ಅಂಕಣಪ್ರಚಲಿತರಾಜ್ಯ

ಒಮ್ಮೆ ದೇವೆಗೌಡರು ಮೋದಿ ಎನಾದರೂ ಪ್ರಧಾನಿ ಅದರೆ ಕರ್ನಾಟಕ ಬಿಡುತ್ತೇನೆ ಎಂದವರು ಇಂದು ಮೋದಿ ಒಬ್ಬ ದೊಡ್ಡ ನಾಯಕ ಎನ್ನುತ್ತಾರೆ : ಕಾಲಯಃ ತಸ್ಮೈ ನಮಃ!!!

ಎಚ್.ಡಿ. ದೇವೇ ಗೌಡ!!!! ಭಾರತದ ಮಾಜಿ ಪ್ರಧಾನಮಂತ್ರಿ ದೇವೇಗೌಡರು 2014ರ ಲೋಕಸಭಾ ಚುನಾವಣೆಯ ಮುನ್ನ ಹೊಡೆದ ಬೊಂಬಾಟ್ ಡೈಲಾಗ್ ನೆನಪಿರಬಹುದು. `ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ಕರ್ನಾಟಕವನ್ನು ತೊರೆಯುತ್ತೇನೆ…’
2014ರ ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿ ಪಕ್ಷ ಪ್ರಧಾನಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿತು. ಇದಕ್ಕೆ ಮುಖ್ಯ ಕಾರಣವೆಂದರೆ ನರೇಂದ್ರ ಮೋದಿಯೊಬ್ಬರು ಮಹಾನ್ ಸಾಮಥ್ರ್ಯವಿರುವ ವ್ಯಕ್ತಿ, ಇವರಿಗಿರುವ ಜನಬೆಂಬಲ ಬೇರೆ ಯಾರಿಗೂ ಇರಲಿಕ್ಕೆ ಸಾಧ್ಯವಿಲ್ಲ. ಇವರು ಪ್ರತಿಸ್ಪರ್ಧಿಗಳಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಗೊತ್ತಿತ್ತು. ಅದರಂತೆ ನರೇಂದ್ರ ಮೋದಿ ಐತಿಹಾಸಿಕ ಗೆಲವು ಸಾಧಿಸಿ ಪ್ರಧಾನಿ ಗದ್ದುಗೆಯಲ್ಲಿ ಕೂತಿದ್ದಾರೆ.

ದೇವೇಗೌಡ ಮತ್ತು ಅವರ ಪಕ್ಷದವರಿಗೆ ಮೋದಿಯವರನ್ನು ದೂರುವುದೆಂದರೆ ಅದ್ಯಾಕೆ ಖುಷಿಯೋ ಗೊತ್ತಿಲ್ಲ. ಎಲ್ಲರಂತೆ ದೇವೇಗೌಡರೂ ಸಹ, `ನರೇಂದ್ರ ಮೋದಿ ಒಬ್ಬ ಕೋಮುವಾದಿ, 2002ರ ಗುಜರಾತ್ ಗಲಭೆಗೆ ಮೋದಿಯೇ ಕಾರಣ’ ಎಂದೆಲ್ಲಾ ಹೇಳಿದ್ದರು. ಅಲ್ಪಸಂಖ್ಯಾತರು ಭಾರತದಲ್ಲಿ ಭಯದಿಂದ ಬದುಕುತ್ತಿದ್ದಾರೆ, ಅಲ್ಪಸಂಖ್ಯಾತರ ಮೇಲೆ ಹಿಂದೂಗಳಿಂದ ದೌರ್ಜನ್‍ಯ ನಡೆಯುತ್ತಿದೆ ಎಂದು ತುತ್ತೂರಿ ಊದಿದ್ದರು. ತಮ್ಮನ್ನು ತಾವು `ಜಾತ್ಯತೀತ’ ಎಂದು ಕರೆಸಿಕೊಂಡು, ಮುಸ್ಲಿಮರು ತಮ್ಮನ್ನು ಬೆಂಬಲಿಸಬೇಕೆಂದು ಕೇಳಿಕೊಂಡು, ಅಲ್ಪಸಂಖ್ಯಾತ ಎಂಬ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಭಾರೀ ಜಬರ್ದಸ್ತಿನಿಂದ ಮಾಡುತ್ತಿದ್ದರು.

ಇದು ಬರೀ ದೇವೇ ಗೌಡರೊಬ್ಬರ ಕಥೆಯಲ್ಲ. ಕಾಂಗ್ರೆಸ್‍ನವರು, ಕೆಲವು ಮಾಧ್ಯಮದವರು, ಉದಾರವಾದಿಗಳು, ಬೌದ್ದಿಕ ಗುಂಪಿನಲ್ಲಿ ಗುರುತಿಸಿಕೊಂಡವರು, ಕೆಲವು ಸಾಹಿತಿಗಳು ಕೂಡಾ ಮೋದಿ ಚುನಾವಣೆಯಲ್ಲಿ ಗೆದ್ದರೆ ದೇಶ ಬಿಡುವುದಾಗಿ ಹೇಳಿದ್ದರು. ಒಬ್ಬನಂತೂ ಮೋದಿ ಒಂದು ವೇಳೆ ಪ್ರಧಾನಿಯಾದರೆ ದೆಹಲಿಯ ರಸ್ತೆಯಲ್ಲಿ ಬೆತ್ತಲಾಗಿ ನಡೆದುಕೊಂಡು ಹೋಗುತ್ತೇನೆ ಎಂದಿದ್ದ.

ಆದರೆ ಮೋದಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಎಲ್ಲರೂ ಗಪ್‍ಚಿಪ್. ದೇಶಬಿಟ್ಟು ಹೋಗುತ್ತೇನೆಂದವರು ದೇಶದಲ್ಲೇ ಉಳಿದರು. ಬೆತ್ತಲೆ ಹೋಗುತ್ತೇನೆಂದವನ ಬಾಯಿ ಬಂದ್! ಈ ರೀಇತಿ ಹೇಳಿಕೆ ನೀಡಿದವರು ತಾನು ಮೊದಲು ಏನು ಹೇಳಿದ್ದೆ ಎನ್ನುವುದನ್ನು ಮರೆತು ನಾಚಿಕೆ ಇಲ್ಲದೆ ಇನ್ನೂ ದೇಶದಲ್ಲೇ ಇದ್ದಾರೆ. ದೇವೇಗೌಡರಂತೂ ನಾನು ನನ್ನ ಮಾತನ್ನು ಮುರಿಯುವುದಿಲ್ಲ ಎಂದು ಹೇಳಿದ್ದರು. ವಿಪರ್ಯಾಸವೆಂದರೆ ದೇವೇಗೌಡರು ತನ್ನ ಮಾತನ್ನು ಮುರಿದುಕೊಂಡು ಇನ್ನೂ ಕರ್ನಾಟಕದಲ್ಲೇ ಉಳಿದುಕೊಂಡಿದ್ದಾರೆ.
ಮೋದಿಯ ವಿರುದ್ಧ ದೇವೇಗಾಡರು ಎಷ್ಟು ಹೇಳಿಕೆ ನೀಡಿದ್ದರು, ಎಷ್ಟು ಅವಮಾನಿಸಿದ್ದರೆಂದರೆ ಅದನ್ನು ಅರಗಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಆದರೆ ದೇವೇಗೌಡರು ತನ್ನ ವಿರುದ್ಧ ಎಷ್ಟೇ ಮಾತಾಡಿದರೂ ಪ್ರಧಾನಿ ಮೋದಿ ಮಾತ್ರ ಗೌಡರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥಾ ಒಂದೂ ಮಾತನ್ನು ಆಡಿಲ್ಲ. ಸ್ವತಃ ದೇವೇಗೌಡರು ನಾಚುವಷ್ಟು ಅವರಿಗೆ ಸಾಕಷ್ಟು ಗೌರವ ಕೊಟ್ಟರು ಮೋದಿ.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸರಕಾರವಿತ್ತು. ಆದರೆ ದೇವೇಗೌಡರು ಪ್ರಧಾನಿಯಾಗಿದ್ದವರು ಎಂಬ ಕಾರಣಕ್ಕೂ ಅವರನ್ನು ಗೌರವಿಸುತ್ತಿರಲಿಲ್ಲ. ಆದರೆ ಏಕರೂಪ ತೆರಿಗೆ ಪದ್ಧತಿ(ಜಿಎಸ್‍ಟಿ) ಜಾರಿಗೊಳ್ಳುವ ಸಂದರ್ಭ, ಸ್ವತಃ ದೇವೇಗೌಡರನ್ನು ಆಹ್ವಾನಿಸಿದ ಮೋದಿ ಅವರ ಪಕ್ಕದಲ್ಲೇ ಕುಳಿತು ಮಾಜಿ ಪ್ರಧಾನಿಯೊಬ್ಬನಿಗೆ ಗೌರವ ನೀಡಿದರು.

ಇನ್ನು ಮೋದಿಯವರನ್ನು ಕೀಳುಮಟ್ಟದಿಂದ ನಿಂದಿಸುತ್ತಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನ ಪುತ್ರ ಬೆಲ್ಜಿಯಂ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಮೋದಿ ಮುಂದಾಗಿ ಧಾವಿಸಿ ಸಹಾಯ ಹಸ್ತ ನೀಡಿದ್ದರೇ ಹೊರತು ಸ್ವತಃ ಕಾಂಗ್ರೆಸ್‍ನ ಒಬ್ಬ ಕೂಡಾ ಮುಂದೆ ಬಂದಿರಲಿಲ್ಲ. ಇದು ಬೇರೆ ಪಕ್ಷಗಳ ವರ್ತನೆಯನ್ನು ತೋರಿಸುತ್ತದೆ.

ಮೋದಿ ಒಬ್ಬ ದೊಡ್ಡ ನಾಯಕ: ದೇವೇ ಗೌಡ.

ದೇವೇಗೌಡರು ಅಂದು ಯಾವ ನಾಲಗೆಯಲ್ಲಿ ಮೋದಿಯವರನ್ನು ನಿಂದಿಸಿದ್ದರೋ ಅದೇ ನಾಲಗೆಯಿಂದ ಮೋದಿಯವನ್ನು ಹೊಗಳುತ್ತಿದ್ದಾರೆ. ನನಗೆ ಪ್ರಧಾನಿಯಾಗುವ ಹಂಬಲವಿಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ನನಗಿಂತ ದೊಡ್ಡ ನಾಯಕ ಎಂದು ಕೊಂಡಾಡಿದ್ದಾರೆ. ಮೋದಿಯವರ ವ್ಯಕ್ತಿತ್ವವನ್ನು ಅರಿತುಕೊಂಡ ದೇವೇಗೌಡರು ಕೊನೆಗೂ ಅವರ ಗಣನಡತೆಗೆ ತಲೆಬಾಗಿದ್ದಾರೆ.
ಪ್ರಧಾನಿ ಮೋದಿ ದೇವೇಗೌಡರನ್ನು ಅನೇಕ ಬಾರಿ ಕರೆಸಿ ಅವರ ಜೊತೆ ಮಾತುಕತೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದ ದೇವೇಗೌಡರಿಗೆ ಮೋದಿ ತನ್ನ ವ್ಯಕ್ತಿತ್ವದಿಂದಲೇ ಉತ್ತರ ನೀಡುತ್ತಿದ್ದಾರೆ. ಇಲ್ಲವಾದರೆ ಮೋದಿಯವರನ್ನು ನಿಂದಿಸುತ್ತಲೇ ಇದ್ದ ದೇವೇಗೌಡರು ಇಂದು ಅವರನ್ನು ನನಗಿಂತ ದೊಡ್ಡ ನಾಯಕ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ. ಕೊನೆಗೂ ಒಪ್ಪಿಬಿಟ್ಟರು ದೇವೇಗೌಡರು…!!!

ಚೇಕಿತಾನ

Tags

Related Articles

Close