ಮೊಘಲರ ವಂಶದಲ್ಲಿ ಅತೀ ಹೆಚ್ಚು ಸಮಯ ಆಳಿದಾತ ಔರಂಗಜೇಬನಾಗಿದ್ದ, ಆತ ಆಳಿದ ಶಾಸನಕಾಲದುದ್ದಕ್ಕೂ ಆತ ಹಿಂದುಗಳ ಮೇಲೆ ಅತ್ಯಚಾರ ಮಾಡುತ್ತಲೇ ಬಂದಿದ್ದ. ಆದರೆ ಸ್ವಾತಂತ್ರ್ಯಾನಂತರ ಮೊಗಲರ ಕುಕೃತ್ಯಗಳ ಬಗ್ಗೆ ಇತಿಹಾಸದಲ್ಲಿ ಬರೆದರೆ ಮುಸಲ್ಮಾನರ ಬಗ್ಗೆ ಹಿಂದುಗಳು ಸಿಟ್ಟಾಗಿಬಿಡ್ತಾರೆ ಅನ್ನೋ ಕಾರಣಕ್ಕೆ ಎಡಬಿಡಂಗಿ ಎಡಪಂಥೀಯ ಇತಿಹಾಸಕಾರರು ಮುಸ್ಲಿಂ ಆಕ್ರಮಣಕಾರರ ಬಗ್ಗೆ ಹೊಗಳಿ ಇತಿಹಾಸ ಬರೆದು ನೈಜ ಇತಿಹಾಸವನ್ನ ಭಾರತೀಯರಿಂದ ಮುಚ್ಚಿಟ್ಟರು.
ಮುಸ್ಲಿಂ ಆಕ್ರಮಣಕಾರರು ಹೇಗೆ ಈ ದೇಶದಲ್ಲಿರೋ ಹಿಂದುಗಳ ಮೇಲೆ ಅತ್ಯಾಚಾರ ಮಾಡಿದರು, ಹೇಗೆ ಬಲವಂತದಿಂದ ಮತಾಂತರ ಮಾಡಿದರು ಅನ್ನೋದನ್ನ ಇತಿಹಾಸದ ಪುಸ್ತಕಗಳಲ್ಲಿ ದಾಖಲಿಸಿದರೆ ಎಲ್ಲಿ ಮುಸ್ಲಿಮರು ತಮ್ಮ ಮೂಲದ ಬಗ್ಗೆ ಅರಿತು ರಾಮ, ಕೃಷ್ಣ, ವೇದಗಳ ಬಗ್ಗೆ ಅರಿತು ಮಾತೃಧರ್ಮದ ಕಡೆ ಹೊರಳಿಯಾರು ಎಂಬ ಮಾನಸಿಕತೆಯಿಂದ ನೈಜ ಇತಿಹಾಸವನ್ನ ಎಡಪಂಥೀಯ ಇತಿಹಾಸಕಾರರು ಬರೆಯಲೇ ಇಲ್ಲ.
ಔರಂಗಜೇಬನ ಇತಿಹಾಸದ ಬಗ್ಗೆ ಬರೆಯುವಾಗಲೂ ಇದೇ ನೀತಿಯನ್ನ ಅನುಸರಿಸಲಾಗಿತ್ತು.
ಔರಂಗಜೇಬ್ ತನ್ನ ಶಾಸನಕಾಲದಲ್ಲಿ ಪಾರಸಿ ಭಾಷೆಯಲ್ಲಿ ಹೊರಡಿಸಿದ್ದ ಫರಮಾನುಗಳ ಬಗ್ಗೆ ‘ಫ್ರಾನ್ಸಿಸ್ ಗ್ವಾಟಿಯರ್’ ಎಳೆಎಳೆಯಾಗಿ ಬಿಚ್ಚಿಟ್ಟು ಎಡಪಂಥೀಯ ಇತಿಹಾಸಕಾರರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಹಿಂದುಗಳನ್ನ ಹೇಗೆ ಬಲವಂತದಿಂದ ಇಸ್ಲಾಂ ಮತಕ್ಕೆ ಮತಾಂತರ ಮಾಡಲಾಯಿತು, ಹೇಗೆ ಹಿಂದೂ ಮಂದಿರಗಳನ್ನು ಧ್ವಂಸಗೊಳಿಸಲಾಯಿತು ಅನ್ನೋದನ್ನೂ
ಫ್ರಾನ್ಸಿಸ್ ತಿಳಿಸಿದ್ದಾರೆ.
ಔರಂಗಜೇಬ್ ಎಷ್ಟು ಮತಾಂಧನಾಗಿದ್ದನೆಂದರೆ ತಾನೇ ಅನಭಿಷಕ್ತ ದೊರೆಯಾಗಿರಬೇಕಂತ ತನ್ನ ಒಡಹುಟ್ಟಿದ ತಮ್ಮಂದಿರ ತಲೆಗಳನ್ನೇ ಕಡಿಸಿದ್ದ, ತನ್ನ ವಯೋವೃದ್ಧ ತಂದೆಯನ್ನೇ ಜೈಲಿನಲ್ಲಿಟ್ಟು ಚಿತ್ರಹಿಂಸೆ ಕೊಟ್ಟವನಾಗಿದ್ದ.
ಇಂಥವನಿಂದ ಹಿಂದೂ ಪ್ರಜೆಗಳ ರಕ್ಷಣೆಯಾಗಿತ್ತು ಅಂದರೆ ನಂಬಲು ಸಾಧ್ಯವೇ?
ಹಿಂದೂ ಮಂದಿರಗಳನ್ನ ಧ್ವಂಸಗೊಳಿಸೋಕೆ ಔರಂಗಜೇಬ್ ಹೊರಡಿಸಿದ ಕೆಲ ಫರ್ಮಾನುಗಳು ಹೀಗಿವೆ
1. 13 ಅಕ್ಟೋಬರ್ 1666, – ಹಿಂದೂ ಮಂದಿರಗಳೆಡೆಗೆ ಕಣ್ಣೆತ್ತಿ ನೋಡುವುದೂ ಇಸ್ಲಾಮಿನ ಪ್ರಕಾರ ನಿಷಿದ್ಧ, ತನ್ನ ತಮ್ಮ ದಾರಾ ಶಿಕೋ ಹಿಂದೂಗಳೆಡೆಗಿಟ್ಟಿರುವ ಪ್ರೀತಿ ಕೂಡ ಇಸ್ಲಾಮಿಗೆ ಹಾಗು ಮುಸಲ್ಮಾನರ ವಿರುದ್ಧವಾಗಿದೆ.
2. 12 ಸೆಪ್ಟೆಂಬರ್, 1667 – ಔರಂಗಜೇಬನ ಆದೇಶದ ಮೇರೆಗೆ ದೆಹಲಿಯ ಪ್ರಸಿದ್ಧ ಕಾಲಕಾಜಿ ಮಂದಿರವನ್ನ ಒಡೆದುಹಾಕಲಾಗಿತ್ತು.
3. 9 ಏಪ್ರಿಲ್, 1669 – ಮಿರ್ಜಾ ರಾಜಾ ಜಯಸಿಂಹನ ಮರಣದ ನಂತರ ಆತನ ರಾಜ್ಯದಲ್ಲಿರೋ ಎಲ್ಲಾ ಮಂದಿರಗಳನ್ನ ಒಡೆದುಹಾಕೋ ಆದೇಶವನ್ನ ಔರಂಗಜೇಬ್ ನೀಡಿದ್ದ, ಅಷ್ಟೇ ಅಲ್ಲದೆ ಆ ರಾಜ್ಯದಲ್ಲಿ ಪೂಜೆ ಪುನಸ್ಕಾರಗಳು ನಡೆಯದಂತೆ ನಿಷೇಧವನ್ನೂ ಹೇರಿದ್ದ. ನಂತರ ಕೇಶವ ದೇವರಾಯ ಮಂದಿರವನ್ನ ಧ್ವಂಸಗೊಳಿಸಿ ಅದೇ ಜಾಗದಲ್ಲಿ ಮಸೀದಿ ಕಟ್ಟಿಸಿದ್ದ. ಮಂದಿರದಲ್ಲಿದ್ದ ಮೂರ್ತಿಗಳನ್ನ ಮಸ್ಜಿದ್ ನ ಚಪ್ಪಲಿ ಬಿಡುವ ಸ್ಥಳಗಳಲ್ಲಿ ಹಾಕಲಾಗಿತ್ತು.
ಮಥುರೆಯ ಹೆಸರನ್ನ ಇಸ್ಲಾಮಾಬಾದ್ ಅಂತ ನಾಮಕರಣ ಮಾಡಿದ್ದ ಔರಂಗಜೇಬ್. ಇದರ ನಂತರ ಗುಜರಾತಿನ ಸೋಮನಾಥ ಮಂದಿರವನ್ನೂ ಇದೇ ಔರಂಗಜೇಬ್ ಧ್ವಂಸಗೊಳಿಸಿದ್ದ.
4. 5 ಡಿಸೆಂಬರ್, 1671 – ಔರಂಗಜೇಬ್ ಇಸ್ಲಾಮಿನ ಷರಿಯಾ ಕಾನೂನು ಜಾರಿಗೊಳಿಸಿದ್ದರಿಂದ ರಾಜಸ್ಥಾನದ ನಾಥದ್ವಾರಾ ಕೃಷ್ಣ ಮಂದಿರದಿಂದ ಶ್ರೀನಾಥ ಮೂರ್ತಿಯನ್ನ ಮೇವಾಡದ ಸಿಹಾದ್ ಗ್ರಾಮಕ್ಕೆ ಸ್ಥಳಾಂತರಿಸಿದ್ದರು. ಈ ಮೂರ್ತಿಯನ್ನ ನಾವು ಉಳಿಸಬೇಕಾದರೆ ಲಕ್ಷ ಜನ ರಜಪೂತ್ ಸೈನಿಕರು ಸನ್ನದ್ಧರಾಗಿಬೇಕು,ಸಮಯ ಬಂದರೆ ಪ್ರಾಣ ತೆತ್ತಾದರು ಶ್ರೀನಾಥ ಮೂರ್ತಿಯನ್ನ ಕಾಪಾಡಬೇಕು ಅಂತ ರಜಪೂತರು ನಿಶ್ಚಯಿಸಿಯಾಗಿತ್ತು.
5. 25 ಮೇ, 1679 – ಜೋಧಪುರದಿಂದ ಲೂಟಿ ಮಾಡಿ ತಂದಿದ್ದ ಮೂರ್ತಿಗಳನ್ನ ಜಾಮಿಯಾ ಮಸ್ಜಿದ್ ನ ಚಪ್ಪಲಿ ಬಿಡೋ ಸ್ಥಳದಲ್ಲಿ ಸಿಡಿ ರೂಪದಲ್ಲಿ ಹಾಕಿಬಿಡಿ, ಚಿನ್ನದ ಮೂರ್ತಿಗಳನ್ನ ಕರಗಿಸಿಬಿಡಿ ಅನ್ನೋ ಫರಮಾನನ್ನ ಔರಂಗಜೇಬ್ ಹೊರಡಿಸಿದ್ದ. ಚಾಚೂತಪ್ಪದೆ ಆತ ಸೈನಿಕರು ಅದನ್ನ ಪಾಲಿಸಿದ್ದರು ಕೂಡ.
6. 23 ಡಿಸೆಂಬರ್, 1679 – ಉದಯಪುರದ ಹತ್ತಿರದ ಮಹಾರಾಣಾ ಝೀಲ್ ತೀರದ ಹತ್ತಿರವಿದ್ದ ಮಂದಿರಗಳನ್ನ ಧ್ವಂಸಗೊಳಿಸಲಾಗಿತ್ತು. ಮಹಾರಾಣಾ ಪ್ರತಾಪರ ಮಹಲಿನ ಮುಂದಿದ್ದ ಜಗನ್ನಾಥ ಮಂದಿರವನ್ನ ಕೆಲವೇ ಕೆಲವು ರಜಪೂತ ಸೈನಿಕರು ಔರಂಗಜೇಬನ ವಿರುದ್ಧ ಕಾದಾಡಿ ರಕ್ಷಿಸಿದ್ದರು.
7. 22 ಫೆಬ್ರವರಿ, 1680 – ಚಿತ್ತೋಡಗಢದ ಮೇಲೆ ದಾಳಿ ನಡೆಸಿ ಮಹಾರಾಣಾ ಕುಂಭ ನಿರ್ಮಿಸಿದ್ದ 63 ಮಂದಿರಗಳನ್ನ ಔರಂಗಜೇಬ್ ಧ್ವಂಸಗೊಳಿಸಿದ್ದ
8. 1 ಜೂನ್, 1681 – ಪುರಿಯ ಪ್ರಸಿದ್ಧ ಜಗನ್ನಾಥ್ ಮಂದಿರವನ್ನ ಧ್ವಂಸಗೊಳಿಸೋಕೆ ಔರಂಗಜೇಬ್ ಆದೇಶಿಸಿದ್ದ
9. 13 ಅಕ್ಟೋಬರ್, 1681 – ಬುರಹಾನಪುರದಲ್ಲಿದ್ದ ಮಂದಿರವನ್ನ ಮಸೀದಿಯಾಗಿ ಪರಿವರ್ತಿಸಲು ಆದೇಶಿಸಿದ್ದ ಔರಂಗಜೇಬ
10. 13 ಸೆಪ್ಟೆಂಬರ್, 1682 – ಮಥುರೆಯ ಪ್ರಸಿದ್ಧ ನಂದ ಮಾಧವ ಮಂದಿರವನ್ನ ಧ್ವಂಸಗೊಳಿಸೋಕೆ ಔರಂಗಜೇಬ್ ಆದೇಶ ನೀಡಿದ್ದ.
ಹೀಗೆ ಹಿಂದೂ ಮಂದಿರಗಳನ್ನು ಧ್ವಂಸಗೊಳಿಸೋಕೆ ಔರಂಗಜೇಬ ಇನ್ನೂ ಹಲವಾರು ಹೊರಡಿಸಿದ್ದ ಫರಮಾನುಗಳು ಇತಿಹಾಸದಲ್ಲಿ ಕಾಣಸಿಗುತ್ತವೆ.
ಹಿಂದೂಗಳ ಮೇಲೆ ಅತ್ಯಾಚಾರ ನಡೆಸಿದ್ದ ಔರಂಗಜೇಬ್ 2 ಏಪ್ರಿಲ್, 1679 ರಲ್ಲಿ ಹಿಂದುಗಳ ಮೇಲೆ ಜಜಿಯಾ ಟ್ಯಾಕ್ಸ್ ಹೇರಿದ್ದ. ಇದರ ವಿರುದ್ಧ ದೆಹಲಿಯಲ್ಲಿ ಹಿಂದುಗಳು ಶಾಂತಿಯುತ ಹೋರಾಟ ನಡೆಸುತ್ತಿದ್ದಾಗ ತನ್ನ ಸೈನಿಕರ ಮೂಲಕ ಕ್ರೂರ ರೀತಿಯಿಂದ ಹೋರಾಟವನ್ನು ದಮನಗೊಳಿಸಿದ್ದ ಔರಂಗಜೇಬ.
ಇದರ ಜೊತೆಜೊತೆಗೆ 16 ಏಪ್ರಿಲ್, 1667 ರಲ್ಲಿ ದೀಪಾವಳಿಯನ್ನ ಆಚರಿಸುವುದರಬಾರದೆಂದೂ ಔರಂಗಜೇಬ್ ಫರಮಾನು ಹೊರಡಿಸಿದ್ದ. ತನ್ನ ರಾಜ್ಯದಲ್ಲಿದ್ದ
ಹಿಂದೂ ಕೆಲಸಗಾರರನ್ನ ಉಚ್ಛಾಟಿಸಿ ಅವರ ಜಾಗಕ್ಕೆ ಮುಸಲ್ಮಾನರನ್ನ ನೇಮಿಸಿಕೊಂಡಿದ್ದ.
ಶೀತಲ್ ಮಾತಾ, ಪೀರ್ ಪ್ರಭು ಜಾತ್ರೆಯಲ್ಲಿ ಹಿಂದುಗಳು ಸೇರಬಾರದೆಂಬ ಆದೇಶವನ್ನೂ ಔರಂಗಜೇಬ್ ಹೊರಡಿಸಿದ್ದ.
ಹಿಂದುಗಳು ಕುದುರೆ, ಅನೆ ಸವಾರಿ ಕಲಿಕೆಯ ಮೇಲೂ ಔರಂಗಜೇಬ್ ನಿಷೇಧ ಹೇರಿದ್ದ.
ಹಿಂದುಗಳು ಇಸ್ಲಾಮಿಗೆ ಮತಾಂತರವಾದರೆ ಪುರುಷರಿಗೆ 4 ರೂಪಾಯಿ ಹಾಗು ಸ್ತ್ರೀಯರಿಗೆ 2 ರೂಪಾಯಿಗಳನ್ನ ಕೊಡಲಾಗುತ್ತಿತ್ತು.
ಇಂಥ ಕುಕೃತ್ಯ ನಡೆಸಿದ್ದ ಹಾಗು ತಮ್ಮ ಪೂರ್ವಜರನ್ನ ಬಲವಂತವಾಗಿ ಮತಾಂತರ ಮಾಡಿದ್ದ ಔರಂಗಜೇಬನನ್ನ ಇಂದಿನ ಮುಸಲ್ಮಾನರು ಹಾಡಿ ಹೊಗಳೋದನ್ನ ನೋಡಿದರೆ ನಗು ಬರುತ್ತೆ.
“ಒಂದು ಸುಳ್ಳನ್ನ ಮುಚ್ಚಿಡೋದಕ್ಕೆ ಸಾವಿರ ಸುಳ್ಳು ಹೇಳಬೆಕಾಗುತ್ತೆ” ಅನ್ನೋ ಗಾದೆಯನ್ನೇ ನಮ್ಮ ಎಡಪಂಥೀಯ ಇತಿಹಾಸಕಾರರು ಪಾಲಿಸಿ ಔರಂಗಜೇಬನನ್ನ ಮಹಾನ್ ಸಹಿಷ್ಣುತಾವಾದಿ, ಹಿಂದುಗಳನ್ನ ಭೇದಭಾವವಿಲ್ಲದೆ ನೋಡಿಕೊಂಡಿದ್ದ ರಾಜನಾಗಿದ್ದ ಅಂತೆಲ್ಲ ಸುಳ್ಳು ಇತಿಹಾಸ ಬರೆದು ಭಾರತದ ನೈಜ ಇತಿಹಾಸವನ್ನ ತಿರುಚಿದ್ದಾರೆ.
ನೈಜ ಇತಿಹಾಸ ಹೊರಬರಬೇಕು, ಪಠ್ಯಪುಸ್ತಕಗಳಲ್ಲಿನ ಎಡಪಂಥೀಯರ ಸುಳ್ಳು ಇತಿಹಾಸ ಬದಲಾಗಬೇಕು.
Ref:
1) ಫ್ರಾನ್ಸಿಸ್ ಗ್ವಾಟಿಯರ್
2) ಕೊಯನಾರಡ್
ಎಲ್ಸ್ಟ್(Why Aurangzeb demolish the Kashi Vishwanth)
3) ಪ್ರೊ.ಬಿ.ಎನ್ ಪಾಂಡೆ (ಇತಿಹಾಸದ ಜೊತೆ ನಡೆದ ಅನ್ಯಾಯ)
– Vinod Hindu Nationalist