ಅಂಕಣಪ್ರಚಲಿತರಾಜ್ಯ

ಮೂರು ತಿಂಗಳಲ್ಲಿ ಮೂವತೈದು ಮಕ್ಕಳಿಗಿಂತಲೂ ಅಧಿಕ ಮಕ್ಕಳ ಹತ್ಯಕಾಂಡ! ಮುಖ್ಯಮಂತ್ರಿಗಳೇ ಉತ್ತರಿಸುವೀರಾ?

ಬಿಜೆಪಿ ಪಕ್ಷದವರು ಗೋರಖಪುರದಲ್ಲಿ ಅಮಾಯಕರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದೆಲ್ಲಾ ಬೊಬ್ಬಿಡುತ್ತಿದ್ದ ಕಾಂಗ್ರಸ್ ಆಡಳಿತ ಇರುವ ಕರುನಾಡಿನಲ್ಲಿಯೇ ಕಳೆದ 3 ತಿಂಗಳುಗಳಲ್ಲಿ ಜಗತ್ತಿನ ಪರಿಚಯವನ್ನೂ ಸರಿಯಾಗಿ ತಿಳಿಯುವ ಮುಂಚೆಯೇ 35 ಶಿಶುಗಳು ಮರಣವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಘಟನೆ ನಡೆದದ್ದು ಕೋಲಾರ ಜಿಲ್ಲೆಯ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ. ಆದರೆ ಕಾಂಗ್ರೆಸ್ ಕೇವಲ ಬಾಯಿ ಮಾತಿನ ರಾಜಕಾರಣ ಮಾಡುತ್ತಿದ್ದಾರೆಂಬುದು ಮತ್ತೊಮ್ಮೆ ಸಾಬೀತಾಯಿತು. ಅವರ ರಾಜಕಾರಣದ, ಮತಗಳ ಬೇಟೆಗೆ ಬಲಿಕೊಡುತ್ತಿದ್ದಾರ ಅಮಾಯಕರ ಜೀವವನ್ನು ? ಅನ್ನುವ ಪ್ರಶ್ನೆ ಮೂಡುತ್ತಿದೆ.

ನಿಮಗೆ ಗೊತ್ತಿರಲಿ.. ಕೆಲವು ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ಶ್ರೀ ನರಸಿಂಹ ರಾಜ ಜಿಲ್ಲಾ ಆಸ್ಪತ್ರೆ ಯ ಅಭಿವೃದ್ಧಿಗಾಗಿ ಅನುದಾನವನ್ನು ಕೊಟ್ಟಿತ್ತು. ಆ ಆಸ್ಪತ್ರೆಯಲ್ಲಿ ಮೂಲಭೂತಸೌಕರ್ಯದ ಕುರಿತಾಗಿ ಪ್ರಶ್ನೆ ಎದ್ದಿದ್ದು ಇದೇ ಮೊದಲಲ್ಲ. ಅಲ್ಲಿ ಅಂತಹ ವಾತಾವರಣವೇ ನಿರ್ಮಾಣವಾದದ್ದಿಲ್ಲ. ರಾಜ್ಯ ಮಾನವ ಹಕ್ಕುಗಳ ಆಯೋಗ 2008 ರಲ್ಲಿ ಬಡ ರೋಗಿಗಳಿಗೆ ಸಮರ್ಪಕವಾದ ಔಷಧಿಯನ್ನು ಆಸ್ಪತ್ರೆಗೆ ಬೇಕಾದ ಪರಿಕರಣೆಗಳನ್ನು, ಮೂಲಭೂತಸೌಕರ್ಯವನ್ನು ಒದಗಿಸಲು ಆದೇಶಿಸಿತ್ತು. ಆದರೆ ಯಾಕೋ ಸರಕಾರ ಮನಸ್ಸು ಮಾಡಲೇ ಇಲ್ಲ. ಆಸ್ಪತ್ರೆಯ ಆಡಳಿತ ವೈಖರಿಯ ಕುರಿತಾಗಿಯೂ ಅನೇಕ ಬಾರಿ ಅಪಸ್ವರ ಎದ್ದಿತ್ತು. ಭ್ರಷ್ಟಾಚಾರದ ಕೂಪವೇ ಎಸ್ಸೆನ್ನಾರ್ ಆಸ್ಪತ್ರೆ ಆಗಿತ್ತೆಂದು ವರದಿಗಳೇ ಹೇಳುತ್ತಿವೆ. ದುರವಸ್ಥೆ ಏನೆಂದರೆ ಶಸ್ತ್ರಚಿಕಿತ್ಸೆಯನ್ನು ನಡೆಸುವ ಕೋಣೆಯನ್ನು ಸರಿಯಾದ ಬೆಳಕೂ ಕೂಡ ಇರಲಿಲ್ಲ. 2 ತಿಂಗಳುಗಳಲ್ಲಿ ಆ ದುರವಸ್ಥೆಯನ್ನು ಸರಿಪಡಿಸಬೇಕಾಗಿ ಅಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ಎಸ ಆರ್ ನಾಯಕ್ ಅವರು ಆದೇಶಿಸಿದ್ದರು.

 

ಅದೇ ಆಸ್ಪತ್ರೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದು ವಿಪರ್ಯಾಸವೇ ಸರಿ. ಕೇವಲ 3 ತಿಂಗಳುಳಲ್ಲಿ 35 ಶಿಶುಗಳು ಸಾವನ್ನಪ್ಪಿದ್ದಾರೆ ಅಂದರೆ ಯಾ ರೀತಿಯಲ್ಲಿ ಆಸ್ಪತ್ರೆ ಚಿಕಿತ್ಸೆ ಕೊಡುತ್ತಿದೆ?? ಜೀವವನ್ನು ತೆಗೆಯಲು ಆಸ್ಪತ್ರೆಯನ್ನು ಕಟ್ಟಲಾಗಿದೆಯಾ ಜೀವವನ್ನು ಉಳಿಸಲು ಕಟ್ಟಲಾಗಿದೆಯಾ ಅನ್ನುವ ಗೊಂದಲ ಮೂಡುತ್ತಿದೆ. ಆಸ್ಪತ್ರೆಯನ್ನು ಸಂರಕ್ಷಣೆ ಮಾಡಬೇಕಾದ ಘನಸರಕಾರ ನಿದ್ರಿಸುತ್ತಿದೆಯಾ?? ಶಿಶುಗಳ ಮತ ಸಿಗುವುದಿಲ್ಲವೆಂಬ ಚಿಂತನೆಯೇ?!? ಸಿದ್ದರಾಮಯ್ಯನವರೇ ಏನಿದು ನಿಮ್ಮ ಮರ್ಮ! ಜನತೆಗೆ ತಿಳಿಸುವಿರಾ?

ಕಳೆದ 70 ವರ್ಷಗಳಿಂದ ನಡೆಯುತ್ತಿದ್ದ ಆಸ್ಪತ್ರೆ ಈಗ ಈ ಪರಿಸ್ಥಿತಿಗೆ ತಲುಪುತ್ತಿದೆ ಎಂದರೆ ಏನರ್ಥ?? ಆ ಆಸ್ಪತ್ರೆಯ ಹಿರಿಯ ವೈದ್ಯರು ಕತ್ತರಿಗಳನ್ನು ಹಿಡಿದೇ ಸುಮಾರು ಸಮಯಗಳಾದವು, ಅಲ್ಲಿ ಮೂಲಭೂತಸೌಕರ್ಯದ ಕೊರತೆಯಿದೆ, ಸಮರ್ಪಕಾದ, ವ್ಯವಸ್ಥಿತವಾದ ಸ್ವಚ್ಛತೆಯೂ ಅಲ್ಲಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ರೋಗಿಗಳ ಪಾಡೇನು ಎಂಬ ಪ್ರಶ್ನೆ ಜನತೆ ಸರಕಾರಕ್ಕೆ ಮೊದಲೇ ಪ್ರಶ್ನಿಸಿದ್ದರು. ಹಾಗಾದರೇ ಇದೇ ಕಾರಣಗಳಾದವೇ ಶಿಶುಗಳ ಸಾವಿಗೆ?? ಅಷ್ಟೂ ನಿಲ್ರ್ಯಕ್ಷವನ್ನು ಮಾಡಿದರೇ ಆಸ್ಪತ್ರೆಯ ಸಿಬ್ಬಂದಿಗಳು, ಪದಾಧಿಕಾರಿಗಳು, ರೋಗಿಗಳ ಪಾಲಿಗೆ ದೇವರೆಂದು ಬಣ್ಣಿಸಲ್ಪಡುವ ವೈದ್ಯರೆಂದು ಕರೆಯಲ್ಪಡುವವರು??

ಆರೋಗ್ಯ‌ ಸಚಿವ ರಮೇಶ್ ಕುಮಾರ್ ಅವರು ಮಾತನಾಡುತ್ತಾ “ಮೂರು ಪ್ರಕರಣಗಳು ಮಕ್ಕಳ ದೈಹಿಕ ಪರಿಸ್ಥಿತಿಯಿಂದ ಸಾವು ಸಂಭವಿಸಿರುವ ಸಾಧ್ಯತೆಗಳಿವೆ” ಎಂದರು. ಹಾಗಾದರೆ ಉಳಿದ ಪ್ರಕರಣಗಳು ಏನು ಸ್ವಾಮೀ?? ಎಲ್ಲಾ 35 ಪ್ರಕರಣಗಳು ಅವರವರ ಹಣೆಬರಹದಿಂದ ಸಾವನ್ನಪ್ಪಿದ್ದಾರೆ ಎನ್ನುತ್ತೀರಾ?? ಪ್ರಪಂಚದ ಪರಿಚಯವೇ ಆಗದ ಮಕ್ಕಳು ಹೀಗೆ ಸಾವನ್ನಪ್ಪುತ್ತಿದ್ದಾರೆ ಎಂದರೆ ಏನರ್ಥ ಸರಕಾರದ ಜನಪ್ರತಿನಿಧಿಗಳೇ?? ಗೋರಖ್ ಪುರದ ವಿಚಾರವಾಗಿ ಭಾಷಣವೇ ಮಾಡಿದ ಜನಪ್ರತಿನಿಧಿಗಳು ಇದರ ಕುರಿತಾಗಿ ಯಾಕೆ ಮೌನವಾಗಿದ್ದಾರೆ? ಅಲ್ಲಿ ಇದ್ದ ಮಕ್ಕಳು ಮಾತ್ರ ನಿಮಗೆ ಮಕ್ಕಳ ಹಾಗೆ ಕಂಡರೇ?? ನಿಮ್ಮ ರಾಜ್ಯದಲ್ಲಿರುವವರು ಪ್ರಜೆಗಳೇ ಅಲ್ಲವೇ ಸ್ವಾಮೀ??

ಇದರ ಕುರಿತಾಗಿ ಸಮಗ್ರ ತನಿಖೆಯಾಗಬೇಕಿದೆ. ಇನ್ನು ಮುಂದೆ ಇಂತಹ ಸಾವು ಆಗದಂತೆ ತಡೆಹಿಡಿಯಬೇಕಿದೆ. ಈ ಮಕ್ಕಳ ಸಾವಿಗೆ ಕಾರಣೀಕರ್ತರಾಗಿರುವವರಿಗೆ ತಕ್ಕ ಶಾಸ್ತಿಯಾಗಬೇಕಿದೆ. ಕಠಿಣ ಶಿಕ್ಷೆಯಾಗಬೇಕಿದೆ.

– ಆತ್ಮಿಕ

Tags

Related Articles

Close