ಪ್ರಚಲಿತ

ಕಲ್ಲಡ್ಕ ಶ್ರೀರಾಮ ಕೇಂದ್ರದ ಮಕ್ಕಳು ಅನ್ನ ಕಸಿದ ಸಿದ್ಧರಾಮಯ್ಯನ ಸರಕಾರಕ್ಕೆ ಪಾಠ ಕಲಿಸಿದ್ದು ಹೇಗೆ ಗೊತ್ತೇನು?

ಒಂದು ಕಡೆ ಕಾಂಗ್ರೆಸ್ ಸರಕಾರ 19 ಲಕ್ಷ ಮಂದಿ ಬಡವರ ಅಕ್ಕಿಯನ್ನು ಮಣ್ಣು ಪಾಲು ಮಾಡಿದರೆ, ಮತ್ತೊಂದು ಕಡೆ ಮಕ್ಕಳು ಉಣ್ಣುವ ಅನ್ನವನ್ನೇ ಕಸಿಯುತ್ತದೆ.
ಅನ್ನ ಕಸಿದು ಮಣ್ಣುಪಾಲು ಮಾಡಿದ ಸರಕಾರಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮಕ್ಕಳು ತಮ್ಮ ಅನ್ನವನ್ನು ತಾವೇ ಸೃಷ್ಟಿಸಿ ಮೂಲಕ ಪಾಠ ಕಲಿಸಿದ್ದಾರೆ.

ಕಲ್ಲಡ್ಕ ಶಾಲಾ ಮಕ್ಕಳಿಗೆ ಕೊಲ್ಲೂರು ಕ್ಷೇತ್ರದಿಂದ ಧನಸಹಾಯ ಬರುತ್ತಿತ್ತು. ಈ ಶಾಲೆಯನ್ನು ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ನಡೆಸುತ್ತಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕಾಗಿ ದೇಗುಲದಿಂದ ಬರುತ್ತಿದ್ದ ಧನಸಹಾಯವನ್ನು ನಿಲ್ಲಿಸಿ ಮಕ್ಕಳನ್ನು ಉಪವಾಸ ದೂಡಲು ಹುನ್ನಾರ ನಡೆಸಿತ್ತು. ಪುಟಾಣಿ ಮಕ್ಕಳ ಮೇಲೆ ಕನಿಕರವನ್ನೂ ತೋರದೆ ಅನ್ನ ಕಸಿಯುವ ಹುನ್ನಾರದ ಹಿಂದಿದ್ದವರು ಅರಣ್ಯ ಸಚಿವ ರಮಾನಾಥ ರೈ ಎಂದು ಬಹಿರಂಗಗೊಂಡಿತ್ತು. ಪ್ರಭಾಕರ್ ಭಟ್ ಜೊತೆ ಸುಖಾಸುಮ್ಮನೆ ಹಗೆ ಕಟ್ಟಿಕೊಂಡಿದ್ದ ರಮಾನಾಥ ರೈ ಅವರು ಮಕ್ಕಳ ಅನ್ನ ಕಸಿಯುವ ಮೂಲಕ ದೇವರೂ ಕ್ಷಮಿಸಲಾರದ ಮಹಾಪಾತಕವೊಂದನ್ನು ಮಾಡಿದ್ದರು. ಸರಕಾರದ ನೀತಿಯನ್ನು ವಿರೋಧಿಸಿ ಮಕ್ಕಳು ಖಾಲಿತಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರೂ ಕಾಂಗ್ರೆಸ್ ಸರಕಾರದ ಮನಕರಗಿರಲಿಲ್ಲ. ಮಕ್ಕಳ ಹೊಟ್ಟೆಗೆ ಏಟು ಕೊಟ್ಟು ಪ್ರಭಾಕರ ಭಟ್ಟರನ್ನೂ, ಅವರ ಶಾಲೆಯನ್ನೂ ಮುಗಿಸಿಬಿಟ್ಟೆ ಎಂದು ವಿಕಟನಗೆ ಬೀರಿದ್ದ ರಮಾನಾಥ ರೈ ಹಾಗೂ ಕಾಂಗ್ರೆಸ್ ಪುಢಾರಿಗಳಿಗೆ ಸೆಡ್ಡು ಹೊಡೆಯುವಂತೆ ದಾನಿಗಳು ಧನಸಹಾಯ ಮಾಡುವ ಮೂಲಕ ಪಾಠ ಕಲಿಸಿದ್ದರು.

ಇಷ್ಟಕ್ಕೂ ಬಿಡದ ವಿದ್ಯಾರ್ಥಿಗಳು ಸರಕಾರ ಅನ್ನ ನಿಲ್ಲಿಸಿದರೇನಂತೆ ನಮ್ಮ ಅನ್ನವನ್ನು ನಾವೇ ತಯಾರಿಸುತ್ತೇವೆ ಎಂದು ಸ್ವತಃ ತಮ್ಮ ಅನ್ನವನ್ನು ತಾವೇ ಬೆಳೆಯುವ ಮೂಲಕ ರಾಕ್ಷಸೀವೃತ್ತಿಯ ಸರಕಾರಕ್ಕೆ ಪಾಠ ಕಲಿಸಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳು ತನ್ನ ಪುಟ್ಟ ಪುಟ್ಟಪುಟ್ಟ ಕೈಗಳಿಂದ ಬಂಗಾರದ ಬೆಳೆಯನ್ನು ಬೆಳೆದಿದ್ದಾರೆ. ಭತ್ತ ಮಾತ್ರವಲ್ಲಿ ಭತ್ತದಿಂದ ಬೆಳೆದ ಹುಲ್ಲು ಗೋಶಾಲೆಯ ಗೋವುಗಳ ಹೊಟ್ಟೆಯನ್ನೂ ತಣ್ಣಗಿಟ್ಟಿವೆ. ಬೇಸಾಯ ಮಾಡಿದರೆ ಮಕ್ಕಳೂ ಕೂಡಾ ರೈತರನ್ನೂ ಮೀರಿಸಬಲ್ಲರು ಎಂಬುವುದನ್ನು ಪುಟಾಣಿ ಮಕ್ಕಳು ತೋರಿಸಿಕೊಟ್ಟಿದ್ದಾರೆ. ನಿಜಹೇಳಬೇಕೆಂದರೆ ಮಕ್ಕಳ ಈ ಕೃತಿಯ ಹಿಂದಿರುವ ಸೂತ್ರಧಾರ ಕಲ್ಲಡ್ಕ ಪ್ರಭಾಕರ ಭಟ್. ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿ, ಉತ್ತಮ ಸಂಸ್ಕಾರದ ಜೊತೆಗೆ ಸ್ವಾವಲಂಬಿ ಪಾಠವನ್ನು ಕಲಿಸುವ ಮೂಲಕ
ಆದರ್ಶತನವನ್ನು ಮೆರೆದಿದ್ದಾರೆ.

ಕಲ್ಲಡ್ಕ ಶಾಲೆಯ ಪಕ್ಕದಲ್ಲೇ ಸುದೇಕಾರು ಎಂಬ ಪ್ರದೇಶವಿದೆ. ಇಲ್ಲಿನ ಗದ್ದೆಯನ್ನು ಆಯ್ದುಕೊಂಡ ಮಕ್ಕಳು ಇಲ್ಲಿ ಭತ್ತ ಬೆಳೆಯುವ ಯೋಚನೆ ಮಾಡುತ್ತಾರೆ. ಮಕ್ಕಳ ಯೋಚನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪ್ರಭಾಕರ ಭಟ್ಟರು ತಾನೂ ಅವರ ಜೊತೆ ಮಕ್ಕಳಾಗಿ ಗದ್ದೆಯಲ್ಲಿ ಭತ್ತ ಬೆಳೆಯುವ ಆಟ ಆಡುತ್ತಾರೆ. ಗದ್ದೆಗೆ ಗೊಬ್ಬರ ಹಾಕಿ ಪೋಷಿಸುವ ಕೆಲಸವನ್ನೂ ಮಕ್ಕಳೇ ಮಾಡುತ್ತಾರೆ. ಮಕ್ಕಳು ಪುಟ್ಟ ಕೈಗಳಿಂದ ಮಾಡಿದ ಕಾರ್ಯಕ್ಕೆ ಭೂದೇವಿಯೂ ನಕ್ಕಿರಬಹುದು.
ಮಕ್ಕಳ ಕನಸನ್ನು ಹುಸಿ ಮಾಡದ ಭೂದೇವಿ ಗದ್ದೆಯಲ್ಲಿ ಸ್ವತಃ ಬಂಗಾರದ ಬೆಳೆಯನ್ನೇ ಮಕ್ಕಳಿಗೆ ಕರುಣಿಸಿದ್ದಾಳೆ. ಮಕ್ಕಳ ಬೆವರಿಗೆ ಖಂಡಿತಾ ಬೆಲೆ ಸಿಕ್ಕಿದೆ.

ಮಕ್ಕಳ ಸಾಮಥ್ರ್ಯವನ್ನು ಕಂಡು ಅಚ್ಚರಿ ಪಡಲೇಬೇಕು. ಯಾಕೆಂದರೆ ಮಕ್ಕಳು ಬರೋಬ್ಬರಿ ಎರಡು ಎಕರೆ ಜಾಗದಲ್ಲಿ ಭತ್ತ ಬೆಳೆಸಿದ್ದಾರೆ. ಈಚೆಗೆ ಭತ್ತ ಕಟಾವಿಗೆ
ಬಂದಿದ್ದು, ಮಕ್ಕಳೇ ಸೇರಿ ಕಟಾವು ಮಾಡಿದ್ದಾರೆ. ಮಕ್ಕಳ ಜೊತೆಗೆ ಪ್ರಭಾಕರ ಭಟ್ಟರೂ ಸಾಥ್ ನೀಡಿದ್ದಾರೆ. ಬೆಳೆದ ಭತ್ತ ಮಕ್ಕಳ ಊಟಕ್ಕಾದರೆ ಉಳಿದ ಹುಲ್ಲು
ವಸುಧರಾ ಗೋಶಾಲಾ ಗೋವುಗಳಿಗೆ ಆಹಾರವಾಗುತ್ತಿದೆ. ಸರಕಾರ ಅನ್ನ ಕಸಿದರೂ ತನ್ನ ಅನ್ನವನ್ನು ತಾವೇ ಬೆಳೆದು ಸ್ವಾಭಿಮಾನ ಕಲಿಸಿದ್ದಾರೆ.

ಇಂದಿನ ಮಕ್ಕಳಿಗೆ ಭತ್ತ ಬೆಳೆಯುವುದು ಹೇಗೆ ಎಂಬ ವಿಚಾರವೇ ಗೊತ್ತಿರುವುದಿಲ್ಲ. ಆದರೆ ಕಲ್ಲಡ್ಕದ ಮಕ್ಕಳು ತಮ್ಮ ಅನ್ನವನ್ನು ತಾವೇ ತಯಾರಿಸಿ ಜಗತ್ತಿಗೆ
ನೀತಿಬೋಧ ಮಾಡಿದ್ದಾರೆ. ಹಾಗೆ ನೋಡಿದರೆ ಗದ್ದೆ ಕೆಲಸ ಅಂದರೆ ಸುಲಭವಲ್ಲ. ಗದ್ದೆಯನ್ನು ಉಳುಮೆ ಮಾಡಿ ಕೆಸರುಗದ್ದೆಗಿಳಿದು ನಾಟಿ ಮಾಡಿ, ಬಳಿಕ ಕಟಾವು
ಮಾಡಿ ಭತ್ತವನ್ನು ಬೇರ್ಪಡಿಸಲು ತುಂಬಾ ಕೆಲಸವಿದೆ. ಆದರೆ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡ ಪರಿಣಾಮ ನಿರೀಕ್ಷೆಗೂ ಮೀರಿದ ಭತ್ತ ಬೆಳೆದಿದೆ.

ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರ ಒದಗಿಸುವ ಅಕ್ಕಿ, ಗೋಧಿಯನ್ನು ತಾನೇ ಕೊಟ್ಟದ್ದು ಎಂದು ನಂಬಿಸಿ ಮೋಸ ಮಾಡುತ್ತಿದೆ. ಈ ಅಕ್ಕಿಯನ್ನೂ ನೆಟ್ಟಗೆ ಬಡವರಿಗೆ ಮುಟ್ಟಿಸಲಾಗದ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದಿಂದ ಬರೋಬ್ಬರಿ 19 ಲಕ್ಷ ಮಂದಿ ಉಣ್ಣುವ ಅಕ್ಕಿ, ಗೋಧಿ ಕೊಳೆತುಹೋಗಿದೆ. ರಾಜ್ಯದ ಜನತೆ ಬರಗಾಲದಿಂದ ಅನ್ನವಿಲ್ಲದೆ ಸಾಯುತ್ತಿದ್ದರೆ ರೈತರು ಕಷ್ಟಪಟ್ಟು ಬೆಳೆದ ಅನ್ನವನ್ನೂ ಉಳಿಸಲಾಗದೆ ರಾಜ್ಯದ ಜನತೆಗೆ ದ್ರೋಹ ಎಸಗಿತ್ತು. ಸಾವಿರಾರು ರೈತರು ಆತ್ಮಹತ್ಯೆ ಮಾಡುತ್ತಿದ್ದರೂ ಸರಕಾರಕ್ಕೆ ಕರಗಿರಲಿಲ್ಲ. ಇಂಥದೊಂದು ಸರಕಾರಕ್ಕೆ ತಾನೇ ಗದ್ದೆಗಿಳಿದು ಭತ್ತ ಬೆಳೆಯುವ ಮೂಲಕ ಪಾಠ ಕಲಿಸಿದ್ದಾರೆ.

-ಚೇಕಿತಾನ

Tags

Related Articles

Close