ಅಂಕಣಪ್ರಚಲಿತ

ಕಲ್ಲಡ್ಕ,ಪುಣಚ ಶಾಲೆಗಳ ವಿಚಾರದಲ್ಲಿ ಕಾನೂನು ಮಾತಾಡಿದ ಪಂಡಿತರೇ…ಇದಕ್ಕೇನು ಹೇಳುತ್ತೀರಿ?

ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಕೊಲ್ಲೂರು ದೇವಾಲಯದಿಂದ ಅನುದಾನದ ಮೂಲಕ ವ್ವವಸ್ಥೆಯಾಗುತ್ತಿದ್ದ ಬಿಸಿಯೂಟಕ್ಕೆ ನಿಮ್ಮ ರಾಜ್ಯ ಸರಕಾರ ನಿರ್ಬಂಧ ಹೇರಿ ಸಾವಿರಾರು ಮಕ್ಕಳ ಅನ್ನ ಕಸಿದಿದ್ದನ್ನು ಸಮರ್ಥಿಸಿಕೊಂಡು ‘ಪ್ರಭಾಕರ ಆಗಿರಲೀ,ರತ್ನಾಕರ ಆಗಿರಲೀ,ಸಿದ್ದಯ್ಯ ಆಗಿರಲೀ..ಕಾನೂನು ಕಾನೂನೇ…’ ಎಂದು ಕಾನೂನು ಮಾತನಾಡಿದ್ದ ಮುಖ್ಯಮಂತ್ರಿಗಳೇ,
 
ಕಾನೂನು ಪಧವೀಧರರಾದ ನೀವು 2005ನೇ ಇಸವಿಯ ಮಾರ್ಚ್ ಮೂವತ್ತರಂದು ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠ ಕೊಟ್ಟ ಈ ತೀರ್ಪನ್ನೊಮ್ಮೆ ಗಮನಿಸಿ.ತೀರ್ಪಿನ ಪ್ರಕಾರ ದೇವಾಲಯಗಳಲ್ಲಿ ಹಣ ಸಂಗ್ರಹವಾಗುವುದೇ ಧಾರ್ಮಿಕ ಮನೋಭಾವ ಹೊಂದಿರುವ ಭಕ್ತರಿಂದ.ಆದ್ದರಿಂದ ಧಾರ್ಮಿಕ ಮನೋಭಾವ ಹೊಂದಿದ ಸಾರ್ವಜನಿಕರಿಂದ ಸಂಗ್ರಹವಾದ ಹಣವನ್ನು ಆಸ್ಪತ್ರೆಗಳು,ವಿದ್ಯಾಸಂಸ್ಥೆಗಳು ಮುಂತಾದವುಗಳ ಧರ್ಮಕಾರ್ಯಕ್ಕಾಗಿಯೇ ವಿನಿಯೋಗಿಸಬೇಕು.ಹಾಗೆಯೇ ಶಾಲಾ ಮಕ್ಕಳ ಮಧ್ಯಾಹ್ನದ ಊಟ ನೀಡಲು ಆ ಹಣವನ್ನು ಬಳಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಿದೆ.ನಿಮ್ಮ ಗಮನಕ್ಕಾಗಿ ಕೊನೆಯ ಅಂಶವನ್ನು ನಿಮ್ಮ ಮುಂದೆ ಮತ್ತೊಮ್ಮೆ ಹೇಳುತ್ತೇನೆ ಕೇಳಿ. “ಧಾರ್ಮಿಕ ಮನೋಭಾವ ಹೊಂದಿದ ಸಾರ್ವಜನಿಕರಿಂದ ಸಂಗ್ರಹವಾದ ಹಣವನ್ನು ಶಾಲಾ ಮಕ್ಕಳ ಮಧ್ಯಾಹ್ನದ ಊಟ ನೀಡಲು ಆ ಬಳಸಿಕೊಳ್ಳಬಹುದು” ಎಂದು ಆ ಹೈ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.ಆದರೆ ಎಲ್ಲೂ ಕೂಡಾ ಖಾಸಗಿ ಶಾಲಾ ಮಕ್ಕಳ ಊಟಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿಲ್ಲ!
 
ಕಾನೂನು ಪದವೀಧರರಾದ ನೀವು ಈ ಬಗ್ಗೆ ಏನು ಹೇಳುತ್ತೀರಿ?ರಾಜ್ಯದ ಕಾನೂನು ಮಂತ್ರಿಗಳು ಏನು ಹೇಳುತ್ತಾರೆ? ನಂತರದಲ್ಲಿ ಹೈ ಕೋರ್ಟ್ ನ ಈ ತೀರ್ಪಿನ ವಿರುದ್ಧ ಸರ್ಕಾರವೇನಾದರೂ ಮೇಲ್ಮನವಿ ಸಲ್ಲಿಸಿದೆಯೇ? ಆ ನಂತರ ನ್ಯಾಯಾಲಯ ‘ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಖಾಸಗಿ ಶಾಲಾ ಮಕ್ಕಳ ಊಟಕ್ಕೆ ನೀಡಬಾರದು’ ಎಂದು ಹೇಳಿದ ತೀರ್ಪಿನ ಪ್ರತಿಯೇನಾದರೂ ನಿಮ್ಮ ಬಳಿ ಇದೆಯೇ?
 
ಹಾಗೇನಾದರೂ ಇದ್ದರೆ ದಯವಿಟ್ಟು ಆ ತೀರ್ಪಿನ ಪ್ರತಿಯನ್ನು ಈ ದೇಶದ ಜನರ ಮುಂದೆ ತೆರೆದಿಡಿ.ಅದಿಲ್ಲದಿದ್ದರೆ ಈಗಾಗಲೇ ನಿಮ್ಮ ದ್ವೇಷ ರಾಜಕಾರಣಕ್ಕೆ ಸಾವಿರಾರು ಮಕ್ಕಳ ಊಟ ಕಿತ್ತುಕೊಂಡು ಆ ಮಕ್ಕಳಿಂದ ಛೀ..ಥೂ..ಎಂದು ಉಗಿಸಿಕೊಂಡ ನಿಮ್ಮ ಸರ್ಕಾರ ಮುಂದೆ ತೀರ್ಪು ಗೌರವಿಸದಿದ್ದಕ್ಕಾಗಿ ನ್ಯಾಯಾಲಯದಿಂದಲೂ ಉಗಿಸಿಕೊಳ್ಳಬೇಕಾಗಬಹುದು.
 
-ಪ್ರವೀಣ್ ಕುಮಾರ್ ಮಾವಿನಕಾಡು 
Tags

Related Articles

Close