ಪ್ರಚಲಿತ

ಕರ್ನಾಟಕದ ಮುಖ್ಯಮಂತ್ರಿಯವರಿಗೆ ನಾಡಗೀತೆ ಗೊತ್ತಿಲ್ವಾ?!

ಕಂಡ ಕಂಡವರಿಗೆ ಉಪದೇಶ ಮಾಡುವ ಸಿದ್ಧರಾಮಯ್ಯನವರಿಗೆ ನಾಡಗೀತೆ ಬರಲ್ವಾ ಎಂಭ ಸುದ್ದಿ ಕೇಳಿಯೇ ಹೌಹಾರಬೇಕಾಗಿದೆ! ಮಾತೆತ್ತಿದರೆ ಕರ್ನಾಟಕ! ಕನ್ನಡ! ಕನ್ನಡ ಜನ! ಎಂದೆಲ್ಲಾ ಬೊಬ್ಬಿರಿಯುವ ಕಾಂಗ್ರೆಸ್ ಪಕ್ಷದ ನಾಯಕನಿಗೆ, ಕರ್ನಾಟಕದ ಮುಖ್ಯಮಂತ್ರಿಗೇ ಕನ್ನಡ ನಾಡಗೀತೆ ಬರೋದಿಲ್ಲ ಎಂಬ ಕಟು ವಾಸ್ತವವನ್ನು ಅರಗಿಸಿಕೊಳ್ಳಲೇಬೇಕಾಗಿದೆ!

ಮೈಸೂರಿನಲ್ಲಿ ಅಲ್ಪಸಂಖ್ಯಾತರ ಸಭೆಗೆ ಮೈಕು ಕೊಟ್ಟರೆಂಬ ಕಾರಣಕ್ಕೆ ಉದ್ವೇಗಕ್ಕೊಳಗಾದ ಕನ್ನಡ ನಾಡಿನ ಹೆಮ್ಮೆಯ ಮುಖ್ಯಮಂತ್ರಿಯಾದ ಶ್ರೀ ಸಿದ್ಧರಾಮಯ್ಯನವರು ತಪ್ಪು ತಪ್ಪಾಗಿ ನಾಡಗೀತೆಯನ್ನು ಹೇಳಿದರೂ ಸಹ ಕಾಂಗ್ರೆಸ್ ಕಾರ್ಯಕರ್ತರು ಚಪ್ಪಾಳೆ ಶಿಳ್ಳೆಗಳ ಮೂಲಕ ಅಭಿನಂದಿಸಿದ್ದಾರೆ! ಯಾವ ಪುರುಷಾರ್ಥಕ್ಕೋ ಏನೋ! ನಮಗಂತೂ ಗೊತ್ತಿಲ್ಲ!

ಏನೆಂದರು ಗೊತ್ತೇ?!

“ಸರ್ವ ಜನಾಂಗದ ಕಂಣ್ಗಳ ಸೆಳೆಯುವ ನೋಟ! ರಸಿಕರ ತೋಟ!”
“ಹಿಂದೂ ಕ್ರೈಸ್ತ ಮುಸಲ್ಮಾನ! ಜೈನ ಪಾರಸಿಕರ ಉದ್ಯಾನ!”

ನಾಡಗೀತೆಯನ್ನು ತಪ್ಪಾಗಿ ಹಾಡಿದರೆ ಸಿಎಂ ??

ನಾಡಗೀತೆಯನ್ನು ತಪ್ಪಾಗಿ ಹಾಡಿದರೆ ಸಿಎಂ ??ಎಡವಟ್ಟು ಮೇಲೆ ಎಡವಟ್ಟು ..ನಾಡಗೀತೆಯನ್ನು ತಪ್ಪಾಗಿ ಹಾಡಿದರೆ ಸಿಎಂ ?? ನೀವೇ ನೋಡಿ ಕಾಮೆಂಟ್ ಮಾಡಿ -ಸರಿನಾ ? ಅಥವಾ ತಪ್ಪಾ?

تم النشر بواسطة ‏‎We Trust And Support -B S Yeddyurappa‎‏ في 30 نوفمبر، 2017

ಅರೇ ವ್ಹಾ! ಏನ್ ರಸಿಕರು! ಯಾವ ತೋಟ! ಎಂತಹ ಉದ್ಯಾನ?! ಅಬ್ಬೋ! ಬಿಡಿ! ಅದ್ಭುತ ಅದ್ಭುತ!

ಅರೇ! ದೇವಸ್ಥಾನದ ಅರ್ಚಕರಿಗೆ ಸಂಸ್ಕೃತ ಬರುತ್ತೋ ಇಲ್ಲವೋ ಎಂದು ಪರೀಕ್ಷೆ ಮಾಡುವ ಮುನ್ನ ಮುಖ್ಯಮಂತ್ರಿಯವರು ಸ್ವತಃ ತಮ್ಮ ‘Qualification’ ಪರೀಕ್ಷೆ ಮಾಡಿಕೊಳ್ಳುವುದು ಒಳಿತು! ಅದಲ್ಲದೇ, ಕನ್ನಡ ನಾಡಿನ ಮೇಲೆ ಗೌರವವಿದೆ! ಕನ್ನಡ ವೀರರ ಮೇಲೆ ಗೌರವವಿದೆ ಎಂದೆಲ್ಲ ಪುಂಗಿ ಬಿಡುವ ಕಾಂಗ್ರೆಸ್ಸಿಗರಿಗೆ ಅವರದೇ ಪಕ್ಷದಿಂದ ಆಯ್ಕೆಯಾದ ಮುಖ್ಯಮಂತ್ರಿಗೆ ಕನ್ನಡ ನಾಡಿನ ಗೀತೆಯ ಬಗ್ಗೆಯೇ ಅರಿವಿಲ್ಲವೆಂದರೆ ?!

ಅದನ್ನೂ ಬಿಡಿ! ಸಿದ್ಧರಾಮಯ್ಯನವರು ತಪ್ಪು ತಪ್ಪಾಗಿ ಹೇಳಿದರೂ ಕರತಾಡತನ ಮಾಡಿದ ಅಲ್ಲಿದ್ದ ಪ್ರತಿ ಕಾಂಗ್ರೆಸ್ ಕಾರ್ಯಕರ್ತನಿಗೂ ಕೂಡ ನಾಡಗೀತೆಯ ಬಗ್ಗೆ ಅರಿವಿಲ್ಲವೇ?! ಅಥವಾ, ಈ ಹಿಂದಿನಿಂದಲೂ ಕನ್ನಡ ನಾಡಿಗೆ ಅವಮಾನ ಮಾಡುತ್ತಲೇ ಬಂದ ಕಾಂಗ್ರೆಸ್ಸನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ?!

ಇದೇ ಮೊದಲಾ?!

ಇದೇ ಮೊದಲಲ್ಲ ಸ್ವಾಮಿ! ಈ ಹಿಂದೆಯೂ ಕೂಡ, ಇಂತಹ ಅದೆಷ್ಟೋ ಘಟನೆಗಳು ನಡೆದಿದೆ! ಮೊನ್ನೆ ಮೊನ್ನೆ ಕನ್ನಡ ಭಾಷೆಯನ್ನೇ ಗೌರವಿಸದಿದ್ದ, ಅಧಿಕಾರಕ್ಕೆ ಕನ್ನಡ ನಾಡನ್ನು ಬಳಸಿಕೊಂಡಿದ್ದ ಟಿಪ್ಪುವಿನ ಜಯಂತಿಯನ್ನು ಮಾಡಿದ ಸಿದ್ಧರಾಮಯ್ಯನ ಸರಕಾರಕ್ಕೆ ಅವರ ಬೆಂಬಲಿಗರು ಅದೇನು ಬೆಂಬಲಿಸಿದರಪ್ಪ?! ಕನ್ನಡ ವನ್ನೇ ಗುರಿಯಾಗಿಸಿ ಮಾಡುವ ಹೊಲಸು ರಾಜಕಾರಣಕ್ಕೆ ಇಂತಹವರು ಕುಮ್ಮಕ್ಕು ಕೊಡುವುದು ನೋಡಿದರೆ, ಬಹುಷಃ ಮುಂದೊಂದು ದಿನ ಕರ್ನಾಟಕವನ್ನೇ ಮಾರಿಬಿಡಬಹುದೇನೋ!

ಇನ್ನಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೇ!

– ಪೃಥು ಅಗ್ನಿಹೋತ್ರಿ

Tags

Related Articles

Close