ಪ್ರಚಲಿತ

ಕನ್ನಡಿಗರ ಸ್ವಾಭಿಮಾನ ಕೆರಳಿಸಲು ಜೆಡಿಎಸ್ ಮಾಡಿದ ಕುತಂತ್ರವೇನು ಗೊತ್ತೇ?! ಸ್ಫೋಟಕ ಮಾಹಿತಿ ಬಹಿರಂಗ!!!

ಎಂತಹಾ ದುರ್ಬುದ್ಧಿ ಬಂತು ಈ ಜೆಡಿಎಸ್‍ಗೆ! ಬಿಜೆಪಿಯನ್ನು ಕೆಳಗಿಳಿಸಬೇಕೆಂದರೆ ಯಾವ ಸುಳ್ಳು ಹೇಳಲೂ ರೆಡಿ ಅನ್ನುತ್ತಾರೆ ಈ ಜನಗಳು..!!

ನವೆಂಬರ್ ಎರಡರಿಂದ ನವಕರ್ನಾಟಕ ನಿರ್ಮಾಣ ರಥಯಾತ್ರೆ ಪ್ರಾರಂಭವಾಗಲಿದೆ, ಹೀಗಾಗಿ ಎಲ್ಲಾ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಯಾತ್ರೆ
ಮುಗಿಯುವವರೆಗೂ ಬಿಜೆಪಿ ಪಕ್ಷದ ಬಾವುಟ ಹಾರಾಡಲಿ. ಇದು ಕಾರ್ಯಕರ್ತರ ಆತ್ಮ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಅಮಿತ್ ಷಾ ಇವರು ಪಕ್ಷದ ದ ಹುಮ್ಮಸ್ಸನ್ನು ಹೆಚ್ಚಿಸುವ ಸಲುವಾಗಿ ಇದನ್ನು ಹೇಳಿದ್ದರು.

ಇದನ್ನೇ ಪ್ರಯೋಜನ ಪಡೆದುಕೊಂಡ ಜೆಡಿಎಸ್ ಸುಖಾಸುಮ್ಮನೆ ಕಾಲ್ಕೆರೆದು ಜಗಳಕ್ಕೆ ಬರುವಂತಿದೆ. ಯಾಕೆ ಅಂದ್ರೆ… ಅಮಿತಾ ಷಾ ಹೇಳಿದ ಮಾತನ್ನು ಜೆಡಿಎಸ್ ತಿರುಚಿ ಹಾಕಿದೆ. ನವೆಂಬರ್ ಎರಡರಂದು ಹಾರಿಸಲಿರುವ ಧ್ವಜವನ್ನು ನವೆಂಬರ್ ಒಂದರಂದು ಅಮಿತ್ ಷಾ ರವರು ಬಿಜೆಪಿ ಧ್ವಜವನ್ನು ಹಾರಿಸುವಂತೆ ಹೇಳಿದ್ದಾರೆ ಎಂದು ಜೆಡಿಎಸ್ ದೂರುತ್ತಿದೆ. ಅದಲ್ಲದೆ ಬಿಜೆಪಿ ಹೇಳಿರುವಂತಹದ್ದು, ಬಿಜೆಪಿ ಧ್ವಜ ಹಾರಿಸಿ ಎಂದು ಅದರ ಬದಲು ನಮ್ಮ ಕರ್ನಾಟಕದ ಧ್ವಜವನ್ನು ಕೆಳಗಿಳಿಸಿ ಎಂದು ಹೇಳಿಲ್ಲ. ಯಾವತ್ತೂ ಬಿಜೆಪಿ ನಮ್ಮ ಕರ್ನಾಟಕದ ಧ್ವಜ ಇಳಿಸುವಂತೆ ಹೇಳಿಲ್ಲ…ಕರ್ನಾಟಕ ಧ್ವಜದ ಬಗ್ಗೆ ಅವರಿಗೆ ಅತ್ಯಂತ ಕಾಳಜಿ ಮತ್ತು ಗೌರವವಿದೆ.

ಆದರೆ ಇದೀಗ ಜೆಡಿಎಸ್ ಇದರ ಅನುಕೂಲವನ್ನು ಪಡೆದುಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ಪಕ್ಕಾ ರೆಡಿಯಾಗ್ತಿದೆ.
“ಧಮ್ ಇದ್ರೆ ಒಂದೇ ಒಂದು ಕನ್ನಡ ಧ್ವಜ ಕೆಳಗಿಳಿಸಿ ನೋಡೋಣ. ಕರ್ನಾಟಕ ಯಾರಪ್ಪನ ಸ್ವತ್ತೂ ಅಲ್ಲಾ, ಕನ್ನಡಿಗನ ಸ್ವತ್ತು. ಕನ್ನಡಿಗರ ಭಾವನೆಗೆ ಬೆಲೆ ಕೊಡದೆ ನೀವೇನೂ ಮಾಡಲು ಸಾಧ್ಯವಿಲ್ಲ. ರಾಜ್ಯ ಧ್ವಜ ಕನ್ನಡಿಗರಿಗೆ ಭಾವನಾತ್ಮಕ ವಿಷಯ. ಇದಕ್ಕೇ ಬಡ್ಕೊಂಡಿದ್ದು ಅಧಿಕೃತ ರಾಜ್ಯ ಧ್ವಜ ಅಂತ ಇರುವ ಧ್ವಜ ತೆಗೆಸಿ ಅಂತಾ… ಯಾರೂ ಹೇಳಿಲ್ವಲ್ಲ ಎಂದ ಕನ್ನಡಿಗರೇ, ಎಲ್ಲಿ ಅವಿತಿದ್ದೀರಿ? ಈಗಲೆ ಇಷ್ಟು ದರ್ಪ!! ಇನ್ನು ಅಧಿಕಾರ ಸಿಕ್ಕಿ ಬಿಟ್ಟರೆ… ಕರ್ನಾಟಕದಿಂದ ಕನ್ನಡತನ ಅಳಿಸಿ ಹಾಕ್ತಾರೆ. ಈ ಅಹಂಕಾರಿಗಳ ವಿರುದ್ಧ ಚಳುವಳಿಯೇ ನಡೆದರೂ ಚಿಂತೆ ಇಲ್ಲಾ. ನಿಮಗೆ ಕನ್ನಡಿಗರ ವೋಟ್ ಬೇಕಿದ್ರೆ, ಕನ್ನಡಿಗರ ಭಾವನೆಗೆ ಬೆಲೆ ಕೊಡಿ. ಕನ್ನಡತನ ಅಂದ್ರೆ ಯಾವನಾದ್ರೂ ಅಷ್ಟೆ.. ಕನ್ನಡಿಗರೇ ನಿಮ್ಮ ಸ್ವಾಭಿಮಾನ, ಆತ್ಮ ಗೌರವನ್ನು ಮಾರಿಕೊಳ್ಳಬೇಡಿ. ಪರಭಾಷಿಗರ ಗುಲಾಮರಾಗಬೇಡಿ ಎಚ್ಚೆತ್ತುಕೊಳ್ಳಿ” ಅಂತಾ ಹಲವು ಕಡೆಗಳಲ್ಲಿ ಸುಮ್ಮನೆ ಬಿಜೆಪಿ ವಿರುದ್ಧ ಜೆಡಿಎಸ್ ಅಪಪ್ರಚಾರ ಮಾಡುತ್ತಿದ್ದಾರೆ.

ಜೆಡಿಎಸ್ ಪಕ್ಷ ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎನ್ನುವ ಉದ್ದೇಶದಿಂದ ವಾಮ ಮಾರ್ಗವನ್ನು ಹಿಡಿದಿದ್ದಾರೆ!!. ಅದಕ್ಕಾಗಿ ಜೆಡಿಎಸ್ ಪಕ್ಷದವರು ನಕಲಿ ಸುದ್ದಿಯನ್ನು ಹಬ್ಬಿಸಿ ಬಿಜೆಪಿಯ ಅಮಿತ್ ಷಾರನ್ನು ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್ ವಾಟ್ಸಪ್ ಗ್ರೂಪ್‍ಗಳಲ್ಲಿ ಕೆಲವು ಕಿಡಿಗೇಡಿಗಳು ನಕಲಿ ಸುದ್ದಿ ಹಬ್ಬಿಸಿದ್ದು ಇದೀಗಾಗಲೇ ವೈರಲ್ ಆಗಿದೆ. ಅದಲ್ಲದೆ ಜೆಡಿಎಸ್ ವಾಟ್ಸಪ್ ಗ್ರೂಪ್‍ಗಳಲ್ಲಿ ಕಳುಹಿಸಿದ ನಕಲಿ ಸುದ್ದಿ ಜೆಡಿಎಸ್ ಹೊರತು ಬೇರಾವ ಗ್ರೂಪ್‍ಗಳಿಗೆ ಕಳುಹಿಸಬಾರದು ಅಂತಾ ಉಲ್ಲೇಖಿಸಿದ್ದಾರೆ. ಅದರೆ ಇದೀಗ ಆ ನಕಲಿ ಸುದ್ದಿ ನಮ್ಮಲ್ಲಿ ಬಹಿರಂಗವಾಗಿದೆ.

ಕೇವಲ ಇದಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆದಿಚುಂಚನ ಗಿರಿಯಲ್ಲಿ ನಿರ್ಮಾಲಾನಂದ ಸ್ವಾಮೀಜಿಯನ್ನು ಭೇಟಿಯಾದಾಗ ಕಾಲ ಮೇಲೆ ಕಾಲು ಹಾಕಿ ಸ್ವಾಮೀಜಿಗೆ ಅಗೌರವ ತೋರಿಸಿದ್ದಾರೆ. ನಿರ್ಮಲಾನಂದ ಶ್ರೀಗಳು ಶೂದ್ರ ಸ್ವಾಮೀಜಿ ಆಗಿರುವ ಕಾರಣದಿಂದ ಈ ರೀತಿ ವರ್ತಿಸಿದ್ದಾರೆ ಅಂತಾ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಅಂದು ಬಿಜೆಪಿಯನ್ನು ಕೆಳಗಿಳಿಸಲು ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಆಪಾದನೆ ಮಾಡಿದ್ದಳು. ಇದು ಬಿಜೆಪಿಯನ್ನು ಕೆಳಗಿಳಿಸುವ ಪಕ್ಕಾ ಕುತಂತ್ರವಾಗಿತ್ತು. ಮತ್ತೆ ನಿರ್ಮಲಾನಂದ ಸ್ವಾಮೀಜಿಗಳು ಅಮಿತ್ ಷಾ ಅವರು ನನಗೆ ಅಗೌರವ ತೋರಿಸಿಲ್ಲ ಅಂತ ಹೇಳಿದ ಮೇಲೆ ಕಾಂಗ್ರೆಸ್ ತಣ್ಣಗಾಯಿತು. ಅದೇ ಸಮಯದಲ್ಲಿ ಒಕ್ಕಲಿಗ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಹುನ್ನಾರ ಮಾಡುತ್ತಿದೆ ಅಂತಾ ಆರೋಪವನ್ನೂ ಕಾಂಗ್ರೆಸ್ ಮಾಡಿತ್ತು. ಇದೀಗ ಮತ್ತೆ ಜೆಡಿಎಸ್ ಇದೇ ರೀತಿ ಬಿಜೆಪಿಯನ್ನು ಕೆಳಗಿಳಿಸುವ ಹುನ್ನಾರ ಮಾಡುತ್ತಿದೆ.

ಮುಂದಿನ ಜನ್ಮ ಅಂತ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ದೇವೇಗೌಡರ ಹೇಳಿಕೆ ಒಕ್ಕಲಿಗರಿಗೆ ಮಾಡಿರುವ ಅವಮಾನವಲ್ಲವೇ ಇದನ್ನೆಲ್ಲಾ ಯಾಕೆ ಜೆಡಿಎಸ್ ಅರ್ಥಮಾಡಿಕೊಳ್ಳುತ್ತಿಲ್ಲ? ನಿಮ್ಮ ಬೇಳೆ ಬೇಯಿಸಿಕೊಳ್ಳೋಕೆ ಬೇರೆಯವರನ್ನು ಯಾಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಸುತ್ತೀರಾ?

ಇಂತಹ ಪುಕ್ಕಟೆ ಹೇಳಿಕೆಗೆ ಯಾವತ್ತೂ ಜಗ್ಗದ ಬಿಜೆಪಿ, ರಾಜ್ಯಾಧ್ಯಕ್ಷ ಅಮಿತ್ ಷಾರವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಈಗ ಬಹಿರಂಗ ಸವಾಲ್ ಹಾಕಿದೆ…. “ತಾಕತ್ತಿದ್ದರೆ ಅಮಿತ್ ಷಾ ಕನ್ನಡ ಧ್ವಜ ಹಾರಿಸಬೇಡಿ ಎಂದು ಹೇಳಿರುವುದನ್ನು ಸಾಕ್ಷಿ ಸಮೇತ ದೃಢೀಕರಿಸಿ…ಯಾವುದೋ ವೆಬ್‍ಸೈಟ್‍ನ ಸುಳ್ಳು ಸುದ್ದಿಯನ್ನು ಇಟ್ಟುಕೊಂಡು ಹಾರಾಡುತ್ತಿರುವ ನಿಮಗೆ ನಾಚಿಕೆಯಾಗಬೇಕು… ಅಮಿತ್ ಷಾ , ಬಿಜೆಪಿಯನ್ನು ಎದುರಿಸಲಾಗದ ಹೇಡಿಗಳು ನೀವು” ಅಂತಾ ಸವಾಲ್ ಹಾಕಿದ್ದಾರೆ…!

ಇದೀಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಅಮಿತ್ ಷಾ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ರೀತಿ ಅಪಪ್ರಚಾರ ಮಾಡುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ.

ಮೊದಲು ದೇವೇಗೌಡರು ಬೇರೆಯವರನ್ನು ಟೀಕಿಸುವ ಬದಲು ತಮ್ಮನ್ನು ತಾವು ನೋಡಿಕೊಳ್ಳಿ… ಮಗ ಕುಮಾರ ಸ್ವಾಮಿಗೆ ಸ್ವಲ್ಪ ಸಂಸ್ಕøತಿಯನ್ನು ಹೇಳಿಕೊಡಿ… ಅಂದು ನರೇಂದ್ರ ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗ್ತೇನೆ ಅಂತಾ ಹೇಳಿದ ಮನುಷ್ಯ ಇನ್ನೂ ಇದ್ದೀರಲ್ವಾ ನಾಚಿಕೆಯಾಗ ಬೇಕು ನಿಮ್ಮ ಜನ್ಮಕ್ಕೆ… ನೀವಿರುವ ಪಕ್ಷವನ್ನು ಮೊದಲು ಅಭಿವೃದ್ಧಿ ಮಾಡಿ… ಒಂದು ಮಾತಿದೆ ನಮ್ಮ ಬಟ್ಟಲಲ್ಲಿ ಹೆಗ್ಗಣ ಬಿದ್ದರೂ ಬೇರೆಯವರ ಮನೆಯಲ್ಲಿ ನೊಣ ಹುಡುತ್ತಾರೆ ಅಂತಹ ಜಾತಿ ಜನ ಈ ದೇವೆಗೌಡರು….

-ಶೃಜನ್ಯಾ

Tags

Related Articles

Close