ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತು ಎಷ್ಟೊಂದು ಅರ್ಥಪೂರ್ಣವಾದ ಮಾತು ಅಲ್ಲವೇ!! ಈ ಮಾತು ಯಾಕೆ ಬಂತು ಎಂದರೆ ನಮ್ಮ
ಸಿದ್ದರಾಮಯ್ಯ ಸರಕಾರದ ಮಕ್ಕಳ ಪಠ್ಯಪುಸ್ತಕದಲ್ಲಿ ಅದೆಷ್ಟು ತಪ್ಪು ಹೇಳಿಕೆಗಳನ್ನು ಕಲಿಸಿಕೊಡುತ್ತೋ ಗೊತ್ತಿಲ್ಲ. ಯಾಕೆಂದರೆ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ಕಲಿಯಲಿ ಎಂದು ಶಾಲೆಗೆ ಕಲಿಸುತ್ತಿರಬೇಕಾದರೆ, ಪಠ್ಯಪುಸ್ತಕದಲ್ಲಿ ಹಿಂದೂ ಧರ್ಮವನ್ನು ತುಚ್ಛವಾಗಿ ಕಾಣುವ ಅಧ್ಯಾಯವನ್ನು ಹೇಳಿ ಕೊಡುತ್ತಿದೆ ಎಂದರೆ ನಂಬ್ತೀರಾ!!
ಹೌದು.. ಇದನ್ನು ನೀವು ನಂಬಲೇಬೇಕು. ಯಾಕೆಂದರೆ ಮಕ್ಕಳಲ್ಲಿ ದೇವರನ್ನು ಕಾಣುವ ಸಂಪ್ರದಾಯ ನಮ್ಮದು. ಹೀಗಿರಬೇಕಾದರೆ ಪಠ್ಯಪುಸ್ತಕದಲ್ಲಿ ಪುಟ್ಟ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಸುಳ್ಳು ಮಾಹಿತಿಯನ್ನು ಕಲಿಸಿಕೊಡುತ್ತೆ ಎಂದರೆ ಎತ್ತ ಸಾಗುತ್ತಿದೆ ನಮ್ಮ ಸರಕಾರ!! ಹಿಂದೂ ಸಂಪ್ರದಾಯ, ವಿಧಿ ವಿಧಾನಗಳು ಎಲ್ಲವೂ ಅದ್ಬುತ ಅದಕ್ಕಾಗಿ ಅದೆಷ್ಟೋ ವಿದೇಶಿಗರೇ ಆಕರ್ಷಿತರಾಗಿರಬೇಕಾದರೆ, ಹಿಂದೂ ಧಾರ್ಮಿಕ ಜೀವನದ ಬಗ್ಗೆ ಸುಳ್ಳು ಮಾಹಿತಿಯನ್ನು ಮಕ್ಕಳ ಮನಸ್ಸಿನಲ್ಲೂ ಭಿತ್ತರಿಸಲು ಯತ್ನಿಸುತ್ತಿದೆ ಎಂದನಿಸುತ್ತೆ.
ಅನ್ನದಾನ ಮಾಡುವ ಮಂದಿರಗಳ ನಿರ್ಮಾಣ ಮಾಡಿದ ತಪ್ಪಿಗೆ ಹಿಂದೂಗಳ ಮೇಲೆ ಹೊಸದೊಂದು ಆರೋಪಗಳು ಕರ್ನಾಟಕ ಸರಕಾರದ ಪಠ್ಯಪುಸ್ತಕದಲ್ಲಿ ಇದೆ ಎಂದರೆ, ತಿಳಿದುಕೊಳ್ಳಬೇಕಾದ ವಯಸ್ಸಿನಲ್ಲಿ ಪವಿತ್ರವಾದ ಹಿಂದೂ ಧರ್ಮವನ್ನು ದೋಷಿಸುವುದು ಎಷ್ಟರ ಮಟ್ಟಿಗೆ ಸರಿ.
ಯಜ್ಞಗಳಿಂದಾಗಿಯೇ ಹಸಿವು ಹೆಚ್ಚಿತೆಂಬ ಹೊಸ ಸಂಶೋಧನಾ ಪ್ರಬಂಧ ಆರನೇ ತರಗತಿಯ ಪಠ್ಯದಲ್ಲಿ ಇದೆ ಎಂದರೆ ಸಿದ್ದರಾಮಯ್ಯ ಅವರ ಯುಗದಲ್ಲಿ ಇನ್ನು
ಅದೇನೇನು ಕಲಿಯುವರೋ ಮಕ್ಕಳು ದೇವರೇ ಬಲ್ಲ… ಯಾಕೆಂದರೆ ಹಿಂದೂ ಧರ್ಮದಲ್ಲಿ ಯಜ್ಞಯಾಗಾಧಿಗಳ ಪವಿತ್ರವಾದ ಅರ್ಥವನ್ನು ತಿಳಿದುಕೊಳ್ಳದ ಮೂರ್ಖರು ಇಂತಹ ಮಾತನ್ನು ಹೇಳುವುದು ಸಹಜ ಎಂದೆನಿಸಿಸುತ್ತದೆ!! ಆದರೆ ಪುಟ್ಟ ಕಂದಮ್ಮಗಳ ಮುಗ್ಧ ಮನಸ್ಸಿನೊಳಗೆ ಹಿಂದೂ ಧರ್ಮದ ಬಗ್ಗೆ ವಿಷಬೀಜ ಬಿತ್ತುವುದು ಎಷ್ಟರ ಮಟ್ಟಿಗೆ ಸಮಂಜಸ?
ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿ ಧಾರ್ಮಿಕ ಜೀವನದ ಬಗ್ಗೆ ಬರೆದಿರುವ ಈ ಸಂಶೋಧನಾ ಪ್ರಬಂಧದಲ್ಲಿ ಯಾವರೀತಿ ಇದೆ ಎಂದರೆ, ” ಧಾರ್ಮಿಕ ಆಚರಣೆಗಳ ಸಂಕೀರ್ಣವೂ, ಕಠಿಣವೂ ಆದವು. ಯಾಗಯಜ್ಞಗಳ ಆಚರಣೆ ತೀವ್ರವಾಯಿತು. ಹಸಿವಿನ ಹೆಸರಲ್ಲಿ ಹಾಲು, ತುಪ್ಪ, ಧಾನ್ಯಗಳನ್ನು ಬೆಂಕಿಗೆ ಅರ್ಪಿಸುವುದು ಹೆಚ್ಚಾದಂತೆ ಆಹಾರದ ಬಿಕ್ಕಟ್ಟು ಉಲ್ಬಣಿಸಿತು. ಬ್ರಹ್ಮ, ವಿಷ್ಣು ಮತ್ತು ಶಿವ ಪ್ರಭಾವಿ ದೇವರುಗಳಾದರು. ಜೊತೆಗೆ ಲಕ್ಷೀ, ಸರಸ್ವತಿ, ಪಾರ್ವತಿ, ಗಣೇಶ, ಸ್ಕಂದ ಮೊದಲಾದ ಪರಿವಾರ ದೇವ-ದೇವತೆಗಳು ಪ್ರಾಮುಖ್ಯತೆಗೆ ಬಂದವು” ಎಂದು ಹಿಂದೂ ಧಾರ್ಮಿಕ ಜೀವನದ ಬಗ್ಗೆ ಹೇಳಲಾಗಿದೆ!!
ಯಾಗಯಜ್ಞಾದಿಗಳಿಂದ ಹಸಿವು ಹೆಚ್ಚಾಗಿದೆ ಎನ್ನುವ ಧೋರಣೆಯನ್ನು ಹೇಗೆ ಒಪ್ಪಿಕೊಳ್ಳೊದು ಸ್ವಾಮಿ. ಯಜ್ಞಯಾಗಾದಿಗಳನ್ನು ಬೆಂಕಿಗೆ ಹಾಕಿರುವುದರಿಂದ ಆಹಾರದ ಬಿಕ್ಕಟ್ಟು ಹೆಚ್ಚಾಗಿದೆ ಎನ್ನುವ ಮಾತು ಒಬ್ಬ ನಿಜವಾದ ಭಾರತೀಯ ಒಪ್ಪಿಕೊಳ್ಳಲಾರ!! ಯಾಕೆಂದರೆ ಯಜ್ಞಯಾಗಾದಿಗಳನ್ನು ಮಾಡುತ್ತಿದ್ದು ಎಲ್ಲರ ಸುಭಿಕ್ಷೆಗಾಗಿ, ಹಾಗಿರಬೇಕಾದರೆ ಸುಳ್ಳು ಮಾಹಿತಿಯನ್ನು ನೀಡಿದರೆ ಅದೇನು ಖುಷಿನೋ ನಿಮಗೆ, ದೇವರೇ ಬಲ್ಲ!!
ಈಗಾಗಲೇ ಮಕ್ಕಳ ಸಮಾಜ ಪುಸ್ತಕದಲ್ಲಿ ಮುಸಲ್ಮಾನ ಆಡಳಿತವನ್ನೇ ವೈಭವೀಕರಿಸಿ ಸುಳ್ಳು ಪೊಳ್ಳು ಮಾಹಿತಿಗಳನ್ನು ಇಂದಿನ ಪ್ರಜೆಗಳು ಎನಿಸಿದ ನಮಗೆ
ಕಲಿಸಿಕೊಟ್ಟಿತ್ತು ಮತ್ತು ಇಂದಿಗೂ ಕಲಿಸಿಕೊಡುತ್ತಲೇ ಇದೆ. ಅದರಲ್ಲಿ ಬ್ರಿಟಿಷರಿಂದಲೇ ನಮಗೆಲ್ಲಾ ಸೌಕರ್ಯಗಳು ಸಿಕ್ಕಿತು ಎನ್ನುವ ಮಾಹಿತಿಯೂ ಸಿಕ್ಕಿತ್ತು. ಇಂದಿನ ಪ್ರಜೆಗಳು ಎನಿಸಿದ ನಮಗೆ ಕರ್ನಾಟಕ ಪಠ್ಯಪುಸ್ತಕದಲ್ಲಿ ಕಲಿಸಿಕೊಟ್ಟಿದ್ದು ಪರಕೀಯರ ದಾಳಿಯನ್ನೇ… ಅಷ್ಟೇ ಅಲ್ಲದೇ ನಮ್ಮ ದೇಶವನ್ನು ಕೊಳ್ಳೆ ಹೊಡೆದ ಅದೆಷ್ಟೋ ಕ್ರೂರ ಮೃಗಗಳ ಬಗ್ಗೆ!! ಹೌದು… ಇಂದಿನ ಪ್ರಜೆಗಳು ಎನಿಸಿದ ನಮಗೆ, ನಮ್ಮ ಸಣ್ಣತರಗತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದರೆ, ನಮಗೆ ಗೊತ್ತಿದ್ದು ಗಾಂಧೀಜಿ, ಜವಹರಲಾಲ್‍ನೆಹರು ಹಾಗೂ ಇನ್ನಿತರ ಉನ್ನತ ಅಧಿಕಾರವನ್ನು ಪಡೆದಿದ್ದವರು!! ವಿಪರ್ಯಾಸ ಎಂದರೆ ನಮಗೆ ಆಗ ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಅಜಾದ್ ಹೆಸರುಗಳನ್ನು ಅಲ್ವಸ್ವಲ್ವವಾಗಿ ಉಲ್ಲೇಖಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ರಾಜಗುರ್, ಸುಖದೇವ್ ಯಾರು ಅಂತಲೇ ಗೊತ್ತಿರಲಿಲ್ಲ… ಆಗ ನಾವು ನಮ್ಮ ದೇಶವನ್ನು ತಿಳಿದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಬ್ರಿಟಿಷರ ಆಡಳಿತ ಹಾಗೂ ಮೊಘಲರನ್ನೇ ತಿಳಿದುಕೊಂಡಿದ್ದೇ ಹೆಚ್ಚು! ಆದರೆ ಭಾರತೀಯ ವೀರಾಧಿ ವೀರಾರ ಬಗ್ಗೆ ಎಲ್ಲಿಯೂ ಆ ಪುಟ್ಟ ವಯಸ್ಸಿನಲ್ಲಿ ಕೇಳಿಯೇ ಇರಲಿಲ್ಲ ಎನ್ನುವುದು ದೊಡ್ಡ ದೌರ್ಭಾಗ್ಯ!!! ಹಾಗಾದರೆ ದೇಶಪ್ರೇಮವನ್ನು ಹುಟ್ಟಿಸುವಂತಹ ಅಧ್ಯಾಯಗಳು ಯಾಕಿರಲಿಲ್ಲ??
ಇದೆನೆಲ್ಲಾ ನೋಡುವಾಗ ಕಾಂಗ್ರೆಸ್ ಸರಕಾರಕ್ಕೆ ಭಾರತದ ಸಂಸ್ಕøತಿಯನ್ನು ಮಕ್ಕಳಿಗೆ ತಿಳಿಸುವುದಕ್ಕಿಂತ ಹೆಚ್ಚಾಗಿ ಸುಳ್ಳುಪೊಳ್ಳು ಮಾಹಿತಿಯನ್ನು ಮಕ್ಕಳ
ಮನಸ್ಸಿನಲ್ಲಿ ಬಿತ್ತರಿಸುವುದೇ ಒಂದು ರೂಢಿ ಎಂದೆನಿಸುತ್ತೆ. ದೇಶಪ್ರೇಮವನ್ನು ಕಲಿಸುವ ಬದಲಾಗಿ ವಿಷಬೀಜವನ್ನು ಬಿತ್ತರಿಸುವ ಯೋಚನೆ ಯಾಕೆ? ಅಂದಹಾಗೆ,
ಕಾಂಗ್ರೆಸ್ಸಿನಲ್ಲಿ ಹಿಂದುಗಳು ಎನ್ನುವವರು ಯಾರೂ ಇಲ್ಲವೋ ಅಥವಾ ಕುರ್ಚಿಯ ಆಸೆಗೆ ಪರಂಪರೆಯನ್ನೇ ಮರೆತು ಕುಳಿತಿದ್ದಾರೋ ಹೇಗೆ? ನೀವೇ ಹೇಳಿ….
– ಅಲೋಖಾ