ಪ್ರಚಲಿತ

ಒಂದು ಮಸೀದಿ ಉರುಳಿಸಿದ್ದಕ್ಕೆ ಬೊಬ್ಬಿಡುವ ಬುದ್ಧಿಜೀವಿಗಳು 45000 ಹಿಂದೂ ದೇವಾಲಯಗಳ ಮೇಲಾದ ದಾಳಿಯನ್ನು ಯಾಕೆ ತೋರಿಸುತ್ತಿಲ್ಲ.?

“ಅಹಿಂಸೋ ಪರಮೋ ಧರ್ಮಃ” ಇದು ನಮ್ಮನ್ನು ಆಳುವ ಹಾಗೂ ಆಳಿಸಲು ಅವಕಾಶ ಮಾಡಿಕೊಟ್ಟ ಹಿರಿಯರ ಬಾಯಲ್ಲಿ ಸದಾ ಬರುತ್ತಿದ್ದ ಅಮೃತ ವಾಕ್ಯ. ನಾವು ಭಾರತೀಯರು, ಹಿಂಸೆಗಿಳಿಯಬಾರದು, ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕು ಎಂಬುವುದು ನಮ್ಮ ಹಿರಿಯರ ವಾದವಾಗಿತ್ತು. ಆದರೆ ಹೊರಗಿನಿಂದ ಬಂದ ಆಕ್ರಮಣಕಾರಿಗಳು ನಮ್ಮನ್ನು ಹಿಂಸಿಸಿದ್ದು ಮಾತ್ರವಲ್ಲದೆ ನಮ್ಮ ಅಸ್ತಿತ್ವವನ್ನೇ ನಾಶ ಮಾಡುವ ಹಂತಕ್ಕೆ ಬಂದಿದ್ದರು.

ಇದೀಗ ಭಾರತದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು ಎಂಬ ಸಂಕಲ್ಪ ಹಾಗೂ ಹೋರಾಟವನ್ನು ನಡೆಸಲಾಗುತ್ತಿದೆ. ಇದು ಅದೆಷ್ಟೋ ವರ್ಷಗಳ ಹೋರಾಟವಾಗಿದೆ. ಕೆಲ ರಾಜಕೀಯ ಡೊಂಬರಾಟಗಳಿಂದ ಸ್ಥಗಿತವಾಗಿದ್ದ ಶ್ರೀರಾಮ ಮಂದಿರ ಈ ಬಾರಿ ಮತ್ತೆ ಎದ್ದು ಇತಿಹಾಸವನ್ನು ಸೃಷ್ಟಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಆದರೆ ದಾಸ್ಯದ ಸಂಕೇತವಾಗಿದ್ದ ಅಯೋಧ್ಯೆಯಲ್ಲಿದ್ದ ಬಾಬರ್ ಮಸೀದಿಯನ್ನು ಕೆಡವಿದ್ದ ಸಂಭ್ರಮದ ಇತಿಹಾಸ ಇಂದು ಹಲವಾರು ಮಂದಿಗೆ ಉರಿ ಇಟ್ಟಹಾಗಾಗಿದೆ.

1992ರಲ್ಲಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನೇತೃತ್ವದ ಸರ್ಕಾರ ಇತ್ತು. ಈ ಸಂದರ್ಭದಲ್ಲಿ ಸಣ್ಣ ಶೆಡ್ ಒಂದರಲ್ಲಿ ಪೂಜಿಸುತ್ತಿದ್ದ ಶ್ರೀ ರಾಮನ ದರ್ಶನಕ್ಕಾಗಿ ಲಕ್ಷಾಂತರ ಕರಸೇವಕರು ಅಯೋಧ್ಯೆಗೆ ತೆರಳಿದ್ದರು. ಅದಾಗಲೇ ಪಕ್ಕಾ ಯೋಜನೆ ಹಾಕಿಕೊಂಡು ತೆರಳಿದ್ದ ಈ ಕರಸೇವಕರು ಒಂದೇ ಒಂದು “ಹೂಂ”ಕಾರಕ್ಕೆ ದಾಸ್ಯದ ಸಂಕೇತವಾಗಿದ್ದ ಬಾಬರ್ ಮಸೀದಿ ಮೇಲೇರಿ ಮಸೀದಿಗಳ ಗುಮ್ಮಟವನ್ನು ಒಡೆದು ಹಾಕಿ ಅದೆಷ್ಟೋ ವರ್ಷಗಳ ಕಾಲದಿಂದ ಹಿಂಸೆ ನೀಡುತ್ತಿದ್ದ ಮಸೀದಿಯನ್ನು ನೆಲಕ್ಕುರುಳಿಸಿದ್ದರು.

ಆದರೆ ಇದನ್ನು ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರದ ಪ್ರಧಾನಿ ಪಿವಿ ನರಸಿಂಹ ರಾವ್ ಸರ್ಕಾರ ಸಹಿಸಲಿಲ್ಲ. ಉತ್ತರ ಪ್ರದೇಶದ ಪೊಲೀಸರಿಗೆ ಆದೇಶ ನೀಡುತ್ತೆ. ಕರಸೇವಕರ ಮೇಲೆ ಗುಂಡು ಹಾರಿಸಿ ಎಂದು ಆದೇಶ ನೀಡುತ್ತೆ. ಆದರೆ ಉತ್ತರ ಪ್ರದೇಶದ ರಾಮಭಕ್ತ ಪೊಲೀಸರು ಗುಂಡು ಹೊಡೆಯಲು ಹಿಂದೇಟು ಹಾಕುತ್ತಾರೆ. ಇದನ್ನು ಕಂಡ ಕೇಂದ್ರ ಸರ್ಕಾರ ಭಾರತೀಯ ಸೈನ್ಯಕ್ಕೆ ಆದೇಶ ನೀಡುತ್ತೆ. ಆದರೆ ಭಾರತೀಯ ಸೈನ್ಯವೂ ರಾಮಭಕ್ತರ ಮೇಲೆ ಗುಂಡು ಹೊಡೆಯಲು ಹಿಂದೆ ಜಾರುತ್ತೆ. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಡೋ-ಟಿಬೆಟ್ ಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೈನಿಕರನ್ನು ತಂದು ಕರಸೇವಕರ ಮೇಲೆ ದಾಳಿ ನಡೆಸುತ್ತೆ. ಅನೇಕ ಕರಸೇವಕರು ಸ್ಥಳದಲ್ಲೇ ಅಸುನೀಗುತ್ತಾರೆ.

ಅಲ್ಲಿಂದ ಆರಂಭವಾಗಿದ್ದೇ ಬುದ್ಧಿಜೀವಿಗಳ, ಮಾಧ್ಯಮಗಳ, ನಕಲಿ ಜಾತ್ಯಾತೀತವಾದಿಗಳ, ಇತಿಹಾಸಕಾರರ, ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧ ಇರುವ ರಾಜಕೀಯ ಪಕ್ಷಗಳ ದಾಳಿಯ ಆಟ. ಅಲ್ಪಸಂಖ್ಯಾತರ ಶ್ರದ್ಧಾಕೇಂದ್ರವಾಗಿದ್ದ ಬಾಬರೀ ಮಸೀದಿ ಧ್ವಂಸಗೊಳಿಸಿದ ಹಿಂದೂಗಳು ಎಂದೆಲ್ಲಾ ದಾಳಿಯ ಸುರಿಮಳೆಗೈದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಹಿಂದೂಗಳಿಗೆ ಈವರೆಗೆ ಯಾವ ನ್ಯಾಯವೂ ಸಿಕ್ಕೇ ಇಲ್ಲ. ಇಂದಿಗೂ ರಾಮಮಂದಿರ ಎನ್ನುವುದು ಕನಸಾಗಿಯೇ ಉಳಿದಿದೆ.

ಆತ್ಮೀಯ ಓದುಗರೇ, ಸ್ವತಂತ್ರ್ಯ ಭಾರತದಲ್ಲಿ ನಾವು ಕಾಣುವಂತಹಾ ವಿಪರ್ಯಾಸವೇನು ಗೊತ್ತಾ? ಯಾವ ಪುಣ್ಯ ಸ್ಥಳದಲ್ಲಿ ಪುಣ್ಯ ಪುರುಷ ಶ್ರೀರಾಮ ಜನ್ಮ ತಾಳಿದನೋ ಆ ಸ್ಥಳದಲ್ಲಿದ್ದ ಶ್ರೀರಾಮನ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣವಾದಾಗ ತುಟಿ ಬಿಚ್ಚದ ಯಾವೊಬ್ಬ ರಾಮಭಕ್ತನಲ್ಲದ ವ್ಯಕ್ತಿಗಳು ಯಾವಾಗ ಬಾಬರೀ ಮಸೀದಿ ಧರೆಗುರುಳಿತೋ ಅಂದು ಚೀರಾಡತೊಡಗಿದರು. ಮುಸ್ಲಿಮರಿಗಿಂತಲೂ ಹೆಚ್ಚಾಗಿ ಹಿಂದೂ ನಾಸ್ತಿಕವಾದಿಗಳ, ಬುದ್ಧಿಜೀವಿಗಳ, ನಕಲಿ ಜಾತ್ಯಾತೀತ ಮಾನವವಾದಿಗಳ ಅಟ್ಟಹಾಸ ತಾರಕಕ್ಕೇರುತ್ತೆ. ಹಿಂದೂಗಳಿಗೆ ಹಿಂದೂಗಳೇ ಮಾರಕವಾಗಿಬಿಡುತ್ತಾರೆ. ಅಂದಿನಿಂದ ಇಂದಿನವರೆಗೂ ಶ್ರೀರಾಮ ಜನ್ಮಭೂಮಿ ಮತ್ತೆ ಅದೇ ಸ್ಥಿತಿಯಲ್ಲಿದೆ.

ಇಂದಿಗೂ ಒಂದು ಮಸೀದಿಯನ್ನು ಧ್ವಂಸಗೊಳಿಸಿದ ಹಿಂದೂಗಳ ಬಗ್ಗೆ ಈ ಸಮಾಜ ಇಷ್ಟೊಂದು ಚೀರಾಡುತ್ತಿದ್ದರೂ ಒಂದೇ ಒಂದು ಮಂದಿರಗಳ ಬಗ್ಗೆ ಇತಿಹಾಸ ತಜ್ಞರು ಅಥವಾ ಬುದ್ಧಿಜೀವಿಗಳು ಮಾತನಾಡುತ್ತಿಲ್ಲ. ಭಾರತಕ್ಕೆ ಆಕ್ರಮಣಕಾರಿಗಳಾಗಿ ಬಂದು ಭಾರತವನ್ನು ಲೂಟಿಗೈದಿದ್ದ ಟಿಪ್ಪು, ಘಜ್ನಿ, ಖಿಲ್ಜಿ, ಘೋರಿ, ಔರಂಗಜೇಬ್ ಸಹಿತ ಅದೆಷ್ಟೋ ಇಸ್ಲಾಂ ಮತಾಂಧರು ಹಿಂದೂ ಧರ್ಮದ ಸಾವಿರಾರು ದೇವಾಲಯವನ್ನು ಕಡೆವಿ ಹಾಕಿದ್ದರು. ಸಿಕ್ಕ ಸಿಕ್ಕ ದೇವಾಲಯಗಳನ್ನು ಕೆಡವಿ ಹಾಕುವುದರ ಮೂಲಕ ವಿಕೃತಿಯನ್ನು ಮೆರೆದಿದ್ದರು. ಬೇಲೂರು, ಹಳೆಬೀಡು, ಕೊಡಗು-ಮಡಿಕೇರಿ, ಮಂಗಳೂರು, ಕಾಸರಗೋಡು ಸಹಿತ ಅನೇಕ ಸ್ಥಳಗಳಲ್ಲಿ ಟಿಪ್ಪುವಿನ ಅಟ್ಟಹಾಸಕ್ಕೆ ಬಲಿಯಾದ ದೇವಾಲಯಗಳಿವೆ.

ಹಿಂದೂ ಸಾಮ್ರಾಜ್ಯದ ದೊರೆಗಳು ಭವ್ಯವಾಗಿ ನಿರ್ಮಾಣ ಮಾಡಿದ್ದ ದೇವಾಲಯಗಳನ್ನು ಕೆಡವಿದ್ದ ಮತಾಂಧರು ನಾಶಪಡಿಸಿದ್ದು ಮಾತ್ರವಲ್ಲದೆ ನಾಶಪಡಿಸಲಾಗದ ದೇವಾಲಯಗಳ ಮೂರ್ತಿಗಳನ್ನು, ಹೊರಭಾಗದಲ್ಲಿರುವ ಶಿಲ್ಪಗಳ ಆಕಾರವನ್ನು ವಿಕಾರಗೊಳಿಸಿದ್ದರು. ಈ ಮೂಲಕ ಹಿಂದೂ ಧರ್ಮದ ವಿರುದ್ಧ ಇದ್ದ ತಮ್ಮ ನಂಜನ್ನು ಕರಗಿಸಿಕೊಳ್ಳುತ್ತಿದ್ದರು. ಒಂದಲ್ಲಾ ಎರಡಲ್ಲಾ, ಬರೋಬ್ಬರಿ 45000ಕ್ಕೂ ಅಧಿಕ ದೇವಾಲಯಗಳು ಹಾಗೂ ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ಭಗ್ನಗೊಳಿಸಿದ್ದರು ಭಾರತಕ್ಕೆ ಆಗಮಿಸಿದ್ದ ಆಕ್ರಮಣಕಾರಿಗಳು.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬುದ್ಧಿಜೀವಿಗಳು ಕೇವಲ ಒಂದೇ ಒಂದು ಬಾಬರೀ ಮಸೀದಿ ಧ್ವಂಸಗೊಳಿಸಿದ್ದಕ್ಕೆ ಬೊಬ್ಬಿಡುತ್ತಿದ್ದಾರೆ. ಈವರೆಗೂ ಬಾಬರೀ ಮಸೀದಿಯೇ ಮತ್ತೆ ಅಲ್ಲಿ ನಿರ್ಮಾಣ ಆಗಬೇಕು ಎಂದಿದ್ದ ಡೋಂಗಿಗಳು ಇದೀಗ ಹಿಂದೂಗಳ ಆಕ್ರೋಶವನ್ನು ಮನಗಂಡು ವಿವಾದಿತ ಪ್ರದೇಶದಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ. ಅಲ್ಲಿ ಆಸ್ಪತ್ರೆ ಅಥವಾ ಶಿಕ್ಷಣ ಸಂಸ್ಥೆ ನಿರ್ಮಾಣವಾಗಲಿ ಎಂದು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಕೋಟ್ಯಾಂತರ ಭಕ್ತರು ಅನೇಕ ವರ್ಷಗಳಿಂದ ಕಾತರದಿಂದ ಕಾಯುತ್ತಿರುವ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕೆಂದು ಯಾವೊಬ್ಬ ಬುದ್ಧಿಜೀವಿಯಿಂದಲೂ ಹೇಳಿಕೆ ಬರುತ್ತಿಲ್ಲ.

ಮಸೀದಿಗೆ ಮಿಡಿದ ಬುದ್ಧಿಜೀವಿಗಳ ಮನ ಮಂದಿರಕ್ಕೆ ಮಿಡಿಯಲಿಲ್ಲ, ಆಕ್ರಮಣಕಾರಿ ಬಾಬರ್ ಗೆ ಮಿಡಿದ ಪ್ರೀತಿ ಶ್ರೀರಾಮನಿಗೆ ಮಿಡಿಯಲಿಲ್ಲ, ಮಸೀದಿ ಬೇಕೆಂದ ಕೆಲವೇ ಸಂಖ್ಯೆಯಷ್ಟರ ಕೂಗಿಗೆ ಕರಗಿದ ಮನ ಕೋಟ್ಯಾಂತರ ರಾಮಭಕ್ತರಿಗೆ ಕರಗಲಿಲ್ಲ. ರಾಮ ಮಂದಿರ ಇಂದಿಗೂ ಕನಸಾಗಿಯೇ ಉಳಿದಿದೆ. ಈಗಲೂ ಸಾವಿರಾರು ದೇವಾಲಯಗಳಿಗೆ ನಿರಂತರ ಹೋರಾಟ ನಡೆಯುತ್ತಿದೆಯಾದರೂ ಹಿಂದೂ ಸಂಘಟನೆಗಳ ಹೊರತಾಗಿ ಬೇರಾವ ಸಂಘಟನೆಗಳೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಯಾಕೆಂದರೆ ದೇಶಕ್ಕೆ ನೆಂಟರಾಗಿ ಆಗಮಿಸಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಬೇಕೆಂದು ಪಣ ತೊಟ್ಟಿರುವ ಮುಸಲ್ಮಾನರಿಗೆ ನೋವಾದರೆ.? ಹೀಗೆ ನಮ್ಮ ದೇಶದ ಸಹಿಷ್ಣುತೆಯ ಕಥೆ ಹೇಳುತ್ತಾ ಹೋದರೆ ಮುಗಿಯುವ ಸಾಧ್ಯತೆ ಕಡಿಮೆ. ಆಕ್ರಮಣಕಾರಿಗಳು ಅಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದಾಗ ಬೆಂಬಲ ಕೊಟ್ಟವರ ಸಂತಾನಗಳು ಇಂದು ಭಾರತೀಯರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿವೆ. ಆದರೂ ಭಾರತದಲ್ಲಿನ ಆಡಳಿತದ ಬದಲಾವಣೆಯಿಂದ ಈ ಬಾರಿ ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತೆ ಎಂಬ ವಿಶ್ವಾಸದಲ್ಲಿ ಕೋಟ್ಯಾಂತರ ಹಿಂದೂಗಳಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close