ಅಂಕಣ

ಒಂದು ತಿಂಗಳು ಪೂರೈಸಿದ ಪರಿವರ್ತನೆ ಯಾತ್ರೆಯ ಕೆಲವು ಅಚ್ಚರಿಗಳು!!

ಅವರು ಈ ಇಳಿ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂತೆ, ಪಾದರಸದಂತೆ ಕೆಲಸ ಮಾಡುತ್ತಿದ್ದಾರೆಂದರೆ ನಿಜಕ್ಕೂ ಅದ್ಭುತ ಎನಿಸುತ್ತದೆ. ಈಗಲೂ ಗಟ್ಟಿಧ್ವನಿಯಲ್ಲಿ ಗುಡುಗಿ ಸರಕಾರವನ್ನು ಗಡಗಡ ನಡುಗಿಸಬಲ್ಲ ತಾಖತ್ತು ಅವರಿಗಿದೆ. ಹುಟ್ಟುಹೋರಾಟಗಾರರಾಗಿದ್ದುಕೊಂಡು ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಲೇವಡಿ ಮಾಡುತ್ತಿದ್ದ ಸಂದರ್ಭ ಇಡೀ ಕರ್ನಾಟಕದಲ್ಲೇ ಬಿಜೆಪಿ ಎತ್ತರಕ್ಕೆ ಬೆಳೆಯಲು ಇವರ ಕೊಡುಗೆಯೂ ಅಪಾರವಾಗಿದೆ. ಅಂದಹಾಗೆ ಅವರ ವಯಸ್ಸೆಷ್ಟು ಗೊತ್ತೇ? ಮುಂದಿನ ಫೆಬ್ರವರಿಗೆ 75 ವರ್ಷ ಪೂರ್ತಿಯಾಗುತ್ತದೆ. ಅಷ್ಟು ವಯಸ್ಸಾಗಿದ್ದರೂ ಉತ್ಸಾಹ ಇನ್ನೂ ಕಳೆಗುಂದಿಲ್ಲ. 25ರ ತಾರುಣ್ಯ ಇಂದು ಕೂಡಾ ಹಾಗೆಯೇ ಇದೆ. ಈ ವ್ಯಕ್ತಿ ಹೊಸತೊಂದು ದಾಖಲೆಗೆ ನಾಂದಿಹಾಡಿದ್ದಾರೆ…

ಅದೇ ಪರಿವರ್ತನಾ ಯಾತ್ರೆ…

ಅಂದಹಾಗೆ ಅವರ್ಯಾರು ಗೊತ್ತೇ? ಬಿ. ಎಸ್. ಯಡಿಯೂರಪ್ಪ…

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೊಸದೊಂದು ದಾಖಲೆಗೆ ನಾಂದಿ ಹಾಡಿದ್ದಾರೆ. ಈ ಇಳಿವಯಸ್ಸಿನಲ್ಲಿ ಇಂಥದೊಂದು ಸಾಧನೆ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ ಎನಿಸಬಹುದು. ಹೌದು, ಕರ್ನಾಟಕದ ಭಾವೀ ಮುಖ್ಯಮಂತ್ರಿ ಎಂದೇ ಬಿಂಬಿತ ಯಡಿಯೂರಪ್ಪನವರು ಪರಿವರ್ತನಾ ಯಾತ್ರೆಗೆ ನಾಂದಿಹಾಡಿದ್ದು ಇಂದಿಗೆ ಬರೋಬ್ಬರಿ ಒಂದು ತಿಂಗಳು ಪೂರೈಕೆಯಾಗುತ್ತಿದೆ. ಜಂಜಾಟಗಳ ನಡುವೆ ಸ್ವಲ್ಪವೂ ದಣಿವರಿಯದಂತೆ
ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿರುವ ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈವರೆಗೆ ಬರೋಬ್ಬರಿ 2,500 ಕಿ.ಮೀ. ಪೂರೈಸಿರುವ ಪರಿವರ್ತತನಾ ಯಾತ್ರೆ ಇನ್ನೂ 45 ದಿನಗಳ ಕಾಲ ಇಡೀ ರಾಜ್ಯಾದ್ಯಂತ ಸಂಚರಿಸಲಿದೆ. ಬರೋಬ್ಬರಿ 75 ದಿನಗಳ ಕಾಲ 75,000 ಕಿ.ಮೀ ದೂರವನ್ನು ಸಂಚರಿಸಿ ಇಡೀ ರಾಜ್ಯವನ್ನೇ ಸುತ್ತುವರಿಯುತ್ತಿರುವುದು ಈ ಪರಿವರ್ತನಾ ಯಾತ್ರೆಯ ಹೈಲೈಟ್ಸ್.. ಈ ಯಾತ್ರೆಯನ್ನು ಉತ್ಸಾಹದಿಂದ ಮುನ್ನಡೆಸುತ್ತಿರುವ 75ರ ಯುವಕ ಯಡಿಯೂರಪ್ಪನವರೇ ಪರಿವರ್ತನಾ ಯಾತ್ರೆಯ ಕೇಂದ್ರ ಬಿಂದು.

ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 2600 ಕಿ.ಮೀ ಸಂಚರಿಸುವುದು ಅಂದರೆ ಸುಮ್ನೆ ಅಲ್ಲ. ಯಾಕೆಂದರೆ ಕಾರ್ಯಕ್ರಮದ ವೇಳಾಪಟ್ಟಿಯಂತೆ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ನಿಗದಿತ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವುದು ಒಂದು ದೊಡ್ಡ ಸವಾಲು. ವಾಹನ ಸಂಚಾರದ ಜಂಜಾಟದ ಅಷ್ಟೊಂದು ದೂರ ಸಂಚರಿಸಿ ಕಾರ್ಯಕರ್ತರನ್ನು ಒಟ್ಟು ಸೇರಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ಮುಂದಿನ ಚುನಾವಣೆಗೆ ಸಜ್ಜಾಗುವುದೆಂದರೆ ಅದೊಂದು ಚಿಕ್ಕ ಕೆಲಸವಲ್ಲ. ಪ್ರತೀ ದಿನ ಭಾಷಣ, ಕಾರ್ಯಕ್ರಮ ಸಂಯೋಜನೆ, ಗಂಟೆಗಟ್ಟಲೆ ಭಾಷಣ, ಕಾರ್ಯಕರ್ತರನ್ನು ಅರ್ಥ ಮಾಡಿಕೊಂಡು ಅವರ ಹೃದಯಕ್ಕೆ ಹತ್ತಿರವಾಗುವುದು, ವೈಯಕ್ತಿ ಜೀವನವನ್ನು ನಿಭಾಯಿಸುವುದು, ಸ್ವಕ್ಷೇತ್ರದತ್ತ ಗಮನ ಕೊಡುವುದು ಇವೆಲ್ಲಾ ಕೆಲಸ ಆಲೋಚಿಸುವಾಗಲೇ ತಲೆ ಗಿರ್ ಎನ್ನುತ್ತದೆ. ಆದರೆ ಹುಟ್ಟು ಹೋರಾಟಗಾರರರಾಗಿರುವ ಯಡಿಯೂರಪ್ಪನವರು ಈ ಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ವಿರೋಧಿಗಳ ಎದೆಯಲ್ಲಿ ಭೀತಿಯನ್ನು ಬಿತ್ತಿದ್ದಾರೆ.

ಪರಿವರ್ತನಾ ಯಾತ್ರೆಯ ಹೈಲೈಟ್ಸ್:

– ಮುಂಬರುವ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗಿರುವ ಕರ್ನಾಟಕ ಬಿಜೆಪಿ ಪಕ್ಷ ನವೆಂಬರ್ 2 ರಿಂದ ಜನವರಿ 28 ರ ವರೆಗೆ ಸುಧೀರ್ಘ `ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ಯನ್ನು ಹಮ್ಮಿಕೊಂಡಿದೆ.
– ಈ ಪರಿವರ್ತನಾ ಯಾತ್ರೆಯು ರಾಜ್ಯದ 224 ಕ್ಷೇತ್ರಗಳನ್ನು ಸಂಚರಿಸಲಿದ್ದು, ಅಂದಾಜು 7,500 ಕಿ.ಮೀ. ಸಾಗಲಿದೆ.
– ತುಮಕೂರು ರಸ್ತೆಯ ನೈಸ್ ಜಂಕ್ಷನ್ ಸಮೀಪವಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನವೆಂಬರ್ 2 ರಂದು ಯಾತ್ರೆಗೆ ಚಾಲನೆ ನೀಡಿದ್ದಾರೆ.
– ಜನವರಿ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ
ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿರುವುದ ಈ ಪರಿವರ್ತನಾ ಯಾತ್ರೆಯ ಹೆಗ್ಗಳಿಕೆ.
– ನವೆಂಬರ್ 2ರಂದು ಬೆಂಗಳೂರಿನಲ್ಲಿ ನಡೆದ ಉದ್ಘಾಟನೆ ಸಮಾರಂಭಕ್ಕೆ ದಕ್ಷಿಣ ಕರ್ನಾಟಕ ಜಿಲ್ಲೆಗಳ 114 ವಿಧಾನಸಭೆ ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಬೈಕ್ ಗಳಲ್ಲಿ ತಲಾ ಇಬ್ಬರಂತೆ ನಗರಕ್ಕೆ ಬಂದಿದ್ದು, ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಮಂದಿ ಜನರು ಸೇರಿ ದಾಖಲೆ ನಿರ್ಮಿಸಿದೆ.
– ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದು, ಉಳಿದಂತೆ ರಾಜ್ಯದ ನಾಯಕರು ವಾರಕ್ಕೊಂದು ತಂಡದಂತೆ ಹಾಜರಾಗುತ್ತಿದ್ದಾರೆ.
– ಯಾತ್ರೆಯಲ್ಲಿ ಪ್ರತೀ ದಿನ ವಿಶೇಷ ಮೂರು ಕಾರ್ಯಕ್ರಮಗಳು ನಡೆಯುತ್ತಿರುವುದು ಇದೇ ಮೊದಲಾಗಿದ್ದು, ಇಂಥದೊಂದು ಸುಧೀರ್ಘ ಅವಧಿಯ ಕಾರ್ಯಕ್ರಮದಲ್ಲಿ ಇಷ್ಟು ಕಾರ್ಯಕ್ರಮಗಳನ್ನು ಆಯೋಜಿರುಸುವುದು ದೇಶದಲ್ಲೇ ಮೊದಲಾಗಿದ್ದು, ಇದೊಂದು ಸಾರ್ವಕಾಲಿಕ ದಾಖಲೆಯಾಗಿ ಹೊರಹೊಮ್ಮುತ್ತಿದೆ.
-ಯಾತ್ರೆಯ ಸಮಾರೋಪಕ್ಕೂ ಮುನ್ನ ಡಿಸೆಂಬರ್ 21 ರಂದು ಹುಬ್ಬಳ್ಳಿಯಲ್ಲಿ ಬೈಕ್ ರ್ಯಾಲಿ ಸಮಾವೇಶ ಮತ್ತು ಮೈಸೂರಿನಲ್ಲಿ ಜನವರಿ 25 ರಂದು ಬೃಹತ್ ರ್ಯಾಲಿ ನಡೆಯಲಿದೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಉತ್ತರ ಕರ್ನಾಟಕದ 110 ವಿಧಾನಸಭಾ ಕ್ಷೇತ್ರಗಳಿಂದ 80 ಸಾವಿರ ಬೈಕ್‍ಗಳಲ್ಲಿ ಕಾರ್ಯಕರ್ತರು ಆಗಮಿಸುವುದು ಇನ್ನೊಂದು ದಾಖಲೆ ಎನಿಸಲಿದೆ.
– ಪರಿವರ್ತನಾ ಯಾತ್ರೆಯಲ್ಲಿ 1 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಭವ್ಯವಾದ ರಥ ಪಾಲ್ಗೊಳ್ಳುತ್ತಿರುವುದುದ ವಿಶೇಷ. 75 ದಿನ ಸಂಚರಿಸುವ ಯಾತ್ರೆಯ ನೇತೃತ್ವ ವಹಿಸಲಿರುವ ಯಡಿಯೂರಪ್ಪ ಅವರಿಗಾಗಿ ಕೆಳಸ್ತರದಲ್ಲಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ, ಶೌಚಾಲಯ, ಲಘು ಉಪಹಾರ, ಟೀ, ಕಾಫಿ ಪೂರೈಸುವ ವ್ಯವಸ್ಥೆ ಇರಲಿದೆ.
-ಸುಮಾರು 7500 ಕಿ.ಮೀ ಸಂಚರಿಸಲಿರುವ ಯಾತ್ರೆಯಲ್ಲಿ 4 ಬೃಹತ್ ಸಮಾವೇಶಗಳು, 30ಕ್ಕೂ ಅಧಿಕ ಜಿಲ್ಲಾ ಸಮಾವೇಶಗಳು, 200ಕ್ಕೂ ಅಧಿಕ ಕ್ಷೇತ್ರವಾರು ಸಮಾವೇಶಗಳು ನಡೆಯಲಿರುವುದು ದೇಶದಲ್ಲಿಯೇ ಮೊದಲು..
– ಮುಖ್ಯವಾಗಿ ಎಲ್ಲಾ ಸಮಾವೇಶಗಳನ್ನು ಸೇರಿಸಿದರೆ ಬರೋಬ್ಬರು 300ಕ್ಕೂ ಅಧಿಕ ಸಮಾವೇಶ ಹಾಗೂ ನಾಲ್ಕು ಬೃಹತ್ ಸಮಾವೇಶ ನಡೆಸುವುದು ಒಂದು ದಾಖಲೆ ನಿರ್ಮಿಸಲಿದೆ.
– ಗುಜರಾತ್ ಚುನಾವಣೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಭಾರೀ ಕುತೂಹಲ ಮೂಡಿಸಿದ್ದು ಐದು ಲಕ್ಷಕ್ಕಿಂತಲೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.

ರಥಯಾತ್ರೆಯನ್ನೂ ನೆನಪಿಸಿದ ಪರಿವರ್ತನಾ ಯಾತ್ರೆ.

1990ರಲ್ಲಿ ಗುಜರಾತ್‍ನ ಸೋಮನಾಥ್‍ನಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೂ ರಥಯಾತ್ರೆ ಆಯೋಜಿಸಲಾಗಿತ್ತು. ಈ ರಥಯಾತ್ರೆಯ ನೇತೃತ್ವವನ್ನು ಎಲ್.ಕೆ. ಅಡ್ವಾಣಿ ವಹಿಸಿದ್ದರು. ಇದರಿಂದಾಗಿ ಹಿಂದೂಗಳಲ್ಲಿ ರಾಷ್ಟ್ರೀಯವಾದ ಬೆಳೆಯಿತಲ್ಲದೆ, ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿತು. ಈ ರಥಯಾತ್ರೆಯ ಸಂದರ್ಭ ಎಲ್.ಕೆ. ಅಡ್ವಾಣಿ ಅವರನ್ನು ಬಂಧಿಸಲಾಗಿತ್ತು. ಅಯೋಧ್ಯಾ ರಾಮ ಮಂದಿರವಿದ್ದ ಜಾಗವನ್ನು ಅತಿಕ್ರಮಿಸಿ ಬಾಬರ್ ಅನಧಿಕೃತವಾಗಿ ನಿರ್ಮಿಸಿದ್ದ ಬಾಬ್ರಿ ಮಸೀದಿಯನ್ನು ಡಿ.6 1992ರಂದು ನೆಲಸಮಗೊಳಿಸಿ ಆ ಜಾಗದಲ್ಲಿ ರಾಮಮಂದಿರ ನಿರ್ಮಿಸಲು ಹಿಂದೂಗಳಿಗೆ ಸ್ಫೂರ್ತಿ ನೀಡಿತು. ಒಟ್ಟಿನಲ್ಲಿ ಭವಿಷ್ಯದ ದಿಕ್ಸೂಚಿಯಾಗಿದ್ದ ರಥಯಾತ್ರೆಯಿಂದ ಹಿಂದೂಗಳಿಗೆ ಮಾರ್ಗದರ್ಶಿಯಾಯಿತು. ಇದೇ ರೀತಿ ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಕರ್ನಾಟಕದ ಕಾಂಗ್ರೆಸ್‍ನ ದುರಾಡಳಿತವನ್ನು ಜನರ ಮುಂದೆ ತರುವಲ್ಲಿ ವೇದಿಕೆಯಾಗಿ ಪರಿಣಮಿಸಿದೆ. ಆದ್ದರಿಂದ ಪರಿವರ್ತನಾ ಯಾತ್ರೆ ಕಾಂಗ್ರೆಸಿಗರ ನಿದ್ದೆಗೆಡಿಸಿದೆ.

ಕಾಂಗ್ರೆಸಿಗರ ನಿದ್ದೆಗೆಡಿಸಿದ ಪರಿವರ್ತನಾ ಯಾತ್ರೆ

ಕಾಂಗ್ರೆಸಿಗರು ಜನರನ್ನು ಇದುವರೆಗೆ ಯಾವ ರೀತಿ ಮೋಸ ಮಾಡುತ್ತಾ ಓಟುಗಳಿಸುತ್ತಿದ್ದರು, ಕಾಂಗ್ರೆಸಿಗರು ಮಾಡಿರುವ ಭ್ರಷ್ಟಾಚಾರವೇನು ಎಲ್ಲವನ್ನೂ ಜನರ
ಮುಂದೆ ತರುತ್ತಿರುವುದರಿಂದ ಪರಿವರ್ತನಾ ಯಾತ್ರೆ ಕಾಂಗ್ರೆಸಿಗರ ನಿದ್ದೆಗೆಡಿಸಿದೆ. ಇದೇ ಹತಾಶೆಯಲ್ಲಿ ಪರಿವರ್ತನಾ ಯಾತ್ರೆ ವಿಫಲಗೊಂಡಿದೆ ಎಂದು ಟೀಕಿಸುವ ಮೂಲಕ ಕಾಂಗ್ರೆಸ್ ಹತಾಶೆ ಮೆರೆಯುತ್ತಿದೆ. ಬೆಂಗಳೂರಿನಲ್ಲಿ ಆರಂಭಗೊಂಡ ಯಾತ್ರೆಗೆ ಅಮಿತ್ ಶಾ ಅವರು ಆಗಮಿಸಿದ್ದು, ಈ ವೇಳೆ ಖಾಲಿ ಕುರ್ಚಿಗಳನ್ನು ತೋರಿಸಲಾಗಿತ್ತು. ಆದರೆ ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೆರಳಿನ ಆಸರೆಯನ್ನು ಕಾರ್ಯಕರ್ತರು ಪಡೆದಿರುವುದನ್ನು ಯಾತ್ರೆಗೆ ಜನರೇ ಇರಲಿಲ್ಲ ಎಂದು ಸುಳ್ಳು ಕಥೆ ಹಬ್ಬಿಸಲಾಯಿತು. ಆದರೆ ಇಂದು ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಒಟ್ಟು ಸೇರುತ್ತಿದ್ದು ಕರ್ನಾಟಕದಲ್ಲಿ ಬಹುಮತದೊಂದಿಗೆ ತಾವರೆ ಅರಳುವುದು ನಿಚ್ಚಳವಾಗಿದೆ. ಅಭಿವೃದ್ಧಿಯೊಂದೇ ಬಿಜೆಪಿಯ ಮಂತ್ರ, ಪರಿವರ್ತನೆಯೇ ಧ್ಯೇಯ. ನವ ಕರ್ನಾಟಕದ, ಕಲ್ಯಾಣ ಕರ್ನಾಟಕದ ಕನಸನ್ನು ಹೊತ್ತು, ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ನಡೆಸುವ ಒಟ್ಟು ಉದ್ದೇವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಜನೆಗಳನ್ನು ಜನರ ಮುಂದೆ ಇಡುತ್ತಿರುವುದರಿಂದ ಈ ಯಾತ್ರೆ ಜನರಲ್ಲಿ ಹೊಸ ಭರವಸೆಯನ್ನು ಸೃಷ್ಟಿಸಿದೆ. ಬಿಜೆಪಿಗೆ ಇರುವ ಅಪಾರ ಜನಬೆಂಬಲವನ್ನು ಕಂಡು ಕಾಂಗ್ರೆಸ್, ಜೆಡಿಎಸ್ ಹೈರಾಣಾಗಿದೆ. ಕರ್ನಾಟಕದ ಕರಾವಳಿ ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತಗೊಂಡಿದೆ. ಆದರೆ ಉತ್ತರ ಕರ್ನಾಟಕಕ್ಕೆ ಈ ಯಾತ್ರೆ ನಿಜಕ್ಕೂ ಅಗತ್ಯವಿತ್ತು. ಕಾಂಗ್ರೆಸ್ ಇರುವ ಪ್ರದೇಶದಲ್ಲಿ ಕಾಂಗ್ರೆಸನ್ನು ನಿರ್ಣಾಮ ಮಾಡಿ ಬಿಜೆಪಿ ಗೆಲ್ಲಿಸಲು ನಾಂದಿ ಹಾಡುತ್ತಿರುವ ಈ ಪರಿವರ್ತನಾ ಯಾತ್ರೆಯಿಂದ ಕಾಂಗ್ರೆಸ್ ಕಂಗಾಲಾಗಿದೆ.

ಅಪಾರ ಜನಬೆಂಬಲ:

ಪರಿವರ್ತನಾ ಯಾತ್ರೆ ಆರಂಭಗೊಳಿಸುವ ಬಗ್ಗೆ ಯಡಿಯೂರಪ್ಪನವರು ಪ್ರಕಟಿಸುವಾಗ ಆರಂಭದಲ್ಲಿ ಕೊಂಚ ಗೊಂದಲ ಉಂಟಾಗಿತ್ತು. ಬಿಜೆಪಿಯನ್ನು ಅಧಿಕಾರಕ್ಕೆ ತಾರದೆ ಮನೆಗೆ ಹೋಗುವುದಿಲ್ಲ ಎಂದು ಗುಡುಗಿದ ಮೂಲಕ ಯಡಿಯೂರಪ್ಪ ರಾಜ್ಯದ ಬಿಜೆಪಿ ನಾಯಕರಿಂದ ಹಿಡಿದು ರಾಜ್ಯದ ಎಲ್ಲಾ ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬಿಸಿದ್ದರು. ಅದೇ ಹುರುಪಿನಿಂದ ಆರಂಭಗೊಂಡ ಪರಿವರ್ತನಾ ಯಾತ್ರೆ ಇಂದು ಇಂಡಿ ತಾಲೂಕಿನಲ್ಲಿ ಬೀಡುಬಿಟ್ಟಿದೆ. ಈ ಪರಿವರ್ತನಾ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದ್ದು, ಕಾರ್ಯಕರ್ತರು ಸಮಾರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶದ ಪೌರ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್‍ಸ್ವೀಪ್‍ನಲ್ಲಿ ಗೆದ್ದಿರುವುದು ಪರಿವರ್ತನಾ ಯಾತ್ರೆಯಲ್ಲಿ ಹೊಸ ಹುರುಪು ಸೃಷ್ಟಿಸಿದೆ. ಯಡಿಯೂರಪ್ಪನವರು ಪ್ರತೀ ದಿನ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡುತ್ತಿದ್ದು, ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪರಿವರ್ತನಾ ಯಾತ್ರೆಯನ್ನು ಹತ್ತಿಕ್ಕಲು ಪ್ರಯತ್ನಿಸಿ ವಿಫಲನಾದ ಸಿದ್ದರಾಮಯ್ಯ!

ಪರಿವರ್ತನಾ ಯಾತ್ರೆಯನ್ನು ವಿಫಲಗೊಳಿಸಲು ಸಿದ್ದರಾಮಯ್ಯ ಅವರು ಪೆÇಲೀಸ್ ಇಲಾಖೆಯನ್ನು ಬಳಸಿತು. ದೂರದೂರುಗಳಿಂದ ಬರುತ್ತಿದ್ದ ಬೈಕ್‍ಗಳನ್ನು ತಡೆದ ಪೆÇಲೀಸರು ನಿಗದಿತ ಸ್ಥಳಕ್ಕೆ ಹೋಗದಂತೆ, ಗಮ್ಯ ಸ್ಥಳವನ್ನು ತಲುಪದಂತೆ ತಡೆಯುವ ಕೆಲಸದಲ್ಲಿ ನಿರತರಾದರು. ಪೆÇಲೀಸರು ಸರಕಾರದ ಆಣತಿಯಂತೆ ಅಲ್ಲಲ್ಲಿ ತಡೆದು ರಸ್ತೆಯ ಮಧ್ಯೆಯೇ ನಿಲ್ಲಿಸಿ ವಾಹನದಟ್ಟನೆಯಾಗುವಂತೆ ನೋಡಿಕೊಂಡರು. ಪರಿವರ್ತನಾ ಯಾತ್ರೆ ಎಲ್ಲಿಗೆಲ್ಲಾ ಹೋಗುತ್ತದೋ ಅಲ್ಲೆಲ್ಲಾ ಪೆÇಲೀಸರು ಇದನ್ನೇ ನಡೆಸಿಕೊಂಡು ಬರುತ್ತಿದ್ದಾರೆ. ಒಟ್ಟಿನಲ್ಲಿ ಪರಿವರ್ತನಾ ಯಾತ್ರೆಗೆ ಜನರು ಸೇರದಂತೆ ಮಾಡುವುದನ್ನು ವ್ಯವಸ್ಥಿತವಾಗಿ ನಡೆಸಿಕೊಂಡರು. ಕೆಲವೊಂದು ಕಡೆಗಳಲ್ಲಿ ಕಲ್ಲುತೂರಾಟದಂತಹಾ ಘಟನೆ ನಡೆದಿದ್ದು, ಇದೆಲ್ಲಾ ಕಾಂಗ್ರೆಸ್, ಜೆಡಿಎಸ್ ಕುತಂತ್ರ ಎಂಬುವುದು ಆಮೇಲೆ ಬಯಲಾಯಿತು. ಆದರೆ ಇದನ್ನೆಲ್ಲಾ ಮೀರಿಯೂ ಪರಿವರ್ತನಾ ಯಾತ್ರೆ ಯಶಸ್ವಿಯಾಗುತ್ತಿರುವುದು ಕಾಂಗ್ರೆಸ್‍ಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕೆಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದೆ. ಇದುವರೆಗೆ 30 ದಿನಗಳ ಕಾಲ ಯಾತ್ರೆ ನಡೆದಿದ್ದು ಇನ್ನೂ 45 ದಿನಗಳ ಯಾತ್ರೆ ನಡೆಯಲಿದೆ. ಮೂವತ್ತು ದಿನಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಈ ಯಾತ್ರೆ ಮತ್ತಷ್ಟು ಭರವಸೆ ಹುಟ್ಟಿಸಿದೆ. ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವುದರಿಂದ ಈ ಪರಿವರ್ತನಾ ಯಾತ್ರೆ ಬಿಜೆಪಿಗೆ ಪ್ಲಸ್ ಆಗಿ ಪರಿಣಮಿಸಿದ್ದು, ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

-ಚೇಕಿತಾನ

Tags

Related Articles

Close