲ್.ಕೆ. ಅಡ್ವಾಣಿ ಕೂಡಾ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸವನ್ನು ಹೊಂದಿದ್ದರು.
ಚುನಾವಣೆ ಸೋತ ಬಳಿಕ ಇಂಡಿಯಾ ಶೈನಿಂಗ್ ಎಂಬ ಘೋಷಣೆಯಿಂದಲೇ ಸೋತಿದೆ ಎಂದು ಸ್ವತಃ ಎಲ್.ಕೆ. ಅಡ್ವಾಣಿಯವರು ಹೇಳಿಕೊಂಡಿದ್ದರು.

ಹಾಗಾದರೆ ಬಿಜೆಪಿ ಸೋಲಲು ನಿಜವಾದ ಕಾರಣವೇನು?

ಬಿಜೆಪಿ ಸೋಲಲು ಕೆಲವೊಂದು ಕಾರಣಗಳೂ ಪ್ರಭಾವ ಬಿದ್ದಿರಬಹುದು. ಆದರೆ ನೈಜ ಕಥೆ ಬೇರೆಯೇ ಇದೆ. ಯಾಕೆಂದರೆ ಚುನಾವಣೆಯಲ್ಲಿ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತದೆ. 2004 ರ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳನ್ನು ಪಡೆಯಿತು. ಕಾಂಗ್ರೆಸ್ 114 ಸ್ಥಾನ ಪಡೆದುಕೊಂಡಿತು. ಬಿಜೆಪಿ 8.65 ಕೋಟಿ (23.75%) ಮತಗಳನ್ನು ಪಡೆದರೆ, ಕಾಂಗ್ರೆಸ್ 10.31 ಕೋಟಿ (28.30%). ಮತಗಳನ್ನು ಪಡೆಯಿತು.

‘ಭಾರತ ಶೈನಿಂಗ್’ ಅಭಿಯಾನವು ಬಿಜೆಪಿ ಕುಸಿತಕ್ಕೆ ಕಾರಣ ಎಂಬ ವಿಶ್ಲೇಷಣೆ ನಿಜವಾಗಿದ್ದಲ್ಲಿ, 2004ರ ಚುನಾವಣೆಯಲ್ಲಿ ಬಿಜೆಪಿ ಗಣನೀಯವಾಗಿ ಕಡಿಮೆ ಮತಗಳನ್ನು ಪಡೆಯಬೇಕಿತ್ತು. ಆದರೆ ಇಲ್ಲಿ ಹಾಗೆ ಆಗಲಿಲ್ಲ. ಆದರೆ 2004ರ ಚುನಾವಣೆಯಲ್ಲಿ ಬಿಜೆಪಿ 138 ಸ್ಥಾನಗಳನ್ನು ಕಳೆದುಕೊಂಡರೆ, ಕಾಂಗ್ರೆಸ್ 145 ಸ್ಥಾನ ಗಳಿಸಿತು. ಬಿಜೆಪಿ 8.63 ಕೋಟಿ (22.16%), ಕಾಂಗ್ರೆಸ್ 10.34 ಕೋಟಿ (26.53%) ಗಳಿಸಿತು. 1999ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಹೆಚ್ಚಿನ ಮತಗಳನ್ನು ಕಳೆದುಕೊಂಡಿಲ್ಲ ಅಥವಾ ಕಾಂಗ್ರೆಸ್ ಅತೀವ ಲಾಭವನ್ನೂ ಗಳಿಸಲಿಲ್ಲ. ಆದರೂ, ಇದೇ ರೀತಿಯ ಮತದಾನದ ಆಧಾರದ ಮೇಲೆ ಬಿಜೆಪಿ 44 ಸ್ಥಾನಗಳನ್ನು ಕಳೆದುಕೊಂಡಿತು. ಮತ್ತು ಕಾಂಗ್ರೆಸ್ 31 ಅನ್ನು ಗಳಿಸಿತು.

ಇಂಡಿಯಾ ಶೈನಿಂಗ್‍ನಿಂದ ಬಿಜೆಪಿ ಸೋತಿಲ್ಲ ಬದಲಿಗೆ ಮತಗಳ ಸಂಖ್ಯೆ ತೀವ್ರ ಕುಸಿತದ ಕಾರಣ ಬಿಜೆಪಿಗೆ ಸೋಲಾಯಿತು. ಬಿಜೆಪಿಯ ಮತಗಳ ಸಂಖ್ಯೆ ಕುಸಿದಷ್ಟು ಕಾಂಗ್ರೆಸ್‍ಗೆ ಲಾಭವಾಯಿತು. ಬಿಜೆಪಿ ಓಟ್ ಹಾಕದಿದ್ದರೂ ಗೆದ್ದೇ ಗೆಲ್ಲುತ್ತದೆ ಎಂಬ ಅತಿ ವಿಶ್ವಾಸವೇ ಬಿಜೆಪಿಯನ್ನು ಮಕಾಡೆ ಮಲಗುವಂತೆ ಮಾಡಿತು.

ಭಾರತೀಯ ಚುನಾವಣಾ ಪದ್ಧತಿ ಬ್ರಿಟಿಷ್ ಮತದಾನದ ವ್ಯವಸ್ಥೆಯನ್ನು ಆಧರಿಸಿವೆ, ಇದನ್ನು ವೆಸ್ಟ್‍ಮಿನಿಸ್ಟರ್ ಚುನಾವಣಾ ವ್ಯವಸ್ಥೆ ಎಂದು ಕೂಡ ಕರೆಯುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಹೆಚ್ಚಿನ ಮತಗಳು ವಿಜಯವನ್ನು ಖಾತರಿಪಡಿಸುವುದಿಲ್ಲ. ಯಾಕೆಂದರೆ ಈ ಮತಗಳು ಚುನಾವಣಾ ಕ್ಷೇತ್ರಗಳಲ್ಲಿ ಹೇಗೆ ವಿತರಿಸಲ್ಪಡುತ್ತವೆ ಎಂಬುದು ಪ್ರಭಾವ ಬೀರುತ್ತದೆ. ಈ ಪರಿಕಲ್ಪನೆಯನ್ನು ‘ಮೊದಲ ಬಾರಿಗೆ ವಿತರಣೆ’ ಎಂದು ಕರೆಯುತ್ತಾರೆ. ಅಂದರೆ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಅತಿ ಹೆಚ್ಚು ಮತಗಳನ್ನು ಹೊಂದಿರುವ ಪಕ್ಷ ಕ್ಷೇತ್ರವನ್ನು ಗೆಲ್ಲುತ್ತದೆ ಮತ್ತು ಆ ಕ್ಷೇತ್ರದಲ್ಲಿನ ಇತರ ಪಕ್ಷಗಳಿಗೆ ಹೋಗುವ ಉಳಿದ ಮತಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಈ ಮತಗಳನ್ನು ಇತರ ಕ್ಷೇತ್ರಗಳಿಗೆ ಸಾಗಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ಕ್ಷೇತ್ರವು ಮತ ಎಣಿಕೆಯ ದೃಷ್ಟಿಯಿಂದ ಪರಸ್ಪರ ಪ್ರತ್ಯೇಕ ಪ್ರತ್ಯೇಕವಾಗಿ ಪ್ರತ್ಯೇಕಿಸಲ್ಪಟ್ಟಿದೆ.

ಇದರ ಬಗ್ಗೆ ತಿಳಿಯಲು ಸರಳವಾದ ಒದು ಉದಾಹರಣೆಯನ್ನು ಗಮನಿಸೋಣ..

ಮೂರು ಕ್ಷೇತ್ರಗಳಲ್ಲಿ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸ್ಪರ್ಧಿಸುತ್ತವೆ ಎಂದು ಊಹಿಸಿ. ಅದರಲ್ಲಿ `ಎ’ ಲೋಕಸಭಾ ಕ್ಷೇತ್ರವು 30,000 ಮತಗಳನ್ನು ಪಡೆದರೆ, `ಬಿ’ ಲೋಕಸಭಾ ಕ್ಷೇತ್ರವು 15,000 ಮತಗಳನ್ನು ಪಡೆಯುತ್ತದೆ ಎಂದಿಟ್ಟುಕೊಳ್ಳೋಣ. ಇನ್ನು ಲೋಕಸಭೆ `ಸಿ’ ಕ್ಷೇತ್ರವು 8000 ಮತಗಳನ್ನು ಗಳಿಸಿದೆ ಎಂದಿಟ್ಟುಕೊಳ್ಳೋಣ. ಅಂದರೆ ಒಂದು ಪಕ್ಷವು ಸರ್ಕಾರವನ್ನು ರಚಿಸುವುದಕ್ಕಾಗಿ ಕನಿಷ್ಠ 3 ಕ್ಷೇತ್ರಗಳಲ್ಲಿ 2 ಸ್ಥಾನಗಳನ್ನು ಗೆಲ್ಲಬೇಕು.

`ಎ’ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 26,000 ಓಟ್‍ಗಳನ್ನು ಪಡೆದು ಗೆದ್ದರೆ, ಕಾಂಗ್ರೆಸ್ 4,000 ಮತಗಳನ್ನು ಪಡೆದು ಸೋತಿತು.

`ಬಿ’ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 11,000 ಮತಗಳನ್ನು ಪಡೆದು ಗೆದ್ದರೆ ಬಿಜೆಪಿ 4,000 ಮತಗಳನ್ನು ಪಡೆಯಿತು.

ಇನ್ನು `ಸಿ’ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 6000 ಮತಗಳನ್ನು ಪಡೆದು ಗೆದ್ದರೆ ಬಿಜೆಪಿ 2000 ಮತಗಳನ್ನು ಪಡೆದು ಸೋತಿತು.

ಇಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆದ್ದು ಸರಕಾರವನ್ನು ರಚಿಸಿತು. ಆದರೆ ಒಟ್ಟು ಪಡೆದ ಮತಗಳ ಆಧಾರದಲ್ಲಿ ಬಿಜೆಪಿ ಗೆಲ್ಲಬೇಕಿತ್ತಲ್ಲವೇ? ಯಾಕೆ ಗೊತ್ತ?

ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ ಒಟ್ಟು ಮತಗಳ ಸಂಖ್ಯೆ 32,000. ಆದರೆ ಕಾಂಗ್ರೆಸ್ ಗಳಿಸಿದ್ದು 21,000 ಮತಗಳು. ಇಲ್ಲಿ, ಬಿಜೆಪಿ ಶೇ. 60.37 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಶೇ. 39.62 ಗಳಿಸಿತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿಯಿತು. ಮುಖ್ಯವಾಗಿ ಹೆಚ್ಚು ಮತಗಳನ್ನು ಪಡೆದ ಪಕ್ಷ ಅಧಿಕಾರ ಪಡೆಯಬೇಕಿತ್ತಲ್ಲವೇ? ಹೆಚ್ಚು ಮತಗಳನ್ನು ಪಡೆದ ಪಕ್ಷವೂ ಹೇಗೆ ಅಧಿಕಾರವನ್ನು ಕಳೆದುಕೊಳ್ಳಬಹುದು ಎಂಬುವುದನ್ನು ಇದು ಸೂಚಿಸುತ್ತದೆ. ವಾಜಪೇಯಿ ಸರಕಾರವೂ ಇದೇ ಮಾದರಿಯಲ್ಲಿ ಸೋತಿತು ಎಂದು ಹೇಳಬಹುದು.

1952ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್ ಶೇ. 45 ವೋಟುಗಳನ್ನು ಗಳಿಸಿದ್ದರೂ, ಶೇ. 74.4 ಸ್ಥಾನಗಳನ್ನು ಗಳಿಸಿದ್ದರಿಂದ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಕಾಂಗ್ರೆಸ್ ಯಾವಾಗಲೂ ‘ಫಸ್ಟ್ ಪಾಸ್ಟ್ ದಿ ಪೇಸ್ಟ್’ ಎಂಬ ಪರಿಕಲ್ಪನೆಯಿಂದ ಗೆಲ್ಲುತ್ತಿದೆ ಅಷ್ಟೆ.

ಕಾಂಗ್ರೆಸ್ ಯಾಕೆ ಅಲ್ಪಸಂಖ್ಯಾತರ ಓಟ್ ಮೇಲೆ ಕಣ್ಣಿಟ್ಟಿದೆ ಗೊತ್ತಾ?

ಭಾರತದಲ್ಲಿ ಸಾಕಷ್ಟು ಮಂದಿ ಹಿಂದೂಗಳಿದ್ದರೂ ಅಲ್ಪಸಂಖ್ಯಾತರನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ಗೆಲ್ಲುತ್ತದೆ. ಮುಸ್ಲಿಮರ ಓಟು ಏನು ಮಾಡಿದರೂ ಕಾಂಗ್ರೆಸ್
ಕೈಬಿಟ್ಟು ಹೋಗುವುದಿಲ್ಲ ಎಂದವರಿಗೆ ಗೊತ್ತು. ಮತಗಳ ಸಂಖ್ಯೆ ಹೊರತು ಪಡಿಸಿ ಸ್ಥಾನಗಳ ಲೆಕ್ಕಾಚಾರವನ್ನು ನೋಡಿದರೆ ಹೆಚ್ಚು ಸ್ಥಾನಗಳು ಅಲ್ಪಸಂಖ್ಯಾತರಿರುವ ಸ್ಥಾನಗಳಲ್ಲಿ ಬಂದರೆ ಬಿಜೆಪಿ ಹೆಚ್ಚು ಮತಗಳನ್ನು ಪಡೆದರೂ, ಹೆಚ್ಚು ಸ್ಥಾನ ಗಳಿಸಿದ ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ. ಅದಕ್ಕಾಗಿಯೇ ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಇದೇ ರೀತಿಯ ಪ್ರಕ್ರಿಯೆ ಬಿಹಾರ ಚುನಾವಣೆಯಲ್ಲೂ ನಡೆಯಿತು. ಬಿಹಾರದಲ್ಲಿ ಬಿಜೆಪಿಯು ಅತಿಹೆಚ್ಚು ಮತಗಳನ್ನು ಗಳಿಸಿದರೂ(ಸುಮಾರು ಶೇ. 24ಕ್ಕೂ ಹೆಚ್ಚು)
ಕಡಿಮೆ ಸ್ಥಾನಗಳನ್ನು ಗಳಿಸಿದ ಕಾರಣ ಅಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಲಾಲೂ-ನಿತೀಶ್ ಸರಕಾರ ಅಧಿಕಾರ
ಹಿಡಿಯುವಂತಾಗಿತ್ತು.

ಈ ಬಗ್ಗೆ ತಲೆಕೆಡಿಸಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 2019ರ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಗೇಮ್‍ಪ್ಲಾನ್ ನಡೆಸುತ್ತಿದ್ದಾರೆ. ಪ್ರಾದೇಶಿಕವಾಗಿ ಬಿಜೆಪಿ ಗೆಲ್ಲುವಂತೆ ಮಾಡಿಕೊಳ್ಳುವ ಅಗತ್ಯತೆಯನ್ನು ಮನಗಂಡಿದ್ದಾರೆ. ಪ್ರಾದೇಶಿಕ ಪಕ್ಷಗಳಿಂದ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇಲ್ಲವೆಂದಲ್ಲ. ಅದಕ್ಕಾಗಿ 2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳನ್ನು ಉಳಿಸುವುದಕ್ಕೆ ತನ್ನ ಮನಸ್ಸನ್ನು ಕೇಂದ್ರೀಕರಿಸುತ್ತಿದ್ದಾರೆ.

-ಚೇಕಿತಾನ

Tags

Related Articles

Close