ಪ್ರಚಲಿತ

ಕರ್ನಾಟಕ ಅಭಿವೃದ್ಧಿಯಾಗಿಲ್ಲ : ಪ್ರಧಾನಿ ಮೋದಿ! ಕರ್ನಾಟಕ ಅಭಿವೃದ್ಧಿಯಾಗಿದೆ : ಸಿದ್ಧರಾಮಯ್ಯ! ಯಾವುದು ಸತ್ಯ?! ಯಾವುದು ಸುಳ್ಳು?!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು “ಕರ್ನಾಟಕ ಅಭಿವೃದ್ಧಿ ಹೊಂದಿದ ರಾಜ್ಯಗಳ ಜೊತೆ ಸರಿ ಸಮಾನವಾಗಿ ನಿಲ್ಲಬೇಕು” ಎಂಬ ಹೇಳಿಕೆ ನೀಡಿದ್ದೇ, ಕರ್ನಾಟಕ ಈಗಾಗಲೇ ಅಭಿವೃದ್ಧಿ ಹೊಂದಿದೆಯೆಂದು ಪ್ರಧಾನಿಯವರ ಮೇಲೆ ಮುಗಿಬಿದ್ದರು! ನರೇಂದ್ರ ಮೋದಿಗೇನು ಗೊತ್ತಿದೆ ಕರ್ನಾಟಕದ ಬಗ್ಗೆ ಎಂಬೆಲ್ಲ ಅಧಿಕಪ್ರಸಂಗಿತನದ ಟೀಕೆಗಳೂ ಕೇಳಲ್ಪಟ್ಟವಲ್ಲ?! ‘ಸತ್ಯ ಕಹಿ’ ಎಂಬುದು ಮತ್ತೊಮ್ಮೆ ಸಾಬೀತಾಗಿತ್ತು! ‘ಬಿಹಾರ ಹಾಗೂ ಉತ್ತರಪ್ರದೇಶ’ ಗಳಿಗಿಂತ ಕರ್ನಾಟಕ ಹೆಚ್ಚು ಅಭಿವೃದ್ಧಿ ಹೊಂದಿದೆ ಎಂಬುದು ವಾಸ್ತವವೋ ಅಥವಾ ಕಾಲ್ಪನಿಕವೋ?!

ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಪ್ರಧಾನಿಗೆ ಉಪದೇಶ ಕೊಟ್ಟವರಲ್ಲಿ ತಕ್ಷಶಿಲಾ ವಿದ್ಯಾನಿಲಯದ ಅಧ್ಯಕ್ಷರಾದ ನಿತಿನ್ ಪೈ,

ಹಾಗೂ ಕರ್ನಾಟಕದ ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ,

ಮತ್ತು., ಪತ್ರಕರ್ತೆಯಾಗಿ ಗುರುತಿಸಿಕೊಂಡ ಹರಿಣಿ ಕಾಲಾಮುರ್,

ಇಷ್ಟೆಲ್ಲ ನೋಡುತ್ತಿದ್ದ ಹಾಗೆ ಕರ್ನಾಟಕ ಅಭಿವೃದ್ಧಿ ಹೊಂದಿದೆ ಬಿಡಿ! ಎಂದು ಸಮಾಜ ಸ್ವೀಕರಿಸಿ ಸುಮ್ಮನಾಗಿಬಿಡುತ್ತದೆ! ಮತ್ತದೇ ಪ್ರಧಾನಿಯವರನ್ನು ದೂಷಿಸುತ್ತದೆ. “ಕರ್ನಾಟಕದ ಅಭಿವೃದ್ಧಿಗೆ ಪೂರ್ಣವಾಗಿ ಕೆಲಸವಾಗುತ್ತಿಲ್ಲ” ಎಂಬುದನ್ನು ಹೇಳಿದ ಮೋದಿಯವರು ಅರಿಯದೇ ಮಾತನಾಡುತ್ತಾರೆಯೇ?!

ಇರಲಿ! ಕಾಂಗ್ರೆಸ್ ಪಕ್ಷದ ಆಡಳಿತವನ್ನೇ ಕನ್ನಡಿಗರು ಮೆಚ್ಚಿ ಐದು ವರ್ಷದ ಹಿಂದೆ ಮತ ಹಾಕಿ ಗೆಲ್ಲಿಸಿದ್ದಲ್ಲವೇ?! ಅಭಿವೃದ್ಧಿಯ ವಿಚಾರಕ್ಕೆ ಬಂದರೆ ಕರ್ನಾಟಕ ನಿಧಾನಗತಿಯಲ್ಲಷ್ಟೇ ಸಾಗುತ್ತಿಲ್ಲ, ಬದಲಿಗೆ ಅಂದುಕೊಂಡಷ್ಟೂ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಒಪ್ಪಲೇಬೇಕಾಗುತ್ತದೆ!

ಕರ್ನಾಟಕ ಎಷ್ಟು ಅಭಿವೃದ್ಧಿ ಹೊಂದಿದೆ ಗೊತ್ತೇ?!

ಆರ್ಥಿಕ ಅಭಿವೃದ್ಧಿ :

ಮೊದಲು ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದರೆ :

1. NSDP : 2015 – 16 ರಲ್ಲಿ Net State Domestic Product ನ ಪ್ರಸ್ತುತ ಬೆಲೆ (2011 – 12 ಸಾಲಿನ) ಏರಿಕೆಯಾಗಿರುವುದು ಕರ್ನಾಟಕದಲ್ಲಿ ಶೇ.11.4%

ಅದೇ, ತೆಲಂಗಾಣ, ಮಧ್ಯಪ್ರದೇಶ, ಅರುಣಾಚಲ್ ಪ್ರದೇಶ, ಝಾರ್ಕಂಡ್, ಆಂಧ್ರ, ಉತ್ತರಾಖಂಡ್ ಹಾಗೂ ದೆಹಲಿಯ ಪ್ರಸ್ತುತ ಸಾಲಿನ ಬೆಲೆ ಏರಿಕೆಯಾಗಿರುವುದು ಶೇ. 12.9%, 12.6%, 11.8%, 12.5%, 16.1%, 13.7% ಮತ್ತು 12%.

Growth of Net State Domestic Product at Current Prices
(2011-12 Series) for 2015-16
SL. No. State NSDP %
1 Andhra Pradesh 16.1
2 Uttarakhand 13.7
3 Telangana 12.9
4 Madhya Pradesh 12.6
5 Jharkhand 12.5
6 Delhi 12
7 Arunachal Pradesh 11.8
8 Karnataka 11.4

ಆದ್ದರಿಂದ, ಈ ಏಳು ರಾಜ್ಯಗಳು ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದಿದೆ!

2. per Capita NSDP ಯ ಪ್ರಸ್ತುತ 2015 – 16 ರ ಪ್ರಕಾರ 1, 46, 416 ರೂಪಾಯಿಗಳು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ,

ಕೇರಳ – 1,55,516 ರೂ.
ಹರ್ಯಾಣಾ : 1,62,034 ರೂ.
ಗೋವಾ : 2,70,150 ರೂ.
ಉತ್ತರಾಖಂಡ್ : 1,51,219 ರೂ.
ದೆಹಲಿ : 2,73,618 ರೂ.
ಸಿಕ್ಕಿಂ : 2,27,465 ರೂ.

Per Capita Net State Domestic Product
at Current Prices
(2011-12 Series) for 2015-16
SL. No. State Per Capita NSDP (in Rs)
1 Delhi 2,73,618
2 Goa 2,70,150
3 Sikkim 2,27,465
4 Haryana 1,62,034
5 Kerala 1,55,516
6 Uttarakhand 1,51,219
7 Karnataka 1,46,416

ಹಾಗಾದರೆ, ಈ ಆರು ರಾಜ್ಯಗಳು ಕರ್ನಾಟಕಕ್ಕಿಂತಲೂ ಸಹ ಚೆನ್ನಾಗಿಯೇ ಅಭಿವೃದ್ಧಿ ಹೊಂದುತ್ತಿದೆ!

3. Per capita NSDP ಯ ಪ್ರತಿಶತ ಏರಿಕೆ, 2015 – 16 ರ ಪ್ರಕಾರ, ಕರ್ನಾಟಕ ದಲ್ಲಿ ಶೇ.10.2%

ಉಳಿದ ಆಂಧ್ರದಲ್ಲಿ ಶೇ.15.4%, ಝಾರ್ಕಂಡಿನಲ್ಲಿ ಶೇ.10.7%, ಮಧ್ಯಪ್ರದೇಶದಲ್ಲಿ ಶೇ.10.9%, ತಮಿಳುನಾಡಿನಲ್ಲಿ ಶೇ.10.3%, ತೆಲಂಗಾಣದಲ್ಲಿ ಶೇ.11.8%, ಉತ್ತರ ಪ್ರದೇಶದಲ್ಲಿ ಶೇ.10.6% ಮತ್ತು ಉತ್ತರಾಖಂಡದಲ್ಲಿ ಶೇ.12.2%.

Growth of Per Capita Net State Domestic Product
at Current Prices 

(2011-12 Series) for 2015-16
SL. No. State NSDP %
1 Andhra Pradesh 15.4
2 Uttarakhand 12.2
3 Telangana 11.8
4 Madhya Pradesh 10.9
5 Jharkhand 10.7
6 Uttar Pradesh 10.6
7 Tamil Nadu 10.3
8 Karnataka 10.2

ಆದ್ದರಿಂದ, ಉತ್ತರಪ್ರದೇಶವೂ ಸೇರಿದಂತೆ ಉಳಿದ 7 ರಾಜ್ಯಗಳು ಕರ್ನಾಟಕಕ್ಕಿಂತ ಮುಂದಿದೆ!

4. FDI ಒಳಹರಿವಿನ ಅಭಿವೃದ್ಧಿಯ 2016 – 17 ಏಪ್ರಿಲ್ ರ ಪ್ರಕಾರ,

ಕರ್ನಾಟಕದಲ್ಲಿ ಏರಿಕೆಯಾಗಿರುವುದು 14,300 ಕೋಟಿ ರೂಪಾಯಿಗಳು.

FDI Inflows 
(April-March, 2016-17)
SL. No. State FDI (in Rs crore)
1 Delhi and NCR 3,71,794
2 Tamil Nadu & Puducherry 1,33,378
3 Maharashtra and
Dadra & Nagar Haveli
1,31,980
4 Gujarat 22,610
5 Karnataka 14,300

ಗುಜರಾತ್ ನಲ್ಲಿ 22,610 ಕೋಟಿ ರೂಪಾಯಿಗಳು, ದೆಹಲಿಯಲ್ಲಿ 3,71,794 ಕೋಟಿ ರೂ, ಮಹಾರಾಷ್ಟ್ರ, ದಾದ್ರಾ, ಹವೇಲಿ ನಗರದಲ್ಲಿ 1,31,980 ಕೋಟಿ ರೂಪಾಯಿಗಳು, ತಮಿಳು ನಾಡು ಮತ್ತು ಪಾಂಡಿಚೇರಿಯಲ್ಲಿ 1,33,378 ಕೋಟಿ ರೂಗಳು ಏರಿಕೆಯಾಗಿದೆ. ಅಂದರೆ, ಕರ್ನಾಟಕಕ್ಕೆ ಹೋಲಿಸಿದರೆ ಉಳಿದ ರಾಜ್ಯಗಳು ಅಭಿವೃದ್ಧಿಯಲ್ಲಿ ಬಹಳ ಮುಂದುವರೆದಿದೆ.

5. ರಫ್ತಿನ ಕ್ಷೇತ್ರ :

ಸರಕು ರಫ್ತಿನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಲಭ್ಯವಾಗಿರುವುದು 2,59,639 ಕೋಟಿ ರೂಗಳು. ಇದರಲ್ಲಿ, 2,02,483 ರೂಪಾಯಿಗಳು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಬಂದಿದೆ. ಅಂದರೆ, ಕರ್ನಾಟಕದಲ್ಲಿ ಹೆಚ್ಚಿನ ಆದಾಯ ಬರುತ್ತಿರುವುದು ಈ ಕ್ಷೇತ್ರಗಳಿಂದ ಮಾತ್ರ.

6. ಕೃಷಿ ಕ್ಷೇತ್ರ :

ಕೃಷಿ ಕ್ಷೇತ್ರದಲ್ಲಿ ಗುಜರಾತ್ ನ ಕೃಷಿ ಕ್ಷೇತ್ರಕ್ಕೆ ಹೋಲಿಸಿದರೆ,

ಗೋಧಿ ಬೆಳೆ : ಗುಜರಾತ್ – 2919 kg/ಹೆಕ್ಟೇರು
ಕರ್ನಾಟಕ – 1012kg/ಹೆಕ್ಟೇರು

ಬಜ್ರಾ ಬೆಳೆ : ಗುಜರಾತ್ – 2004kg/ಹೆಕ್ಟೇರು
ಕರ್ನಾಟಕ – 875kkg/ಹೆಕ್ಟೇರು

ತೈಲಬೀಜಗಳ ಬೆಳೆ : ಗುಜರಾತ್ – 1603kg/ಹೆಕ್ಟೇರು
ಕರ್ನಾಟಕ – 651kg/ಹೆಕ್ಟೇರು

ಕಡಲೇಕಾಯಿ ಬೆಳೆ : ಗುಜರಾತ್ – 1668kg/ಹೆಕ್ಟೇರು
ಕರ್ನಾಟಕ – 871kg/ಹೆಕ್ಟೇರು

ಸಾಮಾಜಿಕ ಕ್ಷೇತ್ರದಲ್ಲಿ :

ಬೇರೆ ರಾಜ್ಯಗಳ ಸಾಮಾಜಿಕ ಸಾಮರಸ್ಯಕ್ಕೆ ಹೋಲಿಸಿದರೆ,

1. ಎಸ್ ಸಿ/ ಎಸ್ ಟಿ ಗಳ ಮೇಲಿನ ದೌರ್ಜನ್ಯ :

2015 ರಲ್ಲಿ ಒಟ್ಟಾರೆಯಾಗಿ ದಾಖಲಾದ ದೌರ್ಜನ್ಯಗಳ ಮೊಕದ್ದಮೆ::

State SC ST Total
Karnataka 1,841 386 2,227
Gujarat 1,009 248 1,257
Maharashtra 1,795 481 2,276

2011 ರ ಸಮೀಕ್ಷೆಯ ಪ್ರಕಾರ (cases registered per lakh) ಪ್ರತಿ ಲಕ್ಷ ಮಂದಿಯ ದೌರ್ಜನ್ಯದ ಪ್ರಕರಣದಲ್ಲಿ ದಾಖಲಾದ ಮೊಕದ್ದಮೆಯ ಪ್ರಕಾರ :

State SC ST
Karnataka 17.6 9.1
Gujarat 24.8 2.8
Maharashtra 13.5 4.6

ಹಾಗಾದರೆ, ಸಾಮಾಜಿಕ ಸಾಮರಸ್ಯದಲ್ಲಿಯೂ ಸಹ ಕರ್ನಾಟಕದ ಸ್ಥಾನ ಅಷ್ಟೇನೂ ಅಭಿವೃದ್ಧಿಯಾಗಿಲ್ಲ!

2. ಕೋಮು ಹಿಂಸಾಚಾರ :

2016 ರ ಸಮೀಕ್ಷೆಯ ಪ್ರಕಾರ, ನಡೆದ ಹಿಂಸಾಚಾರ ಪ್ರಕರಣ, ಹತ್ಯೆಗೀಡಾದ ವ್ಯಕ್ತಿಗಳು, ಹಲ್ಲೆಗೊಳಗಾದ ವ್ಯಕ್ತಿಗಳ ಸಮೀಕ್ಷೆಯನ್ನು ಪರಿಗಣಿಸಿದರೆ,

Communal Violence (2016)
State Incidents Persons Killed Persons Injured
Karnataka 101 12 248
Gujarat 53 6 116
Communal Violence (till May 2017)
Karnataka 36 3 93
Gujarat 20 3 58

ಅಂದರೆ, ಕರ್ನಾಟಕ ಕೋಮು ಗಲಭೆಯಲ್ಲಿಯಷ್ಟೇ ಅಭಿವೃದ್ಧಿ ಸಾಧಿಸಿದೆಯಷ್ಟೇ!

3. ರೈತ / ಕಾರ್ಮಿಕ ವರ್ಗದವರ ಆತ್ಮಹತ್ಯೆ :

Farmer Suicides (2015)
Sl. No. State Suicides
1 Karnataka 1,197
2 Gujarat 57
3 Uttar Pradesh 145
4 Andhra Pradesh 516
Suicides by agricultural labourers
Sl. No. State Suicides
1 Karnataka 372
2 Gujarat 244
3 Uttar Pradesh 179

ಅಂದರೆ., ಗುಜರಾತ್ ಹಾಗೂ ಉತ್ತರ ಪ್ರದೇಶಗಳಿಗಿಂತ ಕರ್ನಾಟಕದಲ್ಲಿ ರೈತ / ಕಾರ್ಮಿಕ ವರ್ಗದವರ ಆತ್ಮಹತ್ಯೆ ಪ್ರಕರಣ
ಹೆಚ್ಚಿದೆ!

4. ಮಹಿಳಾ ಸಬಲೀಕರಣ :

ಬಿಹಾರ, ಗುಜರಾತ್, ಝಾರ್ಕಂಡ್, ಮಧ್ಯ ಪ್ರದೇಶ್, ನಾಗಾಲ್ಯಾಂಡ್, ಒಡಿಸ್ಸಾ, ರಾಜಸ್ಥಾನ, ತೆಲಂಗಾಣ, ಹಾಗೂ ದೆಹಲಿಯಲ್ಲಿ ಆರಕ್ಷಕ ವರ್ಗದಲ್ಲಿ ಮಹಿಳಾ ಮೀಸಲಾತಿ ಶೇ.33% .

ಅಲ್ಲದೇ, ಅಸ್ಸಾಂ, ಛತ್ತೀಸ್ ಘರ್, ಗೋವಾ, ಹರ್ಯಾಣಾ, ಜಮ್ಮು ಮತ್ತು ಕಾಶ್ಮೀರ, ಕೇರಳ, ಮಿಜೋರಾಂ, ಪಂಜಾಬ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ದ ರಾಜ್ಯಗಳಲ್ಲಿಯೂ ಮಹಿಳಾ ಸಬಲೀಕರಣ ಉಳಿದ ರಾಜ್ಯಗಳಂತೆಯೇ ಯಶಸ್ವಿಯಾಗಿ ಮಾಡುತ್ತಿದೆ.

ಅದೇ, ಕರ್ನಾಟಕ ಮಾತ್ರ ಇನ್ನೂ ಹಿಂದುಳಿದಿದೆ.

ಆರೋಗ್ಯ :

ಪ್ರತಿ 1000 ಶಿಶುವಿನ ಜನನದಲ್ಲಿ ಸಾವಿಗೀಡಾಗುವ ಸಂಖ್ಯೆ, 2015 ರ ಪ್ರಕಾರ,

Sl. No. State IMR
1 Goa 9
2 Manipur 9
3 Kerala 12
4 Nagaland 12
5 Sikkim 18
6 Delhi 18
7 Tamil Nadu 19
8 Tripura 20
9 Maharashtra 21
10 Punjab 23
11 West Bengal 26
12 J&K 26
13 Karnataka 28

ಅಂದರೆ, 12 ರಾಜ್ಯಗಳಲ್ಲಿ ಸಾವಿಗೀಡಾಗುವ ಶಿಶುವಿನ ಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ!

2. ಲಸಿಕೆ ಹಾಗೂ ಆರೋಗ್ಯ ಸಂರಕ್ಷಣೆ :

2015 – 2016 ರ ಸಮೀಕ್ಷೆಯ ಪ್ರಕಾರ, ಪೂರ್ಣ ಪ್ರಮಾಣದಲ್ಲಿ ಶಿಶುಗಳ ಸಂರಕ್ಷಣೆಯ ಪ್ರತಿಶತ..

Sl. No. State % of children
1 Punjab 89.1
2 Goa 88.4
3 West Bengal 84.4
4 Sikkim 83
5 Tripura 82.1
6 Odisha 78.6
7 Chhattisgarh 76.4
8 Tamil Nadu 69.7
9 Himachal 69.5
10 Telangana 68.1
11 Delhi 66.4
12 Manipur 65.9
13 Andhra Pradesh 65.3
14 Karnataka 62.6

ಅಂದರೆ, ಕರ್ನಾಟಕಕ್ಕಿಂತ ಉಳಿದ 13 ರಾಜ್ಯಗಳು ಮುಂದಿವೆ.

3. ತಾಯಿಯ ಆರೋಗ್ಯ :

2007 ರಿಂದ 2013 ರ ರವರೆಗಿನ ಸಮೀಕ್ಷೆಯಾಧಾರವನ್ನು ಪರಿಗಣಿಸಿದರೆ,

Sl. No. State MMR
1 Kerala 61
2 Maharashtra 68
3 Tamil Nadu 79
4 Andhra Pradesh 92
5 Gujarat 112
6 West Bengal 113
7 Haryana 127
8 Karnataka 133

ಕರ್ನಾಟಕ ಯಾವುದೇ ರೀತಿಯಲ್ಲಿಯೂ ಸಹ ತಾಯಿಯ ಆರೋಗ್ಯ ಸಂರಕ್ಷಣೆಗೆ ಪೂರ್ಣವಾಗಿ ಸಹಕರಿಸುತ್ತಿಲ್ಲ.

4. ಆಯಸ್ಸು :

ಅಂದರೆ, ಮಗು ಹುಟ್ಟಿದಾಗಿನಿಂದ ಪೂರಕವಾದ ಗಾಳಿ, ವಾತಾವರಣ, ಆರೋಗ್ಯ, ವೈದ್ಯಕೀಯ ಸೌಲಭ್ಯ, ತಪಾಸಣೆ. . ಇವೆಲ್ಲವನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಒಂಭತ್ತು ರಾಜ್ಯಗಳು ಕರ್ನಾಟಕಕ್ಕಿಂತ ಆರೋಗ್ಯ ಸಂರಕ್ಷಣೆಯಲ್ಲಿ ಮುಂದಿವೆ. (2010 – 2014)

Sl. No. State Life Expectancy
1 Kerala 74.9
2 Delhi 73.2
3 J&K 72.6
4 Uttarakhand 71.7
5 Maharashtra 71.6
6 Himachal 71.6
7 Punjab 71.6
8 Tamil Nadu 70.6
9 West Bengal 70.2
10 Karnataka 68.8

ಕಾನೂನು ಸಂರಕ್ಷಣೆ :

ಅಪರಾಧಗಳ ತಡೆ ಮತ್ತು ಕಾನೂನು ಸಂರಕ್ಷಣೆಯಲ್ಲಿ ಗುಜರಾತ್ ಗೆ ಹೋಲಿಸಿದರೆ ಕರ್ನಾಟಕ ಹಿಂದಿದೆ. ಅಲ್ಲದೇ., ಗುಜರಾತ್ ನ ಜನಸಂಖ್ಯೆ 623.3 ಲಕ್ಷ, ಕರ್ನಾಟಕದ ಜನಸಂಖ್ಯೆ 619.9 ಲಕ್ಷ!

2015 ರ ಪ್ರಕಾರ ಅಪರಾಧ ಮತ್ತು IPC ಯ ಅಡಿಯಲ್ಲಾಗಿರುವ ಮೊಕದ್ದಮೆಗಳು. .

ಕರ್ನಾಟಕ : 1,38,847
ಗುಜರಾತ್ : 1,26,935

ಭಾರತದ ಒಟ್ಟು ಪ್ರಕರಣದ ಪ್ರತಿಶತವನ್ನು ಗಣನೆಗೆ ತೆಗೆದುಕೊಂಡರೆ,
ಕರ್ನಾಟಕ : 4.7%
ಗುಜರಾತ್ : 4.3%

ಪ್ರತಿ ಲಕ್ಷ ಮಂದಿಯಲ್ಲಿ ನಡೆಯುವ ಅಪರಾಧಗಳ ಸಂಖ್ಯೆ,

ಕರ್ನಾಟಕ : 224.0
ಗುಜರಾತ್ : 203.6

ಅಂತಿಮ ನುಡಿ :

ಈ ಎಲ್ಲಾ ಸಮೀಕ್ಷೆಗಳನ್ನೂ ಗಣನೆಗೆ ತೆಗೆದುಕೊಂಡರೆ, ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು ವಾಸ್ತವಕ್ಕೆ ಹಿಡಿದ ಕನ್ನಡಿಯಷ್ಟೇ. ಅದೆಷ್ಟೋ ರಾಜ್ಯಗಳಿಗೆ ಹೋಲಿಸಿದರೆ, ಹಾಗೂ ಅಭಿವೃದ್ಧಿಯಾಗಿದೆ ಎಂದೆನ್ನಲಾಗುವ ಕರ್ನಾಟಕ ವಾಸ್ತವದಲ್ಲಿ ಹಿಂದುಳಿದ ರಾಜ್ಯವಾಗುತ್ತಿದೆಯಷ್ಟೇ!!

Source : http://thetruepicture.in/karnataka-development-controversy/

– ತಪಸ್ವಿ

Tags

Related Articles

Close