ಪ್ರಚಲಿತ

ಕರ್ನಾಟಕಕ್ಕೆ ಕಾಲಿಟ್ಟರೆ ಅಮಿತ್ ಶಾನನ್ನು ಜೈಲಿಗಟ್ಟಿ ಎಂದಿದ್ದ ಸಿದ್ದರಾಮಯ್ಯ ಅಭಿಮಾನಿಗಳಿಗೆ ಹೆದರಿ ಏನು ಮಾಡಿದರು ಗೊತ್ತೇ?

ಹೆದರಿಬಿಟ್ಟರು ಸಿದ್ದರಾಮಯ್ಯ!!!

ಇಲ್ಲದೇ ಹೋಗಿದ್ದರೆ ನಿನ್ನೆ ಹಾಗೆ ಹೇಳಿದವರು ಇಂದು ಹೀಗೆ ಹೇಳುತ್ತಿರಲಿಲ್ಲ. ಒಂದು ವೇಳೆ ಅಮಿತ್ ಶಾ ರಾಜ್ಯಕ್ಕೆ ಕಾಲಿಟ್ಟರೆ ಅವರನ್ನು ತಕ್ಷಣ ಬಂಧಿಸಬೇಕು ಎನ್ನುವ ಹುಕುಂ ಅನ್ನು ಸಿದ್ದರಾಮಯ್ಯ ಹೊರಡಿಸಿದ್ದು, ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ . ಈ ಮೂಲಕ ಚುನಾವಣೆಯ ಸಮಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರಾಜ್ಯ ಪ್ರವೇಶವನ್ನು ನಿಷೇಧ ಮಾಡಲು ರಾಜ್ಯ ಸರಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದಾರೆ ಎಂಬ ಸುದ್ದಿಯೊಂದು ಮಾಧ್ಯಮದಲ್ಲಿ ಬಿತ್ತರಗೊಂಡಿದ್ದರಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸಿದ್ದರಾಮಯ್ಯನವರ ಈ ನಿರ್ಧಾರ ಅಮಿತ್ ಶಾ ಅವರ ಅಭಿಮಾನಿಗಳನ್ನು ಕೆರಳಿಸಿದ್ದಲ್ಲದೆ ಅವರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೊಂದು ದೊಡ್ಡ ವಿವಾದವಾಗುವುನ್ನು ಮನಗಂಡ ಸಿದ್ದರಾಮಯ್ಯ ಕೊನೆಗೂ ಉಲ್ಟಾ ಹೊಡೆದಿದ್ದಾರೆ.

ಇಷ್ಟೆಲ್ಲಾ ಹೆದರಿದರೂ ಸರ್ವಾಧಿಕಾರಿಯಂತೆ ಉಡಾಫೆಯಾಗಿ ಮಾತಾಡುವುದನ್ನು ಸಿದ್ದರಾಮಯ್ಯ ಬಿಡಲಿಲ್ಲ. ಉತ್ತರ ಕರ್ನಾಟಕದ ಜಿಲ್ಲಾ ಪ್ರವಾಸಕ್ಕೆ ತೆರಳಿರುವ ಸಿದ್ದರಾಮಯ್ಯ, ಮಾಧ್ಯಮಗಳ ಪ್ರಶ್ನೆಗೆ ಚುನಾವಣಾ ಪ್ರಚಾರಕ್ಕೆ ಮೋದಿ, ಅಮಿತ್ ಷಾ ಯಾರೇ ರಾಜ್ಯಕ್ಕೆ ಬರಲಿ ಅಭ್ಯಂತರವಿಲ್ಲ ಆದರೆ ಕೋಮುಸೌಹಾರ್ದ ಕೆಡಿಸಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಾತಿನಿಂದ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯನವರೇ ಕೋಮುಸೌಹಾರ್ದ ಕೆಡಿಸುತ್ತಾರೆ ಎಂದು ಅರ್ಥದಲ್ಲಿ ಮಾತಾಡಿದ್ದಾರೆ.

ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಾರು ಎರಡು ಗಂಟೆ ಕಾಲ ತಡವಾಗಿ ಭಟ್ಕಳಕ್ಕೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದರು. ಹೆಲಿಪ್ಯಾಡ್‍ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದರು. ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಅವುಗಳ ಉದ್ಘಾಟನೆ, ಅಡಿಗಲ್ಲು ಸಮಾರಂಭಕ್ಕಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ನನ್ನಂತೆಯೇ ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಷಾ ಅವರು ಕೂಡ ರಾಜ್ಯಕ್ಕೆ ಬರಲಿ. ನಮ್ಮ ಅಭ್ಯಂತರವೇನಿಲ್ಲ. ಆದರೆ ಕೋಮು ಸಾಮರಸ್ಯವನ್ನು ಕದಡಬಾರದು’ ಎಂದು ಹೇಳಿ ಉಲ್ಟಾ ಹೊಡೆದಿದ್ದಾರೆ.

ಇದೇ ಸಂದರ್ಭ ದಲಿತ ಅರ್ಚಕರ ನೇಮಕಾತಿ ಕುರಿತು ಅನುಮಾನಗಳಿಗೆ ತೆರೆ ಎಳೆದ ಅವರು ‘ದೇವಾಲಯಗಳಿಗೆ ದಲಿತ ಅರ್ಚಕರ ನೇಮಕ ಸಂಬಂಧ ವಿಶೇಷ ಕಾನೂನು ಜಾರಿ ಮಾಡುತ್ತಿಲ್ಲ. ನಾರಾಯಣ ಗುರುಗಳು ತೋರಿದ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ಯಾರು ಬೇಕಾದರೂ ದೇವಸ್ಥಾನ ನಿರ್ಮಿಸಿಕೊಂಡು, ಅವರೇ ಅರ್ಚಕರಾಗಬಹುದು. ಅದಕ್ಕೆ ನಮ್ಮ ವಿರೋಧವಿಲ್ಲ’ ಎಂದರು.

ಸಿದ್ದರಾಮಯ್ಯನವರ ಮಾಸ್ಟರ್ ಪ್ಲಾನ್ ಪ್ರಕಾರ, ವಿಶ್ವ ಹಿಂದೂ ಪರಿಷತ್‍ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾಗೆ ಹೇಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತೋ ಅದೇ ರೀತಿಯಾಗಿ ಅಮಿತ್ ಶಾ ಅವರ ಕರ್ನಾಟಕ ಪ್ರವೇಶವನ್ನು ನಿಷೇಧಿಸಲು ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿತ್ತು.

ಪರಿಷತ್ ಸದಸ್ಯ ಉಗ್ರಪ್ಪನವರು ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಈ ವಿಚಾರವನ್ನು ತಿಳಿಸದೇ ಇದ್ದರೂ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಕರಣ, ಗುಜರಾತಿನ ಕೋಮು ಗಲಾಟೆಯ ವಿಚಾರವನ್ನು ಪ್ರಸ್ತಾಪ ಮತ್ತು ತೊಗಾಡಿಯ ಪ್ರಕರಣವನ್ನು ಉಲ್ಲೇಖಿಸಿ ಇದೇ ಅರ್ಥ ಬರುವಂತೆ ಮಾತಾಡಿದ್ದರು. ಇದರಿಂದಾಗು ಅಮಿತ್ ಶಾ ರಾಜ್ಯಕ್ಕೆ ಪ್ರವೇಶಿಸುತ್ತಿದ್ದಂತೆ ಅವರನ್ನು ಬಂಧಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಮಾಡಲು ತೆರೆಮರೆಯಲ್ಲಿ ರಹಸ್ಯ ಕಾರ್ಯವೊಂದು ನಡೆಯುತ್ತಿರುವ ಬಗ್ಗೆ ಅನುಮಾನವೊಂದು ವ್ಯಕ್ತವಾಗಿತ್ತು. ಅಮಿತ್ ಶಾ ರಾಜ್ಯದ ಎಲ್ಲಾದರೂ ಕಾಲಿಟ್ಟರೆ ಜಿಲ್ಲಾಧಿಕಾರಿಗಳಿಗೆ ಬಂಧಿಸಲು ಸೂಚನೆ ನೀಡಿದ್ದಾರೆ. ತೊಗಾಡಿಯಾ ಪ್ರಕರಣದಲ್ಲಿ ಕೋಮು ಸೌಹಾರ್ದ ಕದಡುವ ವ್ಯಕ್ತಿಗಳಿಗೆ ಪ್ರವೇಶ ನೀಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಆಯಾ ಜಿಲ್ಲಾಡಳಿತ ಕೈಗೊಳ್ಳಬಹುದು. ಜಿಲ್ಲಾಡಳಿತದ ಆ ನಿರ್ಧಾರವನ್ನು ಸರ್ಕಾರ ಮತ್ತು ಕೋರ್ಟ್ ಮಧ್ಯೆ ಪ್ರವೇಶಿಸಿ ಪ್ರಶ್ನಿಸಲು ಸಾಧ್ಯವಿಲ್ಲ. ಅದನ್ನೇ ಪ್ರಯೋಗಿಸಲು ಸಿದ್ದು ಸರಕಾರ ಮುಂದೆ ಬಂದಿತ್ತು ಎಂಬ ಬಗ್ಗೆ ಮಾಧ್ಯಮವೊಂದು ವರದಿ ಮಾಡಿತ್ತು.

ಆದರೆ ಇದೆಲ್ಲಾ ಇಂದು ಬಹಿರಂಗಗೊಂಡಿರುವುದರಿಂದ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈ ಸುದ್ದಿ ಬಹಿರಂಗಗೊಂಡಿರುವುದರಿಂದ ಸಿದ್ದರಾಮಯ್ಯ ತನ್ನ ಪ್ಲಾನ್‍ನಿಂದ ಹಿಂದೆ ಸರಿದಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಹೆದರಿದ್ದಾರೆ ಎಂದು ಸುದ್ದಿ ಹಬ್ಬುತ್ತಿದೆ.

ಅಮಿತ್ ಶಾ ಅವರಿಗೆ ರಾಜ್ಯದಲ್ಲಿ ಬಹುದೊಡ್ಡ ಅಭಿಮಾನಿ ವರ್ಗವಿದೆ. ಅಲ್ಲದೆ ಅಮಿತ್ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ. ಒಂದು ವೇಳೆ ಇವರನ್ನು ಬಂಧಿಸಿದ್ದೇ ಆದರೆ ರಾಜ್ಯದಲ್ಲಿ ಭಾರೀ ದೊಡ್ಡದೊಂದು ವಿವಾದ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರ ಬಗ್ಗೆ ಕೆಟ್ಟ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಜನರ ಮುಂದೆ ಖಳನಾಯಕನಂತೆ ಬಿಂಬಿಸುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬರುತ್ತಿತ್ತು. ಅದನ್ನೇ ಕರ್ನಾಟಕದಲ್ಲಿ ಮುಂದುವರಿಸುತ್ತಿರುವ ಸಿದ್ದರಾಮಯ್ಯ ತನ್ನ ಪಕ್ಷಕ್ಕೆ ಕೊನೆಯ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಜಿಲ್ಲಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದನ್ನೇ ಬಳಕೆ ಮಾಡಲು ಕರ್ನಾಟಕ ಕಾಂಗ್ರೆಸ್ ಸಿದ್ಧತೆ ಮಾಡಿತ್ತು ಎನ್ನುವುದು ಮಾಧ್ಯಮವೊಂದರ ಸುದ್ದಿಯಿಂದ ಬಹಿರಂಗಗೊಂಡಿತ್ತು.

ಆದರೆ ಇಂದು ಸಿದ್ದರಾಮಯ್ಯ ತನ್ನ ಮಾತಿನಲ್ಲಿ ಉಲ್ಟಾ ಹೊಡೆದಿರುವುದರಿಂದ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಒಟ್ಟಾರೆ ಅಮಿತ್ ಶಾನನ್ನು ಬಂಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರ ಅಭಿಮಾನಿಗಳಿಗೇ ಹೆದರಿಬಿಟ್ಟಿದ್ದಾರೆ.

source:https://kannada.oneindia.com/news/karwar/modhi-amith-sha-can-come-to-karnataka-but-cant-disturb-sommunal-harmony-130570.html

ಚೇಕಿತಾನ

Tags

Related Articles

Close