ಅಂಕಣ

ಒಬ್ಬ ಮೋದಿ v/s ಭ್ರಷ್ಟಾಚಾರ ವ್ಯವಸ್ಥೆ! ಮೋದಿ ಯುಗದಲ್ಲಿ ಮಾಧ್ಯಮಕ್ಕಾದ ಯಾರೂ ಹೇಳದ ಭೀಕರ ಸೋಲು!!

ಎನ್‍ಡಿಟಿವಿಯ ವಿವಾದಾತ್ಮಕ ಪತ್ರಕರ್ತನೆಂದು ಹೆಸರುವಾಸಿಯಾಗಿರುವ ಶ್ರೀನಿವಾಸನ್ ಜೈನ್ ಇದೀಗ ಸುದ್ದಿಯಲ್ಲಿದ್ದಾರೆ!! ಟ್ವಿಟರ್ ಮೂಲಕ ಪ್ರಧಾನಿ ಮೋದಿಯನ್ನು ತೆಗಳಲು ಮುಂದಾಗಿರುವ ಈತ ಇದೀಗ ವ್ಯಾಪಕವಾಗಿ ಹಾಸ್ಯಾಸ್ಪದಕ್ಕೆ ಒಳಗಾಗಿರುವುದು ಮಾತ್ರ ವಿಪರ್ಯಾಸ!! ದುರುದ್ದೇಶಪೂರ್ವಕವಾದ ಟ್ವಿಟರ್‍ನಲ್ಲಿ, “ಪ್ರಧಾನಿಮೋದಿಯವರು ಟ್ವೀಟ್‍ನ್ನು ಅನುಸರಿಸಿದ್ದಕ್ಕಾಗಿ ಎಲ್ಲ ಮಾಧ್ಯಮಗಳು ಒಟ್ಟಾಗಿ ಬಹಿಷ್ಕರಿಸಬೇಕು” ಎಂದು ಟ್ವೀಟ್ ಮಾಡಿರುವ ಶ್ರೀನಿವಾಸನ್ ಜೈನ್ ಇದೀಗ ಸುದ್ದಿಯಲ್ಲಿದ್ದಾರೆ!! ಶ್ರೀನಿವಾಸ್ ಭ್ರಮೆಯಲ್ಲಿದ್ದಾರೋ ಏನೋ ಗೊತ್ತಿಲ್ಲ, ಆದರೆ ಕೇಂದ್ರದಲ್ಲಿ ನರೇಂದ್ರಮೋದಿ ಅಧಿಕಾರ ಸ್ವೀಕರಿಸಿದ ನಂತರ ಮುಖ್ಯವಾಹಿನಿಗಳು ಮೇಲುಗೈ ಸಾಧಿಸಲು ಒತ್ತಡುತ್ತಿದ್ದು, ಇದೀಗ ಶ್ರೀನಿವಾಸನ್ ಜೈನ್ ಮೋದಿಯವರನ್ನು ಶೋಷಣೆ ಮಾಡಲು ಯತ್ನಿಸಿ, ತನ್ನನ್ನು ತಾನೇ ನಗೆಕಡಲಿನತ್ತ ಗುರಿ ಮಾಡಿಸಿಕೊಂಡಿದ್ದಾರೆ!!

ಹೌದು… ತನ್ನದೇ ಆದ ವಿಚಾರಧಾರೆಯನ್ನು ಮುಂದಿಟ್ಟು ಪ್ರಧಾನಿಯನ್ನು ತೆಗಳುವ ಪಂಗಡಕ್ಕೆ ಸೇರಿದವರಲ್ಲಿ ಶ್ರೀನಿವಾಸ್ ಜೈನ್ ಒಬ್ಬರು!! ಅಷ್ಟೇ ಅಲ್ಲದೇ,
ಇವರೊಂದಿಗೆ ಕೆಲ ಪತ್ರಕರ್ತರು ಇವರ ಬೆಂಬಲಕ್ಕೆ ನಿಂತಿದ್ದು, ಮೂರ್ಖ ಪ್ರಪಂಚದಲ್ಲಿ ವಾಸಿಸುತ್ತಿರುವ ಬುದ್ದಿಗೇಡಿಗಳಾಗಿದ್ದಾರೆ!! ಅಲ್ಲದೇ, ಮುಖ್ಯವಾಹಿನಿಯಲ್ಲಿರುವ ಸೋ ಕಾಲ್ಡ್ ಪ್ರವಚನಕಾರರು ತಾವೇ ತಮ್ಮನ್ನು ಮೇಧಾವಿಗಳು ಎಂದುಕೊಂಡಿದ್ದಾರೋ ಗೊತ್ತಿಲ್ಲ!! ವ್ಯಂಗ್ಯವೆಂದರೆ, ಒಬ್ಬ ವ್ಯಕ್ತಿ ತನ್ನ ಸಾಮಥ್ರ್ಯ ಏನು ಎಂಬುವುದನ್ನು ತೋರಿಸಿಕೊಳ್ಳಲು ಮಾಧ್ಯಮವನ್ನು ಅಸ್ತ್ರವಾಗಿ ಬಳಸುವುದು ಎಷ್ಟರಮಟ್ಟಿಗೆ ಸಮಂಜಸ!! ಇವರೆಲ್ಲಾ ಏನೋ ಮಾಡುತ್ತಿದ್ದಾರೆ ಗೊತ್ತೆ? ಮಂದಮತಿಯುಳ್ಳ ವ್ಯಕ್ತಿಗಳನ್ನು ಹೀರೋ ಎಂದು ಬಿಂಬಿಸಿ, ಆತನಿಂದ ಒಂದಷ್ಟು ಹಣವನ್ನು ಸುಲಿಗೆ ಮಾಡುವ ಜಾತಿ ಇವರದ್ದು!! ಇವರನ್ನು ಕಿಡಿಕೇಡಿಗಳು ಎಂದರೆ ತಪ್ಪೇ??!!

2014ರ ಸಾರ್ವತ್ರಿಕ ಚುನಾವಣೆಯ ನಂತರ ಕೆಲ ಮಾಧ್ಯಮಗಳು ಮುಖ್ಯ ವಿಷಯಗಳತ್ತ ಮಾತ್ರ ಕೇಂದ್ರಿಕೃತವಾಗಿರಿಸಿಕೊಂಡಿದೆ!! ಧಾರ್ಮಿಕ ಅಸಹಿಷ್ಣುತೆಯನ್ನು ಎತ್ತಿತೋರಿಸುತ್ತಿರುವ ಇವರು, ಅಕ್ಲಾಕ್ ಮತ್ತು ಜುನೈದ್ ಎಂಬುವವರು ಗೋಮಾಂಸವನ್ನು ಸೇವಿಸುವುದಕ್ಕಾಗಿ ಅವರನ್ನು ಬಂಧಿಸಲಾಯಿತು. ಆ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಆಕ್ರಮಣ ಮಾಡುತ್ತಿದೆ ಎನ್ನುವ ಮಾಹಿತಿಯನ್ನು ವ್ಯಾಪಾಕವಾಗಿ ಸಾಮಾಜಿಕತಾಣದಲ್ಲಿ ಹಬ್ಬಿಸಿಯೇ ಬಿಟ್ಟರು!! ಅಲ್ಲದೇ, ಹೊಸ ಸರಕಾರ ಬಂದ ನಂತರ ಕೋಮು ಪ್ರೇರಿತ ಅಪರಾಧಗಳು ಹೆಚ್ಚಾಗಿ ಹೋಗುತ್ತಿದೆ ಎನ್ನುವ ಮಾಹಿತಿಗಳನ್ನು ವ್ಯಾಪಾಕವಾಗಿ ಹಬ್ಬಿಸಿದ್ದಾರೆ. ಆದರೆ ನಿಜಾಂಶವೇ ಬೇರೆ, ಹೊಸ ಸರಕಾರ ಆಡಳಿತಕ್ಕೆ ಬಂದ ನಂತರ ಕೋಮು ಪ್ರೇರಿತ ಆರೋಪಗಳು ಕಡಿಮೆಯಾಗುತ್ತಿದ್ದಲ್ಲದೇ, ಕ್ಷುಲಕ ಕಾರಣಕ್ಕೆ ಆಗುತ್ತಿದ್ದ ಚರ್ಚ್‍ದಾಳಿಯು ಕಡಿಮೆಯಾಗಿದೆ!! ಆದರೆ ಗೋಕಳ್ಳರಿಗೆ ಬಿಸಿತುಪ್ಪದಂತೆ ಪರಿಣಮಿಸಿದ್ದು, ಗೋಕಳ್ಳ ಸಾಗಟನೆ, ಇನ್ನಿತರ ಅವ್ಯವಹಾರಗಳು ಹೊರಹೊಮ್ಮಿದವು!! ವಿಪರ್ಯಾಸ ಎಂದರೆ ಬಲಪಂಥೀಯರ ವಿಚಾರಗಳನ್ನು ವಿರೋಧಿಸುತ್ತಾ, ಮಾಧ್ಯಮಗಳು ತನ್ನ ವಿಶ್ವಾಸಾರ್ಹತೆಗೆ ಭಾರೀ ಧಕ್ಕೆಯನ್ನುಂಟು ಮಾಡಿದೆ!!

ದಲಿತರನ್ನು ಮುಂದಿಟ್ಟುಕೊಂಡು ಅದೆಷ್ಟು ಎಡಪಂಥೀಯರು ತಮ್ಮ ಬೇಳೆ ಬೇಯಿಸಿಕೊಂಡದನ್ನು ನಾವು ತಿಳಿದಿದ್ದೇವೆ!!! ಆದರೆ ಈ ಹಿಂದೆ ನಡೆದ, ಆತ್ಮಹತ್ಯೆಗೆ
ಶರಣಾದ ರೋಹಿತ್ ವೆಮುಲನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆತ ಆತ್ಮಹತ್ಯೆ ಮಾಡಿಕೊಂಡ ಪತ್ರಗಳನ್ನು ಮರೆಮಾಚಿ, ಆತನನ್ನು ದಲಿತ ಎಂದು ಮಾಡಿ ಬಿಟ್ಟರು ಈ ಮಾಧ್ಯಮದ ಬುದ್ದಿಜೀವಿಗಳು!! ಈ ಬಗ್ಗೆ ಸಂಸತ್ತಿನಲ್ಲಿ ಸ್ಮøತಿ ಇರಾನಿ ಕೆಂಡಾ ಮಂಡಲವಾಗಿದ್ದು, ಈಬಗ್ಗೆ ಒಳ್ಳೆಯ ನಿರೂಪಣೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಅದೆಷ್ಟೋ ದಲಿತರು ಬಿಜೆಪಿಯತ್ತ ವಾಲಿದ್ದರೂ ಕೂಡ. ತದನಂತರದಲ್ಲಿ ಇದೆಲ್ಲಾ ಎಡಪಂಥೀಯರ ಸಂಚು ಎಂದು ತಿಳಿದು ಬಂದಿರುವುದು ಮಾತ್ರ ನಿಜ!!

ಅಷ್ಟೇ ಅಲ್ಲದೇ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದ ಯುವಕ ಕನ್ಹಯ್ಯ ಕುಮಾರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಈ ಮಾಧ್ಯಮಗಳು ಏನು ಮಾಡಿದವು ಗೊತ್ತೆ!! ಈ ದೇಶ ವಿರೋಧಿಯನ್ನು ಮಾಧ್ಯಮಗಳು ಹಿರೋ ಎಂದು ಬಿಂಬಿಸಿಯೇ ಬಿಟ್ಟರು!! ಅಷ್ಟೇ ಅಲ್ಲದೇ ನಮ್ಮ ಗೌರಕ್ಕ ತನ್ನ ಮಗನ ರೀತಿ ಅವನನ್ನು ತನ್ನ ಮನೆಗೆ ಕರೆದು ಊಟ ಉಪಚಾರಗಳನ್ನು ಮಾಡುತ್ತಿದ್ದರು!! ದೇಶ ವಿರೋಧಿಗಳನ್ನು ಬೆಂಬಲಿಸಿದವರಿಗೆ ಈ ಮಾಧ್ಯಮದವರು ನಾಯಕನ ಪಟ್ಟವನ್ನಿರಿಸಿ ದೇಶ ಪ್ರೇಮಿ ಎನ್ನುವಷ್ಟರ ಮಟ್ಟಿಗೆ ಅವರನ್ನು ಹೋಗಳಿದ್ದೇ ಹೊಗಳಿದ್ದು!!

ಅನಾಣ್ಯೀಕರಣವನ್ನು ಪ್ರಕಟಿಸಿದಾಗ, ಈವರ್ಗದ ಪತ್ರಕರ್ತರು ಪ್ರಧಾನಿಮೋದಿಯವರ ಬಗ್ಗೆ ಅಪಪ್ರಚಾರ ಮಾಡಲು ಮುಂದಾದರೂ………

ತಮ್ಮನ್ನು ತಾವೇ ಸರ್ವಶ್ರೇಷ್ಠರು ಎಂದೆನಿಸಿದ ಮಾಧ್ಯಮಗಳು ಏನು ಮಾಡಿದರು ಗೊತ್ತೇ?? ಮೋದಿ ಸರಕಾರದ ಅನಾಣ್ಯೀಕರಣದ ಬಗ್ಗೆ ವಿರೋಧಗಳನ್ನೇ ಪಟ್ಟಿ ಮಾಡಿದರೇ ಹೊರತು ಇದರಿಂದ ಆಗುವ ಬದಲಾವಣೆಯ ಬಗ್ಗೆ ತಿಳಿಸಿದ್ದೇ ಇಲ್ಲ!! ಅದರ ಬದಲು ಎಂದಿನಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನೆಯನ್ನು ನಡೆಸಿಯೇ ಬಿಟ್ಟರು!!! ಪ್ರತಿಭಟನೆಗಳು ನಡೆದರೂ ಕೂಡ ಬಿಜೆಪಿ ಮಾತ್ರ ಭಾರೀ ಮಟ್ಟದ ವಿಜಯವನ್ನು ಸಾಧಿಸಿತು!! ಆದರೆ ಈ ಒಂದು ವರ್ಗದ ಪತ್ರಕರ್ತರು ಮಾತ್ರ ಮೋದಿಯನ್ನು ತೆಗಳುತ್ತಾ, ಇಲ್ಲ ಸಲ್ಲದ ಆರೋಪಗಳನ್ನು ಹೊರೆಸುತ್ತಾ ಸಮಯ ಕಳೆದರೇ ಹೊರತು ನೈಜ್ಯತೆಗಳನ್ನು ತಿಳಿಸುವಲ್ಲಿ ಯಾವತ್ತೂ ಪ್ರಯತ್ನವೇ ಮಾಡಿಲ್ಲ!! ಅಷ್ಟೇ ಅಲ್ಲದೇ ತಮ್ಮನ್ನು ತಾವೇ ಮೇಧಾವಿಗಳೆಂದುಕೊಂಡರು ಈ ಬುದ್ದಿಜೀವಿಗಳು!!

ವಿಶ್ವಾಸಾರ್ಹತೆಗೆ ಭಾರೀ ಧಕ್ಕೆಯನ್ನು ಉಂಟು ಮಾಡಿದ ಈ ಮಾಧ್ಯಮಗಳು ನಕ್ಸಲರ ಮೇಲೆ ಸಹಾನುಭೂತಿಯನ್ನು ಹೊಂದಿದ್ದ ಗೌರಿ ಲಂಕೇಶ್‍ನ್ನು ಗುಂಡಿಕ್ಕಿ
ಕೊಂದಾಗ, ಆ ಸಂದರ್ಭದಲ್ಲಿ ನಕ್ಸಲರ ಮೇಲೆ ಯಾವುದೇ ರೀತಿಯ ಆರೋಪಗಳನ್ನು ಹೊರೆಸದೆ, ನೇರವಾಗಿ ಆ ಆರೋಪಗಳನ್ನು ಬಲಪಂಥೀಯರ ಮೇಲೆ
ಹಾಕಲ್ಪಟ್ಟು ತಮ್ಮ ನೈಪುಣ್ಯತೆಯನ್ನು ಮೆರೆದರು!! ಇದಲ್ಲದೇ, ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಪ್ರಸಿದ್ದ ದೇಶೀಯ ಪತ್ರಕರ್ತರು ಕೊಲ್ಲಲ್ಪಟ್ಟರು, ಆಗ ಇದೇ
ಮುಖ್ಯವಾಹಿನಿ ಮಾಧ್ಯಮಗಳು ತನ್ನ ಕಣ್ಣಿಗೆ ಕಪ್ಪು ಬಟ್ಟೆಯನ್ನು ಹಾಕಿತ್ತೋ ಏನೋ ಗೊತ್ತಿಲ್ಲ!! ಆದರೆ ದೇಶೀಯ ಪತ್ರಕರ್ತರ ಬಗ್ಗೆ ಈ ಬುದ್ದಿಜೀವಿಗಳು ಕಿಂಚಿತ್ತೂ
ಮಾಹಿತಿಯನ್ನು ಹೊರಹಾಕಿಲ್ಲ!! ಆದರೆ ಗೌರಿ ಲಂಕೇಶ್‍ನನ್ನು ಮಾತ್ರ ಒಬ್ಬ ಧೀಮಂತ ಮಹಿಳೆ ಎಂದು ಪ್ರಚಾರ ಮಾಡಿದರು!!

ಇದೀಗ ಈ ಬುದ್ದಿಜೀವಿ ಪತ್ರಕರ್ತರಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಸುಳ್ಳು ಸುದ್ದಿಯನ್ನು ಭಿತ್ತರಿಸುವಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ!!
ವಿಫಲತೆ ಹಾಗೂ ಸನ್ನಿಹಿತ ಆರ್ಥಿಕ ಕುಸಿತದ ವಿಚಾರವಾಗಿ ಬೊಬ್ಬಿರಿಯುವುದೇ ಇವರ ಕೆಲಸವಾಗಿದೆ!! ದೇಶಾದ್ಯಂತ, ಲಕ್ಷಾಂತರ ಜನರಲ್ಲಿ ಹೊಸ ಭರವಸೆ ಮತ್ತು ಉತ್ಸಾಹದ ಹೊಳಪನ್ನು ನೀಡುತ್ತಿರುವ ಸಿಎಂ ಆದಿತ್ಯನಾಥ್ ಅವರ ಮೇಲೆ ಹೊಟ್ಟೆ ಕಿಚ್ಚು ಆರಂಭವಾಗಿ ಹೋಗಿದೆ!! ಅದಕ್ಕಾಗಿ ಯೋಗಿ-ವಿರೋಧಿ ನಿರೂಪಣೆಯನ್ನು ಮುನ್ನಡೆಸುತ್ತಿರುವುದು ಮಾತ್ರ ಹಾಸ್ಯಾಸ್ಪದ!!

ಆದರೆ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ನಮಗೆಲ್ಲಾ ತಿಳಿದ ವಿಚಾರ!! ಆದರೆ ಈ ವರ್ಗದ ಪತ್ರಕರ್ತರು, ನಮ್ಮ ದೇಶದ ಆರ್ಥಿಕತೆ
ನಿಧಾನವಾಗಿ ಉತ್ತಮ ಸ್ಥಿತಿಗೆ ಸಾಗುತ್ತಿರುವ ಸಮಯದಲ್ಲಿ, ದೇಶವನ್ನೇ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಇವರಿಗೆ ಏನು ಹೇಳಬೇಕು!! ಇದೀಗ
ಭಾರತದಲ್ಲಿ ಆರ್ಥಿಕ ಬೆಳವಣಿಗೆಯು ನಿಧಾನಗತಿಯಲ್ಲಿ ಸಾಗುತ್ತಿದ್ದರೂ ಕೂಡ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ಸನ್ನು ಸಾಧಿಸುತ್ತಲೇ ಇದೆ!! ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಸುಧಾರಣೆಗಳು ನಡೆಯುತ್ತಿದ್ದು, ಭಾರತದಲ್ಲಿನ ಪ್ರಮುಖ ವಾಹನ ಉತ್ಪಾದಕರೂ ತಮ್ಮ ಮಾರಾಟದಲ್ಲಿ ಅತ್ಯಧಿಕ ಲಾಭಗಳಿಸಿರುವುದನ್ನು ದಾಖಲಿಸಿದ್ದಾರೆ. ಇದಲ್ಲದೇ ಪ್ರತಿ ಕುಟುಂಬಕ್ಕೆ ತಲುಪುವ ವಿದ್ಯುತ್, ಕೃಷಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸುಧಾರಣೆಗಳು, ಭಾರತದಲ್ಲಿ ಉತ್ತಮ ಬದಲಾವಣೆಯನ್ನು ಹೊಂದುವಲ್ಲಿ ಸಹಕಾರಿಯಾಗುತ್ತಿದೆ!!

ಆದರೆ ಎರಡು ವರ್ಷಗಳ ಹಿಂದೆಯೇ ಗಮನಿಸಿದಂತೆ ಮೋದಿ ಸರಕಾರದ ವಿರುದ್ದವಾಗಿ ಅಸಹಿಷ್ಣುತೆಯ ಅಭಿಯಾನವು, ಪ್ರಧಾನಿ ಮೋದಿಯತ್ತ ಅಸಹಜತೆಯ
ಪ್ರದರ್ಶನವಾಗಿದೆ!! ಚಹಾ ಮಾರಾಟ ಮಾಡಿದವರು ದೇಶದ ಪ್ರಧಾನಿ ಎಂದು ಹೀಯಾಳಿಸಿದರು ಇದೇ ಪತ್ರಕತ್ರಕರ್ತರು!! ಆದರೆ ವಂಶಪಾರಂಪರ್ಯದ ಆಡಳಿತದ ಬಗ್ಗೆ ಯಾವುದೇ ರೀತಿಯ ಹೇಳಿಯನ್ನು ನೀಡದೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಈ ಮಾಧ್ಯಮಗಳು!!

ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಉದ್ದೇಶಪೂರ್ವಕವಾಗಿಯೇ ಈ ಪತ್ರಕರ್ತರು, ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ಬಿಜೆಪಿಯನ್ನು ತೆಗಳುತ್ತಿದ್ದಾರೆ!! ಅಲ್ಲದೇ
ಸುದ್ದಿಗಳನ್ನು ತಿರುಚಿ ಅವುಗಳಿಗೆ ಹೊಸ ರೂಪಕೊಟ್ಟು ತಮ್ಮ ಇಚ್ಛೆಯಂತೆ ಅದಕ್ಕೆ ಬಣ್ಣ ಬಳಿಯುತ್ತಿದ್ದಾರೆ!! ಅಷ್ಟೇ ಅಲ್ಲದೇ, ದೇಶದ ಯಾವುದೇ ಭಾಗದಲ್ಲಿ ಮುಸ್ಲಿಮರು ಗಲಭೆಗೊಳಗಾದಾಗ ಮಾತ್ರ ದೊಡ್ಡ ಸುದ್ದಿಯೆಂದು ಬಿಂಬಿಸುತ್ತಾರೆ. ಆದರೆ ಆರ್.ಎಸ್.ಎಸ್ ಕಾರ್ಯಕರ್ತರ ಹತ್ಯೆಯಾದಾಗ ಮಾತ್ರ ಗಪ್‍ಚುಪ್ ಇರುವ ಇವರು, ಅದೆಷ್ಟೋ ನಿಜಾಂಶವನ್ನೂ ಭಿತ್ತರಿಸುತ್ತಾರೋ ನಾ ಕಾಣೆ!!

ಆದರೆ ಶ್ರೀನಿವಾಸ್ ಜೈನ್ ಮೋದಿ ವಿರುದ್ದವಾಗಿ ಟ್ವೀಟ್ ಮಾಡಿದ್ದು ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿವೆ!! ಆದರೆ ಒಬ್ಬ ಪತ್ರಕರ್ತ ಯಾವತ್ತು ಏಕಸ್ವಾಮ್ಯತೆಯನ್ನು ಹೊಂದಿರುವುದಿಲ್ಲ. ಹಾಗೆಯೇ ಕ್ಯಾಮರಾದ ಎದುರಿಗೆ ಮಾತಾನಾಡುವ ವ್ಯಕ್ತಿ ಸುಳ್ಳನ್ನು ಹೇಳಿದರು, ಕ್ಯಾಮರ ಅದನ್ನೆ ತೋರಿಸುತ್ತೆ!! ಒಂದು ವೇಳೆ ಕ್ಯಾಮಾರ ಮಾತನಾಡುತ್ತಿದ್ದರೆ ಅದೇನೇನೂ ಆಗುತಿತ್ತೂ ಗೊತ್ತಿಲ್ಲ!! ಆದರೆ ಇಂಥವರ ನಕಲಿ ಮುಖ ಯಾವಾಗ ಬಯಲಾಗುತ್ತೋ ನಾ ಕಾಣೆ!!

ವಿಪರ್ಯಾಸ ಎಂದರೆ, ಈ ಪತ್ರಕರ್ತರು ಯಾವತ್ತೂ ಕೂಡ ತಮ್ಮ ವಿಶ್ವಾಸಾರ್ಹತೆಗೆ ಹಾನಿಯುಂಟಾಗುತ್ತದೆ ಎಂದು ಬಯಸಿದ್ದೇ ಇಲ್ಲ, ಮಾತ್ರವಲ್ಲದೇ ಅದನ್ನು
ಅರ್ಥಮಾಡಿಕೊಂಡಿದ್ದೂ ಇಲ್ಲ!! ಆದರೆ, ಇವರಿಗೆ ಗೊತ್ತಿರುವುದಾದರೂ ಏನು ಗೊತ್ತೇ?? ಕೇವಲ ಪ್ರಧಾನಿ ನರೇಂದ್ರ ಮೋದಿಯವರನ್ನು ಹೀಯಾಳಿಸುವ ಬುದ್ದಿ!!
ಆದರೆ ಸತತವಾದ ಸೋಲುಗಳ ನಂತರ ಅರವಿಂದ್ ಕೇಜ್ರಿವಾಲ್ ಅವರೇ ಮೋದಿಯನ್ನು ಅರ್ಥಮಾಡಿಕೊಂಡು, ಅವರ ವಿರುದ್ದ ಅಸಂಬದ್ದತೆಯ ಮಾತುಗಳನ್ನು, ಹೇಳಿಕೆಗಳನ್ನು ನೀಡುವುದನ್ನೇ ನಿಲ್ಲಿಸಿದರು ಎಂದರೆ, ಈ ಪತ್ರಕರ್ತರು ಅರವಿಂದ್ ಕೇಜ್ರಿವಾಲ್‍ಗಿಂತಲೂ ಮಂದಬುದ್ದಿಯವರೇ??

ಇವಿಷ್ಟೇ ಅಲ್ಲ, ಈ ಪತ್ರಕರ್ತರು ಕೇವಲ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಒಕ್ಕೂಟದ ಗೆಲುವುಗಳನ್ನು ಆಚರಿಸುತ್ತಾರೆ!! ಅಲ್ಲದೇ, ರಾಹುಲ್ ಗಾಂಧಿಯವರ ವಿದೇಶಿ
ಪ್ರವಾಸವನ್ನು ಮೆಚ್ಚುಗೆ ವ್ಯಕ್ತಪಡಿಸುವ ಇವರು ಮೋದಿಯವರ ಬಗ್ಗೆ ಮಾತ್ರ ಕಿಡಿ ಕಾರುವುದಾದರೂ ಯಾಕೆ? ಆದರೆ ಒಂದಂತೂ ನಿಜ 2019ರಲ್ಲಿ ಚುನಾವಣೆ
ನಡೆಯುವುದಕ್ಕಿಂತಲೂ ಮೊದಲು ಭಾರತದಲ್ಲಿನ ಶೇಕಡಾ 99ರಷ್ಟು ಮನೆಗೆ ವಿದ್ಯುತ್ ಸೌಲಭ್ಯಗಳನ್ನು, ಶೇಕಡಾ 90ರಷ್ಟು ಶೌಚಾಲಯಗಳನ್ನು, ಶೇಕಡಾ 87ರಷ್ಟು ಅಡುಗೆ ಅನಿಲ ಸೌಲಭ್ಯವನ್ನು ಪಡೆದುಕೊಳ್ಳುತ್ತಾರಲ್ಲದೇ, ಪ್ರತಿಯೊಬ್ಬರು ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರುತ್ತಾರೆ!! ಇಷ್ಟೆಲ್ಲಾ ಯೋಜನೆಗಳು
ನಡೆಯುತ್ತಿರಬೇಕಾದರೆ, ಭಾರತ ಅಭಿವೃದ್ದಿ ಶಿಖರದತ್ತ ತಲುಪುದು ಗ್ಯಾರಂಟಿ!! ಪತ್ರಕರ್ತರೇ ನೀವು ಇನ್ನಾದರೂ ನಿಮ್ಮ ಅಜ್ಞಾನದಿಂದ ಹೊರ ಬರುವಿರಾ??

– ಅಲೋಖಾ

https://rightlog.in/2017/10/prime-minister-modi-journalists-01/

Tags

Related Articles

Close