ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ನಾಲ್ಕೂವರೆ ವರ್ಷ. ಈ ನಾಲ್ಕೂವರೆ ವರ್ಷ ಈ ಕಾಂಗ್ರೆಸ್ ಸರ್ಕಾರ ಅದ್ಯಾವ ರೀತಿ ತೆವಲಿಕೊಂಡು ಬರುತ್ತಿತ್ತು ಎಂಬುದನ್ನು ರಾಜ್ಯದ ಜನತೆ ಕಣ್ಣಾರೆ ಕಂಡಿದ್ದಾರೆ. ಕೇವಲ 25% ಜರ ಓಲೈಕೆಗಾಗಿ, ರಾಜ್ಯದ 75% ಜನರನ್ನು ಮೋಸಗೊಳಿಸಿ, ವಿವಿಧ ಭಾಗ್ಯಗಳನ್ನು ಕರುಣಿಸಿ, ಈಗ ಚುನಾವಣೆ ಸಮೀಸುತ್ತಿದ್ದಂತೆ ರಾಜಕೀಯ ನಾಟಕವಾಡುತ್ತಿರುವ ಈ ಕಾಂಗ್ರೆಸ್ ನಾಯಕರು ಈಗ ಕೋಟಿ ಕೋಟಿ ಖರ್ಚು ಮಾಡಿ ನಡೆಸುತ್ತಿರುವ ಬೆಳಗಾವಿ ಅಧವೇಶನದಲ್ಲೂ ತನ್ನ ಜಾನ್ಮೆ ಮೆರೆದು, ರಾಜಕೀಯವಾಗಿ ವಿಪಕ್ಷಗಳ ಹಾಗೂ ಜನರ ಕಣ್ಣಿಗೆ ಮಣ್ಣೆರಚಿ ಬಿಟ್ಟಿದ್ದಾರೆ.
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಮೇಲೆ ಸಿಬಿಐ ಎಫ್‍ಐಆರ್ ದಾಖಲಿಸಿದ ನಂತರ ವಿಪಕ್ಷಗಳು ಜಾರ್ಜ್ ರಾಜೀನಾಮೆಯನ್ನು ಕೇಳಿತ್ತು. ಇಡೀ ರಾಜ್ಯದ ಜನತೆ ಕೂಡಾ ಜಾರ್ಜ್ ರಾಜೀನಾಮೆಯನ್ನು ಕೇಳಿದ್ದರು. ಹಲವಾರು ಸುದ್ಧಿ ಮಾಧ್ಯಮಗಳು ಸಮೀಕ್ಷೆ ನಡೆಸಿ ಜನರ ಬಳಿ ಹೋಗಿದ್ದವು. ಈ ಎಲ್ಲಾ ಸಮೀಕ್ಷೆಯಲ್ಲೂ ಜಾರ್ಜ್ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಆಗ್ರಹಿಸಿದ್ದವು. ಇದು ಜನರ ಮಿಡಿತವೇ ಹೊರತು ರಾಜಕೀಯ ಪಕ್ಷಗಳ ಕೈವಾಡ ಅಲ್ಲ. ಜನತಾ ನ್ಯಾಯಾಲಯದಲ್ಲಿಯೇ ತೀರ್ಪು ಬಂದರೂ ಕೆ.ಜೆ.ಜಾರ್ಜ್ ಮಾತ್ರ ಜಗ್ಗಲೇ ಇಲ್ಲ. ಸಿಎಂ.ಸಿದ್ದರಾಮಯ್ಯನವರ ಆಶೀರ್ವಾದದಲ್ಲಿ, ಕೈಕಮಾಂಡ್ ಕೃಪಾಕಟಾಕ್ಷದಲ್ಲಿ ಬೆಚ್ಚಗೆ ಅದೇ ಸಚಿವ ಸ್ಥಾನದ ಸೀಟಿನಲ್ಲಿ ಕುಂತಿದ್ರು ಜಾರ್ಜ್.
ಆದರೆ ವಿಪಕ್ಷಗಳು ತಮ್ಮ ಹಠವನ್ನು ಬಿಡಲೇ ಇಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಜಾರ್ಜ್ ರಾಜೀನಾಮೆ ಕೇಳಲು ಸಜ್ಜಾಗಿ ನಿಂತಿದ್ದವು. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಜಾರ್ಜ್ ರಾಜೀನಾಮೆ ನೀಡುವವರೆಗೆ ಅಧಿವೇಶನ ನಡೆಸಲು ಬಿಡೋದಿಲ್ಲ ಎಂದು ಪ್ರತಿಭಟನೆ ನಡೆಸಿ ಅಧಿವೇಶನವನ್ನು ಧಿಕ್ಕರಿಸಿತ್ತು. ಇದರ ಮಧ್ಯೆ ಸದಾ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡು ಲಾಭ ಮಾಡಿಕೊಳ್ಳುವ ಜೆಡಿಎಸ್ ಮಾತ್ರ ಕಾಂಗ್ರೆಸ್ಸಿಗರಲ್ಲಿ ಒಳ ಒಪ್ಪಂದ ಮಾಡಿಕೊಂಡು, “ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ” ಎಂದು ಹೇಳಿತ್ತು. ಬಿಡಿ… ಆ ಪಕ್ಷದ ಬುದ್ಧಿಯೇ ಹಾಗೇನೆ ಅಲ್ವಾ…
ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರಿಮಿನಲ್ ಮೆಂಟಾಲಿಟಿಯುಳ್ಳ ಪಕ್ಷ ಅನ್ನೋದು ಗುಟ್ಟಾಗಿ ಉಳಿದಿಲ್ಲ. ತನ್ನ ಕೆಲಸ ಪೂರ್ಣಗೊಳ್ಳಬೇಕಾದರೆ ಯಾವ ಕೃತ್ಯಕ್ಕೂ ಕೈಹಾಕಲು ಹಿಂದೆ ಮುಂದೆ ನೋಡೋದಿಲ್ಲ ಆ ಪಕ್ಷ. ತನ್ನ ಸ್ವಾರ್ಥ ಸಾಧನೆಗಾಗಿ ದೇಶಪ್ರೇಮವನ್ನೇ ಬದಿಗೊತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಈ ಪಕ್ಷ ಪ್ರಸ್ತುತ ನಡೆಯುತ್ತಿರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಯಾವ ಪ್ರಮುಖ ಬೆಳವಣಿಗೆ ನಡೆಯಬೇಕಿತ್ತೋ ಅದೇ ನಡೆಯದೆ ತನ್ನ ಕೆಲಸವನ್ನು ಆರಾಮವಾಗಿ ಪೂರೈಸಿಕೊಳ್ಳುತ್ತಿದೆ ಕಾಂಗ್ರೆಸ್ ಪಕ್ಷ.
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಸಚಿವ ಕೆ.ಜೆ.ಜಾರ್ಜ್ ಮೇಲೆ ಎಫ್‍ಐಆರ್ ದಾಖಲಿಸಿರುವ ಪ್ರಕರಣ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಸಂಪಾದನೆಗೆ ಐಟಿ ದಾಳಿ ಸಂಬಂಧಪಟ್ಟಂತೆ ವಿಪಕ್ಷಗಳು ರಾಜೀನಾಮೆ ಕೇಳಲು ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆ ಕಾವು ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸಿತ್ತು. ಇದು ಸರ್ಕಾರಕ್ಕೆ ವಿಪರೀತ ತಲೆನೋವಾಗಿ ಪರಿಣಮಿಸಿತ್ತು. ಸರ್ಕಾರ ಅಕ್ಷರಷಃ ಕಂಗಾಲಾಗಿ ಹೋಗಿತ್ತು.
ಇದಕ್ಕೆ ಕಾಂಗ್ರೆಸ್ ಬಿಟ್ಟ ಅಸ್ತ್ರವೇ ಕೆಪಿಎಂಇ ಆಕ್ಟ್. ರಾಜ್ಯ ಕಾಂಗ್ರೆಸ್ ಸರ್ಕಾರ ಈ ವಿಧೇಯಕವನ್ನು ಮಂಡಿಸಲು ಮುಂದಾಗಿ ದೊಡ್ಡ ಅವಾಂತರವೇ ನಡೆದುಹೋಗಿತ್ತು. ರಾಜ್ಯದ ವೈದ್ಯರು ಬೀದಿಗಿಳಿದು ಮುಷ್ಕರ ನಡೆಸಿದ್ದರು. ಇದರಿಂದ ರಾಜ್ಯದಾದ್ಯಂತ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಎಲ್ಲಾ ಖಾಸಗೀ ಆಸ್ಪತ್ರೆಗಳು ಬಂದ್ ಆಗಿದ್ದರಿಂದ ಹಲವಾರು ಜನರು ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಅರ್ಧ ಶತಕಕ್ಕೂ ಅಧಿಕ ಮಂದಿ ಈ ಖಾಸಗೀ ವೈದ್ಯರ ಮುಷ್ಕರಕ್ಕೆ ಬಲಿಯಾಗಿದ್ದರು. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತಿತ್ತು. ಆದರೆ ಬೇವು ತಿಂದರೂ ಪರವಾಗಿಲ್ಲ, ಬೆಲ್ಲ ಕಳೆದುಕೊಳ್ಳುವುದು ಬೇಡ ಎಂಬ ವಾದ ಕಾಂಗ್ರೆಸ್ ಸರ್ಕಾರದ್ದಾಗಿತ್ತು. ವೈದ್ಯರ ಮುಷ್ಕರದಿಂದ ಜನರ ಸಾವು ಸಂಭವಿಸಿದರೂ ಪರವಾಗಿಲ್ಲ, ಆದರೆ ಪಕ್ಷಕ್ಕೆ ಅತಿದೊಡ್ಡ ಬಂಡವಾಳವನ್ನು ಹಾಕಿ, ಕೇಳಿದಂತೆ ಹಣವನ್ನು ಸುರಿಸುವ ಕೆಜೆ.ಜಾರ್ಜ್ ಹಾಗೂ ಡಿಕೆ.ಶಿವಕುಮಾರ್‍ರನ್ನು ಕಳೆದುಕೊಳ್ಳಬಾರದು ಎಂಬ ಸ್ಪಷ್ಟ ನಿಲುವು ಕಾಂಗ್ರೆಸ್ ಪಕ್ಷದ್ದಾಗಿತ್ತು.
ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷ ವೈದ್ಯರ ಮುಷ್ಕರ ಎಂಬ ಬೆಂಕಿಗೆ ತುಪ್ಪ ಸುರಿಸಿ ಮತ್ತಷ್ಟು ಕಾವು ಪಡೆಯುವಂತೆ ಮಾಡಿತ್ತು. ಇದರ ಪರಿಣಾಮವೇ ರಾಜೀನಾಮೆ ಬೇಡಿಕೆಯ ಪ್ರತಿಭಟನೆಯ ಮೌನ. ವೈದ್ಯರ ಮುಷ್ಕರದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ, ಈ ಮಧ್ಯೆಯೂ ಬಿಜೆಪಿ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿ ಮಾಡಿದರೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಹೀಗಾಗಿ ಬಿಜೆಪಿಗರು ಸುಮ್ಮನಿದ್ದುಬಿಡುತ್ತಾರೆ. ಆವಾಗ ತಮ್ಮ ಕೆಲಸವನ್ನು ಸಲೀಸಾಗಿ ಮಾಡಿದಂತಾಗಿಯೂ ಆಗುತ್ತೆ, ಭ್ರಷ್ಟ ಹಾಗೂ ಕೊಲೆಗಟುಕ ಸಚಿವರ ರಾಜೀನಾಮೆ ಕೇಳುವ ಪ್ರಹಸನವೂ ಅಂತ್ಯವಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಖತರ್ನಾಕ್ ಕಲ್ಪನೆ.
ಸರ್ಕಾರ ಮಾತ್ರ ಚಳಿಗಾಲದ ಅಧಿವೇಶನದಲ್ಲಿ ತೀವ್ರ ಹಿನ್ನೆಡೆಯನ್ನು ಅನುಭವಿಸಿತು. ಕೇವಲ ಹಿಂದೂಗಳ ಧಮನಕ್ಕಾಗಿ ಮೌಢ್ಯ ನಿಷೇಧವನ್ನು ಮಾಡಿ, ಮುಸಲ್ಮಾನರ ಮೌಢ್ಯಗಳು ಏನೂ ಅಲ್ಲ ಎಂಬಂತೆ ಮತ್ತೆ ಮುಸಲ್ಮಾನರ ಓಲೈಕೆಯನ್ನು ಮಾಡುತ್ತಾ ಬರುತ್ತಿರುವ ಸರ್ಕಾರ ರಾಜ್ಯದ ಜನತೆಯನ್ನು ಹೇಗೆಲ್ಲಾ ಮೋಸಗೊಳಿಸುತ್ತಿದೆ ಎಂಬುದನ್ನು ಅರಿತುಕೊಳ್ಳಬಹುದು. ಇಷ್ಟೆಲ್ಲಾ ಮಾಡಿದ್ರೂನೂ ಯಾವೊಬ್ಬ ಸಚಿವನೂ ರಾಜೀನಾಮೆ ನೀಡದೆ ಕುರ್ಚಿಯಲ್ಲಿ ಗಟ್ಟಿ ಕುಳಿತುಕೊಂಡಿರುವುದು ಅವರ ಹಿಟ್ಲರ್ ಆಡಳಿತಕ್ಕೆ ಹಿಡಿದ ಕೈಗನ್ನಡಿ.
ಚುನಾವಣೆ ಸಮೀಪಿಸುತ್ತಿರುವಾಗ ಜರಗುತ್ತಿರುವ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ವಿಫಲತೆಗಳು, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಡಿಕೆಶಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಚಿವರುಗಳು ರಾಜೀನಾಮೆ ನೀಡಬೇಕಾದ ಸನ್ನಿವೇಶ ಹಾಗೂ ಟಿಪ್ಪು ಜಯಂತಿ ನೆಪದಲ್ಲಿ ಪೊಲೀಸ್ ರಾಜ್ ಹೇರಿಕೆ, ಮುಖ್ಯಮಂತ್ರಿ ಹಾಗೂ ಸಚಿವರುಗಳ ಭ್ರಷ್ಟಾಚಾರ ಅನಾಚಾರ ಇತ್ಯಾದಿ ಗಂಭೀರ ವಿಷಯಗಳು ಚರ್ಚೆಗೇ ಬಾರದಂತೆ ಮಾಡಿ, ಯಥಾವತ್ ಜಾರಿಗೊಳಿಸಲು ಸಾಧ್ಯವಿಲ್ಲ ಎಂಬ ನಗ್ನ ಸತ್ಯ ಕಾಂಗ್ರೆಸ್‍ಗೆ ಗೊತ್ತಿದ್ದರೂ, ರಮೇಶ್ ಕುಮಾರ್‍ರನ್ನು ಛೂ ಬಿಟ್ಟು ಕೆಪಿಎಂಇ ವಿಧೇಯಕವನ್ನು ಜಾರಿಗೊಳಿಸುವ ಸುದ್ಧಿ ಮೊದಲೇ ಹರಿಯಬಿಟ್ಟು, ಖಾಸಗೀ ವೈದ್ಯ ಲೋಕವೇ ಕಂಗಾಲಾಗಿ ಸಂಘರ್ಷಕ್ಕಿಳಿಯುವಂತೆ ಅವರನ್ನು ಪ್ರಚೋದಿದಿ, ಆ ನೆಪದಲ್ಲಿ ಮುಗ್ಧ ಜನಸಾಮಾನ್ಯರನ್ನು ಹಾಗೂ ಮಾಧ್ಯಮಗಳ ದಾರಿ ತಪ್ಪಸಿ ಸಹಾನುಭೂತಿಯನ್ನೇ ಗಳಿಸಿದ ಸರ್ಕಾರದ ಕುತಂತ್ರ ಯಾರಿಗೂ ಅರ್ಥವಾಗಲ್ಲ ಎಂದು ತಿಳಿದಿದೆ ರಾಜ್ಯ ಕಾಂಗ್ರೆಸ್ ಸರ್ಕಾರ.
ಕುಡುಕರಿಗಿನ್ನಿಲ್ಲ ಮಧ್ಯ ಭಾಗ್ಯ-ಬಾರ್ ಮಾಲೀಕರಿಂದ ಕೋಟಿ ಕೋಟಿ ಲಂಚ ಭಾಗ್ಯ..!!!
ಚುನಾವಣೆಗೆ ಹಣ ಬೇಕಲ್ವೇ… ಇದ್ದ ಹಣವನ್ನೆಲ್ಲಾ ನುಂಗಿ ನೀರು ಕುಡಿದದ್ದಾಯಿತು. ಇನ್ನುಳಿದ ಹಣಕ್ಕಾಗಿ ಏನು ಮಾಡೋಣ. ಚುನಾವಣೆಗೂ ಕೋಟಿ ಕೋಟಿ ಹಣಗಳು ಬೇಕಲ್ವೇ. ಏನೂ ಮಾಡೋಣ ಎಂಬ ಪ್ರಶ್ನೆಗೆ ಸರ್ಕಾರಕ್ಕೆ ಗೋಚರಿಸಿದ ಸೂಪರ್ ಐಡಿಯಾ ಕುಡುಕರ ಸಂಘ. ಬಾರ್ ಬಂದ್ ಮಾಡಿದರೆ ಸಾವಿರಾರು ಬಾರ್ ಮಾಲೀಕರು ಧಿಕ್ಕಾಪಲಾಗುತ್ತಾರೆ ಎನ್ನುವುದು ಗೊತ್ತಿರುವ ವಿಷಯ. ಇದಕ್ಕಾಗಿಯೇ ಸಿದ್ದರಾಮಯ್ಯ ಹಾಗೂ ಖತರ್ನಾಕ್ ಸಚಿವ ಶಾಸಕರೆಲ್ಲ ಸೇರಿಕೊಂಡು ಕ್ರಿಮಿನಲ್ ಐಡಿಯಾವನ್ನೇ ಕಂಡುಹುಡುಕಿದ್ದಾರೆ.
ಬಾರ್ ಮಾಲೀಕರಿಗೆ ಭಯವನ್ನು ಹುಟ್ಟಿಸಿ, ಬಾರ್ ಬಂದ್ ಮಾಡುತ್ತೇವೆ ಎಂಬ ಬೆದರಿಕೆಯನ್ನು ಹಾಕಿ ಅವರಿಂದ ಮುಂದೆ ಬರುವ ಚುನಾವಣೆಗೆ ಆರಾಮಾಗಿ ಹಣ ಪೀಕಿಸುವ ಪ್ರಯತ್ನ ರಾಜ್ಯ ಕಾಂಗ್ರೆಸ್‍ನದ್ದು. ಈ ಕಾಂಗ್ರೆಸ್ಸಿಗರು, ಈಗಾಗಲೇ ಬಂದ್ ಆಗಿದ್ದ ಸಾರಾಯಿಯನ್ನು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಸಾರಾಯಿಯನ್ನು ಕಡಿಮೆ ಬೆಲೆಗೆ ನೀಡಿ ಮತ್ತಷ್ಟು ಕುಡುಕರನ್ನು ಸೃಷ್ಟಿಸುವ ಯೋಜನೆಯನ್ನು ತರಲು ಮುಂದಾಗಿದ್ದ ಈ ರಾಜ್ಯ ಕಾಂಗ್ರೆಸ್ ಸರ್ಕಾರ ಬಾರ್ ಬಂದ್ ಮಾಡುವುದೇ..? ಸರ್ಕಾರದ ಬೊಕ್ಕಸದ ನಯಾ ಪೈಸೆಯನ್ನೂ ಉಳಿಸದೆ, ಹೋದಲ್ಲಿ ಬಂದಲ್ಲಿ ಸಾಲ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರ, ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯವನ್ನು ನೀಡುವ ಬಾರ್ ಉಧ್ಯಮವನ್ನು ಬಂದ್ ಮಾಡುವುದೇ..? ಚುನಾವಣೆ ಸಂದರ್ಭದಲ್ಲಿ ಜನರನ್ನು ಮೋಸಗೊಳಿಸಿ, ಕಾಂಗ್ರೆಸ್‍ಗೆ ಮತ ಹಾಕುವಂತೆ ಮಾಡಿ, ಜನರಿಗೆ ಹೊಟ್ಟೆ ತುಂಬಾ ಸಾರಾಯಿ ಭಾಗ್ಯಗಳನ್ನು ಕರುಣಿಸಿದ್ದ ಈ ಕಾಂಗ್ರೆಸ್ ನಾಯಕರು ಬಾರ್ ಬಂದ್ ಮಾಡುವರೇ..? ಪಕ್ಷದ ಯಾವುದೇ ಸಮಾವೇಶಕ್ಕೂ ಜನರನ್ನು ಸೇರಿಸಬೇಕಾದರೆ, ಅವರಿಗೆ ಮಧ್ಯಪಾನಗಳನ್ನು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸುವ ಈ ಕಾಂಗ್ರೆಸ್ಸಿಗರು ಬಾರ್ ಬಂದ್ ಮಾಡುವರೇ..?
ಖಂಡಿತಾ ಸಾಧ್ಯವಿಲ್ಲ. ಇದು ಕಾಂಗ್ರೆಸ್ ಸರ್ಕಾರದಿಂದ ಊಹಿಸಲೂ ಸಾಧ್ಯವಗದ ಮಾತು. ಅಷ್ಟಕ್ಕೂ ಈ ಕಾಂಗ್ರೆಸ್ ಸರ್ಕಾರ ಬಾರ್ ಬಂದ್ ಮಾಡುತ್ತೇವೆ ಎನ್ನುವುದು, ಬಾರ್ ಮಾಲೀಕರಿಂದ ಹಣ ಪಡೆಯುವ ಸ್ಪಷ್ಟ ಯೋಜನೆ. ಬಾರ್ ಬಂದ್ ಮಾಡುತ್ತೇವೆ ಎಂದು ಒಂದು ಹೇಳಿಕೆ ಕೊಟ್ಟರೆ ಇಡೀ ಬಾರ್ ಉಧ್ಯಮವೇ ಬೆಚ್ಚಿ ಬೀಳುತ್ತದೆ. ಆವಾಗ ಭಯ ಬಿದ್ದ ಬಾರ್ ಮಾಲೀಕರಿಂದ ಲಾಬಿ ಆರಂಭವಾಗುತ್ತದೆ. ಸಹಜವಾಗಿಯೇ ಬಾರ್ ಮಾಲೀಕರಿಂದ ಇಂತಿಷ್ಟು ಹಣದ ಘೋಷಣೆಯಾಗುತ್ತದೆ. ಮುಂದಿನ ಚುನಾವಣೆಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಮುಂದಿನ ಚುನಾವಣೆಗೆ ಹಣದ ಹೊಳೆ ಹರಿಸಲು ಯಾವುದೇ ಅಡ್ಡಿಯಿರುವುದಿಲ್ಲ. ಇದು ಖತರ್ನಾಕ್ ಸರ್ಕಾರದ ಅದ್ಭುತ ಪ್ಲಾನಿಂಗ್.
ಈ ಹಿಂದೆ ಸುಪ್ರೀಂ ಕೋರ್ಟ್, ಹೆದ್ದಾರಿಯ ಬಾರ್ ಮುಚ್ಚಬೇಕು ಎಂದು ಆದೇಶ ನೀಡಿದ್ದಾಗ, ಅದೇ ಬಾರ್ ಮಾಲೀಕರ ಲಾಬಿ ಹಾಗೂ ಅವರ ಹಣವನ್ನು ಪಡೆದು ರಸ್ತೆಗೇ ಮರುನಾಮಕರಣ ಮಾಡಿದ ಕುತಂತ್ರಿಗಳು. ರಾಜ್ಯ ಹೆದ್ದಾರಿಗೆ ಜಿಲ್ಲಾ ಹೆದ್ದಾರಿ ಎಂಬ ನಾಮಕರಣ ಮಾಡಿ ಸುಪ್ರೀಂ ಕೋರ್ಟ್‍ಗೇ ಚಳ್ಳೆ ಹಣ್ಣು ತಿನ್ನಿಸಿದ ಸರ್ಕಾರ ಇದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ..?
ಕಾಂಗ್ರೆಸ್ ಸರ್ಕಾರಗಳು ಮಧ್ಯ ನಿಷೇಧ ಮಾಡಿದ್ದು ಇತಿಹಾಸವಿದೆಯೇ..? ಗುಜರಾತಿನಲ್ಲಿ ನರೇಂದ್ರ ಮೋದಿ ಸರ್ಕಾರ ಮಧ್ಯ ನಿಷೇಧ ಮಾಡಿತ್ತು, ಬಿಹಾರದಲ್ಲಿ ನಿತಿಶ್ ಕುಮಾರ್ ಸರ್ಕಾರ ಮಧ್ಯ ನಿಷೇಧ ಮಾಡಿದೆ. ಆದರೆ ಎಂದಿಗಾದರೂ ಕಾಂಗ್ರೆಸ್ ಸರ್ಕಾರ ಮಧ್ಯ ನಿಷೇಧ ಮಾಡಿದ್ದು ಇತಿಹಾಸವೇ ಇಲ್ಲ. ಆದರೆ ಉಧ್ಯಮಿಗಳಿಗೆ ಬೆದರಿಸಿ ಅವರಿಂದ ಹಣ ಪಡೆದು ಮತ್ತೆ ಅವರ ಉಧ್ಯಮವನ್ನು ಪ್ರೋತ್ಸಾಹಿಸುವ ಕಾಂಗ್ರೆಸ್ ಬುದ್ಧಿ ಜನತೆಗೆ ಗೊತ್ತಿಲ್ಲದೇನಿಲ್ಲ.
ಒಟ್ಟಾರೆ ಈ ಕಾಂಗ್ರೆಸ್ ಎನ್ನುವುದು ಜನರಿಗೆ ಮೂಢ ನಂಬಿಕೆಯಾಗಿ ಹೋಗಿದೆ. “ನೀವು ವಿಧಾನ ಮಂಡಲದಲ್ಲಿ ಮೌಢ್ಯ ನಿಷೇಧ ಮಾಡಬೇಡಿ. ನೀವು ವಿಧಾನ ಸಭೆ ವಿಸರ್ಜಿಸಿ. ಆವಾಗ ಮೌಢ್ಯ ನಿಷೇಧ ಆದಂತೆಯೆ” ಎಂದು ಮತದಾರ ಹೇಳುತ್ತಿದ್ದಾನೆ. ವಿಧಾನ ಸಭಾ ಚುನಾವಣೆ ಹತ್ತಿರ ಬರುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಇನ್ನೂ ಹಲವಾರು ನಾಟಕಗಳೂ ಬಂದರೂ ಅಚ್ಚರಿಯಿಲ್ಲ. ಆದರೆ ಮುಂದಿನ ಚುನಾವಣೆಗೆ ಕಾಂಗ್ರೆಸ್‍ನ್ನು ಸೋಲಿಸಲು ರಾಜ್ಯದ ಮತದಾರ ಪ್ರಭು ಟೊಂಕ ಕಟ್ಟಿ ನಿಂತಿರುವುದಂತು ಸುಳ್ಳಲ್ಲ.
-ಸುನಿಲ್