ಪ್ರಚಲಿತ

ಕಲಬುರಗಿ – ಬೀದರ್ ಜನರ 25 ವರ್ಷಗಳ ರೇಲ್ವೆ ಕನಸನ್ನು ನನಸು ಮಾಡುವುದಕ್ಕೆ ಮೋದಿಯೇ ಬರಬೇಕಾಯಿತು!!!

ಕಲ್ಯಾಣ ಕರ್ನಾಟಕದ (ಹೈದರಾಬಾದ್ ಕರ್ನಾಟಕ) ದಲ್ಲಿ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಬುರಗಿ(ಗುಲಬರ್ಗಾ) – ಬೀದರ್ ರೈಲು ಕೊನೆಗೂ ದೇಶದ
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀಯವರಿಂದ ನನಸಾಗಿದೆ. ಬೀದರ್ ಕಲಬುರ್ಗಿ ರೈಲು ಯೋಜನೆಯನ್ನ ನೆನ್ನೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

1990 ರಲ್ಲಿ ಈ ಭಾಗದಲ್ಲಿ ಕಲಬುರಗಿ ಬೀದರ್ ರೈಲು ಮಾರ್ಗಕ್ಕೆ ಕೂಗೆದ್ದಿತ್ತು. ಇದರ ಬಗ್ಗೆ ದೆಹಲಿಯಲ್ಲಿ ಪ್ರಸ್ತಾಪವಾಗಿದ್ದು 1992 ರಲ್ಲಿ.

ಉದ್ದೇಶಿತ ಈ ರೈಲುಮಾರ್ಗದ ವೆಚ್ಚ 400 ಕೋಟಿಯಾಗಿತ್ತು ಆದರೆ 1992 ರಲ್ಲಿ ಅಂದು ಕಂಡ ಕನಸು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮತ್ತೆ ಗರಿಗೆದರಿದ್ದ ಈ ರೈಲು ಮಾರ್ಗದ ಪ್ರಸ್ತಾಪಕ್ಕೆ ವೇಗವೂ ಸಿಕ್ಕಿತ್ತು.

ಆದರೆ ಅಟಲ್ ಜೀಯವರ ಸರ್ಕಾರ ಯಾವಾಗ ಪತನವಾಗಿ ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಈ ರೈಲು ಮಾರ್ಗ ಮತ್ತೆ ಕನಸಾಗೇ ಈ ಭಾಗದ ಜನರಿಗೆ ಉಳಿದುಹೋಗಿತ್ತು.

ಪ್ರಧಾನಿ ಮೋದಿ ನೆನ್ನೆ ಮಾಡಿದ ಭಾಷಣದಲ್ಲಿ ಈ ರೈಲು ಮಾರ್ಗದ ಕುರಿತಾಗಿಯೂ ಅನೇಕ ವಿಷಯಗಳನ್ನ ಬಿಚ್ಚಿಟ್ಟರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದತಕ್ಷಣ ಈ ರೈಲುಮಾರ್ಗ ತಟಸ್ಥವಾಗಿಬಿಟ್ಟಿತ್ತು. ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ರೈಲುಮಾರ್ಗದ ಅರ್ಧ ಖರ್ಚನ್ನ ನಾವು ಭರಿಸುತ್ತೇವೆ ಅಂತ ಕೇಂದ್ರಕ್ಕೆ ಯಡಿಯೂರಪ್ಪನವರ ಸರ್ಕಾರ ತಿಳಿಸಿ ಕೇಂದ್ರದ ಕೆಲಸಕ್ಕೆ ಸಹಕಾರಿಯಾಗುತ್ತೇವೆ ಅನ್ನೋ ಪ್ರಸ್ತಾವನೆಯನ್ನೂ ಇಟ್ಟಿದ್ದರು.

ಆದರೆ ದೇಶವನ್ನ ಕೊಳ್ಳೆ ಹೊಡೆಯೋದ್ರಲ್ಲಿ ಬ್ಯುಸಿಯಾಗಿದ್ದ ಕಾಂಗ್ರೆಸ್ಗೆ ಕಾಮಗಾರಿಗಳ ಲಕ್ಷವಾದರೂ ಎಲ್ಲಿತ್ತು? ಕಾಮಗಾರಿ ಮತ್ತೆ ಅಧೋಗತಿಗೆ ತಲುಪಿತ್ತು.

400 ಕೋಟಿಯಲ್ಲಿ 17 ವರ್ಷಗಳ ಮುಂಚೆಯೇ ಮುಗಿಯಬೇಕಾಗಿದ್ದ ಈ ಯೋಜನೆ ಈಗ 1542 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಕೊನೆಗೂ ಉತ್ತರ ಕರ್ನಾಟಕ ಭಾಗದ ಜನರ ಕನಸು ಈಡೇರಿದೆ. ಈ ಮೂಲಕ ಸುದೀರ್ಘ 17 ವರ್ಷಗಳ ಬಳಿಕ ರೈಲು ಮಾರ್ಗ ನೆನ್ನೆ ಲೋಕಾರ್ಪಣೆಯಾಗಿದೆ.

ಒಟ್ಟು 110 ಕಿಲೋ ಮೀಟರ್​ ಮಾರ್ಗದಲ್ಲಿ 12 ರೈಲು ನಿಲ್ದಾಣಗಳಿದ್ದು, ಮರಗುತ್ತಿ ಗ್ರಾಮದ ಹೊರವಲಯದಲ್ಲಿ 1.7 ಕಿ.ಮೀ ಸುರಂಗ ಮಾರ್ಗ ಇದೆ. ಈ ಭಾಗದ ಅತೀ ದೊಡ್ಡ ಮತ್ತು ಮೊದಲ ಸುರಂಗ ಮಾರ್ಗ ಇದಾಗಿದೆ.

ಈ ರೈಲು ಮಾರ್ಗದಿಂದ ಮುಂಬೈ ಬೆಂಗಳೂರು ಸೇರಿದಂತೆ ಬೇರೆ ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಕನಿಷ್ಠ ಮೂರರಿಂದ ಐದು ಗಂಟೆಗಳ ಪ್ರಯಾಣ ಸಮಯ ಉಳಿಕೆಯಾಗಲಿದೆ.

ಹೊಸಮಾರ್ಗದ ರೈಲಿಗೆ ಹಸಿರು ನಿಶಾನೆ ತೋರಿಸಿ ಪ್ರಧಾನಿ ಮೋದಿ ಚಾಲನೆ ನೀಡಿ ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯನ್ನ ಪ್ರಧಾನಿ ಮೋದಿ 20 ವರ್ಷಗಳಲ್ಲಿ 30-35% ಅಷ್ಟೇ ಆಗಿದ್ದ ಕೆಲಸವನ್ನ ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಪೂರ್ಣಗೊಳಿಸಿ ಅಂತೂ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನ ಉದ್ಘಾಟಿಸಿಯೇಬಿಟ್ಟರು.

ಇನ್ನು ಈ ಭಾಗದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಲಬುರಗಿ ವಿಮಾನನಿಲ್ದಾಣದ ಬಗ್ಗೆಯೂ ಪ್ರಧಾನಿ ಮೋದಿ ಪೂರ್ಣಗೊಳಿಸುವ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಂಡರೆ ಈ ಭಾಗದಲ್ಲಿ 40 ವರ್ಷ ರಾಜಕಾರಣ ಮಾಡಿಯೂ ಅಭಿವೃದ್ಧಿ ಮಾಡದೆ ಅಭಿವೃದ್ಧಿಶೂನ್ಯರಾದವರನ್ನ ಜನ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬಹುದು.

ಅದೇನೆ ಇರಲಿ ನಮ್ಮ ಭಾಗದ ಎರಡು ದಶಕಗಳ ಬೀದರ್ ಕಲಬುರಗಿ ರೈಲು ಮಾರ್ಗವನ್ನ ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕೆ ಪ್ರಧಾನಿ ಮೋದಿಜೀರಿಗೆ ಸಮಸ್ತ ಹೈದ್ರಾಬಾದ್ ಕರ್ನಾಟಕ ಜನತೆಯ ಪರವಾಗಿಯೂ ಹೃತ್ಪೂರ್ವಕ ಅಭಿನಂದನೆಗಳು!!!

– Vinod Hindu Nationalist

Tags

Related Articles

Close