ಪ್ರಚಲಿತ

ಕರ್ನಾಟಕದಲ್ಲಿ ಬಿ ಎಸ್ ವೈ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯನೇ ಹಾದಿ ಸುಗಮ ಮಾಡಿ ಕೊಟ್ರಾ?!

ಸಿದ್ಧರಾಮಯ್ಯನವರ ಆಡಳಿತ ನೀತಿ ಮತ್ತು ಬಿ ಎಸ್ ವೈ ರವರ ತಾಳ್ಮೆ!

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರದಿಂದ ಅದೆಷ್ಟೋ ಅವ್ಯವಹಾರಗಳು, ಹಗರಣಗಳು ನಡೆದವೋ ಅನ್ನೋದಕ್ಕೆ ಲೆಕ್ಕವೇ ಇಲ್ಲದಂತಾಗಿದೆ!! ಯಾಕೆಂದರೆ ಇವರ ಅಧಿಕಾರಾವಧಿಯಲ್ಲಿ ಭ್ರಷ್ಟರಿಗೆ ಅನೂಕೂಲವಾಯಿತೇ ಹೊರತು ಬಡವರು ಬಡವರಾಗಿಯೇ ಉಳಿದ್ದಾರೆ. ಆದರೆ ಬ್ಲಾಕ್ ಮನಿ ದಂದೆಯಲ್ಲಿ ತೊಡಗಿರುವವರಿಗೆ ಪರ್ವಕಾಲವಾಗಿದ್ದಂತೂ ನಿಜ!!

ಹೌದು… ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಏನೆಲ್ಲಾ ನಡೆಯಿತು, ಏನೆಲ್ಲಾ ಅವ್ಯವಹಾರಗಳು ನಡೆಯಿತು ಎನ್ನುವುದನ್ನು ಪಟ್ಟಿ ಮಾಡಿದರೇ ಅದು ಮುಗಿಯದ ಅಧ್ಯಾಯ ಎಂದೆನಿಸುತ್ತದೆ!! ಆದರೆ ಪ್ರತಿಯೊಂದು ವಿಚಾರವನ್ನು ಕೂಲಂಕುಶವಾಗಿ ಗಮನಿಸುತ್ತಾ ಹೋದರೆ ಅದೆಷ್ಟೋ ತಾರತಮ್ಯಗಳು, ಅನಾಚಾರಗಳು ನಡೆದಿವೆ ಎಂದರೆ ಅದು ಹೇಳತೀರದು. ಅಷ್ಟೇ ಅಲ್ಲದೇ ಹಿಂದೂಗಳನ್ನು ಕಾಲಿನ ಕಸಕ್ಕಿಂತಲೂ ಕಡೆಯಾಗಿ ಕಂಡಿದೆ ಎಂದರೂ ತಪ್ಪಾಗಲಾರದು!! ಯಾಕೆಂದರೆ ಇತ್ತೀಚೆಗಷ್ಟೇ ಕಾಂಗ್ರೆಸ್ಸಿನ ಪ್ರಭಾವಿ ನಾಯರೆನಿಸಿದ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷ ಜಿ ಪರಮೇಶ್ವರ್ ಅವರು ನೀಡಿದ ಹೇಳಿಕೆಯನ್ನು ಗಮನಿಸಿದಾಗ ಅಥವ ಕೇಳಿದಾಗ ಯಾವ ಮನುಷ್ಯನಿಗಾದರೂ ಒಂದು ಕ್ಷಣ ಕೋಪ ಉಮ್ಮಳಿಸಿ ಬರುತ್ತೆ. ಅವರೇನು ಹೇಳಿದರು ಗೊತ್ತೇ?? “ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಪಕ್ಷ ಬಲಿದಾನ ಮಾಡಿದೆ. ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು. ಮುಸ್ಲಿಮರು ಕಾಂಗ್ರೆಸ್ ಜೊತೆ ಇರಬೇಕು” ಎಂದು ಮೈಸೂರಿನ ಅಲ್ಪಸಂಖ್ಯಾತರ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಹೇಳಿರಬೇಕಾದರೆ ಸಿದ್ದರಾಮಯ್ಯ ಸರಕಾರದಲ್ಲಿ ಹಿಂದೂಗಳಿಗೆ ಕಿಂಚಿತ್ತೂ ಬೆಲೆನೇ ಇಲ್ಲವೇ??

ಕೇವಲ ಅಲ್ಪಸಂಖ್ಯಾತರ ಮತಕೋಸ್ಕರ ತನ್ನ ಸ್ವ ಧರ್ಮದ ಬಗ್ಗೆ ತುಚ್ಛವಾಗಿ ಕಾಣುವ ಈ ರಾಜಕಾರಣಿಗಳಿಗೆ ಏನು ಹೇಳಬೇಕು?? ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು ಎಂದು ಹೇಳಿದ್ದಲ್ಲದೇ, ಸ್ವಾತಂತ್ರ್ಯ ಬಂದಾಗ ಬಿಜೆಪಿ ಅಧಿಕಾರದಲ್ಲಿ ಇದ್ದಿದ್ದರೆ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು. ದೇಶ ವಿಭಜನೆ ಆಗಿದ್ದು ಸರಿಯಲ್ಲ, ಪಾಕಿಸ್ತಾನ-ಭಾರತ ಒಂದೇ ದೇಶವಾಗಿ ಉಳಿಯಬೇಕಿತ್ತು ಎಂದು ಪರಮೇಶ್ವರ್ ಹೇಳಿದ್ದಾರೆ ಎಂದರೆ ಭಾರತ ಮುಸ್ಲೀಂ ರಾಷ್ಟ್ರವಾಗುವುದೇ ಇವರ ಕನಸಾಗಿದೆಯೇ??

ಇನ್ನು ಕೇಂದ್ರ ಸರಕಾರ 1.60 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು ಅಷ್ಟೇ ಪ್ರಮಾಣದ ಗೋಧಿ ಖರೀದಿಸಿ ರಾಜ್ಯಕ್ಕೆ ನೀಡುತ್ತಿದ್ದು, ಅದನ್ನು ವಿತರಿಸುತ್ತಿರುವುದನ್ನೇ ಸಿದ್ದರಾಮಯ್ಯ ಸರಕಾರ ಸಾಧನೆ ಎಂದುಕೊಳ್ಳುತ್ತಿದೆ. ಆದರೆ ಜನಸಾಮಾನ್ಯರ ಆ ಕ್ಷಣದ ಹಸಿವು ನೀಗಿಸುವುದು ಅತ್ಯಂತ ಸ್ವಾಗತಾರ್ಹ. ಆದರೆ ರಾಜ್ಯ ಸರ್ಕಾರದ ಕೊಡುಗೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಪಾಲು ಶೇಕಡ 90ರಷ್ಟಿದೆ ಎನ್ನುವುದನ್ನು ಮಾತ್ರ ಎಲ್ಲೂ ಹೇಳಿದ್ದೇ ಇಲ್ಲ, ಅದು ಬಿಡಿ!! ಅನ್ನ ನೀಡುವುದರ ಜತೆಗೆ ಅನ್ನ ಬೆಳೆಯುವ ಕೆಲಸಕ್ಕೂ ಸರಕಾರ ಮುಂದಾಗಬೇಕಿತ್ತು. ಆದರೆ ರೈತರಿಗೆ ಸಾಲಮನ್ನಾ ಮಾಡುವುದಾಗಿ ಘೋಷಿಸಿ ಅನ್ಯಾಯ ಮಾಡಿದ್ದು ಎಷ್ಟರಮಟ್ಟಿಗೆ ಸರಿ?? ಹಾಗಾಗಿ ತಮ್ಮ ಅಧಿಕಾರವಾಧಿಯಲ್ಲಿ ಯಾವುದೇ ರೀತಿಯ ಶಾಶ್ವತ ಯೋಜನೆಯನ್ನು ಜಾರಿಗೆ ತರಲಿಲ್ಲ.

ಇನ್ನು 2007 ಮತ್ತು 2009ರ ಅತಿವೃಷ್ಟಿಗೆ ಗದಗದ ಜನ ಮನೆ ಕಳೆದುಕೊಂಡಿದ್ದರು. ಅವರಿಗೆ ಆಸರೆ ಯೋಜನೆ ಅಡಿಯಲ್ಲಿ ಅಂದಿನ ಬಿಜೆಪಿ ಸರ್ಕಾರ ಸೂರು ಕೂಡ ನೀಡಿತ್ತು. ಆದರೆ, ಇದರ ಹಂಚಿಕೆಯಾಗುವಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಟ್ಟಿದ ಮನೆಗಳು ಶಿಥಿಲಾವಸ್ಥೆ ತಲುಪಿದವೇ ಹೊರತು ಫಲಾನುಭವಿಗಳ ಕೈ ಸೇರಲಿಲ್ಲ. ಈ ಕುರಿತು ಬೇಸರ ವ್ಯಕ್ತ ಪಡಿಸಿರುವ ನರಗುಂದ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಸಿಸಿ ಪಾಟೀಲ್, ನಾವು ಕಟ್ಟಿಸಿದ ಮನೆಯನ್ನು ಹಂಚಿಕೆ ಮಾಡುವಷ್ಟು ಕೆಲಸವನ್ನೂ ಈಗಿನ ನರಗುಂದ ಕ್ಷೇತ್ರದ ಎಂಎಲ್‍ಎ ಬಿ ಆರ್ ಯಾವಗಲ್ ಮಾಡುತ್ತಿಲ್ಲ. ಅವರಿಗೆ ಸಾರ್ವಜನಿಕರ ಹಿತಕ್ಕಿಂತ ದ್ವೇಷದ ರಾಜಕಾರಣ ಹೆಚ್ಚಾಗಿದೆಯೆಂದು ಆರೋಪಿಸಿದ್ದಾರೆ. ಹಾಗಾದರೆ ಜನಸಾಮಾನ್ಯರಿಗೆ ಸಿದ್ದರಾಮಯ್ಯ ಸರಕಾರದಲ್ಲಿ ನೆಲೆ ಇಲ್ಲವೇ??

ಅಧಿಕಾರಕ್ಕೆ ಬಂದ ಕೂಡಲೇ ಪಿ.ಎಫ್.ಐ, ಕೆ.ಎಫ್.ಡಿ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ಗಳನ್ನು ಹಿಂದಕ್ಕೆ ಪಡೆದ ಸಿದ್ದರಾಮಯ್ಯನವರು, ಈ
ಕಾರ್ಯಕರ್ತರನ್ನು ದೇಶ ಕಾಯುವ ಸೈನಿಕರೆಂದು ಭಾವಿಸಿದಿರೋ ನಾ ಕಾಣೆ!! ಆದರೆ ಪಿ.ಎಫ್.ಐ, ಕೆ.ಎಫ್.ಡಿ ಉಗ್ರ ಸಂಘಟನೆಗಳ ಮೇಲೆ ಒಲವನ್ನು ತೋರುತ್ತಿರುವ ಇವರಿಗೆ ರಾಜ್ಯದಲ್ಲಿ 19 ಹಿಂದೂ ನಾಯಕರ ಕೊಲೆಯಾಯಿತಲ್ಲ, ಆ ಸಂದರ್ಭದಲ್ಲಿ ಕಿಂಚಿತ್ತೂ ಕೂಡ ಮಾನವೀಯತೆಯನ್ನೇ ತೋರಲೇ ಇಲ್ಲ ಯಾಕೆ? ಪಿ.ಎಫ್.ಐ, ಕೆ.ಎಫ್.ಡಿ ಉಗ್ರಗಳಲ್ಲ ಎಂಬುವುದಕ್ಕಾಗಿಯೇ??

ಬಡವರ ಪರ, ಸಮಾಜವಾದಿ ಎನ್ನುತ್ತ ಕೋಟಿ ರೂ. ವಾಚ್ ಕಟ್ಟಿಕೊಂಡು ಐಷರಾಮಿ ಜೀವನವನ್ನೇ ನಡೆಸಿರುವ ಸಿದ್ದರಾಮಯ್ಯ ಅವರು ತನ್ನ ಕಾರಿನ ಮೇಲೆ ಗೂಬೆ ಕುಳಿತುಕೊಂಡಿತು ಎನ್ನುವ ಕಾರಣಕ್ಕಾಗಿ ಕಾರನ್ನೇ ಬದಲಿಸಿದರು!! ಇನ್ನು ಕೇವಲ ಚಾ, ಕಾಫಿ, ಬಿಸ್ಕೆಟ್, ಟವೆಲ್ ಗಾಗಿ ಕೋಟಿಯಾಂತ್ಯರ ರೂಪಾಯಿ ಹಣವನ್ನು ವ್ಯಯಿಸಿರುವ ಇವರು, ಇನ್ನು ತಮ್ಮ ನೆಚ್ಚಿನ ಶಾಸಕರ ಬಂಡವಾಳವನ್ನು ಹೊರತೆಗೆದರೆ ಸಾಲು ಸಾಲು ಹಗರಣಗಳು, ವಿವಾದಗಳು ಕಾಣುತ್ತಲೇ ಹೋಗುತ್ತವೆ!!

ಬಿಜೆಪಿ ಸರಕಾರದ ವಿರುದ್ಧ ತೊಡೆ ತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡಿದಾಗ ಏನೋ ಕರ್ನಾಟಕಕ್ಕೊಂದು ಹೊಸ ಆಶಾಕಿರಣ, ಹೊಸ ನಾಯಕತ್ವ ಸಿಕ್ಕಿತು ಅಂತ ಖುಷಿ ಪಟ್ಟಿದ್ದವರೇ ಹೆಚ್ಚು.. ಆದರೆ ನೀವು ಮಾಡಿದ್ದರೂ ಏನು?? ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲೇ ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಇಬ್ಬರು ವಿಚಾರವಾದಿಗಳು, ಡಿ.ಕೆ.ರವಿ, ಅನುರಾಗ್ ತಿವಾರಿ ಇಬ್ಬರು ಐಎಎಸ್ ಅಧಿಕಾರಿಗಳು, ಗಣಪತಿ ಹಾಗು ಕಲ್ಲಪ್ಪ ಹಂಡಿಬಾಗ್ ಇಬ್ಬರು ಡಿವೈಎಸ್‍ಪಿಗಳು ಆತ್ಮಹತ್ಯೆ ಮಾಡಿಕೊಂಡರು.

ಇನ್ನು ಇತ್ತೀಚೆಗೆ ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಅವರ ಕೊಲೆಯಲ್ಲಿ ಸಚಿವ ವಿನಯ ಕುಲಕರ್ಣಿಯವರ ಪಾತ್ರವಿದ್ದು, ಯೋಗೀಶ್ ಗೌಡ ಅವರ ಪರವಾಗಿ ವಾದ ಮಾಡುತ್ತಿರುವ ವಕೀಲ ಆನಂದ ಅವರಿಗೆ ಬೆದರಿಕೆ ಹಾಕಿರುವುದು ತಿಳಿದು ಬಂದಿದೆ!! ಆದರೆ ಈಗಾಗಲೇ ಹಲವಾರು ಪ್ರಕರಣಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಆದರೆ ಈ ಕೊಲೆಗೆ ಗಣಿ ಮತ್ತು ಭೂವಿಜ್ಞಾನ ಖಾತೆಯ ಸಚಿವ ವಿನಯ್ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಅಷ್ಟೇ ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸಚಿವರ ರಕ್ಷಣೆಗೆ ನಿಂತಿರುವುದು ಆಘಾತಕಾರಿ ಸಂಗತಿಯಾಗಿದೆ!! ಇನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಹೆಸರು ಡಿವೈಎಸ್ಪಿ ಸಾವಿನ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದು, ಸಿಬಿಐ ತನಿಖೆಯೂ ಆರಂಭಗೊಂಡಿದೆ. ಆದರೂ ಈ ಸಚಿವರು ಸಚಿವ ಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂದರೆ ಕೊಲೆಗಟುಕರಿಗೆ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವ ಸ್ಥಾನವೂ ಸಿಗುತ್ತೆ ಎಂದಾಯಿತು!!

ಇನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಸೈ ಮಲ್ಲಿಕಾರ್ಜುನ ಬಂಡೆ ಅವರ ಕೊಲೆಯ ರಹಸ್ಯ ಇನ್ನು ಬಯಲಾಗಲೇ ಇಲ್ಲ!! ಒಬ್ಬ ಮಹಿಳಾ ಡಿವೈಎಸ್‍ಪಿ ಕೆಲದಿನಗಳ ಕಾಲ ರಜೆಯಲ್ಲಿದ್ದು ಆ ಬಳಿಕ ಆಕೆ ಕಾಣೆಯಾದರು. ಆದರೆ ಆಕೆ ಪತ್ತೆಯೇ ಈವರೆಗೆ ಆಗಿಲ್ಲ, ಹಾಗಾದರೆ ಎಲ್ಲಿ ಹೋದರು ಡಿವೈಎಸ್‍ಪಿ ಮೇಡಂ?? ಕಬ್ಬು ಬೆಳೆಗಾರ ವಿಠಲ ಅರಭಾವಿ ಬೆಳಗಾವಿಯ ಸುವರ್ಣ ಸೌಧದ ಎದುರೇ ಆತ್ಮಹತ್ಯೆ ಮಾಡಿಕೊಂಡರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಮಾಲೆಗಳೇ ನಡೆದು ಹೋಯಿತು. ಇಂಥ ಅನೇಕ ದುರಂತಗಳು ನಡೆದರೂ ಒಂದೇ ಒಂದು ತನಿಖೆಯನ್ನೂ ಸರಕಾರ ಜವಾಬ್ದಾರಿಯಿಮದ ನಡೆಸಲಿಲ್ಲ ಆದರೆ, ಇದೆಲ್ಲವೂ ಕೂಡ ರಾಜ್ಯದ ಜನಮಾನಸದಿಂದ ಇನ್ನು ಮರೆಯಾಗಿಲ್ಲ!!

ಇನ್ನು, ಲಿಂಗಾಯಿತ ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ಅದೆಷ್ಟೋ ಆಟಗಳನ್ನು ಆಡಿ, ಮುಸಲ್ಮಾನ ಓಲೈಕೆಗೆ ಟಿಪ್ಪು ಜಯಂತಿಯನ್ನು ಆಚರಿಸಲು ಸೂಚನೆ ನೀಡಿರುವುದರ ಜೊತೆಗೆ ಟಿಪ್ಪು ಒಬ್ಬ ದೇಶಪ್ರೇಮಿ ಎನ್ನುವ ಪಟ್ಟವನ್ನೂ ಕೊಟ್ಟುಬಿಟ್ಟರು.. ಇವೆಲ್ಲಾ ಕೂಡ ಸಿದ್ದರಾಮಯ್ಯ ಸರಕಾರ ತಮ್ಮ ರಾಜಕೀಯ ಚದುರಂಗದಾಟದ ದಾಳಗಳನ್ನಾಗಿ ಉಪಯೋಗಿಸಿ ಎಲ್ಲವನ್ನೂ ತಮ್ಮ ಸ್ವಾರ್ಥಕ್ಕಾಗಿಯೇ ಬಳಸಿಕೊಂಡಿದ್ದಂತೂ ಅಕ್ಷರಶಃ ನಿಜ.

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ತಮ್ಮ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರ ಮಾಡಿರುವ ವಿಶೇಷ ಸಾಧನೆಗಳನ್ನು ನೋಡಿದಾಗ ಅಯ್ಯೋ.. ಇವರಿಗೆ ಓಟು ಹಾಕಿ ಗೆಲ್ಲಿಸಿದವರು ನಾವೇ ಎನ್ನುವ ಪಶ್ಚತ್ತಾಪದ ಕೂಗು ಬಂದರೂ ಬರಬಹುದೇನೋ? ಒಮ್ಮೆ ಯೋಚಿಸಿ ಮುಂದಿನ ಸಮಾಜವನ್ನು ಕಟ್ಟುವ ಪ್ರತಿಯೊಬ್ಬರು ನಾಳೆಯ ಭವಿಷ್ಯದ ಬಗ್ಗೆ ಚಿಂತಿಸುವುದು ಬಹು ಮುಖ್ಯ. ಕೊಲೆಗಟುಕರನ್ನು, ಭ್ರಷ್ಟಚಾರಿಗಳನ್ನು ಅಧಿಕಾರದ ಸುಪ್ಪತ್ತಿಗೆಯಲ್ಲಿ ಮೆರೆಸಿರುವ ಇವರಿಗೆ ದಕ್ಷ ಅಧಿಕಾರಿಗಳೆಂದರೆ ಆಗದು, ಪ್ರಾಮಾಣಿಕರೆಂದರೇ ಆಗದು ಕೊನೆಗೆ ಹಿಂದೂಗಳು ಕೂಡ ಕಾಂಗ್ರೆಸ್ಸಿನ ಪಾಲಿಗೆ ಇಲ್ಲವಾಯಿತು ಯಾಕೆಂದರೆ ಕಾಂಗ್ರೆಸ್ಸಿನ ರಕ್ತ ಮುಸಲ್ಮಾನರಿಗೆ ಮಾತ್ರ ಮೀಸಲಾಗಿದೆ ಅಲ್ವೇ?? ಇನ್ನು ನಮಗೆಲ್ಲಿದೆ ಜಾಗ!! .

– ಅಲೋಖಾ

Tags

Related Articles

Close