ಪ್ರಚಲಿತ

ಕರ್ನಾಟಕದ ಈ ಸಣ್ಣ ಬಾಲೆಯ ಪತ್ರಕ್ಕೆ ಸ್ಪಂದಿಸಿದ ಮೋದಿ ಮಾಡಿದ್ದೇನು ಗೊತ್ತೇ?

ತಮ್ಮೂರಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಐದು ಕಿಲೋ ಮೀಟರ್ ದೂರದಲ್ಲಿರುವ ಬೇರೊಂದು ಶಾಲೆಗೆ ಪ್ರತಿನಿತ್ಯ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಗಿದ್ದಲ್ಲದೇ ನರಕಯಾತನೆ ಅನುಭವಿಸಿರುವ ಬಗ್ಗೆ ಬಾಲಕಿ ಪ್ರಧಾನಿಗೆ ನೇರವಾಗಿ ಪತ್ರ ಬರೆದಿದ್ದು ಇದೀಗ ಬಾಲಕಿಯ ಮೊಗದಲ್ಲಿ ಸಂತಸ ಮೂಡಿದೆ!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರ ದೇಶದಲ್ಲಿ ಅದೆಷ್ಟೋ ಬದಲಾವಣೆಗಳು ನಡೆಯುತ್ತಿದ್ದು, ಸಾಮಾನ್ಯ ಜನರ ಕಷ್ಟಕ್ಕೆ ಆ ಕೂಡಲೇ ಸ್ಪಂದನೆ ನೀಡುವ ಮೊದಲ ಸರಕಾರ ಎನ್ನುವ ಹೆಗ್ಗಳಿಕೆಗೆ ಕಾರಣವಾಗಿದೆ!! ಕರ್ನಾಟಕದ ಹಿಂದುಳಿದ ಪ್ರದೇಶ ಎಂಬ ಅಪಖ್ಯಾತಿಗೆ ಪಾತ್ರವಾಗಿರುವ ಕಲಬುರಗಿ ಜಿಲ್ಲೆಯ ಚಿಕ್ಕ ಹಳ್ಳಿಯೊಂದರ ಸಮಸ್ಯೆಯ ಕುರಿತು ಪತ್ರ ಬರೆದಿರುವ ಮುಸ್ಲಿಂ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಸ್ಪಂದಿಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸುಶಾಂತ್ ಮಿಶ್ರಾ ಮತ್ತು ಈತನ ತಮ್ಮ ತನ್ಮಯ್ ತಮ್ಮ ಕುಟುಂಬ ಎದುರಿಸುತ್ತಿರುವ ಕಷ್ಟಗಳು, ಖಾಯಿಲೆಗೆ ತುತ್ತಾದ ತಂದೆ ಬಗ್ಗೆ ಸವಿವರವಾಗಿ ಬರೆದ ಪತÀ್ರದಲ್ಲಿ ಸಹಕಾರ ನೀಡಬೇಕೆಂದು ಕೋರಿ ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಮೋದಿಯವರು ಈ ಬಗ್ಗೆ ಸ್ಪಂದಿಸಿ ಸಹಾಯ ನೀಡಿದ್ದರು.

ಅಷ್ಟೇ ಅಲ್ಲದೇ, ಮಂಗಳೂರು ಕಾಲೇಜು ವಿದ್ಯಾರ್ಥಿ ತನ್ನ ಊರು ಮಂಜೇಶ್ವರದ ಕಳಪೆ ರಸ್ತೆ ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದು ಬರೆದ ಪತ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ರಸ್ತೆ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ಹೊರಡಿಸಿದ್ದರು ಎನ್ನುವುದು ಗೊತ್ತೆ ಇದೆ!!

ಇನ್ನು ಅದೆಷ್ಟೊ ಪತ್ರಗಳಿಗೆ, ಟ್ವೀಟ್ ಗಳಿಗೆ ಸ್ಪಂದಿಸಿರುವ ಮೋದಿ ಈ ಬಾರಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮದ ಬಾಲಕಿಯೋರ್ವಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಈ ಭಾಗದ ಸಮಸ್ಯೆ ಕುರಿತು ಗಮನ ಸೆಳೆದಿದ್ದಾಳೆ. ಬಾಲಕಿ ಬರೆದಿರುವ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನಡೆದ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಇದೀಗ ಪ್ರಸ್ತಾಪಿಸಿದ್ದಾರೆ.

ಹೌದು.., ಯಾಕಾಪೂರ ಗ್ರಾಮದ ಇರ್ಫಾನಾ ಬೇಗಂ ಎಂಬ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರುವ ಬಗ್ಗೆ ಸ್ವತಃ ಪ್ರಧಾನಿ ಅವರು ಮನ್ ಕಿ ಬಾತನಲ್ಲಿ ಪ್ರಸ್ತಾಪಿಸಿದ್ದಾರೆ. ಇರ್ಫಾನಾ ಬೇಗಂ ತಮ್ಮೂರಿನಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಐದು ಕಿಲೋ ಮೀಟರ್ ದೂರದಲ್ಲಿರುವ ಸುಲೇಪೇಟ್ ಸರ್ಕಾರಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಯಾಕಾಪೂರ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೂ ಕೂಡ ಇಲ್ಲ. ಹೀಗಾಗಿ ಪ್ರತಿನಿತ್ಯ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾದ ನರಕಯಾತನೆ ಬಗ್ಗೆ ಬಾಲಕಿ ಪ್ರಧಾನಿಗೆ ನೇರವಾಗಿ ಪತ್ರ ಬರೆದಿದ್ದಳು. ಬಾಲಕಿಯ ಪತ್ರದಲ್ಲಿ ತಿಳಿಸಿರುವ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚಿಸಿದ್ದಾರೆ.

 ಇರ್ಫಾನ್ ಬೇಗಂ ಬರೆದಿರುವ ಪತ್ರದಲ್ಲೇನಿತ್ತು ಗೊತ್ತೇ??

ನನ್ನ ಊರಿನಿಂದ ಶಾಲೆ ಐದು ಕಿಲೋ ಮೀಟರ್ ದೂರದಲ್ಲಿದೆ. ನಿತ್ಯ ಬೆಳಗ್ಗೆ 8 ಕ್ಕೆ ಹೊರಟರೆ ಶಾಲೆಯಲ್ಲಿ ಅಭ್ಯಾಸ ಮುಗಿಸಿ ಸಂಜೆ ಮನೆಗೆ ತಲುಪುವಷ್ಟರಲ್ಲಿ 6 ಗಂಟೆಯಾಗುತ್ತದೆ. ಸ್ನೇಹಿತರೊಡನೆ ಆಟವಾಡಲು, ಹೋಮ್ ವರ್ಕ್ ಮಾಡಲು ಸಮಯ ಸಿಗುತ್ತಿಲ್ಲ. ಪ್ರತಿ ಹೋಬಳಿ ಮಟ್ಟದಲ್ಲಿ ವಸತಿ ಸಹಿತ ಶಾಲೆ ನಿರ್ಮಿಸಿದಲ್ಲಿ ನನ್ನಂಥ ಸಾವಿರಾರು ವಿದ್ಯಾರ್ಥಿನಿಯರಿಗೆ ವರದಾನವಾಗುತ್ತದೆ ಎಂದು ಪ್ರಧಾನಿಗೆ ಬಾಲಕಿ ಪತ್ರ ಮೂಲಕ ಮನವಿ ಮಾಡಿದ್ದಳು.

ಕರ್ನಾಟಕದ ಹಿಂದುಳಿದ ಪ್ರದೇಶ ಎಂಬ ಅಪಖ್ಯಾತಿಗೆ ಪಾತ್ರವಾಗಿರುವ ಕಲಬುರಗಿ ಜಿಲ್ಲೆಯ ಚಿಕ್ಕ ಹಳ್ಳಿಯೊಂದರ ಸಮಸ್ಯೆ ಅರಿತು ಆ ಹಳ್ಳಿಯ ಹೆಸರನ್ನು ಪ್ರಧಾನಿಯವರು ಪ್ರಸ್ತಾಪಿಸಿದ್ದು ಜಿಲ್ಲೆಯ ಜನರಿಗೆ ಎಲ್ಲಿಲ್ಲದ ಖುಷಿ ಮೂಡಿಸಿದೆ. ಪತ್ರ ಬರೆಯುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿಯವರ ಗಮನಕ್ಕೆ ತಂದಿರುವ ಬಾಲಕಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯರು ಆಕೆಯನ್ನು ಸತ್ಕರಿಸಿದ್ದಾರೆ.

http://m.kannada.eenaduindia.com/State/HyderabadKarnataka/Gulbarga/2017/11/27103058/A-girl-letter-to-the-Prime-Minister-Narendra-Modi.vpf

ಹೌದು.. ತಮ್ಮೂರಿಗೆ ಪ್ರೌಢಶಾಲೆ ಬೇಕೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಬಾಲಕಿಯ ಸಮಸ್ಯೆಗೆ ಸ್ಪಂದಿಸಿದ್ದಲ್ಲದೇ, “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಈ ಬಗ್ಗೆಪ್ರಸ್ತಾಪಿಸಿದ್ದಾರೆ. ಮೋದಿಯವರ ಕರ್ತವ್ಯ ಪ್ರಜ್ಞೆ, ಜನ ಸಾಮಾನ್ಯರ ಮೇಲಿರುವ ಕಾಳಜಿ ಅಷ್ಟೇ ಅಲ್ಲದೇ ಕೆಲಸದ ಮೇಲಿರುವ ಶ್ರದ್ಧೆಯನ್ನು, ಕಾರ್ಯವೈಖರಿಯನ್ನು ನಾವು ಮೆಚ್ಚಲೇಬೇಕು!!!!

– ಅಲೋಖಾ

Tags

Related Articles

Close