ಪ್ರಚಲಿತ

ಕರ್ನಾಟಕದ ಅಂಧನ ಪಾಲಿಗೆ ಬೆಳಕಾದ ಪ್ರಧಾನಿ ಮೋದಿ

ಅಶಕ್ತರನ್ನು ಶಕ್ತರನ್ನಾಗಿಸುತ್ತಿರುವ ಪ್ರಧಾನಿಗೆ ಒಂದು ಸಲಾಮ್

“ಯಥಾ ರಾಜಾ ತಥಾ ಪ್ರಜಾ” ಈ ವಾಕ್ಯ ನಮೆಗಲ್ಲಾ ಬಹಳವಾಗಿ ಪರಿಚಿತ. ಚಾಣಕ್ಯ ಕೂಡ ಇಂತಹ ಚಿಂತನೆಯನ್ನೇ ಕೊಟ್ಟವರು. ಭಾರತದಲ್ಲಿ ಅಂತಹ ರಾಜ ಮತ್ತೊಮ್ಮೆ ಹುಟ್ಟಿಬರಲು ಸಾಧ್ಯವೇ? ಎಂಬ ಪ್ರಶ್ನೆ ಬಹಳವಾಗಿ ಕಾಡುತ್ತಿತ್ತು. ರಾಜನಂತೆ ಗಾಂಭೀರ್ಯ, ಮನಸ್ಸನಲ್ಲಿ ರಾಷ್ಟ್ರಕ್ಕೋಸ್ಕರ, ತನ್ನ ಪ್ರಜೆಯ ಒಳಿತಿಗಾಗಿ, ಅವರ ಉನ್ನತಿಗಾಗಿ ಕಾರ್ಯ ಮಾಡಬೇಕೆಂಬ ಅಗಾಧ ಇಚ್ಛಾಶಕ್ತಿ ಇರುವ ರಾಜ ಭರತಖಂಡದಲ್ಲಿ ಸ್ವತಂತ್ರರಾಷ್ಟ್ರದಲ್ಲಿ ಇದುವರೆಗೆ ಸಿಕ್ಕಿರಲಿಲ್ಲ. ಆದರೆ ಈಗಿನ ನಮ್ಮ ಪ್ರಧಾನಿಯನ್ನು ಗಮನಿಸಿದಾಗ, ಅವರು ತಮ್ಮ ಪ್ರಜೆಗಳ ಒಳಿತಿಗಾಗಿ ಕೈಗೊಳ್ಳುತ್ತಿರುವ ಯೋಜನೆಗಳನ್ನು ಗಮನಿಸಿದಾಗ ಶ್ರೇಷ್ಠ ರಾಜನೊಬ್ಬ ನಮ್ಮನ್ನು ಆಳುತ್ತಿದ್ಧಾನೆ ಅನ್ನುವ ಭಾವ ನಮ್ಮನ್ನು ಕಾಡುತ್ತೆ.

ನಿಜ. ಯಾರೋ ಒಬ್ಬ ಸಾಮಾನ್ಯ ಪ್ರಜೆ ತಮ್ಮ ಕಷ್ಟವನ್ನು ತಾಯಿಯಲ್ಲಿ ತೋಡಿಕೊಂಡಂತೆ, ಪ್ರಧಾನಿಗೆ ಪತ್ರ ಬರೆದಾಗ ಅವರಿಂದ ಅದೇ ಕ್ಷಿಪ್ರಗತಿಯಲ್ಲಿ ಬರುವ ಪ್ರತಿಕ್ರಿಯೆಯನ್ನು ಗಮನಿಸುವಾಗ ಹಾಗನಿಸುತ್ತೆ.  ಅವರು ಪ್ರಾರಂಭ ಮಾಡಿದ ಮನ್ ಕೀ ಬಾತ್‍ನಲ್ಲಿ ದೇಶದ ಕುರಿತಾಗಿ, ವಿಶೇಷ ಸಾಧನೆ ಮಾಡಿದವರನ್ನು ಮುಕ್ತವಾಗಿ ಪ್ರಶಂಸಿದಾಗ ಆ ಪ್ರತಿಭೆಗಳಿಗೆ ಆಗುವ ಹೆಮ್ಮೆಯ ಭಾವ ಅದು ವರ್ಣನೆಗೆ ನಿಲುಕದ್ದು. ಯಾವದೇ ಕಷ್ಟವನ್ನು ಪ್ರಧಾನಿ ಮೋದಿ ಯವರಿಗೆ ಪತ್ರದ ಮೂಲಕ ಬರೆದಾಗ, ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಿಸಿದಾಗ ಅವರು ಅದನ್ನು ಪರಿಶೀಲಿಸಿ ಪ್ರತಿಕ್ರಯಿಸುವ ರೀತಿ ಅಮೋಘ. ಬಹುಶಃ ವಿಶ್ವದ ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಅಪರೂಪದ ಆಳ್ವಿಕೆ ನೋಡಲು ಲಭಿಸಿರುವುದು ನಮ್ಮೆಲ್ಲರ ಭಾಗ್ಯವೆನ್ನಬಹುದು.

ಪತ್ರಗಳಿಗೆ ಸ್ಪಂದಿಸುವ ಪ್ರಧಾನಿ ಮೋದಿ

ಕಾನ್ಪುರದ ಸರೋಜ್ ಮಿಶ್ರಾ ರೆಂಬುವವರಿಗೆ ಅಸ್ಥಮಾ ದಿಂದಾಗಿ ಹಾಸಿಗೆ ಹಿಡಿಯುವ ಪ್ರಸಂಗ ಒದಗಿ ಬಂದಿತ್ತು. ತನ್ನ ಮನೆಯ ಆರ್ಥಿಕ ಪರಿಸ್ಥಿತಿಯು ಆಗ ಕಠಿಣ ಪರಿಸ್ಥಿತಿಯಲ್ಲಿತ್ತು. ಸರೋಜ್ ಅವರ ಪುತ್ರರಾದ 13 ವರ್ಷದ ಸುಶಾಂತ್ ಮಿಶ್ರ ಹಾಗು 8 ವರ್ಷ ಪ್ರಾಯದ ತನ್ಮಯ್ ತಾವು ಅಧ್ಯಯನ ಮಾಡುತ್ತಿರುವ ಶಾಲೆಗೆ ಹಣ ಕಟ್ಟಲಾಗದೇ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿಯು ನಿರ್ಮಾಣವಾಯಿತು. ಆಗ ತಮ್ಮ ಪರಿಸ್ಥಿತಿಯ ಕುರಿತಾಗಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದರು. ಅವರು ಪತ್ರ ಬರೆದ ಒಂದೇ ತಿಂಗಳಲ್ಲಿ ಕಾನ್ಪುರ ವೈದ್ಯಾಧಿಕಾರಿಗೆ ಸರೋಜ್ ಅವರ ಆರೋಗ್ಯ ಸ್ಥಿತಿಯನ್ನು ಶೀಘ್ರವಾಗಿ ಸುಧಾರಿಸುವಂತೆ ಪ್ರಧಾನಿ ಮೋದಿ ಕಾರ್ಯಾಲಯದಿಂದ ಮರುತ್ತರ ಬಂದಿತ್ತು. ಇದು ಪ್ರಧಾನಿ ಮೋದಿಯವರ ಪ್ರಜಾಕಾಳಜಿಗೆ ಒಂದು ನಿದರ್ಶನ.

ಇಂತಹದ್ದೇ ಅನುಭವ ಕಾಸರಗೋಡಿನ ಅಶ್ವಲ್ ಶೆಟ್ಟಿ ಯವರಿಗೂ ಅನುಭವ ಆಗಿದೆ. ತಾವು ಪ್ರತಿನಿತ್ಯ ನಡೆಯುವ ರಸ್ತೆಯಲ್ಲಿ ಪ್ರಮುಖವಾಗಿ ಮಳೆಗಾಲದಲ್ಲಿ ನಡೆಯಲು ಅಸಾಧ್ಯವಾಗಿದೆ, ಅದೊಂದು ದುಸ್ಸಾಸಹವೇ ಅಗಿದೆ ಎಂದು ಅಶ್ವಲ್ ತಮ್ಮ ಜನಪ್ರತಿನಿಧಿಗಳಿಗೆಲ್ಲಾ ತಿಳಿಸಿದರು. ಆದರೆ ಅವರಿಂದ ಯಾವುದೇ ಧನಾತ್ಮಕವಾದ ಪ್ರತಿಕ್ರಿಯೆ ಬರಲಿಲ್ಲ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಈ ಸಮಸ್ಯೆಗಳ ಕುರಿತಾಗಿ ಪತ್ರ ಬರೆದರೆ ಪರಿಹಾರ ಸಿಗಬಹುದೆಂಬುದಾಗಿ ಊರಿನ ಕೆಲವರು ಸಲಹೆ-ಸೂಚನೆಯನ್ನು ಕೊಟ್ಟರು. ಕಾಸರಗೋಡಿನ ಮಂಗಲ್ಪಾಡಿಯ ಕೋಡಿಬೈಲ್ ನಿವಾಸಿಯಾದ ಅಶ್ವಲ್ ಈ ವಿಚಾರವನ್ನು ತಿಳಿದು ಪ್ರಧಾನಿಗೆ ತಮ್ಮ ಸಮಸ್ಯೆಗಳ ಕುರಿತಾಗಿ ವಿಸ್ತಾರವಾಗಿ ಪತ್ರವನ್ನು ಬರೆಯುತ್ತಾರೆ. ಒಂದೇ ತಿಂಗಳಲ್ಲಿ ಪ್ರಧಾನಿ ಮಂತ್ರಿಯವರ ಕಾರ್ಯಾಲಯವು ಕೇರಳ ಸರಕಾರದ ಕಾರ್ಯದರ್ಶಿಗೆ ಆ ರಸ್ತೆಯನ್ನು ರಿಪೇರಿ ಮಾಡುವಂತೆ  ಪತ್ರದ ಮೂಲಕ ಸೂಚನೆಯನ್ನು ತಲುಪಿಸುತ್ತೆ. ತಕ್ಷಣ ಎಚ್ಚೆತ್ತ ಕೇರಳ ಸರಕಾರ ಆ ರಸ್ತೆಯನ್ನು ಅಭಿವೃದ್ದಿ ಮಾಡಲು ಕಾಮಗಾರಿಯನ್ನು ಪ್ರಾರಂಭಿಸಿತ್ತು. “ನರೇಂದ್ರ ಮೋದಿಯವರು ಇಂತಹ ಚಿಕ್ಕ ಸಮಸ್ಯೆಗಳಿಗೂ ಸ್ಪಂದಿಸುವ ರೀತಿ ನಂಬಲು ಅಸಾಧ್ಯವಾದುದು. ಇದು ನನಗೊಂದು ಸುಂದರ ಅನುಭವವನ್ನು ತಂದುಕೊಟ್ಟಿದೆ” ಎಂದು ಅಶ್ವಲ್ ತಮ್ಮ ಮನದಾಳದ ಮಾತುಗಳನ್ನು ಮಾಧ್ಯಮದೊಂದಿಗೆ ಹಂಚಿದ್ದಾರೆ.

ಇದೇ ತೆರನಾದ ಅನೇಕ ಘಟನೆಯನ್ನು, ಸಾಮಾನ್ಯಪ್ರಜೆಗೂ ಆದ ಅನುಭವವನ್ನು ಹಂಚಿಕೊಳ್ಳಬಹುದು. ಇತ್ತೀಚೆಗೆ ಸೂರಿಲ್ಲದೇ ಗೋಳಾಡಿತ್ತಿದ್ದ ವಿಜಯಪುರ ಜಿಲ್ಲೆಯ ಅಂಧರೊಬ್ಬರಿಗೆ ಸೂರು ಕಲ್ಪಿಸಿಕೊಡುವ ಮೂಲಕ ಬೆಳಕಾದ್ದಾರೆ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ. ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಅಂಧ ಕಾಶೀನಾಥ್ ಸೂರಿಲ್ಲದೇ ಇಂಚಗೇರಿ ಗ್ರಾಮದ ಪಂಚಾಯತಿಯ ಮೊರೆ ಹೋಗಿದ್ದರು. ಆದರೆ ಅದನ್ನು ಲೆಕ್ಕಲಿಸದೇ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಸಡ್ಡೆಯನ್ನು ತೋರಿಸಿದ್ದಾರೆ.

ಇದರಿಂದ ನೊಂದಿದ್ದ ಕಾಶೀನಾಥ್‍ಗೆ ಆ ಗ್ರಾಮದ ಯುವಕರು ಸಮಾಧಾನ ಹೇಳಿ ಬಳಿಕ ಅವರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸ್ಪಂದಿಸಿದ ಪ್ರಧಾನಿಯವರು ಕೂಡಲೇ ಕಾಶೀನಾಥ್ ರವರಿಗೆ ಸೂರು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಈ ಹಿಂದೆ ಸೂರು ಕಲ್ಪಿಸಲು ಯಾರು ಸತಾಯಿಸಿದ್ದಾರೋ ಅವರೇ ಕಾಶೀನಾಥ್ ರವರಿಗೆ 1 ಲಕ್ಷ 50 ಸಾವಿರ ರೂ.ನಲ್ಲಿ ಸೂರು ಕಟ್ಟಿಕೊಟ್ಟಿದ್ದಾರೆ.  ಈ ರೀತಿ ಅಂಧ ಕಾಶೀನಾಥರವರ ಬಾಳಿಗೆ ಮೋದಿಯವರು ಬೆಳಕಾಗಿದ್ದಾರೆ.

ಇಂತಹ ಅನೇಕ ನಿದರ್ಶನಗಳು ನಮ್ಮೆದುರು ದಿನನಿತ್ಯ ನಡೆಯುತ್ತಲೇ ಇವೆ. ಕೆಲವು ನಮ್ಮ ಅರಿವಿಗೆ ಬರುತ್ತೆ, ಕೆಲವು ಬರಲ್ಲ. ಏನಾದರೂ ಸಾಮಾನ್ಯ ಜನರ ಕಷ್ಟಕ್ಕೂ ಅತೀ ಕ್ಷಿಪ್ರವಾಗಿ ಸ್ಪಂದಿಸುವ ಪ್ರಧಾನಿ ಮೋದಿವರಿಗೆ ಒಂದು ಕೃತಜ್ಞತೆಯನ್ನು ಸಲ್ಲಿಸೋಣ. ಇಂತಹ ಉನ್ನತ ಕಾರ್ಯಗಳು ಅವರಿಂದ ಇನ್ನಷ್ಟು ನಡೆಯಲಿ ಎಂದು ಆಶಿಸೋಣ. ಅಶಕ್ತರನ್ನು ಶಕ್ತರನ್ನಾಗಿಸುತ್ತಿರುವ ಪ್ರಧಾನಿ ಮೋದಿಯವರಿಗೆ ನಮ್ಮ ಪರವಾಗಿ ಒಂದು ಸಲಾಮ್.

Tags

Related Articles

Close