ಜಿಲ್ಲಾ ಸುದ್ದಿಪ್ರಚಲಿತ

ಕರಾಟೆ ಚಾಂಪಿಯನ್ ಮಂಗಳೂರು ಮೇಯರ್ ಕವಿತಾ ಸನೀಲ್ ರವರಿಂದ ವಾಚ್ ಮೆನ್ ಮತ್ತು ಅವರ ಹೆಂಡತಿಯ ಮೇಲೆ ಹಲ್ಲೆ! ಮಗುವನ್ನು ಎತ್ತಿ ಬಿಸಾಡಿದ ಮೇಯರ್!

ಕವಿತಾ ಸನಿಲ್!! ಮಂಗಳೂರು ಮಹಾನಗರ ಪಾಲಿಕೆಯ ಮೇಯರ್. ಮೊನ್ನೆ ಮೊನ್ನೆ ತನಕ ಈ ಮೇಯರಮ್ಮ ಮಂಗಳೂರಿಗೆ ಸಿಕ್ಕ ಮಹಾಮಾತೆ ಎಂಬಂತೆ ಪೋಸು ಕೊಡುತ್ತಾ ಟೀವಿ ಚಾನೆಲ್‍ಗಳ ಎದುರು ಮಿಂಚುತ್ತಿದ್ದಳು. ಆದರೆ ಈವಾಗ ತನ್ನ ಕ್ಯಾಮರದಾಚೆಗಿನ ನೈಜ ಮುಖವನ್ನು ಅನಾವರಣಗೊಳಿಸಿ ಸಿಕ್ಕಿಬಿದ್ದಿದ್ದಾಳೆ.

ಅಸಲಿಗೆ ಈಕೆ ಕರಾಟೆ ಛಾಂಪಿಯನ್ ಅಂತೆ. ಆದರೆ ಈಕೆಯ ಕರಾಟೆಯ ಪೌರುಷವನ್ನು ಬಡಪಾಯಿಗಳ ಮೇಲೆ ತೋರಿಸಿ ತನ್ನ ರಾಕ್ಷಸೀ ಪ್ರವೃತ್ತಿಯನ್ನು ಬೆತ್ತಲುಗೊಳಿಸಿದ್ದಾಳೆ. ಕಾಂಗ್ರೆಸಿನಿಂದ ಆರಿಸಿ ಬಂದು ಅದೇನೋ ಪುಣ್ಯದಲ್ಲಿ ಅಧಿಕಾರ ಹಿಡಿದ ಈಕೆ ಕೆಲವೊಂದು ಕೆಲಸ ಕಾರ್ಯಗಳಲ್ಲಿ ಸಖತ್ ಸುದ್ಧಿಯಾಗಿದ್ದಳು. ಅದು ಕೇವಲ ಟಿವಿ ಚಾನೆಲ್‍ಗಳ ಕ್ಯಾಮರಾ ಮುಂದೆ ಮಾತ್ರ ಎನ್ನುವ ವಿಷಯ ಗುಟ್ಟಾಗಿ ಉಳಿದಿಲ್ಲ.

ಈ ಮೇಯರಮ್ಮ ಮಾಡಿದ ಅನಾಚಾರ ಕೇಳಿದರೆ ಒಮ್ಮೆ ಮೂಗಿನ ಮೇಲೆ ಬೆರಳಿಡುತ್ತೀರಾ. ಅದು ಮಂಗಳೂರು ನಗರದಲ್ಲಿರುವ ಅಪಾರ್ಟ್‍ಮೆಂಟ್… ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಕುಟುಂಬ ಕೂಡಾ ಆ ಅಪಾರ್ಟ್‍ಮೆಂಟ್ ನಲ್ಲಿ ವಾಸಿಸುತ್ತಿದೆ. ಅಪಾರ್ಟ್‍ಮೆಂಟ್ ಕಾವಲಿಗಾಗಿ ಒಂದು ವಾಚ್ ಮ್ಯಾನ್ ಮತ್ತು ಆತನ ಕುಟುಂಬ ಅಲ್ಲಿ ವಾಸಿಸುತ್ತಿತ್ತು. ಮೊನ್ನೆ ತಾನೆ ನಡೆದ ದೀಪಾವಳಿ ಹಬ್ಬದಂದು ಇದೇ ಮೇಯರಮ್ಮನ ಮನೆಯಲ್ಲಿ ಆಕೆಯ ಮಕ್ಕಳು ಪಟಾಕಿ ಹಚ್ಚುತ್ತಿದ್ದರು. ಪಟಾಕಿ ಅಂದರೆ ಯಾವ ಮಕ್ಕಳಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಬಡತನದಲ್ಲಿರುವ ಕೆಲವು ಕುಟುಂಬದ ಮಕ್ಕಳು, ಮತ್ತೊಬ್ಬರ ಆಚರಣೆಯನ್ನೇ ನೋಡಿ ಖುಷಿಪಡಬೇಕಷ್ಟೆ. ಸಹಜವಾಗಿಯೇ ವಾಚ್ ಮ್ಯಾನ್‍ನ ಮಕ್ಕಳು, ಮೇಯರ್ ಕವಿತಾ ಸನಿಲ್ ಮಕ್ಕಳು ಪಟಾಕಿ ಹಚ್ಚುವ ಸ್ಥಳದ ಹತ್ತಿರಕ್ಕೆ ಹೋಗಿದ್ದರಷ್ಟೆ. ಅಷ್ಟಕ್ಕೆ ಮೇಯರ್ ಕವಿತಾ ಸನಿಲ್ ಮಗಳು ವಾಚ್ ಮ್ಯಾನ್‍ನ ಸಣ್ಣ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ದೀಪಾವಳಿಗೆ ದೀಪ ಹಚ್ಚಲೆಂದು ಮೇಣದ ಬತ್ತಿ ತರಲೆಂದು ವಾಚ್ ಮ್ಯಾನ್ ಅಂಗಡಿಗೆ ತೆರಳಿದ್ದನು. ಆತನ ಪತ್ನಿ ಮತ್ತು ಸಣ್ಣ ಮಗು ಮಾತ್ರವೇ ಅಲ್ಲಿ ಇದ್ದರು.

ತನ್ನ ಸಣ್ಣ ಮಗುವನ್ನು ಕುರಿತು ಆವಾಗಲೇ ಎಚ್ಚರಿಸಿದ್ದ ವಾಚ್ ಮ್ಯಾನ್ ಪತ್ನಿ, “ಅವರ ಬಳಿ ಹೋಗಬೇಡ. ಅವರು ಹೊಡೆಯುತ್ತಾರೆ” ಎಂದೆಲ್ಲಾ ಹೇಳಿ
ಕೂರಿಸಿದ್ದಳು. ಪಾಪ ಆ ಮಗುವಿಗೆ ಈ ಪಟಾಕಿಯ ಎದುರು ಅದ್ಯಾವ ಮಾತುಗಳೂ ಕೇಳಲೇ ಇಲ್ಲ. ಆ ಮಗು ಅತ್ತ ಕಡೆ ಹೋಗಿದ್ದೇ ತಡ, ಆ ಮಗುವಿಗೆ ಮೇಯರ್
ಮಗಳು ಸರಿಯಾಗಿಯೇ ಏಟು ಕೊಟ್ಟಿದ್ದಾಳೆ. ಇದನ್ನು ಕಂಡ ವಾಚ್ ಮ್ಯಾನ್ ಪತ್ನಿ ಓಡಿ ಬಂದು ಮಗುವನ್ನು ಹಿಡಿದು, ಮೇಯರ್ ಮಗಳನ್ನು ಕುರಿತು, “ಏನಮ್ಮ
ಮಕ್ಕಳಿಗೆ ಹೀಗೆಲ್ಲಾ ಹೊಡೆಯೋದಾ.. ಅಮ್ಮ ಬಂದಮೇಲೆ ಹೇಳ್ತೇನೆ ಇರು” ಎಂದು ಪ್ರಶ್ನಿಸಿದ್ದಾಳೆ ಅಷ್ಟೆ. ಅಷ್ಟು ಮಾತ್ರಕ್ಕೆ ಆ ಹುಡುಗಿ ನನಗೆ ಆಕೆ ಹೊಡೆದೇ ಬಿಟ್ಟಳು ಎಂದು ಬೊಬ್ಬೆ ಬಿಡುತ್ತಾ ತನ್ನ ಮನೆಯವರ ಕಡೆ ಹೊರಟಿದ್ದಳು.

ಇಷ್ಟೆಲ್ಲಾ ನಡೆಯುತ್ತಿರುವಾಗ ಮೇಯರ್ ಕವಿತಾ ಸನಿಲ್ ಮನೆಯಲ್ಲಿ ಇರಲಿಲ್ಲ. ಬೆಂಗಳೂರಿಗೆ ತೆರಳಿದ್ದಳಂತೆ. ಆದರೆ ಆಕೆ ಗುರುವಾರ ಊರಿಗೆ ಬಂದಿದ್ದು, ಬಂದ ತಕ್ಷಣವೇ ತನ್ನ ಮಕ್ಕಳ ಮಾತು ಕೇಳಿ ವಾಚ್ ಮ್ಯಾನ್ ಇರುವ ಸ್ಥಳಕ್ಕೆ ತೆರಳಿ, ಅಲ್ಲೇ ಇದ್ದ ಆತನ ಸಣ್ಣ ಮಗುವನ್ನು ದರ ದರ ದರ ಎಂದು ಎಳೆದು ಅಷ್ಟು ದೂರಕ್ಕೆ ಬಿಸಾಡಿದ್ದಳು. ಪಾಪ. ಏನೂ ತಿಳಿಯದ ಆ ಮಗುವಿನ ಮೇಲೆ ತನ್ನ ಅಮಾನವೀಯ ಕೃತ್ಯವನ್ನು ಅನಾವರಣಗೊಳಿಸಿದ್ದಾಳೆ. ಬಡಪಾಯಿ ಕುಟುಂಬದ ಮೇಲೆ ತನ್ನ ರೌದ್ರಾವತಾರ ತೋರಿಸಿದ್ದ ಮೇಯರ್ ಕವಿತಾ ಸನಿಲ್, ಮಗುವಿನ ರಕ್ಷಣೆಗೆ ಬಂದಿದ್ದ ವಾಚ್ ಮ್ಯಾನ್ ಪತ್ನಿಗೂ ಮನ ಬಂದಂತೆ ಏಟು ಕೊಟ್ಟಿದ್ದಾಳೆ. ತಾನೂ ಒಂದು ಹೆಣ್ಣಾಗಿ, ಮತ್ತೊಂದು ಬಡಪಾಯಿ ಕಾರ್ಮಿಕ ಹೆಣ್ಣಿಗೆ ಈ ರೀತಿ ತನ್ನ ದರ್ಪ ತೋರಿಸುವುದು ಎಷ್ಟು ಸರಿ.?

ಊರಿಗೆ ಮಹಾ ಮೇಯರ್ ಆಗಿರುವ ಆಕೆಯ ಬಾಯಲ್ಲಿ ಮಾತ್ರ ಹೊಲಸು ಮಾತುಗಳೇ ಬರುತ್ತಿದ್ದವು. ತುಳು ಭಾಷೆಯಲ್ಲಿ ಅಸಭ್ಯವಾಗಿ ನಿಂದಿಸುವ ಅದೆಷ್ಟು ಅಹಿತಕರ ಭಾಷೆಗಳುಂಟೋ ಅದೆಲ್ಲವನ್ನೂ ಆಕೆಯ ಮೇಲೆ ಪ್ರಯೋಗಿಸಿದ್ದಾಳೆ. ಆ ಬಡಪಾಯಿ ಮಹಿಳೆಯನ್ನು ಮೈ ಮಾರುವ ವೇಶ್ಯೆ ಎಂದರೆ ಎಷ್ಟು ಬೇಜಾರಗಬೇಡ.

ಥೂ… ಆಕೆಯ ಜನ್ಮಕ್ಕಿಷ್ಟು… ಮಕ್ಕಳೇನೋ ತಪ್ಪು ಮಾಡಿದರೆ ಅದನ್ನು ಸರಿಪಡಿಸಿಕೊಂಡು ಹೋಗೋದನ್ನು ಬಿಟ್ಟು, ಆ ಸಣ್ಣ ಮಕ್ಕಳು ಅದೇನೋ ದೂರು ಕೊಟ್ಟ ಮಾತ್ರಕ್ಕೆ ಅವರ ಮೇಲೆ ರಾಕ್ಷಸಿ ತರಹ ಎಗರುವುದೆನಾ..! ತಾನೊಬ್ಬ ಕರಾಟೆ ಮೇಯರ್ ಎಂದು ಹೋದಲ್ಲಿ ಬಂದಲ್ಲಿ ಜಂಬಕೊಚ್ಚಿಕೊಳ್ಳುವ ಮೇಯರ್ ಕವಿತಾ ಸನಿಲ್ ಆಕೆಯ ಕರಾಟೆಯ ಶಕ್ತಿಯನ್ನು ಆ ಬಡಪಾಯಿ ಕುಟುಂಬದ ಮೇಲೆ ಬಲಪ್ರಯೋಗ ಮಾಡಿದ್ದು ಮಾತ್ರ ದುರಂತ.

ಅಷ್ಟಕ್ಕೂ ಈಕೆಯ ರೌದ್ರಾವತಾರ ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಅನೇಕ ಘಟನೆಗಳಲ್ಲಿ ಆಕೆ ತನ್ನ ಖಳಮುಖವನ್ನು ತೋರಿಸಿದ್ದಳು. ಆ ಅಪಾರ್ಟ್‍ಮೆಂಟ್‍ಗೆ ಅದ್ಯಾರೇ ವಾಚ್‍ಮ್ಯಾನ್ ಬಂದರೂ ಈಕೆಯ ಕಿರುಕುಳದಿಂದ ಹೆಚ್ಚು ದಿನ ನಿಲ್ಲದೆ ಕೆಲಸ ಬಿಟ್ಟು ಓಡಿ ಹೋಗುತ್ತಿದ್ದರು. ಈ ಕುಟುಂಬವೂ ಕೂಡಾ ತುಂಬಾನೆ ಎಚ್ಚರದಿಂದಿತ್ತು. ತನ್ನ ಮಕ್ಕಳಿಗೂ ಮೇಯರ್ ಕುಟುಂಬದ ಬಗ್ಗೆ ತಿಳಿಸಿ ಜಾಗ್ರತೆ ವಹಿಸಿ ಎಂದು ಹೇಳುತ್ತಿದ್ದರು. ಆದರೆ ಅದೆಷ್ಟು ಜಾಗ್ರತೆ ವಹಿಸಿದ್ದರೂ ಕಡೆಗೂ ಆಕೆ ತನ್ನ ಕರಾಳ ದರ್ಶನವನ್ನು ತೋರಿಸಿಯೇ ಬಿಟ್ಟಿದ್ದಾಳೆ. ಒಂದಲ್ಲ ಒಂದು ರೀತಿಯಲ್ಲಿ ಆ ಕುಟುಂಬಕ್ಕೆ ಹಿಂಸೆ ನೀಡುತ್ತಾ ಬಂದಿರುವ ಮೇಯರ್ ಈ ಹಿಂದೆ ಕೂಡಾ ವಾಚ್ ಮ್ಯಾನ್‍ನ ಮಕ್ಕಳು ತನ್ನ ಹಣ ಕದ್ದಿದ್ದಾರೆ ಎಂಬ ಸುಳ್ಳು ಆರೋಪವನ್ನು ಮಾಡಿ ಇಕ್ಕಟ್ಟಿಗೆ ಸಿಲುಕಿಸಿದ್ದಳು.

“ತಾನು ತಪ್ಪು ಮಾಡಿಲ್ಲ ಮೇಯರವ್ವಾ..” ಎಂದು ಅತ್ತು ಅತ್ತು ಗೋಗರೆದರೂ ತನ್ನ ನೀಚ ಬುದ್ಧಿಯನ್ನು ಬಿಡದ ಈ ಮೇಯರ್ ಕವಿತಾ ಸನಿಲ್ ಇನ್ನು ಊರಿಗೆ ಅದೇನು ಒಳ್ಳೆದು ಮಾಡುತ್ತಾಳೋ ಮತ ಹಾಕಿದ ಮತದಾರನೇ ಬಲ್ಲ.

ತನ್ನದೇ ಅಪಾರ್ಟ್‍ಮೆಂಟ್‍ನಲ್ಲಿರುವ ವಾಚ್‍ಮ್ಯಾನ್‍ನ ಕಟುಂಬವನ್ನೇ ಹಿಂಸಿಸಿದ ಈಕೆ ಅಷ್ಟು ದೊಡ್ಡದಾದ ಮಂಗಳೂರನ್ನು ಆಳಲು ಅಸಮರ್ಥಳು. ಅವಳಿಗೆ ಮಾನ ಮರಿಯಾದೆ ಎಂಬುದು ಅಲ್ಪ ಸ್ವಲ್ಪನಾದ್ರೂ ಉಳಿದಿದ್ದರೆ, ಈ ಕೂಡಲೇ ರಾಜೀನಾಮೆ ಕೊಟ್ಟು ತೊಲಗಬೇಕು. ಇಲ್ಲವಾದರೆ ಮಂಗಳೂರಿನಾದ್ಯಂತ ಪ್ರತಿಭಟಿಸಿ ಕಾನೂನಿನ ಮೂಲಕ ನ್ಯಾಯ ಕೇಳಿ ಮೇಯರ್‍ನ್ನು ಶಾಶ್ವತವಾಗಿ ಮನೆಯಲ್ಲಿ ಕೂರುವ ಹಾಗೆ ಮಾಡಬೇಕಾದಿತು.

ಪದೇ ಪದೇ ಸಾಮಾನ್ಯ ಜನರ ಮೇಲೆ ತನ್ನ ವಿಕೃತ ಪೌರುಷವನ್ನು ತೋರಿಸುವ ಕಾಂಗ್ರೆಸಿಗರು ಈಕೆಯ ಬೆಂಬಲಕ್ಕೂ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಆದರೆ ಜನತೆ ಮಾತ್ರ ಈಕೆಗೆ ತಕ್ಕ ಪಾಠ ಕಳಿಸಿಯೇ ಕಳಿಸುತ್ತಾರೆ.

-Suresh Poojary

Tags

Related Articles

Close