ಅಂಕಣಪ್ರಚಲಿತ

ಕಪ್ಪುಕುಳಗಳಿಗೆ ಭಯಹುಟ್ಟಿಸಿದ್ದ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ!!

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಲವಾರು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಅಘೋಷಿತ ಆದಾಯವನ್ನು ಸಕ್ರಮಗೊಳಿಸಲು ಸರಕಾರ ಹೊರಡಿಸಿರುವ ಹೊಸ ಯೋಜನೆಯೇ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ!! ಕೇಂದ್ರ ಸರ್ಕಾರದ ಅತ್ಯುತ್ತಮ ಯೋಜನೆಯೆಂದೆನಿಸಿದ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ ಕಾಳ ಧನಿಕರಿಗೆ ತಮ್ಮಲ್ಲಿರುವ ಕಪ್ಪುಹಣವನ್ನು, ತೆರಿಗೆ ಮತ್ತು ದಂಡ ಕಟ್ಟಿ ಬಿಳಿಯಾಗಿಸಲು ರಚಿಸಲಾಗಿರುವ ಯೋಜನೆಯಾಗಿದೆ!!

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಪ್ರಧಾನಿ ನರೇಂದ್ರ ಮೋದಿಯವರ ಯಶಸ್ವಿ ಯೋಜನೆಗಳಲ್ಲೊಂದಾಗಿದೆ!! ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಲವಾರು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳು ಸೇರ್ಪಡೆಗೊಂಡಿವೆ. ಆ ಮೂಲಕ ಭಾರತದ ಸಮಗ್ರ ಅಭಿವೃದ್ಧಿಯ ಜತೆಗೆ ಹಣಕಾಸು ಭದ್ರತೆ, ಮೂಲಭೂತ ಅಭಿವೃದ್ಧಿ ಹಾಗೂ ದೀನರ ಸಬಲೀಕರಣದ ಮೂಲಕ ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ.

ಏನಿದು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಥವಾ ಪಿಎಂಜಿಕೆವೈ ?

ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಕಪ್ಪುಕುಳಗಳಿಗೆ ತಮ್ಮಲ್ಲಿರುವ ಆದಾಯವನ್ನು ಸಕ್ರಮಗೊಳಿಸಲು ಕೊನೆಯ ಬಾಗಿಲು ಎನ್ನುವಂತೆ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆಯನ್ನು ಜಾರಿಗೆ ತಂದಿತ್ತು.

ಪಿಎಂಜಿಕೆವೈ ಯೋಜನೆ ಅಡಿ ಠೇವಣಿ ಇಟ್ಟ ಹಣ ಕಪ್ಪು ಹಣಗಳಿಗೆ ಶೇ. 49.9 ರಷ್ಟು ದಂಡ ವಿಧಿಸಲಾಗುತಿತ್ತು. ಅಷ್ಟೇ ಅಲ್ಲದೇ ಶೇ.25ರಷ್ಟು ಹಣವನ್ನು ಆರ್ಬಿಐಯಲ್ಲಿ 4 ವರ್ಷಗಳ ಕಾಲ ಠೇವಣಿ ಇಡಬೇಕಾಗಿತ್ತು. ಈ ರೀತಿಯಾಗಿ ಠೇವಣಿ ಇರಿಸಿದ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಈ ಯೋಜನೆ ಹೊರತುಪಡಿಸಿ ಸಾಮಾನ್ಯ ಪ್ರಕ್ರಿಯೆ ಮೂಲಕ ತಮ್ಮ ಕಪ್ಪು ಹಣ ಘೋಷಿಸಿಕೊಂಡರೆ ಶೇ. 77.2ರಷ್ಟು ದಂಡ ಸೇರಿದಂತೆ ತೆರಿಗೆ ಕಟ್ಟಬೇಕಿತ್ತು. ಮಾರ್ಚ್ ಕೊನೆಯವರೆಗೆ ಈ ಪಿಎಂಜಿಕೆವೈ ಯೋಜನೆ ಜಾರಿಯಲ್ಲಿತ್ತು.

ಹಾಗಾಗಿ, ಯಾರಾದರೂ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಅಘೋಷಿತ ನಗದನ್ನು ಠೇವಣಿ ಇಟ್ಟಿದ್ದರೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಘೋಷಿಸಬಹುದಾಗಿತ್ತು!! ಅಷ್ಟೇ ಅಲ್ಲದೇ ಶೇ.50ರಷ್ಟು ತೆರಿಗೆ ಮತ್ತು ಮೇಲ್ತೆರಿಗೆ ಸಲ್ಲಿಸಿ ಸಕ್ರಮಗೊಳಿಸಬಹುದಾಗಿದ್ದು, ಇದರ ಜತೆಗೆ ಒಟ್ಟು ಮೊತ್ತದಲ್ಲಿ ಕಾಲು ಭಾಗದಷ್ಟು ಮೊತ್ತವನ್ನು 4 ವರ್ಷಗಳ ತನಕ ಬಡ್ಡಿ ರಹಿತ ಠೇವಣಿಯಾಗಿ ಇಡಬೇಕಾಗಿತ್ತಾದರೂ ಕೂಡ ಇದರ ಜೊತೆಗೆ ಇತರ ಆಸ್ತಿಗಳಾದ ಚಿನ್ನ, ಬೆಳ್ಳಿ, ಷೇರು ಅಥವಾ ಸ್ಥಿರಾಸ್ತಿ ವಿವರಗಳ ಘೋಷಣೆ ಅಸಾಧ್ಯವಾಗಿತ್ತು!!

ಸರಕಾರ ಕಳೆದ ವರ್ಷ ಕಪ್ಪು ಹಣವನ್ನು ತೆರಿಗೆ ಮತ್ತು ದಂಡ ಕಟ್ಟಿ ಸಕ್ರಮಗೊಳಿಸಲು ಆದಾಯ ಘೋಷಣೆ ಯೋಜನೆ(ಐಡಿಎಸ್) ಪ್ರಕಟಿಸಿತ್ತು. ಇದರಡಿಯಲ್ಲಿ ಅಕ್ರಮ ನಗದು, ಚಿನ್ನ, ಸ್ಥಿರಾಸ್ತಿಗಳ ವಿವರಗಳನ್ನು ಕೂಡ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇನ್ನು 2016ರ ಸೆಪ್ಟೆಂಬರ್ 30ಕ್ಕೆ ಈ ಯೋಜನೆ ಮುಕ್ತಾಯವಾಗಿದ್ದು, ವಿದೇಶಗಳಲ್ಲಿರುವ ಕಪ್ಪು ಹಣದ ಘೋಷಣೆಗೂ ಮುನ್ನ, 2015ರಲ್ಲಿ ಪ್ರತ್ಯೇಕ ಯೋಜನೆ ಪ್ರಕಟವಾಗಿತ್ತು. ಆದರೆ ಅದು ಅದೇ ವರ್ಷ ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾಗಿತ್ತು!! ಆದರೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ನಗದು, ಚೆಕ್, ಆರ್.ಟಿ.ಜಿ.ಎಸ್, ಎನ್.ಇ.ಎಫ್.ಟಿ ಅಥವಾ ಯಾವುದೇ ಎಲೆಕ್ಟ್ರಾನಿಕ್ ವರ್ಗಾವಣೆ ಪದ್ಧತಿಯಲ್ಲಿ ಬಳಸಿದ ಹಣದ ವಿವರ ಸಲ್ಲಿಸಬಹುದಾಗಿತ್ತು!!

ಏಪ್ರಿಲ್ 2015ರಲ್ಲಿ ಜಾರಿಗೆ ತಂದ ಯೋಜನೆ ಇದಾಗಿದ್ದು, ಮೊದಲನೆಯದಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಜಾರಿಗೆ ಬರುವುದಕ್ಕೆ ಮುನ್ನವೇ ಜನ ತಮ್ಮಲ್ಲಿರುವ ನಗದನ್ನು ಬೇರೆ ಬೇರೆ ಖಾತೆಗಳಲ್ಲಿ ಠೇವಣಿ ಇಡಲು ಯತ್ನಿಸಿದ್ದಾರೆ. ಎರಡನೆಯದಾಗಿ ತೆರಿಗೆ ಮತ್ತು ದಂಡದ ದರ ಕಾರಣವಾಗಿದೆ ಎಂದು ಆ ಸಂದರ್ಭದಲ್ಲಿ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದರು!! ಕಪ್ಪು ಹಣದ ವಿರುದ್ಧದ ಕಾರ್ಯತಂತ್ರಗಳಲ್ಲಿ ಪಿಎಂಜಿಕೆವೈ ಒಂದು ಭಾಗವಾಗಿದ್ದು, ಇದು ಒಂದೇ ಅಲ್ಲದೇ, ಇದೇ ರೀತಿಯ ಯೋಜನೆಗಳು ಈ ಹಿಂದೆ ಕೂಡ ಜಾರಿಯಾಗಿತ್ತು.

ಈ ಹಿಂದೆ ಆದಾಯ ಘೋಷಣೆ ಯೋಜನೆ (ಐಡಿಎಸ್) ಅಡಿಯಲ್ಲಿ 2016ರ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಕಪ್ಪು ಹಣ ಘೊಷಣೆಗೆ ಅವಕಾಶ ಕೊಡಲಾಗಿತ್ತು. ಆಗ 67,382 ಕೋಟಿ ರೂ. ಅಘೋಷಿತ ಆದಾಯ ಪತ್ತೆಯಾಗಿತ್ತು. ನೋಟು ಅಮಾನ್ಯತೆಯ ನಂತರ ಕಾಳ ಧನಿಕರಿಗೆ ಕಪ್ಪು ಹಣ ಬಿಳಿಯಾಗಿಸಲು ಮತ್ತೊಂದು ಅವಕಾಶವಾಗಿ ಪಿಎಂಜಿಕೆವೈ ಘೋಷಿಸಲಾಗಿತ್ತು.

ಗರಿಬ್ ಕಲ್ಯಾಣ ಯೋಜನೆ ನಿಯಮ:

1. ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು 5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಒಂದು ಖಾತೆಗೆ ಜಮಾವಣೆಗೆ ಅವಕಾಶ
2. ಇಲ್ಲಿಯವರೆಗೆ ಜಮೆ ಮಾಡದಿರುವ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ವಿವರಣೆ ನೀಡಬೇಕು.
3. ಠೇವಣಿದಾರರಿಂದ ವಿವರಣೆ ಪಡೆಯುವಾಗ ಕನಿಷ್ಠ ಇಬ್ಬರು ಅಧಿಕಾರಿಗಳು ಉಪಸ್ಥಿತರಿದ್ದು, ವಿವರಣೆಯನ್ನು ದಾಖಲಿಸಿಕೊಳ್ಳುವರು.
4. ರೂ. 5,000ಕ್ಕಿಂತ ಕಡಿಮೆ ಮೊತ್ತ ಜಮಾ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.
5. ಖಾತೆದಾರರ ಅನುಮತಿ ಪತ್ರ, ಗುರುತಿನ ಚೀಟಿ ಒದಗಿಸಿದರೆ ಬೇರೆಯವರ ಖಾತೆಗೂ ಹಳೆ ನೋಟು ಜಮೆಗೆ ಅವಕಾಶ.
6. ಕೆವೈಸಿ ಇಲ್ಲದಿರುವ ಖಾತೆಗಳಿಗೆ ರೂ. 5,000ಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡುವಂತಿಲ್ಲ.
*********************************************8

ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅಡಿಯಲ್ಲಿ ಒಟ್ಟು 5 ಸಾವಿರ ಕೋಟಿ ರೂ. ಆಘೋಷಿತ ಆಸ್ತಿ ಘೋಷಣೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಆದರೆ ನಿರೀಕ್ಷೆ ಮಾಡಿದಷ್ಟು ಹಣ ಘೋಷಣೆಯಾಗಿಲ್ಲ. ಪಿಎಂಜಿಕೆವೈ ಅಡಿ ಒಟ್ಟು 5 ಸಾವಿರ ಕೋಟಿ ರೂ. ಆಘೋಷಿತ ಆಸ್ತಿ ಘೋಷಣೆಯಾಗಿದ್ದು, ಆಸ್ತಿ ಕಡಿಮೆ ಘೋಷಣೆಯಾಗಲು ಎರಡು ಪ್ರಮುಖ ಅಂಶಗಳು ಕಾರಣ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಯೋಜನೆ ಪ್ರಕಟವಾಗುವುದಕ್ಕೂ ಮೊದಲು ಜನರು ಬೇರೆ ಬೇರೆ ಖಾತೆಗಳಲ್ಲಿ ಹಣವನ್ನು ಇಡಲು ಪ್ರಯತ್ನ ನಡೆಸಿದ್ದು, ಎರಡನೇಯದು ತೆರಿಗೆ ಮತ್ತು ದಂಡದ ದರದಿಂದಾಗಿ ಕಡಿಮೆ ಪ್ರಮಾಣದಲ್ಲಿ ಘೋಷಣೆಯಾಗಿದೆ ಎಂದು ಅವರು ಹೇಳಿದ್ದಾರೆ!! ಪಿಎಂಜಿಕೆವೈ ಯೋಜನೆ ಘೋಷಣೆಯಾಗುವುದಕ್ಕೂ ಮೊದಲು ಆದಾಯ ಘೋಷಣಾ ಯೋಜನೆ(ಐಡಿಎಸ್) ತಂದಿತ್ತು. 2016ರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾತ್ರ ಅವಧಿ ಹೊಂದಿದ್ದ ಈ ಯೋಜನೆಯ ಅಡಿ ಒಟ್ಟು 67,382 ಕೋಟಿ ರೂ. ಅಕ್ರಮ ಆದಾಯ ಘೋಷಣೆ ಆಗಿತ್ತು. ಐಡಿಎಸ್ ಅಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಬೇರೆ ಯಾವುದೇ ಇಲಾಖೆಗೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು!!
ಬಚ್ಚಿಟ್ಟವರಿಗೆ ಜಾಸ್ತಿದಂಡ

ಕೇಂದ್ರ ಸರಕಾರದ ಈ ಯೋಜನೆಯನ್ನು ಬಳಸಿಕೊಳ್ಳಲು ನಿರಾಕರಿಸುವ, ಕಪ್ಪು ಹಣವನ್ನು ತಮ್ಮಲ್ಲಿಯೇ ಇಟ್ಟುಕೊಂಡು ಹೇಗೋ ಪರಿವರ್ತನೆ ಮಾಡಿಸಿ ಕೊಳ್ಳಲು ಬಯಸುವ ವ್ಯಕ್ತಿಗಳು ಸಿಕ್ಕಿಬಿದ್ದರೆ, ಅಂಥವರ ಬಳಿ ಸಿಗುವ ಹಣಕ್ಕೆ ಶೇ.60ರಷ್ಟು ತೆರಿಗೆ ವಿಧಿಸಿದ್ದು, ಇದರ ಜತೆಗೆ ತೆರಿಗೆ ಮೇಲೆ ಶೇ.25ರಷ್ಟು ಮೇಲೆ ತೆರಿಗೆ (ಅಂದರೆ ಶೇ.15) ವಿಧಿಸಲಾಗುತ್ತಿತ್ತು!! ಹೀಗಾಗಿ ಅಂತಹ ವ್ಯಕ್ತಿ ಕಟ್ಟಬೇಕಿರುವ ತೆರಿಗೆ, ಮೇಲೆತೆರಿಗೆ ಪ್ರಮಾಣ ಶೇ.75 ಕ್ಕೇರಿದ್ದು, ಇದರ ಜತೆಗೆ ತೆರಿಗೆ ಅಧಿಕಾರಿಗಳು ಅಂತಹ ವ್ಯಕ್ತಿಗಳ ಮೇಲೆ ಹೆಚ್ಚುವರಿಯಾಗಿ ಶೇ.10ರಷ್ಟು ತಂಡ ಹೇರುವ ಅವಕಾಶ ಹೊಂದಿರುತ್ತಾರೆ. ಹೀಗಾಗಿ ಒಟ್ಟಾರೆ ದಂಡದ ಮೊತ್ತ ಶೇ.85ರವರೆಗೂ ತಲುಪುತ್ತದೆ!!

ಅಂತೂ ಕಾಳಧನಿಕರ ನಿದ್ದೆಕೆಡಿಸಿದ್ದ ಪ್ರಧಾನಮಂತ್ರಿಯವರ ಈ ಯೋಜನೆ ಯಶಸ್ವಿಯಾಗಿದೆಯಲ್ಲದೇ, ಕೂಡಿಟ್ಟ ಕೋಟ್ಯಾಂತರ ರೂಪಾಯಿ ಸರ್ಕಾರದ ಪಾಲಾಗಿತ್ತು!! ಕಪ್ಪುಕುಳಗಳಿಗೆ ತಮ್ಮಲ್ಲಿರುವ ಆದಾಯವನ್ನು ಸಕ್ರಮಗೊಳಿಸಲು ಕೊನೆಯ ಬಾಗಿಲು ಎನ್ನುವಂತೆ ಈ ಯೋಜನೆ ಜಾರಿಗೆ ಬಂದಿದ್ದು, ಅದೆಷ್ಟೋ ಭ್ರಷ್ಟರ ಪಾಲಿಗೆ ಬಿಸಿತುಪ್ಪದಂತೆ ಪರಿಣಮಿಸಿದ್ದಂತೂ ನಿಜ!!

– ಅಲೋಖಾ

Tags

Related Articles

Close