ಪ್ರಚಲಿತ

ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡಾನ್ಸರ್ ಹಿಂದೆ ಓಡಿದ ಪ್ರಕಾಶ್ ರೈಯಂತಹವನು ಮೋದಿ – ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ??!

48K Shares

ಏನಪ್ಪಾ ರೈ! ಬದುಕಲ್ಲೇನಾದರೂ ತೊಂದರೆ ಆಗ್ತಿದೆಯಾ?! ಮಾನಸಿಕ ಸ್ಥಿತಿ ಸರಿಯಿದೆಯಲ್ಲವಾ?!

ನಂಗ್ಯಾಕೋ ಗುಮಾನಿ ಗುರೂ! ನಿನ್ನ ಇತ್ತೀಚೆಗಿನ ಹುಚ್ಚಾಟ ನೋಡಿದರೆ, ಮಾಧ್ಯಮದವರ ಮೈಕಿನ ಮುಂದೆ ಕೂಲಿಂಗ್ ಗ್ಲಾಸ್ ಏರಿಸಿ ಪೆದ್ದು ಪೆದ್ದಾಗಿ ನಗುವ ನಿನ್ನನ್ನು ನೋಡುತ್ತಿದ್ದರೆ ನಿನ್ನಲ್ಲೇನೋ ಸಮಸ್ಯೆ ಇದೆ ಅಂತಲೇ ಎನ್ನಿಸುತ್ತಿದೆ! ನಿನ್ನ ನಾಲಿಗೆ ಹರಿಯ ಬಿಡುವ ರೀತಿ ನೋಡಿದರೆ ನಿನಗೆಲ್ಲೋ ಗೌರೀ ಲಂಕೇಶ್ ಳ ಪ್ರೇತ ಮೆಟ್ಟಿಕೊಂಡಿರಬೇಕು!

ನಿನ್ನ ತಿಕ್ಕಲು ಮನಸ್ಥಿತಿಗೆ ನನ್ನದೊಂದು ಧಿಕ್ಕಾರವಿದೆ ನೋಡು! ಆದರೂ, ನೀ ಎಂತಹ ಹುಳವೆಂದು ಸಮಾಜದೆದುರಿಗೆ ತೆಗೆದಿಟ್ಟಿದ್ದಕ್ಕೆ ಅಷ್ಟೇ ಹೊಗಳುತ್ತೇನೆ! ನಿನ್ನ ನರಿ ಬುದ್ಧಿಯೊಂದು ಮೈ ಮರೆಸಿ ಬಾಯಿಗೆ ಬಂದ ಹಾಗೆ ಬೊಗಳಿಸಿದಾಗ ‘ಬಡ್ಡೀ ಮಗನೇ’ ಎಂದೇ ನನ್ನ ಬಾಯಲ್ಲಿ ಹೊಗಳಿಕೆಯ ಉದ್ಗಾರವೊಂದು ಅರಿವಿಲ್ಲದೇ ಬಂತು ನೋಡು!

ಅವತ್ತು ರಾಜರಾಜೇಶ್ವರಿ ನಗರದಲ್ಲಿ ಗೌರಿ ಹತ್ಯೆಯಾಗುವ ತನಕ ನೀ ಯಾರ ಬೆಡ್ ರೂಮಲ್ಲಿದ್ದೆ ಎನ್ನುವುದೂ ಗೊತ್ತಿಲ್ಲದಿದ್ದ ಜನರೆದುರಿಗೆ ಅದೆಲ್ಲಿಂದ ಬಂದೆಯೋ! ಬಂದು ದೊಡ್ಡದಾಗಿ ‘ಕರ್ನಾಟಕದಲ್ಲಿ ಏನಾಗುತ್ತಿದೆ?! ಸೈದ್ಧಾಂತಿಕ ದ್ವೇಷಕ್ಕೆ ಹತ್ಯೆ ಯಾಕೆ ಮಾಡಬೇಕಿತ್ತು ಬಲಪಂಥೀಯರು’ ಎಂದ ರಭಸಕ್ಕೆ ಸಾಕ್ಷಾತ್ ಫೀನಿಕ್ಸ್ ಹಕ್ಕಿಯೇ ಅವತರಿಸಿದ ಹಾಗಾಗಿತ್ತು ನೋಡು! ನಿನ್ನ ಲೆಕ್ಕದಲ್ಲಿ ಏನಾಗುತ್ತಿದೆಯಪ್ಪ ಕರ್ನಾಟಕದಲ್ಲಿ? ಗೌರಿಯ ಹತ್ಯೆ ನಿನ್ನ ಹೃದಯದ ತಂತಿ ಮೀಟಿದ ರೀತಿಗೆ ನೀ ದಳದಳನೇ ಮಾಧ್ಯಮದೆದುರು ಅತ್ತು ಕರೆದು ಅಯ್ಯಯ್ಯೋ! ಗೌರಕ್ಕ ಹೋಗ್ಬಿಟ್ಲಲ್ರೋ! ಎಂದು ಬಿದ್ದು ಹೊರಳಾಡಿದ ನಟನೆ ಮಾತ್ರ ಸೂಪರ್ರು! ಅನ್ಯಾಯವಾಗಿ ಎಡಪಂಥೀಯರ ಹಾಟ್ ಫೇವರಿಟ್ಟಾದ ನಿನಗೆ ಮೋದಿ ಹಾಗೂ ಯೋಗಿಯ ಹೆಸರನ್ನೆತ್ತುವಷ್ಟು ನೈತಿಕತೆಯಿದೆಯಾ?!

ಏನಂದೆ ಗುರು?!

ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಒಂದು ವೀಡಿಯೋ ನೋಡಿದೆ! ಅದರಲ್ಲಿದ್ದುದು ಚೀಫ್ ಮಿನಿಸ್ಟರ್ರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು. ನನಗೆ 5 ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅವರ ನಟನೆ ನೋಡಿ ಅವನ್ನಷ್ಟೂ ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು! ನಾನೊಬ್ಬ ದೊಡ್ಡ ನಟ! ಅವರೆಲ್ಲ ನನಗಿಂತ ದೊಡ್ಡ ನಟರಾಗಲು ಯತ್ನಿಸುತ್ತಿದ್ದಾರೆ.”

ಅಬ್ಬಬ್ಬಾ! ಏನು ಕರತಾಡನ ಪ್ರಕಾಶಾ!

ಥೂ ನಿನ್ನ ಜನ್ಮಕ್ಕಿಷ್ಟು! ನಿನ್ನ ಸಿದ್ಧಾಂತಗಳ, ವಿಚಾರವಾದದ ತಳಹದಿಯ ಮೇಲೆ ನೀನು ಸಾಕ್ಷೀಕರಿಸುವ ನೈತಿಕತೆಯನ್ನು ಅಡವಿಟ್ಟು ತಾಕತ್ತಿದ್ದರೆ ನನ್ನದೊಂದಿಷ್ಟು ಪ್ರಶ್ನೆಗಳಿಗೆ ಉತ್ತರ ಕೊಡು ನೋಡೋಣ!

“ಕರ್ನಾಟಕದಲ್ಲೇನಾಗುತ್ತಿದೆ ಎಂದು ಪ್ರಶ್ನಿಸಿದ ನಿನಗೆ ಗೌರೀ ಲಂಕೇಶ್ ಹತ್ಯೆಯೊಂದೇ ಕಣ್ಣಿಗೆ ಬಿದ್ದದ್ದಾ?! ಯಾಕೆ?! ಪ್ರಶಾಂತ್ ಪೂಜಾರಿ, ಪ್ರವೀಣ್ ಪೂಜಾರಿ, ಶರತ್ ಮಡಿವಾಳ. . . ಇಂತಹವರ ಹತ್ಯೆ ಕಾಣದಿದ್ದಷ್ಟು ಕಾಮ ನಿನ್ನ ಕಣ್ಣನ್ನಾವರಿಸಿತ್ತಾ?!

ಯಾವುದೋ ಸುದ್ದಿ ವಾಹಿನಿಯ ನಿರೂಪಕಿಯೊಬ್ಬಳು ಕಾವೇರಿ ವಿಚಾರದಲ್ಲಿ ನಿನ್ನ ಅಭಿಪ್ರಾಯ ಕೇಳಿದ್ದೇ ನಿನ್ನ ಬೆಡ್ ರೂಮ್ ಸೀಕ್ರೆಟ್ ಏನು ಎಂದು ಕೇಳಿದವರ ರೀತಿ ಕೆಕ್ಕರಿಸಿ ಕೆಂಡವಾಗಿ ನಾನೊಬ್ಬ ನಟ, ನನ್ನನ್ನು ಇದಕ್ಕೆಲ್ಲ ಎಳೆದಯಬೇಡಿ ಎಂದು ಬಾಯಿಗೆ ಬಂದ ಹಾಗೆ ಆಕೆಗೆ ಬೈದು ಹೋದ ನೀನು ಅದೇ ತಮಿಳು ರೈತರ ಜೊತೆ ಬೀದಿಯಲ್ಲಿ ಕುಳಿತು ಸರಕಾರದ ವಿರುದ್ಧ ಹರಿಹಾಯ್ದಿದ್ದು ಗೊತ್ತೇ ಇದೆ ಮುಚ್ಚು! ನಿನಗೆ ಕಾವೇರಿ ವಿಚಾರದಲ್ಲಿ ಸತ್ಯವನ್ನೇ ಮಾತನಾಡಿದ್ದಿದ್ದರೆ ತಮಿಳರು ಅಟ್ಟಾಡಿಸಿ ಹೊಡೆಯುತ್ತಿದ್ದರೆಂಬ ಭಯಕ್ಕೆ ನಿನಗೆ ಕರ್ನಾಟಕದ ಕಾವೇರಿ ಸಂಬಂಧವಿಲ್ಲದಂತಾದಳಾ?

ಇನ್ನೂ ಏನಂದೆ?! ಭಾರತದ ಇವತ್ತಿನ ಪರಿಸ್ಥಿತಿಗೆ ಮೋದಿಗೆ ಮತ ಹಾಕಿದ ನಾವು ಮೂರ್ಖರಷ್ಟೇ ಎನ್ನುವ ಧಾಟಿಯಿಂದ ಮಾತನಾಡಿದಿರಲ್ಲ. . . ಯಾಕೆ?! ಮೋದಿ ಬಂದಿದ್ದೇ ನಿಮ್ಮ ಎಡಪಂಥೀಯರೆಲ್ಲ ಅಂಡು ಸುಟ್ಟ ಬೆಕ್ಕಿನಂತೆ ರಸ್ತೆಯಲ್ಲಿ ತಿರುಪೆ ಎತ್ತುವುದನ್ನು ನೋಡಲಿಕ್ಕಾಗದೇ ನಿನಗೂ ಉರಿ ಬಿತ್ತಾ?!

ವಿಚಾರವಾದಿಯ ಹತ್ಯೆಯಲ್ಲಿ ಪ್ರಶ್ನೆ ಮಾಡದೇ ಸುಮ್ಮನಿದ್ದ ಮೋದಿ ನಾಯಕನಲ್ಲ, ನಾಲಾಯಕ್ ಎಂದ ನಿನ್ನ ಕಮ್ಮಿನಿಷ್ಠೆಗೆ ಚಪ್ಪಲಿ ಹಾರ ಹಾಕಿದರೂ ಕಡಿಮೆಯೇ ಎನ್ನಿಸುತ್ತಿದೆ! ಒಬ್ಬ ಹಿಂದೂವಿನ ಹತ್ಯೆಯಾದಾಗ, ಒಬ್ಬ ಸೈನಿಕನ ಹತ್ಯೆಯಾದಾಗ ನಿನ್ನ ಇದೇ ಕಮ್ಯುನಿಷ್ಟ್ ಕುನ್ನಿಗಳು ಎಣ್ಣೆ ಹೊಡೆದು ಪಾರ್ಟಿ ಮಾಡಿ ಪಟಾಕಿ ಸಿಡಿಸಿದ್ದರಲ್ಲ, ಅವರೆಲ್ಲ ನಿನಗೆ ನಾಯಕರು ಅಲ್ಲವೇ?!

ಡೆಮೋಕ್ರಟಿಕ್ ಯೂತ್ ಫೆಡರೇಷನ್ ಎಂಬ ಪಕ್ಷಕ್ಕೆ ನಾನೇ ಮುಂಚೂಣಿಯಲ್ಲಿ ನಿಂತು ನಡೆಸುತ್ತೇನೆಂದ ನೀನು ಎಂತಹ ದೇಶದ್ರೋಹಿ ಎಂಬುದು ನಾನು ಹೇಳಲಾ?! ಇದೇ ನಿನ್ನ ದರಿದ್ರ DYFI ಕೇರಳದಲ್ಲಿ ರಾಜೇಶ್ ತಿರುವನಂತಪುರಮ್ ಎಂಬ ಕಾರ್ಯಕರ್ತನ ಹತ್ಯೆಗೈದಿದ್ದು ಎನ್ನುವುದು ಸಾಬೀತಾಗಿರುವಾಗ
ನೀನು ಈ ಪಕ್ಷವನ್ನು ಕೈ ಹಿಡಿದು ನಡೆಸುತ್ತೇನೆಂದು ಬಾಯಿ ಹರಿಬಿಟ್ಟೆಯಲ್ಲ! ಎಷ್ಟು ವರ್ಷದಿಂದ ಕೇರಳದ ದೇಶದ್ರೋಹಿ ಸಂಘಟನೆಗಳಿಗೆ ನೀ ಹಣಕಾಸಿನ ಸಹಾಯ ಮಾಡುತ್ತಿದ್ದೀಯ ತಂದೆ?

ನಿನಗೆ ಕೇರಳದ ಹಿಂದೂಗಳ ಹತ್ಯೆಯಾಗುವಾಗ ಮನುಷ್ಯತ್ವ ಉಕ್ಕಿ ಬರಲಿಲ್ಲವೇ? ಇದೇ ಎಡಪಂಥೀಯರು ಯಾಕೂಬ್ ಮೆಮೊನ್, ಅಫ್ಜಲ್ ಗುರುವಿನಂತಹ ಉಗ್ರರ ಪರ ದೇಶದ ವಿರುದ್ಧ ನಿಂತಾಗ ನಿನಗೆ ಯಾವುದೇ ಸಮಾಜವಾದವೂ ತಲೆಯಲ್ಲಿರಲಿಲ್ಲವೇ?!

ಸಾಯಲಿ ಬಿಡು! ಅದೂ ಬೇಡ! ನಿನ್ನ ವೈಯುಕ್ತಿಕ ಬದುಕನ್ನೊಮ್ಮೆ ನೋಡು! ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಅದ್ಯಾವುದೋ ಕೊರಿಯೋಗ್ರಾಫರ್ ಹಿಂದೆ ಜೊಲ್ಲು ಸುರಿಸುತ್ತಾ ಓಡಿದ ನಿನಗೆ ನಿನ್ನ ಮೊದಲ ಹೆಂಡತಿಗೆ ವಿಚ್ಛೇದನ ಕೊಡುವಷ್ಟೂ ಪುರುಸೊತ್ತಿಲ್ಲದಿರುವಷ್ಟು ಅರ್ಜೆಂಟಾಗಿತ್ತಲ್ಲವಾ?

ನೀನು ಮನುಷ್ಯತ್ವದ ಬಗ್ಗೆ ಮಾತನಾಡುವಾಗ ನಾನು ಬಿದ್ದು ಬಿದ್ದು ನಗುತ್ತೇನೆ! ಸಮಾಜದೆದುರಿಗೆ ಮನುಷ್ಯತ್ವದ ಬಗ್ಗೆ ಬೊಗಳೆ ಕೊಚ್ಚುವ ನೀನು, ನಿನ್ನ ಕುನ್ನಿಗಳ ಸಾವಿಗೆ ಏನಾಗುತ್ತಿದೆ ಎಂದು ಇದ್ದಕ್ಕಿದ್ದಂತೆ ಪ್ರಶ್ನಿಸಿ ಸಮಾಜ ಕಳಕಳಿ ಪ್ರದರ್ಶಿಸುವ ನಿನಗೆ ನಿನ್ನ ಮೊದಲನೇ ಹೆಂಡತಿ ‘ಲಲಿತಾ ಕುಮಾರಿ’ ಬಗ್ಗೆ ಯೋಚನೆಯೇ ಇರಲಿಲ್ಲ ಅಲ್ಲವೇ? ನಿನ್ನ ಮೊದಲನೇ ಹೆಂಡತಿಯ ಮಗು ಸತ್ತಾಗಲೂ ಅಳದ ನೀನು, ಮುಂಬೈನ ಕೊರಿಯೋಗ್ರಾಫರ್ “ಪೋನಿ ವರ್ಮಾಳ” ಬಾಹುಗಳಲ್ಲಿ ಬಂಧಿಯಾಗಿ ಮಗ ಸತ್ತು ವರ್ಷ ಕಳೆಯದರೊಳಗೆ ಲಲಿತಾ ಗೆ ವಿಚ್ಛೇಧನ ನೀಡಿ ಪೋನಿಳನ್ನು ಮದುವೆಯಾದೆ! ನಿನಗ್ಯಾವ ನೈತಿಕತೆ ಇದೆ ಮಾತನಾಡಲಿಕ್ಕೆ ಪ್ರಕಾಶ್?! ನಿನ್ನ ಮನುಷ್ಯತ್ವ ಇದೇನಾ?!

ಹೆತ್ತ ಮಗ ಸತ್ತಾಗಲೂ ಕಣ್ಣೀರಿಡದೇ ಹೊಸ ಮದುವೆಗೆ ಸಿದ್ಧವಾದ ನಿನಗೆ ಗೌರಿ ಹತ್ಯೆಯ ಸುದ್ದಿ ಕೇಳಿದ್ದೇ ಕಣ್ಣೀರ ಕಟ್ಟೆ ಒಡೆಯಿತೇನು?! ಅಥವಾ ಗ್ಲಿಸರಿನ್ ಇದೆ ಎಂದು ಜಾಸ್ತಿನೇ ಕಣ್ಣಿಗೆ ಬಿಟ್ಟುಕೊಂಡಿದ್ದೆಯಾ?!

ನೀನು ಕೇವಲ ಹಣಕ್ಕೋಸ್ಕರ ನಿನ್ನ ರೈ ಎನ್ನುವ ಹೆಸರನ್ನೇ ತೆಗೆದು ರಾಜ್ ಎಂದು ಬದಲಾಯಿಸಿದ್ದು ಎಂಬುದಾದರೂ ರಾಜ, ನಿಜಕ್ಕೂ ಹೇಳು, ನಿನ್ನ ರೈ ಎನ್ನುವ
ಹೆಸರನ್ನು ಕೇವಲ ಹಣಕ್ಕೋಸ್ಕರ ಬದಲಾಯಿಸಿದ್ದೋ ಅಥವಾ. . . . .?

ಅಲ್ವೋ ಪ್ರಕಾಶ! ನಾನೊಬ್ಬ ದೊಡ್ಡ ನಟ ಎಂದೆಯಲ್ಲವಾ?! ಒಪ್ಪಿಕೊಂಡಿರುವುದ್ಯಾರು?! ಸ್ವತಃ ನೀನಷ್ಟೇ! ಐದು ಸಲ ಬಂದಿರುವ ರಾಷ್ಟ್ರಪ್ರಶಸ್ತಿಗಳನ್ನೂ ಕೊಟ್ಟುಬಿಡೋಣ ಅನ್ನಿಸಿದೆಯೆಂದೆಯಲ್ಲ. ಯಾವಾಗ ನಿನ್ನ ಪ್ರಶಸ್ತಿ ವಾಪಾಸೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಲಿ ಹೇಳು!

ನನಗಿಂತ ದೊಡ್ಡ ನಟರಾಗಲು ಪ್ರಯತ್ನಿಸುತ್ತಿದ್ದಾರೆ ಎಂದೆಲ್ಲ ಲೊಟ್ಟೆ ಲುಸ್ಕು ಎಂದು ಹೇಳಿದೆಯಲ್ಲ, ನಿನ್ನಂತೆ ಸಮಾಜವಾದಿಯ ತರಹ ನಟನೆ ಮಾಡಿ ಬಿಟ್ಟಿ ಪ್ರಚಾರ ಗಳಿಸಲು ಮೋದಿಯಾಗಲೀ, ಯೋಗಿಯಾಗಲೀ ನೀನಲ್ಲ! ಓಹ್! ಸಾರಿ! ನಿನ್ನ ಹೊಲಸು ಬದುಕನ್ನು ಪವಿತ್ರವಾದ ಅವರ ಕಾಲ ಧೂಳಿಗೂ ಹೋಲಿಸಲು ಸಾಧ್ಯವಿಲ್ಲ!

ನೀನು ಕೇವಲ ಸಿನಿಮಾ ರಂಗದಲ್ಲಿಯಷ್ಟೇ ಒಳ್ಳೆಯ ನಟನೆಂದುಕೊಂಡಿದ್ದೆ ನಾನು! ಇವತ್ತು ನಿನ್ನ ಬದುಕಿನಲ್ಲಿಯೂ ನೀನೊಬ್ಬ ಒಳ್ಳೆಯ ನಟನೇ! ಹೌದೌದು! ನಿನಗಿಂತ ದೊಡ್ಡ ನಟ ಇರಲು ಚಾನ್ಸೇ ಇಲ್ಲ ಬಿಡು!

– ತಪಸ್ವಿ

48K Shares
Tags

Related Articles

Close